July 24, 2026

4 ಲಕ್ಷ ವಿಸಿಟರ್ಸ್ 🙏

 ಒಂದೇ ತಿಂಗಳಲ್ಲಿ 1 ಲಕ್ಷ ಜನರು ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಾರೆ.  ತುಂಬಾ ತುಂಬಾ ಧನ್ಯವಾದಗಳು ಎಲ್ಲರಿಗೂ. ಏನು ಓದುತ್ತಾರೆ ಎಂಬ ಕೂತೂಹಲ  ನನಗೆ.

ಮೊನ್ನೆ ರಾತ್ರಿ ಎಚ್ಚರವಾದಾಗ, ನಾಳೆ ಇಡ್ಲಿ ಅದರ ಜತೆಗೆ ಒಂದು ಹೊಸ ಪ್ರಯೋಗ/experiment ನ ವಡೆ ಮಾಡಿದ್ರೆ ಹೇಗೆ ಅಂತ ರಾರಿ ಎರಡು ಗಂಟೆಗೆ ಎದ್ದು ಉದ್ದಿನಬೇಳೆ ನೆನೆಯಲು ಹಾಕಿದೆ.

ಕೋವಿಡ್ ಸಮಯದ ಲಾಕ್ ಡೌನ್ ನೆನಪಾಯಿತು. ಎಷ್ಟೊಂದು ಜನರು innovative ವಿಡಿಯೋ ಗಳು ಹಾಕುತ್ತಿದ್ದರು. ಅದರಲ್ಲಿ ತಿಂಡಿದೆ ಜಾಸ್ತಿ. ಬೇರೆ ಬೇರೆ ನಮೂನೆ ವಡೆಗಳನ್ನು ಜನರು ಮಾಡಿದ್ದೆ ಮಾಡಿದ್ದು...🙂.  ಈಗ ನಮ್ಮ ಮನೆಯ ಎದುರು ರಸ್ತೆ, ಹಾಗೂ ಓವರ್ bridge, ಮೆಟ್ರೋ ರೈಲು ಅಂತ ರಾತ್ರಿ ಇಡೀ ಸದ್ದು ಗದ್ದಲ. ಅದು ಹೇಗೆ ಲಾಕ್ ಡೌನ್ ಸಮಯದಲ್ಲಿ ಎಲ್ಲ ಶಾಂತ ವಾಗಿತ್ತು ಅಂತ ಆಶ್ಚರ್ಯ. ನಾನಂತು ಬೇಗ ಮನೆ ಕೆಲಸ, ಅಡುಗೆ ಕೆಲಸ ಮುಗಿಸಿ, ಕುರುಕಲು ತಿಂಡಿ ಮೇಲ್ತ ಪುಸ್ತಕ ಓದುತ್ತಿದ್ದೆ, ಗಾರ್ಡನ್ ಸರಿ ಮಾಡುತ್ತಿದ್ದೆ... 

ಸುಮ್ನೆ.....as usual

ನಾನು ಮಾಡಿದ್ದ  ಇಡ್ಲಿ ವಡೆ...ಅದನ್ನು you tube ನಲ್ಲಿ ಹಾಕಿದಾಗ AI ನಿನಗೂ ಈ video ದಲ್ಲಿ ಅಳವಡಿಸಲಾ ಅಂತ ಕೇಳಿತು. ತಮಾಷೆ ಗೆ ಹೂಂ ಅಂತ , ನನ್ನದೊಂದು selfie ಕೊಟ್ಟೆ...ನೀವೂ ನೋಡಿ....ನನ್ನ family ಗ್ರೂಪ್ ಎಂಜಾಯ್ ಮಾಡಿದ್ರು...

ಇಡ್ಲಿ ವಡಾ ಚಟ್ನಿ ಸಾಂಬಾರು

ಮತ್ತು ವಡೆ ವಿಷಯ ಮಕ್ಕಳು ತುಂಬಾsss ಹೋಗಳಿದ್ರು. ಮಾಲವಿಕಾ ಅಂತೂ ಅಮ್ಮ ಹೋಟಲ್ ಶುರು ಮಾಡಿದಾಗ ಈ ವಡೆ ಮಾಡುವಾ ಅಂದ್ಲು...ಅದಕ್ಕೆ recipe ಶೇರ್ ಮಾಡಲ್ಲ 😁❤️🙏❤️👍









2 comments:

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

ನಿಮ್ಮ ಈ ಕನ್ನಡ ಪ್ರೀತಿಗೆ ನನ್ನದೊಂದು 🙏 ಸಲಾಮ್‌, ಕನ್ನಡದ ಮೇಲಿನ ಈ ಪ್ರೀತಿ ಮುಂದುವರಿಯಲಿ..... ಹಾಗೆಯೇ ನನ್ನ ಪುಟ್ಟ ಕನ್ನಡದ ತಾಣಕ್ಕೂ ಒಮ್ಮೇ ಬೇಟಿ ನೀಡಿ.... (https://spn3187.blogspot.com)

nenapina sanchy inda said...

ಧನ್ಯವಾದಗಳು ಶಿವಕುಮಾರ್ ಅವರೇ! ಖಂಡಿತ ನಿಮ್ಮ ಬ್ಲಾಗ್ ಗೆ ಭೇಟಿ ನೀಡುವೆ 🙏🙏👍