January 1, 2026

2026

 i am still in a daze at the pasing away of Srikanth.


ಮೂರು ಗಂಟೆಗೆ ಎಚ್ಚರ ಆದ್ರೂ ಹಾಗೆ ಮುಸುಕಿನಲ್ಲಿ ಮಲಗಿದ್ದೆ, ಸ್ವಲ್ಪ ಬೆಳಕಾಗ್ಲಿ ಅಂತ!  ಅರೆ! ಆರು ಗಂಟೆಯಾದ್ರೂ ಬೆಳಕೇ ಇರಲಿಲ್ಲ. ನನ್ನ ಸೇಲ್ ಫೋನ್ ಹಾಳಾಗಿದೆಯಾ ಅಂತ ಗೋಡೆ ಗಫಿಯಾರ ಚೆಕ್ ಮಾಡಿದೆ. ಸೂರ್ಯನಿಗೂ ಕೂಡ ಮೋಡದ ಮುಸುಕಿನಿಂದ ಹೊರ ಬರಲು  ಮನಸ್ಸಿರಲಿಲ್ಲವೇನೋ..

ಹಿಂದಿನ ವರ್ಷ ನನ್ನ ನಕ್ಷತ್ರದ ಪ್ರಕಾರ ತುಂಬಾ ಒಳ್ಳೆಯದಿತ್ತೆಂದು ನೋಡಿ ನಾನು ಖುಷಿ ಪಟ್ಟಿದ್ದೆ.(ಅದರಲ್ಲೆಲ್ಲ ನಂಬಿಕೆ ಇಲ್ಲದಿದ್ದರೂ ಸಹ) ಮೇ ತಿಂಗಳು ಇವರ ಅನಾರೋಗ್ಯ ಪತ್ತೆಯಾಯಿತು. ಡಿಸೆಂಬರ್ ನಲ್ಲಿ ಹೋಗೆ ಬಿಟ್ಟರು.

ಹುಷಾರಾದ ಮೇಲೆ ಅದು ಮಾಡ್ಬೇಕು, ಇದು ಮಾಡಬೇಕೆಂಬ ಅವರ ಆಶಯಗಳು ಉಳಿದೆ ಬಿಟ್ಟವು. ತೋಟದಲ್ಲಿ ಕುಟುಂಬದವರಿಗೆಲ್ಲ ಮನೆ ಕಟ್ಟುವುದು ಅವರ ದೊಡ್ಡ ಪ್ಲ್ಯಾನ್ ಅಗಿತ್ತು. 

ನನಗೆ ಹೆಚ್ಚಿನ ಆಸೆ ಗಳಿರಲಿಲ್ಲ. ಸಣ್ಣದೊಂದು ಮಣ್ಣಿನ ಮನೆ ಮತ್ತು ಒಂದು ಹಸು ಕೊಡಿಸಬೇಕೆಂದು ಹೇಳಿದ್ದಾಗ ನಕ್ಕು ಹೂಂ ಅಂದಿದ್ದರು.

next ಅವರಿಗೆ vietnam ಗೆ ಹೋಗ ಬೇಕೆಂಬ ದೊಡ್ಡ ಆಸೆ ಇತ್ತು. ಅಕ್ಕ ಪ್ಲಾನ್ ಮಾಡು, ಪ್ಲಾನ್ ಮಾಡು ಅಂತಿದ್ದಾಗಲೇ ಹುಷಾರು ತಪ್ಪಿತು.

😭😭




No comments:

Post a Comment