whatsapp forward ನಲ್ಲಿ ಇದು ಬಂದಿದ್ದು ಈ ಪೋಸ್ಟ್ ಗೆ ಪ್ರೇರಣೆ.
ನಮ್ಮ ಕುಟುಂಬದ ಇಬ್ಬರಿಗೆ ಈ ರೀತಿ ಆಗಿದೆ. ಆ ಹುಡುಗರು, ಅವರ ಸ್ವಭಾಸವ ನನಗೆ ಚೆನ್ನಾಗಿ ಗೊತ್ತು...ಅವರಿಗೆ ಹೀಗೆ ಆಗಿದೆ
ಮೊದಲನೇ ಯವನ ಮದುವೆ ಇಂಟರ್ನೆಟ್ app ಮೂಲಕ ಆಗಿತ್ತು. ಬರಿ ಭೋಳೆ ಸ್ವಭಾವ. ಮೃದು ಮಾತು, ನಗು ಮುಖ, ಹಿರಿಯೆಂದರೆ ಭಯ ಭಕ್ತಿ. ನಮ್ಮ ದೇಶದ ಬಗ್ಗೆ ಅಭಿಮಾನ. ಕಲಿಕೆಯಲ್ಲಿ ಮುಂದಿದ್ದು , ಒಳ್ಳೆ ಅಂಕ, scholarship ಎಲ್ಲ ಪಡೆದು, ಹೆಸರಾಂತ ಕಂಪೆನಿ ಯೊಂದರಲ್ಲಿ ಕೈ ತುಂಬಾ ಸಂಬಳ ಬರುವ ನೌಕರಿ. ಅವನಿಗೆ ಮದುವೆಯಾಯ್ತು. ಆರು ತಿಂಗಳಿಗೆ ಅವಳು ಡೈವೋರ್ಸ್ ಬಗ್ಗೆ ವರಾತ ಶುರು ಮಾಡಿದಳು. ಕಾರಣ ಹೇಳಲಿಲ್ಲ. ಹಿರಿಯರು ಮಾತುಕತೆ ಎಲ್ಲ ನಡೆಸಿದರು. ಹುಡುಗಿಗೆ ಅವಳ ಅಮ್ಮನ ಸಹಕಾರ ಕೂಡ ಇತ್ತು. ಕೊನೆ ಕೊನೆಗೆ ಅವಳು ಡೌರಿ ಕೇಸ್/ harassment ಕೇಸ್ ಎಲ್ಲ ಹಾಕ್ತೀನಿ ಅನ್ನಲಿಕ್ಕೆ ಶುರು ಮಾಡಿದಳು. 8 ಲಕ್ಷ ಬೇಕೇ ಬೇಕೆಂದು...ಕೊನೆಗೆ out of court settlement ಆಯ್ತು. ಹುಡುಗ depression ಗೆ ಹೋದ. ಎರಡು ವರ್ಷ ಬೇಕಾದವು ಅವನಿಗೆ ಸರಿ ಹೋಗಲು. ಆಮೇಲೆ ತಂದೆ ತಾಯಿ ನೋಡಿದ ಹುಡುಗಿಯನ್ನು ವರಿಸಿ, ಭಾರತದಲ್ಲೇ ಇದ್ದು ಸಾಧನೆ ಮಾಡಿ ತೋರಿಸಲು ಹೋದ ಹುಡುಗ ಹೊರ ದೇಶಕ್ಕೆ ಹಾರಿದ. ಹುಡುಗಿಯರು ನಮ್ಮ ಕಾನೂನಿನ ದುರುಪಯೋಗ ಮಾಡುತ್ತಿದ್ದಾರೆ.
(ಕೆಲ ತಿಂಗಳ ನಂತರ ಆ ಹುಡುಗಿ ಮೆಸೇಜ್ ಮಾಡಿದ್ದಳಂತೆ...' you are a sweet person. i am sorry i did this to you. ಅಮ್ಮ ಹೇಳಿದ ಹಾಗೆ ಕೇಳಿ ಇದೆಲ್ಲ ಆಯ್ತು ಅಂತ. ಅವರಿಬ್ಬರೂ ಕೂಡಿ ಮೊದಲೇ ಎರಡು ಹುಡುಗರ ಬಾಳು blackmail ಮಾಡಿ ಹಾಳು ಮಾಡಿದ್ದಾರೆಂದು ಆ ಮೇಲೆ ತಿಳಿಯಿತಂತೆ)
ಇನ್ನೊಬ್ಬ ನನಗೆ ಗೊತ್ತಿರುವ ಹುಡುಗ ಒಂದು ಕೋಟಿ ಕೊಡಬೇಕಾಯಿತು. ಅವರದ್ದು ಅನುಕೂಲಸ್ಥ ಕುಟುಂಬ. ತಂದೆ ಒಂದು ಸೈಟ್ ಮಾರಿ ದುಡ್ಡು ಕೊಟ್ಟರಂತೆ.

No comments:
Post a Comment