March 28, 2026

ಬಣ್ಣ -my ಬಣ್ಣ 😧

 i noticed those  girls while entering the hospital cafe. Both were very pretty..looked alike. Maybe sisters or even twins. Both were engrossed with their cell phones. Niha took turns sitting in the ward with Srikanth and she asked me go and have a leisurely tea. i ordered a tea and a veggie puff and sat in a toasty sunlit corner.  Found a discarded newspaper. opened the crossword part , found a pen in my bag and started solving. 'Auntie' someone called near my ear. i turned towards the voice and found one of the pretty girls. besides me.  'aunty i just wanted to compliment on your beautiful skin colouring', it is amazing. Me, i am not used to nor take easily to praise...arre what does this girl want,  i think..but sensibility/manners made me thank her...she must have seen the confusion/doubt in my face...'my sister thinks so too'....we haven't seen such colouring on anybody....i said this is the 'first time i am hearing of it...and turned to my crossword.....suddenly i realized i was sitting in the sunlight..i smiled at the girl who was still sitting beside me ...haha it is the sunlight...see 😁. she replied 'no aunty we observed you when you entered the cafe and wanted to.let you know...she smlled...i repeated my thank you  i was.a bit embarassed. she said bye and went back to her sibling....after i entered the ward i shared the incident with niha and said..i am so dumb..i forgot to say they were pretty themselves...


ಶ್ರೀಕಾಂತ್ ಹೋದ ಒಂದು ವಾರದ ಮೇಲೆ ಯಾಕೋ ಈ ಮೇಲಿನ ಘಟನೆ ನೆನಪಾಯ್ತು.
ಯಾಕೋ ಹೆದರಿದೆ
ಯಾಕೆಂದರೆ............
ಶ್ರೀಕಾಂತ್ ಗೆ ಲೀವರ್ transplant ಮಾಡಲೇ ಬೇಕಾಗುತ್ತದೆ ಎಂದ ಮೇಲೆ liver workup ಅಂತ ಮಾಡುತ್ತಾರೆ. ಬೇರೆ ಲೀವರ್ ಪಡೀಲಿಕ್ಕೆ ರಕ್ತದ ಗುಂಪು match ಆದ್ರೆ ಮಾತ್ರ ಸಾಕಾಗಲ್ಲ, kidney, heart, lungs ಎಲ್ಲ ಸರಿ ಕೆಲಸ ಮಾಡಿದ್ರೆ ಮಾತ್ರ transplant. ಇದನ್ನು airport ರೋಡ್ ನಲ್ಲಿರೋ Aster CMI ನಲ್ಲಿ ಮಾಡಿಸಿದ್ವಿ. ಎಷ್ಟು ದೂರ...ನಮ್ಮದೇ ವಾಹನ ಇದ್ರೂ it was too tiring..
ಅಲ್ಲಿ 4 ವರ್ಷದ ಮಗುವಿನಿಂದ 50+  ವರೆಗಿನ, ವಿವಿಧ ಸ್ಥರದ / ಹಂತದ ಲೀವರ್ ಕಾಯಿಲೆ ಯ ಜನರನ್ನು ನೋಡಿದೆ. ಅದರಲ್ಲಿ ಒಬ್ಬ 28- 30 ವರ್ಷದ ಹಡುಗ ನ ಬಣ್ಣ ತುಂಬಾ ನೆ ವಿಚಿತ್ರವಾಗಿತ್ತು....ಲಕ ಲಕ ಹೊಳೆಯುವ ರಕ್ತ ಚಂದನದ ಬಣ್ಣ, ಹಳದಿ ನೀರು ಭರಿತ ಕಣ್ಣು, ಮೂತ್ರದ ಚೀಲ ಕೈಯಲ್ಲಿ...ಮೂತ್ರದ ಚೀಲ ದ ಸಲುವಾಗಿ ಲುಂಗಿ ತೊಟ್ಟಿದ್ದ...i was fascinated by his colour.... ನಾನು ಕಣ್ಣು ಕೀಳಿಸದೆ ಅವನನ್ನು ನೋಡುತ್ತಿರಬೇಕಾದ್ರೆ ಅಕ್ಕ ನನಗೆ amma stop staring ಅಂತ ಗದರಿದಳು...ಅವನ  ಸಣ್ಣ ಪ್ರಾಯದ ಹೆಂಡತಿ ಕೂಡ ಅವನ ಜತೆ ಇದ್ದಳು....ಅವನೂ transplant ಗಾಗಿ ಕಾಯುತ್ತಿದ್ದ...
ಈ ಹುಡುಗಿಯರು  ಮತ್ತೆ ನೆನಪಾಗಿ , ಮೈ ನಡುಕ ಬಂದು, ನಾನು malathi manipal ನಲ್ಲಿ ಫುಲ್ body ಚೆಕ್ up ಮಾಡಿಸಿದೆ...low haemoglobin ಮತ್ತು pre diabetis ಪತ್ತೆಯಾಗಿದ್ರು ಬಿಟ್ರೆ ಎಲ್ಲ ಸರಿಯಾಗಿದೆ..
ಡೈಬೇಟಿಸ್ control ನಲ್ಲಿದೆ....stress ಇಂದ ಸಕ್ಕರೆ ಅಂಶ ಏರು ಪೇರಾಗ್ತದೆ ಮತ್ತು life style ಬಗ್ಗೆ ಕೇಳಿ...ಅದನ್ನೇ maintain ಮಾಡಿ..ಮೂರು ತಿಂಗಳ ನಂತರ ಪುನಃ ತಪಾಸಣೆ ಮಾಡುವಾ ಅಂದು ಔಷಧಿ ಏನೂ ಬರೆದು ಕೊಟ್ಟಿಲ್ಲ...
ಯಾಕೆ ನೆನಪಾಯ್ತು ಅಂದ್ರೆ ಮೊನ್ನೆ fort ಕೊಚ್ಚಿ ಯಲ್ಲಿ ಹೋಟೆಲ್ ನಲ್ಲಿ ಊಟಕ್ಕೆ ಕಾಯುತ್ತಿದ್ದಾಗ ನಿಹಾ 'ಅಮ್ಮ  you are glowing, let me take a pic ಅಂತ ಫೋಟೋ ತೆಗೆದ್ಲು...🤔🤔 ನಾನೂ ಚಿತ್ರ ನೋಡಿದೆ ನನಗೇನೂ glow ಆಗ್ತಿದ್ದೆನೆ ಅನ್ನಿಸಲಿಲ್ಲ..
ನಾನು ಮೊದಲಿನ ಧೈರ್ಯವಂತೆ ಮಾಲತಿ ಅಲ್ಲವೇ ಅಲ್ಲ...ಆಕ ನಿಂಪಿ ಗೆ ಸ್ವಲ್ಪ cold cough, ಆರೋಗ್ಯ ಏರು ಪೇರಾದ್ರೆ ತುಂಬಾನೇ tense ಆಗ್ತೀನಿ.  ಮೊದಲು ನನ್ನ panic attack ನಂತರ ಶ್ರೀಕಾಂತ್ ರ liver cirrhosis ಮತ್ತುdetect ಆದ 8 ತಿಂಗಳಿಗೆ ಸಾವು ನನ್ನನ್ನು ಕಂಗೆಡಿಸಿಬಿಟ್ಟಿದೆ 😭😭😏


ಶ್ರೀಕಾಂತ್ ಗೆ ಸಿಕ್ಕಾಪಟ್ಟೆ weight loss ಆಗಿ ಸರಿಯಾದ ಸೈಜ್ ಬಟ್ಟೆ ತೆಗೊಂಡ್ರೆ ಹೊಟ್ಟೆ ಮೇಲೆ ಟೈಟ್ ಆಗುತ್ತಿತ್ತು, ಲೂಸ್ ತೆಗೊಂಡ್ರೆ shoulder ಮೇಲಿಂದ ಇಳಿತಿತ್ತು...ಪ್ಲಸ್ ನಾವು ತಂದದ್ದು, online ಆರ್ಡರ್ ಮಾಡಿದ್ದು ಅವರಿಗೆ ಸರಿ ಆಗ್ತಿರಲಿಲ್ಲ..ಅಂತ ನಾನು ಅವರನ್ನು reliance ಗೆ ಕರೆದುಕೊಂಡು ಹೋದಾಗ, ನನಗೂ force ಮಾಡಿ ಮೇಲಿನ ಚಿತ್ರದಲ್ಲಿನ ಡ್ರೆಸ್ ತೆಗೆಸಿಕೊಟ್ರು...ನಮ್ಮ ಲಾಸ್ಟ್ ಶಾಪಿಂಗ್ outing. ತೆಗೆದುಕೊಂಡ ಬಟ್ಟೆ ಹಾಕಲೇ ಇಲ್ಲ, ಆರೋಗ್ಯ ಹದಗೆಡುತ್ತಾ ಹೋಯ್ತು...ಇತ್ತೀಚಿಗೆ ಒಂದು ದೊಡ್ಡ suitcase ತುಂಬಾ ಬಟ್ಟೆ ವೃದ್ಧಾಶ್ರಮಕ್ಕೆ ಕೊಟ್ಟೆ...
ನನ್ನ ಹೊಸ ಚಸ್ಮ ಹಾಕಿ ಚಿತ್ರ ತಮ್ಮ-ಅಮ್ಮ ನಿಗೆ ಕಳಿಸಿದ್ದು ನಿಮಗೂ....ಅವರೊ ಇಲ್ಲಿಗೆ ಬಾ ಬಾ ಅಂತ ಕರೀತಿರ್ತಾರೆ, ನನಗೆ ಎಲ್ಲೂ ಹೋಗಲೂ ಮನಸ್ಸಿಲ್ಲ 😏.

No comments: