January 29, 2025

Life ❤️❤️of plants

:

Today, while cutting a field marrowಸಾಂಬಾರ್ ಸೌತೆ/ ಮೊಗೆ ಕಾಯಿ/ ಮಗ್ಗೆ(in konkani)  , I stumbled upon a fascinating surprise - viviparous germination! Some seeds had sprouted inside, and I couldn't resist giving them a new lease on life.


I planted them in a pot on my balcony, and now they're thriving. This is part of my little project where I nurture plants in my balcony garden and later replant them at our Teerthahalli farmland.


My farm, now is bursting with an assortment of goodies: chaote, chillies, hakkariki soppu (Indian rocket leaves), ridge gourd, ivy gourd, and more! There's something special about watching these plants grow and flourish.


Gardening is not just a hobby; it's a way to connect with nature and experience the joy of nurturing life.


                          upclose



January 28, 2025

ನಮ್ಮ ಮಕ್ಕಳು


ನನ್ನ ಇಬ್ಬರೂ ಮಕ್ಕಳಿಗೂ ಶ್ರೀಕಾಂತ್ ಕಡೆಯ ಅನುವಂಶಿಕ ಬಳುವಳಿಯಾಗಿ ದಟ್ಟ ಬೇಗನೆ ಬೆಳೆಯುವ ಕೂದಲು. ನನ್ನ ಕಡೆಯವರ ಕೂದಲೂ ಚೆನ್ನಾಗಿದೆ. ಆದರೆ ಸಪೂರ, ಉದ್ದ, ರೇಷ್ಮೆ ನುಣುಪಿನ ಕೂದಲು.

ನನ್ನ ಮಕ್ಕಳಿಬ್ಬರೂ ಸ್ವಲ್ಪ different. ಇಬ್ಬರೂ ಒಳ್ಳೆ ಅಂಕಗಳನ್ನು ಪಡೆದು ತಮ್ಮದೇ ಬೇರೆ ರೀತಿ ಉದ್ದಿಮೆ/ ಜೀವನದ   ಹಾದಿ ಹಿಡಿದು ಆರಾಮಾಗಿದ್ದಾರೆ. ದೊಡ್ಡವಳಂತು ಯಾವುದಕ್ಕೂ  ತಲೆ ಕೆಡೆಸಿಕೊಡುವುದಿಲ್ಲ. ಇಂತಹ ಪೈಕಿ ಇತ್ತೀಚಿನ ದಿನಗಳಲ್ಲಿ ಯಾರೂ ಸಿಗುವುದಿಲ್ಲ.  ಯಾರು ಏನೇ ಅನ್ನಲಿ...ನನಗೆ ಈ ಹಾಡು ನೆನಪು ಬರುತ್ತೆ 'ಯಾರೇ ಕೂಗಾಡಲಿ, ಯಾರೇ ಹೋರಾಡಲಿ....😁

 ಇಬ್ಬರ ಕೂದಲು ಬೆಳ್ಳಗಾಗಲು ಶುರು ಆಗಿದೆ. ಅವರ ಅಪ್ಪ (ಆಶ್ಚರ್ಯ) ಅವರಿಗೆ ಕೂದಲಿಗೆ ಬಣ್ಣ ಹಚ್ಚಲು ಹೇಳುತ್ತಾರೆ. ಇಬ್ಬರೂ ಖಡಾಖಂಡಿತವಾಗಿ ಇಲ್ಲ ಅಂದಿದ್ದಾರೆ. ಇಬ್ಬರೂ ಹೆಯರ್ ಡೈ ( hair dye) ಮುಂತಾದ್ದು ಹಚ್ಚುವುದಿಲ್ಲ. ಕ್ಯಾನ್ಸರ್ patients ಗಳಿಗೆ ವಿಗ್, ಚವರಿ ಮಾಡಲು ಕಪ್ಪು ಬಿಳಿ ಮಿಶ್ರಿತ ಕೂದಲು ತೆಗೆದುಕೊಳ್ಳುತ್ತಾರೆಂದು ಗೊತ್ತಾದಮೇಲೆ,.ಈಗ ಕೂದಲನ್ನು ಸೊಂಪಾಗಿ ಬೆಳೆಸಿ ಅದನ್ನು donate ಮಾಡುತ್ತಾರೆ. ಅವರ ಅಜ್ಜಿ ಅಂದರೆ ನನ್ನ ಅಮ್ಮನಿಗೂ ಕೂದಲು donate ಮಾಡಲು ಪ್ರೇರೇಪಿಸಿದ್ದಾರೆ.

ತಲೆಗೆ ಹಚ್ಚುವ ಎಣ್ಣೆ ನಾನು ತಯಾರಿಸುತ್ತೇನೆ. ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಕರಿಬೇವು, ಮೆಂತೆ ಕಾಳು ಮತ್ತು ಕಲೊಂಜಿ (ನೀರುಳ್ಳಿ ಬೀಜ) ಹಾಕುತ್ತೇನೆ. ಉಗುರು ಬೆಚ್ಚಗೆ ಇರುವಾಗಲೇ ತಲೆಗೆ ಹಚ್ಚುವುದು. ಚಳಿಗಾಲದ ದಿನಗಳಲ್ಲಿ scalp ಡ್ರೈ ಆದರೆ , ಅಥವಾ ಕೂದಲಲ್ಲಿ dandruff ಆದರೆ, ಈ ಎಣ್ಣೆಗೆ ಅರ್ಧ ನಿಂಬೆಯ ರಸ ಹಿಂಡಿದರೆ ಆಯ್ತು. ಬೇರೆಯವರಿಂದ ಮಾಲಿಶ್ ಮಾಡಿಸಿಕೊಂಡರೆ ಉತ್ತಮ 🙂🙂❤️

https://youtube.com/shorts/BYowxTljEK4?si=dPKk8mfEtWoXIF4z

January 25, 2025

ನಂದಿನಿ ಇಡ್ಲಿ ದೋಸೆ ಹಿಟ್ಟು

 


ಯಾವಾಗದರೊಮ್ಮೆ ಬೆಳಗ್ಗಿನ ಬ್ರೆಕ್ಫಾಸ್ಟ್ ಗೆ ಏನೂ ತೋಚದಿದ್ದಾಗ , ರಾತ್ರಿ ಎಲ್ಲಾ ಪ್ರಯಾಣ ಮಾಡಿ ಬೆಳಿಗ್ಗೆ  ಮನೆ   ತಲುಪಿದಾಗ ಅಥವಾ ಗಂಡಸರು ಮಾತ್ರ  ಮನೆಯಲ್ಲಿದ್ದಾಗ, bachelor ಸ್ ಗಳಿಗೆ ಉಪಯುಕ್ತ ಈ ರೆಡಿಮೇಡ್ ಹಿಟ್ಟುಗಳು.

https://youtube.com/shorts/wKkbePe4PC4?si=M8BLhA8_m10ah8iT

ಇಷ್ಟರ ತನಕ ನಾನು ಯುಸ್ ಮಾಡಿದ್ದು ಅಸಲ್, MTR, ID ಪ್ಯಾಕೆಟ್ ಗಳಲ್ಲಿ ನನಗೆ ID ನೆ ಹೆಚ್ಚು ರುಚಿ ಅನ್ನಿಸಿತ್ತು.

ನಂದಿನಿ ಯವರು ಅವರ ಇಡ್ಲಿ ದೋಸೆ ಹಿಟ್ಟು ಬಿಡುಗಡೆ ಮಾಡುತ್ತಾರೆ ಎಂದಾಗ ಖುಷಿ ಅನ್ನಿಸ್ತು. ನಮ್ಮ ಕರ್ನಾಟಕದ್ದು ಅಂತ. ಆದರೆ ನಮಗೆ ID ನೆ ಹೆಚ್ಚು ರುಚಿ ಅನ್ನಿಸ್ತು 👍❤️ ಇನ್ನೊಮ್ಮೆ ಯಾವಾಗದರೊಮ್ಮೆ ಟ್ರೈ ಮಾಡಿ ನೋಡುತ್ತೇವೆ.

 ನನಗೆ ಅಡಿಗೆ ಮಾಡುವುದರಲ್ಲಿ ಆಲಸ್ಯ, ಆದರೂ ಏನೇ   ಹೇಳಿ ಮನೆಯಲ್ಲಿ ತಯಾರಿಸಿದ್ದೆ ಹೆಚ್ಚು ರುಚಿಕರ . ಏನಂತೀರಾ? 😁👍

January 17, 2025

ರಾಜಗಿರಾ ಹಿಟ್ಟು/ amaranth flour

 ರಾಜಗಿರಾ ಲಡ್ಡು ನನಗೆ ಇಷ್ಟ. ಬಿಹಾರ್ ನಲ್ಲಿ ಮೊದಲಿಗೆ ತಿಂದಿದ್ದು. ಇಗ ಬಿಡಿ ಎಲ್ಲಾ ಕಡೆ ಎಲ್ಲವೂ ಸಿಗುತ್ತೆ 😁


ಮೊನ್ನೆ ಊರಿನಿಂದ ಬಂದ ಮೇಲೆ, ಶ್ರೀಕಾಂತ್ ತಂದಿಟ್ಟ ರಾಜಗಿರಾ ಹಿಟ್ಟಿನ ಪ್ಯಾಕೆಟ್ ನೋಡಿದೆ. ಹೇಗಾದ್ರು ಖಾಲಿ ಮಾಡಬೇಕೆಂದು..ಅದರ ಚಪಾತಿ, ಪರೋಟಾ ಎಲ್ಲ ಮಾಡಿ ಆಯಿತು.

ಇವತ್ತು ರಾಜಗಿರಾ ಹಿಟ್ಟಿನ ಮೆಂತೆ ಸೊಪ್ಪು ಹಾಕಿ ಚಪಾತಿ ಮಾಡಿವೆ. ತುಂಬಾ ರುಚಿಕರ ವಾಗುತ್ತೆ. ನನಗಂತೂ ತುಂಬಾ ಇಷ್ಟ ಆಗಿದೆ ಈ ಹಿಟ್ಟು. ಮನೆಯಲ್ಲೂ ಇದು hit ಟು....😁

ಇವತ್ತು ಸಂಕಷ್ಟಿ ಆದ್ದರಿಂದ ಈ ರೆಸಿಪಿಗೆ ಬೆಳ್ಳುಳ್ಳಿ ಸೇರಿಸಿಲ್ಲ. ಕೆಳಗಿನ ವಿಡಿಯೋ ಕ್ಲಿಕ್ ಮಾಡಿ

ಚೆನ್ನಾಗಿ ತೊಳೆದು ಸಣ್ಣಕ್ಕೆ ಕತ್ತರಿಸಿದ ಮೆಂತೆ ದೊಪ್ಪು, ಉಪ್ಪು, ಸಕ್ಕರೆ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ- ಜೀರಿಗೆ ಪುಡಿ, ಅರಸಿನ ಪುಡಿ, ಲಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಹಾಗೆ ಇಡೀ. ಈ ಮಿಶ್ರಣ ನೀರು ಬಿಡುತ್ತೆ. ಈಗ ರಾಜಗಿರಿ ಹಿಟ್ಟು ಸ್ವಲ್ಪ ಗೋದಿ ಹಿಟ್ಟು ಮಿಕ್ಸ್ ಮಾಡಿ. ಅರ್ಧ ಗಂಟೆ ಬಿಟ್ಟು ಚಪಾತಿ ಲಟ್ಟಿಸಿ ತುಪ್ಪ/ಎಣ್ಣೆ ಬಳಸಿ ಎರಡೂ ಬದಿ ಕೆಂಪಾಗುವವರೆಗೆ ಬೇಯಿಸಿ.



 

January 14, 2025

ಮಕರ ಸಂಕ್ರಾಂತಿ 2025

 





ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸಿಹಿ ತಿಂದು ಸವಿ ಮಾತನ್ನಾಡಿ.

ನಾವು ಶ್ರೀಕಾಂತ್ batch mate ಹಾಗೂ ಮಿತ್ರರಾದ ಶ್ರೀ ಜಯರಾಮ್ ರೆಡ್ಡಿ ಮತ್ತು ಜ್ಯೋತಿ ದಂಪತಿಗಳ ತೋಟದಲ್ಲಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿ ವನ ಭೋಜನ ಮಾಡಿದೆವು. ರೊಟ್ಟಿ, ಚಪಾತಿ, ವಿವಿಧ side dish ಗಳು, ಸಿಹಿ ಖಿಚಡಿ/ಪೊಂಗಲ್, ಕಾಯಿ ಹೋಳಿಗೆ, ಸಲಾಡ್ ಕೊನೆಗೆ ಬಾಳೆ ಹಣ್ಣು ಮತ್ತು ಎಲೆ ಅಡಿಕೆ.

ಗಂಡಸರೆಲ್ಲ ಕೂಡಿ ಸಿಹಿ ಖಿಚಡಿ ತಯಾರಿಸಿದ್ದು ಮಾತ್ರವಲ್ಲ ನಮಗೆ ಊಟವನ್ನೂ ಬಡಿಸಿದರು. 




January 11, 2025

insta missing 😁

 ಮಗಳಿಗೆ ಈ ಮೆಸೇಜ್ ಬಂತು ಮೊನ್ನೆ... instagram ನಿಂದ ಹೊರ ಬರ್ತಿದ್ದೀನಿ ಅಂತ ಪೋಸ್ಟ್ ಮಾಡಿ ಎರಡು ದಿನದ ಮೇಲೆ ಅಕೌಂಟ್ ಕ್ಲೋಸ್ ಮಾಡಿದ್ದೆ. ಇವರು ನೋಡಿಲ್ಲವೇನೋ...

 ದಿನ ಬಿಟ್ಟು ದಿನ whatsapp ನಲ್ಲಿ ಎರಡು ಮೂರು ನಂಬರ್ ಗಳಿಂದ...hi, how are you? ಅಂತ ಬರ್ತಿದೆ. ಫೋಟೋ ಇಲ್ಲ, ಪರಿಚಯ ಕೂಡ ಕೊಡದಂತಹ ಮೆಸೇಜ್ ಗಳನ್ನು  ಕೂಡಲೇ ಬ್ಲಾಕ್ ಮಾಡ್ತಿದ್ದೆನೆ...ಉತ್ತರ ಕೊಡಲಿಕ್ಕೆ ಹೋಗಲ್ಲ. ನಾನು ಯಾರಿಗೂ ನನ್ನ ನಂಬರ್ ಕೊಟ್ಟಿಲ್ಲ...ಆದರೂ...

ಆಫಿಸ್ ನಲ್ಲಿ ಶ್ರೀಕಾಂತ್ ಗೆ ಕೇಳ್ತಿದ್ದಾರಂತೆ..ಮಾಲತಿ ಮೇಡಂ insta ಯಾಕೆ ಬಿಟ್ರು? ಅವರ ಪೋಸ್ಟ್ ಮಿಸ್ ಮಾಡ್ತಿದ್ದೆವೆ ಅಂತ 🙂

January 8, 2025

ಹೀಗೂ ಉಂಟು

 

whatsapp forward ನಲ್ಲಿ ಇದು ಬಂದಿದ್ದು ಈ ಪೋಸ್ಟ್ ಗೆ ಪ್ರೇರಣೆ.

ನಮ್ಮ ಕುಟುಂಬದ ಇಬ್ಬರಿಗೆ ಈ ರೀತಿ ಆಗಿದೆ. ಆ ಹುಡುಗರು, ಅವರ ಸ್ವಭಾಸವ ನನಗೆ ಚೆನ್ನಾಗಿ ಗೊತ್ತು...ಅವರಿಗೆ ಹೀಗೆ ಆಗಿದೆ

ಮೊದಲನೇ ಯವನ ಮದುವೆ ಇಂಟರ್ನೆಟ್ app ಮೂಲಕ ಆಗಿತ್ತು. ಬರಿ ಭೋಳೆ ಸ್ವಭಾವ. ಮೃದು ಮಾತು, ನಗು ಮುಖ, ಹಿರಿಯೆಂದರೆ ಭಯ ಭಕ್ತಿ. ನಮ್ಮ ದೇಶದ ಬಗ್ಗೆ ಅಭಿಮಾನ. ಕಲಿಕೆಯಲ್ಲಿ ಮುಂದಿದ್ದು , ಒಳ್ಳೆ ಅಂಕ, scholarship ಎಲ್ಲ ಪಡೆದು, ಹೆಸರಾಂತ ಕಂಪೆನಿ ಯೊಂದರಲ್ಲಿ ಕೈ ತುಂಬಾ ಸಂಬಳ ಬರುವ ನೌಕರಿ. ಅವನಿಗೆ ಮದುವೆಯಾಯ್ತು. ಆರು ತಿಂಗಳಿಗೆ ಅವಳು ಡೈವೋರ್ಸ್ ಬಗ್ಗೆ ವರಾತ ಶುರು ಮಾಡಿದಳು. ಕಾರಣ ಹೇಳಲಿಲ್ಲ. ಹಿರಿಯರು ಮಾತುಕತೆ ಎಲ್ಲ ನಡೆಸಿದರು. ಹುಡುಗಿಗೆ ಅವಳ ಅಮ್ಮನ ಸಹಕಾರ ಕೂಡ ಇತ್ತು. ಕೊನೆ ಕೊನೆಗೆ ಅವಳು ಡೌರಿ ಕೇಸ್/ harassment ಕೇಸ್ ಎಲ್ಲ ಹಾಕ್ತೀನಿ ಅನ್ನಲಿಕ್ಕೆ ಶುರು ಮಾಡಿದಳು. 8 ಲಕ್ಷ ಬೇಕೇ ಬೇಕೆಂದು...ಕೊನೆಗೆ out of court settlement ಆಯ್ತು. ಹುಡುಗ depression ಗೆ ಹೋದ. ಎರಡು ವರ್ಷ ಬೇಕಾದವು ಅವನಿಗೆ ಸರಿ ಹೋಗಲು.  ಆಮೇಲೆ ತಂದೆ ತಾಯಿ ನೋಡಿದ ಹುಡುಗಿಯನ್ನು ವರಿಸಿ, ಭಾರತದಲ್ಲೇ ಇದ್ದು ಸಾಧನೆ ಮಾಡಿ ತೋರಿಸಲು ಹೋದ ಹುಡುಗ  ಹೊರ ದೇಶಕ್ಕೆ  ಹಾರಿದ. ಹುಡುಗಿಯರು ನಮ್ಮ ಕಾನೂನಿನ ದುರುಪಯೋಗ ಮಾಡುತ್ತಿದ್ದಾರೆ.

(ಕೆಲ ತಿಂಗಳ ನಂತರ ಆ ಹುಡುಗಿ ಮೆಸೇಜ್ ಮಾಡಿದ್ದಳಂತೆ...' you are a sweet person. i am sorry i did this to you. ಅಮ್ಮ ಹೇಳಿದ ಹಾಗೆ ಕೇಳಿ ಇದೆಲ್ಲ ಆಯ್ತು ಅಂತ. ಅವರಿಬ್ಬರೂ ಕೂಡಿ ಮೊದಲೇ ಎರಡು ಹುಡುಗರ ಬಾಳು blackmail ಮಾಡಿ ಹಾಳು ಮಾಡಿದ್ದಾರೆಂದು ಆ ಮೇಲೆ ತಿಳಿಯಿತಂತೆ)

ಇನ್ನೊಬ್ಬ ನನಗೆ ಗೊತ್ತಿರುವ ಹುಡುಗ ಒಂದು ಕೋಟಿ ಕೊಡಬೇಕಾಯಿತು. ಅವರದ್ದು ಅನುಕೂಲಸ್ಥ ಕುಟುಂಬ. ತಂದೆ ಒಂದು ಸೈಟ್ ಮಾರಿ ದುಡ್ಡು ಕೊಟ್ಟರಂತೆ. 

January 4, 2025

ಏನಿದು??!! 😊


my nieces' from US, go to great lengths to get me some exotic stuffs.

ಹೌದು, ಪೈಂಟ್ ಟ್ಯೂಬ್ ತರಹ ಕಾಣ್ತಿರೋದು ವಿಧ ವಿಧ flavor ನ ಜ್ಯಾಮ್ ಗಳು.

ಹಿಂದಿನ ಸಲ ಅವಳು ಕಳುಹಿಸಿದ ಕಿತ್ತಲೆಯ ಜ್ಯಾಮ್ ಸಖತ್ ರುಚಿಯಾಗಿತ್ತು.  ನನಗೆ ಬ್ರೆಡ್ ಇಷ್ಟ ಅಂತ ಗೊತ್ತಿದ್ದು, ನಿವೇದಿತಾ ಟೂರ್ ಹೋದಾಗ ತಂದಿದ್ದು. ನನ್ನ ಕಣ್ಣ ಮುಂದೆ ಬೆಳೆದ ಹುಡುಗಿ ಈಗ ಕೆಲಸಕ್ಕೂ ಸೇರಿಯಾಯಿತು. ಅವಳ ತಂಗಿ ಕೂಡ ಕೆಲಸ ಹುಡುಕುತ್ತಿದ್ದಾಳೆ. 





January 1, 2025

ಹೊಸ ವರ್ಷದ ಶುಭಾಶಯಗಳು

 


ಮೊನ್ನೆ ಒಂದಿನ ರಾತ್ರಿ ಎಚ್ಚರವಾಗಿ ಮೊಬೈಲ್ ಓಪನ್ ಮಾಡಿದೆ. ಬಹುಷ್ಯ you ಟ್ಯೂಬ್ ಆನ್ ಇತ್ತು. ನಾನು ಓಪನ್ ಮಾಡಿದ ತಕ್ಷಣ ನಾಲ್ಕೈದು ವಿಡಿಯೋ ಗಳ thumb nail ನಲ್ಲಿ 'ಈ ವರ್ಷ ಹಸ್ತಾ ನಕ್ಷತ್ರ ಕನ್ಯಾ ರಾಶಿ' ಯವರಿಗೆ ಬಹಳ ಉತ್ತಮ ಅಂತಿತ್ತು..ನನ್ನ ನಕ್ಷತ್ರ... ತುಂಬಾ ಖುಶಿ ಆಯ್ತಪ್ಪಾ...😁😁

ಕ್ರಿಸ್ಮಸ್, ಹೊಸ ವರ್ಷದ eve ಬಿಸ್ಕೂಟ ಫ್ಯಾಕ್ಟರಿ ತುಂಬಾ ಬ್ಯುಸಿ ಆಗಿತ್ತು. TOUCWOOD

teerthahalli ತೋಟದಲ್ಲಿ ಕೆಲಸ ಭರದಿಂದ ಸಾಗಿದೆ. ಜನವರಿ ತಿಂಗಳ ಹೆಚ್ಚಿನಂಶ ನಾನು ಅಲ್ಲೇ ಕಳೆಯುತ್ತೇನೆ. ಈ ವರ್ಷ ಅಂದರೆ 2025 ಮುಗಿಯುವಷ್ಟರಲ್ಲಿ ನನಗೊಂದು ದನ ಕೊಡಿಸಿ ಅಂತ ಹೇಳಿದ್ದೇನೆ.  i am excited.  ನೋಡುವಾ ಏನೆಲ್ಲಾ ಆಗುತ್ತೆ ಅಂತ. will keep my readers updated.

ಹಾಗೆಯೇ ನನ್ನ you tube channel ನೂ ಚೆಕ್ ಮಾಡಬಹುದು 🙏🙏

https://youtube.com/@malathishenoytv723?si=OrHyw78G9QcAHqqA

ಎಲ್ಲರಿಗೂ ಹೊಸ ವರ್ಷ ಶುಭವಾಗಲಿ ❤️❤️

ನಾನು ಮಾಡಿದ ಕೇಕ್