ನಿಹಾ ಭೋಪಾಲ್ ದಲ್ಲಿದ್ದಾಗ ಆಕೆ ತೆಂಗಿನಕಾಯಿ ಇಲ್ಲದೆ ಹೇಗೆ ಜೀವನ ಮಾಡುತ್ತಾಳೆ ಎಂಬ ಬೇಜಾರಿತ್ತು. ತೆಂಗಿನಕಾಯಿ ಬಿಡಿ ದಕ್ಷಿಣ ಭಾರತದ ತಿಂಡಿ ಗಳಾದ ಇಡ್ಲಿ ವಡೆ ದೋಸೆಎಲ್ಲ ಇಲ್ಲ ಅಂತಲೂ ಬೇಜಾರಾಗಿತ್ತು. ಆದರೆ ಅಲ್ಲಿ ಸುಮಾರು ತಮಿಳುಗಳ ಇಡ್ಲಿ ವಡೆ ದೋಸೆ ಯ ಗಾಡಿಗಳಿದ್ವು...ಆದರೆ ಚಟ್ನಿ ಮಾತ್ರ ನಮ್ಮ ತರಹ ಇರಲಿಲ್ಲ...ಮಾತ್ರವಲ್ಲ ಇನ್ನೊಂದು ಅಲ್ಲಿ ಕಂಡಿದ್ದು ಕರಿಬೇವು ಅಲ್ಲಿ ಮಾರಲ್ಲ...ಯರದಾದರೂ ಮನೆಯಲ್ಲಿ ಗಿಡ ಇದ್ದರೆ ಅಲ್ಲಿಂದ ಕೇಳಿ ಪಡೆಯುವುದು ಅಥವಾ ಕದಿಯೋದು ಅಂತ ಹೇಳಿದಾಗ ಅಯ್ಯೋ ಹಾಗೆ ಮಾಡ ಬೇಡವೇ...ಕೇಳಿ ತೆಗೋ ಅಂದಿದ್ದಕ್ಕೆ ಗಟ್ಟಿಯಾಗಿ ನಕ್ಕಿದ್ದಳು.
ನಂಬಿತೀರ, ಬಿಡ್ತೀರಾ.... ನಾನು ಇಲ್ಲಿಂದ ಭೋಪಾಲ್ ಗೆ ಮೊದಲ ಸಲ ಹೋಗುವಾಗ ಮೂರು ತೆಂಗಿನಕಾಯಿ, ಅದನ್ನು ಒಡೆಯುವ ಕತ್ತಿ ಮತ್ತು ಹೆರೆಯಲು ಮಣೆ ತೆಗೆದು ಕೊಂಡು ಹೋಗಿದ್ದೆ. ಅವಳು ಅವಳ ಇನ್ನೂ ಇಬ್ಬರು ಸ್ನೇಹಿತೆಯರ ಜೊತೆ ದೊಡ್ಡ ಮನೆ ಬಾಡಿಗೆಗೆ ಪಡೆದುಕೊಂಡಿದ್ದಳು. ಸ್ನೇಹಿತೆಯರ ಎದುರು ಅವಳಿಗೆ ನನ್ನ ತೆಂಗಿನಕಾಯಿಯ ಹುಚ್ಚಿನಿಂದ ನಾಚಿಕೆಯಾಗಿರಲೂ ಬಹುದು 😁😁
'ಅಮ್ಮ ಮನೆಯ ದೇವಸ್ಥಾನದ ಬಳಿಯ ಅಂಗಡಿಯ ಅಂಕಲ್ ಜತೆ ಪರಿಚಯ ಮಾಡಿಕೊಂಡಿದ್ದೇನೆ. ತೆಂಗಿನಕಾಯಿ ಬೇಕಿದ್ದಲ್ಲಿ ಅವರು ಕಟ್ ಕೂಡ ಮಾಡಿ ಕೊಡುತ್ತಾರೆ, ಆದರೆ ಅದನ್ನು ಹೆರೆಯುವುದು ಹೇಗೆ ಅಂತ ಸುಮ್ಮನಿದ್ದೆ ಅಂದಳು.
ನಾನು ಅಲ್ಲಿದ್ದಾಗ ಅವಳಿಗೂ ಅವರ ನಾಲ್ಕೈದು ಜನ ಮಿತ್ರರಿಗೂ ಸುಮಾರೆಲ್ಲ ನಮ್ಮ ಕಡೆಯ ಅಡಿಗೆ ಮಾಡಿ ಬಡಿಸಿದ್ದೇನೆ. ಇಲ್ಲಿಂದ ಬಾಳೆ ಎಲೆ ಕೂಡ ಎತ್ತಿಕೊಂಡು ಹೋಗಿದ್ದೆ. ನಾನು ಮಾತ್ರ ಅಲ್ಲಿಯ ಪೋಹ ಜಿಲೇಬಿ ಗಳನ್ನು ಎಂಜಾಯ್ ಮಾಡಿದೆ.
ಈಗ ನಿಹಾ ಮೈಸೂರ್ ನಲ್ಲಿರೋದು. ಅಲ್ಲಿ ಎಲ್ಲ ಸಿಗುತ್ತೆ. ಬೆಕಿದ್ದಲ್ಲಿ ಟಿಫಿನ್ service ಮಾಡಿಕೋ ಅಂತಲೂ, ನನಗೆ instagram ನಲ್ಲಿ ಸಿಗುವ ಹೋಟೆಲ್ ಗಳ ವಿಳಾಸವನ್ನು forward ಮಾಡ್ತಿತುರುತ್ತೇನೆ. ಅವಳು ಅದನ್ನು ಯಾವಾಗಲೋ ಎರಡು ತಿಂಗಳಿಗೊಮ್ಮೆ ನೋಡುವುದು. ಅವಳು ವಾಟ್ಸಪ್ಪ್, instagram ನಲ್ಲೆಲ್ಲ ಹೆಚ್ಚು active ಇಲ್ಲ ನಮ್ಮ ಹಾಗೆ. ಅದು ನನಗೆ ಖುಷಿಯ ವಿಚಾರ...
ಇರಲಿ...
ಅವಳು ಬೆಳಿಗ್ಗೆ 8.30 ಗೆ ಮನೆ ಬಿಟ್ಟರೆ ಬರುವುದು ಸಂಜೆ 7.30 ಗೆ.....ನಾನು ಆವಾಗವಾಗ ಅಲ್ಲಿಗೆ ಹೋಗುತ್ತಿರುತ್ತೇನೆ. ಇಲ್ಲಿಂದ ಸುಮಾರೆಲ್ಲ ಅಡಿಗೆ ಮಾಡಿ ತೆಗೊಂಡು ಹೋಗುತ್ತೇನೆ, ಅವಳ ಇಷ್ಟದ್ದು...ಇಲ್ಲದಿದ್ದರೆ ಅವಳಿಗೆ ಸುಲಭವಾಗಲಿ ಅಂತ ಹೀಗೆ ತೆಂಗಿನಕಾಯಿ ಹೆರೆದು ಕಳಿಸುತ್ತೇನೆ.
only white part of grated coconut 😁😁
ಅಲ್ಲಿಂದ ಬರುವಾಗ ಫ್ರಿಡ್ಜ್ ನಲ್ಲಿ ಚಪಾತಿ ಹಿಟ್ಟು ಕಲೆಸಿ ಇಟ್ಟು ಬರುತ್ತೇನೆ..ನನ್ನ ಪ್ರಕಾರ intelligent / creative ಜನರು ಅಡಿಗೆ ಮಾಡಿಕೊಂಡು ಟೈಮ್ ವೆಸ್ಟ್ ಮಾಡಬಾರದು. ಅದು ಕಲೆ ಅದೂ ಇದೂ ಅನ್ನುವವರು ಸುಮ್ಮನೆ ಹೇಳ್ತಾರೆ. ಸರಿಯಾಗಿ ಉಪ್ಪು, ಸಕ್ಕರೆ/ಬೆಲ್ಲ, ಮೆಣಸು ಹಾಕಿದರೆ ಅಡಿಗೆ ತಯಾರು...ಅವಳು ಮಾತ್ರ ನಕ್ಕು 'ಅಮ್ಮ i love cooking' ಅಂತ ವಾರ್ಯಅಂತದಲ್ಲಿ ಮಿತ್ರರಿಗೆ / colleagues ಗೆ ಊಟಕ್ಕೆ ಆಮಂತ್ರಣ ನೀಡುತ್ತಾಳೆ
ಸುಮ್ಮನೆ ಒಂದಿಷ್ಟು....
ಸುಮ್ಮನೆ ಒಂದಿಷ್ಟು....

No comments:
Post a Comment