ನನ್ನ ಬ್ಲಾಗ್ visitors ಸಂಖ್ಯೆ 3 ಲಕ್ಷ ದಾಟಿದೆ. Thank You 🙏🙏 ಅದಕ್ಕೆ ಒಂದು ಗೋದಿಹಿಟ್ಟು + ಖರ್ಜೂರ ಕೇಕ್ ಮಾಡಿ ಅದಕ್ಕೆ ನೇರಳೆ ಹಣ್ಣಿನ ಕ್ರೀಮ್ ಹಾಕಿ decorate ಮಾಡಿದೆ ❤️
ಈಗ ಒಂದು ನನ್ನ fav ರೆಸಿಪಿ. ಅಮ್ಮ ಇದನ್ನು ಮಾಡ್ತಿದ್ರು. ಸುಮಾರು 25 ವರ್ಷಗಳ ನಂತರ ಇದನ್ನು ಮಾಡಿ ಸವಿದೆ. 🙏🙏
..ಕೆಸುವಿನ ಗೆಡ್ಡೆಯ dry item..
ಕೆಸುವಿನ ಗೆಡ್ಡೆಗಳನ್ನು ಸ್ವಲ್ಪ ಉಪ್ಪು ಸೇರಿಸಿ ಕುಕ್ಕರ್ ನಲ್ಲಿ ಮೂರು ಸೀಟಿ ಬೇಯಿಸಿಕೊಳ್ಳಿ. ಕಾಲು ಚಮಚೆಯಷ್ಟು ಸಾಸಿವೆ, ಒಂದು ತುಂಡು ಹಿಂಗು ಪುಡಿಮಾಡಿಟ್ಟುಕೊಳ್ಳಿ.
ಸ್ವಲ್ಪ ಹೆಚ್ಛೇ ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ ಹಾಕಿ ಸಿಡಿದ ಮೇಲೆ ಮಾಡಿಟ್ಟ ಪುಡಿ, ಖಾರದ ಪುಡಿ, ಅರಿಶಿನ ಹಾಕಿ ಕೈಯಾಡಿಸಿ. ಬೆಂದ ಸಿಪ್ಪೆ ಬೇರ್ಪಡಿಸಿ ಕಟ್ ಮಾಡಿದ ಗೆಡ್ಡೆಗಳನ್ನು ಬೆರೆಸಿ. ಸ್ವಲ್ಪ ಉಪ್ಪು ,ಚಿಟಿಕೆ ಸಕ್ಕರೆ, ಕರಿಬೇವು ಹಾಕಿ ಕ್ಷಣ ಹೊತ್ತು ಕೈಯಾಡಿಸಿ. ಎರಡು ನಿಮಿಷ ಮುಚ್ಚಿಡಿ. ಆಮೇಲೆ ಕಾಲು ಟಿ ಸ್ಪೂನ್ ನಷ್ಟು ಅಕ್ಕಿ ಹುಡಿ ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿದ್ದಲ್ಲಿ ಸ್ವಲ್ಪ ಹುಣಸೆ ರಸ ಬೆರೆಸಬಹುದು. ನನಗಿಷ್ಟ ಈ side dish.. 👍
ಕೆಲವರಿಗೆ ಗಂಟಲಲ್ಲಿ ಕೆರೆತ ಆಗಬಹುದು. ಹೆದರಬೇಕಿಲ್ಲ ಮಜ್ಜಿಗೆ ಕುಡಿಯಿರಿ/ಮೊಸರು ತಿನ್ನಿ. recipe ರೆಡಿ ಮಾಡುವಾಗ ಹುಣಸೆ ರಸ ಹಾಕಿದ್ರೂ ನಡೆಯುತ್ತೆ.
#stuffsthatkonkaniseat 😁😁❤️
eat at your own risk*
#ಅನ್ನದಾತಾಸುಖೀಭವ


Congratulations Malathi Akka
ReplyDeleteThank you🙏🙏
Delete