October 17, 2026

Day 6 & 7

 sorry friends. got into a bit if cleaning my balcony mode and then watched The trap' a sries on netflix and a movie 'brother' on you tube

ಹಾಗಾಗಿ ನಿನ್ನೆ ಏನೂ ಬರೆದಿಲ್ಲ. ನಿನ್ನೆ ನಾನು ಸಿಹಿ ಕುಂಬಳಕಾಯಿ ಮಾಡಿದ್ದೆ. ಈ ರೆಸಿಪಿ ನನ್ನ ಕೊಪ್ಪ friend ಉಮಾ ಅವರದ್ದು. 

ಬೇಳೆ ಬೇಯಿಸೋದು. ಕುಂಬಳಕಾಯಿ ಹೋಲು + ನುಗ್ಗೆಕಾಯಿ ಉಪ್ಪು ಹಾಕಿ ಬೇಯಿಸಿ , ಬೇಳೆ ಹೋಲು ಮಿಕ್ಸ್ ಮಾಡಿ. ಸ್ವಲ್ಪ ಕಸ್ಯಿ ತುರಿ, ಸಾಂಬಾರ್ ಪುಡಿ, ಹುಣಸೆ ಹುಳಿ ಹಾಕಿ ರುಬ್ಬಿ. ಬೆಂದ ಪದಾರ್ಥಕ್ಕೆ ಸೇರಿಸಿ ಕುದಿ ಬರಲು ಇಡೀ. ಕರಿಬೇವು ಬೆಲ್ಲ ಹಾಕಿ ಇನ್ನಷ್ಟು ಕುದಿಸಿ , ತುಪ್ಪದಲ್ಲಿ ಜೀರಿಗೆ, ಒಣ ಮೆಣಸು ಮತ್ತು ಹಿಂಗು ಒಗ್ಗರಣೆಗೆ ಹಾಕಿ...ಒಂದು ತುತ್ತು ಹೆಚ್ಛೇ ತಿನ್ನಿ ❤️👍 no pictures

star ingredient : drumstick , curry leaves and hing






ಇವತ್ತು ಸಾಬುದಾನಾ/ಸಬ್ಬಕ್ಕಿ ಖಿಚಡಿ.

ನಾನು ಮಾಡುವ ರೀತಿ 

ಎರಡು ಗಂಟೆ ಸಾಬುದಾನಾ ನೆನೆಸಿ ಬಸಿದು ಇಡಿ

ಶೇಂಗಾ ಚೆನ್ನಾಗಿ ಹುರಿದು, ಸಿಪ್ಪೆ ತೆಗೆದು ಸ್ವಲ್ಪ ಜಜ್ಜಿ ಇಡಿ. (coarsely pounded)

ಒಗ್ಗರಣೆಗೆ ತುಪ್ಪ, ಜೀರಿಗೆ, ಹಸಿ ಮೆಣಸಿನ ಕಾಯಿ, ಹಿಂಗು, ಶುಂಠಿ...ಈ ಆರ್ಡರ್...(ಕರಿಬೇವು optional, ನಾನು ಹಾಕ್ತೇನೆ.

ಕೊನೆಗೆ ಶೇಂಗಾ ಮತ್ತು ಕೊತ್ತಂಬರಿ ದೊಪ್ಪು ಬೆರೆಸಿ

ಅಷ್ಟೇ..

star ingredient : ghee, peanuts, ginger and hing


No comments: