Showing posts with label surnali gsb konkani dosa no lentils. Show all posts
Showing posts with label surnali gsb konkani dosa no lentils. Show all posts

November 23, 2026

ಸುರ್ನಳಿ/ಸುರ್ನೋಳಿ

 




ತುಳಸಿ ಹಬ್ಬ ಹತ್ತಿರ ಬರುತ್ತಿದ್ದ ಹಾಗೆ ಕೊಂಕಣಿ ಯು ಟ್ಯೂಬ್ ಚ್ಯಾನೆಲ್ ನಲ್ಲೆಲ್ಲ ಈ ದೋಸೆದೆ ಹವಾ 😀

ಈ ದೋಸೆಗೆ ಉದ್ದು ಹಾಕುವಂತಿಲ್ಲ. ಅಕ್ಕಿ, ಕಾಯಿ, ಮೆಂತೆ ಕಾಳು ಅವಲಕ್ಕಿ, ಚೂರು ಉಪ್ಪು, ಜಾಸ್ತಿ ಬೆಲ್ಲ.

ಹಿಟ್ಟು ತೆಳು ಆಗ ಬಾರದು, ದಪ್ಪ ಕೂಡ ಆಗಬಾರದು. ಚೆನ್ನಾಗಿ ferment ಆಗಬೇಕು. ಇಲ್ಲದಿದ್ದದರೆ  ಕಾವಲಿ ಮೇಲಿಂದ ಮೇಲೆಳಲ್ಲ. ಹಾಗೂ ತೂತು ಬೀಳಲ್ಲ. ferment ಆಗದಿದ್ದರೆ ಒಂದು ದೋಸೆಗಿಂತ ಹೆಚ್ಚು ತಿನ್ನಲು  ಆಗಲ್ಲ, ರುಚಿಯೂ ಆಗಲ್ಲ. ಮತ್ತು ಹೆಚ್ಚು ferment ಆದ್ರೆ ಕಾವಲಿ ಮೇಲಿಂದ ಏಳೋದೇ ಇಲ್ಲ. ಇಲ್ಲ ಹೆದರಿಸ್ತಾ ಇಲ್ಲ. ಮಾಡುವಾಗ ಕಡಿಮೆ quantity ಯಲ್ಲಿ experiment ಮಾಡಿ

ತುಪ್ಪದಲ್ಲಿ ದೋಸೆ ಬೇಯುವಾಗ , ಮೆಂತೆ ಪರಿಮಳ..ಆಹಾ ನೀವು  ಇದನ್ನು ತಿಂದೇ ಅನುಭವಿಸಬೇಕು. ಜತೆಗೆ ಬೆಣ್ಣೆ...

ನಾವು ಸೆಪ್ಪೆ ಸೂರ್ನಳಿ ಮಾಡಿ ಅದಕ್ಕೆ ಒಂದೆಲಗದ ಚಟ್ನಿ ಮಾಡುತ್ತೆವೆ..ಹಬ್ಬದ ಮಾರನೇ ದಿನ. 🙏🙏