February 4, 2026

ನೀರುಳ್ಳಿ ಸೊಪ್ಪಿನ ಝುಣಕಾ

 ಮೊನ್ನೆ ಬೆಳಿಗ್ಗೆ ಕೆ ಪಿ ಏನ್ ಗೆ ಹೋದಾಗ ತಾಜಾ ನೀರುಳ್ಳಿ ಸೊಪ್ಪು ಬಂದಿತ್ತು. ತೆಗೊಂಡೆ. ಸೊಪ್ಪು ನೋಡಿ ನಿಹಾ ,'ಅಮ್ಮ spring onion ಝುಣಕಾ ತಿನ್ನದೆ ಸುಮಾರು ಸಮಯ ಆಯ್ತು. ನಲ್ಲೇ ಆಫಿಸ್ ಲಂಚ್ ಬಾಕ್ಸ್ ಗೆ ಮಾಡ್ತಿಯಾ ' ಅಂತ  ಕೇಳಿ ದ್ಲು...ನಾ ಹೂ ಅಂದೆ..ಅವಳು ರಾತ್ರಿ ಚಪಾತಿ ಹಿಟ್ಟು ಕಲಿಸಿ ಇಟ್ಟಳು. 

ನವೆಂಬರ್ ನಲ್ಲಿ ಅವಳಿಗೆ ಜಾಬ್ ಆಫರ್ ಸಿಕ್ತು...ಜನವರಿಯಲ್ಲಿ ಜಾಯ್ನ್ ಆಗುವ ಹಾಗೆ. ಶ್ರೀಕಾಂತ್ 'congrats ನಿಂಪಿ' ಅಂದಿದ್ದು ಇನ್ನು ಕೇಳಿದ ಹಾಗೆ ಇದೆ. December ನಲ್ಲಿ ಅವರು ಹೋಗಿ ಬಿಟ್ರು...ನಾವು ಗೋಕರ್ಣ ಕ್ಕೆ ಹೋಗಿ ಬಂದು, ನುಡಿ ನಮನ ಕಾರ್ಯಕ್ರಮ ಮುಗಿಸಿದ ಬೆನ್ನಲ್ಲೇ ಅವಳು ಕೆಲಸಕ್ಕೆ ಸೇರಿದ್ದು ನನಗೆ ಸಮಾಧಾನ ಅನ್ನಿಸ್ತು...attention divert  ಆದ ಹಾಗೆ ಆಯಿತು....ಸ್ವಲ್ಪ ಹೆಚ್ಛೆ emotional ಅವಳು ❤️❤️

ನಾನು ಝುಣಕಾ ಮಾಡುವ ವಿಧಾನ

ಸೊಪ್ಪನ್ನು ಚೆನ್ನಾಗಿ ತೊಳೆದು...ಬುಡದಲ್ಲಿನ ತಾಜಾ ಇರುಳ್ಳಿ ಚಿಕ್ಕದಾಗಿ ಕಟ್ ಮಾಡಿ ಬೇರೆ ಇಡುತ್ತೇನೆ. ಸೊಪ್ಪನ್ನೂ ಕತ್ತರಿಸಿ ಇಡಿ. regular ನೀರುಳ್ಳಿ ಕೂಡ ಕಟ್ ಮಾಡಿ ಇಡಿ. ಸ್ವಲ್ಪ ಕಡಲೆ ಹಿಟ್ಟು ಲೈಟ್ ಆಗಿ ಹುರಿದಿಡಿ.

ಮೊದಲಿಗೆ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ಅದು ಸಿಡಿದ ಮೇಲೆ ಸಣ್ಣಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಕಿ. next ರೇಗುಲರ್ ನೀರುಳ್ಳಿ ಹಾಕಿ ಕೆಂಪ ಗಾಗುವ ತನಕ ಹುರಿಯಿರಿ. ಅರಿಸಿನ, ಉಪ್ಪು, ಕೆಂಪು ಮೆಣಸಿನ ಪುಡಿ, ಧನಿಯಾ ಜೀರಾ powder ಬೆರೆಸಿ. ಎರಡು ನಿಮಿಷ ಬಿಟ್ಟು ಇದಕ್ಕೆ ಎಳೆ ನೀರುಳ್ಳಿ ತುಂಡು ಬೆರೆಸಿ. ಎರಡು ನಿಮಿಷ ಆದ ಮೇಲೆ ದಂಟು ಸೇರಿಸಿ....ಅದು ನೀರು ಬಿಡಲು ಆರಂಭ ಆಗುವಾಗ, ಎಷ್ಟು ಬೇಕೋ ಅಷ್ಟು  ಹುರಿದ ಕಡಲೆ ಹಿಟ್ಟು ಬೆರೆಸಿ. ಡ್ರೈ ಆಗುವ ತನಕ ಒಲೆ ಮೇಲಿಡಿ ....

ಅಷ್ಟೇ


spring onion jhunka



No comments:

Post a Comment