December 18, 2020

ಕೊರೊನ ಕತೆ - ರಜಾಯಿ

 ಮಗನಿಗೆ ಸಿಟ್ಟು. ಅವನು ಆಫಿಸಿನಿಂದ ಮನೆಗೆ ಬಂದಾಗಲೆಲ್ಲ ಅವನ ಅಮ್ಮ ಗೋದಡಿ ಹೋಲಿಯುತ್ತಾ ಕುಲುತಿರುತ್ತಿದ್ದರು. ಈ ವಯಸ್ಸಿನಲ್ಲಿ ಆರಾಮಾಗಿರುವುದು ಬಿಟ್ಟು , ಅವನ ಅಮ್ಮ ಎಲ್ಲರಿಗೂ ದಟ್ಟಿ ಹೊಲಿದು ಕೊಡುವುದು ಅವನಿಗೆ ಇರುಸುಮುರುಸಾಗುತ್ತಿತ್ತು. ಅವನೇನಾದರೂ ಅಕ್ಸೆಪ ಎತ್ತಿದರೆ ' ಅಡಿಗೆ ಪಡಿಗೆ ಮನೆ ಕೆಲಸ ಎಲ್ಲಾ ಮುಗಿಸಿಯೇ ಹೋಲಿತೇನೆ, ಏನೀಗ ಎನ್ನುತ್ತಿದ್ದರು ಅಮ್ಮ.

ಹೊಸದಾಗಿ boutique ಹೋಟೆಲೊಂದು ತಲೆ ಎತ್ತುತ್ತಿತ್ತು. ಹೋಟೆಲಿನ ಮಾಲೀಕ ಯಾರದೋ ಮನೆಯಲ್ಲಿ ಈ ದುಪ್ಪಟ್ಟಿ ಗೋದಡಿ ನೋಡಿ ಎಷ್ಟು ಮಾರು ಹೋದನೆಂದರೆ 50 ದುಪ್ಪಟ್ಟಿಗಳಿಗ order ಕೊಟ್ಟ.

ಕೊರೊನ lock down ಸಮಯದಲ್ಲಿ ಮಗನೂ ಅಮ್ಮನಿಗೆ ಸಾಥ್ ಕೊಟ್ಟ. ಚಳಿ ಹೆಚ್ಚಿರುವ ಅವರ ಊರಲ್ಲಿ ಈಗ ಅವರಿಗೆ ಬಿಡುವಿಲ್ಲದ ಕೆಲಸ. ಮಾತ್ರವಲ್ಲದೆ 20 ಮಂದಿಗೆ ಕೆಲಸ ಕೂಡ ಕೊಡುವಲ್ಲಿ ಶಕ್ಯರಾಗಿದ್ದಾರೆ

😊😊

December 14, 2020

ಕೊರೊನ ಕತೆ.- ಮೀಸೆ

 ಆಕೆ ತುಂಬಾ ಸುಂದರಿ. ಕಣ್ಣು ಮೂಗು ತುಟಿ ಎಲ್ಲಾ. ಆದರೆ ತುಟಿ ಮೇಲಿನ ಮೀಸೆಯಿಂದ ಈ ಸೌಂದರ್ಯವೆಲ್ಲ ಮಣ್ಣು ಪಾಲು. ಅತ್ಯಂತ ಬುದ್ಧಿವಂತೆ. ಹಲವು ದೊಡ್ಡ ಸಂಸ್ಥೆಗಳು ಅವಳಿಗೆ ಕೆಲಸ ನೀಡಲು ತುದಿ ಗಾಲಲ್ಲಿ ನಿಂತಿದ್ದವು. ಆದರೆ interview ಮುಗಿದ ಮೇಲೆ ಯಾರೂ ಅವಳನ್ನು ಪುನಃ ಸಂಪರ್ಕಿಸುತ್ತಿರಲಿಲ್ಲ. ಕೆಲವು ಕಡೆಯಂತೂ ಮಹಿಳಾ H R ಅಧಿಕಾರಿಗಳು ಸೂಕ್ಷ್ಮವಾಗಿ ಮೀಸೆ ತೆಗೆಸುವ ವಿಧಾನಗಳನ್ನು ಹೇಳಿದ್ದೂ ಇದೆ. ಅವಳಿಗೆ ಅಂತದ್ದರೆಲ್ಲಾ ಆಸಕ್ತಿನೆ ಇರಲಿಲ್ಲ.

ಅಂಥದ್ದರಲ್ಲಿ ಕೊರೊನಾ ಕಾಲ ಅವಳಿಗೆ ವರದಾನವಾಗಿ ಒದಗಿ ಬಂತು. Interview ಇಲ್ಲದೆ ದೊಡ್ಡ ಕೆಲಸ ಸಿಕ್ಕಿತು. ಏನಾದರೂ online con call ಇದ್ದಲ್ಲಿ ಅವಳು ಮಾಸ್ಕ್ ಕೂಡ ಧರಿಸುತ್ತಿರಲಿಲ್ಲ. ಆದರೆ ಅವಳ ಅಸಾಧ್ಯ ಬುದ್ಧಿಮತ್ತೆಯಿಂದಾಗಿ ಯಾರಿಗೂ ಅವಳ ಮೀಸೆ ಕಿರಿಕಿರಿ ಅಂತಲೂ ಅನಿಸುತ್ತಿರಲಿಲ್ಲ ಈಗ

ಅವಳ favorite ಹಾಡು : ಮೀಸೆ ಹೊತ್ತ ಹೆಂಗಸಿಗೆ ಡಿಮ್ಯಾಂಡ್ ಆಪ್ಪೋ ಡಿಮ್ಯಾಂಡ್ ಉ

😃😃



December 3, 2020

ಕನಸು interptetationಉ

 ಮೊನ್ನೆ ಬೆಳಿಗ್ಗೆ ತಿಂಡಿ ತಿನ್ನುತ್ತಿದ್ದಾಗ ನಿಹಾ 'amma yesterday in my dream i stepped on shit'

ಮಾಲವಿಕಾ ' please dont talk about shit while eating

ನಾನು : ಹೌದಾ ನಿಹಾ? ಕನಸಲ್ಲಿ ಶಿಟ್ ನೋಡಿದ್ತೆ ಒಳ್ಳೇದು ಕಣೆ. ಒಳ್ಳೆದಾಗುತ್ತೆ

ಮಾಲವಿಕಾ : oh so from when can you interpret dreams

ನಾನು : ಅಯ್ಯೋ ಹೊಗೇ ನನ್ನದಲ್ಲ...ಅವೆಲ್ಲ ನಮ್ಮ ಪಂಚಾಂಗದಲ್ಲಿದೆ.

ಮಾಲವಿಕಾ : you are lying. Show me ಈಗಲೇ...

ತೋರಿಸಿದೆ. ಓದ್ತಾ ನಗ್ತಾ ಬ್ರೆಕ್ಫಾಸ್ಟ್ ಮುಗಿಸಿದ್ವಿ

By the way some good fortune is coming Niharika's way. Will share with you all soon

BTW ಹಲ್ಲಿ ತಲೆ ಮೇಲೆ ಬಿದ್ರೆ ಶೀಘ್ರ ಮರಣ ಅಂತಿದೆ....ಯಾರ ಮರಣ ಅಂತ ಸರಿ ನಮೂದಿಸಿಲ್ಲ. ನನ್ನ ತಲೆ ಮೇಲೆ ಹಲವಾರು ಸಲ ಹಲ್ಲಿ ಬಿದ್ದಿದ್ದಿದೆ. 🤔🤔😁😁

😊😊🙏

December 2, 2020

Samosa Vendor 🤔🤔

 The Samosa Vendor (Must Read)*


_At Bombay, It was my regu

Samosa vendor - A case study of sorts... 

Whatsapp forward 🤔🤔

Need to go deeper into this

I boarded the 6:50 pm train from Church Gate._


*When the train was about to leave Marine lines, a samosa vendor with an empty basket got on and took the seat next to me.*


_As the compartment was sparsely occupied and my destination was still far away, I got into a conversation with him._


*Me:* _"Seems like you've sold all your samosas today."_


*Vendor (smiling):* _"Yes. By Almighty's grace, full sales today."_


*Me:* _"I really feel sorry for you people. Don't you get tired doing this tiresome job the whole day ?"_


*Vendor:* _"What to do, sir ? Only by selling samosas like this every day do we get a commission of 1 rupee for each samosa that we sell."_


*Me:* _"Oh, is that so ? How many samosas do you sell on an average each day ?"_


*Vendor:* _"On weekdays, we sell 4,000 to 5,000 samosas per day. On an average, we sell about 3,000 samosas a day."_


*I was speechless for a few seconds. The guy says he sells 3,000 samosas a day at a Commission of 1 rupee each. He makes about 3,000 rupees daily, or 90,000 rupees a month.*


*_That's Rs. 90,000 a month. OMG._*


_I intensified my questioning and this time it was not for time pass._


*Me:* _"Do you make the samosas yourself ?"_


*Vendor:* _"No Sir. we get the samosas through a samosa manufacturer and we just sell them. After selling we give him the money and he gives us 1 rupee for each samosa that we sell."_


*I was unable to speak a single word more but the vendor continued...*


_"But one thing, most of our earnings are spent on living expenses here at Bombay. Only with the remaining money are we able to take care of other business."_


*Me:* _"Other business ? What is that ?"_


*Vendor:* _"It is a land business. In 2007 I bought 1.5 acres in Palghar for 10 lakhs and I sold it a few months back for 80 lakhs. Now I have bought land in Umroli for 40 lakhs."_


*Me:* _"What did you do with the remaining amount ?"_


*Vendor:* _"Of the remaining amount, I have set aside 20 lakhs for my daughter's wedding. I have deposited the other 20 lakhs in the Bank, Post Office, Mutual Funds, Gold and bought Cash back Insurance."_


*Me:* _"How much schooling have you had ?"_


*Vendor:* _"I studied up to third standard. I stopped my studies when I was in the 4th standard, but I know how to read and write._


*Sir, there are many people like yourself, who dress well, wear a tie and suit, wear shoes, speak english fluently and work in air-conditioned rooms. But I don't think you guys earn as much as we do wearing dirty clothes and selling samosas."*


_At this point, what could I reply. After all, I was talking to a True Indian Millionaire._


*The train chugged into Khar station and the samosa vendor got up from his seat.*


*Vendor:* _"Sir, this is my station, have a good day."_


*Me:* _"Take care."_


*The questions at the back of my mind.*


_(1) Does the manufacturer pay GST ? (There are more than 10 samosa vendors on the train)_


*(2) Am I a fool, linking my Aadhar card, Pan card, Bank account etc and paying Income Tax by way of deduction at source, buying Car on loan, House on loan, Bike on loan, TVs with EMI, Apple Phone with EMI. 


My EDUCATION has no value against these Samosa Vendor / Manufacturer.*


_Welcome to the real India !!!_


         Entrepreneurs !!!

November 15, 2020

ಕೊರೊನ ಕಥೆ

 ಮನೆಯಲ್ಲಿ 8 ಜನ. ಕೊರೊನ ಪಿಡಿಗಿನ ನಿಮಿತ್ತ ಲಾಕ್ ದೌನ್ ಘೋಷಿಸಲಾಗಿದ್ದು, ಆ ಮನೆಯಲ್ಲಿ ಇರೋದು ಮೂರು ಜನ ಆದರೂ ಅವರ ಸಂಭಂಧದವರು, ಆಪ್ತ ಮಿತ್ರರು ಎಲ್ಲ ಅಲ್ಲೇ ಸಿಲುಕಿ, ಆ ಪುಟ್ಟ ಕೋಣೆಯಂತಹ ಮನೆಯಲ್ಲಿ 8 ಜನ. ಆರಾಮಾಗಿ ಮೈ ಚಾಚಿ ಮಲಗಲು ಆಗದಷ್ಟು ಪುಟ್ಟ ಮನೆ ಅದು. ಕೆಳಗಡೆ ಮನೆ ಮಾಲೀಕರ ವಾಸ. .

ಲಾಕ್ ಡೌನ್ ಆಗಿ ತಿಂಗಳ ಮೇಲಾಗಿತ್ತು. 8 ಜನರು ಇರುವ ಮನೆಯವರಲ್ಲಿ ಇಬ್ಬರಿಗೆ ಕೆಲಸ ಇರಲಿಲ್ಲ. ಸಂಪಾದನೆಯೂ ಇಲ್ಲ. ಕಷ್ಟಪಟ್ಟು ಜೀವನ ನಡೆಸುತ್ತಿದ್ದರು.

ಇಂತದ್ದರಲ್ಲಿ ಒಂದು ದಿನ ಮನೆಯ ಮಾಲೀಕರು ಚಪ್ಪಲಿಯ ಸದ್ದು ಮಾಡುತ್ತ ಬರಬೇಕಾದರೆ ಆ ಮನೆಯವರ ಎದೆ ಬಡಿತ ಡಬ್ ಡಬ್ ಅಂತಿತ್ತು. ನೀರಿನ ಬಿಲ್, ಕರೆಂಟ್ ಬಿಲ್ ಜಾಸ್ತಿಯಾಗಿದ್ಫು ಅದರ ಬಗ್ಗೆ ಆಕ್ಷೇಪ ಎತ್ತ ಬಹುದು ಅಂತ ಹೆದರಿ ಕೊಂಡಿದ್ದರು

ಅವರು ಮನೆಯೊಳಗೆ ಬಂದವರೇ 'ಅಲ್ರೀ 8 ಜನ ಇದ್ದೀರಾ, ಹೇಗ್ರಿ ಮ್ಯಾನೇಜ್ ಮಾಡ್ತೀರಿ? ಒಂದು ಮಾತು ಹೇಳೋದಲ್ವಾ? ಮೆಟ್ಟಿಲ ಕೆಳಗಿನ ಟೋಯ್ ಲೆಟ್ ಕಿ ಇಟ್ಟುಕೊಳ್ಳಿ. ಹಾಗೆ ಕೆಳಗಿನ ದೊಡ್ಡ ಮನೆಯಲ್ಲಿ ನಾವಿಬ್ಬರೇ. ಒಂದು ಕೊಠಡಿ ನಿಮಗೋಸ್ಕರ ಬಿಟ್ಟಿರುತ್ತೀನಿ. ಹಾಗೆ ಬಾಡಿಗೆ, ಬಿಲ್ ಬಗ್ಗೆ ಅನಗತ್ಯವಾಗಿ ತಲೆ ಕೆಡಿಸಕೊಳ್ಳಬೇಡಿ. 

ಈ ಮನೆಯವರಿಗೆ ಆಶ್ಚಯ ಭರಿತ ಖುಷಿ

(ಮಳೆ ನೋಡ್ತಾ ಟಿ ಕುಡೀತಾ ಈ ಕತೆ ಹೊಳೆದಿದ್ದು) ಗ್ರಾಮರ್, spelling mistake ಇನ್ನೊಮ್ಮೆ ತಿದ್ದುವೆ)

😊😊

November 14, 2020

Deepavali 2020

ಮಾಲತಿ, ಮಾಲವಿಕಾ ಳ  ಬಿಸ್ಕುಟ್ ಫ್ಯಾಕ್ಟರಿ  ಹಾಗು ನಿಹಾರಿಕಾ ಇವರಿಂದ ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು : )
ಕತ್ತಲೆ ತೊಲಗಿಸಿ
 ದೀಪ ಬೆಳಗಿಸಿ 




 

November 8, 2020

GSB's Rock

 Whatsapp ನಲ್ಲಿ ಬಂದ forward
ಜಿ.ಎಸ್.ಬಿ. ಜನಾಂಗದ ಬಗ್ಗೆ  ಪತ್ರಕರ್ತ ವಸಂತ್ ಗಿಳಿಯಾರ್ ಬರೆಯುತ್ತಾರೆ … ಓದಿ

*ಸಾವಿರಾರು ಕೋಟಿ ಶ್ರೀಮಂತನೂ ನೂರು ರೂಪಾಯಿ ದುಡಿಯುವ ಬಡವನೂ ಸಮಾನತೆಯಲ್ಲಿ ಇರುವ ಏಕೈಕ ಜನಾಂಗ ಒಂದನ್ನು ನೋಡಿದ್ದರೆ ಅದು ಜಿ.ಎಸ್.ಬಿ. ಜನಾಂಗ ಮಾತ್ರ*.. 
*=ವಸಂತ್ ಗಿಳಿಯಾರ್*
ಈ ಮಣ್ಣಿನಲ್ಲಿ ಅಂದು ಹರಿದಿದ್ದ ಇಂದು ಮರೆಯಾಗಿ ಇತಿಹಾಸದೊಳಗೆ ಹುದುಗಿ ಹೋದ ಸರಸ್ವತಿ ನದಿ ತಟದಲ್ಲಿ ಉಗಮಿಸಿದ ನಾಗರೀಕತೆಯ ಅವಿಛ್ಛಿನ್ನ ಪ್ರವಾಹದ ಪರಂಪರೆಯುಳ್ಳ ಆ ಜನಾಂಗದವರ ಬಗ್ಗೆ ನನಗೆ ಸದಾ ಗೌರವವಿದೆ..  ಅವರನ್ನ ಜಿ.ಎಸ್.ಬಿ. ಎಂದು ಕರೆಯುತ್ತೇವೆ. ಅಂದರೆ “ಗೌಡ ಸಾರಸ್ವತ ಬ್ರಾಹ್ಮಣ” ಪೋರ್ಚುಗೀಸರ ಧಬ್ಬಾಳಿಕೆಗೆ ಬಲಿದಾನದ ಉತ್ತರಕೊಟ್ಟು ತಮ್ಮ ಧರ್ಮವನ್ನ ಉಳಿಸಿಕೊಳ್ಳಲೋಸುಗ “ಬೈಬಲ್ ಒಪ್ಪಿಕೋ ಅಥವ ಕತ್ತಿಗೆ ಕತ್ತು ಕೊಡು” ಎನ್ನುವ ಮತಾಂತರದ ಹುನ್ನಾರವನ್ನ ಧಿಕ್ಕರಿಸಿ ಪ್ರತಿಭಟಿಸಿದವರು ಅವರು.  ಸತ್ತು ಮಲಗುವುದಕ್ಕೂ ಸಿದ್ದ ಸೋತು ಶರಣಾಗಲಾರೆವು ಎಂದು ಬಲವಾಗಿ ಬಡಿದಾಡಿದವರು ಜಿ.ಎಸ್.ಬಿ. ಜನಾಂಗದವರು. ತಮ್ಮ ಬದುಕಿನುದ್ದಕ್ಕೂ ವಲಸೆಗೊಳ್ಳುತ್ತಲೇ ಬಂದರೂ ಎಲ್ಲಿ ತಲುಪಿದರೋ ಅಲ್ಲಿಂದಲೇ ಚಿಗುರೊಡೆದು, ಕುಡಿಯೊಡೆದು ಎದ್ದು ನಿಂತವರು..  ದೇಶದ ಪರಂಪರೆ, ಧರ್ಮದ ಉಳಿವಿಗಾಗಿ ಸದಾ ಕಾಲಾ ಧ್ವನಿಯಾಗುತ್ತಲೇ ಬಂದವರು. ತಮ್ಮ ಬದುಕಿನ ನಿರಂತರ ಚಲನಶೀಲತೆಯಲ್ಲೂ “ಸತ್ಯ, ನಿಷ್ಠೆ, ಸ್ವಾಭಿಮಾನ, ಮತ್ತು ನಿರಂತರವಾದ ಪರಿಶ್ರಮವನ್ನ ನೆಚ್ಚಿಕೊಂಡೇ ಗೆದ್ದೂ ತೋರಿಸಿದವರು. ನನಗೆ ಸಾಕಷ್ಟು ಮಂದಿ ಕೊಂಕಣಿ ಗೆಳೆಯರಿದ್ದಾರೆ. ಅವರ ಮನೆಯಲ್ಲಿ ಆಗಾಗ ಊಟಕ್ಕೂ ಕರೆಯುತ್ತಾರೆ. ಅವರ ಮಡಿವಂತಿಕೆ ಸ್ನಾನದಲ್ಲಿಲ್ಲ ಜ್ಞಾನದಲ್ಲಿ ಎನ್ನುವುದು ನನಗೆ ಎಂದೋ ಅರ್ಥವಾಗಿ ಹೋಗಿದೆ. ಅವರ ಮೇಲೆ ಹಲವಾರು ಆರೋಪಗಳಿವೆ. “ಅವರು ತಮ್ಮ ದೇವಸ್ಥಾನಗಳಿಗೆ ಯಾರನ್ನೂ ಕರೆಯುವುದಿಲ್ಲ” ಎನ್ನುವುದಾಗಿ.   ಕುಂದಾಪುರ, ಕಾರ್ಕಳ ಮುಂತಾದ ಕಡೆ ಇರುವ ವೆಂಕಟರಮಣ ದೇವಸ್ಥಾನಗಳು ಇದಕ್ಕೆ ಅಪವಾದವಾಗಿ ಕಾಣ ಬಹುದು. ಹಿಂದೆ ಬೇರೆ ರಾಜ್ಯದಿಂದ ವಲಸೆ ಬಂದವರಾದ್ದರಿಂದ ಅವರು ತಮ್ಮಷ್ಟಕ್ಕೇ ತಾವೇ ತಮ್ಮ ಆಚರಣೆಗಳನ್ನ ಮಾಡಿಕೊಂಡು ಬಂದವರು. ಬೇರೆಯವರು ಅವರ ಭಿನ್ನ ಭಾಷೆಯ ಕಾರಣಕ್ಕೆ “ತಾವಾಗಿಯೇ “ಪ್ರತ್ಯೇಕತೆಯ” ಪರೀಧಿ ಹಾಕಿಕೊಂಡರೇ ಹೊರತು. ಜಿ.ಎಸ್.ಬಿ. ಜನಾಂಗದವರು ಎಂದೂ ಸಮಾಜದಲ್ಲಿ ಬೇಧ ಮಾಡಿಲ್ಲ ಎನ್ನುವುದು ಸತ್ಯ.   ಅವರ ವ್ಯವಹಾರ ಜಾಣ್ಮೆಯನ್ನ ಯಾರೇ ಆದರೂ ಮೆಚ್ಚಲೇ ಬೇಕು. ಕೆಲವರು ಅದನ್ನು ಕೊಂಕಣಿ ಜನಾಂಗದ ಜಿಪುಣತನ ಎನ್ನುವುದಿದೆ.. “ಬೆಣ್ಣೆ ಮೇಲಿನ ಕೂದಲು ತೆಗೆದಂತೆ, ನಯವಾಗಿ ಮಾತನಾಡುತ್ತಲೇ ಅವರು ಮಾಡುವ ವ್ಯವಹಾರದ ಜಾಣ್ಮೆ” ಕೆಲವರಿಗೆ ಅಚ್ಚರಿ ಮೂಡಿಸುತ್ತದೆ.  ಬದುಕಿನಲ್ಲಿ ಉನ್ನತಿ ತಲುಪಬೇಕಿದ್ದರೆ ಸರಳತೆ ಅತೀ ಮುಖ್ಯ ಎನ್ನುವುದನ್ನ ನಾವು ಅವರಿಂದ ಕಲಿಯಬೇಕಿದೆ. ಜೀವನದಲ್ಲಿ ಗೆದ್ದ ಬಹುತೇಕರು ಹೇಳಿದ್ದೂ ಕೂಡ ಇದನ್ನೇ “ಲೆಕ್ಕಾಚಾರವಿಲ್ಲದ ಬದುಕಿನ ಲೆಕ್ಕ ಚುಕ್ತಾ ಆಗೋದು ಬೇಗ”  ನೂರಾರು ಕೋಟಿ ಶ್ರೀಮಂತನಿದ್ದರೂ ಒಂದು ಪಂಚೆ ಉಟ್ಟುಕೊಂಡು ಓಡಾಡುವ ಜಿ.ಎಸ್.ಬಿ. ನಾಯಕರುಗಳು ತಮ್ಮ ಸರಳತೆಯಲ್ಲೇ ವಿಷಿಷ್ಠರಾಗಿ ಕಾಣಿಸುತ್ತಾರೆ. ಇಂದು ನಮ್ಮಲ್ಲಿ  ದೇವಸ್ಥಾನದಲ್ಲಿ ಕೆಸರಿ ದ್ವಜಗಳನ್ನ ನೋಡುತ್ತೇವೆ.. ಕೆಲವರು ಕೇಸರಿ ಪಂಚೆಗಳನ್ನೂ ಧರಿಸುತ್ತಾರೆ. ಆದರೆ ಶತಮಾನಗಳ ಹಿಂದೇ ಜಿ.ಎಸ್.ಬಿ. ಜನಾಂಗಕ್ಕೆ ಸೇರಿದ ದೇವಳದ ಮೇಲೆ ಕೆಸರಿ ಧ್ವಜಗಳು ಹಾರಾಡುತ್ತಿದ್ದವು..  ಅವರ ಧಿರಿಸಿನಲ್ಲಿ ಕೇಸರಿಯೇ ಪ್ರಾಮುಖ್ಯತೆ ಪಡೆದಿತ್ತು. ತಾವು ಎಲ್ಲೇ ಹೋದರು, ಯಾವ ಕ್ಷೇತ್ರದಲ್ಲಿ ಕೈಯಾಡಿಸಿದರೂ ಅಲ್ಲಿ ಅವರು ಯಾಕೆ ಗೆಲ್ಲುತ್ತಾರೆಂದರೆ “ಇಂದಲ್ಲ ನಾಳೆ ಗೆದ್ದೇ ಗೆಲ್ಲುತ್ತೇನೆ” ಎನ್ನುವ ಅಚಲವಾದ ವಿಶ್ವಾಸ, ವ್ಯವಹಾರದಲ್ಲಿನ ಪರಿಶುದ್ದತೆ, ನಿರಂತರವಾದ ಪರಿಶ್ರಮ ಮತ್ತು  ಸರಳತೆಯ ಮೂಲಮಂತ್ರ.. ಇದೇ ಅವರ ಗೆಲುವಿನ ಗುಟ್ಟು.. ಜಿ.ಎಸ್.ಬಿ. ಯವರಲ್ಲಿ ತೊಂಬತ್ತೊಂಬತ್ತು ಬಾಗಶಃ ಸಂಖ್ಯೆಯವರು ಪ್ರಖರವಾದ ರಾಷ್ಟಾಭಿಮಾನಿಗಳು.  ಅವರು ಯಾವುದೇ ರಾಜಕೀಯ ಪಕ್ಷಗಳಲ್ಲಿದ್ದರೂ ರಾಷ್ಟ್ರೀಯ ವಿಚಾರಧಾರೆಗಳು ಅವರಲ್ಲಿ ಉತ್ಕಟವಾಗಿರುವುದನ್ನ ನಾನು ಗಮನಿಸಿದ್ದೇನೆ.. ಮೊನ್ನೆ ಸಾಲಿಗ್ರಾಮದ ಪೇಟೆಯಲ್ಲಿ ಜಿ.ಎಸ್.ಬಿ. ಜನಾಂಗದವರು ತಮ್ಮ ಅಂಗಡಿ, ಮನೆಗಳ ಮುಂದೆ ತೋರಣ ಕಟ್ಟಿ, ರಂಗೋಲಿ ಹಾಕಿ ನಂದಾ ದೀಪ ಹಚ್ಚಿಟ್ಟಿದ್ದರು. ಒಂದಷ್ಟು ಜನ ಭಜನೆ ಮಾಡುತ್ತ ಬಂದು ಪ್ರತೀ ನಂದಾ ದೀಪದ ಸುತ್ತಲೂ ಭಜನೆ ಮಾಡುತ್ತಾ ಪ್ರದಕ್ಷಿಣೆ ಹಾಕುತ್ತಾ ಹೋದರು. ಇಂದು ನಮ್ಮ ಪೀಳಿಗೆ ಭಜನೆಯನ್ನ ಮರೆತೇ ಹೋಗಿದೆ. ನನ್ನ ಹಿರಿಯರ ಕಾಲದಲ್ಲಿ ಗಿಳಿಯಾರಿನಲ್ಲಿಯೂ ಹೀಗೆ ವಾರ ಭಜನೆಗಳು ನಡೆಯುತ್ತಿತ್ತು ಎಂದು ಕೇಳಿದ್ದೆ.  ಆ ಪರಂಪರೆಯನ್ನ ಜಿ.ಎಸ್.ಬಿ.ಯವರು ಇಂದಿಗೂ ಅನುಚಾನವಾಗಿ ನಡೆಸುತ್ತಾರೆ.. ಸಂಸ್ಕೃತಿ, ಸಂಸ್ಕಾರದ ವಿಚಾರಕ್ಕೆ ಬಂದರೆ ಅವರನ್ನ ಮೀರಿಸುವವರಿಲ್ಲ. ಕೋಟದಲ್ಲಿ ಒಮ್ಮೆ ಜಿ.ಎಸ್.ಬಿ ತಂಡದ ದೀಪೋತ್ಸವದ ಮೆರವಣಿಗೆಯೊಂದು  ಸಾಗುತ್ತಿತ್ತು.. ಅಲ್ಲಲ್ಲಿ ಕೆಲವರು ಮಜ್ಜಿಗೆ ಮುಂತಾದ ಪಾನಕ ಕೊಡುತ್ತಿದ್ದರು.. ಆ ಮೆರವಣಿಗೆಯ ಹಿಂದೆ ಬರುತ್ತಿದ್ದ ಒಂದಷ್ಟು ಯುವಕರು ಆ ಕಸವನ್ನೆಲ್ಲಾ ಎತ್ತುತ್ತಾ ಬರುತ್ತಿದ್ದರು!..  ಹೆದ್ದಾರಿಗಳಲ್ಲಿ ಅವರು ಮೆರವಣಿಗೆ ಹೊರಡುವ ಚೆಂದವನ್ನ ನೀವು ನೋಡಬೇಕು. ವ್ಹಾ ಅದ್ಭುತ.. ಪ್ರತಿಯೊಬ್ಬರೂ ಅತ್ಯಂತ ಶಿಸ್ತಿನಲ್ಲಿ ಸಾಗುತ್ತಾರೆ..  “ಗೋ ಸ್ಲೋ” ಎನ್ನುವ ಫಲಕ ಹಿಡಿದು ವಾಹನ ಸವಾರರಿಗೂ ಕೆಲವರು ಮಾರ್ಗದರ್ಶನ ಮಾಡುತ್ತಾ ಎಲ್ಲಿಯೂ ತೊಂದರೆಯಾಗದಂತೆ ಸಾಗುವುದು ಅವರ ವೈಶಿಷ್ಟ್ಯ..  “ ಜೈ ಜೈ ಮಾತಾ ಭಾರತ ಮಾತ ಜೈ ಜೈ ಗೀತಾ ಭಗವಧ್ಗೀತ” ಎನ್ನುವ ಸ್ಲೊಗನ್ ನನ್ನ ಕಿವಿಗೆ ಬಿದ್ದಿದ್ದೇ ಕೋಟದ ಕಾಶಿಮಠದಲ್ಲಿ ..  ತಾನು ಫೂಜಿಸುತ್ತಿದ್ದ ಮೂರ್ತಿಯನ್ನ  ದುಷ್ಟರಿಂದ ರಕ್ಷಿಸಿಕೊಂಡು ಗೋವಾದಿಂದ ಕರ್ನಾಟಕ, ಕೇರಳ ಮುಂತಾದೆಡೆ ವಲಸೆ ಹೋದ ಜಿ.ಎಸ್.ಬಿ. ಗಳು ಇಂದು ಅಲ್ಲೆಲ್ಲಾ ಕಡೆಯಲ್ಲೂ ಗೆದ್ದು ತೋರಿಸಿದ್ದಾರೆ.. ಸಾವಿರಾರು ಕೋಟಿ ಶ್ರೀಮಂತನೂ ನೂರು ರೂಪಾಯಿ ದುಡಿಯುವ ಬಡವನೂ ಸಮಾನತೆಯಲ್ಲಿ ಇರುವ ಏಕೈಕ ಜನಾಂಗ ಒಂದನ್ನು ನೋಡಿದ್ದರೆ ಅದು ಜಿ.ಎಸ್.ಬಿ. ಜನಾಂಗ ಮಾತ್ರ..  ಧರ್ಮವೆಂದರೆ ಒಂದು ಜೀವನ ಪದ್ಧತಿ.. ಈ ಹಿಂದೂ ಜಿವನ ಪದ್ಧತಿಯನ್ನ ಅತ್ಯಂತ ವೈಷಿಷ್ಟ್ಯದೊಂದಿಗೆ ಇಂದಿಗೂ ಅನುಸರಿಸುವ ಜನಾಂಗವೆಂದರೆ ಅದು ಜಿ.ಎಸ್.ಬಿ. ಜನಾಂಗ ಎನ್ನುವುದು ಸೌರಸತ್ಯ.. ಜಾತಿ ಬೇಧಕ್ಕೂ ಮಣೆ ಹಾಕದೆ ಸಮಾಜದಲ್ಲಿ ಸಾಮರಸ್ಯದ ದೀಪ ಬೆಳಗಿ ಅದಕ್ಕೆ ನಿರಂತರವಾಗಿ ಸಹಬಾಳ್ವೆಯ ತೈಲವೆರೆವ ಜನಾಂಗವಿದ್ದರೆ ಅದು ಜಿ.ಎಸ್.ಬಿ. ಜನಾಂಗ..  ವ್ಯವಹಾರ ಜಾಣ್ಮೆ ಪಡೆಯಲಿಕ್ಕೆ ದೊಡ್ಡ ದೊಡ್ಡ ಡಿಗ್ರಿ ಸಂಪಾದಿಸುವುದಕ್ಕಿಂತಲೂ ಆ ಕ್ಷೇತ್ರದಲ್ಲಿ ಗೆದ್ದಿರುವ ಜಿ.ಎಸ್.ಬಿ. ಜನಾಂಗದ ಕೆಲವರ ಬದುಕಿನ ಯಾದಿಯನ್ನ ಅರಿತರೆ ಸಾಕು ಎನ್ನುವುದು ನನ್ನ ಅಭಿಮತ.. ಏನಂತೀರಿ?. ಗೆಳೆಯ ನಾಗಭೂಷಣ ಕಳಿಸಿದ್ದ ಗೋಪಾಲ ಕೃಷ್ಣ ಪೈಯವರ ಒಂದು “ಅದ್ಭುತ ಕಾದಂಬರಿ “ಸ್ವಪ್ನ ಸಾರಸ್ವತ “ ಮತ್ತೊಂದು ಸುತ್ತಿನ ಓದಿಗಾಗಿ  ಕೈಗೆತ್ತಿಕೊಂಡಿದ್ದೇನೆ..  ಹದಿನಾರು ಮತ್ತು ಹದಿನೇಳನೆ ಶತಮಾನದಲ್ಲಿ ನಡೆದ ಪೋರ್ಚುಗೀಸರ ಧೌರ್ಜನ್ಯ ಮತ್ತು ಜಿ.ಎಸ್.ಬಿ. ಜನಾಂಗದ ಸಂಗ್ರಾಮ, ಅವರ ಧುರ್ಭರ ದಿನಗಳು, ಫಲ್ಲಟಗಳು. ನಾಗ್ಡೋ ಬೇತಾಳ ಎನ್ನುವ ರೋಚಕ ಪಾತ್ರ…  ಸ್ವಪ್ನ ಸಾರಸ್ವತ ನನ್ನ ಮತ್ತೊಂದು ಸುತ್ತಿಗೆ ಆವರಿಸಿಕೊಳ್ಳುತ್ತಿದೆ.. ನೀವೂ ಒಮ್ಮೆ ಓದಿ..

November 5, 2020

cubbon park

visited Cubbon park after 7 months. was expecting a huge crowd what with November 1 st holiday and a sunday. there were more monkeys there than hunans. 
me and Niha enjoyed our day out immensely. it is sunny after a long period of rain. i packed some food and armed myself with a book. i walked/wandered, talked to birds and monkeys, read a bit, irritated Niha a bit...

some pics









October 22, 2020

Misty Morning

 ಹಾಲು ತೆಗೆದುಕೊಂಡು ವಾಪಾಸ್  ಬರ್ತಾ, ರಸ್ತೆ ದಾಟಲು ಕಾಯ್ತಾ ಇದ್ದೆ. ಯಾಕೋ ತಲೆ ಎತ್ತಿ ಆಕಾಶದ ಕಡೆ ನೋಡ್ತಾ ಇದ್ದೆ. ಮಂಜು ಹೇಗೆ ಪಸರಿಸಿತು ಎಂದರೆ... 

the whole atmosphere was shrouded with mist. i saw a pair of construction workers warming themselves in front of a fire. though it looks they have planted themselves in the middle of the road, it is ok cos it's a dead end. there are many such dead end streets this side, Also  many constructions coming  up/

once i reached home , a thick curtain of mist had formed in front of the balcony. my pictures do not do justice. have to check husband's cell phone,

ಕೆಳಗಿವೆ ಕೆಲವು ಚಿತ್ರಗಳು 








October 16, 2020

fall/autumn

   My sister in the US has sent a few picture of Fall / Autumn season. She called on whatsapp video and took us on a tour of the neighbourhood and then sent a few pictures which i would like to share with you all.











October 1, 2020

ನೋಟ


  ಅಕ್ಕನ ಬೇಕರಿಗೆ  ಸಾಮಾನು ತರಲು ಹೊರಟಿದ್ದೆವು. ಒಂದು ಸ್ಟಾಪ್ ನಲ್ಲಿ  ಹುಡುಗ ಓಡಿ ಬಂದು "ಅಂಕಲ್, ಬಾಪೂಜಿನಗರಕ್ಕೆ ಹೋಗುತ್ತಾ? ಡ್ರೈವರ್ ಹ್ಞೂ ಎಂದಾಗ "ವಸಿ ನಿಂತ್ಕಳ್ಳಿ , ನಿಧಾನಕ್ಕೆ ಬರ್ತಾವರೇ " ಎಂದಾಗ ನಾನು ಹಿಂದುರಿಗಿ ನೋಡಿದೆ. ೭ ತಿಂಗಳ ಗರ್ಭಿಣಿ ಹೆಂಗಸೊಬ್ಬರು ಬರ್ತಾ ಇದ್ರೂ. ಎಷ್ಟು ಚುರುಕಾಗಿದ್ದಾನೆ ಹಡುಗ ಅಂತ ಖುಷಿ ಆಯ್ತು, 

ಜನ ಈಗಲೂ ಕಡಿಮೆ ರಸ್ತೆಯಲ್ಲಿ. ಬಸ್ ನಲ್ಲೂ ಹಾಗೆ. ಸ್ವಂತ ವಾಹನ ಇದ್ದವರು ಮಾತ್ರ  ಓಡಿಯಾಡ್ತಿದ್ದಾರೆ. 

ಅಕ್ಕನ ಬಿಸ್ಕೂಟ್ ಫ್ಯಾಕ್ಟರಿ ಚೆನ್ನಾಗಿ ನಡೆಯುತ್ತಿದೆ. ಒಂದು baby food ಕಂಪನಿ ಜತೆ colloborateಮಾಡಿ ರೆಸಿಪಿ ಮತ್ತು videos ಕೂಡ ಮಾಡ್ತಿದ್ದಾಳೆ.





ಜಯನಗರ ೪ನೇ ಹಂತ ಕೆಲವು ಚಿತ್ರಗಳು. ತರಕಾರಿ  ಪೇರಿಸಿಟ್ಟ ಪರಿಗೆ ಮರುಳಾಗಬೇಕು. 






September 30, 2020

ಬೆಳಿಗ್ಗೆ ಬೆಳಿಗ್ಗೆ pun

 ಫ್ರೆ0ಡ್ ಗೆ ಈ ಚಿತ್ರ ಕಳಿಸಿದ್ದೆ.



ಅವರು : ಬರೀ ಫೋಟೋ ನೋಡೋದೇ ಬಂತು   ಕರೀಲೇ ಇಲ್ಲ

ಕರೆದಿದ್ದೆ ಹಪ್ಪಳ ಅಂದೆ

ಶ್ಲೇಷೆ courtesey ಮಾಲವಿಕ 😊😊

September 4, 2020

ತೆಂಗಿನಕಾಯಿ ದಿನ (my 500th post)

 ತೆಂಗಿನ ಕಾಯಿಗೂ ಒಂದು ದಿನವಂತೆ 🤔🤔



ಕೊಂಕಣಿಯವರಿಗೆ ತೆಂಗಿನ ಕಾಯಿ ಇಲ್ಲದೆ ಜೀವವಿಲ್ಲ. ತೆಂಗಿನ ಕಾಯಿಯ ಚಿಪ್ಪನೆಲ್ಲ collect ಮಾಡಿ ಒಂದೋ ನಮ್ಮ ಇಸ್ತ್ರಿ ಹಾಕುವ ಗಂಗಾಧರ, ಅಥವಾ ಬಿಲ್ಡಿಂಗ್ ಕ್ಲೀನ್ ಮಾಡುವ ಬಿ ಬಿ ಎಂ ಪಿ ಯವರಿಗೆ ಅಥವಾ ಬಾರ್ಬೆಕ್ಯೂ ಮಾಡಲು ಉಪಯೋಗಿಸುತ್ತೇನೆ

We konkani s cannot survive without coconut. The used shells i give to gangadhar our istriwala (i have saved his contact number as 'ironman'much to the amusement of my family members) Gangadhar is very enterprising. His day begins at 4 am. Gangadhar owns an autorickshaw.He goes to buy fresh flowers from K.R.Market, for distribution to households in our apartment complex. Next he gets milk. Other than ironing (he has his relatives from his native to do ironing), he is in charge of bottled water. He also rents out homa kunda (ಹೋಮ ಕುಂಡ), banana stem holders during pooja, sand etc. Not only that if we need to catch a bus early in the morning, he drops us to the nearest bus stop...😊. Topic changed from coconut to gangadhar. Gandhar speaks ಅಚ್ಚ ಕನ್ನಡ,  is always dressed neatly in mundu and full sleeved shirt and his forehead is always annoied with bhasma. Should get his pic to post here.

Rest of the shells i give to BBMP ladies and some i keep for my barbecue. 


September 3, 2020

ಪೋಸ್ಟ್ ಕಾರ್ಡ್ ಕತೆ

 ತನ್ನ ತಂದೆ ತಾಯಿಯರಿಗೆ ಇದ್ದ ದುಷ್ಟತನ, ಕೆಟ್ಟ ಚಾಳಿ ಗಳು ,ತನ್ನ ಜೀವನಕ್ಕೆ ತಗುಲಬಾರದೆಂದು , ಅವರ ಸಹವಾಸವೇ ಬೇಡ ಅಂತ   ಅವರಿಂದ ಬಹು ದೂರ ಉಳಿದ, ಆದರೆ ಅವರಿಬ್ಬರಿಗಿದ್ದ ಸಕ್ಕರೆ ಕಾಯಿಲೆ ಮಾತ್ರ ಅವನಿಗೆ ಅಂಟಿಕೊಂಡೇ ಬಿಡ್ತು


August 30, 2020

Niha's Art - my lines



Many a sleepless nights

I sit out and gaze at the skies

I see these white birds

Pearly white against the black backdrop

Weaving seamlessly through  the scattered clouds.

Wonder where they go on as night flies

Or do they put on this show

Only for my eyes!!!??

August 28, 2020

My weight loss journey

  

                                                                          ಚೌತಿ ೨೦೨೦
                                                                    ಚೌತಿ ೨೦೨೦
                                                   ಇದು ಹಿಂದಿನ ವರ್ಷದ ಚೌತಿ ಫೋಟೋ ೨೦೧೯

ಲಾಕ್ ಡೌನ್ ಶುರು ಆದಾಗಲಿಂದ  ನನ್ನ ವಾಕ್ ತಪ್ಪಿ ಹೋಗಿತ್ತು. ಮನೆ ಯಲ್ಲಿ .ಕೂತು , instagram ನಲ್ಲಿ ಶೇರ್ ಮಾಡುವ ನೇವದಿಂದ ತರಹೇವಾರಿ ತಿಂಡಿ, ಸ್ವೀಟ್, ಕೇಕ್ ಮಾಡಿ ತಿಂದು ಸಹಜವಾಗೇ ಮೈ ಬಂದಿತ್ತು

ಕೊರೊನಾ ಕಾಯಿಲೆ ತಡೆಗಟ್ಟುವ immunity booster ಪುಡಿ ತಮ್ಮ ಕಳಿಸಿ ಕೊಟ್ಟಿದ್ದ. ದಿನಕ್ಕೆ ಎರಡು ಬಾರಿ ಬಿಸಿ ನೀರಲ್ಲಿ ಈ ಪುಡಿ ಮತ್ತು  ನಿಂಬೆ ರಸ ಬೆರೆಸಿ ಕುಡಿಯುವುದು. ನಾನು ರುಚಿಗೊಸ್ಕರ ಮಾತ್ರಇದನ್ನು ಸೇವಿಸುತ್ತಿದ್ದೆ.

 ಎರಡು ವಾರದ   ನಂತರ ಅಕ್ಕನ ಕೇಕ್ ಗಳ ಸಾಮಗ್ರಿ ತರಲು ತಯಾರಾಗುತ್ತಿದ್ದಾಗ  ಏನಾಶ್ಚರ್ಯ, ಬಟ್ಟೆ ಲೂಸ್ ಆಗಿತ್ತು.

ಈ ಕಶಾಯದ ಪುಡಿಯ  ಹಿಂದೆ ನನ್ನ ತಮ್ಮನ ಹೆಂಡತಿಯ ಎರಡು ವರ್ಷದ ಪರಿಶ್ರಮ ಇದೆ. ಅಡಿಗೆ ಮನೆಯಲ್ಲಿ ಲಭ್ಯವಿರುವ ಸಾಂಬಾರ ಪದಾರ್ಥಗಳಾದ  ಜೀರಿಗೆ, ಸೌ0ಫ್, ಅರಿಶಿನ, ಅಜ್ವಾಯ್ನ್  ಮುಂತಾದ ಕೆಲವು ಸಾಮಗ್ರಿಗಳನ್ನು ಹುರಿದು  ತಯಾರಿಸಲಾಗಿದೆ. ನಾನು ಮತ್ತು ಅಕ್ಕ ಇಬ್ಬರೂ ಇದನ್ನು ಉಪಯೋಗಿಸಿ ಸಣ್ಣಗಾಗಿದ್ದೇವೆ

೨೫೦ ಗ್ರಾಮ್ ಕಷಾಯದ ಪುಡಿಗೆ 160 ರೂ. 

ಇದರ ವಿಶಿಷ್ಟತೆ ಏನಂದ್ರೆ, ಇದನ್ನು ಯಾವಾಗ ಬೇಕಾದ್ರೂ ಕುಡಿ ಬಹುದು. ಒಂದು ಪ್ಲಾಸ್ಕ್ ನಲ್ಲಿ ಬಿಸಿ ನೀರು ಇತ್ತು ಕೊಂಡ್ರೆ, ಒಂದು ಗ್ಲಾಸ್ ಬಿಸಿ ನೀರಿಗೆ, ಅರ್ಧ ಟೀ ಚಮಚದಷ್ಟು ಕಷಾಯ ಪುಡಿ, ಸ್ವಲ್ಪ ನಿಂಬೆ ರಸ. ನಿ0ಬೆಯ ರಸ ಕೂಡ ಮಾಡಿಟ್ಟು ಕೊಳ್ಳಬಹುದು. ನಿಂಬೆ ರಸ ಯಾಕಂದ್ರೆ ಪುಡಿಯಲ್ಲಿರುವ ಔಷಧೀಯ ತತ್ವಗಳನ್ನು ದೇಹದೊಳಗೆ ಬೇಗನೆ absorb ಮಾಡಲು. ಮಾತ್ರವಲ್ಲ ಇದರಲ್ಲಿದೆ vitamin c.

ಬಾಯಾರಿಕೆಯಾದಾಗಲೆಲ್ಲಾ ಸುಮ್ಮನೆ ನೀರು ಕುಡಿಯುವ ಬದಲು ಈ ಕಷಾಯ ಕುಡಿಯಬಹುದು

ಖಂಡಿತ ಅಡ್ಡಪರಿಣಾಮ/ ದುಷ್ಪರಿಣಾಮಗಲಿಲ್ಲ.

ಹೆಚ್ಚಿನ ಮಾಹಿತಿಗಾಗಿ malathi.shenoy@gmail.com 

Comments  ಗೆ updated blog ನಲ್ಲಿ  hege uttarisuvudu ಅಂತ  ಗೊತ್ತು ಆಗ್ತಾ ಇಲ್್ಲ. Sorry

August 12, 2020

ಎಲರ್ಜಿಯೂ ಆಸ್ಪತ್ರೆಯೂ

ನಾವು ಕೃಷ್ಣಾಷ್ಟಮಿ ಗೆ ಗಜಬಜೋ ಅಂತ ಒಂದು ಪದಾರ್ಥ ಮಾಡ್ತೇವೆ. ಮಿಶ್ರ ತರಕಾರಿಗಳ ಹುಳಿ. ಈ season ನಲ್ಲಿ ಲಭ್ಯ ತರಕಾರಿ, ಗೆಡ್ಡೆ ದಂಟು ಎಲ್ಲ ಹಾಕುತ್ತೇವೆ.
ನಿನ್ನೆ ಊಟಕ್ಕೆ ಕೂತ ನಿಹಾ, ಗಜಬಜೋ ಬಾಯಿಗೆ ಹಾಕಿದ್ದೆ..ಇನ್ನೂ ನುಂಗೆ ಇರಲಿಲ್ಲ, ಗಂಟಲು ಹಿಡಿದುಕೊಂಡು ಉಸಿರಾಡಲು ತೊಂದ್ರೆ ಪಟ್ಟಳು. ಕೂಡಲೇ ಮಜ್ಜಿಗೆ ಕುಡಿಯಲು ಕೊಟ್ಟೆ. ಗಜಬಜೋದಲ್ಲಿ ಹಾಕಿದ ಕೆಸುವಿನ ದಂಟಿಗೆ reaction. ಕೂಡಲೇ ಆಕೆಯ ಡಾಕ್ಟರ್ ಫ್ರೆಂಡ್ ಗೆ ಫೋನ್ ಮಾಡಿದೆ. If she is choking go immediately to a hospital and get her an anti allergic shot ಅಂತ ಹೇಳಿದ್ರು. ಅನ್ನ ನಾಳ ಹಾಗೂ ಶ್ವಾಸ ನಾಳ ಹತ್ತಿರ ಇರೋದರಿಂದ, allergy ಇಂದ ಅನ್ನ ನಾಳ ಊದಿಕೊಂಡು ಶ್ವಾಸ್ ನಾಳದ ಮೇಲೆ ಒತ್ತಿದ ಹಾಗೆ ಆಗಿ ಉಸಿರಾಡಲು ಸಮಸ್ಯೆ ಆಗುತ್ತೆ ಅಂದರು
ಪುಣ್ಯಕ್ಕೆ ಗೇಟ್ ಬಳಿಯೇ ರಿಕ್ಷಾ ಸಿಗ್ತು. ಹತ್ತು ಹೆಜ್ಜೆ ನಡೆದರೆ ಆಸ್ಪತ್ರೆ but i did not want to take chances. ಆಸ್ಪತ್ರೆಗೆ ಹೋಗುವ ಮೆಟ್ಟಿಲ ಬಳಿ ಸೆಕ್ಯೂರಿtti.ಅವನಿಗೆ ಎಲರ್ಜಿ ಅಂದ್ರೆ ಅರ್ಥ ಆಗಲಿಲ್ಲ. ಅವನು ಡಾಕ್ಟರ್ ಅನ್ನು ಕರೆದು ತಂದ. ಅವರು ನಮ್ಮನ್ನು ಒಳಗೆ ಬರಲು ಹೇಳಿದರು...ಸೆಕ್ಯೂರಿತಿಯಂವ temperature ಚೆಕ್ ಮಾಡಿ, ನಮಗೆ ಸೋಪ್ ನಿಂದ ಕೈತೊಳೆದು ಒಳಗೆ ಹೋಗಲು ಹೇಳಿದ. ನಿಹಾಗೆ ಮೊದಲು ಒಳಗೆ ಕಳಿಸಿದೆ, ಆಮೇಲೆ ನಾನು. ಅವಳು ಮಾತನಾಡಲು ಪ್ರಯಾಸ ಪಡ್ತಾ ಇದ್ಲು, ಮಾತ್ರವಲ್ಲದೆ ಹಿಂದಿಯಲ್ಲಿ ಕೆಸುವಿನ ಎಲೆಗೆ ಏನು ಹೇಳ್ತಾರೆ ಅಂತ ಆಕೆಗೆ ಗೊತ್ತಿರಲಿಲ್ಲ. ನಾನು ತಲುಪಿ ಹೇಳಿದೆ. ಡಾಕ್ಟರ್ ಯು ಪಿ ಯ ಯುವಕ. ನಿಹಾಗೆ ಔಷಧಿ ಕೊಡುವ ಬದಲು, ಆರ್ಬಿ ಔರ್ ಸೂರನ್ ಸೆ ಎಲರ್ಜಿ ಹೋtaa ಹೈ, ಉಸೆ ಅಲಗ್ ತರೀಕೆ ಸೆ ಪಕಾನಾ ಚಾಹಿಯೇ, ನ್ನಿಂಬೂ ಕ ರಸ್ ಡಾಲನಾ ಚಾಹಿಯೇ ಅಂತ ಶುರು ಹಚ್ಕೊಂಡ್ರೆ ನಿಹಾ ಅವಳ ಗಂಟಲು ಗಟ್ಟಿ ಹಿಡಿದುಕೊಂಡು ಶಬ್ದ ಮಾಡ್ತಾ ಇದ್ಲು. ಕೊನೆಗೆ ನನ್ನ ಗಡಸು ಮುಖ ನೋಡಿ, ಇನ್ಗಜೇಕ್ಷನ್ ಬೇಡ ಅಂತ ಬೇಗ ಔಷಧಿ ಬರೆದುಕೊಟ್ರು.
ನೀರು ಒಯ್ದದ್ದರಿಂದ ಅಲ್ಲೇ ಒಂದು ಡೋಸ್ ಮಾತ್ರೆ ತೆಗೊಂಡಳು. ರಾತ್ರಿ ಆಗುವಷ್ಟರಲ್ಲಿ ಅವಳ ಆರೋಗ್ಯದಲ್ಲಿ  ಸುಮಾರಷ್ಟು ಸುಧಾರಣೆ ಆಯ್ತು
ಗಜಬಜೆಯಿಂದ ತಲೆಯೇಲ್ಲ ಗಜಿಬಿಜಿ ಆಯ್ತು 🤔🤔
Anyways all is well that ends well...

August 10, 2020

Banana jamoon

 


1 cup insta gulab jamun mix

1/2 cup sugar

1/2 overripe nendra banana

1 tsp ghee

Grind together sugar and banana to a smooth paste

Add g j mix and make a soft pliable dough. Smear ghee to palms and make balls

Deep fry on a low flame till golden brown

Serve with icecream

Decorate with microgreens of your choice 






August 2, 2020

ಬಸ್ ಜೋಕ್

ನಿನ್ನೆ ಕೇಕ್ ಗೆ ಬೇಕಾಗುವ ಸಾಮಗ್ರಿ ತರಲು ಬಸ್ ನಲ್ಲಿ ಹೋಗ್ತಾ
ಒಬ್ಬ ಹುಡುಗಿ ಕಂಡಕ್ಟರ್ ಅವರನ್ನು ಉದ್ದೇಶಿಸಿ : ಸರ್ ಜನತಾ ಬಜಾರ್ ಹೋಗುತ್ತಾ?
ಕಂಡಕ್ಟರ್ ಗಟ್ಟಿಯಾಗಿ ನಗುತ್ತ : ಜನತಾ ಬಜಾರ್ ಇದ್ದಲ್ಲೇ ಇರುತ್ತೆ ಮೇಡಂ, ಬಸ್ ಅಲ್ಲಿ ತನಕ ಹೋಗುತ್ತೆ
.....................................................

ಮೊದಲಾದರೆ ಇದೆ ದಾರಿ , 30 ನಿಮಿಷ ಬೇಕಾಗ್ತಿತ್ತು ತಲುಪಲು..ಈಗ ಐದೇ ನಿಮಿಷ. ನಾನು ಅಕ್ಕ ಸೇರಿ 7 ಜನರಿದ್ದೆವು ಬಸ್ ನಲ್ಲಿ. ಚಾಲಕ ಕಂಡಕ್ಟರ್ ಇಬ್ಬರೇ ಗಂಡಸರು...
ಏನೇ ಅನ್ನಿ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು
😀😀

July 19, 2020

Thirstdays for the agri batch guys

I stealthily clicked a pic of their web party. They have been in touch everyday for an hour 7.30 to 8.30 pm since the lock down ,without fail.
Yesterday was their 101 day of g meet
Some had tindi with teertha, a few teetotallers had masala majjige, juice or plain water
I made marakesuvina phoDi for him
Fun for the old guys. 😀😀

There were discussionsbon serious topics too