January 9, 2026

ತುಪ್ಪದ ಅವಲಕ್ಕಿ - ಧಾರವಾಡ special

 ಹಿಂದಿನ ವಾರ ದೋಸೆ ಹಿಟ್ಟು ಕಡಿಮೆ ಇತ್ತು. ಏನು ಮಾಡೋದು ಅಂತ ತಲೆ ಕೇರೀತಾ....ಒಂದು ಕ್ಷಣ ವಾಪಸ್ ಹೋಗಿ ಮುಸುಕು ಹೊದ್ದು ನಾನಿಲ್ಲ ಅಂದು ಕೊಳ್ಳುವಾ ಅಂತಿದ್ದೆ....ಮೇ ತಿಂಗಳಿಂದ ಬೆಳ್ಳಿಗ್ಗಿನಿಂದ ರಾತ್ರಿ ಹೇಗೆ ಕಳೆಯುತ್ತಿದೆ ಅಂತ ಗೊತ್ತಾಗದಷ್ಟು ಪುರುಸೊತ್ತಿಲ್ಲದ ಜೀವನ...ಬೆಳಿಗ್ಗೆ ಎದ್ದು ತಿಂಡಿ, ಅಡುಗೆ, ಮನೆ ಕೆಲಸ ಅಲಾರಂ ಇಟ್ಟು ಇಡೀ ದಿನ ಔಷಧಗಳನ್ನು ಕೊಡುವುದು...ಇಂತವೇ....ಹಿಂದಿನ ವಾರದ ಬೆಳಿಗ್ಗೆ ಎದ್ದು ಮಾಡುವುದೇನು ಅಂತ ಪರಿಸ್ಥಿತಿ...ಈಗ ನಿಹಾ ಹೊಸ ಜಾಬ್.ಬೆಳಿಗ್ಗೆ. ಬೇಗ ಮನೆ ಬಿಡಬೇಕು...ಬ್ರೆಕ್ಫಾಸ್ಟ್ ಮಾಡಿ ಮಧ್ಯಾಹ್ನದ ಊಟ ಕಟ್ಟಿಕೊಂಡು ಹೋಗುತ್ತಾಳೆ...ಅದಕ್ಕೆ ಪುನಃ ಬೇಗ ಎದ್ದು ತಿಂಡಿ ಊಟ....ಬಹಳಷ್ಟು ಬ್ಯಾಂಕ್, insurance ಮುಂತಾದ ಕೆಲಸ...

ಸರಿ ಆ ದಿನ ತಲೆ ಕೇರಿತಾ ಇದ್ದ ಹಾಗೆ ಈ ತಿಂಡಿ ಮಾಡುವ ಐಡಿಯಾ ಬಂತು. ಶ್ರೀಕಾಂತ್  ಅವರ ಧಾರವಾಡ ಕಾಲೇಜಿನ ದಿನಗಳಲ್ಲಿ ಇಷ್ಟ ಪಟ್ಟು ತಿನ್ನುತ್ತಿದ್ದ ಸಂಜೆ ಸ್ನಾಕ್.



ತುಪ್ಪದ ಅವಲಕ್ಕಿ

ಎಣ್ಣೆ+ತುಪ್ಪ ಬಿಸಿ ಮಾಡಿ...ಸಾಸಿವೆ ಜೀರಿಗೆ ಒಗ್ಗರಣೆ. ಸಣ್ಣಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ, ಗೇರು ಬೀಜ , ಕಡಲೆ ಬೀಜ ಕರಿಬೇವು ಸೇರಿಸಿ. ನೀರುಳ್ಳಿ ಕೆಂಪಾದ ನಂತರ... ತೆಳು ಅವಲಕ್ಕಿ, ಉಪ್ಪು, ಸಕ್ಕರೆ ಬೆರೆಸಿ... ಚೆನ್ನಾಗಿ ಕೈಯಾಡಿಸಿ. ಕೊತ್ತಂಬರಿ ಸೊಪ್ಪು ಬೆರೆಸಿ.   ಮೇಲಿಂದ ಕಾಯಿ ತುರಿ add  ಮಾಡಬಹುದು...ಲಿಂಬೆ ರಸ...ಬೇಗ ತಯಾರಾಗುವ ತಿನಿಸು

ತುಪ್ಪದ ಅವಲಕ್ಕಿ



No comments:

Post a Comment