November 9, 2026

ಮಧುರೈ

 ಮಧುರೈ ದೇವಸ್ಥಾನ ದಲ್ಲಿ ಮೊಬೈಲ್ ಒಯ್ಯುವಂತಿಲ್ಲ. ಹೊರಗಡೆ ಅದನ್ನು deposit ಮಾಡಿ ಹೋಗಬೇಕು. ಮೊಬ್ಸೈಲ್, ಚಾರ್ಜರ್, ಪವರ್ ಬ್ಯಾಂಕ್...ವಗೈರೆ..

ಒಳಗಡೆ ನೋಡಿದ್ರೆ ದೊಡ್ಡ ಲೈನ್...ಸ್ವಲ್ಪ ಹೊತ್ತು ನೋಡಿದೆವು, queue move ಆಗೋದು ಕಾಣಲಿಲ್ಲ. ಬಹುಶಹ ex minister ಬಂದಿದ್ದಾರೆ ಅಂತ ತಾತ್ಕಾಲಿಕವಾಗಿ ದರ್ಶನ ನಿಲ್ಲಿಸಿದ್ದಿರಬಹುದು. ನಾವು ದೇವಸ್ಥಾನದ ಆವರಣದಲ್ಲಿರುವ.  ಸಾವಿರ ಕಂಬದ ನಟರಾಜನ ಮೂರ್ತಿಯಿರುವ ದೇವಾಲಯಕ್ಕೆ ಭೇಟಿ ನೀಡಿದೆವು. 5 ರೂ ಟಿಕೆಟ್ ಪಡೆದು. ಒಳಗಡೆ   ಗಾಜಿನ ಕೇಸ್ ಗಳಲ್ಲಿ  ಬ್ರಾಸ್, bronze idols ಗಳಿದ್ದವು. ತುಂಬಾ ಧೂಳುಮಯವಾಗಿತ್ತು.  ಹೊರಗೆ ಬಂದು ಸುಮ್ಮನೆ ಚಿಕ್ಕ ಚಿಕ್ಕ ಬೀದಿಯೊಳಗಡೆ ವಾಲ್ಕ್ ಹೋದೆವು. ನಿಹಾ ಒಂದು ಜಿಗರ್ ಥಂಡಾ ಕುಡಿದಳು...ಆ ಸೆಕೆಗೆ , ಜನಸಂದಣಿಯಲ್ಲಿ ಸ್ವಲ್ಪ ದೊಡ್ಡದೇ ವಾಕ್ ಆಯಿತು.

ಮರುದಿನ ಒಂದೆರಡು ಐತಿಹಾಸಿಕ / ಪ್ರವಾಸಿ ತಾಣಗಳ ಭೇಟಿ ಮಾಡಿದೆವು.

tirumalai Naik palace museum 👇👇









ಇದಾದ ನಂತರ ನೀರಿನ ಮಧ್ಯ ಇರುವ ದೇವಳದ ಬಳಿ ಹೋದೆವು..ಆದರೆ ರಿಪೇರಿ ಕಾಮಗಾರಿ ಇರುವುದರಿಂದ ಲೋ ಏನೋ ಯಾವುದೇ ದೋಣಿ ಕಾಣಲಿಲ್ಲ. ಹೊರಗಡೆಯಿಂದಲೇ ನೋಡಿ ಬಂದೆವು. ತುಂಬಾ ಬಿಸಿಲಿದ್ದರಿಂದ ಫೋಟೋ ತೆಗೆಯಲಿಲ್ಲ.

 ನಿಹಾ ಗೆ ನೋಡಬೇಕಾದ ಉಳಿದ ಸ್ಥಳಗಳು ಹಬ್ಬದ ನಿಮಿತ್ತ  ಬಂದ್ ಆಗಿದ್ದವು. ಅಜಯ್ ಧನುಷಕೊಡಿ ಬಗ್ಗೆ  ಹೇಳಿದ...ಮಧುರೈಯಿಂದ ಸುಮಾರು 5 ಗಂಟೆ ದಾರಿ...ಅಲ್ಲಿ ತುಂಬಾನೇ ಚೆನ್ನಾಗಿತ್ತು. ಅಷ್ಟು ಸೆಕೆ ಅನ್ನಿಸಲಿಲ್ಲ. ನೀರಿನ ಬಣ್ಣಕ್ಕೆ ಮಾರು ಹೋದೆ. ರಾಮೇಶ್ವರಮ್ ನಿಂದ ಧನುಷಕೊಡಿ ವರೆಗೆ ಎರಡೂ ಬದಿ ಸಮುದ್ರ.

ಅಲ್ಲಿಂದ ಪುನಃ 5 ಗಂಟೆ ದಾರಿ ಪಯಣಿಸಿ ಕೊಡೈಕನಾಲ್

ಸಶೇಷ 🙏🙂

No comments: