Showing posts with label ಸಣ್ಣ ಕತೆ ಕನ್ನಡ. Show all posts
Showing posts with label ಸಣ್ಣ ಕತೆ ಕನ್ನಡ. Show all posts

April 1, 2020

ಮಿನಿ ಕತೆ

ಮೊನ್ನೆ ಆಕೆ ತನ್ನ 99 ನೆ ವಯಸ್ಸಿಗೆ ತೀರಿಕೊಂಡರು.

ಅಣ್ತಮ್ಮ, ಅಕ್ಕಾತಂಗಿಯರ ಮಕ್ಕಳು ಮೊಮ್ಮಕಳನ್ನು ಮರಿಮಕ್ಕಳನ್ನು  ನೋಡಿ ಆಡಿದ ಹೆಮ್ಮೆ ಆಕೆಯದು
ಸಿರಿವಂತರ ಕುಟುಂಬ. ಆದರೆ ಒಡಹುಟ್ಟಿದವರ ರೂಪ, ಅಂದ ಚಂದ ಆಕೆಗಿರಲಿಲ್ಲ. ಗುಣ ಮಾತ್ರ ಶುದ್ಧ ಅಪರಂಜಿ
ಎಲ್ಲರ  ಹಾಗೆ ಆಕೆಗೂ ಮದುವೆಯಾಗಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಆತ ಕಣ್ಮರೆಯಾಗಿದ್ದ. ರಾತ್ರಿ ಆಕೆಯ ಒಡೆದ ಹಿಮ್ಮಡಿ ನೋಡಿ, ಲಾಡ್ಜ್ ಬಳಿಯ ಔಷಧಿ ಅಂಗಡಿಯಿಂದ ಮುಲಾಮು ತಂದು ಆಕೆಯ ಹಿಮ್ಮದಿಗೆ ಹಿತವಾಗಿ ಹಚ್ಚಿದ ನೆನಪು ಮಾತ್ರ ಆಕೆಯ ಜತೆ ಕೊನೆವರೆಗೂ ಉಳಿದದ್ದು .5 ವರ್ಷದ ತನಕ ಆತನನ್ನು ಹುಡುಕಿದರೂ ಅಂವ ಸಿಗಲಿಲ್ಲ.
ಅಕ್ಕ ತಂಗಿ ಅಣ್ಣ ತಮ್ಮ0ದಿರ ಮನೆಗೆ ಅವರ ಮಕ್ಕಳ ಬಾನಣಂತನ, ಅಡುಗೆ ಮುಂತಾದ್ದು ಮಾಡಿ ಈವರೆಗೆ ಜೀವನ ಸವೆಸಿದಳು..
ಅಷ್ಟೇ ಕತೆ 🙏😁😁