ನಮ್ಮ ಅತ್ತೆ ಯಾವಾಗಲೂ ಹೇಳೋರು. 'ಕಾಂತು ಹೋಳಿ ಹಬ್ಬದ ದಿನ ಹುಟ್ಟಿದ್ದು ಅಂತ. ನಾಳೆ ಹೋಳಿ...ಆಂಗ್ಲ calender ಪ್ರಕಾರ ಇವತ್ತು ಶ್ರೀಕಾಂತ್ ಹುಟ್ಟಿದ ದಿನ. ಎರಡು ದಿನ celebration
ಅದಕ್ಕೆ ಮುಂಚೆ ಮನೆಯೆಲ್ಲ ಸುಣ್ಣ ಬಡಿದಿದ್ಫು ಆಯ್ತು. ಮೆಟ್ರೋ construction ಮುಗಿದ ಮೇಲೆ ಮಾಡೋದು ಮಾಡೋದು ಅಂತ ಪ್ಲಾನ್ ಮಾಡಿ...ಆಮೇಲೆ ಶ್ರೀಕಾಂತ್ ಗೆ ಹುಷಾರು ತಪ್ಪಿ ಮುಂದೂಡುತ್ತ ಕೊನೆಗೆ ಮೊನ್ನೆಗೆ ಮನೆ ಫ್ಹುಲ್ ಲಕಲಕ ಅಂತಿದೆ....ಪೈಂಟಿಂಗ್ ಜತೆ chimney, ಗ್ಲಾಸ್ ಬಾಗಿಲು, ನಳ, ಬಾತ್ ರೂಮ್ ಟೈಲ್ಸ್ ಎಲ್ಲ ಸ್ವಚ್ಛ...ಆಶ್ಚರ್ಯ ಅಂದರೆ ಕೆಲಸಕ್ಕಿದ್ದವರೆಲ್ಲ ವಯಸ್ಸಾದವರು. ಸರಿಯಾಗಿ ಒಂಬತ್ತಕ್ಕೆ ಬಂದು ಸಂಜೆ 5 ಕ್ಕೆ ಕ್ಲೋಸ್. ಹೆಚ್ಚು / ಅನಾವಶ್ಯಕ ಮಾತಿಲ್ಲ, ಕತೆಯಿಲ್ಲ, ಮೊಬೈಲ್ ಬಳಿಸಿಲ್ಲ.... ಟಿ ಕಾಫಿ ಗೆ ಒಂದು 10 ನಿಮಿಷ , ಮಧ್ಯಾಹ್ನ ಊಟಕ್ಕೆ ಅರ್ಧ ಗಂಟೆ ಬ್ರೇಕ್ ಅಷ್ಟೇ. ಸೋಮವಾರ ಶುರು ಮಾಡಿ ಶನಿವಾರ ಸಂಜೆ.complete. ಮೂರು ಜನ ಇದ್ರು ಎಲ್ಲ ಸಾಮಾನು ಎಲ್ಲೆಲ್ಲಿತ್ತೋ ಅಲ್ಲಿ ನೀಟಾಗಿ ಜೋಡಿಸಿ ಕೊಟ್ರು...ನಾನಂತು ಫುಲ್ ಖುಶ್...
ನನ್ನ ತಮ್ಮನ ಮಗಳು ಸ್ಯಾಮಿ ಪೈ ಶ್ರೀಕಾಂತ್ ಗೋಸ್ಕರ ಅವಳೇ compose ಮಾಡಿ, ಹಾಡಿದ ಹುಟ್ಟು ಹಬ್ಬದ ಹಾಡು...ಮತ್ತು ನನ್ನ ತಮ್ಮ ಪಾಂಡು ಈ ದಿನವನ್ನು ಶ್ರೀಕಾಂತ್ ಡೇ ಅಂತ ಹೆಸರಿಸಿದ್ದಾನೆ 🙂❤️🙏🙏
msgs about the delicacies he taught us 👆👆


No comments:
Post a Comment