ಒಂದು ವರ್ಷ, ಶಾಯದ್ ಕೋವಿಡ್ ಟೈಮ್ ನ ನವರಾತ್ರಿ ದಿನಕ್ಕೆ ಒಂದೊಂದು ಸ್ವೀಟ್ ಮಾಡಿದ್ದೆ, ಅದರಲ್ಲೂ instagram ನಲ್ಲಿ ಒಂದೆರಡು ಬೆಲ್ಲದ ಪುಡಿ/brown sugar ಬ್ರಾಂಡ್ ನವರ ಸ್ಪರ್ಧೆ ಕೂಡ ಇತ್ತು. ಅವೆಲ್ಲರ ಫೋಟೋ ತೆಗೆಯೋದೆ ಸಂಭ್ರಮ..ನನಗೆ ಕಲಾತ್ಮಕತೆ artistic abilities ಇಲ್ಲ...ಆದ್ರೂ..ಮಕ್ಕಳು ಶ್ರೀಕಾಂತ್ ಎಲ್ಲ ಮೀಸೆ ಅಡಿಯಲ್ಲೇ ನಗುತ್ತಿದ್ದರು 😁
ಇವತ್ತು ಮಿಲ್ಲೆಟ್ + whole moong ಪೊಂಗಲ್...ನನ್ನ ತಮ್ಮ ಪಾಂಡುರಂಗ...ಅಮ್ಮನಿಗೆ ಅವನ ಮೇಲೆ ಪ್ರೀತಿ ಉಕ್ಕಿದಾಗ 'ಪಾಂಡೆ'ssss ಅಂತ ಕೂಗುತ್ತಿದ್ದರು...ಹಾಗಾಗಿ ಪೊಂಗಲ್ ಮಾಡಿದಾಗಳೆಲ್ಲ ಅದು ಪೊಂಗಲ್ ಪಾಂಡೆ (ಮಂಗಲ್ ಪಾಂಡೆ ಎಲ್ಲರಿಗೂ ಗೊತ್ತಲ್ಲ?) food, fun & pun
ಬೆಳಿಗ್ಗೆ ತಿಂಡಿಗೆ ಮಾಡೋದಿದ್ರೆ...
ಹಿಂದಿನ ದಿನ ರಾತ್ರಿ
ಒಂದು ಹಿಡಿ ಇಡೀ ಹೆಸರು ಕಾಳು (whole moong)ನೀರಲ್ಲಿ ನೆನೆ ಹಾಕಿ, 2 ಹಿಡಿ ಮಿಲ್ಲೆಟ್ ಅನ್ನು ಸ್ವಲ್ಪ ಹುರಿದು , ಅದು ತಣ್ಣಗಾದ ಮೇಲೆ ನೀರಲ್ಲಿ ನೆನೆಸಿಡಿ.
ಬೆಳಿಗ್ಗೆ ಅವನ್ನು ಚೆನ್ನಾಗಿ ತೊಳೆದು, ಮೂರು ಗ್ಲಾಸ್ ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ
ಒಂದ್ರಾಶಿ ತುಪ್ಪ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಸ್ವಲ್ಪ ಜಜ್ಜಿದ ಕಾಳು ಮೆಣಸು,ಹಿಂಗು, ಗೇರು ಬೀಜ ಹಾಕಿ. ಒಗ್ಗರಣೆ ರೆಡಿ ಯಾದ ಮೇಲೆ ಇದಕ್ಕೆ ಅರಿಶಿನ ಪುಡಿ ಹಾಕಿ, ಕೈಯಾಡಿಸಿ (ಅಂದರೆ bye ಅಲ್ಲ, ಬೈಬೇಡಿ ಪ್ಲೀಸ್) ಬೆಂದ ಕಾಳು ಮಿಲ್ಲೆಟ್ ಮಿಶ್ರಣ ಬೆರೆಸಿ. ಬೇಕಿದ್ದಲ್ಲಿ ನೀರು ಬೆರೆಸಿ...ಬೇಯುತ್ತಿದ್ದಾಗ ಕರಿಬೇವು ಹಾಕಿ. ಉಪ್ಪು, ಬೆಲ್ಲ ಹಾಕಿ. ಬಿಸಿ ಬಿಸಿ ಇದ್ದಾಗಲೇ ಗುಳುಂ ಮಾಡಿ. ಇದಕ್ಕೆ ಮೊಸರು +ಟೊಮೆಟೊ + ಕೊತ್ತಂಬರಿ ಸೊಪ್ಪು +ಹುರಿದ ಜೀರಿಗೆ ಪುಡಿಯ ಸಲಾಡ್ ಮಾಡಬಹುದು. ಹಸಿ ಮೆಣಸಿನಕಾಯಿ ಯ ಅವಶ್ಯಕತೆ ಇಲ್ಲ. very comforting to the gut
star ingredient : cracked black pepper (ತೀರ್ಥಹಳ್ಳಿಯ ನನ್ನ ಮುದ್ದು ಸೊಸೆ ಕೊಟ್ಟಿದ್ದು), hing, curry leaves಼
enjoy ❤️❤️🙏🙏

No comments:
Post a Comment