ಲೋಹಾಘಟ್ ನಿಂದ ವಾಪಸ್ ಲಕ್ನೋ ಗೆ ಬರುವಾಗ ಪುನಃ ತನಕ್ಪುರ್ ಮಾರ್ಗವಾಗಿ ಬರಬೇಕಿತ್ತು. ನಮ್ಮ ಬಳಿ ಸ್ವಲ್ಪ ಸಮಯ ಇತ್ತು. ಸಂಜೆ 4 ಗಂಟೆಗೆ ಹೋಟಲ್ ಸಿದ್ಧಾರ್ಥ್ ತಲುಪಿದ್ವಿ. ನಾನು ಆನ್ ಲೈನ್ ನಲ್ಲಿ ರೂಮ್ ಬುಕ್ ಮಾಡಿದ್ದೆ. ಹೊರಗಿನಿಂದ ನೋಡಲು ಹೋಟಲ್ ಚೆನ್ನಾಗಿತ್ತು. ಒಳಗಡೆ ಗಬ್ಬು. ನಮಗೆ ಕೊಟ್ಟ ಕೊಠಡಿ ತೆರೆದರೆ ಅಲ್ಲಿ ಪಬ್ಲಿಕ್ ಲೆವೆಟರಿ ವಾಸನೆ ಮಾತ್ರವಲ್ಲ ಜೋಂಪು ಜೋಂಪು ಸೊಳ್ಳೆಗಳು. ನಮ್ಮ ದುಡ್ಡು ವಾಪಸ್ ತೆಗೊಂಡು, ಶ್ರೀಕಾಂತ್ ವಾಕ್ ಹೋಗಿ ಇನ್ನೊಂದು ಹೋಟಲ್ ಹುಡುಕಿದ್ರು. ಹೊಸದಾಗಿ ಕಟ್ಟಿಸಿದ್ದ. ಈ ಹೋಟೆಲ್ ಚೆನ್ನಾಗಿತ್ತು. ಇಷ್ಟರೊಳಗೆ 5 ಗಂಟೆ ಆಗಿತ್ಯು. ಹೋಟಲ್ ನವ ಅಲ್ಲಿನ ಹೆಸರಾಂತ ಪೂರ್ಣಾದೇವಿ ಮಂದಿರ ಈಗ ಬಂದ್ ಆಗಿರುತ್ತೆ, ಆದ್ದರಿಂದ ನಮಗೆ ಶಾರದಾ ನದಿಗೆ ಹೋಗಲು ಹೇಳಿದರು. ಅಲ್ಲಿ ಪ್ರತಿ ಸಂಜೆ ಆರತಿ ಆಗುತ್ತೆ... ಕೆಳಗಿನ ಚಿತ್ರದಂತೆ ಊರು ತುಂಬ ಇಂತಹ ಚಿಕ್ಕ ದೊಡ್ಡ ಊರೂಟು ಕಲ್ಲುಗಳು. ಶ್ರೀಕಾಂತ್ ಪುರೋಹಿತರನ್ನು ಮಾತಾಡಿಸುತ್ತಿದ್ರೆ, ನಾನು ಸಣ್ಣಕ್ಕೆ ಸದ್ದು ಮಾಡುತ್ತಿರುವ ನದಿ ಯ ಸದ್ದು ಆಲಿಸುವುದರಲ್ಲಿ ತನ್ಮಯಳಾದೆ. ವಾಪಸ್ ಬರ್ತಾ ಪೇಟೆಯೊಳಗೆ ಒಂದು ರೌಂಡ್ ಹಾಕಿದ್ವಿ.
ಇದು ನಮ್ಮ ಕೊನೆಯ ಹೊರ ರಾಜ್ಯದ ಪಯಣ...ಇನ್ನೂ ಓರಿಸ್ಸಾ, ಗುಜರಾತ್ ಪ್ಲ್ಯಾನ್ ಮಾಡಿದ್ದೆ ಬಂತು...ತುಂಬಾ ಬೇಜಾರಾಗುತ್ತೆ ಕಣ್ರೀ...😏😏



No comments:
Post a Comment