ನೆನಪಿನ ಸಂಚಿಯಿಂದ ತೆಗೆದ ಹಳೆ ನೆನಪು
ಮೊನ್ನೆ ಒಂದು ಜಾಹಿರಾತು ನೋಡಿದೆ. ರಾಹುಲ್ ದ್ರಾವಿಡ್ rice bran ಎಣ್ಣೆಯನ್ನು endorse ಮಾಡುತ್ತಿದ್ದರು.
ಅಜ್ಜ ಯಾವಾಗಲೋ ಹೇಳಿದ ನಾನು ಪುನಃ ಪುನಃ ಫರ್ಮಾಯಿಶ್ ಮಾಡುತ್ತಿದ್ದ ಕತೆ.
ಒಂದು ಸಲ ಒಬ್ಬ ರಾಜ ತನ್ನ ಸೈನಿಕ ತುಕಡಿಯಿಂದ ಬೇರ್ಪಡುತ್ತಾನೆ. ದಾರಿ ತಪ್ಪಿ ಅಲೆದಾಡಿ, ಸುಸ್ತಾದಾಗ ಆತನಿಗೆ ಒಂದು ಗುಡಿ ಕಾಣಿಸುತ್ತದೆ. ರಾತ್ರಿ ಅಲ್ಲೇ ವಿರಮಿಸುವುದು ಅಂತ ಅಲ್ಲಿ ಪವಡಿಸುತ್ತಾನೆ. ದೇವಸ್ಥಾನ ದ ಅರ್ಚಕರು ದೀಪ ಹಚ್ಚಿ ಇನ್ನೇನು ತೆರಳುವುದಿದ್ದರು. ರಾಜನಿಗೆ ರಾತ್ರಿ ಗೆ ಅಲ್ಲಿರಲು ಗೋಣಿ ತಾಟು ಮುಂತಾದ್ದೆಲ್ಲ ಹಾಸಿ , ಮನೆಗೆ ತೆರಳಬೇಕು ಅನ್ನುವಷ್ಟರಲ್ಲಿ, ರಾಜ ತನಗೆ ಅಸಾಧ್ಯ ಹಸಿವು, ಏನಾದರೂ ತಿನ್ನಲು ಸಿಗುವುದೇ ಅಂತ ಕೇಳಿದ. ಆ ಪುಟ್ಟ ಗುಡಿಯಲ್ಲಿ ದೀಪ ಹಚ್ಚಲು ಮಾತ್ರ ಅನುಕೂಲವಿತ್ತು. ಪುರೋಹಿತ ಸ್ವಲ್ಪ ಆಲೋಚನೆ ಮಾಡಿ, ಹೆದರುತ್ತಾ 'ಖಾವಂದರಿಗೆ ಆಕ್ಷೇಪಣೆ ಇಲ್ಲದಿದ್ದರೆ...ಕುದುರೆಗಳುಗೆ ತಿನ್ನಲು ಇಟ್ಟ ತೌಡು ಇದೆ...ದೇವರ ದೀಪದ ಎಣ್ಣೆ ಉಪಯೋಗಿಸಿ ರೊಟ್ಟಿ ಮಾಡ ಕೊಡಬಹುದು ಎಂದ...ರಾಜ ತನಗೇನೂ ಅಭ್ಯಂತರ ಇಲ್ಲವೆಂದ...ಪುರೋಹಿತ ಗುಡಿ ಪಕ್ಕದಲ್ಲಿ ಬೆಂಕಿ ಹಚ್ಚಿ ರೊಟ್ಟಿ ತಟ್ಟಿ ಕೊಟ್ಟ. ರಾಜ ಅದನ್ನು ಚಪ್ಪರಿಸಿ ತಿಂದ.. ಹಾಕಿಕೊಂಡ ಮುತ್ತಿನ ಸರದ ಭಕ್ಷೀಸ್ ಕೊಟ್ಟ. ಆಮೇಲೆ ನಾನು ತೌಡು ತಿಂದದ್ದು ಯಾರಿಗೂ ಗೊತ್ತಾಗಬಾರದು ಎಂದ...
ಇತ್ತ ಪುರೋಹಿತನಿಗೆ ಆ ಗುಟ್ಟು ಹೊಟ್ಟೆಯಲ್ಲಿಟ್ಟುಕೊಳ್ಳಲಾಗಲಿಲ್ಲ...ಬೇರೆ ಮನುಷ್ಯರಿಗೆ ಹೇಳಿದರೆ ಅದು ಗುಟ್ಟಾಗಿ ಇರಲೊಲ್ಲದು ಅಂತ...ಗುಡಿಯ ಬಳಿ ಒಂದು ಗುಂಡಿ ತೋಡಿ ಅದರಲ್ಲಿ 'ರಾಜಾನ್ ತೌಡು ತಿನ್ನನ್ (ಯಾವ ಭಾಷೆ ಅಂತ ಕೇಳಬೇಡಿ..ನಾನೂ ಅಜ್ಜನಿಗೆ ಕೇಳಿಲ್ಲ 😁😁) ಅಂತ ಉಸುರಿದ, ಅದರ ಮೇಲೆ ಮಣ್ಣು ಸುಮತಟ್ಟಾಗಿಸಿ ಅದರ ಮೇಲೆ ಒಂದು ಪುಟ್ಟ ಗಿಡ ನೆಟ್ಟು ಮನೆಗೆ ಹೋದ.
ಗಿಡ ದೊಡ್ಡದಾಗಿ ಮರವಾಯ್ತು....ಜೋರು ಗಾಳಿ ಬೀಸಿದಾಗಲೆಲ್ಲ ಅದು 'ರಾಜಾನ್ ತೌಡು ತಿನ್ನನ್- ರಾಜಾನ್ ತೌಡು ತಿನ್ನನ್' ಅನ್ನುವ ಸದ್ದು ಹೊರಡಿಸಲಾರಂಭಿಸಿತು.....ರಾಜನು ಪುನಃ ಒಂದು ಸಲ ಆ ಗುಡಿಗೆ ಒಬ್ಬನೇ ಭೇಟಿ ಇತ್ತ.....ಮರ ಅವನ ಗುಟ್ಟು ರಟ್ಟು ಮಾಡುವುದನ್ನು ಕೇಳಿ ಸಿಟ್ಟಿಗೆದ್ದ. ಅದನ್ನು ಕತ್ತರಿಸಿ ಹಾಕಿದ.
ಅದೇ ದಾರಿಯಾಗಿ ಹೋಗುತ್ತಿದ್ದ ವಾದ್ಯಗಳನ್ನು ತಯಾರಿಸುವವನು ಆ ಮರದ ತುಂಡುಗಳನ್ನು ನೋಡಿ, ಚೆನ್ನಾಗಿವೆ ಅಂದು ಕೊಂಡು ಅದರಿಂದ, ತಬಲಾ, ಮೃದಂಗ, ಕೊಳಲು ಮುಂತಾದವುಗಳನ್ನು ಮಾಡಿ ಮಾರಿದ. ಅದನ್ನು ಕೊಂಡು ಹೋದ ಜನರು, ಆ ವಾದ್ಯ ಉಪಯೋಗಿಸುವಾಗ ಅವು 'ರಾಜಾನ್ ತೌಡು ತಿನ್ನನ್' ಶಬ್ದ ಹೊರಡಿಸಿ ದೇಶವಾಸಿಗಳಿಗೆಲ್ಲ ರಾಜಾ ತೌಡು ತಿಂದದ್ದು ಗೊತ್ತಾಯ್ತು 😁😁
ಈಗ ಇದ್ದಿದ್ದರೆ rice bran ಒಳ್ಳೆಯದು ಅಂತ ಹೆಮ್ಮೆಯಿಂದ ಹೇಳುತ್ತಿದ್ದರೇನೋ...ಆವಾಗ ಅದು ದನ, ಕುದುರೆಗಳಿಗೆ ಮೇವಾಗಿತ್ತು
#ricebranoil 🙏🙏
ತೌಡು = husk/bran superfood
AI generated picture from meta 🙏🙏


No comments:
Post a Comment