July 30, 2024

Vangi bhaat recipe



 cook rice and let it cool.

chop onions, garlic, ginger , tomato, and the badanekayi.

heat oil, add jeerige. once it patpats, add karibevu followed by onion garlic ginger and tomatoes..saute for a while, add badanakeyi, salt , pinch of sugar..add 1/4 tsp adukale rasam pudi, chilli powder, turmeric powder , jeera-coriander powder...add some kasuri methi..saute...add bit of water..just a bit but enough to cook the badanekayi..cover and cook for five minutes. add the rice..mix well, check for salt..garnish with coriander leaves...ashte...😁😁👍

a young instagram acquaintance wanted the recipe.  thought of sharing here...

July 22, 2024

ಮಿನಿ ಕತೆ 2

 Written during COVID..i found this in draft 🤔🤔..(sometimes my posts feels like somebody else wrote it)
                         meta AI

ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಆತನಿಗೆ ಇಷ್ವವಿಲ್ಲದಿದ್ದರೂ ಹೆಂಡತಿ ಮಕ್ಕಳೊಂದಿಗೆ, ಹೆಂಡತಿಯ ತವರು ಮನೆಗೆ ಹೋಗಿದ್ದ. ಮೂರನೇ ದಿನ ಲಾಕ್ ಡೌನ್ ಬಗ್ಗೆ ತಿಳಿಯಿತು. ಬೆಂಗಳೂರಿಗೆ ಮರಳುವ ಎಲ್ಲ ದಾರಿ ಬಂದ್. ಎರಡು ಮೂರು ದಿನ ಎಲ್ಲ ಚೆನ್ನಾಗಿತ್ತು. ಆಮೇಲೆ ಅವರು ಅಳಿಯನನ್ನು ಅಸಡ್ಡೆಯಿಂದ ನೋಡಲು ಶುರು ಮಾಡಿದರು. ಮೊದಲೇ ಅವರಿಗೆ ಈ ಅಳಿಯನನ್ನು ಕಂಡರೆ ಅಷ್ಟಕ್ಕಷ್ಟೆ. ಅವನಿಗೆ ಒಂದು ಚಿಕ್ಕ mnc ಯಲ್ಲಿ ನೌಕರಿ. ಉಳಿದ ಇಬ್ಬರು ಅಳಿಯಂದಿರಿಗೆ ಒಳ್ಳೆಯ ನೌಕರಿ, ದೊಡ್ಡ ಹುದ್ದೆ, ಒಳ್ಳೆಯ ತಾಟು ಭಾಟು...ಅವರಿಗೆ ಸ್ಪೆಷಲ್ treatment
ಈಗ ಅವನು ಬೆಳಿಗೆ ಒಂದು ಮೈಲಿ ದೂರವಿರುವ ಅಂಗಡಿಯಿಂದ ಬೆಳಿಗ್ಗೆ ಹಾಲು, ತರಕಾರಿ ಜೀನಸು ತರಬೇಕಿತ್ತು. ಅದನ್ನು ಅಡಿಗೆ ಮನೆಯ ಬಾಗಿಲಲ್ಲಿ ಇಟ್ಟು.. ಅಡಿಗೆ ಮನೆಗೆ ಹೊರಗಿನಿಂದ ಇನ್ನೊಂದು ಬಾಗಿಲು ಇತ್ತು. ಆ ಮೇಲೆ ಅಂಗಳದಲ್ಲಿ ನ ಬಾವಿಯಿಂದ ತಣ್ಣೀರು ಸ್ನಾನ ಮಾಡಿ ಮನೆ ಹೊಕ್ಕ ಬೇಕಿತ್ತು. ಎಲ್ಲದಕ್ಕೂ ಅತ್ತೆ ಮಾವ ನವರ ಸಿಡಿ ಮಿಡಿ...ಹಾಗೆ ಮಾಡಬೇಡ ಹೀಗೆ ಮಾಡಬೇಡ
ಸಮಯ ಹೋಗೋದೇ ಕಷ್ಟ ಆಗ್ತಿತ್ತು. ದಿನ ಪತ್ರಿಕೆ ಇರಲಿಲ್ಲ, ಓದಲು ಯಾವುದೇ ಪುಸ್ತಕವಿಲ್ಲ...ಮೊಬೈಲ್ ಎಷ್ಟು ಅಂತ ನೋಡೋದು
ಯಾವತ್ತೂ ದೇವರಿಗೆ ನಮಸ್ಕರಿಸದವ..ಈಗೀಗ ದೇವರಲ್ಲಿ..ಇದನ್ನು ಬೇಗ ಮುಗಿಸಪ್ಪ ಈಶ್ವರ...ಜೀವ ಇದ್ರೆ ಇನ್ನೆಂದೂ ಈ ಕಡೆ ಮುಖ ಮಾಡಿ ಮಲಗಲ್ಲ...ಅಂತ ಬೇಡಿ ಕೊಳ್ಳಲಾರಂಭಿಸಿದ. ಹಂಗಿನರಮನೆಗಿಂತ ತನ್ನ ಗುಡಿಸಲು ವಾಸಿ ಅಂತ ದಿನಕ್ಕೆ ನೂರು ಬಾರಿ ಅಂದುಕೊಂಡ

July 19, 2024

ಒಂದು ಪಯಣದ ಕತೆ

 ಅಮ್ಮ 15 ದಿನದ ವೈಶ್ನೋದೇವಿ ಟೂರ್ ಮೇಲೆ ಹೋಗುವ ಮುಂಚೆ ಅವರನ್ನು ಬೀಳ್ಕೊಡಲು ಬೆಳಗಾವಿಗೆ ಹೊರಟಿದ್ದೆ. ರೈಲಿನಲ್ಲಿ ಟಿಕೆಟ್ ಕಾದಿರಿಸುವಾಗ side lower berth ಗೆ ಹಾಕಿದ್ದೆ. ಆದರೆ lower berth allot ಆಯ್ತು. ಸಧ್ಯ ಮೇಲೆ ಹತ್ತಲಿಕ್ಕೆ ಇಲ್ಲವಲ್ಲ ಅಂತ ಸಮಾಧಾನ ಆಯ್ತು. ಮೇಲೆ ಹತ್ತಲಿಕ್ಕೆ ಆಗುವುದಿಲ್ಲ ಅಂತ ಅಲ್ಲ. ನನಗೆ ನಿದ್ದೆ ಕಡಿಮೆ..ಹಾಗಾಗಿ ಏಳೋದು, ಕುಳಿತುಕೊಳ್ಳುವುದು ಓಡಾಡೋದು ಮಾಡ್ತಾ ಇರ್ತೇನೆ. ಸೈಡ್ ಲೋವರ್ ಸೀಟ್ ಆದ್ರೆ  ಆರಾಮಾಗಿ ಕೂತ್ಕೊಬಹುದು..ತಲೆಗೆ ಇನ್ನೊಂದು berth ನ ಹಲಗೆ ತಾಗುವುದಿಲ್ಲ...ತಿನ್ನುತ್ತಾ, ಮೊಬೈಲ್ ನಲ್ಲಿ ಏನಾದ್ರು ಓದ್ತಾ ರಾತ್ರಿ ಕಳೆಯುತ್ತೇನೆ. ಬೆನ್ನು ನೋವು ಬಂದ್ರೆ ಹಾಗೆ ಅಡ್ಡಾಗುತ್ತೇನೆ.

ಆ ಧಡ್ಡೂತಿ ಹೆಂಗಸು ಸ್ವಲ್ಪ ಲೇಟಾಗಿ ಬೋಗಿ ಹತ್ತಿದ್ರು. ಓಡಿ ಬಂದಿದ್ದರಿಂದ ಏದುಸಿರು ಬಿಡ್ತಾ ಇದ್ರು. 15-20 ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲು. ಸುಮಾರಷ್ಟು luggage ಇತ್ತು. ಅದನ್ನು ಕೆಳಗಡೆ ತುರುಕಿಸಲು ನಾವೆಲ್ಲ ಸಹಾಯ ಮಾಡಿದೇವು. ಅವರ ಜತೆ ಮಗಳಿದ್ದಳು.  ಅವರಿಗೆ ಸಿಕ್ಕಿದ್ದು ಮಧ್ಯದ berth. ಯಾವುದೇ ಕಾರಣಕ್ಕೂ ಅವರಿಗೆ ಹತ್ತಲು ಇಳಿಯಲು ಕಷ್ಟವೇ. ನಮ್ಮ ಬೋಗಿಯಲ್ಲಿ ಇಬ್ಬರು ಎಳೆ ಪ್ರಾಯದ ಹುಡುಗರು ಬಿಟ್ಟು ಎಲ್ಲರೂ 60+ . ನನಗೆ 55. ಎಳೆಯರಿಗೆ ತುಂಬಾ ಮೇಲಿನ berth ಸಿಕ್ಕಿತ್ತು. ಆಕೆಯ ಜತೆ exchange ಮಾಡಲು ಯಾರಿಗೂ ಆಗುತ್ತಿರಲಿಲ್ಲ. TC ಬರಲಿ ಅವರಿಗೆ ಕೇಳಿ...ಕೆಳಗಿನ berth ಸಿಗ ಬಹುದು. ಇಲ್ಲದಿದ್ದರೆ ನನ್ನ ಜಾಗದಲ್ಲಿ ನೀವು ಮಲಗಿ ಕೊಳ್ಳಿ ಅಂದೆ. TT ಗೆ ಕೆಳಿದ್ರೆ 'ಇಲ್ಲ ಮ್ಯಾಡಮ್' ನೀವೆ  ಯಾರಿಗಾದ್ರೂ request ಮಾಡಿ exchange ಮಾಡಿಕೊಳ್ಳಿ ಅಂದು ಬಿಟ್ರು. ನಾನು- ಪರವಾಗಿಲ್ಲ ನಿಮ್ಮ ಜಾಗದಲ್ಲಿ ನಾನು ಕೂತುಕೊಳ್ಳುತ್ತೇನೆ ಎಂದೇ. ನನಗೆ ಮುಜುಗರವಾಗುವಷ್ಟು ಥ್ಯಾಂಕ್ಸ್ ಅಂದ್ರು. ಅವರಿಗೆ ವಯಸ್ದು ಸಾಧಾರಣ 35-40 ಇದ್ದಿರಬಹುದು.
'ನನ್ನ ದೇಹ ನೋಡಿ ಹೇಗಿದೆ ಮ್ಯಾಡಮ್... husband ಟಿಕೆಟ್ ಬುಕ್ ಮಾಡಿದ್ದು, ಸ್ವಲ್ಪ ನೋಡಿ ಬುಕ್ ಮಾಡೋದಲ್ವಾ...ಅದಕ್ಕೆ ನಾನು ಎಲ್ಲ husband ಗಳ ಹಣೆ ಬರಹ ಒಂದೇ' ಅಂದೆ 😁😁.  ಅಮ್ಮ ಮಗಳು ಧಾರವಾಡ ಗೆ ಹೊರಟಿದ್ರು . ಮಗಳು 10 ಕ್ಲಾಸ್ ಗೆ ಹೋಗುವ ಮುಂಚೆ ಎರಡು ತಿಂಗಳ 10th ನೆ ಕ್ಲಾಸ್ ಗೆ crash ಕೋರ್ಸ್ ಟ್ಯೂಷನ್ ಅಂತೆ. ಮಗಳ ಜತೆ ಇರಲಿಕ್ಕೆ ಇವರೂ ಹೊರಟಿದ್ರು. ಅಡಿಗೆ ಮನೆ ಸಾಮಾನು ಇವೆ ನನ್ನ luggage ನಲ್ಲಿ ಅಂದ್ರು. ಅಲ್ಲಿ ಒಂದು ಮನೆ ಬಾಡಿಗೆಗೆ ಪಡೆದುಕೊಂಡಿದ್ದರಂತೆ.
ಮಲಗುವ ಸಮಯ ಆದಾಗ ' ಮೇಡಂ ನಿಮಗೆ ಮೇಲೆ ಹತ್ತಲು ಸಹಾಯ ಮಾಡ್ತೇನೆ, ಅಂದ್ರು. ನಾನು ಗಟ್ಟಿಯಾಗಿ ನಕ್ಕೆ. ಅವರು toilet ಗೆ ಹೋಗಿ ಬರುವಷ್ಟರಲ್ಲಿ ನಾನು ಮಧ್ಯದ  berth ಏರಿ ಮಲಗಿಯಾಗಿತ್ತು. 'ಸಾರಿ ಮೇಡಂ, ನಿಮಗಿಂತ ಚಿಕ್ಕ ವಯಸ್ಸಾದ್ರೂ ನನ್ನ ಸ್ಥಿತಿ ಹೀಗಾಗಿದೆ' ಅಂದ್ರು.. ನಾನು - ಇರಲಿಯಮ್ಮ ಬೇಜಾರು ಮಾಡಕೋಬೇಡಿ...ನನಗೇನೂ ತೊಂದರೆಯಿಲ್ಲ ಅಂದೆ....ಕೇಳಿಸಕೊಳ್ಳುತ್ತಿದ್ದ ಮಗಳು 'ನಿನ್ನ ಹಣೆ ಬರಹ ಎನ್ ಮಾಡಕ್ಕಾಗುತ್ತೆ' ಅಂತ ಅಮ್ಮನಿಗೆ  ಹೇಳಿದಾಗ, ಮಗಳ ಕಪಾಳಕ್ಕೆ ಎರಡು ಬಿಗಿ ಬೇಕು ಅನ್ನಿಸ್ತು....ಈಗಿನ ಹೆಚ್ಚಿನ ಮಕ್ಕಳಿಗೆ ತಂದೆ ತಾಯಿ ಬಗ್ಗೆ respect ಎ ಇಲ್ಲ....
ಪಕ್ಕದ ಸೀಟ್ ನ ಕುಟುಂಬ ಧಾರವಾಡ್ ದವರು...ಅವರ ಬಳಿ ಧಾರವಾಡ ಬಗ್ಗೆ, ಅಲ್ಲಿನ ತಾಪಮಾನ, ತರಕಾರಿ ಸಿಗುವ ಬಗೆ, ಇವರು ಇರುವ area ಕಡೆ ಮಾತು ಹೊರಳಿತು...ಅವರು ಬೆಂಗಳೂರಲ್ಲಿ ಹುಟ್ಟಿ ಬೆಳೆದವರಂತೆ...ಹೆಚ್ಚು travel ಮಾಡಿಲ್ಲ ಅಂದ್ರು. ಅವರ ಮಾತು ಕೇಳ್ತಾ ನಾನು ಯಾವಾಗಲೋ ನಿದ್ದೆಗೆ ಜಾರಿದ್ದೆ. ಬೆಳಿಗ್ಗೆ 5 ಗಂಟೆಗೆ ಎಚ್ಚರವಾದಾಗ ಹಲವಾರು ಜನ ಇಳಿದು ಹೋಗಿದ್ದರು. ಕಂಪರ್ಟ್ಮೆಂಟ್ ಖಾಲಿ ಇತ್ತು. ಕೆಳಗಿನ ಸೀಟ್ ಕೂಡ ಖಾಲಿಯಾಗಿದ್ದರಿಂದ ನಾನು ತಮ್ಮ ನಿಗೆ ಮೆಸೇಜ್ ಮಾಡಿ (ಅವನು ನನಗೆ ಪಿಕ್ ಮಾಡಲು ಬರುವವನಿದ್ದ) ಕೆಳಗಡೆ ಬಂದು ಮಲಗಿದೆ. ಪುನಃ ನಿದ್ದೆ..ತಮ್ಮ ಫೋನ್ ಮಾಡುವ ತನಕ...ನನ್ನು ಟಿಕೆಟ್ ಬುಕ್ ಆದ ಕೂಡಲೇ ಅದರ ಲಿಂಕ್ ಅನ್ನು ಅವನಿಗೆ ಕಳುಹಿಸಿ ಬಿಡ್ತೇನೆ. ಅವನು ಟ್ರಾಕ್ ಮಾಡ್ತಾ..ಸರಿಯಾದ ಸಮಯಕ್ಕೆ ನನ್ನನ್ನು.ಪಿಕ್ ಮಾಡ್ತಾನೆ..ಅಷ್ಟೇ ಅಲ್ಲ ಟ್ರೈನ್ ಅವನ ಮನೆ ದಾಟಿ ನೆ ಬರೋದು...
ಬೆಳಗಾವಿ ಹತ್ತಿರ ಬರುತ್ತಿದ್ದ ಹಾಗೆ ಒಬ್ಬರದೂ ಮೊಬೈಲ್ ಅಲಾರಂ ಹೊಡೆದುಕೊಳ್ಳಲು ಶುರು ಆಯ್ತು. ಅಲರಾಂ ಹೊಡೆದುಕೊಳ್ತಾ ಇರುತ್ತೆ, ಅದನ್ನು ಬಂದ್ ಮಾಡಬೇಕೆಂಬ ಜ್ನ್ಯಾನ ಇರುವುದಿಲ್ಲ.   ಮೇಲಿದ್ದ ಹುಡುಗರು ಸಿಟ್ಟಿಗೆಳಲಾರಂಭಿಸಿದರು.. I will go and break their cell phone  ಅಂತ ಒಬ್ಬ ಇಳಿದೆ ಬಿಟ್ಟ.  it us one lame ass aunty..i woke her up and told her to shut her bloody mobile..ಅಂತ ಅವನ ಸ್ನೇಹಿತನ ಬಳಿ ಹೇಳಿಕೊಂಡ..ಏಳಲಿಕ್ಕೆ ಇಲ್ಲ ಅಂದ್ರೆ ಅಲರಾಂ ಯಾಕೆ ಇಟ್ಕೋಬೇಕು..ಬೇರೆಯವರ ನಿದ್ದೆ ಹಾಳು ಮಾಡಲಿಕ್ಕೆ bloody ಅಂತ ಗೊಣಗ್ತಾ ಇದ್ದ... ಇನ್ನೊಬ್ಬ  ಮೆಲ್ಲಗೆ ಅವನ ತಲೆ ದಿಂಬಿನ ಕೆಳಗಡೆ ಇಟ್ಟ ಚಪ್ಪಲಿ ತೆಗೆದು ಕೆಳಗೆ ಒಂದೊಂದೇ ಎಸೆದ...ಅವನ ಒಟ್ಟಿಗೆ ಇದ್ದವನು' ಛೀ, ಚಪ್ಪಲಿ ಅಲ್ಲಿಡ್ತಾರ ಯಾರಾದ್ರೂ ಅಂದಿದ್ದಕೆ '3500/ ರೂ ಚಪ್ಪಲಿ ಬ್ರೋ.. ಅಂದಾಗ ಚಪ್ಪಲಿ ನೋಡಿದ್ರೆ ಚಿತ್ರದಲ್ಲಿದ್ದ ಹಾಗೆ ಇತ್ತು....ಇದಕ್ಕೆ 3500/-ರೂ  ಆ..ಅಂದುಕೊಂಡೆ...ಒಳ್ಳೆ ಹುಡುಗರ ಸಹವಾಸ ಅಂದು ಕೊಂಡೆ...
                              AI ಚಿತ್ರ

.ಅವರು ಗಾಡಿಯಲ್ಲಿ ಬೆಳಗಾವಿಗೆ ಬರೋದಿತ್ತಂತೆ...ಆದರೆ ಟ್ರೈನ್ ನಲ್ಲಿ ಬರಬೇಕಾಯ್ತು.. ಅಂತ ಫೋನ್ ನಲ್ಲಿ ಅವರು ಮಾತನಾಡುವಾಗ ತಿಳಿಯಿತು..ಗೋವಾ ಗೆ ಬೆಳಗಾವಿಯಿಂದ  flight ಅಲ್ಲಿ.  ಗುಂಡು ಪಾರ್ಟಿ ಬಗ್ಗೆ ತುಂಬಾ excite ಆಗಿದ್ದರು.  ಸೆಕೆ ಅಂದ್ರ ಸೆಕೆ...AC ಇದ್ರೂ ಕೂಡ. ಹುಡುಗರು ರಾತ್ರಿ ಬೆಳಗಾವಿ ತಂಪು ಆಗಿರಲು ಬಹುದು ಅಂತ ಅಂದಾಜಿಸುತ್ತಿದ್ದರು.. ನಾನು ಮುಗುಳು ನಗ್ತಾ ಇದ್ರೆ ಅವರೂ ನಾಚಿಕೊಂಡು ನನ್ನ ಜತೆ ನಗಲು ಶುರು ಹಚ್ಚಿಕೊಂಡ್ರು..
ಹೀಗೊಂದು ನನ್ನ ಸಂಚಾರ ಕತೆ....

July 15, 2024

ಕೊಂಕಣಿ ಗಳೂ ತೆಂಗಿನಕಾಯಿಯೂ


ಮೊದಲೊಮ್ಮೆ ಹೇಳಿದ್ದೆ ಕೊಂಕಣಿಗಳಿಗೆ ತೆಂಗಿನಕಾಯಿ ಇಲ್ಲದೆ ಜೀವವಿಲ್ಲ. 😁
ನಿಹಾ ಭೋಪಾಲ್ ದಲ್ಲಿದ್ದಾಗ ಆಕೆ ತೆಂಗಿನಕಾಯಿ ಇಲ್ಲದೆ ಹೇಗೆ ಜೀವನ ಮಾಡುತ್ತಾಳೆ ಎಂಬ ಬೇಜಾರಿತ್ತು. ತೆಂಗಿನಕಾಯಿ ಬಿಡಿ ದಕ್ಷಿಣ ಭಾರತದ ತಿಂಡಿ ಗಳಾದ ಇಡ್ಲಿ ವಡೆ  ದೋಸೆಎಲ್ಲ ಇಲ್ಲ ಅಂತಲೂ ಬೇಜಾರಾಗಿತ್ತು. ಆದರೆ ಅಲ್ಲಿ ಸುಮಾರು ತಮಿಳುಗಳ ಇಡ್ಲಿ ವಡೆ ದೋಸೆ ಯ ಗಾಡಿಗಳಿದ್ವು...ಆದರೆ ಚಟ್ನಿ ಮಾತ್ರ ನಮ್ಮ ತರಹ ಇರಲಿಲ್ಲ...ಮಾತ್ರವಲ್ಲ ಇನ್ನೊಂದು ಅಲ್ಲಿ ಕಂಡಿದ್ದು ಕರಿಬೇವು ಅಲ್ಲಿ ಮಾರಲ್ಲ...ಯರದಾದರೂ ಮನೆಯಲ್ಲಿ ಗಿಡ ಇದ್ದರೆ ಅಲ್ಲಿಂದ ಕೇಳಿ ಪಡೆಯುವುದು ಅಥವಾ ಕದಿಯೋದು ಅಂತ ಹೇಳಿದಾಗ ಅಯ್ಯೋ ಹಾಗೆ ಮಾಡ ಬೇಡವೇ...ಕೇಳಿ ತೆಗೋ ಅಂದಿದ್ದಕ್ಕೆ ಗಟ್ಟಿಯಾಗಿ ನಕ್ಕಿದ್ದಳು.
ನಂಬಿತೀರ, ಬಿಡ್ತೀರಾ.... ನಾನು ಇಲ್ಲಿಂದ ಭೋಪಾಲ್ ಗೆ ಮೊದಲ ಸಲ ಹೋಗುವಾಗ ಮೂರು ತೆಂಗಿನಕಾಯಿ, ಅದನ್ನು ಒಡೆಯುವ ಕತ್ತಿ ಮತ್ತು ಹೆರೆಯಲು ಮಣೆ ತೆಗೆದು ಕೊಂಡು ಹೋಗಿದ್ದೆ. ಅವಳು ಅವಳ ಇನ್ನೂ ಇಬ್ಬರು ಸ್ನೇಹಿತೆಯರ ಜೊತೆ ದೊಡ್ಡ ಮನೆ ಬಾಡಿಗೆಗೆ ಪಡೆದುಕೊಂಡಿದ್ದಳು. ಸ್ನೇಹಿತೆಯರ ಎದುರು ಅವಳಿಗೆ ನನ್ನ ತೆಂಗಿನಕಾಯಿಯ ಹುಚ್ಚಿನಿಂದ ನಾಚಿಕೆಯಾಗಿರಲೂ ಬಹುದು 😁😁

'ಅಮ್ಮ ಮನೆಯ ದೇವಸ್ಥಾನದ ಬಳಿಯ ಅಂಗಡಿಯ ಅಂಕಲ್ ಜತೆ ಪರಿಚಯ ಮಾಡಿಕೊಂಡಿದ್ದೇನೆ. ತೆಂಗಿನಕಾಯಿ ಬೇಕಿದ್ದಲ್ಲಿ ಅವರು ಕಟ್ ಕೂಡ ಮಾಡಿ ಕೊಡುತ್ತಾರೆ, ಆದರೆ ಅದನ್ನು ಹೆರೆಯುವುದು ಹೇಗೆ ಅಂತ ಸುಮ್ಮನಿದ್ದೆ ಅಂದಳು.
ನಾನು ಅಲ್ಲಿದ್ದಾಗ ಅವಳಿಗೂ ಅವರ ನಾಲ್ಕೈದು ಜನ ಮಿತ್ರರಿಗೂ ಸುಮಾರೆಲ್ಲ ನಮ್ಮ ಕಡೆಯ ಅಡಿಗೆ ಮಾಡಿ ಬಡಿಸಿದ್ದೇನೆ. ಇಲ್ಲಿಂದ ಬಾಳೆ ಎಲೆ ಕೂಡ ಎತ್ತಿಕೊಂಡು ಹೋಗಿದ್ದೆ. ನಾನು ಮಾತ್ರ ಅಲ್ಲಿಯ ಪೋಹ ಜಿಲೇಬಿ ಗಳನ್ನು ಎಂಜಾಯ್ ಮಾಡಿದೆ.
ಈಗ ನಿಹಾ ಮೈಸೂರ್ ನಲ್ಲಿರೋದು. ಅಲ್ಲಿ ಎಲ್ಲ ಸಿಗುತ್ತೆ. ಬೆಕಿದ್ದಲ್ಲಿ ಟಿಫಿನ್ service ಮಾಡಿಕೋ ಅಂತಲೂ, ನನಗೆ instagram ನಲ್ಲಿ ಸಿಗುವ ಹೋಟೆಲ್ ಗಳ ವಿಳಾಸವನ್ನು  forward ಮಾಡ್ತಿತುರುತ್ತೇನೆ.  ಅವಳು ಅದನ್ನು ಯಾವಾಗಲೋ ಎರಡು ತಿಂಗಳಿಗೊಮ್ಮೆ ನೋಡುವುದು. ಅವಳು ವಾಟ್ಸಪ್ಪ್, instagram ನಲ್ಲೆಲ್ಲ ಹೆಚ್ಚು active ಇಲ್ಲ ನಮ್ಮ ಹಾಗೆ. ಅದು ನನಗೆ ಖುಷಿಯ ವಿಚಾರ...
ಇರಲಿ...

ಅವಳು ಬೆಳಿಗ್ಗೆ 8.30 ಗೆ ಮನೆ ಬಿಟ್ಟರೆ ಬರುವುದು ಸಂಜೆ 7.30 ಗೆ.....ನಾನು ಆವಾಗವಾಗ ಅಲ್ಲಿಗೆ ಹೋಗುತ್ತಿರುತ್ತೇನೆ. ಇಲ್ಲಿಂದ ಸುಮಾರೆಲ್ಲ  ಅಡಿಗೆ ಮಾಡಿ ತೆಗೊಂಡು ಹೋಗುತ್ತೇನೆ, ಅವಳ ಇಷ್ಟದ್ದು...ಇಲ್ಲದಿದ್ದರೆ ಅವಳಿಗೆ ಸುಲಭವಾಗಲಿ ಅಂತ ಹೀಗೆ ತೆಂಗಿನಕಾಯಿ ಹೆರೆದು ಕಳಿಸುತ್ತೇನೆ. 
  only white part of grated coconut 😁😁

ಅಲ್ಲಿಂದ ಬರುವಾಗ ಫ್ರಿಡ್ಜ್ ನಲ್ಲಿ ಚಪಾತಿ ಹಿಟ್ಟು ಕಲೆಸಿ ಇಟ್ಟು ಬರುತ್ತೇನೆ..ನನ್ನ ಪ್ರಕಾರ  intelligent / creative ಜನರು ಅಡಿಗೆ ಮಾಡಿಕೊಂಡು ಟೈಮ್  ವೆಸ್ಟ್ ಮಾಡಬಾರದು. ಅದು ಕಲೆ ಅದೂ ಇದೂ ಅನ್ನುವವರು ಸುಮ್ಮನೆ ಹೇಳ್ತಾರೆ. ಸರಿಯಾಗಿ ಉಪ್ಪು, ಸಕ್ಕರೆ/ಬೆಲ್ಲ, ಮೆಣಸು ಹಾಕಿದರೆ ಅಡಿಗೆ ತಯಾರು...ಅವಳು ಮಾತ್ರ ನಕ್ಕು 'ಅಮ್ಮ i love cooking' ಅಂತ ವಾರ್ಯಅಂತದಲ್ಲಿ ಮಿತ್ರರಿಗೆ / colleagues ಗೆ ಊಟಕ್ಕೆ ಆಮಂತ್ರಣ ನೀಡುತ್ತಾಳೆ
ಸುಮ್ಮನೆ ಒಂದಿಷ್ಟು....

July 8, 2024

Meet Mr. Joaquim Fernandez

 


 ಮೊನ್ನೆ ತೀರ್ಥಹಳ್ಳಿಗೆ ಹೋಗುವ ಮುನ್ನ ರಿಪ್ಪನಪೇಟೆ ದಾರಿಯಾಗಿ ಹೋದ್ವಿ. ಅಲ್ಲಿ ಶ್ರೀಕಾಂತ್ ಕಸಿನ್ ಅನಂತಮೂರ್ತಿ ಜವಳಿ ಯವರ ಅಂಕೂರ್ ಫಾರ್ಮ್ ಗೆ ಭೇಟಿ ನೀಡಲಿಕ್ಕಿತ್ತು. ಜವಳಿಯವರಿ0ದ 'ಥನಲ್' ಮಾಡುವ  ಬಗೆ ಕಲಿಲಿಕ್ಕಿತ್ತು. 

ಅಲ್ಲಿ ನಮಗೆ ಸಿಕ್ಕವರು ಜೋಕಿಮ್ ಅವರು. ಅವರು ಬುಲ್ಲೆಟ್ ಬೈಕ್ ನಲ್ಲಿ ದೇಶ ಸುತ್ತುತ್ತಾರೆ. 15 ದಿನದ  ಸ್ಪೈತಿ ವ್ಯಾಲಿಯ ಟೂರ್ ಮುಗಿಸಿ  ಭಟ್ಕಳ್ ದಾರಿ ಹೋಗುವಾಗ, ಅಂಕೂರ್ ಫಾರ್ಮ್ ದಾಟಿದ ಮೇಲೆ 'ಅರೆ ಇವರ ವಿಡಿಯೋ ಗಳನ್ನೆಲ್ಲ ನೋಡುತ್ತೇನಲ್ಲ, ಏನಾದರಾಗಲಿ ಭೇಟಿ ಮಾಡಿಕೊಂಡೆ ಹೋಗುವುದು ಅಂತ ಗಾಡಿ ತಿರುಗಿಸಿದರಂತೆ. ಅನಂತ ಮಾಮ ಮಧ್ಯಾನ್ಹದ ನಿದ್ದೆ ಮುಗಿಸುವಶರಲ್ಲಿ ಫಾರ್ಮ್ ನ ಉಸ್ತುವಾರಿಕೆ ನೋಡುವ ಬಾಯಮ್ಮನ ಜತೆ ತೋಟ ನೋಡಿಕೊಂಡು ಬಂದಿದ್ದರಷ್ಟೇ ನಾವು ತಲುಪುವಾಗ. 

ಮಾಮಿ ಟಿ ಕಾಫಿ ಮಾಡುವಷ್ಟರಲ್ಲಿ ಅವರ ಟ್ರಾವೆಲ್ ನ ರೋಚಕ ಕತೆ ಹೇಳಿಕೊಂಡರು. ಹಿಮಪಾತಕ್ಕೆ ಸಿಲುಕಿದ್ದು, ಯಾರ ಸಹಾಯವೂ ಸಿಗದೆ, ಗಾಡಿಯಲ್ಲಿನ ಎಲ್ಲ ಸಾಮಾನು ತೆಗೆದು, ಬಿದ್ದ ಗಾಡಿಯನ್ನು ಹರಸಾಹಸದಿನ ಎತ್ತಿ ಸುರಕ್ಷಿತ ಜಾಗಕ್ಕೆ ಒಯ್ದು, ಪುನಃ ಎಲ್ಲ ಸಾಮಾನು ಗಳನ್ನು ...ಬಟ್ಟೆ ಬರೆ, ಬಕೀಟು, ಮಗ್ಗು, ಗ್ಯಾಸ್ ಸಿಲಿಂಡರ್, ತಿಂಡಿ ಪೊಟ್ಟಣಗಳು, ಟೆಂಟ್...ಬೈಕ್ ಮೇಲೆ ಹೇರಿಸಿ ಕೊಂಡಿದ್ಫು...ರಾತ್ರಿ ಅವರ ಟೆಂಟ್ ಬಳಿಯೇ mountain lion ಬಂದಿದ್ದು, ರಾತ್ರಿ ಇಡೀ ಎಚ್ಛೆತ್ತು ಗ್ಯಾಸ್ ಸಿಲಿಂಡರ್ ಹೊ‌ತ್ತಿಸಿಟ್ಟು  ರಾತ್ರಿ ಕಳೆದಿದ್ದು, ಗ್ಯಾಸ್ ಸಿಲಿಂಡರ್ ಖಾಲಿ ಯಾಗಿದ್ದ ಕತೆಗಳನ್ನು ಶೇರ್ ಮಾಡಿ, ಕತ್ತಲಾಗುವ ಮುನ್ನ ಊರು ಸೇರಬೇಕೆಂದು ಹೊರಟರು. ಕೈ ಕಾಲಿಗೆ ಸುಮರೆಲ್ಲ ಊತ, ಗಾಯ ಗಳಾಗಿದ್ದವು

ಶ್ರೀಕಾಂತ್ ಥನಲ್ ಬಗ್ಗೆ ಮಾಹಿತಿ/ಪ್ರಾತ್ಯಕ್ಷಿಕತೆ ಪಡೆದುಕೊಳ್ಳುವಷ್ಟರಲ್ಲಿ ನಾನು ತೋಟದ ಒಂದು ರೌಂಡ್ ಹೋಗಿ ಬಂದೆ...ಕೆಳಗಿವೆ ಕೆಲ ಚಿತ್ರಗಳು

                              ಥನಲ್
                       Nursery plants
                              ರಿಪ್ಪನಪೇಟೆ

                               pansi
                   variegated mosambi
                                 cherries
                   water apples -white
                               cherry
                       water apples -red
                 mango - jackfruits graft
                       colourful coleus

joaquim.is the one in the middle in black coat
                   ಕಣ್ಮನ ತಣಿಸುವ ಹಸಿರು


July 1, 2024

ಶೃಂಗೇರಿ

 ಮದುವೆಯಾಗಿ ಮುಂಬೈನಿಂದ ಕೊಪ್ಪಕ್ಕೆ. ಅಲ್ಲಿ 5 ವರ್ಷ ಇದ್ವಿ. ಮನೆಗೆ ಬಂದ ನೆಂಟರಿಗೆಲ್ಲ ಒಂದು ಟ್ರಿಪ್ ಬಸ್ ನಲ್ಲಿ ಶೃಂಗೇರಿಗೆ ಕರೆದು ಕೊಂಡು ಹೋಗುವುದು ನನ್ನ department. 

ನನಗೋ motion sickness. ಶ್ರ0ಗೇರಿಯ ರಸ್ತೆ ಹಾಗೆ ಹಾವಿನ ತರಹ. ಅಲ್ಲಿ ತಲುಪುವಷ್ಟರಲ್ಲಿ ನನ್ನ intestine ಎಲ್ಲ ಗಂಟು ಬಿದ್ದ ಹಾಗೆ.  ಶಾರದಾಂಬೆಯ ದರುಶನ ಪಡೆದು ಅಲ್ಲೇ ಮಧ್ಯಾನ್ಹ ಊಟ ಮಾಡಿ ಮನೆಗೆ ವಾಪಸ್.

ವಾಂತಿ ಆಗುತ್ತೆ ಅಂತ ಏನೂ ತಿನ್ನದೆ ಹೋಗ್ತಿವಲ್ಲ ಅದೇ ದೊಡ್ಡ ತಪ್ಪು. ಹೊಟ್ಟೆ ತುಂಬ ತಿಂದು ಒಂದು ಹತ್ತು ನಿಮಿಷ ಬ್ರೇಕ್ ತೆಗೊಂಡು ಪಯಣ ಮಾಡಿದರೆ ವಾಂತಿ ಆಗಲ್ಲ ಅಂತ ನಾನು ಕಂಡುಕೊಂಡ ವಿಷಯ. ಹಾಗಾಗಿ ಈಗ motion sickness ಇಲ್ಲ ಅಂತಲೇ ಅನ್ನಬಹುದು.

ಮೊನ್ನೆ ತೀರ್ಥಹಳ್ಳಿಗೆ ಹೋಗುವುದಂತ ಸಡನ್ ಆಗಿ ಪ್ಲ್ಯಾನ್ ಮಾಡಿಕೊಂಡ್ವಿ. ಹೇಗೂ ನಮ್ಮದೇ ಗಾಡಿ. ಶೃಂಗೇರಿಗೆ ಹೋಗುವ ಮನಸ್ಸು ಮಾಡಿದೆ. ನನ್ನ ಮುದ್ದು ಸೊಸೆಗೆ ಕರೆದೆ. ಖುಷಿಯಿಂದ ಒಪ್ಪಿಕೊ0ಡಳು. ಬೆಳಿಗ್ಗೆ ಬೇಗ ಹೊರಟೆವು. ಟಿ ಮಾತ್ರ ಕುಡಿದಿದ್ದು. ಹಸಿವೆಯಾಗಿತ್ತು. ಆದರೆ ತಿಂಡಿಗಳೆಲ್ಲ 7.30 ನಂತರ ಅಂದ್ರು ನಮ್ಮ ಪುಂಡಲೀಕ ಪೈ ಹೋಮ್ ಸ್ಟೇ ನವರು. 

ಶೃಂಗೇರಿಗೆ ತಲುಪುವಷ್ಟರಲ್ಲಿ ವಾಂತಿ ಆಗದಿದ್ದರೂ ಸುಸ್ತಾಯಿತು...ದಾರಿ ಉದ್ದಕ್ಕೂ ಮಳೆ. ಹಾಗಾಗಿ ಕಿಟಕಿ ಬಾಗಿಲು ತೆಗಿಲಿಲ್ಲ. ಕಿಟಕಿ ತೆರೆದರೆ ಗಾಳಿಗೆ ಸ್ವಲ್ಪ ಆರಾಮ್ ಎನಿಸುತ್ತದೆ. 

ಚೆಂದದ ಹಸಿರಿನ ದಾರಿ. ತಲುಪಿದ ಕೂಡಲೇ ಮೊದಲು ಬೆಳಗಿನ ತಿಂಡಿ. ಮಯೂರ ಟಿಫಿನ್ ನಲ್ಲಿ. ಇಡ್ಲಿ, ಬಿಸ್ಕೂಟ್ ಅಂಬೋಡೆ, ಪೂರಿ ಪಲ್ಯ..bhramin ಸ್ಟೈಲ್. ಬಡಿಸುವವ ಸ್ವಲ್ಪ rude ಆಗಿದ್ದ.

30 ವರ್ಷಗಳ ನಂತರ ಭೇಟಿ ನೀಡಿದ್ದು. ಸುಮಾರೆಲ್ಲ ಬದಲಾವಣೆ ಆಗಿದೆ. ಶಾರದೆಯ ಮೂರ್ತಿ ಚೆನ್ನಾಗಿದೆ. ನಾನು ನೋಡಿದ ದೇವರ ಮೂರ್ತಿಗಳಲ್ಲಿ ಈ ಶಾರದೆ ನನಗೆ ಅಚ್ಚುಮೆಚ್ಚು.

ನದಿಯಲ್ಲಿ ತುಂಬಾ ನೀರಿರಲಿಲ್ಲ. ಮೀನಿಗೆ ಚುರುಮುರಿ ಹಾಕಿ, ಪ್ಲ್ಯಾಸ್ಟಿಕ್ ಕವರ್ ಕೂಡ ನೀರಿಗೆ ಹಾಕುವುದನ್ನು ನೋಡಿ ಸಿಟ್ಟು/ಬೇಜಾರು ಒಟ್ಟಿಗೆ ಆಯಿತು.

ಮರಳಿ ತೀರ್ಥಹಳ್ಳಿಗೆ ಬರುವಾಗ ತುಂಬಾ ಎಂಜಾಯ್ ಮಾಡಿದೆ 😁😁

ಹಾಗೆ ಕೊಪ್ಪದಲ್ಲಿ ಕಳೆದ ಸಮಯ ನೆನಪಿಸಿಕೊಂಡೇ. ಮೊದಲೆರಡು ವರುಷ ಪದವಿ ಪರೀಕ್ಷೆಯ ಓದು, ಸಂಜೆ ಶ್ರೀಕಾಂತ್ colleagues, ಕಾಲೇಜಿನ ಗೆಳೆಯರು..ಎಲ್ಲಾ bachelor ಗಳು , ಅವರಿಗೆ ಮುಂಬೈ spl ಅಡುಗೆಗಳು ...ಇತ್ಯಾದಿ...ಆಮೇಲೆ ಮಾಲವಿಕಾಳ ಆಗಮನ, ಮನೆಯಲ್ಲಿ ಆರಾಮಾಗಿ ಓಡಾಡುವ ಹಾವುಗಳನ್ನು ಓಡಿಸುವುದು...ಹುಷಾರಿಲ್ಲದ ಅಜ್ಜನನ್ನು ನೋಡಿಕೊಂಡಿದ್ದು, ಸೊಸೆಯನಿರ ಜತೆ ವಾಕ್, ಹತ್ತಿರದ ಊರಿನ ಓಡಾಟ, ಕಮಂಡಲು ಗಣಪತಿ, ಇವೆಲ್ಲ ನೆನಸುತ್ತ ತೀರ್ಥಹಳ್ಳಿ ತಲುಪಿದ್ದು ಗೊತ್ತಾಗಲೇ ಇಲ್ಲ. 5 best years of.my life 😁

ಕೆಲ ಚಿತ್ರಗಳು.










                    ನನ್ನ ಮುದ್ದು ಸೊಸೆ