December 31, 2025

ಮೋಕ್ಷಕ್ಕೆ ಪ್ರಾರ್ಥನೆ

 ನಿನ್ನೆ ವೈಕುಂಠ ಏಕಾದಶಿ ದಿನದಂದು ನಮ್ಮ ಶ್ರೀಕಾಂತ್ ಗೋಸ್ಕರ ಗೋಕರ್ಣದಲ್ಲಿ ಪೂಜೆ ಮಾಡಿದೆವು. ಶಾಸ್ತ್ರೋಕ್ತವಾಗಿ ನನಗೆ ಸಮಾಧಾನವೆನಿಸುವಂತೆ ಕಾರ್ಯಗಳು  ನಡೆದವು. 🙏🙏

ಶ್ರೀಕಾಂತ್ ನೋಡಿ 'ಏನೇ ಇದು ನಿನ್ಕತೆ ಅಂತಿದ್ದರೇನೋ 🤔🤔

                                 ಕೋಟಿ ತೀರ್ಥ





ಗೋಕರ್ಣ ದೇವಸ್ಥಾನದ  ಬಳಿ ವಾಕ್ ಹೋದಾಗ... ನನ್ನ tattoo ಹೋಗಳಿದ್ದಕ್ಕೆ, ಮೂರು ವರ್ಷದ ಹಿಂದೆ ಶ್ರೀಕಾಂತ್ ಕೂಡ tattoo ಹಾಕಿಸಿಸಿಕೊಂಡು, 'ಯಾರೂ ನನ್ನ tattoo ನೋಡಿ, ಏನೂ ಹೇಳಿಲ್ಲ' ಅಂತ ಮುನಿಸಿಕೊಂಡಿದ್ದು, ನಾವು ನಕ್ಕಿದ್ದು, ನೆನಪಾಯ್ತು...

ಇನ್ನು ಕೇವಲ ನೆನಪು ಮಾತ್ರ ಮಾಡಿಕೊಳ್ಳುವುದಾಯಿತು...


December 27, 2025

ವಾರ ಕಳೆಯಿತು

 It's been a week. I wake up at all times of the night and cry silently. I walk around sobbing. 

I rue the day you were admitted to Aster RV.. may be you would have been with us for a little while longer???!!

Many moods of srikanth

December 23, 2025

GOOD BYE Shenoy maam

 Cannot fathom the injustice of it all. Did not expect this. HE WAS SO HOPEFUL OF RECOVERING. GOOD BYE SRIKANTH


I  lost Srikanth, on December 20th at 10:42 am. We were on our way to the ICU when we received an urgent call to rush up. He had suffered a cardiac arrest. I'm grateful I visited him early that morning; it was our last conversation.


Navigating hospital protocols was a daily struggle – I fought with security ,each time, to see him, reassuring him I'd stay nearby despite restrictions. The doctor advised keeping his spirits up, but lapses in communication made visits challenging.


In his final moments, he whispered 'loafers, stupid love story, I want efficient doctors,' mentioned 'Datu' ದಾಟು by S.L. Bhyrappa, and numbers 106-110. The last two days, he didn't respond. A urinary infection led to kidney failure, despite heavy antibiotics and dialysis.


He lived by his ideals; I wish him peace. I hope for an afterlife where he finds ssolace.As per his wishes, we donated his body to science. Though aspirations remain unfinished, I hope he rests in peace. Go in peace, Shenoy maam 



December 4, 2025

The Golden Lotus


"As a Mumbaikar, I have a soft spot for Pav Wada Pav, Pav Bhaji, sabudana khichdi/vada, poha items, and Ragda Pattis. I used to relish Ragda Pattis from a lady who sold them on a small stool, on my way to home from school. Though they weren't  hot, they were incredibly tasty. I would often save my bus money to sometimes indulge in this treat.

Also anyone who reads my blog knows how much i hate cooking...🤫

Today, I received a message from The Golden Lotus, a 'food corner' in our apartment complex, run by young residents, asking if I'd like to order Ragda Pattis. I was overjoyed and immediately replied yes. As a busy caregiver, I sometimes like to take a break from kitchen , and The Golden Lotus has always delivered. they prepare food fresh and deliver it piping hot.

When my brother-in-law visited from the US to meet Srikanth, i cooked a simple lunch -  he craved home cooked meal, for he was eating out from quite a long time, , and for snacks,I wasn't up for cooking Sabudana Vada, as was promised. Instead i ordered samosas from Golden Lotus, and they arrived just as my chai was ready.....hot chai,  garma garam samosas and gupshup ,..making for a lovely evening."


my brother in law likes the filter coffee i prepare my daughters call it "world famous in bengaluru' coffee)👇👇 akka baked an early christmas cake for him..for he leaves for the US soon ❤️👍



ragda pattis arrived like this 👇👇

               i devored them.like this 🙂👆👆

#annadatasukhibhava

click on the link below to know more 👇👇

The Golden Lotus

November 30, 2025

Health update this & that

 ಇಡ್ಲಿ ಹಿಟ್ಟು ರೆಡಿ ಮಾಡಿದ್ದೆ.  ಆದರೆ ಪುನಃ ಎರಡು ದಿನ ಇವರನ್ನು ಆಸ್ಪತ್ರೆಗೆ ಸೇರಿಸಬೇಕಾಯ್ತು. ಒಂದು 50,000 ಖರ್ಚು ಆಯ್ತು. ಚಿಕ್ಕವಳು ಆಸ್ಪತ್ರೆ ಖರ್ಚು ನೋಡಿ 'amma it is good that we dont have to ask other's for money' ಅಂದಾಗ ಹೌದು ಮಗಳೇ, thanks to his friend/colleague Salimath, for some decent investments and office insurance facility ಅಂದು...better take care of your health ಅಂತ ಕೂಡ ಸೇರಿಸಿದ್ದೆ. ಸಿಕ್ಕಾಪಟ್ಟೆ ದುಬಾರಿ ಔಷಧಿ. ಜನೌಷಧಿ‌ ಇದ್ದುದಕ್ಕೆ ಬಚಾವ್. ಅಲ್ಲಿ ಸಿಗದಿದ್ದದ್ದು ನಮ್ಮ ಮನೆ ಬಳಿಯ ಮೆಡಿಕಲ್ ಸ್ಟೋರ್ ನವ ಸ್ವಲ್ಪ discount ಕೊಡುತ್ತಾರೆ. hepamerz ಅನ್ನುವ ಚಿಕ್ಕ  sachet ಒಂದಕ್ಕೆ 365 ರೂ. ದಿನಕ್ಕೆ ಮೂರು ತೆಗೊಳ್ಳಲೇ ಬೇಕು ಮತ್ತು ಕೆಲ ಔಷಧಿ life long ಅಂದಿದ್ದಾರೆ....ಲೆಕ್ಕ ಹಾಕಿ. ಟೆಕ್ ಕೇರ್ friends, ಆರೋಗ್ಯ ನೆಗಲೆಕ್ಟ್ ಮಾಡಬೇಡಿ...ನಮ್ಮ ಆಫಿಸ್ ನವರೆಲ್ಲ ಈಗ ಅವರು health check up  ಮಾಡಿಸಿಕೊಳ್ಳುತ್ತಿದ್ದಾರೆ.

 ಹಾಗಾಗಿ ಇವತ್ತು ಇಡ್ಲಿ. ನೋಡಿದ್ರೆ  ಚಟ್ನಿ ಮಾಡಲು ತೆಂಗಿನಕಾಯಿ ಇರಲಿಲ್ಲ. ನಿನ್ನೆನೆ ಮೂವರಿಗೂ 'ನಾಳೆ ಸಂಡೇ, ಆರಾಮಾಗಿ ಏಳಿ' ಮತ್ತು ಮಕ್ಕಳಿಗೆ 'ನಾಳೆ ನಿಮಗೆ ಬ್ರೇಕ್ ಏನೂ ಮಾಡಲಿಕ್ಕಿಲ್ಲ ನೀವು' just relax ಅಂದಿದ್ದೆ. ನನಗೆ ಚಳಿಗಾಲ ಯಾವತ್ತೂ ಇಷ್ಟ. ಮನೆಯಿಂದ ಹೊರ ಬೀಳುವಷ್ಟರಲ್ಲಿ ಮಳೇನೂ ಶುರು ಆಯ್ತು. ಮನೆ ಬಳಿಯ K P N ಸೂಪರ್ ಮಾರ್ಕೆಟ್ ಬೆಳಿಗ್ಗೆ ಬೇಗನೆ ತೆರೆಯುತ್ತೆ. ತುಂಬಾ ಜನ ಇರಲ್ಲ, ಮತ್ತು  ರೋಡ್ ಕ್ರಾಸ್ ಮಾಡಲು ಸುಲಭ.

ಸರಿ ನಾನು ಜಪಾನ್ ನಲ್ಲಿ , ಹೂ ಅರಳಿರುವ ಚೆರ್ರಿ ಮರದಡಿಯಲ್ಲಿ ನಡೆಯುತ್ತಿದ್ದೇನೆ ಅಂತ  imagine  ಮಾಡುತ್ತಾ, (ನಮ್ಮ ಹೆಬ್ಬಾಳ ಸರ್ ಅವರ ಸೊಸೆ project ಮೇಲೆ ಜಪಾನ್ ಗೆ ಹೋಗಿದ್ದಾರೆ. ಅಲ್ಲಿಯ ಚೆಂದ ಚಿತ್ರಗಳನ್ನು status ನಲ್ಲಿ ಹಾಕ್ತಿದ್ದಾರೆ i always wanted to visi japan)), ಚಳಿಯನ್ನು ಎಂಜಾಯ್ ಮಾಡ್ತಾ ಹೋಗುತ್ತಿದೆ. ಒಂದು ಪುಟ್ಟ , ಇಬ್ಬರು ಮಕ್ಕಳಿರುವ ಜೋಡಿ ಹೆಗಲಿಗೆ ರಕ್ ಸ್ಯಾಕ್ ಏರಿಸಿ ಎಲ್ಲೋ ಟ್ರಿಪ್ ಹೊರತಟಿದ್ದರೇನೋ...ಮಕ್ಕಳು ತುಂಬಾ excite ಆಗಿದ್ದರು. ಖುಷಿ ಆಯ್ತು ಅವರನ್ನು ನೋಡಿ. ನಮ್ಮ ಜೀವನ ಇವರ ಲೀವರ್ ಕಾಯಿಲೆಯಿಂದ ಎಷ್ಟು ಬದಲಾಯ್ತು. ನನಗೂ ಮಕಳೊಂದಿಗೆ ಹೊರಗೆ ಹೋಗುವುದು ತುಂಬಾ ಇಷ್ಟ. ನನಗೆ friends ಅಂತ ಯಾರೂ ಇಲ್ಲ. ನನಗೆ ಅವರ company ಇಷ್ಟ. family ಯಾಗಿ ಹೊರಗೆ ಹೋಗುವುದು ಈಗ ಆಸ್ಪತ್ರೆ ಗೆ  ಸೀಮಿತ ವಾಗಿದೆ.   ನಮ್ಮದು ದೊಡ್ಡ ಗಾಡಿ, ಅಜಯ್ ಎಂಬೋ ಒಳ್ಳೆಯ ಸಾರಥಿ. ಆಸ್ಪತ್ರೆಗೆ ಹೋದರೆ ಅರ್ಧ ದಿನ ಅಥವಾ ಏನಾದರೂ parameters ಹೆಚ್ಚು ಕಡಿಮೆ ಇದ್ರೆ, ಔಷಧಿ, observation ಅಂತ ಅಡ್ಮಿಟ್ ಮಾಡೋದೂ ಇರುತ್ತೆ. ಗಾಡಿ ಸುಮ್ನೆ ಖಾಲಿ ಇರಬೇಕಲ್ಲ? ಹೇಗೂ ದುಡ್ಡು ಕೊಡುತ್ತೇವೆ. ಹಾಗಾಗಿ ಅಕ್ಕ ಅವಳ ಬೇಕರಿ ಸಾಮಾನು, ಅಥವಾ ಎಲ್ಲಾದರೂ ಹೋಗಿ time spend ಮಾಡಿ ಅಂತ ನಾನೇ ಕಳಿಸುತ್ತೇನೆ.  ಆಸ್ಪತ್ರಯಲ್ಲಿ ಒಂದು attendee ಗೆ ಮಾತ್ರ ಪ್ರವೇಶ. Manipal Hospiral, kanakapura Road,ಆಸ್ಪತ್ರೆ ಸಿಬ್ಬಂದಿ ತುಂಬಾ ಕಾಳಜಿಯಿಂದ ನೋಡಿ ಕೊಳ್ಳುತ್ತಾರೆ ಆದ್ದರಿಂದ ನನಗೂ ಸ್ವಲ್ಪ ಆರಾಮ್ ಎನಿಸುತ್ತದೆ. ಅಲ್ಲಿ tension free ಒಳ್ಳೆಯ ನಿದ್ದೆ ಮಾಡುತ್ತೇನೆ. 🙂👍 ಹೊರ ದೇಶಕ್ಕೆ ಹೋಗಿ, 5 ಸ್ಟಾರ್ ಹೋಟೆಲ್ ವಾಸ ಅಂತ ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ.
ಈಗ ಕಾಲಿನ muscles ನಲ್ಲಿ ಬಲ ಇಲ್ಲ. ಆಸ್ಪತ್ರೆಗೆ ಹೋಗಲು ಗಾಡಿ ಹತ್ತುವಾಗ ತುಂಬಾ ಕಷ್ಟವಾಗ್ತಿದೆ.  ಸ್ನಾನ ಮಾಡುವಾಗ ಬಗ್ಗಿದ್ದರಿಂದ ಕುಸಿದು ಬಿದ್ದು, ನಾನು ಮಕ್ಕಳು ಹರ ಸಾಹಸ ಮಾಡಿ ಎಬ್ಬಿಸಿದೆವು. ಎಣ್ಣೆ ಹಚ್ಚಿ ಸ್ನಾನ ಮಾಡ ಬೇಡ ಅಂದ್ರೂ ಹಚ್ಚಿ ಕೊಂಡಿದ್ರು. ನಾನೊಬ್ಬಳೇ ಎಬ್ಬಿಸಲು ಟ್ರೈ ಮಾಡಿದೆ, ಆದ್ರೆ ಎಣ್ಣೆಯಿಂದ ನನ್ನ ಕಾಲೂ ಜಾರಲಾರಂಭಿಸಿತು. ಕೊನೆಗೆ help ಗೆ ಮಕ್ಕಳನ್ನು ಕರೆಯಬೇಕಾಯ್ತು.  ಒಳ್ಳೆ ಫಜೀತಿ ಮಾರ್ರೆ..🤔🤔  walker ಸಹಾಯ ಮಾಡುವುದು ಕೂಡ doubt..ಪಾಪ
ಎಲ್ಲೆದ್ದೆ? ಹಾಂ ನಾನು ಎಲ್ಲೂ ಹೋಗದೆ ಆರು ತಿಂಗಳಾದವು. ಈಗ  ಹೊರಗೆ ಹೋಗುವುದೆಂದರೆ, ಆಸ್ಪತ್ರೆ, ತರಕಾರಿ, ಹಣ್ಣು, ಔಷದಿ ತರಲು   ಮಾತ್ರ. ಬಿಡುವಿಲ್ಲದ ಜೀವನ 😏
ಇವತ್ತಿನ ಅಡುಗೆ




          filter coffee for the bro-in-law 🙂👍

ನಾನು pot ನಲ್ಲಿ  ಸಾಂಬ್ರಾಣಿ ಗಿಡಗಳನ್ನು  ಬೆಳೆಸಿ, ತೋಟದ ಉಸ್ತುವಾರಿ ನೋಡಿಕೊಳ್ಳುವ ಮಂಜುನಾಥ್ ಕುರ್ತಕೋಟಿ ಯವರ ಜತೆ ಕಳಿಸಿದ್ದೆ.  i could see the amusement/patronizing looks  in srikanth's as well as farm hands' face. ಆಮೇಲೆ ಬರಿ ಮಳೆ. ಗಿಡಗಳ ಕತೆ ಏನಾಯ್ತು ಅಂತ ವಿಚಾರಿಸಲಿಲ್ಲ. ಸಾಣೆಕಟ್ಟೆಯ ಗಡ್ಡೆ. ಅಷ್ಟು ಮಳೆಯಲ್ಲೂ ಚೇತರಿಸಿಕೊಂಡು, ತೀರ್ಥಹಳ್ಳಿಯ ಹಲವು ಕೊಂಕಣಿಗಳ ಮನೆಗೆ ಕೊಡಲ್ಪಟ್ಟು, ಶ್ರೀಕಾಂತ್ ಕಸಿನ್  ಇಲ್ಲಿ ಬರುತ್ತಾರೆಂದು ಗೊತ್ತಾಗಿ, ಅವರ ಬಳಿ farm helper ಕಳಿಸಿಕೊಟ್ಟಿದ್ದಾರೆ. ಇವತ್ತು ಪಲ್ಯ ತಯಾರಿಸಿದೆ. ಘಮ ಘಮ ಎನ್ನುತ್ತಿತ್ತು. ತುಂಬಾ ಖುಷಿಯಾಯ್ತು. ನಾನು ಹಳ್ಳಿಗೆ ಹೋಗುವ ಕನಸು, ಕನಸಾಗೆ ಉಳಿತು 😊😊😧

November 20, 2025

ನಿಹಾರಿಕಾ Art / Orchids

 ನಮ್ಮ ಬಿಲ್ಡಿಂಗ್ ಗೆ ಪೈಂಟ್ ಮಾಡುತ್ತಿದ್ದಾರೆ. ಹಾಗಾಗಿ ಬಾಲ್ಕನಿ ಗಿಡ ಎಲ್ಲ ಮನೆಯೊಳಗೆ...orchid ಗಿಡಗಳನ್ನು ವಾಷ್ ಬೇಸಿನ್ ಬಳಿ ಇಟ್ಟಿದ್ದೆ. ನಿಹಾ ಅಲ್ಲಿ ಕುರ್ಚಿ ಇಟ್ಟುಕೊಂಡು ಹೂ ಗಳ ಚಿತ್ರ  ಬಿಡಿಸ್ತಾ ಇದ್ಲು...ಅದನ್ನೇ ಕ್ಲಿಕ್ಕಿಸಿದೆ






November 9, 2025

ಕ್ರಿಸ್ಮ್ ಸ್ ಕೇಕ್ ಗೆ ಪೂರ್ವ ತಯಾರಿ

 


ಕ್ರಿಸ್ಮಸ್ ಗೆ   ಒಂದು  ತಿಂಗಳಿದೆ ಎನ್ನುವಾಗ ಡ್ರೈ fruits, tutti frutti,  ಕೆಲ spices ಎಲ್ಲ  ರಮ್/ವೈನ್ ಮದ್ಯದಲ್ಲಿ ನೆನೆಸಿಡುತ್ತಾರೆ. ಮದ್ಯ ಬೇಡ ಆನ್ನುವವರಿಗೆ ಇವನ್ನು orange ಜ್ಯುಸ್ ನಲ್ಲಿ ನೆನೆಸಿಡುವುದು...wow ಏನು ಪರಿಮಳ ಅಂತೀರಾ??? ನಮ್ಮೆಲ್ಲರ fav ಈ ಹಬ್ಬಕ್ಕೆ ಕೇಕ್, ಕುಕ್ಕಿಸ್, ಚಾಕೊಲೇಟ್ ತಯಾರಿಸುವುದು. ನಾನು ಬಾಕ್ಸ್ assemble ಮಾಡೋದು, ಟ್ಯಾಗ್ ಕಟ್ಟುವುದು, ಲೇಬಲ್ ಅಂಟಿಸುವುದು ಮುಂತಾದ ಕೆಲಸ ಮಾಡೋದು 🙂🙂

ಕ್ರಿಸ್ಮಸ್ ಹಬ್ಬಕ್ಕೆ ಕೇಕ್ ಗೆ ತಯಾರಿ


November 6, 2025

ಆಸ್ಪತ್ರೆ ಝಲಕ್

 ಹಿಂದಿನ ಸಲ ಆಸ್ಪತ್ರೆಗೆ ಹೋಗಿದ್ದಾಗ...ಇವರಿಗೆ ಎರಡು ವರರಕ್ಕೊಮ್ಮೆ albumin transfusion ಇರುತ್ತೆ. ಒಟ್ಟಮೂರು ಗಂಟೆ ತಗಲುತ್ತೆ. transfusion ಗೆ...ದಪ್ಪ ದ್ರವ..ನಿಧಾನಕ್ಕೆ ಮೈಯೊಳಗೆ ಹೋಗಬೇಕು.... ಆಮೇಲೆ ಹೊಟ್ಟೆಯಲ್ಲಿ ತುಂಬಿದ ನೀರು ತೆಗೆಯುವ ಪ್ರಕ್ರಿಯೆ....ನಾನು.ಕೂತು ದೀಪಾ ಹಿರೇಗುತ್ತಿ ಯವರ ಸಣ್ಣ ಕತೆಗಳನ್ನು ಓದುತ್ತಿದ್ದೆ. ಸಡನ್ ಆಗಿ ಬೆನ್ನು ಹುರಿಯಲ್ಲಿ ನಡುಕ ಹುಟ್ಟಿ, ಪುಸ್ತಕ ಥರ ಥರ ಅಲ್ಲಾಡಲು ಶುರು ಆಯ್ತು. ಹಲ್ಲು ಕಟ ಕಟ ಸಡ್ಡು ಮಾಡಲು ಶುರು ಆಯ್ತು. ನರ್ಸ್ ನೋಡಿ A C ಕಡಿಮೆ ಮಾಡಿದಳು. ನಾನು ವಾಷ್ ರೂಮ್ ಗೆ ಹೋಗಿ ಬಂದೆ. ಸ್ವಲ್ಪ ಸರಿ ಅನ್ನಿಸ್ತು... ಇವರಿಗೆ ರಗ್ ಕೊಟ್ಟಿದ್ದರಿಂದ ಕೋಟ್ ಬಿಚ್ಚಿಟ್ಟಿದ್ದರು...ನಾನು ಅದನ್ನು ಹಾಕಿಕೊಂಡೆ...ಊಟದ ಸಮಯ ಆಗಿತ್ತು. ಊಟ ಮನೆಯಿಂದ ಕಟ್ಟಿ ಕೊಂಡು ಹೋಗಿದ್ದೆ. ಇವರು ಊಟ ಮಾಡಿ  ಮಲಗಿದರು. 

hospital lunch

ನಾನು ಊಟ ಮುಗಿಸಿದೆ. ನಮ್ಮದೇ ಗಾಡಿ ಹಾಗೂ ಡ್ರೈವರ್ ಇರುವುದುರಿಂದ..ನಾವು ಆದಷ್ಟು shopping ಎಲ್ಲ ಮುಗಿಸ್ತೆವೆ. ಆಸ್ಪತ್ರೆ ಎದುರಿಗೆನೇ ಮೆಟ್ರೋ cash & carry ಇರೋದು ಅನುಕೂಲ. 👍🙏. ಮಾಲವಿಕಾ ಕೇಕ್ ಸಾಮಾನು ತರಲು ಹೋಗಿ ಹೊರಗೆ ಊಟ ಮಾಡಿ ಬಂದಳು...ಸ್ವಲ್ಪ ಹೊತ್ತಲ್ಲಿ (ಹೆಚ್ಚಾಗಿ ಇಡೀ ದಿನ  ಆಗುತ್ತೆ ಆಸ್ಪತ್ರೆಯಲ್ಲಿ) ಎಲ್ಲಾ ಮುಗಿದು, ಬಿಲ್ ಪಾವತಿಸಿ ಮನೆಗೆ ಬಂದೆವು. ಸರಿಯಾಗೇ ಇದ್ದೆ. ಆದರೆ ಮಧ್ಯ ರಾತ್ರಿ ಪುನಃ ರಾತ್ರಿ ಚಳಿ ಅನ್ನಿಸ್ತು....ಬೆಳಿಗ್ಗೆ ಡಾ ಹತ್ತಿರ ಹೋದ್ರೆ...ಸ್ಟ್ರೆಸ್ ಆಗಿದೆ ಅದಕ್ಕೆ ಹಾಗೆ ಅಂತ ಮಾತ್ರೆ ಕೊಟ್ರು....ಹಲ್ಲು ಎಷ್ಟು ಕಟ ಕಟ  ಆಯಿತೆಂದ್ರೆ...ಮೂರು ದಿನ ಎನೂ ತಿನ್ನಲಿಕ್ಕೆ ಆಗದಷ್ಟು....ಬಿಟ್ಟು ಬಿಟ್ಟು ಚಳಿ ಗೆ ಮೈ ಹೊಟ್ಟೆ ಎಲ್ಲಾ ನಡುಗ್ತಾ ನೆ ಇತ್ತು...ಜ್ವರ ಇರಲಿಲ್ಲ.. ಬೇರೆ ಡಾ ಹತ್ತಿರ ಹೋದೆ....ಅವರು ಫ್ಲು ಮಾತ್ರೆ ಬರೆದು ಕೊಟ್ಟು , ಫ್ಲು panel ಟೆಸ್ಟ್ ಬರೆದು ಕೊಟ್ರು...ಅದಕ್ಕೆ ಒಂದು 3500 ರೂ. ಔಷದಿಗಳುಗೆ 2000 ₹....ಸಧ್ಯಕ್ಕೆ serious ಏನೂ ಇರಲಿಲ್ಲ...ಆದ್ರೆ ಮಾತ್ರೆ ಪ್ರಭಾವ ಭಯಂಕರ ವಾಗಿತ್ತು...

ಪುನಃ ನಿನ್ನೆ ಇವರ ಅದೇ ಅದೇ ಎಲ್ಲ ಇತ್ತು ಆಸ್ಪತ್ರೆಯಲ್ಲಿ. OPD   ಖಾಲಿ ಇತ್ತು. ಈಗ ನರ್ಸ್ ಎಲ್ಲ ಪರಿಚಯ ಆಗಿದ್ದಾರೆ. ಅವರಲ್ಲಿ ನಾರ್ತ್ ಈಸ್ಟ್ ಇಂದ ಒಬ್ಬಳು ಇದ್ದಾಳೆ...ನಾಲ್ಕು ವರ್ಷ ಆಯಿತಂತೆ ಇಲ್ಲಿಗೆ ಬಂದು..ಎಷ್ಟು ಚೆಂದ ಕನ್ನಡ ಮಾತಾಡ್ತಾಳೆ... ಖುಷಿ ಆಗುತ್ತೆ...'ಸರ್ ಇವತ್ತು ಎಲ್ಲಾ ಕಾಲಿ ಕಾಲಿ (ಖಾಲಿ ಖಾಲಿ) ಇದೆ...ಯಾವ ಬೆಡ್ ಬೇಕು ಚೂಸ್ ಮಾಡಿ ಅಂತ ನಮಗೆಲ್ಲ ನಗಿಸಿ.... ಖಿಡಕಿ ಪಕ್ಕ ಬೆಡ್ ಕೊಟ್ಟಳು....ನಾವು ಬೋಣಿ ಮಾಡಿದ ಹಾಗೆ, ನೋಡುತ್ತ ನೋಡುತ್ತ 6 ಬೆಡ್ ಗಳು ಫುಲ್ ಆದವು. ಅದರಲ್ಲಿ ಒಂದು ಕೋಡ್ blue ಕೂಡ ನಡೆಯಿತು. 

ನಾನು ಊಟ ಮಾಡುವಾಗ ಪಕ್ಕದ ಬೆಡ್ಡಿಗೆ ಒಬ್ಬರನ್ನು ತಂದು ಇಟ್ಟರು. IC U ದಿಂದ ಯಾವೊದೋ proceedure ಮಾಡಲು O P D ಗೆ ತಂದಿದ್ದರು...ಆದರೆ ಸಡನ್ ಆಗಿ unresponsive ಆದರು. ಎಲ್ಲರೂ ಅವರ ಹೆಸರು ಹೇಳಿ ಕರೆಯಲು ಆರಂಭಿಸಿದರು...'ಬಾಬು ರಾಮ್ ಆಂಖೆ ಖೋಲೋ'. ಆಂಖೆ ಖೊಲೋ ಬಾಬುರಾಮ್.. ಅವರ ಮಗಳು ಬಾಬಾ ಬಾಬಾ ಆಂಖೆ ಖೋಲೋ, ಸುಂತೆ ಪೆಲೇ ಅಮಾರಾ ಹಾತಾ ಟಿಪೆ ದಾವ್' ( ನನ್ನ ದನಿ ಕೇಳಿಸುತ್ತಿದೆ ಆದರೆ ನನ್ನ ಕೈ ಒತ್ತು)... ಅಂತ ಸುಮಾರು ಹೊತ್ತು ರಿಪೀಟ್ ಮಾಡಿದ್ಲು...

ICU ನ ಎಲ್ಲ ಸಿಬ್ಬಂದಿ ಅಲ್ಲಿ.ಕೂಡಿದ್ರು. ಅದರಲ್ಲಿ ಒಬ್ಬ Administrator ಗೆ ಹಿರಿಯ ಡಾ ಕರೆದು...ಏನಾದ್ರು ಹೆಚ್ಚು ಕಡಿಮೆ ಆಗಬಹುದು, family ಗೆ counselling ನೀಡು ಅಂದಾಗ...ಆ ಹಿರಿಯಳ ಮುಖ ಚರ್ಯೆ ನೆ ಬದಲಾಯ್ತು...ಎಷ್ಟೆ ಆನುಭವಿಯಾದ್ರೂ ಸಾವಿನ ಬಗ್ಗೆ ಹೇಳಲು ಕಸಿವಾಸಿಯಾಗುತ್ತೆ ಅನಿಸುತ್ತೆ, ಪಾಪ... sepsis ಆಗಿದೆ ಅನ್ನುವ ಮಾತು ಕೇಳಿಸ್ತು....ಆಮೇಲೆ ಪುನಃ ICU  ಗೆ ಕರೆದು ಕೊಂಡು ಹೋದ್ರು...

ಶ್ರೀಕಾಂತ್ ಭೇಟಿ ನೀಡುವ ಡಾ ವೀರೇಂದ್ರ sandur ಅಂತ. ಎಷ್ಟು ಒಳ್ಳೆಯವರು, ಏನು ಕಾಳಜಿ....ಅವರನ್ನು ಕಂಡರೆ ತುಂಬಾ ಸಮಾಧಾನ ಅನ್ನಿಸುತ್ತೆ. always well turned out... all the OPD staff are so considerate..very genuine..no faking...ಅವರನ್ನು ನೋಡಿ ಕಲಿ ಬೇಕು ಅನ್ನಿಸುತ್ತೆ...ಆದರೆ ನನ್ನ ಸಿಟ್ಟು ಇನ್ನೂ ತಣ್ಣಗಾಗಿಲ್ಲ.  He is reduced to skin and bones...t shirt ಎಲ್ಲ ತೆಗೆದ್ರೆ ನೋಡಕ್ಕೆ ಆಗಲ್ಲ. liver ಸಿಗುವ ತನಕ ಆಸ್ಪತ್ರೆ ಭೇಟಿ ನಿರಂತರ.....







October 30, 2025

ವಿಟಮಿನ್ ಸೊಪ್ಪು/ ಚಕ್ರಮುನಿ ಸೊಪ್ಪು

  Vitamin soppu" refers to leafy greens rich in vitamins and minerals, offering benefits like boosting the immune system, improving vision, and supporting bone health. These greens are often low in calories and can aid in digestion, heart health, and fighting inflammation due to their high fiber, antioxidant, and vitamin C content. from the net

                ನಮ್ಮ ಆಫಿಸಿನ ತಾರಸಿ ತೋಟದಲ್ಲಿ ಬೆಳೆದದ್ದು

ಅಲಸಂಡೆಯ ರುಚಿಯೇ ಇದಕ್ಕೆ...ಕೆ ಟಿ ಗಟ್ಟಿ ಮಾಮನ ಮನೆಯಲ್ಲಿ ಬಾಡಿಗೆಗೆ ಇದ್ದಾಗ, ಅವರ ತೋಟದಲ್ಲಿ ಇದು ಮತ್ತು ಇಲಿ ಕಿವಿ ಸೊಪ್ಪಿನ ತಂಬುಳಿ ಸಾಕಷ್ಟು ಬಾರಿ ಮಾಡಿ ಸವಿದಿ ದ್ದೇವೆ. 

October 27, 2025

ಪಾತ್ರೆ ಕೆತ್ತನೆ-engraving 🙂

 Srikanth's sister's son in law is a collector if brass antiques. He had recently posted a picture of his latest collection which had date engraved on it. This started our whatsapp conversation as below...





ಮೊದಲೆಲ್ಲ ಪಾತ್ರೆ ಉಡುಗೊರೆಯಾಗಿ ಕೊಡುವಾಗ ಅದರ ಮೇಲೆ function ತಾರೀಕು ಮತ್ತು ಕೊಟ್ಟವರ ಹೆಸರನ್ನು ಕೆತ್ತಿ ಕೊಡುತ್ತಿದ್ದರು. ನನ್ನ ಮದುವೆಗೆ ನನ್ನ ದೊಡ್ಡಪ್ಪ ಕೊಟ್ಟ ಪಾತ್ರೆಗಲ ಮೇಲೆ ಹೆಸರು ನೋಡಿದಾಗಲೆಲ್ಲ ಅವರ ನೆನಪು ಆಗುತ್ತದೆ. ಶ್ರೀಕಾಂತ್ ತಂದೆಯ ಅಂಗಡಿಯಲ್ಲಿ ಸ್ಟೀಲ್ ಪಾತ್ರೆಗಳು ಮಾರಾಟಕ್ಕೆ ಇದ್ದವು. ಆಗ ಪಾತ್ರೆಗಳ ಮೇಲೆ ಹೆಸರು ಕೆತ್ತುವ machine ಕೂಡ ಇತ್ತು. ನಮಗೆ ಉಡುಗೊರೆಯಾಗಿ ಬಂದ ಪಾತ್ರೆಗಳ ಮೇಲೆ ಹೆಂಗೆಗೋ ಹೆಸರು ಕೆತ್ತಿಟ್ಟಿದ್ದರು ಶ್ರೀಕಾಂತ್. 😊
ಈಗೀಗ ಮದುವೆ ಮುಂಜಿವೆಗೆ ಏನು ಉಡುಗೊರೆ ಕೊಡೋದು ಅಂತ ಗೊತ್ತಾಗೋದೇ ಇಲ್ಲ. ನಾನು ದುಡ್ಡು ಕೊಟ್ಟು ಬರುವ ಜಾತಿ.







October 21, 2025

ದೀಪಾವಳಿ 2025





ಸಿಂಪ ಸಿಂಪಲ್ ದೀಪಾವಳಿ. ಮಕ್ಕಳು ತುಕಡಿ (ಖಾರ ಶಂಕರಪೊ ಳ್) ಮತ್ತು ಗುಲಾಬ್ ಜಾಮೂನ್ ಮಾಡಲು ಹೇಳಿದರು. ಅದನ್ನೇ ಮಾಡಿದೆ. ನನ್ನ ಹುಟ್ಟು ಹಬ್ಬ ಕೂಡ ನಿನ್ನೆ, ಅದಕ್ಕೆ ನನ್ನ ಇಷ್ಟದ  ಶ್ಯಾವಿಗೆ ಖೀರು ಮಾಡಿ ತಿಂದೆ. ಪುಸ್ತಕ ಖರೀದಿಸಿದೆ. ಆಸ್ಪತ್ರೆಯಲ್ಲಿ ಓದಲು ಅನುಕೂಲವಾಗುವಂತೆ  ಕಥಾ ಸಂಕಲಗಳನ್ನು ತೆಗೊಂಡೆ. ನಮ್ಮ ಗಾಡಿಯಲ್ಲಿ ಒಂದು long drive ಹೋಗಿ ಬಂದೆ. ಸ್ನೇಹಿತೆ ರಾಧಿಕಾ ಗಂಗಣ್ಣ ನನಗೋಸ್ಕರ orchids ಕಳುಹಿಸಿದರು..ಅಷ್ಟೇ

ಅಕ್ಕನ ಬಿಸ್ಕೂಟ ಫ್ಯಾಕ್ಟರಿ ಬಿಸಿ ಆಗಿತ್ತು

ದೀಪಾವಳಿ 2025

Deepavali 2025

ಝಲಕ್


October 17, 2025

ಸಾರಕ್ಕಿ ಕೆರೆ / sarakki lake

 niha wanted to go to some water body...i suggested madiwala lake, but she wanted to go a new place.

i had seen this ಕೆರೆ on many occasions while delivering cakes with akka. i remembered seeing the name 'sarakki kere'  but was not sure. on googling  i found i was right. so there we were! we enjoyed the cool evening, a beautiful sunset and sounds of rippling water. the hordes of kappakki returning to their nests forming a 'v' shape. it was a time well spent, thanks to Niha

i enjoy going out with girls , but since his illness he needs somebody at home. so either of the girls accompany me and.on weekends i encourage them to go out!! we have to compromisr on many things...






ಸಾರಕ್ಕಿ ಕೆರೆ


October 13, 2025

SOLITUDE & me


Yesterday was a lovely me-time treat! While the girls took him to see 'Kantara', a movie he'd been wanting to watch, 

a quick stir fry using palak and methi greens from my bakcony garden

I indulged in some solo activities. I opened all the windows and balcony doors, letting in the fresh air and sunshine I tended to my plants, enjoyed some music, watched my favorite shows, and even baked a bread

this was all that was left for me..girls enjoyed the bread immensely. (whole wheat bread)

As a nature lover, I thrive on sunlight, breeze, and the elements. However, due to his health issues, we often have to compromise. During our hospital visits, he's always bundled up and prefers the windows closed and the AC off. This has taken a toll on me, and I've lost a couple of kilos. Feeling cooped up isn't my thing, but I'm grateful for small joys.

Yesterday was a breather, and I'm thankful the girls could take him out.  🙏🙏


October 7, 2025

ಏನು ಗಿಡ ಇದು?

 ಈ ಗಿಡ ಹುಟ್ಟಿದಾಗ  ಮೊದಲಿಗೆ ಕ್ಯಾರೆಟ್ ಗಿಡ ಅಂದು ಕೊಂಡೆ.. ಎಲೆ ನೋಡಿದ್ರೆ ಕ್ಯಾರೆಟ್ ಎಲೆಗಳ ತರಹ ಅನ್ನಿಸ್ತು. ಹೂ ಬಂದ ಮೇಲೆ ಫೋಟೋ ತೆಗೆದು ಗೂಗಲ್ ಲೆನ್ಸ್ ಗೆ ಹಾಕಿದ್ರೆ ಕ್ಯಾರೆಟ್, ಕಳೆ, ಬಡಿಸೋಪ್ (fennel) ಅಂತೆಲ್ಲ ತೋರಿಸ್ತು. ಈಗ ಪುಟ್ಟ ಪುಟ್ಟ ಬೀಜ ಗಳು ಹುಟ್ಟಿವೆ. ಕೆಲವು ತೆಗೆದು ಕೈ ನಲ್ಲಿ ಉಜ್ಜಿದೆ. ಅದು ಅಜವಾಯಿನ್...🙂



ಲಿವರ್ ತೊಂದರೆ ಇದ್ದವರಿಗೆ ಆಗಾಗ ಹೊಟ್ಟೆ ನೋವು ಗ್ಯಾಸ್  ಕಾಣಿಸಿ ಕೊಳ್ಳುತ್ತೆ. ಅದಕ್ಕೆ ಅಡುಗೆಯಲ್ಲಿ ಸದಾ ಹಿಂಗು, ಜೀರಿಗೆ,  ಬೆಳ್ಳುಳ್ಳಿ ಉಪಯೋಗಿಸುತ್ತೇನೆ. ಮೊನ್ನೆ ಮೆಟ್ರೋ ಕ್ಯಾಶ್ & ಕ್ಯಾರಿ ಗೆ ಹೋದಾಗ  ದೊಡ್ಡ ಪ್ಯಾಕೆಟ್ ಅಜವಾಯಿನ್ ತಂದಿದೆ. ಬಾಟಲಿ ಯಲ್ಲಿ ತುಂಬಿಸುವಾಗ ಕ್ರಲವು ಕಾಳುಗಳು ಬಿದ್ದವು. ಅವನ್ನು ಪಾಟ್ ಗೆ ಹಾಕಿದ್ದೆ.  ಅಲ್ಲಿ ಈ ಗಿಡ ಹುಟ್ಟಿದೆ. 🙂🙂


ಜನ ಎಲ್ಲ ದೊಡ್ಡ ಪತ್ರೆ ಗಿಡಕ್ಕೆ ಅಜವಾಯಿನ್ ಆಗುತ್ತೆ ಅಂತ  ತಪ್ಪು ತಿಳಿದುಕೊಂಡಿದ್ದಾರೆ. 


September 30, 2025

Hung curd dip

ಬಾಡಿಗೆ ಮನೆ ತೆಗೊಂಡು ಒಂದು  ವರ್ಷ ಆಗುವಷ್ಟರಲ್ಲೇ ಅದನ್ನು ಬಿಡಬೇಕಾಯಿತು. ತೋಟದಲ್ಲಿ ಮನೆ ಕಟ್ಟುವವರೆಗೆ ಬಾಡಿಗೆ ಮನೆಯಲ್ಲಿರಬಹುದೆಂದು ಆಸೆಯಿಂದ  ಇದ್ದೆ. ಇವರ ಆರೋಗ್ಯ  ಬಿಗಡಾಯಿಸಿದರಿಂದ ಹಾಗೂ ಸಧ್ಯಕ್ಕೆ ಅಲ್ಲಿ ಹೋಗಿ ಇರಲು ಆಗುವುದಿಲ್ಲ ವೆಂದು ಅದನ್ನು ಬಿಡ ಬೇಕಾಯಿತು. ತುಂಬಾ ಬೇಜಾರಾಯಿತು. ಆಗುತ್ತೆ ಹಾಗೆ ಕೆಲವೊಮ್ಮೆ 😳



ಸ್ವಲ್ಪ ಮೊಸರಿತ್ತು. ಆಕ್ಕ ಅದನ್ನು ಫ್ರಿಜ್ ನಲ್ಲಿಡಲು ಮರೆತಿದ್ದಳಂತೆ. ಅದನ್ನು ಬಟ್ಟೆಯಲ್ಲಿ ಕಟ್ಟಿ, ಸಿಕ್ಕ ದಪ್ಪ ಮೊಸರಿಗೆ ಪುದಿನಾ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು ಮತ್ತು ಅವೊಕಾಡೋ ಬೆರೆಸಿ ಮಿಕ್ಸಿಯಲ್ಲಿ ಹಾಕಿದೆ. ಬ್ರೆಡ್, ಚಪಾತಿ ಮೇಲೆ ಸ್ಪ್ರೆಡ್ ಮಾಡಿ ತಿನ್ನಬಹುದು.  ಮಾಲವಿಕಾ ಚಕ್ಕುಲಿ ಡೀಪ್ ಮಾಡಿ ತಿಂದರೆ ನಾನು ಬಿಸ್ಕಿಟ್ ಅನ್ನು 🙂

September 25, 2025

Sugarless oats cookies

 one glass Oats, 3 soft dates, 5 cashews, 2 almonds, 1 tb sp wheat flour. blend all these ingredient in a blender. to this mixture add 1 tsp baking soda, 1 and 1/2 tea spoon baking powder, a tsp of home made ghee ( for the patient at our home only home made ghee),  you can substitute with oil or butter, 1 tsp vanilla essence, bit of cocoa powder, enough butermilk for the dough to come together. mix into a soft dough. keep aside for 1/2 an hour. roll into ball, flatten with palms. bake at 180 degrees for 15 minutes..more if you like crispy consistency.


i am constantly trying out fun foodss for him to eat... the girls liked this a lot...got over in no time.

oats has fibre which will help in easing constipation. Liver patients suffer from constipation. 

For a person who does not like to cook, i am ending up doing just that and i am not liking it one bit...😧😧

(updating this blog from hospital where he is having albumen transfusion)

September 21, 2025

ಮಖಾನಾ ಖೀರ್ / ಪಾಯಸ

      tiny straw mat woven by malavika           @ragikana

ತುಪ್ಪದಲ್ಲಿ ಗೇರು ಬೀಜ, ಬಾದಾಮಿ, ಮೆತ್ತಗಿನ ಖರ್ಜೂರ ಮತ್ತು ಮಖಾನಾ ವನ್ನು ಹುರಿಯಿರಿ. ಮಖಾನಾ crisp ಆದ ಮೇಲೆ ಪಕ್ಕಕಿಡಿ.  ತಣಿದ ನಂತರ ಇದರರಲ್ಲಿ ಅರ್ಧದಷ್ಟು ತೆಗೆದು ,ಏಲಕ್ಕಿ ಒಟ್ಟಿಗೆ ಮಿಕ್ಸಿಯಲ್ಲಿ ಹಾಕಿ. ಬಿಸಿ ಮಾಡಿ ತಣ್ಣಗಾಗಿಸಿದ ಹಾಲಿಗೆ ತಯಾರಿಸಿದ  ಪುಡಿ ಹಾಗೂ ಮಖಾನಗಳನ್ನು ಬೆರೆಸಿ ಪುನಃ ಬಿಸಿ ಮಾಡಿ. ಪಿಸ್ತಾ ದಿಂದ ಅಲಂಕರಿಸಿ ಸರ್ವ್ ಮಾಡಿ.
ಇವರು ಅನ್ನ/ಅಕ್ಕಿ ಪದಾರ್ಥ ಅಷ್ಟು ಸೇವಿಸುವಂತಿಲ್ಲ. ಅದಕ್ಕೆ ಇವತ್ತು ಮಹಾಲಯ ಅಮಾವಾಸ್ಯೆಯಂದು ಅನ್ನದ ಪಾಯಸದ ಬದಲು ಈ ಖೀರನ್ನು ಮಾಡಿದೆ. ಸಕ್ಕರೆಗೆ ಬದಲಾಗಿ ಎರಡು ಖರ್ಜೂರ ಬಳಸಿದೆ. ನೀವು ಸಕ್ಕರೆ ಅಥವಾ brown sugar ಅಥವಾ ಬೆಲ್ಲ ಬಳಸಬಹುದು.

ಲೋ ಬಿ ಪಿ : ವಾಟ್ ಟು ಡು?  ಲಿವರ್
ಶುಗರ್ ಔಟ್ ಆಫ್ ಕಂಟ್ರೋಲ್ : ಲಿವರ್
ಲೋ ಹಿಮೋಗ್ಲೋಬಿನ್ : ಲಿವರ್
ಎಲ್ಲದಕ್ಕೂ ಲೀವರ್ ಸರಿಯಾಗಿ ಕೆಲಸ ಮಾಡಬೇಕು. 
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. neglect ಮಾಡಬೇಡಿ.
ಮೇಲಿನ ಎಲೆಯಲ್ಲಿ ಬಡಿಸಿದ ಊಟ ಎಲ್ಲ ಸೆಪ್ಪೆ. 😧🤔

September 18, 2025

ಮಖಾನಾ /lotus seed/foxnut

 ಏನಿಲ್ಲ ತಾವರೆ ಹೂವಿನ ಬೀಜ. ಎಲ್ಲ ಸೂಪರ್ ಸ್ಟೋರ್ ಗಳಲ್ಲಿ ಲಭ್ಯ. ಫೈಬರ್ (ನಾರಿನ ಅಂಶ) ಇರೋದರಿಂದ constipation(ಮಲಬದ್ಧತೆ) ದೂರ ಆಗುತ್ತೆ ಅಂತ ಹೇಳ್ತಾರೆ. ಶುಗರ್ ಇದ್ದವರಿಗೆ ಸಂಜೆಯ ಸ್ನಾಕ್ ಆಗಿ ಉತ್ತಮ.

ಸ್ವಲ್ಪವೇ ಎಣ್ಣೆಯಲ್ಲಿ ಈ ಬೀಜಗಳನ್ನು ಹುರಿಯಿರಿ. ಕುರುಮ್ ಆದ ಮೇಲೆ ಉಪ್ಪು, ಕರಿಮೆಣಸು ಬೆರೆಸಿ. ಬೇಕಿದ್ದಲ್ಲಿ ಶೇಂಗಾ ಬೀಜ, ಗೇರು ಬೀಜ ಸೇರಿಸಬಹುದು ಹುರಿಯುವಾಗ. ನಿಮ್ಮದೇ versions ನಲ್ಲಿ ಮಾಡಿ ನೋಡಿ...ಅವಲಕ್ಕಿ ಚೂಡಾ ಮಾಡಿದ ಹಾಗೆ ಕೂಡ ತಯಾರಿಸಬಹುದು.



September 15, 2025

Health update - liver transplant

 


transplant ಗೆ ಪೂರ್ವ ತಯಾರಿ ಆಗಿ..ಹಿಂದಿನ 15 ದಿನಗಳು ಆಸ್ಪತ್ರೆ, ಟೆಸ್ಟ್ ಗಳು ಅಂತ ಓಡಾಟವೇ ಆಯ್ತು , ಎಷ್ಟರ ಮಟ್ಟಿಗೆ ಎಂದರೆ ನಾನು ಒಂದು ವಾರದಲ್ಲಿ ಎರಡು ಕಿಲೋ ತೂಕ ಕಡಿಮೆ ಆಗಿದ್ದೀನಿ.

ಇವತ್ತು ಸ್ವಲ್ಪ ರಿಲ್ಯಾಕ್ಸ್ ಆಗಿ ಮನೆಯಲ್ಲೇ ಇದ್ದೀವಿ.
transplant /ಕಸಿ ಪ್ರಕ್ರಿಯೆಗೆ ರಿಜಿಸ್ಟರ್ ಆಗಿದ್ದೇವೆ. ಬಹುಷ್ಯ operation ಮಂಗಳೂರಲ್ಲಿ. ಯಾವುದೇ ಸಮಯಕ್ಕೆ ಅಲ್ಲಿಗೆ ಹೋಗಲು ತಯಾರಾಗಿರಬೇಕಂತೆ. ನಮಗೆ 8 ಗಂಟೆಯ ಸಮಯ ಕೊಡುತ್ತಾರಂತೆ. ಕೊನೆಯ ಕಂತಿನ ದುಡ್ಡು ಕಟ್ಟಿದ ಮೇಲೆ ಸರ್ಜರಿ ಶುರು. ಒಟ್ಟಿಗೆ ತಗಲುವ ಅಂದಾಜು ವೆಚ್ಚ 34 ಲಕ್ಷ. ಆಮೇಲೂ ಒಂದು ಎರಡು ಮೂರು ಲಕ್ಷ ದುಡ್ಡು ತಗುಲಬಹುದು. ಒಂದು ಸೈಟ್ ಮಾರಿ ದುಡ್ಡು ರೆಡಿ ಇಟ್ಟುಕೊಂಡಿದ್ದೇವೆ. ಅಲ್ಲಿಗೆ ಒಂದು tension ಕಡಿಮೆ.



ಸರ್ಜರಿ ಆದ ಒಂದು ವರ್ಷ ನಾವು ಆರೋಗ್ಯದ ಬಗ್ಗೆ ತುಂಬಾ ಅಂದರೆ ತುಂಬಾ ಎಚ್ಚರ ವಹಿಸಬೇಕು.ಎಲ್ಲಿಗೂ ಪ್ರಯಾಣ ನಿಷಿದ್ಧ. ಯಾವುದೇ ಸೋಂಕು ತಗುಲಬಾರದು.  ದೂರದಿಂದ ಮಾತು ಕತೆ ಆಡಬೇಕು. ಮನೆಯಲ್ಲೂ ಮಾಸ್ಕ್ ಧರಿಸಲೇಬೇಕು.
Now we wait..with bated breath...
ಓದ್ತಾ ಇರಿ. update ಮಾಡುತ್ತಿರುತ್ತೇನೆ
🙏🙏👍

September 11, 2025

Siddavana, Ujire


Six and a half years at RUDSETI, Ujire, was a transformative experience, thanks to the constant interactions with the inspiring Dr. Veerendra Heggade ji and Smt. Hemavati Heggade. Their gentle and down-to-earth nature left a lasting impression on me. I learned valuable lessons from Dr. Heggade about the importance of punctuality and attention to detail, like adding dates to my signature – a habit that has proven invaluable in many challenging situations.

While searching for a friend's picture, I stumbled upon a photograph of our farewell to Dr. Heggade when Srikanth was transferred to Manipal. I'm grateful for their stint at RUDSETI, which sparked their journey to leave banking careers and start organizations dedicated to working with the underprivileged. 

Their selflessness and commitment continue to inspire us.

September 7, 2025

ಒಂದು ಸೂಪರ್ ಮಸಾಲೆ ದೋಸೆ recipe

 ಆಸ್ಪತ್ರೆಯಲ್ಲಿ ಬೆಳಿಗ್ಗೆ ಒಂದು ದಿನ ಗೋದಿ ದೋಸೆ ಕೊಟ್ಟಿದ್ರು ಶ್ರೀಕಾಂತ್ ಗೆ. ಎರಡು ದೋಸೆಯಲ್ಲಿ ಒಂದೂವರೆ ತಿಂದ್ರು. ನಾನು ವೆಸ್ಟ್ ಮಾಡುವ ಪೈಕಿ ಅಲ್ಲ. ಅರ್ಧ ನಾನು ತಿಂದೆ. ತುಂಬಾ ಸಾಫ್ಟ್ ಆಗಿ ರುಚಿಯಾಗಿತ್ತು.

ಇವತ್ತು ನಾನು ಅಂದಾಜಿನಲ್ಲೇ ಗೋದಿ ಬಳಸಿ ಮಸಾಲೆ ದೋಸೆ ಮಾಡಿದೆ. ತುಂಬಾ ಕಿರಿ ಕಿರಿಯೂ ಇಲ್ಲ.

ರಾತ್ರಿ ಎರಡು ಕಪ್ ಸದಕಾ ರವೆ (broken wheat) ಮತ್ತು ಒಂದು table ಸ್ಪೂನ್ ಉದ್ದಿನ ಬೇಳೆ ನೆನೆಸಿದೆ. ಬೆಳಿಗ್ಗೆ ಅವನ್ನು ಚೆನ್ನಾಗಿ ತೊಳೆದು, ಮಿಕ್ಸಿ ಯಲ್ಲಿ  ,ಉಪ್ಪು ಬೆರೆಸಿ , ಒಂದು ಸಣ್ಣ ಶುಂಠಿ ತುಂಡು ಹಾಕಿ ರುಬ್ಬಿದೆ. ತೆಳುವಾಗಿ ದೋಸೆ ಹುಯ್ದಲ್ಲಿ ಕುರುಮ್ ಕುರುಮ್ ಮಸಾಲೆ ದೋಸೆ ರೆಡಿ...ದಪ್ಪ ಹುಯ್ದು ತುಪ್ಪದಲ್ಲಿ  ಬೇಯಿಸಿದರೆ ಇನ್ನೂ ರುಚಿ. ಟ್ರೈ ಮಾಡಿ ಹೇಳಿ ನನಗೆ.


 ಒಳಗಡೆ ಕೆಂಪು ಚಟ್ನಿ ಮತ್ತು ಆಲೂ ಗಡ್ಡೆ ಪಲ್ಯ ಇದೆ. ಕ್ಲಿಕ್ ಮಾಡಲು ಮರೆತೆ...😊❤️

ಅಕ್ಕಿಗಿಂತ ಉತ್ತಮ ತಿನಿಸು ಮತ್ತು ಮನೆ ಮಂದಿಗೆಲ್ಲ ತುಂಬಾ ಇಷ್ಟ ಆಯ್ತು.

ಮರುದಿನ ಪೋಡಿ ದೋಸೆ ಮತ್ತು ಸಾಂಬಾರ್ ಜತೆ



ನಿನ್ನೆ 12.02 ಗೆ  ಚಂದ್ರ ಗ್ರಹಣ ದ ಕೊನೆಯ  ಕ್ಷಣಗಳು 👍❤️😊

September 5, 2025

ಒಂದು ನೆನಪು + health update

 ನಾಲ್ಕು ದಿನ ಪುನಃ ಆಸ್ಪತ್ರೆ ವಾಸ. ನಿನ್ನೆ ರಾತ್ರಿ ಮನೆಗೆ ಬಂದೆವು. ಮೊನ್ನೆ ರಾತ್ರಿ ಡ್ರಿಪ್ಸ್ ಹಾಕಿದ್ರು...ಅವರ ಮೇಲೆ ಒಂದು ಕಣ್ಣು ಇಡ್ತಾ you tube ರೀಲ್ಸ್ ನೋಡ್ತಿದ್ದಾಗ ಈ ಶೆಗಡಿ ಕಾಣಿಸ್ತು.



ತೀರ್ಥಹಳ್ಳಿಯಲ್ಲಿ ಈ ತರಹದ ಒಂದು electric ಶೆಗಡಿ ಇತ್ತು. ಶಾಕ್ ಹೊಡೆಯುತ್ತಿತ್ತು. ಇನ್ನೊಂದು ಎರಡು ಬರ್ನರ್ ನ ಗ್ಯಾಸ್ ಸ್ಟವ್ ಇತ್ತು. ಅದರ ಮೇಲೆ ಏನೋ ಬೇಯುತ್ತಾ ಇತ್ತು. ಅಕ್ಕ ನನಗೆ ಸಾಂಬಾರ್ ಮಸಾಲೆ ಹುರಿಯಲಿಕ್ಕೆ electric ಶೆಗಡಿ ಯುಸ್ ಮಾಡಲು ಹೇಳಿದ್ರು. ಒಂದು ಸಣ್ಣ ಸೌಟಿನಂತಹ ಪಾತ್ರೆಯಲ್ಲಿ ಹುರಿಯ ಬೇಕಿತ್ತು. ಒಂದೊಂದೇ ಮಸಾಲೆ ಹುರೀತಾ ಇದ್ದೆ. ತಪ್ಪಿ ಸ್ಟೀಲ್ ಸ್ಪೂನ್  ಶೆಗಡಿ ಮಧ್ಯದ ಭಾಗದ ತಂತಿಗೆ ತಗುಲಿತು...ಶಾಕ್ ಹೊಡೆದ ರಭಸಕ್ಕೆ ನನ್ನ ಕೈ ನಿಂದ ಸ್ಪೂನ್, ಸೌಟು, ಸಾಂಬಾರ್ ಪದಾರ್ಥಗಳು ಅಡಿಗೆ ಮನೆಯಲ್ಲೆಲ್ಲ ಚಿಲ್ಲಾ ಪಿಲ್ಲಿ. ಎಲ್ಲಿಂದ ಕ್ಲೀನ್ ಮಾಡಲು ಶುರು ಮಾಡಬೇಕೆಂದೆ ತಿಳಿಯದೆ ಸುಮಾರು ಹೊತ್ತು ಗುಮ್ಮನ ಗುಸ್ಕು ತರಹ ನಿಂತು ಕೊಂಡೇ ಇದ್ದೆ. 🤔😊... ಸಧ್ಯ ಅಕ್ಕ(co-sister) ಬೈ ಲಿಲ್ಲ...

health update

ಭಾನುವಾರ ರಾತ್ರಿ ಇವರ movements ಎಲ್ಲ ಸ್ವಲ್ಪ ಸ್ಲೋ ಇತ್ತು...ಶ್ವಾಸ ಎಳೆಯುವಾಗ ಒಂದು ತರಹ ಬೇರೇನೇ ಶಬ್ದ ಬರ್ತಾ ಇತ್ತು. uncomfortable ಮತ್ತು tired ಫೀಲ್ ಆಗ್ತಾ ಇದೆ ಅಂದ್ರು. ಹೊಟ್ಟೆ ನೀರು ತುಂಬಿ ಕೊಂಡು ತುಂಬಾನೇ ದೊಡ್ಡ ಕಾಣ್ತಾ ಇತ್ತು. ಡಾಕ್ಟರ್  ಬಳಿ ಹೋಗುವಾ ಅಂದ್ರೆ ಬೇಡ ಅಂದ್ರು. ಸ್ವಲ್ಪ ಹೊತ್ತಿಗೆ ತಲೆ  ಬುಡ ಅರ್ಥ ವಾಗದ ಮಾತು ಶುರು ಮಾಡಿದ್ರು. ಡಾಕ್ಟರ್ ಗೆ ಮೆಸೇಜ್ ಮಾಡಿದ್ರೆ (ಫೋನ್ ಮಾಡಲಿಕ್ಕೆ ಇಲ್ಲ only msg 😡) ಕರೆದು ಕೊಂಡು ಬನ್ನಿ ಅಂದ್ರು..ಟೆಸ್ಟ್ ಮಾಡಿ, observation ಗೆ ಅಂತ ಅಡ್ಮಿಟ್ ಮಾಡಲು ಹೇಳಿದರು. ಮೈ ನಲ್ಲಿ ಅಮ್ಮೋನಿಯ ಜಾಸ್ತಿ ಆಗಿತ್ತು...ಅದಕ್ಕೆ antibiotic ಅದು ಇದು ಅಂತ ನಾಲ್ಕು ದಿನ ಇದ್ದು 86,000/ ಖರ್ಚು ಆಗಿ ಮನೆಗೆ ಬಂದ್ವಿ..ಸುಸ್ತಾಯ್ತಪ್ಪ..ಇನ್ನು ಮುಂದಿನ ವಾರ ಪುನಃ ಹೋಗ ಬೇಕು...ಸಾಧಾರಣ ಕೆಮ್ಮು ಜ್ವರ ಆದ್ರೆ ನಮಗೆ ಬೇರೆ ಡಾಕ್ಟರ್ ಹತ್ತಿರ ಹೋಗುವ option ಇದೆ. ಆದರೆ ಇದು liver ಕಾಯಿಲೆ...specialist ಬಳಿನೇ ಹೋಗ ಬೇಕು. ಹೇಳಿದ ದುಡ್ಡು ತೆತ್ತಬೇಕು

ಪುನಃ ಓದುಗರಲ್ಲಿ request... ಆರೋಗ್ಯದ ಬಗ್ಗೆ ಕಾಳಜಿ ಮಾಡಿ ಪ್ಲೀಸ್. ಇಲ್ಲದಿದ್ದರೆ ಸಾಕಷ್ಟು ದುಡ್ಡು ಒಟ್ಟು ಮಾಡಿಡಿ. ಉಗುರಿನಿಂದ ಹೋಗುವುದಕ್ಕೆ ಕೊಡಲಿ ಉಪಯೋಗಿಸಬೇಕಾದ ಕಥೆ ಆಯ್ತು.  ಆರೋಗ್ಯವೇ ಭಾಗ್ಯ  ಅನ್ನುವ ಯುಕ್ತಿ ಈಗ ಅರ್ಥ ಆಗ್ತಾ ಇದೆ. ಸೆಪ್ಪೆ ಊಟ ತಿನ್ನಲೇ ಬೇಕು..ಬೇರೆ ಉಪಾಯನೇ ಇಲ್ಲ.. 

ಎರಡು ದಿನ ಆರೋಗ್ಯ ಸರಿಯಿದ್ರೆ ನಾಲ್ಕು ದಿನ ಆರೋಗ್ಯ ಸರಿ ಇರಲ್ಲ. ನಾಳೆ liver trasplant ಸರ್ಜನ್ ಜತೆ ಅಪ್ಪೋಯಿಂಟ್ಮೆಮೆಂಟ್...😏😧. ಯಕೃತ್ತಿನ ಮಹತ್ವ ಈಗ ತಿಳಿಯುತ್ತ ಇದೆ. ಇವರಿಗೆ ಹೇಳ್ತಿರ್ತೀನಿ... write about your experience... ಬೇರೆಯವರಿಗೆ ಅನುಕೂಲ ವಾಗ ಬಹುದು ಅಂತ...ಆದ್ರೆ ಅವರಲ್ಲಿ ಅಷ್ಟು ಶಕ್ತಿನೆ ಇಲ್ಲ..

ಓದ್ತಾ ಇರಿ. update ಮಾಡ್ತಿರ್ತೇನೆ 🙏🙏

August 28, 2025

ಗಣೇಶ ಹಬ್ಬ - 2025


ತುಂಬಾ ಚಿಕ್ಕವಳಿದ್ದಾಗ ಒಂದೊಮ್ಮೆ ನನ್ನ ಸೋದರತ್ತೆಯ ಕುಟುಂಬದ ಜತೆ ಒಬ್ಬರ ಮನೆಯ ಗಣಪತಿ ಪೂಜೆಗೆ ಹೋಗಿದ್ದೆ. ಒಳ್ಳೆ ಪಂಡಾಲ್ ಹಾಕಿ, ಜಮಖಾನೆ ಹಾಸಿಟ್ಟಿದ್ದರು. ಪೂಜೆಗೆ ಪುರೋಹಿತರು, ಅಡಿಗೆಗೆ ಭಟ್ಟರು...ಮನೆಯ ಒಡತಿ ಭರಪೂರ ಬಂಗಾರ ತೊಟ್ಟು ಆರಾಮಾಗಿ (ಅವರಿಗೆ ಒಂದು ಕಾಲಿಗೆ ಪೋಲಿಯೋ ಇತ್ತು) ಎಲ್ಲರ ಜತೆ ಮಾತಾಡ್ತಾ, ನಗ್ತಾ ಕಾಲ ಹಾಕ್ತಾ ಇದ್ದು...ಊಟದ ಸಮಯಕ್ಕೆ ನಮ್ಮೆಲ್ಲರ ಬಿಸಿ ಅನ್ನದ ಮೇಲೆ ತುಪ್ಪ ಬಡಿಸೋದೊಂದೆ ಕೆಲಸ... ಹಬ್ಬ ಅಂದ್ರೆ ಹಾಗಿರಬೇಕು..ಎಲ್ಲರ ಜತೆ ನಾವು ಎಂಜಾಯ್ ಮಾಡಬೇಕು ಅನ್ನುವ ಒಂದು ಆಲೋಚನೆ  ತಲೆಯಲ್ಲಿ ಹೊಕ್ಕಿ ಬಿಟ್ಟಿತ್ತು.
ನನಗೆ ಮದುವೆ ಮಾಡಿ ಕೊಡುವ ಮನೆಯಲ್ಲಿ ಗೌರಿ-ಗಣಪತಿ ಆಚರಣೆಯಲ್ಲಿದೆ ಎಂದು ಅಮ್ಮನಿಗೆ ಸಂಭ್ರಮ....ನನಗೆ ಅದರಲ್ಲೆಲ್ಲ ಆಸಕ್ತಿನೆ ಇರಲಿಲ್ಲ. ಮನೆಯಲ್ಲಿ  ದೀವಾನ್ ಮತ್ತು ಗೋಡೆ ಎಡೆಯಡಿಯ ಸಂಧಿ ನನ್ನ ಅರಮನೆ...ಅಲ್ಲೇ ನನ್ನ ಪುಸ್ತಕದ ಓದು, ಮೈಕ್ರೋ biologist ಆಗುವ ಕನಸು ಇಷ್ಟರಲ್ಲೇ ನನ್ನ ಖುಷಿ.
ಆದರೆ ತೀರ್ಥಹಳ್ಳಿಯಲ್ಲಿ ಚೌತಿಯ ಮುನ್ನಾ ದಿನದಿಂದಲೇ ಒಂದ್ರಾಶಿ ಕೆಲಸಗಳು. ಗೌರಿ ಪೂಜೆಗೆ ತೆಂಗಿನ ಕಾಯಿ ಒಪ್ಪ ಮಾಡಿ ಪೂಜೆಗೆ ಸಿಂಗರಿಸುವುದು...ರಾತ್ರಿ ಎಲ್ಲಾ ಅಂದ್ರೆ ಎಲ್ಲಾ ಪಾತ್ರೆಗಳನ್ನು ತೊಳೆದು ಹಾಕುವುದು. ಇತ್ತ ಕೂರುವುದು ಇಲ್ಲ, ಪೂರ್ತಾ ನಿಲ್ಲುವುದು ಇಲ್ಲ..ಆ ತರಹ ಬಗ್ಗಿ ದೊಡ್ಡ ಪಾತ್ರೆಗಳನ್ನು ತೊಳೆದು ಹಾಕುವುದು...ಅದರಲ್ಲೂ ಮಳೆ ಸಿಡಿಯುವ ಜಾಗ..ನಾಲ್ಕಂಕಣದ ಮನೆ....ಬಟ್ಟೆ ಎಲ್ಲ ತೊಯ್ದು ಹೋಗಿ...ಒದ್ದೆ ಬಟ್ಟೆಯಲ್ಲೇ ಮಲಗ್ತಿದ್ದೆ...ನನ್ನ ಬಳಿ ಇದ್ದುದ್ದೆ ನಾಲ್ಕು ಸೀರೆ..ಎರಡು ಮನೆಯಲ್ಲಿ ಉಡುವಂತದ್ದು.  ಅಪ್ಪ ಕಷ್ಟ ಪಟ್ಟು ನನ್ನ ಮದುವೆ ಮಾಡಿಸಿದರು. ತುಂಬಾ ಹಣಕಾಸಿನ ತೊಂದರೆ ಇತ್ತು.
ಒಂದು ದಿನ ತಮ್ಮ ನನಗೆ ಪತ್ರ ಬರೆದಿದ್ದ..ನಿನ್ನ ಮದುವೆಯಾದ ಮೇಲೆ  ಇಲ್ಲಿ ನಾವು  ದಿನಾ ಗಂಜಿ ಮತ್ತು ಹುರಿದ ಹಪ್ಪಳ ತಿನ್ನೋದು ಅಂತ....ನಾನು ಎಷ್ಟು ಅಪ್ಸೆಟ್ ಆದೇ ಅಂದ್ರೆ ತಿನ್ನೋದೆ ಬಿಟ್ಟು ಬಿಟ್ಟು  ಮೊದಲೇ ಕೋಲಿ ನಂತಿದ್ದವಳು ಕಡ್ಡಿಯಂತಾದೆ...ಎಷ್ಟೆಂದರೆ  ಮದುವೆಯ ನಂತರದ ಮೊದಲ ಯುಗಾದಿಗೆ ಹೋದಾಗ ನನ್ನ ತಂಗಿ ನನ್ನನ್ನು ನೋಡಿ ಬಾತ್ಬ್ರೂಮ್ ಗೆ ಹೋಗಿ ಅತ್ತು ಬಿಟ್ಟಳಂತೆ...ಆಮೇಲೆ ತಮ್ಮ ತಮಾಷೆಗೆ ಹಾಗೆ ಬರೆದದ್ಫು ಅಂತ ಗೊತ್ತಾಯ್ತು...🤔😧 (ಆವಾಗ ಫೋನ್ ಎಲ್ಲ ಇರಲಿಲ್ಲ.. ಅವನಿಗೆ ಅವನ ತಮಾಷೆ ಮರೆತು ಹೋಗಿತ್ತು.
ಸರಿ ಸ್ವಲ್ಪ track change ಆಯ್ತು 😁.
ಮಾಲವಿಕಾ ಹುಟ್ಟಿದ ಹನ್ನೊಂದನೇ ದಿನ - ಕಿವಿ ಚುಚ್ಚುವುದು ಮತ್ತು ನಾಮಕರಣದ ದಿನ with my parents, brothers and ದೊಡ್ಡಮ್ಮ Aug 1990. the only time i missed ganesh chaturthi pooja. otherwise never missed one in 37years..guess what? did not even miss due to periofs either 🤔🤔😁

ಸಧ್ಯ ಹುಷಾರು ತಪ್ಪಲಿಲ್ಲ. ಆದರೆ ವಯಸ್ದು ಆಗ್ತಿದ್ದ ಹಾಗೆ ಸೊಂಟ ನೋವು ಶುರು ಆಯ್ತು. ದೂರದ ಊರಿನಿಂದ ಎರಡು ಬಸ್ change ಮಾಡಿ, ಮಕ್ಕಳಿಬ್ಬರನ್ನೂ ಕರೆದು ಕೊಂಡು, ಅಲ್ಲಿ ತಲುಪುವಷ್ಟರಲ್ಲಿ ಹೈರಾಣಾಗ್ತಿದ್ದೆ. ನನ್ನ ಅಕ್ಕನಿಗೂ ನನಗೂ 20 ವರ್ಷದ ಅಂತರ. ಅವರಿಗೆಷ್ಟು ಸುಸ್ತಾಗಿತ್ತೋ ಪಾಪ...ಗೌರಿ ಗಣೇಶ ಎರಡನ್ನೂ  ಗಣೇಶ ಚತುರ್ಥಿ ದಿನ ಆಚರಿಸುವ ಪರಿಪಾಠ.. ಆದ್ದರಿಂದ ಇನ್ನಷ್ಟು ಕೆಲಸಗಳು ಜಾಸ್ತಿ...
 ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು, ವಿರಾಮ ಸಿಗದಷ್ಟು ಕೆಲಸದ ರಾಶಿ. ಹಬ್ಬ enjoy ಮಾಡಿದ್ದ ನೆನಪಿಲ್ಲ.  ಆ ಮೇಲೆ ಭಯ್ಯ ನವರಿಗೆ  ಹುಷಾರು ತಪ್ಪಿದ ಮೇಲೆ ನಾವು ಬೆಂಗಳೂರಲ್ಲಿ ಗಣಪತಿ ಕೂರಿಸುವದೆಂದಾಯಿತು. ನನ್ನನ್ನು ಒಂದು ಮಾತು ಕೇಳಲಿಲ್ಲ.  ಸ್ವಂತ ಮನೆಯಾದ ಮೇಲೂ ನಿಲ್ಲಿಸುವ, ನನಗೆ stress ಆಗುತ್ತೆ ಅಂದ್ರು ಇವರು ಕಿವಿಗೆ ಹಾಕಿಕೊಳ್ಳಲಿಲ್ಲ...
ಈಗ ಅವರಿಗೆ ಹುಷಾರಿಲ್ಲ, ಪೂಜೆ ಮಾಡಲು ಕೂರಲು ಆಗುವುದಿಲ್ಲ.  ನಮ್ಮ building ನವರು ಗಣಪತಿ ಪೂಜೆ ಮಾಡುತ್ತಾರೆ. ಅಲ್ಲಿಗೆ ದುಡ್ಡು ಕಟ್ಟಿ, ಮನೆಯಲ್ಲಿ ಸಿಂಪಲ್ಲಾಗಿ ನನಗೆ ಬೇಕಾದ ಹಾಗೆ ಪೂಜೆ ಮಾಡಿದೆ. ಮಕ್ಕಳಿಗೆ ಹೆಚ್ಚಿನ ತಿಂಡಿ ಪದಾರ್ಥ ತಿನ್ನುವ ಮನಸ್ಸು ಇರಲಿಲ್ಲ. ಮೊದಲೆಲ್ಲ ಆಫಿಸ್ ಗೆ ಕಳಿಸ್ತಿದ್ದೆ. ಈಗ ಆಫಿಸ್ ಇಲ್ಲ....ಕೆಲವೆಲ್ಲ ಪ್ರಸಾದಗಳನ್ನು ನಮ್ಮ building ನ ಕ್ಲೀನರ್ಸ್ ಗೆ ಕೊಟ್ಟು ಬಿಟ್ಟೆ.



ನಮ್ಮ minimalist ಗಣಪತಿ ಪೂಜೆ.  It felt really good not to do anything. Instead joined our resident welfare  pooje. ಯಾವಾಗಲೂ ಎರಡು ಗಂಟೆಗೆ ಎದ್ದು, ಮನೆ ಕ್ಲೀನ್ ಮಾಡಿ, ಪೊಜೆಯ ಅಡುಗೆಗೆ ಅಣಿಯಾಗುತ್ತಿದ್ದೆ. ಹಿಂದಿನ ತಿ0ಗಳು ಶ್ರೀಕಾಂತ್ ಗೆ ಹೇಳಿಟ್ಟಿದ್ದೆ಼಼ ಈ ಸಲ ಪೂಜೆ ಇಲ್ಲ ಅಂತ...ಅವರಿಗೆ ಕೆಳಗೆ ತುಂಬಾ ಹೊತ್ತು ಕೂರಲು ಆಗುವುದಿಲ್ಲ,  ಅವರು ಹೇಗೂ ಏನೂ ತಿನ್ನಲಿಕ್ಕೆ ಇಲ್ಲ...ಮಕ್ಕಳಿಗೂ ಉಮ್ಮೆದು ಇರಲಿಲ್ಲ. ಹಾಗಾಗಿ ಬೇಸಿಕ್ ಒಂದು ಅಡಿಗೆ. ನನಗೆ ಈ ಪೂಜೆ ಎಲ್ಲದರಲ್ಲಿ ನಂಬಿಕೆ ಇಲ್ಲ,  ಇಷ್ಟವಿಲ್ಲದಿದ್ದರೂ  ಎಲ್ಲವನ್ನು ನೇಮ ನಿಷ್ಠೆಯಿಂದ ಈ ವರೆಗೆ ಮಾಡಿದ್ದೇನೆ...ಇದೆ ಲಾಸ್ಟ್...ಮುಂದಿನ ವರ್ಷ ಎಲ್ಲಾದರೂ ಟ್ರಾವೆಲ್ ಹೋಗ್ತೇನೆ 👍😊🙏🙏






August 25, 2025

ನನ್ನ ಸ್ನೇಹಿತೆ ಸೂಸಿ -ಈಗ ನೆನಪು ಮಾತ್ರ

 ನನ್ನ ಸೂಸಿಯ ಸ್ನೇಹ ಒಂದು ಸುಂದರ- ವಿಚಿತ್ರ. ಅವರು ನನ್ನ ಅಮ್ಮನಿಗಿಂತ ಹಿರಿಯರು...ಅದು ನನ್ನ ಅಮ್ಮನೇ ನನಗೆ ಮನದಟ್ಟು ಮಾಡಿದ್ದು...ನನಗೆ ನಮ್ಮ ವಯಸ್ಸಿನ ಅಂತರ  ಗೊತ್ತಾಗಲೇ ಇಲ್ಲ ಯಾವತ್ತೂ. ಶಾಂತ ಸ್ವಭಾವದ ನನ್ನ ಸೂಸಿ ನಮ್ಮನ್ನೆಲ ಬಿಟ್ಟು ನಿನ್ನೆ ಹೊರಟು ಬಿಟ್ಟರು...ಅವರಿಗೆ ಸುಮಾರು ಜನ ಸೋದರ ಸೋದರಿಯರು ಇದ್ದಾರೆ. 

ಅವರಿಗೆ ಫೋಟೋ ಎಲ್ಲ ಅಷ್ಟು ಹಿಡಿಸುತ್ತಿರಲಿಲ್ಲ. ಆದರೂ ನಾನು ಒಂದೆರಡು ಫೋಟೋ ತೆಗೆಯುತ್ತೇನೆ ಅಂದಾಗ ನಾಚಿ ಹೂಂ ಎಂದಿದ್ದರು. 



ಕೆಳಗಡೆ ಕೆಲವು ಲಿಂಕ್ ನಲ್ಲಿ ಸೂಸಿ ಬಗ್ಗೆ ನೀವು ಓದಬಹುದು...

ಸೂಸಿ

ರಂಜಿತ್ ಮತ್ತು ಸೂಸಿ

ಹಾಗೆ ಸುಮ್ಮನೆ recall/memories


ನಮ್ಮ ಕೊನೆಯ ಭೇಟಿ 2022 ನಲ್ಲಿ....ಆ ಮೇಲೆ ಫೋನ್ ಸಂಪರ್ಕದಲ್ಲಿ ಇದ್ದೆವು.  ಆಮೇಲೆ ಅವರು ಹೊಸ ಫೋನ್ ತೆಗೊಳ್ಳಲು ಹೋದಾಗ ಅಂಗಡಿಯಿಂದ ಫೋನ್ ಮಾಡಿದ್ದೆ ಕೊನೆ. ಹೊಸ ಫೋನ್ ನಲ್ಲಿ ನನ್ನ ನಂಬರ್ ಬಹುಷ್ಯ ಸೇವ್ ಆಗಿಲ್ಲ...ನಾನು ಫೋನ್ ಮಾಡಿದ್ರೆ ಬೀಫ್ ಬರ್ತಿತ್ತು...ಹೇಗೂ ಅವರ ಬಳಿ ಹೋಗಲಿಕ್ಕಿತ್ತು ಅಂತ ಸುಮ್ಮನಾದೆ...ನಮ್ಮ travel ಪ್ಲೇನ್ಸ್ reschedule ಆಗ್ತಾ ಆಗ್ತಾ ಅಲ್ಲಿಗೆ ಹೋಗಲು ಆಗಿಲ್ಲ....