ಅಮ್ಮ 15 ದಿನದ ವೈಶ್ನೋದೇವಿ ಟೂರ್ ಮೇಲೆ ಹೋಗುವ ಮುಂಚೆ ಅವರನ್ನು ಬೀಳ್ಕೊಡಲು ಬೆಳಗಾವಿಗೆ ಹೊರಟಿದ್ದೆ. ರೈಲಿನಲ್ಲಿ ಟಿಕೆಟ್ ಕಾದಿರಿಸುವಾಗ side lower berth ಗೆ ಹಾಕಿದ್ದೆ. ಆದರೆ lower berth allot ಆಯ್ತು. ಸಧ್ಯ ಮೇಲೆ ಹತ್ತಲಿಕ್ಕೆ ಇಲ್ಲವಲ್ಲ ಅಂತ ಸಮಾಧಾನ ಆಯ್ತು. ಮೇಲೆ ಹತ್ತಲಿಕ್ಕೆ ಆಗುವುದಿಲ್ಲ ಅಂತ ಅಲ್ಲ. ನನಗೆ ನಿದ್ದೆ ಕಡಿಮೆ..ಹಾಗಾಗಿ ಏಳೋದು, ಕುಳಿತುಕೊಳ್ಳುವುದು ಓಡಾಡೋದು ಮಾಡ್ತಾ ಇರ್ತೇನೆ. ಸೈಡ್ ಲೋವರ್ ಸೀಟ್ ಆದ್ರೆ ಆರಾಮಾಗಿ ಕೂತ್ಕೊಬಹುದು..ತಲೆಗೆ ಇನ್ನೊಂದು berth ನ ಹಲಗೆ ತಾಗುವುದಿಲ್ಲ...ತಿನ್ನುತ್ತಾ, ಮೊಬೈಲ್ ನಲ್ಲಿ ಏನಾದ್ರು ಓದ್ತಾ ರಾತ್ರಿ ಕಳೆಯುತ್ತೇನೆ. ಬೆನ್ನು ನೋವು ಬಂದ್ರೆ ಹಾಗೆ ಅಡ್ಡಾಗುತ್ತೇನೆ.
ಆ ಧಡ್ಡೂತಿ ಹೆಂಗಸು ಸ್ವಲ್ಪ ಲೇಟಾಗಿ ಬೋಗಿ ಹತ್ತಿದ್ರು. ಓಡಿ ಬಂದಿದ್ದರಿಂದ ಏದುಸಿರು ಬಿಡ್ತಾ ಇದ್ರು. 15-20 ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲು. ಸುಮಾರಷ್ಟು luggage ಇತ್ತು. ಅದನ್ನು ಕೆಳಗಡೆ ತುರುಕಿಸಲು ನಾವೆಲ್ಲ ಸಹಾಯ ಮಾಡಿದೇವು. ಅವರ ಜತೆ ಮಗಳಿದ್ದಳು. ಅವರಿಗೆ ಸಿಕ್ಕಿದ್ದು ಮಧ್ಯದ berth. ಯಾವುದೇ ಕಾರಣಕ್ಕೂ ಅವರಿಗೆ ಹತ್ತಲು ಇಳಿಯಲು ಕಷ್ಟವೇ. ನಮ್ಮ ಬೋಗಿಯಲ್ಲಿ ಇಬ್ಬರು ಎಳೆ ಪ್ರಾಯದ ಹುಡುಗರು ಬಿಟ್ಟು ಎಲ್ಲರೂ 60+ . ನನಗೆ 55. ಎಳೆಯರಿಗೆ ತುಂಬಾ ಮೇಲಿನ berth ಸಿಕ್ಕಿತ್ತು. ಆಕೆಯ ಜತೆ exchange ಮಾಡಲು ಯಾರಿಗೂ ಆಗುತ್ತಿರಲಿಲ್ಲ. TC ಬರಲಿ ಅವರಿಗೆ ಕೇಳಿ...ಕೆಳಗಿನ berth ಸಿಗ ಬಹುದು. ಇಲ್ಲದಿದ್ದರೆ ನನ್ನ ಜಾಗದಲ್ಲಿ ನೀವು ಮಲಗಿ ಕೊಳ್ಳಿ ಅಂದೆ. TT ಗೆ ಕೆಳಿದ್ರೆ 'ಇಲ್ಲ ಮ್ಯಾಡಮ್' ನೀವೆ ಯಾರಿಗಾದ್ರೂ request ಮಾಡಿ exchange ಮಾಡಿಕೊಳ್ಳಿ ಅಂದು ಬಿಟ್ರು. ನಾನು- ಪರವಾಗಿಲ್ಲ ನಿಮ್ಮ ಜಾಗದಲ್ಲಿ ನಾನು ಕೂತುಕೊಳ್ಳುತ್ತೇನೆ ಎಂದೇ. ನನಗೆ ಮುಜುಗರವಾಗುವಷ್ಟು ಥ್ಯಾಂಕ್ಸ್ ಅಂದ್ರು. ಅವರಿಗೆ ವಯಸ್ದು ಸಾಧಾರಣ 35-40 ಇದ್ದಿರಬಹುದು.'ನನ್ನ ದೇಹ ನೋಡಿ ಹೇಗಿದೆ ಮ್ಯಾಡಮ್... husband ಟಿಕೆಟ್ ಬುಕ್ ಮಾಡಿದ್ದು, ಸ್ವಲ್ಪ ನೋಡಿ ಬುಕ್ ಮಾಡೋದಲ್ವಾ...ಅದಕ್ಕೆ ನಾನು ಎಲ್ಲ husband ಗಳ ಹಣೆ ಬರಹ ಒಂದೇ' ಅಂದೆ 😁😁. ಅಮ್ಮ ಮಗಳು ಧಾರವಾಡ ಗೆ ಹೊರಟಿದ್ರು . ಮಗಳು 10 ಕ್ಲಾಸ್ ಗೆ ಹೋಗುವ ಮುಂಚೆ ಎರಡು ತಿಂಗಳ 10th ನೆ ಕ್ಲಾಸ್ ಗೆ crash ಕೋರ್ಸ್ ಟ್ಯೂಷನ್ ಅಂತೆ. ಮಗಳ ಜತೆ ಇರಲಿಕ್ಕೆ ಇವರೂ ಹೊರಟಿದ್ರು. ಅಡಿಗೆ ಮನೆ ಸಾಮಾನು ಇವೆ ನನ್ನ luggage ನಲ್ಲಿ ಅಂದ್ರು. ಅಲ್ಲಿ ಒಂದು ಮನೆ ಬಾಡಿಗೆಗೆ ಪಡೆದುಕೊಂಡಿದ್ದರಂತೆ.
ಮಲಗುವ ಸಮಯ ಆದಾಗ ' ಮೇಡಂ ನಿಮಗೆ ಮೇಲೆ ಹತ್ತಲು ಸಹಾಯ ಮಾಡ್ತೇನೆ, ಅಂದ್ರು. ನಾನು ಗಟ್ಟಿಯಾಗಿ ನಕ್ಕೆ. ಅವರು toilet ಗೆ ಹೋಗಿ ಬರುವಷ್ಟರಲ್ಲಿ ನಾನು ಮಧ್ಯದ berth ಏರಿ ಮಲಗಿಯಾಗಿತ್ತು. 'ಸಾರಿ ಮೇಡಂ, ನಿಮಗಿಂತ ಚಿಕ್ಕ ವಯಸ್ಸಾದ್ರೂ ನನ್ನ ಸ್ಥಿತಿ ಹೀಗಾಗಿದೆ' ಅಂದ್ರು.. ನಾನು - ಇರಲಿಯಮ್ಮ ಬೇಜಾರು ಮಾಡಕೋಬೇಡಿ...ನನಗೇನೂ ತೊಂದರೆಯಿಲ್ಲ ಅಂದೆ....ಕೇಳಿಸಕೊಳ್ಳುತ್ತಿದ್ದ ಮಗಳು 'ನಿನ್ನ ಹಣೆ ಬರಹ ಎನ್ ಮಾಡಕ್ಕಾಗುತ್ತೆ' ಅಂತ ಅಮ್ಮನಿಗೆ ಹೇಳಿದಾಗ, ಮಗಳ ಕಪಾಳಕ್ಕೆ ಎರಡು ಬಿಗಿ ಬೇಕು ಅನ್ನಿಸ್ತು....ಈಗಿನ ಹೆಚ್ಚಿನ ಮಕ್ಕಳಿಗೆ ತಂದೆ ತಾಯಿ ಬಗ್ಗೆ respect ಎ ಇಲ್ಲ....
ಪಕ್ಕದ ಸೀಟ್ ನ ಕುಟುಂಬ ಧಾರವಾಡ್ ದವರು...ಅವರ ಬಳಿ ಧಾರವಾಡ ಬಗ್ಗೆ, ಅಲ್ಲಿನ ತಾಪಮಾನ, ತರಕಾರಿ ಸಿಗುವ ಬಗೆ, ಇವರು ಇರುವ area ಕಡೆ ಮಾತು ಹೊರಳಿತು...ಅವರು ಬೆಂಗಳೂರಲ್ಲಿ ಹುಟ್ಟಿ ಬೆಳೆದವರಂತೆ...ಹೆಚ್ಚು travel ಮಾಡಿಲ್ಲ ಅಂದ್ರು. ಅವರ ಮಾತು ಕೇಳ್ತಾ ನಾನು ಯಾವಾಗಲೋ ನಿದ್ದೆಗೆ ಜಾರಿದ್ದೆ. ಬೆಳಿಗ್ಗೆ 5 ಗಂಟೆಗೆ ಎಚ್ಚರವಾದಾಗ ಹಲವಾರು ಜನ ಇಳಿದು ಹೋಗಿದ್ದರು. ಕಂಪರ್ಟ್ಮೆಂಟ್ ಖಾಲಿ ಇತ್ತು. ಕೆಳಗಿನ ಸೀಟ್ ಕೂಡ ಖಾಲಿಯಾಗಿದ್ದರಿಂದ ನಾನು ತಮ್ಮ ನಿಗೆ ಮೆಸೇಜ್ ಮಾಡಿ (ಅವನು ನನಗೆ ಪಿಕ್ ಮಾಡಲು ಬರುವವನಿದ್ದ) ಕೆಳಗಡೆ ಬಂದು ಮಲಗಿದೆ. ಪುನಃ ನಿದ್ದೆ..ತಮ್ಮ ಫೋನ್ ಮಾಡುವ ತನಕ...ನನ್ನು ಟಿಕೆಟ್ ಬುಕ್ ಆದ ಕೂಡಲೇ ಅದರ ಲಿಂಕ್ ಅನ್ನು ಅವನಿಗೆ ಕಳುಹಿಸಿ ಬಿಡ್ತೇನೆ. ಅವನು ಟ್ರಾಕ್ ಮಾಡ್ತಾ..ಸರಿಯಾದ ಸಮಯಕ್ಕೆ ನನ್ನನ್ನು.ಪಿಕ್ ಮಾಡ್ತಾನೆ..ಅಷ್ಟೇ ಅಲ್ಲ ಟ್ರೈನ್ ಅವನ ಮನೆ ದಾಟಿ ನೆ ಬರೋದು...
ಬೆಳಗಾವಿ ಹತ್ತಿರ ಬರುತ್ತಿದ್ದ ಹಾಗೆ ಒಬ್ಬರದೂ ಮೊಬೈಲ್ ಅಲಾರಂ ಹೊಡೆದುಕೊಳ್ಳಲು ಶುರು ಆಯ್ತು. ಅಲರಾಂ ಹೊಡೆದುಕೊಳ್ತಾ ಇರುತ್ತೆ, ಅದನ್ನು ಬಂದ್ ಮಾಡಬೇಕೆಂಬ ಜ್ನ್ಯಾನ ಇರುವುದಿಲ್ಲ. ಮೇಲಿದ್ದ ಹುಡುಗರು ಸಿಟ್ಟಿಗೆಳಲಾರಂಭಿಸಿದರು.. I will go and break their cell phone ಅಂತ ಒಬ್ಬ ಇಳಿದೆ ಬಿಟ್ಟ. it us one lame ass aunty..i woke her up and told her to shut her bloody mobile..ಅಂತ ಅವನ ಸ್ನೇಹಿತನ ಬಳಿ ಹೇಳಿಕೊಂಡ..ಏಳಲಿಕ್ಕೆ ಇಲ್ಲ ಅಂದ್ರೆ ಅಲರಾಂ ಯಾಕೆ ಇಟ್ಕೋಬೇಕು..ಬೇರೆಯವರ ನಿದ್ದೆ ಹಾಳು ಮಾಡಲಿಕ್ಕೆ bloody ಅಂತ ಗೊಣಗ್ತಾ ಇದ್ದ... ಇನ್ನೊಬ್ಬ ಮೆಲ್ಲಗೆ ಅವನ ತಲೆ ದಿಂಬಿನ ಕೆಳಗಡೆ ಇಟ್ಟ ಚಪ್ಪಲಿ ತೆಗೆದು ಕೆಳಗೆ ಒಂದೊಂದೇ ಎಸೆದ...ಅವನ ಒಟ್ಟಿಗೆ ಇದ್ದವನು' ಛೀ, ಚಪ್ಪಲಿ ಅಲ್ಲಿಡ್ತಾರ ಯಾರಾದ್ರೂ ಅಂದಿದ್ದಕೆ '3500/ ರೂ ಚಪ್ಪಲಿ ಬ್ರೋ.. ಅಂದಾಗ ಚಪ್ಪಲಿ ನೋಡಿದ್ರೆ ಚಿತ್ರದಲ್ಲಿದ್ದ ಹಾಗೆ ಇತ್ತು....ಇದಕ್ಕೆ 3500/-ರೂ ಆ..ಅಂದುಕೊಂಡೆ...ಒಳ್ಳೆ ಹುಡುಗರ ಸಹವಾಸ ಅಂದು ಕೊಂಡೆ...
AI ಚಿತ್ರ
.ಅವರು ಗಾಡಿಯಲ್ಲಿ ಬೆಳಗಾವಿಗೆ ಬರೋದಿತ್ತಂತೆ...ಆದರೆ ಟ್ರೈನ್ ನಲ್ಲಿ ಬರಬೇಕಾಯ್ತು.. ಅಂತ ಫೋನ್ ನಲ್ಲಿ ಅವರು ಮಾತನಾಡುವಾಗ ತಿಳಿಯಿತು..ಗೋವಾ ಗೆ ಬೆಳಗಾವಿಯಿಂದ flight ಅಲ್ಲಿ. ಗುಂಡು ಪಾರ್ಟಿ ಬಗ್ಗೆ ತುಂಬಾ excite ಆಗಿದ್ದರು. ಸೆಕೆ ಅಂದ್ರ ಸೆಕೆ...AC ಇದ್ರೂ ಕೂಡ. ಹುಡುಗರು ರಾತ್ರಿ ಬೆಳಗಾವಿ ತಂಪು ಆಗಿರಲು ಬಹುದು ಅಂತ ಅಂದಾಜಿಸುತ್ತಿದ್ದರು.. ನಾನು ಮುಗುಳು ನಗ್ತಾ ಇದ್ರೆ ಅವರೂ ನಾಚಿಕೊಂಡು ನನ್ನ ಜತೆ ನಗಲು ಶುರು ಹಚ್ಚಿಕೊಂಡ್ರು..
ಹೀಗೊಂದು ನನ್ನ ಸಂಚಾರ ಕತೆ....
.ಅವರು ಗಾಡಿಯಲ್ಲಿ ಬೆಳಗಾವಿಗೆ ಬರೋದಿತ್ತಂತೆ...ಆದರೆ ಟ್ರೈನ್ ನಲ್ಲಿ ಬರಬೇಕಾಯ್ತು.. ಅಂತ ಫೋನ್ ನಲ್ಲಿ ಅವರು ಮಾತನಾಡುವಾಗ ತಿಳಿಯಿತು..ಗೋವಾ ಗೆ ಬೆಳಗಾವಿಯಿಂದ flight ಅಲ್ಲಿ. ಗುಂಡು ಪಾರ್ಟಿ ಬಗ್ಗೆ ತುಂಬಾ excite ಆಗಿದ್ದರು. ಸೆಕೆ ಅಂದ್ರ ಸೆಕೆ...AC ಇದ್ರೂ ಕೂಡ. ಹುಡುಗರು ರಾತ್ರಿ ಬೆಳಗಾವಿ ತಂಪು ಆಗಿರಲು ಬಹುದು ಅಂತ ಅಂದಾಜಿಸುತ್ತಿದ್ದರು.. ನಾನು ಮುಗುಳು ನಗ್ತಾ ಇದ್ರೆ ಅವರೂ ನಾಚಿಕೊಂಡು ನನ್ನ ಜತೆ ನಗಲು ಶುರು ಹಚ್ಚಿಕೊಂಡ್ರು..
ಹೀಗೊಂದು ನನ್ನ ಸಂಚಾರ ಕತೆ....

No comments:
Post a Comment