August 30, 2020

Niha's Art - my lines



Many a sleepless nights

I sit out and gaze at the skies

I see these white birds

Pearly white against the black backdrop

Weaving seamlessly through  the scattered clouds.

Wonder where they go on as night flies

Or do they put on this show

Only for my eyes!!!??

August 28, 2020

My weight loss journey

  

                                                                          ಚೌತಿ ೨೦೨೦
                                                                    ಚೌತಿ ೨೦೨೦
                                                   ಇದು ಹಿಂದಿನ ವರ್ಷದ ಚೌತಿ ಫೋಟೋ ೨೦೧೯

ಲಾಕ್ ಡೌನ್ ಶುರು ಆದಾಗಲಿಂದ  ನನ್ನ ವಾಕ್ ತಪ್ಪಿ ಹೋಗಿತ್ತು. ಮನೆ ಯಲ್ಲಿ .ಕೂತು , instagram ನಲ್ಲಿ ಶೇರ್ ಮಾಡುವ ನೇವದಿಂದ ತರಹೇವಾರಿ ತಿಂಡಿ, ಸ್ವೀಟ್, ಕೇಕ್ ಮಾಡಿ ತಿಂದು ಸಹಜವಾಗೇ ಮೈ ಬಂದಿತ್ತು

ಕೊರೊನಾ ಕಾಯಿಲೆ ತಡೆಗಟ್ಟುವ immunity booster ಪುಡಿ ತಮ್ಮ ಕಳಿಸಿ ಕೊಟ್ಟಿದ್ದ. ದಿನಕ್ಕೆ ಎರಡು ಬಾರಿ ಬಿಸಿ ನೀರಲ್ಲಿ ಈ ಪುಡಿ ಮತ್ತು  ನಿಂಬೆ ರಸ ಬೆರೆಸಿ ಕುಡಿಯುವುದು. ನಾನು ರುಚಿಗೊಸ್ಕರ ಮಾತ್ರಇದನ್ನು ಸೇವಿಸುತ್ತಿದ್ದೆ.

 ಎರಡು ವಾರದ   ನಂತರ ಅಕ್ಕನ ಕೇಕ್ ಗಳ ಸಾಮಗ್ರಿ ತರಲು ತಯಾರಾಗುತ್ತಿದ್ದಾಗ  ಏನಾಶ್ಚರ್ಯ, ಬಟ್ಟೆ ಲೂಸ್ ಆಗಿತ್ತು.

ಈ ಕಶಾಯದ ಪುಡಿಯ  ಹಿಂದೆ ನನ್ನ ತಮ್ಮನ ಹೆಂಡತಿಯ ಎರಡು ವರ್ಷದ ಪರಿಶ್ರಮ ಇದೆ. ಅಡಿಗೆ ಮನೆಯಲ್ಲಿ ಲಭ್ಯವಿರುವ ಸಾಂಬಾರ ಪದಾರ್ಥಗಳಾದ  ಜೀರಿಗೆ, ಸೌ0ಫ್, ಅರಿಶಿನ, ಅಜ್ವಾಯ್ನ್  ಮುಂತಾದ ಕೆಲವು ಸಾಮಗ್ರಿಗಳನ್ನು ಹುರಿದು  ತಯಾರಿಸಲಾಗಿದೆ. ನಾನು ಮತ್ತು ಅಕ್ಕ ಇಬ್ಬರೂ ಇದನ್ನು ಉಪಯೋಗಿಸಿ ಸಣ್ಣಗಾಗಿದ್ದೇವೆ

೨೫೦ ಗ್ರಾಮ್ ಕಷಾಯದ ಪುಡಿಗೆ 160 ರೂ. 

ಇದರ ವಿಶಿಷ್ಟತೆ ಏನಂದ್ರೆ, ಇದನ್ನು ಯಾವಾಗ ಬೇಕಾದ್ರೂ ಕುಡಿ ಬಹುದು. ಒಂದು ಪ್ಲಾಸ್ಕ್ ನಲ್ಲಿ ಬಿಸಿ ನೀರು ಇತ್ತು ಕೊಂಡ್ರೆ, ಒಂದು ಗ್ಲಾಸ್ ಬಿಸಿ ನೀರಿಗೆ, ಅರ್ಧ ಟೀ ಚಮಚದಷ್ಟು ಕಷಾಯ ಪುಡಿ, ಸ್ವಲ್ಪ ನಿಂಬೆ ರಸ. ನಿ0ಬೆಯ ರಸ ಕೂಡ ಮಾಡಿಟ್ಟು ಕೊಳ್ಳಬಹುದು. ನಿಂಬೆ ರಸ ಯಾಕಂದ್ರೆ ಪುಡಿಯಲ್ಲಿರುವ ಔಷಧೀಯ ತತ್ವಗಳನ್ನು ದೇಹದೊಳಗೆ ಬೇಗನೆ absorb ಮಾಡಲು. ಮಾತ್ರವಲ್ಲ ಇದರಲ್ಲಿದೆ vitamin c.

ಬಾಯಾರಿಕೆಯಾದಾಗಲೆಲ್ಲಾ ಸುಮ್ಮನೆ ನೀರು ಕುಡಿಯುವ ಬದಲು ಈ ಕಷಾಯ ಕುಡಿಯಬಹುದು

ಖಂಡಿತ ಅಡ್ಡಪರಿಣಾಮ/ ದುಷ್ಪರಿಣಾಮಗಲಿಲ್ಲ.

ಹೆಚ್ಚಿನ ಮಾಹಿತಿಗಾಗಿ malathi.shenoy@gmail.com 

Comments  ಗೆ updated blog ನಲ್ಲಿ  hege uttarisuvudu ಅಂತ  ಗೊತ್ತು ಆಗ್ತಾ ಇಲ್್ಲ. Sorry

August 12, 2020

ಎಲರ್ಜಿಯೂ ಆಸ್ಪತ್ರೆಯೂ

ನಾವು ಕೃಷ್ಣಾಷ್ಟಮಿ ಗೆ ಗಜಬಜೋ ಅಂತ ಒಂದು ಪದಾರ್ಥ ಮಾಡ್ತೇವೆ. ಮಿಶ್ರ ತರಕಾರಿಗಳ ಹುಳಿ. ಈ season ನಲ್ಲಿ ಲಭ್ಯ ತರಕಾರಿ, ಗೆಡ್ಡೆ ದಂಟು ಎಲ್ಲ ಹಾಕುತ್ತೇವೆ.
ನಿನ್ನೆ ಊಟಕ್ಕೆ ಕೂತ ನಿಹಾ, ಗಜಬಜೋ ಬಾಯಿಗೆ ಹಾಕಿದ್ದೆ..ಇನ್ನೂ ನುಂಗೆ ಇರಲಿಲ್ಲ, ಗಂಟಲು ಹಿಡಿದುಕೊಂಡು ಉಸಿರಾಡಲು ತೊಂದ್ರೆ ಪಟ್ಟಳು. ಕೂಡಲೇ ಮಜ್ಜಿಗೆ ಕುಡಿಯಲು ಕೊಟ್ಟೆ. ಗಜಬಜೋದಲ್ಲಿ ಹಾಕಿದ ಕೆಸುವಿನ ದಂಟಿಗೆ reaction. ಕೂಡಲೇ ಆಕೆಯ ಡಾಕ್ಟರ್ ಫ್ರೆಂಡ್ ಗೆ ಫೋನ್ ಮಾಡಿದೆ. If she is choking go immediately to a hospital and get her an anti allergic shot ಅಂತ ಹೇಳಿದ್ರು. ಅನ್ನ ನಾಳ ಹಾಗೂ ಶ್ವಾಸ ನಾಳ ಹತ್ತಿರ ಇರೋದರಿಂದ, allergy ಇಂದ ಅನ್ನ ನಾಳ ಊದಿಕೊಂಡು ಶ್ವಾಸ್ ನಾಳದ ಮೇಲೆ ಒತ್ತಿದ ಹಾಗೆ ಆಗಿ ಉಸಿರಾಡಲು ಸಮಸ್ಯೆ ಆಗುತ್ತೆ ಅಂದರು
ಪುಣ್ಯಕ್ಕೆ ಗೇಟ್ ಬಳಿಯೇ ರಿಕ್ಷಾ ಸಿಗ್ತು. ಹತ್ತು ಹೆಜ್ಜೆ ನಡೆದರೆ ಆಸ್ಪತ್ರೆ but i did not want to take chances. ಆಸ್ಪತ್ರೆಗೆ ಹೋಗುವ ಮೆಟ್ಟಿಲ ಬಳಿ ಸೆಕ್ಯೂರಿtti.ಅವನಿಗೆ ಎಲರ್ಜಿ ಅಂದ್ರೆ ಅರ್ಥ ಆಗಲಿಲ್ಲ. ಅವನು ಡಾಕ್ಟರ್ ಅನ್ನು ಕರೆದು ತಂದ. ಅವರು ನಮ್ಮನ್ನು ಒಳಗೆ ಬರಲು ಹೇಳಿದರು...ಸೆಕ್ಯೂರಿತಿಯಂವ temperature ಚೆಕ್ ಮಾಡಿ, ನಮಗೆ ಸೋಪ್ ನಿಂದ ಕೈತೊಳೆದು ಒಳಗೆ ಹೋಗಲು ಹೇಳಿದ. ನಿಹಾಗೆ ಮೊದಲು ಒಳಗೆ ಕಳಿಸಿದೆ, ಆಮೇಲೆ ನಾನು. ಅವಳು ಮಾತನಾಡಲು ಪ್ರಯಾಸ ಪಡ್ತಾ ಇದ್ಲು, ಮಾತ್ರವಲ್ಲದೆ ಹಿಂದಿಯಲ್ಲಿ ಕೆಸುವಿನ ಎಲೆಗೆ ಏನು ಹೇಳ್ತಾರೆ ಅಂತ ಆಕೆಗೆ ಗೊತ್ತಿರಲಿಲ್ಲ. ನಾನು ತಲುಪಿ ಹೇಳಿದೆ. ಡಾಕ್ಟರ್ ಯು ಪಿ ಯ ಯುವಕ. ನಿಹಾಗೆ ಔಷಧಿ ಕೊಡುವ ಬದಲು, ಆರ್ಬಿ ಔರ್ ಸೂರನ್ ಸೆ ಎಲರ್ಜಿ ಹೋtaa ಹೈ, ಉಸೆ ಅಲಗ್ ತರೀಕೆ ಸೆ ಪಕಾನಾ ಚಾಹಿಯೇ, ನ್ನಿಂಬೂ ಕ ರಸ್ ಡಾಲನಾ ಚಾಹಿಯೇ ಅಂತ ಶುರು ಹಚ್ಕೊಂಡ್ರೆ ನಿಹಾ ಅವಳ ಗಂಟಲು ಗಟ್ಟಿ ಹಿಡಿದುಕೊಂಡು ಶಬ್ದ ಮಾಡ್ತಾ ಇದ್ಲು. ಕೊನೆಗೆ ನನ್ನ ಗಡಸು ಮುಖ ನೋಡಿ, ಇನ್ಗಜೇಕ್ಷನ್ ಬೇಡ ಅಂತ ಬೇಗ ಔಷಧಿ ಬರೆದುಕೊಟ್ರು.
ನೀರು ಒಯ್ದದ್ದರಿಂದ ಅಲ್ಲೇ ಒಂದು ಡೋಸ್ ಮಾತ್ರೆ ತೆಗೊಂಡಳು. ರಾತ್ರಿ ಆಗುವಷ್ಟರಲ್ಲಿ ಅವಳ ಆರೋಗ್ಯದಲ್ಲಿ  ಸುಮಾರಷ್ಟು ಸುಧಾರಣೆ ಆಯ್ತು
ಗಜಬಜೆಯಿಂದ ತಲೆಯೇಲ್ಲ ಗಜಿಬಿಜಿ ಆಯ್ತು 🤔🤔
Anyways all is well that ends well...

August 10, 2020

Banana jamoon

 


1 cup insta gulab jamun mix

1/2 cup sugar

1/2 overripe nendra banana

1 tsp ghee

Grind together sugar and banana to a smooth paste

Add g j mix and make a soft pliable dough. Smear ghee to palms and make balls

Deep fry on a low flame till golden brown

Serve with icecream

Decorate with microgreens of your choice 






August 2, 2020

ಬಸ್ ಜೋಕ್

ನಿನ್ನೆ ಕೇಕ್ ಗೆ ಬೇಕಾಗುವ ಸಾಮಗ್ರಿ ತರಲು ಬಸ್ ನಲ್ಲಿ ಹೋಗ್ತಾ
ಒಬ್ಬ ಹುಡುಗಿ ಕಂಡಕ್ಟರ್ ಅವರನ್ನು ಉದ್ದೇಶಿಸಿ : ಸರ್ ಜನತಾ ಬಜಾರ್ ಹೋಗುತ್ತಾ?
ಕಂಡಕ್ಟರ್ ಗಟ್ಟಿಯಾಗಿ ನಗುತ್ತ : ಜನತಾ ಬಜಾರ್ ಇದ್ದಲ್ಲೇ ಇರುತ್ತೆ ಮೇಡಂ, ಬಸ್ ಅಲ್ಲಿ ತನಕ ಹೋಗುತ್ತೆ
.....................................................

ಮೊದಲಾದರೆ ಇದೆ ದಾರಿ , 30 ನಿಮಿಷ ಬೇಕಾಗ್ತಿತ್ತು ತಲುಪಲು..ಈಗ ಐದೇ ನಿಮಿಷ. ನಾನು ಅಕ್ಕ ಸೇರಿ 7 ಜನರಿದ್ದೆವು ಬಸ್ ನಲ್ಲಿ. ಚಾಲಕ ಕಂಡಕ್ಟರ್ ಇಬ್ಬರೇ ಗಂಡಸರು...
ಏನೇ ಅನ್ನಿ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು
😀😀