ಚಿಕ್ಕಂದಿನಿಂದ ಅಂದರೆ ನಾನು ಒಂದು ವರ್ಷದವಳಾದಾಗಿನಿಂದ ನನಗೆ ಹಿಂದಿ ಹಾಡುಗಳನ್ನು ಕೇಳುವುದು ಅಭ್ಯಾಸ. ಅಮ್ಮ ಬೆಳಿಗ್ಗೆ ೫.೦೦ ಗಂಟೆಗೆ ಪಂಪ್ ಸ್ಟವ್ ನಲ್ಲಿ ಚಹಾ ಮಾಡ್ತಾ, ರೇಡಿಯೋ ಟ್ಯೂನ್ ಮಾಡ್ತಾ ಇದ್ದರು. ರೇಡಿಯೋದ ಆ ದಿನದ ಕಾರ್ಯಕ್ರಮ ಶುರು ಆಗುವ ಮೊದಲಿನ ಆ ಸಂಗೀತ ಇನ್ನೂ ಕಿವಿಯಲ್ಲಿ ಗುನುಗುತ್ತಿದೆ.
ಇನ್ನೊಂದು ನೆನಪು ’ಬಿನಾಕಾ ಗೀತ್ ಮಾಲಾ’ ದ ಅಮೀನ್ ಸಿಯಾನಿ’ ಪ್ಯಾರೆ ಬೆಹೆನೋ ಔರ್ ಭಾಯಿಯೋ”ಅಥವ’ಆವಾಜ್ ಕೆ ದುನಿಯಾ ಕೆ ದೋಸ್ತೋಂ, ಆಪಕೋ ಅಮೀನ್ ಸಿಯಾನಿ ಕಾ ಪ್ಯಾರ್ ಭರಾ ನಮಶ್ಕಾರ” ಕೇಳಿದ ಕೋಡಲೆ ಮೈ ಮೇಲಿನ ರೋಮ ನಿಮಿರಿ ನಿಲ್ಲುತ್ತಿದ್ದವು. ಅಷ್ಟು ಮಾಂತ್ರಿಕ ಶಕ್ತಿಯಿತ್ತು ಅವರ ದನಿಗೆ.
ಬುಧವಾರ ರಾತ್ರಿ 8.00 ರಿಂದ 9.00 ಜನ ಜೀವನ ಎಲ್ಲ ತಟಸ್ಥ. ಮುಂಬೈನಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲೇ. ರಿಕ್ಷಾ, taxi ನವರು ಸಹ ರೇಡಿಯೋ ಸೀಲೋನ್ ಗೆ ಟ್ಯೂನ್ ಮಾಡ್ತಿದ್ದರು. ಮಧ್ಯ ಬರುವ binaca top toothpaste ನ advertisement ಹಾಡನ್ನು ನಾವು ಅದರ ಜತೆಗೆ ಗುನುಗುನಿಸುತ್ತಿದ್ದೆವು.
ಒಂದು ಸಲ ಹುಬ್ಬಳ್ಳಿಗೆ ಹೋಗಿದ್ದೆವು, ಮದುವೆಯಲ್ಲಿ ಪಾಲ್ಗೊಳ್ಳಲು. ದೊಡ್ಡಮ್ಮನ ಮನೆಗೆ. ಮನೆ ಚಿಕ್ಕದ್ದು. ರಾತ್ರಿ ೭.೦೦ ರ ಸುಮಾರಿಗೆ ಕರೆಂಟ್ ಹೋಯ್ತು. ನಾವೆಲ್ಲ ಮಲಗಿದ್ದೆವು. ದೊಡ್ಡಮ್ಮನ ಕಿರಿ ಮಗ ಮಂಚದ ಕೆಳಗಡೆ ಮಲಗಿ, ರಾತ್ರಿ ಬಿನಾಕ ಗೀತ್ ಮಾಲಾ ಹಾಕಿ, ನಾವೆಲ್ಲರೂ ತನ್ಮಯರಾಗಿ ಕೆಳಿದ್ದ ನೆನಪು ಇನ್ನೂ ಹಸಿರಾಗಿದೆ. ಸೆಲ್ ನಿಂದ ನಡೆಯುವ ರೇಡಿಯೋ ಆದ್ದರಿಂದ ಕರೆಂಟ್ ಇಲ್ಲದಾಗಿಯೂ ಕೇಳಬಹುದಿತ್ತು.
ಅಮೇಲೆ ಅದು ’ಸಿಬಾಕಾ’ ಗೀತಮಾಲಾ ಆಗಿ ಪರಿವರ್ತನೆ ಗೊಂಡಾಗ ಏನೋ ಇರುಸುಮುರುಸು. ಆದರೂ ಅಮೀನ್ ಸಯಾನಿ ಯವರು ಸಿರ್ಫ್ ನಾಮ್ ಬದಲಾ ಹೈ ಅಂದಾಗ ಸಮಾಧಾನ. ಮೊಟ್ಟಮೊದಲು ಅರ್ಧ ಗಂಟೆ ಇದ್ದ ಬಿನಾಕಾ ಗೀತ್ ಮಾಲಾ ಅಭಿಮಾನಿ ಕೇಳುಗರ ಒತ್ತಾಯದ ಮೇರೆಗೆ ಒಂದು ಗಂಟೆ ನಡೆಸಲಾಯಿತು. ಕಾರ್ಯಕ್ರಮ ಕೇಳುಗರ ಪತ್ರ ಸೆಕ್ಷನ್ ನಲ್ಲಂತೂ ಕೇಳುಗರ ಪತ್ರದ ಮಹಾಪೂರ.ಸೈನಿಕರು ಬರೆದ ಪತ್ರಗಳನ್ನು ಓದಿದಾಗ ಕಲ್ಲು ಹೃದಯ ಕರಗಬೇಕು ಹಾಗಿರುತ್ತಿತ್ತು ಪತ್ರದ ಒಕ್ಕಣೆ. ಹೈ ಸ್ಕೂಲ್ ಗೆ ಬಂದಾಗ ನಾವು ಮರುದಿನ ಶಾಲೆಯಲ್ಲಿ ಯಾವ ಯಾವ ಹಾಡು ಬಂತು ಅಂತ ಅದರ ಬಗ್ಗೆ ಡಿಸ್ಕಸ್ ಮಾಡ್ತಿದ್ವಿ. that was the -in thing- ಆವಾಗ.
ಸಿಬಾಕ ಗೀತ ಮಾಲದಿಂದ ಅದು ಕೋಲ್ಗೆಟ್ - ಸಿಬಾಕಾ ಗೀತ ಮಾಲಾ ಆಗಿ ಪರಿವರ್ತನೆಗೊಂಡು ಅದನ್ನು ವಿವಿಧ ಭಾರತಿಯಲ್ಲಿ ಮುನ್ನಡೆಸಲಾಯಿತು.ಆಮೇಲಿನ ದಿನಗಳಲ್ಲಿ ಹವಾಮಹಲ್ ಬಿಟ್ಟರೆ ಈ ಪರಿಯ ಮನ್ನಣೆ ಸಿಕ್ಕಿದ ಯಾವುದೇ ಕಾರ್ಯಕ್ರಮದ ಬಗ್ಗೆ ಕೇಳಿಯೂ ಇಲ್ಲ.
ಸುಮಾರು 1983 ನಲ್ಲಿ ನಮ್ಮ ಮನೆಗೆ ಮೊದಲ ಟಿ.ವಿ.- ಕಪ್ಪು ಬಿಳುಪು -ಬಂತು. ರೇಡಿಯೋ ಕಡೆ ಗಮನ ಕಡಿಮೆಯಾಗಿ, ಕ್ರಮೇಣ ನಿಂತು ಹೋಗಿತ್ತು.ಇತ್ತೀಚಿಗೆ ಬೆಂಗಳೂರಿಗೆ ಬಂದ ಮೇಲೆ ರೇಡಿಯೋ f.M. ಶುರು ಆದ ಮೇಲೆ ಪುನಃ ಹಾಡು ಕೇಳುವ ಗೀಳು ಹತ್ತಿ ಬಿಟ್ಟಿದೆ.ಈಗ ನಮ್ಮ ಮನೆಯಲ್ಲಿ/ಕಛೇರಿಯಲ್ಲಿ ದಿನದ 24 ಗಂಟೆಯೂ world space ಚಾಲೂ ಇರುತ್ತದೆ.
ಅಮೀನ್ ಸಯಾನಿಯವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಾಗಲಂತೂ ತುಂಬಾ ಖುಶಿ.
ಅಮೀನ್ ಸಯಾನಿ ನಂತರ ಒಳ್ಳೆ ದನಿ ಇದ್ದದ್ದು ಹರೀಶ್ ಭಿಮಾನಿ ಮತ್ತು ಅಮಿತಾಭ್ ಬಚ್ಚನ್, ಆದರೂ ಅಮೀನ್ ಸಯಾನಿ ದನಿ ಬಗ್ಗೆ undying loyalty ಈಗಲೂ
ಮೊನ್ನೆ ಸೊಪ್ಪು ಕ್ಲೀನ್ ಮಾಡ್ತ ಸಿಕ್ಕ ಹಳೆಯ ವಿಜಯಕರ್ನಾಟಕ ಪತ್ರಿಕೆಯಲ್ಲಿ ವಿಶ್ವೇಶರ್ ಭಟ್ ನವರು ಅಮೀನ್ ಸಯಾನಿಯವರ ಬಗ್ಗೆ ಬರೆದಿದ್ದನ್ನು ಓದಿ, ನನ್ನದಿಷ್ಟು ನೆನೆಪನ್ನು ಬ್ಲಾಗಿಸಿದೆ.
’ಅಮೀನ್ ಸಯಾನಿಜೀ ಆಪ್ಕೋ ಮಾಲತಿ ಕಾ ಪ್ಯಾರ್ ಭರಾ ನಮಶ್ಕಾರ್’
ಮಾಲತಿ,
ReplyDeleteನಾನು ಸಹ ರೇಡಿಯೊ ಅಭಿಮಾನಿ ಆಗಿದ್ದೆ...ಓದಬೇಕಾದ್ರೆ ಸಣ್ಣ ಧ್ವನಿಯಲ್ಲಿ ರೇಡಿಯೊ ಕೇಳುತ್ತಿದ್ದೆ ಅದ್ರೆ ಕನ್ನಡ ಹಾಡುಗಳು ಜಾಸ್ತಿ...ಮೆಚ್ಚಿನ ಚಿತ್ರಗೇತಗಳು....ಹಹಹಾ...ಎನು ಮಜಾ ಇತ್ತು ಆಗ....ಎಲ್ಲ ನೆನಪಿಸಿದಕ್ಕೆ ಅಭಿನಂದನೆಗಳು...
ಮಹೇಶ್.!
ಅಹಾ! ತುಂಬಾ ಪ್ರಿಯವಾದ ವಿಷಯ ಬರೆದಿದ್ದೀರಿ!! 'ಬಿನಾಕಾ ಗೀತ್ ಮಾಲಾ'/'ಸಿಬಾಕಾ ಗೀತ್ ಮಾಲಾ' ಮರೆಯಲು ಸಾಧ್ಯವಾ? ಒಂದು ರೀತಿಯಲ್ಲಿ 'personality defining' ಕಾರ್ಯಕ್ರಮ ಅದು! ಅದನ್ನು ಕೇಳುತ್ತಾ ಬೆಳೆದವರು ಹಳೇ ಹಿಂದಿ ಹಾಡುಗಳ ಹುಚ್ಚನ್ನು ಜೀವನ ಪರ್ಯಂತ ಅನುಭವಿಸುತ್ತಾರೆ ಅನ್ನೋದ್ರಲ್ಲಿ ಸಂಶಯವೆೇ ಇಲ್ಲ.
ReplyDeleteನಾನು ಅಮೇರಿಕಕ್ಕೆ ಬಂದಾಗಿನಿಂದ ಇವತ್ತಿನವರೆಗೂ ಆಗಾಗ ಹೇಳೋ ಮಾತು ಅಂದ್ರೆ, "One of the things I miss the most about India is Ceylon" :)
ನಾನು B.E. ಓದಲು ಮೈಸೂರು ಬಿಟ್ಟು ಹೊರಟಾಗ ನಮ್ಮ ತಂದೆಯವರನ್ನು ನಾನು ತುಂಬಾ ಕೇಳ್ಕೊಂಡಿದ್ದು ಅಂದ್ರೆ, ನೀವು ಬೇರೇನೂ ಕೊಡದಿದ್ರೂ ಪರವಾಗಿಲ್ಲ, ನಂಗೆ ನಿಮ್ಮ ಟ್ರಾನ್ಸಿಸ್ಟರ್ ರೇಡಿಯೋ ಕೊಡಿ, ಇಲ್ಲ ಅಂದ್ರೆ ನಾನು ಓದಲಾರೆ! ;) And it became my most precious appendage during my college days!
ರೇಡಿಯೋಗೆ ಅಂಟಿಕೊಂಡೇ ಇದ್ದು ಆಸ್ವಾದಿಸುತ್ತಿದ್ದ ಇನ್ನೂ ಕೆಲವು ಕಾರ್ಯಕ್ರಮಗಳು ಅಂದ್ರೆ: "ಭೂಲೆ ಬಿಸರೆ ಗೀತ್", "ಸಂಗೀತ್ ಸರಿತಾ", "ಫೌಜಿ ಭಾಯಿಯೋಂ ಕೆೇ ಲಿಯೇ ಜಯಮಾಲಾ", "ಛಾಯಾಗೀತ್", ಇತ್ಯಾದಿ. All India Radio ದಲ್ಲಿ ಉರ್ದು ಸರ್ವೀಸ್ ನವರು ತುಂಬಾ ಒಳ್ಳೇ ಹಾಡುಗಳನ್ನು ಹಾಕ್ತಿದ್ರು. I think there used to be a very nice program at 10 PM every night.
And another famous personality was "Laddu Lal Meena" :-)
Good old days, ಅಲ್ವ!? Thanks for writing about it. :-)
ನೆನಪಿನ ಸಂಚಯದ ಹಿಂದಿನ ಪುಟಗಳನ್ನು ಈ ದಿನ ಬಿಡುವಲ್ಲಿ ಹಾಗೆ ನೋಡಿದೆ, ವಾಟ್ a ಸರ್ಪ್ರೈಸ್!! ನನಗೂ ಬಹಳ ಪ್ರಾಯವಾಗಿದ್ದ ಅಮೀನ್ ಸಯಾನಿ ವಾಯ್ಸ್ ನ ಒಂದು ಯುಟ್ಯೂಬ್ ಲಿನ್ಕಿತ್ತು
ReplyDeleteI remember the nostalgic days of college life when Sundays we used to carry the radio to the Cricket ground to listen to Radio Ceylone. Yes, we used to bet on Binaca geet Maala probable No.1.
Thanks fpr the link, I could just move around those links to listen to some old melodies.
azad (jalanayana)
ಅಮೀನ್ ಸಯಾನಿ ಬಿನಾಕಾ ಗೀತಮಾಲಾದಿಂದ ಮನೆಮಾತಾದರು.
ReplyDeleteರೇಡಿಯೋ ಸಿಲೋನ್ ಇದೊಂದು ಕಾರ್ಯಕ್ರಮದಿಂದ ಭಾರತದಲ್ಲೆಲ್ಲ ಪ್ರಸಿದ್ಧಿಗಳಿಸಿದ್ದಕ್ಕೆ ಮುಖ್ಯ ಕಾರಣ ಆಗಿನ ಕಾಲದಲ್ಲಿ ಸರಕಾರೀ ಆಕಾಶವಾಣಿಯ ಏಕಸ್ವಾಮ್ಯತ್ವ (monopoly ).
ಈಗ ಭಾರತದಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ FM ಚಾನೆಲ್ ಗಳು, ಟಿವಿ ಚಾನೆಲ್ ಗಳು ಇರುವುದರಿಂದ ರೇಡಿಯೋ ಶ್ರೀಲಂಕಾ ಕೇಳುವವರಿಲ್ಲ.
ಈ ದ್ರಷ್ಟಿಯಿಂದ ನೋಡಿದರೆ ಸ್ಪರ್ಧೆ ಒಳ್ಳೆಯದೇ!
ಆದರೆ ಸಂಚಿಗೆ ಪ್ರತಿಸ್ಪರ್ಧಿಗಳು...?