September 27, 2009

ಬಿನಾಕಾ ಗೀತ್ ಮಾಲಾ

ಚಿಕ್ಕಂದಿನಿಂದ ಅಂದರೆ ನಾನು ಒಂದು ವರ್ಷದವಳಾದಾಗಿನಿಂದ ನನಗೆ ಹಿಂದಿ ಹಾಡುಗಳನ್ನು ಕೇಳುವುದು ಅಭ್ಯಾಸ. ಅಮ್ಮ ಬೆಳಿಗ್ಗೆ ೫.೦೦ ಗಂಟೆಗೆ ಪಂಪ್ ಸ್ಟವ್ ನಲ್ಲಿ ಚಹಾ ಮಾಡ್ತಾ, ರೇಡಿಯೋ ಟ್ಯೂನ್ ಮಾಡ್ತಾ ಇದ್ದರು. ರೇಡಿಯೋದ ಆ ದಿನದ ಕಾರ್ಯಕ್ರಮ ಶುರು ಆಗುವ ಮೊದಲಿನ ಆ ಸಂಗೀತ ಇನ್ನೂ ಕಿವಿಯಲ್ಲಿ ಗುನುಗುತ್ತಿದೆ.
ಇನ್ನೊಂದು ನೆನಪು ’ಬಿನಾಕಾ ಗೀತ್ ಮಾಲಾ’ ದ ಅಮೀನ್ ಸಿಯಾನಿ’ ಪ್ಯಾರೆ ಬೆಹೆನೋ ಔರ್ ಭಾಯಿಯೋ”ಅಥವ’ಆವಾಜ್ ಕೆ ದುನಿಯಾ ಕೆ ದೋಸ್ತೋಂ, ಆಪಕೋ ಅಮೀನ್ ಸಿಯಾನಿ ಕಾ ಪ್ಯಾರ್ ಭರಾ ನಮಶ್ಕಾರ” ಕೇಳಿದ ಕೋಡಲೆ ಮೈ ಮೇಲಿನ ರೋಮ ನಿಮಿರಿ ನಿಲ್ಲುತ್ತಿದ್ದವು. ಅಷ್ಟು ಮಾಂತ್ರಿಕ ಶಕ್ತಿಯಿತ್ತು ಅವರ ದನಿಗೆ.
ಬುಧವಾರ ರಾತ್ರಿ 8.00 ರಿಂದ 9.00 ಜನ ಜೀವನ ಎಲ್ಲ ತಟಸ್ಥ. ಮುಂಬೈನಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲೇ. ರಿಕ್ಷಾ, taxi ನವರು ಸಹ ರೇಡಿಯೋ ಸೀಲೋನ್ ಗೆ ಟ್ಯೂನ್ ಮಾಡ್ತಿದ್ದರು. ಮಧ್ಯ ಬರುವ binaca top toothpaste ನ advertisement ಹಾಡನ್ನು ನಾವು ಅದರ ಜತೆಗೆ ಗುನುಗುನಿಸುತ್ತಿದ್ದೆವು.
ಒಂದು ಸಲ ಹುಬ್ಬಳ್ಳಿಗೆ ಹೋಗಿದ್ದೆವು, ಮದುವೆಯಲ್ಲಿ ಪಾಲ್ಗೊಳ್ಳಲು. ದೊಡ್ಡಮ್ಮನ ಮನೆಗೆ. ಮನೆ ಚಿಕ್ಕದ್ದು. ರಾತ್ರಿ ೭.೦೦ ರ ಸುಮಾರಿಗೆ ಕರೆಂಟ್ ಹೋಯ್ತು. ನಾವೆಲ್ಲ ಮಲಗಿದ್ದೆವು. ದೊಡ್ಡಮ್ಮನ ಕಿರಿ ಮಗ ಮಂಚದ ಕೆಳಗಡೆ ಮಲಗಿ, ರಾತ್ರಿ ಬಿನಾಕ ಗೀತ್ ಮಾಲಾ ಹಾಕಿ, ನಾವೆಲ್ಲರೂ ತನ್ಮಯರಾಗಿ ಕೆಳಿದ್ದ ನೆನಪು ಇನ್ನೂ ಹಸಿರಾಗಿದೆ. ಸೆಲ್ ನಿಂದ ನಡೆಯುವ ರೇಡಿಯೋ ಆದ್ದರಿಂದ ಕರೆಂಟ್ ಇಲ್ಲದಾಗಿಯೂ ಕೇಳಬಹುದಿತ್ತು.
ಅಮೇಲೆ ಅದು ’ಸಿಬಾಕಾ’ ಗೀತಮಾಲಾ ಆಗಿ ಪರಿವರ್ತನೆ ಗೊಂಡಾಗ ಏನೋ ಇರುಸುಮುರುಸು. ಆದರೂ ಅಮೀನ್ ಸಯಾನಿ ಯವರು ಸಿರ್ಫ್ ನಾಮ್ ಬದಲಾ ಹೈ ಅಂದಾಗ ಸಮಾಧಾನ. ಮೊಟ್ಟಮೊದಲು ಅರ್ಧ ಗಂಟೆ ಇದ್ದ ಬಿನಾಕಾ ಗೀತ್ ಮಾಲಾ ಅಭಿಮಾನಿ ಕೇಳುಗರ ಒತ್ತಾಯದ ಮೇರೆಗೆ ಒಂದು ಗಂಟೆ ನಡೆಸಲಾಯಿತು. ಕಾರ್ಯಕ್ರಮ ಕೇಳುಗರ ಪತ್ರ ಸೆಕ್ಷನ್ ನಲ್ಲಂತೂ ಕೇಳುಗರ ಪತ್ರದ ಮಹಾಪೂರ.ಸೈನಿಕರು ಬರೆದ ಪತ್ರಗಳನ್ನು ಓದಿದಾಗ ಕಲ್ಲು ಹೃದಯ ಕರಗಬೇಕು ಹಾಗಿರುತ್ತಿತ್ತು ಪತ್ರದ ಒಕ್ಕಣೆ. ಹೈ ಸ್ಕೂಲ್ ಗೆ ಬಂದಾಗ ನಾವು ಮರುದಿನ ಶಾಲೆಯಲ್ಲಿ ಯಾವ ಯಾವ ಹಾಡು ಬಂತು ಅಂತ ಅದರ ಬಗ್ಗೆ ಡಿಸ್ಕಸ್ ಮಾಡ್ತಿದ್ವಿ. that was the -in thing- ಆವಾಗ.
ಸಿಬಾಕ ಗೀತ ಮಾಲದಿಂದ ಅದು ಕೋಲ್ಗೆಟ್ - ಸಿಬಾಕಾ ಗೀತ ಮಾಲಾ ಆಗಿ ಪರಿವರ್ತನೆಗೊಂಡು ಅದನ್ನು ವಿವಿಧ ಭಾರತಿಯಲ್ಲಿ ಮುನ್ನಡೆಸಲಾಯಿತು.ಆಮೇಲಿನ ದಿನಗಳಲ್ಲಿ ಹವಾಮಹಲ್ ಬಿಟ್ಟರೆ ಈ ಪರಿಯ ಮನ್ನಣೆ ಸಿಕ್ಕಿದ ಯಾವುದೇ ಕಾರ್ಯಕ್ರಮದ ಬಗ್ಗೆ ಕೇಳಿಯೂ ಇಲ್ಲ.
ಸುಮಾರು 1983 ನಲ್ಲಿ ನಮ್ಮ ಮನೆಗೆ ಮೊದಲ ಟಿ.ವಿ.- ಕಪ್ಪು ಬಿಳುಪು -ಬಂತು. ರೇಡಿಯೋ ಕಡೆ ಗಮನ ಕಡಿಮೆಯಾಗಿ, ಕ್ರಮೇಣ ನಿಂತು ಹೋಗಿತ್ತು.ಇತ್ತೀಚಿಗೆ ಬೆಂಗಳೂರಿಗೆ ಬಂದ ಮೇಲೆ ರೇಡಿಯೋ f.M. ಶುರು ಆದ ಮೇಲೆ ಪುನಃ ಹಾಡು ಕೇಳುವ ಗೀಳು ಹತ್ತಿ ಬಿಟ್ಟಿದೆ.ಈಗ ನಮ್ಮ ಮನೆಯಲ್ಲಿ/ಕಛೇರಿಯಲ್ಲಿ ದಿನದ 24 ಗಂಟೆಯೂ world space ಚಾಲೂ ಇರುತ್ತದೆ.
ಅಮೀನ್ ಸಯಾನಿಯವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಾಗಲಂತೂ ತುಂಬಾ ಖುಶಿ.
ಅಮೀನ್ ಸಯಾನಿ ನಂತರ ಒಳ್ಳೆ ದನಿ ಇದ್ದದ್ದು ಹರೀಶ್ ಭಿಮಾನಿ ಮತ್ತು ಅಮಿತಾಭ್ ಬಚ್ಚನ್, ಆದರೂ ಅಮೀನ್ ಸಯಾನಿ ದನಿ ಬಗ್ಗೆ undying loyalty ಈಗಲೂ
ಮೊನ್ನೆ ಸೊಪ್ಪು ಕ್ಲೀನ್ ಮಾಡ್ತ ಸಿಕ್ಕ ಹಳೆಯ ವಿಜಯಕರ್ನಾಟಕ ಪತ್ರಿಕೆಯಲ್ಲಿ ವಿಶ್ವೇಶರ್ ಭಟ್ ನವರು ಅಮೀನ್ ಸಯಾನಿಯವರ ಬಗ್ಗೆ ಬರೆದಿದ್ದನ್ನು ಓದಿ, ನನ್ನದಿಷ್ಟು ನೆನೆಪನ್ನು ಬ್ಲಾಗಿಸಿದೆ.
’ಅಮೀನ್ ಸಯಾನಿಜೀ ಆಪ್ಕೋ ಮಾಲತಿ ಕಾ ಪ್ಯಾರ್ ಭರಾ ನಮಶ್ಕಾರ್’

September 13, 2009

ಪ್ರಾಣಿಗಳಲ್ಲೂ ದಯಾಮರಣದ ಕಲ್ಪನೆ?

ಇದು ನಿಜವಾಗಿ ನಡೆದ ಘಟನೆ. ನಾವಾಗ ವರ್ಗವಾಗಿ ಉಜಿರೆಯ ಶಿವಾಜಿನಗರದಲ್ಲಿದ್ದೆವು. ನಮ್ಮವರ ಬ್ಯಾಂಕ್ ನಲ್ಲಿದ್ದ ಕಲೀಗ್ ಗೆ ನವ ದೆಹಲಿ ಗೆ ವರ್ಗವಾಗಿ ಅವರ ಮನೆಯಲ್ಲಿ ನಾವು ಬಾಡಿಗೆಗಿದ್ದೆವು. ದೊಡ್ಡದಾದ ಹಳೇ ಮನೆ. ಮನೆಯ ಸುತ್ತ ಮುತ್ತ ಸಾಕಷ್ಟು ಜಾಗ ಇದ್ದು, ಹಲಸು, ಮಾವಿನ ಹಾಗೂ ನಾಲ್ಕೈದು ತೆಂಗಿನ ಮರಗಳಿದ್ದವು. ಮನೆಯ ಸುತ್ತ ದೊಡ್ಡ ಕಂಪೌಂಡ್ ಇದ್ದು, ಗಾಡಿ ಹೋಗಲು ದೊಡ್ಡದಾದ ಗೇಟ್ ಹಾಗೂ ಅದರ ಪಕ್ಕದಲ್ಲೇ ನಾವೆಲ್ಲ ಉಪಯೋಗಿಸುತ್ತಿದ್ದ ಚಿಕ್ಕ ಗೇಟ್. ಆ ಚಿಕ್ಕ ಗೇಟ್ ಮೂಲಕ ಒಂದು ಚಿಕ್ಕ ಕಪ್ಪು ಬಣ್ಣದ ನಾಯಿ ಮರಿ ಬರುತ್ತಿತ್ತು. ನಾನದಕ್ಕೆ ಬ್ಲ್ಯಾಕಿ ಅಂತ ಹೆಸರಿಟ್ಟಿದ್ದೆ. ಅಷ್ಟಾಗಿ ಕನ್ನಡ ಬರದಿದ್ದ ನನಗೆ ದನ-ಕರು, ನಾಯಿ, ಹಾವುಗಳೆ ಫ್ರೆಂಡ್ಸ್. :-) ಬ್ಲ್ಯಾಕಿಗೆ ನೀರು ದೋಸೆ ಅಂದರೆ ಇಷ್ಟ.
ಮನೆಯವರು ಬೈಕ್ ತೆಗೆದುಕೊಂಡು ಕಛೇರಿ ಗೆ ತೆರೆಳಿದ ಮೇಲೆ ಗೇಟ್ ಹಾಕಲು ಹೋದ ನನಗೆ ಬ್ಲ್ಯಾಕಿ ಬರುವುದು ಕಾಣಿಸಿತು. ಬೇಗ ಬಾ ಬ್ಲ್ಯಾಕಿ, ನಿನ್ನ ಇಷ್ಟದ ದೋಸೆ ಮಾಡಿದ್ದೇನೆ (ಕೊಂಕಣಿಯಲ್ಲಿ) ಅಂತ ಹೇಳಿದೆ. ಹೇಗೂ ದೊಡ್ಡ ಗೇಟ್‌ತೆರೆದೇ ಇದ್ದುದರಿಂದ ಅದರಿಂದ ಬ್ಲ್ಯಾಕಿ ಒಳಗೆ ಬರಲಿ ಅಂತ, ಅದು ತಲುಪುವವರೆಗೆ ಕಾಯ್ತಾ ಇದ್ದೆ. ಅಷ್ಟರೊಳಗೆ ರಭಸದಿಂದ ಬಂದ ಒಂದು ಎಸ್ಟೇಟ್ ಜೀಪ್ ಅದನ್ನು ಹಾಯ್ದು ಕೊಂಡು ಹೋಯ್ತು. ಬ್ಲ್ಯಾಕಿ ಅಂತ ಕಿರುಚಿ ಕಣ್ಣುಗಳನ್ನು ಎರಡು ಕೈ ನಿಂದ ಮುಚ್ಚಿಕೊಂಡೆ. ಬ್ಲ್ಯಾಕಿ ಊಳಿಡುವುದು ಕೇಳಿಸ್ತು. ನಿಧಾನವಾಗಿ ಕಣ್ಣು ತೆರೆದು ನೋಡಿದಾಗ, ಜೀಪ್ ಅದರ ಹಿಂಬಾಗ ಮೇಲೆ ಹರಿದು, ಆ ಭಾಗ ಕಾಲುಗಳ ಸಹಿತ ಪೂರ್ತಿ ಜಜ್ಜಿ ಹೋಗಿತ್ತು. ಮೂಕವಾಗಿ ನನ್ನೆಡೆಗೆ ನೋಡುತ್ತ ಅದು ರೋದಿಸುತ್ತಿತ್ತು. ನಾನು ಅದರ ಜತೆ ಅಳ್ತಾ ಇದ್ದೆ. ಎಲ್ಲಿದ್ದವೋ ನಾಲ್ಕೈದು ನಾಯಿಗಳು ಬಂದು ಅದರ ಸುತ್ತ ಮುತ್ತ ತಿರುಗಿ ಅದನ್ನು ಎಬ್ಬಿಸುವ ಪ್ರಯತ್ನ ಮಾಡಿದವು. ಅದು ಏಳದೆ ಇದ್ದುದರಿಂದ ಅದರ ಜತೆ ಒಂದೈದು ನಿಮಿಷ ಅವೂ ಊಳಿಟ್ಟವು. ಅಮೇಲೆ ಎರಡು ನಾಯಿ ಹಿಂಬಾಗ ಕಚ್ಚಿ ಹಿಡಿದವು, ಮೂರು ನಾಯಿ ಕುತ್ತಿಗೆ ಭಾಗವನ್ನು ಹಿಡಿದು ಅದರ ಕುತ್ತಿಗೆ ಮುರಿಯುವ ತನಕ ಎಳೆದಾಡಿದವು. ಅದು ಕೊನೆಯುಸಿರೆಳೆಯಿತು. ನಾಯಿಗಳು ಪುನ: ಅದನ್ನು ಕಾಲಿನಿಂದ ತಡಕಾಡಿ, ಅದು ಅಲುಗದೇ ಇರುವುದು ಖಾತರಿ ಮಾಡಿ, ಬಂದ ದಾರಿಯಲ್ಲಿ ಹೋಗಿ ಬಿಟ್ಟವು. ನಾನು ಮಾತ್ರ, ಬ್ಲ್ಯಾಕಿಯ ಕಣ್ಣಿನಿಂದ ಒಸರಿದ ಕರುಣಾಜನಕ ನೋಟ ಮತ್ತು ನನ್ನ ಅಸಹಾಯಕತೆಯನ್ನು ನೆನೆಸಿಕೊಂಡು, ನಮ್ಮ ತೋಟಕ್ಕೆ ಪಾತಿ ಮಾಡುವ ಅಣ್ಣಿ ಗೌಡ ಬರುವ ತನಕ ಅಲ್ಲೆ ನಿಂತಿದ್ದೆ. ಅಳಬೇಡಿ ಒಡತಿ ಅಂದ ಅಣ್ಣಿ ಗೌಡ, ಹತ್ತಿರದ ತೋಟದಲ್ಲಿ ಕೆಲಸಕ್ಕಿರುವ ಇನ್ನಿಬ್ಬರು ಕೆಲಸಗಾರನ್ನು ಕರೆದು ತಂದು, ಗೇಟ್ ಬಳಿಯಿರುವ ತೆಂಗಿನ ಬುಡದಲ್ಲಿ ಗುಂಡಿ ತೆಗೆದು ಬ್ಲ್ಯಾಕಿ ಯನ್ನು ಅದರಲ್ಲಿ ಹೂತಿದರು. ಮಣ್ಣು ಹಾಕುವ ಮುಂಚೆ ಅದಕ್ಕೆ ಅಂತ ಇಟ್ಟ ನೀರು ದೋಸೆಯನ್ನು ಅದರ ಒಟ್ಟಿಗೆ ಮಣ್ಣು ಮಾಡಿದೆ. ನಾಯಿಗಳ ಹಿಂಡು ಕಂಡಾಗ ಹಾಗೂ ನೀರು ದೋಸೆ ಮಾಡಿದಾಗಲೆಲ್ಲ ನನಗೆ ಬ್ಲಾಕಿ ನೆನಪಿಗೆ ಬರುತ್ತದೆ.
ಪ್ರಾಣಿಗಳಲ್ಲಿಯೂ ದಯಾ ಮರಣದ ಪರಿಕಲ್ಪನೆ ಇರಬುಹುದಾ? ನಾನು ಅದಕ್ಕೆ ಸಾಕ್ಷಿ ಆಗಿದ್ದೇನಾ? ಗೊತ್ತಿಲ್ಲ.

September 12, 2009

ಮಸಾಲಾ ಪೂರಿ


ಗೋದಿ ಹಿಟ್ಟು - 1 ಕಪ್


ಬಾಂಬೆ ರವಾ- 2 ಟೀ. ಚ


ಮಸಾಲೆ ರುಬ್ಬಲು : ಕೊತ್ತಂಬರಿ ಸೊಪ್ಪು ಸ್ವಲ್ಪ, ತಾಜಾ ತೆಂಗಿನ ತುರಿ- 2 ಟೀ. ಚ, ಹಸಿ ಮೆಣಸಿನಕಾಯಿ-2, ಉಪ್ಪು ರುಚಿಗೆ ತಕ್ಕಂತೆ,( ಜೀರಿಗೆ ಮತ್ತು ಪುದೀನ ಎಲೆ(optional))


ಕರಿಯಲು - ಎಣ್ಣೆ


ತರಿ ತರಿಯಾಗಿ ರುಬ್ಬಿದ ಮಸಾಲೆಯೊಂದಿಗೆ ಗೋದಿ ಹಿಟ್ಟು , ಬಾಂಬೆ ರವೆ ಹಾಕಿ- ನೀರು ಬೆರೆಸಿ, ಗಟ್ಟಿಯಾದ ಕಣಕ (dough) ತಯಾರಿಸಿ. ಲಟ್ಟಿಸಿ, deep fry ಮಾಡಿ.


ಸಂಜೆ ಫಿಲ್ಮ್ ನೋಡ್ತಾ / ನೆಂಟರು ಬಂದಾಗ ಮಾಡಿತಿನ್ನಬಹುದು. ಮಸಲಾ ಪೂರಿಗೆ ಚಟ್ನಿ , ಪಲ್ಯದ ಜತೆ ಬೇಕಿಲ್ಲ. ಆದುದರಿಂದ ಪಿಕ್ ನಿಕ್ / tour ಗೆ ಒಯ್ಯಲು ಸುಲಭ ಮತ್ತು convenient. :-)


photo - from my kitchen

September 9, 2009

ನಾಮಾವಳಿ

ನಾನು ಹುಟ್ಟೋ ಮುಂಚೆ, ಅಮ್ಮನಿಗೆ ಗಂಡು ಮಗು ಅಂತ ಖಾತ್ರಿಯಿತ್ತಂತೆ. ಏಳನೇ ತಿಂಗಳಲ್ಲಿ ಕನಸಲ್ಲಿ ಪುಟ್ಟ ಬಾಲಕೃಷ್ಣ ದನ ಕರು ಗಳೊಂದಿಗೆ ನಿಂತು ಕೊಳಲು ಬಾರಿಸುವುದನ್ನು ನೋಡಿದ್ದರಂತೆ. ಹಾಗೇ ಹೊಟ್ಟೆಯ ಗಾತ್ರ ನೋಡಿ ಮನೆಯಲ್ಲಿರುವ ಹಿರಿಯರೆಲ್ಲ ಗಂಡು ಮಗುವೆ ಹುಟ್ಟುವುದೆಂದು ಹೇಳಿದ್ದರಂತೆ. ಅದರಂತೆ ಅಮ್ಮ ಹುಟ್ಟಲಿರುವ ಮಗನಿಗೆ ’ಮಧುಸೂಧನ, ಕೃಷ್ಣಾನಂದ ಎಂದು ನಾಮಕರಣ ಮಾಡುವ ಕನಸನ್ನು ಇಟ್ಟುಕೊಂಡಿದ್ದಳು.
ಹೊರಗಡೆ ದೀಪಾವಳಿ ಪಟಾಕಿಯ ಸದ್ದಿನೊಂದಿಗೆ ನನ್ನ ಜನನ. ನೋಡಲು ಶ್ಯಾಮಲ ವರ್ಣವಾಗಿದ್ದರು, ಬಾಲಕೃಷ್ಣ ಆಗಿರದೇ, ನಾನು ಕೃಷ್ಣೆಯಾಗಿದ್ದೆ.ಅಮ್ಮನಿಗೆ ಎಷ್ಟು ಗಾಬರಿಯಾಯ್ತೆಂದರೆ..’ಇದು ನನ್ನ ಮಗುವಲ್ಲ. ನನಗೆ ಗಂಡು ಮಗು ಹುಟ್ಟಿರುವುದು ಅಂದು, ಬೇರೆಯವರ ಮಗು ಅಂತ ನನ್ನ ಮುಟ್ಟಲೇ ಇಲ್ಲ. ಸಧ್ಯ ನನ್ನ ಅದೃಷ್ಟ (?)ನರ್ಸ್ ಸಿಟ್ಟು ಗೊಂಡು ಇಲ್ಲಿ ಇವತ್ತು ಹುಟ್ಟಿದ್ದು ಮೂವರೂ ಹೆಣ್ಣು,ನಿಮ್ಮದು ಮೂರನೇದು ಅಂದ್ರಂತೆ,ಇಲ್ಲದಿದ್ದರೆ ನನ್ನನ್ನು exchange ಮಾಡ್ತಿದ್ದರೇನೋ? . ಹಾಲು ಉಣಿಸುವ ಅನಿವಾರ್ಯವಾದಾಗ ನನ್ನನ್ನ ಬಳಿಗೆ ಕರೆದುಕೊಂಡ್ರಂತೆ.
ನನ್ನ ನಾಮಕರಣಕ್ಕೆ , ಕುಟುಂಬದ ಮೊದಲ ಹೆಣ್ಣು ಮಗು ಅಂತ (ನನ್ನ ದೊಡ್ಡಪ್ಪನಿಗೆ ಆಗಲೇ ಮೂರು ಗಂಡು ಮಕ್ಕಳು ಆಗಿದ್ದವು) ಗೋವೆಯಲ್ಲಿರುವ ನಮ್ಮ ಕುಲದೇವಸ್ಥಾಕ್ಕೆ ಒಯ್ದು ಹೆಸರಿಡುವುದೆಂದು ತಿರ್ಮಾನಿಸಿದರು. ನನ್ನ ನಕ್ಷತ್ರದ ಗುಣಾಕಾರ ಭಾಗಾಕಾರ ಮಾಡಿ ’ಮ’ ದಿಂದ ಶುರುವಾಗುವ ಹೆಸರಿಡಬೇಕೆಂದು...ನಮ್ಮ ಕುಲದೇವತೆಯಾದ ’ಮಹಾಲಸಾ ನಾರಾಯಣಿ’ ಹೆಸರಿಟ್ಟರಂತೆ. ಆದರೆ ಮುಂಬಯಿಯಲ್ಲಿ, ಅದೂ ಶಾಲೆಗೆ ಆ ಹೆಸರು ಬೇಡವೆಂದು ಪುಟ್ಟದಾಗಿ ’ಮಾಲತಿ’ ಯಂತ ಹೆಸರು ಪುರೋಹಿತರೇ ಸೂಚಿಸಿದರು. ನನ್ನ ಅಜ್ಜ ಅದಕ್ಕೆ ಮೋಹಿನಿ ಸೇರಿಸಿದರು. ’ಮಾಲತಿ-ಮೋಹಿನಿ’ ಹೆಸರು ನನ್ನದಾಯಿತು. ಶಾಲೆಗೆ ಮಾಲತಿ ಹೆಸರು ನೋಂದಾಯಿಸಲಾಯಿತು. ಯಾಕೆ ಅಂದ್ರೆ ಮೋಹಿನಿಯಂದ್ರೆ ಹೆಣ್ಣು ಭೂತ/ದೆವ್ವವಂತೆ.
ಸರಿ, ಮದುವೆ ಆಗಿ ಕೂಡುಕುಟುಂಬಕ್ಕೆ ಬಂದೆ. ಅಲ್ಲಿ ನೋಡಿದ್ರೆ ಆಗಲೇ ನಾಲ್ಕು ಮಾಲತಿಯರು ಇದ್ರು. ಅವರನ್ನು distinguish ಮಾಡೋದು..ದೊಡ್ಡ ** ಮಾಲತಿ, ಮೆಳ್ಳೆ ಗಣ್ಣಿನ ಮಾಲತಿ, ಹೆಬ್ರಿ ಮಾಲತಿ, ಉದ್ದ ಮಾಲತಿ...ಸಧ್ಯ ನನಗೆ ಮಾತ್ರ ಶ್ರೀಕಾಂತ್ ನ ಮಾಲತಿ ಅಂತಿದ್ರು. ಆದರೆ ಅತ್ತೆಯವರು ನನ್ನನ್ನು special ಹೆಸರಿನಿಂದ ಕರೆಯುತ್ತಿದ್ದರು. ನಂದೀಪಾ ಅಂತ. ಒಟ್ಟು ನನ್ನನ್ನು ಮಲ್ಲು, ಮಾಲಿ, ಮಾಂಚು, ಮಲ್ಲಿಕಾಕಾ, ಮಾಲತಿಯಕ್ಕ ಅಂತೆಲ್ಲ ಕರೆಯುವವರು ಇದ್ದಾರೆ.
ಮದುವೆಯಾದ ಹೊಸತರಲ್ಲಿ ಊರ ದೇವಳಕ್ಕೆ ಹೋದಾಗ, ಇಬ್ಬರು ಮಹಿಳೆಯರು ನನ್ನ ಬಳಿಗೆ ಬಂದು, ಅದರಲ್ಲಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳಿಗೆ ನನ್ನನ್ನು ಪರಿಚಯಿಸುತ್ತ ’ಇವರು ನಮ್ಮ ರವೀಂದ್ರಣ್ಣನ ಹೆಂಡತಿ ಅಂತ ಹೇಳಿದ್ರು. ನನಗಂತೂ ಗಾಬರಿ. ನಾನು ’ಅಲ್ಲ, ಅಲ್ಲ ನಾನು ಶ್ರೀಕಾಂತ್ ಶೆಣೈ ಹೆಂಡತಿ’ ಅಂದೆ. ಅದಕ್ಕೆ ಅವರು ಗಟ್ಟಿಯಾಗಿ ನಕ್ಕು, ’ ನಿನ್ನ ಶ್ರೀಕಾಂತ್ ನನ್ನು ನಾವು ರವೀಂದ್ರ ಅಂತ ಕರೆಯುವುದು” ಅಂದ್ರು. ಶ್ರೀಕಾಂತ್ ತಾಯಿ (ನನ್ನ ಅತ್ತೆ) ತವರು ಮನೆಯಲ್ಲಿ ಅವರನ್ನು ರವೀಂದ್ರ ಅಂತಲೇ ಸಂಭೋಧಿಸುವುದಂತೆ. ಸಂಜೆ ಅವರು ಮನೆಗೆ ಬಂದ ಮೇಲೆ,ಅವರಿಗೆ ಇನ್ನೂ ಯಾವ ಯಾವ ಹೆಸರಿದೆ ಹೇಳಿಬಿಡಿ ಅಂದೆ. ಶಾಲಾ ಸ್ನೇಹಿತರು ’ಕಾಟಿ’ ಅಂತ, ಅವರ ತಂದೆ (ನನ್ನ ಮಾವನವರು) ಕಂಠಿ ಎಂದೂ, ಕರೆಯುತ್ತಾರೆಂದು ತಿಳಿಯಿತು. :-)
ನನ್ನ ತಂಗಿ ಇರುವುದು ಅಮೇರಿಕದಲ್ಲಿ. ಅವಳಿಗೆ ಎರಡನೆ ಮಗು ಹುಟ್ಟುವಾಗಲೂ ಸ್ವಲ್ಪ ಈ ತರಹನೇ ಆಯ್ತು. ಅಲ್ಲಿ ಭ್ರೂಣ ಪರೀಕ್ಷೆ ಮಾಡಿ ಮಗುವಿನ ಲಿಂಗದ ಬಗ್ಗೆ ಹೇಳಿ ಬಿಡುತ್ತಾರೆ. ಆದರೆ ಅವಳ ಮಗುವಿನ ಪೊಸಿಷನ್ ಹಾಗೂ ಎರಡೂ ಕೈಗಳು ಅಡ್ಡ ಇದ್ದುದರಿಂದ ಎರಡು ಸ್ಕ್ಯಾನಿಂಗ್ ನಲ್ಲೂ ಮಗುವಿನ ಲಿಂಗದ ಬಗ್ಗೆ ಪತ್ತೆ ಹೆಚ್ಚಲಿಲ್ಲ. ಅಮ್ಮ ಜ್ಯೋತಿಷಿ ಹತ್ತಿರ ಹೋದಾಗ ಅವರು ’ಗಂಡು’ ಮಗುವೇ ಹುಟ್ಟುವುದೆಂದು ಭವಿಷ್ಯ ಹೇಳಿದ್ದರು. ನನ್ನ ತಂಗಿಗೂ ಗಂಡು ಹೆರುವ ಆಸೆ ಇತ್ತೇನೋ? ನನಗೆ ಗಂಡು ಮಗುವಿನ ಹೆಸರು ಮೈಲ್ ಮಾಡಲಿಕ್ಕೆ ಹೇಳಿದ್ದಳು. ನಾನು ಶ್ರೇಯಸ್ (Shreyas) ಅನ್ನುವ ಹೆಸರು ಸೆಲೆಕ್ಟ್ ಮಾಡಿದ್ದೆ. ಎಲ್ಲರಿಗೂ ಇಷ್ಟವಾಗಿತ್ತುಅಲ್ಲಿ ಮಗು ಹುಟ್ಟಿದ ಕೂಡಲೇ ನನಗೆ ಫೋನ್ ಮಾಡಿದ್ದಾಗ..’ಈಗ ಹೆಣ್ಣು ಮಗು ಹುಟ್ಟಿದೆಯಲ್ಲವ’, ’ಏನು ಮಾಡುವುದು’ ಅಂದಾಗ..ಅದರಲ್ಲೇನು ಮಹಾ, ’ಸ’ ತೆಗೆದು ಬಿಟ್ಟು ಶ್ರೇಯಾ (Shreya) ಮಾಡುವ ಅಂದೆ. ಈ ವರ್ಷ ಶ್ರೇಯಳ ಐದನೇ ಹುಟ್ಟಿದ ಹಬ್ಬದ ಸಡಗರ. ನಾನು ಇದನ್ನು ಪೋಸ್ಟ್ ಮಾಡುವಾಗ ಶ್ರೇಯಾ ಅಲ್ಲಿ ಹುಟ್ಟು ಹಬ್ಬ ಆಚರಿಸ್ತಾ ಇದ್ದಾಳೆ.
ಇತ್ತೀಚಿಗೆ ಕೆ.ಟಿ. ಗಟ್ಟಿ ಯವರ ಪುಸ್ತಕ ’ನಿನ್ನೆ, ಇಂದು,ನಾಳೆ’ ಬಿಡುಗಡೆ ಆಯ್ತು. ಸಮಾರಂಭಕ್ಕೆ ನಾನು ಹೋಗಿದ್ದೆ. ಕೆ.ಟಿ. ಗಟ್ಟಿ ಯವರ ಮತ್ತು ನಮ್ಮ ಕುಟುಂಬದ ಪರಿಚಯ ತುಂಬ ಹಳೇಯದು. ನಾನು ಹೋಗುವಾಗಲೇ ಸಭೆ ಯೆಲ್ಲ ಕಿಕ್ಕಿರಿದು ತುಂಬಿತ್ತು. ಕೂರಲು ಜಾಗ ಇರಲಿಲ್ಲ. ನಾನು, ಅವರ ಮಗ ಸತ್ಯಜಿತ್, ಹೊರಗಡೆ ನಿಂತಿದ್ದೆವು. ಆಗ ಇಬ್ಬರು ಹೆಣ್ಣುಮಕ್ಕಳು ಹೊರಗೆ ಬಂದರು. ಸತ್ಯಜಿತ್ ಅವರನ್ನು ಬಳಿಗೆ ಕರೆದು, apart from the fact that u three are ladies there is one more thing common among you' ಅಂತ ಹೇಳಿದರು. ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಏನೂ ಹೊಳೆಯಲಿಲ್ಲ. ಅಮೇಲೆ ಅವರೇ ನಗುತ್ತ malathi meet malathi and malathi ಅಂದು ಬಿಟ್ಟರು. ನಮ್ಮ ಮೂವರ ಹೆಸರು ಮಾಲತಿ ಅಂತ ಕೇಳಿ ಖುಶಿಯಾಯ್ತು. ಅವರಿಬ್ಬರು ಜರ್ನಲಿಸ್ಟ್.
ಕಾಕತಾಳೀಯವೆಂಬಂತೆ ಪುಸ್ತಕದಲ್ಲಿ ಕಂಡು ಬರುವ ಒಂದು ಪಾತ್ರದ ಹೆಸರು ’ಮಾಲತಿ’.

September 5, 2009

ಶಿಕ್ಷಕರ ದಿನಾಚರಣೆ

ತಟ್ಟಂತ ಬಂದ ಕೆಲವು ನೆನಪುಗಳು

ಮೊದಲು ಗುರು ತಾಯಿ. ಅವರಿಗೆ ನಮನ. ಚಂದದ ಭಜನೆ ಹಾಡ್ತಾ, ನಮಗೂ ಸಂಗೀತದ ಬಗ್ಗೆ ಒಲವು ಬರುವಂತೆ ಮಾಡಿದವರು.

ನನ್ನ ಅಜ್ಜ (ತಂದೆಯ ತಂದೆ) ಹಿಂದಿ ಮೇಸ್ಟ್ರು. ಮೂಗಿನ ತುದಿಗೆ ಸಿಟ್ಟು. ಅಮ್ಮನಿಗೆ ಮದುವೆಯಾಗಿ ಆ ಮನೆಗೆ ಹೋದಾಗ 16 ವರ್ಷ ವಯಸ್ಸು. ಅಮ್ಮ ಅವರ ಮಾವನವರಿಗೆ (ನನ್ನ ಅಜ್ಜನಿಗೆ) ತುಂಬಾ ಹೆದರುತ್ತಿದ್ದರಂತೆ. ಅಮ್ಮನಿಗೆ ಅಡಿಗೆ ಎಲ್ಲ ಬರುತ್ತಿರಲಿಲ್ಲ. ಒಂದು ದಿನ ಅಜ್ಜಿಯ ತವರು ಮನೆಯಲ್ಲಿ ಒಂದು ಸಾವು ಆಗಿದ್ದರಿಂದ, ಅಜ್ಜಿ ಅಲ್ಲಿ ಹೋಗದೇ ಬೇರೆ ಉಪಾಯ ಇರಲಿಲ್ಲವಂತೆ. so -ಆ ದಿನ ಅಮ್ಮನ ಅಡಿಗೆ. ಅನ್ನ ಮೆತ್ತಗಾಗಿದೆಯಂತ ತಟ್ಟೆ ಬಿಸಾಡಿದ ರಭಸಕ್ಕೆ ಅಮ್ಮನಿಗೆ ಅದನ್ನು clean ಮಾಡಲಿಕ್ಕೆ 3 ದಿನ ಬೇಕಾಯ್ತಂತೆ. ಆ ಮೇಲೆ ಅನ್ನ ಮಾಡುವುದನ್ನು /ಅಡಿಗೆ ಮಾಡುವುದನ್ನು ಅಜ್ಜನೆ ಹೇಳಿ ಕೊಟ್ಟರಂತೆ. ಹಾಗೇ ಅಜ್ಜಿ ಬರುವ ತನಕ ಅಜ್ಜನದೇ ಅಡಿಗೆಯಂತೆ. Now my mom is a fantastic cook.

ಅಜ್ಜ ಸಂಜೆ ಹೊತ್ತು ಕೆಲವು ಮಕ್ಕಳಿಗೆ free ಯಾಗಿ tutions ಕೊಡುತ್ತಿದ್ದರಂತೆ. ಒಂದು ದಿನ ಒಬ್ಬ ಹುಡುಗ ಹೇಳಿದ್ದನ್ನು ಬರೆದು ತರಲಿಲ್ಲ ಅಂತ ಕಪಾಳಕ್ಕೆ ಹೊಡೆದ ರಭಸಕ್ಕೆ ಅವನು ಜೀವನ್ಮರಣದ ಹೋರಾಟ ನಡೆಸಿದನು. ಎಲ್ಲರ ಪುಣ್ಯಕ್ಕೆ ಆ ಹುಡುಗ ಹುಷಾರಾದ ಮೇಲೆ ಅವನ ತಂದೆ ಅವನನ್ನು ವಾಪಸ್ ಅಜ್ಜನ ಬಳಿಗೇ ಕಲಿಲಿಕ್ಕೆ ಕಳಿಸಿ, ಇನ್ನೂ ಎರಡು ಹೋಡಿಬೇಕಿತ್ತು ಅಂದ್ರಂತೆ. ಈಗ ಹಾಗೆಲ್ಲ ಮಾಡಿದಿದ್ರೆ ಕೇಸ್ ಹಾಕಿ ಜೈಲ್ ಗೇ ಹಾಕ್ತಿದ್ದ್ರು. ಎಲ್ಲರು ಹೇಳುವ ಪ್ರಕಾರ, ಅಜ್ಜನ ಸಿಟ್ಟು ನನಗೇ ಬಳುವಳಿಯಾಗಿ ಬಂದಿದೆಯಂತೆ.

ನಾನು ಬಾಲವಾಡಿಯಲ್ಲಿದ್ದಾಗ ನಡೆದ ಘಟನೆ. ಆಗ ನಾವು ನೆಲದ ಮೇಲೆ ಉದ್ದದ ಮಣೆ ಮೇಲೆ ಕೂರುತ್ತಿದ್ದೆವು. ಒಬ್ಬ ಮೇಸ್ಟ್ರು ಕಪ್ಪು ಬೂಟ್ಸ್ ತೊಟ್ಟುಕೊಂಡು ಆಚೆ ಇಚೆ ಪಾಠ ಮಾಡ್ತಾ ಬೂಟುಗಾಲಿನಿಂದ ಹತ್ತಿರದಲ್ಲಿದ್ದವರನ್ನು ಸುಮ್ಮನೆ ತಿವಿಯುತ್ತ ಹೋಗುತ್ತಿದ್ದರು. ನನಗೂ ಒಂದು ಸಲ ಹಾಗೆ ಮಾಡಿದಾಗ ನನ್ನ ಆಜೋಬಾಗೆ (ಅಜ್ಜ -ತಾಯಿಯ ತಂದೆ)ಹೋಗಿ ಹೇಳಿದೆ. ಅವರು ಶಾಲೆಗೆ ಬಂದು ಆ ಮೇಸ್ಟ್ರರನ್ನು ತರಾಟೆಗೆ ತೆಗೆದುಕೊಂಡ್ರು. ಅದಕ್ಕೆ ಮೇಸ್ಟ್ರು ಅವಳು ಚೆನ್ನಾಗಿ ಓದಲ್ಲ, ಅವಳಿಗೆ ಏನೂ ಓದಕ್ಕೆ ಬರಲ್ಲ ಅಂದು ಬಿಟ್ರು. ಅಜ್ಜ ಶಾಲೆಯ ಹೆಡ್ಮಾಸ್ಟರ್ ಅವರನ್ನೂ ಜತೆಗೆ ಕರೆದುಕೊಂಡು ಬಂದಿದ್ದರು. ಅಜ್ಜ ನನಗೆ ಎಲ್ಲಿ ಪಾಠ ಓದಿ ತೋರಿಸು ಅಂದರು. ನಾನು ಸ್ಪಷ್ಟವಾಗಿ ಓದಿ ತೋರಿಸಿದೆ. ಅಜ್ಜ ಮತ್ತು ಹೆಡ್ಮಾಸ್ಟರ್ ಸೇರಿ ಅವರನ್ನು ಬೈದರು.ಮರುದಿನದಿಂದ ನನಗೆ ಕಾಲಿನಿಂದ ತಿವಿತ ಜಾಸ್ತಿಯಾಯ್ತು - ಮನೆಗೆ ಹೋಗಿ ಚಾಡಿ ಹೇಳ್ತಿಯ ಅಂತ. ಹಾಗೂ ಪರೀಕ್ಷೆಯಲ್ಲಿ ಕಡಿಮೆ ಅಂಕ. ಆಮೇಲೆ ನಾನು ಶಾಲೆಯ ಚಾಡಿ ಯಾವತ್ತೂ ಮನೆಯಲ್ಲಿ ಹೇಳಲಿಲ್ಲ. ಇದರಿಂದ ಒಳ್ಳೆಯ ಪಾಠ ಕಲಿತೆ. :-). ಮರು ವರ್ಷ ನನಗೆ ಬೇರೆ ಶಾಲೆಗೆ ಸೇರಿಸಲಾಯ್ತು. ಈಗಲೂ ಮಿರಿ ಮಿರಿ ಮಿಂಚುವ ಪೊಲಿಶ್ ಮಾಡಿದ ಕಪ್ಪು shoe ನೋಡಿದಾಗ ಆ ಮೇಸ್ಟ್ರ ನೆನಪು ಬರುತ್ತದೆ.

ಮಿಸ್ ಜೆಮ್ಮ:
ನನ್ನ geography ಟೀಚರ್. anglo-Indian . ನಾವು ಅವರನ್ನು -'gem'ma of a person /gemma darling ಅಂತ ಕರೀತಿದ್ವಿ. ಊಟವಾದ ಕೂಡಲೇ ಮೊದಲ ಪೀರೀಯಡ್ ಅವರದ್ದೆ. ನನಗೋ geography ಅಂದ್ರೆ ಬೇಜಾರು. ತೂಕಡಿಕೆ ಬರುತ್ತಿತ್ತು. ಅವರು 'and' (ಅದು anth ತರಹ ಕೇಳಿಸುತ್ತಿತ್ತು) ಅನ್ನುವ ಪದವನ್ನು ತುಂಬ ಬಳಸುತ್ತಿದ್ದರು. ಪ್ರತಿ ಸಲ 'and' ಅನ್ನುವಾಗ ಅದರ ಜತೆ ಉಗುಳು ಎದುರಿಗೆ ಕೂತವರ ಮೇಲೆ ಸಿಂಪಡಿಸುತ್ತಿದರು. ಪಾಠ ಕೇಳಿಸಿಕೊಳ್ಳುವುದನ್ನು ಬಿಟ್ಟು ಅವರು ಎಷ್ಟು ಸಲ and ಅಂದರು ಅನ್ನುವುದನ್ನು ಲೆಕ್ಕ ಮಾಡುತ್ತಿದ್ದೆವು. ನಮ್ಮ ಮನೆಗೆ ಊರಿಂದ ಒಳ್ಳೆಯ ಅಪ್ಪೆಮಿಡಿ ಉಪ್ಪಿನಕಾಯಿ ಬರುತಿತ್ತು. ನಾನು ಮಿಡಿಗಳನ್ನು ತೊಳೆದು ಶಾಲೆಗೆ ತಂದು geography ಪೀರೀಯಡ್ ನಲ್ಲಿ ಫ್ರೆಂಡ್ಸ್ ಜತೆ ಸೇರಿ ತಿನ್ನುತ್ತ ಇದ್ದೆ. ಒಂದು ಸಲ ಮಿಡಿ ತುಂಬ ಖಾರ ಆಗಿ, ತಿಂದ ಕೂಡಲೇ ನೆತ್ತಿಗೆ ಹತ್ತಿ, ಜೀವ ಒಂದು ಸಲ ಮೇಲೆ ಕೆಳಗೆ ಆಯ್ತು.
ಅದಕ್ಕೆ ಮಿಸ್ ಜೆಮ್ಮ : Stand up, malathi. This is what happens when you eat pickles in the class. Go and drink some water' ಅಂತ ಹೇಳಿ ನನಗೆ ಕ್ಲಾಸ್ ನಿಂದ ಹೊರಗೆ ಕಳಿಸಿದ್ರು. ನನಗಂತು ತುಂಬ ನಾಚಿಕೆಯಾಯ್ತು. ಅವರು ಬೈಯ್ದಿದಕ್ಕಲ್ಲ. ನಾವು ಮಾವಿನ ಮಿಡಿ ತಿನ್ನುವುದು ಗೊತ್ತಿದ್ದರೂ ಅವರು ಮೊದಲೆಲ್ಲ ಸುಮ್ಮನಿದ್ದುದಕ್ಕೆ. ಆ ಮೇಲೆ ನಾನು ಅವರ ಕ್ಷಮೆ ಕೇಳಿದೆ. ಅವರ ಕ್ಲಾಸ್ ನಲ್ಲಿ ಎದುರಿಗೆ ಕೂತು ಪಾಠ ಕೇಳ್ತ ಇದ್ದ ಹಾಗೆ, geography ಎಷ್ಟು interesting ಆಗಿದೆ ಅನ್ನಿಸಲಿಕ್ಕೆ ಶುರು ಆಗಿ, ಅದರಲ್ಲಿ ಹೆಚ್ಚು ಅಂಕ ಪಡೀತಾ, ಅವರ favorite student ಆದೆ.

ಮಿಸ್ ರೇಬಲ್ (Miserable)
ಇವರೂ ಆಂಗ್ಲೋ ಇಂಡಿಯನ್ ಟೀಚರ್. ನಮಗೆ ಇಂಗ್ಲಿಷ್ ಕಲಿಸುತ್ತಿದ್ದರು. ತುಂಬ strict. ಪದ್ಯಗಳ ಬಾಯಿಪಾಠ ಮಾತ್ರವಲ್ಲ ಅದರ ಉಚ್ಚಾರ ಸರಿ ಇಲ್ಲದಿದ್ದರೂ ಫೂಟ್ ರೂಲರ (scale) ನಿಂದ ಬೆರಳ ಗಂಟಿನ ಮೇಲೆ ಹೊಡೆಯುತ್ತಿದ್ದರು. ನಾವು ಅವರನ್ನು miserable ಅಂತ ಕರೆಯುತ್ತ ಇದ್ದ್ವಿ. ಮತ್ತು ನಾವು ನಿಂತುಕೊಂದು ಎರಡು ಅಂಗೈಯನ್ನು ಒಂದರೊಳಗೆ ಒಂದು ಇಟ್ಟು, ಕಾಲಿನ ಹಿಂಬಾಗ ಮೇಲೆ balance ಮಾಡಿ ಹಿಂದೆ-ಮುಂದೆ ಓಲಾಡ್ತಾ ಲಯಬದ್ದವಾಗಿ ಹೇಳಬೇಕಿತ್ತು. ಅವರ ಈ ಪರಿಪಾಠದಿಂದ ನನಗೆ ಈಗಲೂ ನನ್ನ ಚಿಕ್ಕಂದಿನ ಪದ್ಯಗಳೆಲ್ಲ ನೆನಪಿನಲ್ಲಿದ್ದಾವೆ.the boy stood on the burning deck (casabianca-by dorothea hemans). the daffodils, the solitary reaper (william wordsworth), An elegy on the death of a mad dog (Anon), where the mind is without fear (Guru Rabindranath Tagore), ಇವೇ ಮುಂತಾದವುಗಳು.

ಪದ್ಮಿನಿ ಟೀಚರ್
ನಮಗೆ ವಿಜ್ಞಾನ ಕಲಿಸುತ್ತ ಇದ್ದರು. ಮಲಯಾಳಿ. science ನಲ್ಲಿ ನನಗೆ ಯಾವಾಗಲೂ ಹೆಚ್ಚು ಅಂಕ. ಅದಕ್ಕೆ ಪಾಠದ ಮಧ್ಯೆ ಯೆಸ್ ಮಾಲದಿ, ರೈಟ್ ನೋ ಮಾಲದಿ ಅನ್ನುವ ಅಭ್ಯಾಸ ಇತ್ತು ಅವರಿಗೆ.

ಜೋಗ್ಲೇಕರ್ ಸರ್
ಮರಾಠಿ ಟೀಚರ್. ಅವರು ವಿಗ್ (wig) ಧರಿಸುತ್ತಿದ್ದರು. ಅವರನ್ನು ನಾವು ವಿಗ್ಲೇಕರ್ ಸರ್ ಅಂತಿದ್ವಿ.ಪಾಠ ಮಾತ್ರ ತುಂಬ ಚೆನ್ನಾಗಿ ಹೇಳಿ ಕೊಡ್ತಾ ಇದ್ದರು. ಪಠ್ಯೇತರ ವಿಷಯಗಳನ್ನೂ ರಸವತ್ತಾಗಿ, actions ನಿಂದ ಹೇಳಿಕೊಡ್ತಿದ್ದರು. ಅವರ ಪೀರಿಯಡ್ ಮುಗಿದಿದ್ದೆ ತಿಳಿಯುತ್ತಿರಲಿಲ್ಲ. ಅವರಿಂದ ಒಳ್ಳೆಯ (classic)ಮರಾಠಿ ಪುಸ್ತಕಗಳ , ಬರಹಗಾರರ ಪರಿಚಯ ಆಯ್ತು.

ಸಿಸ್ಟರ್ ರೊಸ್
ನನ್ನ ಇತಿಹಾಸದ ಟೀಚರ್. ಇತಿಹಾಸದಲ್ಲಿ interest ಬರಲು ಇವರು ಕಾರಣರು. ತುಂಬಾ ಚೆನ್ನಾಗಿ ಪಾಠಗಳನ್ನು ವಿವರಿಸುತ್ತ ಇದ್ದರು. ವಾರದ ಕೊನೆಯಲ್ಲಿ ಯಾವಾಗಲೂ ಪರೀಕ್ಷೆ. ಹೆಚ್ಚು ಅಂಕ ಗಳಿಸಿದವರಿಗೆ ಒಂದು ಪೆನ್ ಕೊಡುತ್ತ ಇದ್ದರು. ಪೆನ್ನಿಗೆ ಪೈಪೋಟಿ ನಡೆಸಿ ಎಲ್ಲರು ಚೆನ್ನಾಗಿ ಓದುತ್ತಿದ್ದೆವು. ನನಗೆ ಯಾವತ್ತು ಪೆನ್ ಸಿಗಲಿಲ್ಲ. ಆದರೇ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಶಾಲೆಗೇ social Studies ನಲ್ಲಿ ನನಗೆ ಹೆಚ್ಚಿನ ಅಂಕ. ಅವರು ನನಗೆ ಗಟ್ಟಿಯಾಗಿ ಅಪ್ಪಿಕೊಂಡಿದ್ದರು. ಅವರು christian sister uniform ಹಾಕುತ್ತಿದ್ದರು. ಅಂದರೆ ತಲೆಗೂ ಕೂದಲು ಹೊರಗೆ ಬರದ ಹಾಗೆ ಕವರ್ ಮಾಡ್ತಿದ್ದರು. ಕುತ್ತಿಗೆಗೆ ಚೈನ್ ನಲ್ಲಿದ್ದ ಶಿಲುಬೆ ಅಪ್ಪಿಕೊಂಡಾಗ ನನಗೆ ಒತ್ತಿದ್ದು, ಅವರು ಸುರುಳಿ ಸುತ್ತಿಕೊಂಡಿದ್ದ ಉದ್ದ ಜಡೆ ಕಾಣಿಸಿ ಅಬ್ಬ ಅನಿಸಿದ್ದು ಮತ್ತು ಅವರು ಬಳಸಿದ lifeboy ಸಾಬೂನಿನ ಪರಿಮಳ ಇನ್ನೂ ನನಗೆ ನೆನಪಿನಲ್ಲಿದೆ.

ಎಲ್ಲ ಗುರುಗಳಿಗೂ ನನ್ನ ನಮನಗಳು. ಬದುಕಿನಲ್ಲಿ ಶ್ರೇಯಸ್ಸಿಗೆ , ಪ್ರಗತಿಗೆ ಇವರೆ ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಕಾರಣಕರ್ತರು.

September 4, 2009

Prayer

[By FR. Anthony de Mello SJ, a Jesuit Priest]


The Master never ceased to attack the notions about God that people entertain.

“If your God comes to your rescue and gets you out of trouble,” he would say,”it is time you started searching for the true God.”

When asked to elaborate, this is the story he told:

A man left a brand new bicycle unattended at the marketplace while he went about shopping.

He only remembered the bicycle the following day – and rushed to the marketplace expecting it would have been stolen. The bicycle was exactly where he had left it.

Overwhelmed with joy, he rushed to a nearby temple to thank God for having kept his bicycle safe – only to find, when he got out of the temple, that the bicycle was gone!

:-) what do u think about this?

September 3, 2009

"If tomorrow starts without me"

the following poem was forwarded to me. it is so touching. thought will share with you
malathi S

By David Romano
Posted in memory of Anthony "Tony" Elliot Fabri
August 26, 1982 - June 22, 2000

"If tomorrow starts without me, and I'm not there to see,
If the sun should rise and find your eyes all filledwith tears for me;
I wish so much you wouldn't cry the way you did today,
While thinking of the many things, we didn't get to say.I know how much you love me, As much as I love you,
And each time that you think of me, I know you'll miss me too; But when tomorrow starts without me, please try to understand,
That an angel came and called my name, and took me by the hand,
And said my place was ready, in heaven far above,
And that I'd have to leave behind all those I dearly love.

But as I turned to walk away, A tear fell from my eye,
For all my life, I'd always thought, I didn't want to die.

I had so much to live for, So much left yet to do,
It seemed almost impossible, that I was leaving you.

I thought of all the yesterdays, the good ones and the bad,
I thought of all that we shared, and all the fun we had.
If I could relive yesterday, just even for a while,
I'd say good-bye and kiss you and may be see you smile.
But then I fully realized, that this could never be,
For emptiness and memories, would take the place of me.

And when I thought of worldly things, I might miss some tomorrow,
I thought of you, and when I did, my heart was filled with sorrow.
But when I walked through heaven's gates, I felt so much at home.When God looked down and smiled at me, From His great golden throne,
He said, "This is eternity, and all I've promised you."
Today your life on earth is past, but here lifestarts anew.
I promise no tomorrow, but today will always last,
And since each day is the same way, there's no longing for the past.

So when tomorrow starts without me, don't think we're far apart,
For every time you think of me, I'm right here, in your heart!

September 1, 2009

On demise of a dear friend


I still remember your eyes when they beseeched me ‘no, don’t leave me’. I literally pulled my self away from that window, looking at you till my car turned the corner. Then your image receding not only because we moved further away but because the tears in my eyes blurred your image. Little did I realize that in just a few hours time you would leave me, never to come back again. Never. So final….

Remembered all the pranks we played together, the movies that made us laugh and cry together. The ‘not-so-nice’ jokes…those attempts at make- up and silly dresses we tried. Translating advertisements into our mother tongue and laughing till I our sides ached. After watching gone with the wind we used to try our scarlett-o-Hara’s (Vivienne Leigh) dialogues.

I sometimes wonder….would it have been possible you would be alive if if if if only I had stayed back with u that day??? Tell me dear departed friend. But why my dearest friend such a drastic step? You consumed a full strip of sleeping tablets and then just to be sure you die you hanged yourself……why?? Others in the house did not know it when u took the long heavy stool from the kitchen to your bedroom, and your husband was out of town.

Did the loss of your only child pain you so much. I too miss Aabhalika. I remember the dreams you had for her. You could have had another. It definitely was not your fault that she had a congenital heart disease and it was diagnosed late. I know people told you that you gave importance to career over your motherly duties. You knew it was not true. People are just jealous about successful people. I had reassured you about that. Then what happened? Did somebody say something to you that night after we left?

In your last moments…(they said) you had kept strewn around you all the things/gifts I gave you over the years. Did it give you some amount of comfort? They would not let me see you cos I was pregnant with my first baby. You sometimes scolded me like you were my mother and sometime I too became your mother naa?? Remember the tricks we would conjure to drive our respective husbands crazy

I remember you….shaking your curly hairs, dimpling into a smile and waving your fingers at me…’you are going to be fat’. You used to be envious of my long straight silky hair. My girls are now 19 and 17 years old, and attend college. How soon time flies.

Its 20 years since I lost you. I miss you so much. Your husband has remarried and has children. Does he still remember you?? I don’t know. We do meet and talk but we are very like strangers. His wife is sweet but I could not get very cozy with her. His children are 17 and 15 now

Was your ego too much that u had to go away to prove some point? It is actually the people who are left behind who suffer do you know that??Anyways where ever you are, I am sure you know I think of you on your birthday and on mine. Also whenever I am happy and when I am sad.Its been so long..but things are still fresh. Sometimes I feel so lonely when I have so many things to tell and not a soul as dear as you, to listen to me…

What was this rare bond we shared. We knew each other only for two years but I have memories of our friendship that will last me a life time. I share our escapades with both my daughters and make them laugh.

Wish life had 'undo' button.....

HAPPY BIRTHDAY DEAREST