November 24, 2015

ಪಂಢರಾಪುರ

ಎರಡು ತಿಂಗಳಿಗೊಮ್ಮೆ ಎಲ್ಲಾದರೂ ಎರಡು ದಿನ ಹೋಗಿ ಬರುವ ನಮ್ಮ ಪ್ಲಾನ್ ನಡೀತಿದೆ ಎನ್ನುವ ಖುಶಿ. ನನ್ನ ತಮ್ಮ ನ ಮನೆ ಗೃಹ ಪ್ರವೇಶ ದೀಪಾವಳಿ ಟೈಮ್ ನಲ್ಲೇ ಇಟ್ಟು ಕೊಂಡಿದ್ದ. ಹಾಗಾಗಿ ನಾವು ನಾಲ್ಕು ದಿನ ರಜೆ ಹಾಕಲು ಸಾಧ್ಯವಾಯಿತು. ಗೃಹ ಪವೇಶ ಆದ ದಿನ ಸಂಜೆ ನಮಗೆ ಮರಾಠಿ ಸಿನಿಮಾ -ಕಟ್ಯಾರ್ ಕಾಳ್ಜಾತ್ ಘುಸ್ಲಿ’ ನೋಡುವ ಟ್ರೀಟ್ ನನ್ನ ತಮ್ಮನ ಪ್ರೆಂಡ್ ನಿಂದ. ಅದು ಮೊದಲು ರಂಗ ಸಂಗೀತ ಮಾದರಿಯಲ್ಲಿ ಎರಡು ವರ್ಷದ ಹಿಂದೆ ರಂಗ ಶಂಕರದ್ಅಲ್ಲಿ ನೋಡಿ ಮೈ ಮನಸ್ಸು ಝುಮ್ ಎಂದಿತ್ತು. ಸಿನಿಮಾ ಕೂಡಾ ಚೆನ್ನಾಗಿದೆ.
ಪಂಢರಾಪುರಕ್ಕೆ ನಾನು ಚಿಕ್ಕವಳಿದ್ದಾಗ ಹಲವಾರು ಬಾರಿ ಹೋಗಿದ್ದೇನೆ. ಅಷ್ಟ್ಯಾಕೆ ನನ್ನ ತಮ್ಮ ಪಂಢರಾಪುರಕ್ಕೆ ಹೋದ ನಂತರ ಹುಟ್ಟಿದ್ದರಿಂದ ಅವನಿಗೆ ’ಪಾಂಡುರಂಗ’ ಅಂತ ಹೆಸರು ಬೇರೆ ಇಟ್ಟಿದ್ರು. ತುಂಬ ಚೆಂದ ನನ್ನ ಆ ತಮ್ಮ. ಚಿಕ್ಕವನಿದ್ದಾಗ ಹೆಲ್ತಿ ಬೇಬಿ ಕಂಟೆಸ್ತ್ ನಲ್ಲೆಲ್ಲ ಪ್ರೈಜ್ ಬರೋದು. ಆಮೇಲೆ ಎಂಟನೆ ಕ್ಲಾಸ್ ನಲ್ಲಿದ್ದಾಗ ಅವನಿಗೆ ಅಡ್ವರ್ ಟೈಸ್ ಮೆಂಟ್, ಫಿಲ್ಮ್ ಗಳಿಗೆಲ್ಲ ಆಫರ್ ಬಂದಿತ್ತು. ಅವನಿಗೆ ಮಾತ್ರ ಅವನ ಹೆಸರ ಮೇಲೆ ಸಿಟ್ಟು. ನಿನ್ನ ಫ್ರೆಂಡ್ಸ್ ಮುಂದೆ ನನಗೆ ಪಾಂಡು ಅಂತ ಕರೀಬೇಡ. ವಿಕ್ಕಿ ಅಂತ ಕರೀ ಅಂತಿದ್ದ. ಮುಂಬೈ ನ ಅವನ ಕ್ಲಾಸ್ ಮೇಟ್ಸ್ ಎಲ್ಲ ಅವನಿಗೆ ಪಾಂಡು ಹವಾಲ್ದಾರ್ ಅಂತ ತಮಾಷೆ ಮಾಡ್ತಿದ್ದಕ್ಕೆ, ’ಯಾಕಾದ್ರೂ ಈ ಹೆಸರು ಇಟ್ರೋ’ ಅಂತ ಸಿಡಿ ಮಿಡಿ ಅಂತಿದ್ದ. :-) ಮರಾಠಿ ಸಿನಿಮಾ ದಲ್ಲಿ ಒಂದು ಪಾಂಡು ಹವಾಲ್ದಾರ ಪಾತ್ರ  ಇದ್ದೆ ಇರುತ್ತಿತ್ತು. ಅವನನ್ನು dumb ತರಹಾ ನೇ ತೋರಿಸೋದು.ಅದಕ್ಕೆ ಇವನಿಗೆ ಆ ಹೆಸರೆಂದರೆ ಉರಿ.
ನಾನು ನಿಹಾ ಮಾತ್ರ ಹೋಗುವ ಪ್ಲಾನ್ ಇತ್ತು. ಮಾಲವಿಕ, ಕೈಯಲ್ಲಿದ್ದ ಆರ್ಡರ್ಸ್ ಗಳನ್ನೆಲ್ಲ ಮುಗಿಸಿ, ಸಧ್ಯಕ್ಕೆ ಬಿಸ್ಕೂಟ್ ಫ್ಯಾಕ್ಟರಿ’ ಮೇಜರ್ ಆರ್ಡರ್ ಯಾವುದೂ ಇಲ್ಲ ನಾನು ಬರ್ತೀನಿ ಅಂದ್ಲು. ಶ್ರೀಕಾಂತ ’ಮತ್ತೇ ನನಗೂ ಪಂಡರಪುರ ನೋಡಬೇಕಿತ್ತು, ನಾನು ಬರಲಾ’ ಅಂತ ಕೇಳಿದ್ರು. ನಮ್ಮ ಅಮ್ಮ ಕೂಡ ’ಹೇ ನಾನು ಬರ್ತೀನಿ, ನನಗೂ ಪಂಡರಪುರಕ್ಕೆ ಹೋಗುವ ಆಸೆಯಾಗಿದೆ ಅಂದ್ರು. ಅಣ್ವೇಕರ್ ಮಾಮಾ ಈ ಸಲ ಫ್ರೀ ಇದ್ರು. 
ಸರಿ ಬೆಳಿಗ್ಗೆ 7 ಬೆಳಗಾವಿಯಿಂದ ಹೊರಟ್ವಿ. ಮಧ್ಯಾಹ್ನ 1.30 ಗೆ ಅಲ್ಲಿದ್ವಿ. ಶೋಲಾಪುರ್ ಮಾರ್ಗ ವಾಗಿ ಹೋಗಿದ್ದ್ದು. ದಾರಿಯುದ್ದಕ್ಕೂ ದ್ರಾಕ್ಷಿ, ದಾಳಿಂಬೆ, ಪಪಾಯಾ ಗಳನ್ನು ಗದ್ದೆಯಲ್ಲಿ ಬೆಳೆಸಿದ್ದು ಕಾಣಿಸುತ್ತಿತ್ತು. ಕೆಲವು ಕಡೆ ರೈತರು, ತೋಟದ ಬದಿಯಲ್ಲೇ , ಅವರು ಬೆಳೆದಿದ್ದ ಹಣ್ಣುಗಳನ್ನು ಮಾರುತ್ತಲಿದ್ದರು. ನನ್ನ ಅಮ್ಮ , ಶ್ರೀಕಾಂತ ಗೆ ಇವೆಲ್ಲ ಸಂತಸದ ಸಂಗತಿ. ಮಾರುವರ ಜತೆ ಕುಶಲೋಪರಿ, ಅವರ ಕಷ್ಟ ಕಾರ್ಪಣ್ಯ ಇವೆಲ್ಲ ಮಾತಾಡಿ, ಚೌಕಾಸಿ ಮಾಡದೆ ಹಣ್ಣು ಹಂಪಲುಗಳನ್ನು ಖರೀದಿಸುವುದು ಮುಂತಾದ್ದು. ನಿಹಾ ಫೋಟೊ ತೆಗಿತಿದ್ಲು. ನಾನು ಕೊಟ್ಟಿದ್ದು ತಿನ್ನೋದು ಮಾಡ್ತಾ ಇದ್ದೆ. ಅಲ್ಲೆಲ್ಲ ಎಷ್ಟು ಡ್ರೈ ಇತ್ತು ಹವಾಮಾನ. ಅದೇ ಬೆಂಗಳೂರಿನಲ್ಲಿ ಎಡಬಿಡದ ತುಂತುರು ಮಳೆ. ಈ ಮಳೆ ಶುರುವಾಗಿ ವಾರವಾದ ಮೇಲೆ ನಾವು ಟ್ರಿಪ್ ಹೊರಟಿದ್ದು. ನನಗೇ ಒಂತರ ಖುಶಿ ಹಾಗೂ ಆಸೆ. ಈ ಮಳೆ ನಾವು ಬರುವ ತನಕ ಬರಲಿ. ಕ್ಯೋಂಕೀ ನನ್ನ ಗಿಡಗಳೆಲ್ಲ ಬಾಲ್ಕನಿ ಮೇಲೆ. ಹಿಂದಿನ ಸಲ ಟ್ರಿಪ್ ಹೋದಾಗ ನೀರು ಹಾಕುವವರಿಲ್ಲದೇ ನನ್ನ ಗಿಡಗಳೆಲ್ಲ ಮುರುಟಿ ಹೋಗಿದ್ದವು. ಈಗ ಪುನ: ಸ್ವಲ್ಪ ಜೀವ ಬಂದಿತ್ತು, ಮತ್ತು ನಾವು ರೈಲ್ವೇ ಸ್ಟೇಶನ್ ತಲುಪಿ, ಟ್ರೈನ್ ಹತ್ತಿದ ಮೇಲೆ ಬೇಕಾದ್ರೆ ಮಳೆ ಬರಲಿ ಅಂತಹುದೆಲ್ಲ ವಿಚಾರಗಳು. anyways ಹಾಗೆಯೇ ಆಯ್ತು. ಖುಶಿ ಆಯ್ತು.

ಇನ್ನು ಪಂಡರಪುರದಲ್ಲಿ ಪಾಂಡುರಂಗ ಬಂದ ವಿಷಯ. ಇದು ನನಗೆ ಅಜ್ಜ ಹೇಳಿದ್ದು, ಚಿಕ್ಕವಳಿದ್ದಾಗ. ಪುಂಡರೀಕ ಅನ್ನುವ ಹುಡುಗ. ಯಾವಾಗಲೂ ಅಪ್ಪ ಅಮ್ಮನ ಸೇವೆ. ಅದು ಮುಗಿದ ಮೇಲೆ ಉಳಿದ ಕೆಲಸಗಳು. ಅವನ ನಿಷ್ಠೆ ಊರೆಲ್ಲ ಮಾತಾಗಿದಲ್ಲದೇ ದೇವರು ಕೂಡ ಅವನ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ವಿಷ್ನು ಒಬ್ಬ ಬ್ರಾಹ್ಮಣನ ವೇಷದಲ್ಲಿ ಅವನನ್ನು ಪರೀಕ್ಷಿಸಲು ಅವನ ಮನೆಗೆ ಬಂದ. ಹೊರಗಿನಿಂದ ’ನಾನು ಭ್ರಾಹ್ಮಣ ನನಗೆ ಭಿಕ್ಷೆ’ ನೀಡಿ ಅಂತ ಕರೆ ಹಾಕಿದನು. ಸ್ವಲ್ಪ ನಿಲ್ಲು ನಾನು ಅಪ್ಪ ಅಮ್ಮನ ಸೇವೆ ಮಾಡ್ತಿದ್ದೇನೆ’ ಆಮೇಲೆ ಬರುತ್ತೇನೆ ಅಂತ ಒಳಗಿನಿಂದ ದನಿ ಬಂದಿತ್ತು. ’ತುಂಬಾ ಹೊತ್ತು ನಿಲ್ಲಲ್ಲು ಆಗಲ್ಲ’ ಅಂತ ಬ್ರಾಹ್ಮಣ. ಪುಂಡರೀಕ ಹಿಂದೆ ತಿರುಗದೆ, ಅವನ ಪಕ್ಕದಲ್ಲೆ ಇದ್ದ ಇಟ್ಟಿಗೆಯೊಂದನ್ನು ಹೊರಗೆ ಜರುಗಿಸಿ, ’ಇಗೋ ಇದರ ಮೇಲೆ ಕುಳಿತುಕೋ’ ಅಂತ ಹೇಳಿದ ’ ಎಲಾ ಇವನ ಅಂತ ದೇವರು ಸೊಂಟ ಮೇಲೆ ಕೈ ಈಟ್ಟು ಆಶ್ಚರ್ಯ ಚಕಿತನಾಗಿ ನೋಡಿಉತ್ತಿದ್ದರು. ಪುಂಡರೀಕನಿಗೆ ತುಂಬ ದೈವ ಭಕ್ತಿ. ಮನೆಯೊಳಗಿನ ಕೆಲಸ ಮುಗಿಸಿ ಹೊರಗೆ ಬಂದು ನೋಡಿದರೆ ಸಾಕ್ಷಾತ್ ವಿಷ್ಣು ಅವನ ಮುಂದೆ. ಸಂತಸದಿಂದ ಗದ್ಗದಿತನಾಗಿ, ಅಲ್ಲೇ ದೇವರ ಕಾಲಿಗೆ ಬಿದ್ದ. ’ದೇವರೆ!! ನೀವು ಬಂದಿದ್ದೀರಿ ಅಂತ ಯಾಕೆ ಹೇಳಲಿಲ್ಲ’ ಅಂತ ಕೇಳಿದ. ಹೇಳಿದ್ರೆ ಕೆಲಸ ಅರ್ಧ ಬಿಟ್ಟು ಬರ್ತಿದ್ಯಾ’ ಅಂತ ಕೇಳಿದಾಗ ಪುಂಡರೀಕ್ ’ಇಲ್ಲ ಅಂತ ಹೇಳಿದ. ಮರಾಠಿಯಲ್ಲಿ ವಿಠೋಬ = ವಿಠೇ ವರಿ ಉಭಾ= ಇಟ್ಟಿಗೆಯ ಮೇಲೆ ನಿಂತವನು-  ವಿಠಲ್- ಪಾಂಡುರಂಗ ಅಂತ ಹೆಸರು ಪಡೆದುಕೊಂಡ ವಿಷ್ಣು ಆ ಸ್ಥಳದಲ್ಲೇ ಐಕ್ಯನಾದ. ಆ ಸ್ಥಳ ಪಂಢರಪುರ ಅಂತ ಹೆಸರುವಾಸಿಯಾಯಿತು.
ಮಹಾರಾಷ್ತ್ರದಲ್ಲೆಲ್ಲ ವರ್ಕರಿ ಪಂಗಡ ಕಾರ್ತಿಕ ಏಕಾದಶಿ ಹತ್ತಿರ ಬರುತ್ತಿದ್ದ ಹಾಗೆ ಕಾಲ್ನಡಿಗ್ಎಯಲ್ಲಿ ಪಂಢರಪುರಕ್ಕೆ ಯಾತ್ರೆ ಹೋಗುತ್ತಾರೆ. ಈಗೀಗ ಟ್ರ್ಯಾಕ್ಟರ್ ಗಳು ಕೂಡ ಕಾಣ ಬಹುದು. ಪ್ರವಾಸಿಗರಿಗೆ ದಾರಿಯಲ್ಲಿ ಊಟ ತಿಂಡಿ, ರಾತ್ರಿ ಮಲಗುವ ವ್ಯವಸ್ಠೆ ಮಾಡುವ host  ಇರುತ್ತಾರೆ. ಭಜನೆ ಹೇಳುತ್ತಾ ಟೋಳಿ ಮುಂದೆ ನಡೆಯುತ್ತಿರುತ್ತದೆ.


ದೇವರ ದರ್ಶನಕ್ಕೆ ಮೂರು ಮಹಡಿ ರಶ್ ಇತು. ಲಿಫ್ಟ್ ನಲ್ಲಿ ಹೋಗಿ ಕ್ಯೂ ನಲ್ಲಿ ನಿಲ್ಲಬೇಕಿತ್ತು. ಅಷ್ಟು ಹೊತ್ತು ನನಗೂ ಅಮ್ಮನಿಗೂ ನಿಲ್ಲೋಕೆ ಆಗಲ್ಲ. ಹೂ ಮಾರುವವ”ಮುಖ’ ದರ್ಶನ ಅಂತ ಒಂದು ಕ್ಯೂ ಇದೆ. ಅದರಲ್ಲಿ ಹೋದರೆ ದೂರದಿಂದ ದೇವರನ್ನು ಕಾಣಬಹುದು ಅಂದ. ಸರಿ ಹೂ ಮಾರುವವನ ಬಳಿ ಅಮ್ಮ ಹೂ ಕೊಂಡಿದ್ದರಿಂದ, ಚಪ್ಪಲಿ ಅಲ್ಲೇ ಬಿಡಲು ಹೇಳಿದ ಅಂವ. ನಾವು ಮುಖ ದರ್ಶದ ಕ್ಯೂ ಸೇರಿಕೊಂಡ್ವಿ. ಅಲ್ಲೇನೂ ಕಡಿಮೆ ರಶ್ ಇರಲಿಲ್ಲ. ಆ ಜನ ಜಂಗುಳಿಯಲ್ಲಿ ದೇವರನ್ನು ಕಾಣುವುದು ’ಹರ’ಸಾಹಸವೇ ಸೈ ( ಇಲ್ಲೊಂದು ಪನ್ ಆಯ್ತಲ್ಲ್ವಾ :-)) ಅಂದುಕೊಂಡೆ. ಅಮ್ಮನಿಗೆ ಬೇಜಾರು. ದೊಡ್ಡ ಲೈನ್ ಗೆ ಹೋಗುವಾನಾ ಅಂತ ಕೇಳಿದೆ. ಬೇಡ ಮಂಡಿ ನೋವು ಬರುತ್ತೆ ಅಂದ್ರು. ಸರಿ ದೂರದಲ್ಲಿ ದೇವರು ಇರುವ ಗರ್ಭಗುಡಿ, ಅದರ ಮುಂದೆ ಇರುವೆಯಂತಹ ಜನಸಾಗರ. ಅರೆರೆ ಏನಾಶ್ಚರ್ಯ. ಒಂದೆ ಒಂದು ಕ್ಷಣ, ಜನ ಸಮೂಹಾ ಆ ಕಡೆ ಈ ಕಡೆ ಜರುಗಿ ನಮಗೆ ದೇವರ ಇಡಿ ಮೂರ್ತಿ ಕಾಣಸಿಕ್ಕಿತು ಅಂದ್ರೆ ನಂಬ್ತೀರಾ??  ಬಾಲ ಕೃಷ್ಣನನ್ನು ಬುಟ್ಟಿಯಲ್ಲಿ ಹಾಕಿಕೊಂಡು ಹೋಗುವಾಗ ವಸುದೇವನಿಗೆ ಸಮುದ್ರ ದಾರಿ ಮಾಡಿಕೊಟ್ಟಿದ್ದು ಹೀಗೆ ಇರಬಹುದಾ ಅಂತ ಒಂದು ಕ್ಷಣ ಆಲೋಚಿಸ್ತಾ ಇದ್ದೆ. ನನಗೆ , ಮಾಲವಿಕ ಮತ್ತು ಅಮ್ಮನಿಗೆ ಮಾತ್ರ ಈ ದರುಶನ ಭಾಗ್ಯ. ಶ್ರೀಕಾಂತ ನಿಹಾ ನಮಗಿಂತ ಸ್ವಲ್ಪ ವೇ ಹಿಂದಿದ್ದರು. ಅವರಿಗೆ ಹೀಗೆ ದರುಶನ ಸಿಗಲಿಲ್ಲ. ಅಮ್ಮನ ಮುಖ ಹಿಗ್ಗಿ ಹೀರೇಕಾಯಿ...
vithobha rukumayi (from the net)

ಅಲ್ಲೊಂದು ಮಠ, ಅದಕ್ಕೆ ತಾಗಿಕೊಂಡಿರುವ ಯಾತ್ರಿ ನಿವಾಸ. ಹೊರಗಡೆ ದೊಡ್ಡ ಬೋರ್ಡ್. No rooms ಅಂತ. ಮಹಾರಾಷ್ಟ್ರಾಲ್ಲಿ ಮಕ್ಕಳಿಗೆ ದೀಪಾವಳಿ ರಜೆ ಒಂದು ತಿಂಗಳು. ಹಾಗಾಗಿ ಜನ ರಜ ಹಾಕಿ ಬಂದಿರುವುದೇ ಜಾಸ್ತಿ. ಎಲ್ಲಿ ನೋಡಿ ದರೂ ಜನ. ಊರಿನ ಹೊರ ಭಾಗದಲ್ಲಿ pay and park. ಅಲ್ಲಿಯೇ ಇರುವ ಈ ಮಠ
ದೇವಸ್ಥನದ ಒಳಗೆ ದೇವರ ಪುಸ್ತಕ ಓದುವುದರಲ್ಲಿ ಮಗ್ನ ತಾತ
ತಾತನ ಜತೆ ಶ್ರೀಕಾಂತಾ :-)
ನಮ್ಮ ನಮ್ಮ ಆಂತರಿಕ ಆಲೋಚನೆಗಳಿಗೆ ಓಗೊಟ್ಟು ಮಗ್ನರಾದ ನಾವು, ಕ್ಲಿಕ್ಕಿಸಿದ ನಿಹಾ
ದೇವಸ್ಥಾನದ ಬೀದಿಯಲ್ಲಿ

ಹಿತ್ತಾಳೆ, ತಾಮೃದ ಸಾಮಾನುಗಳು. ನಾನು ತಾಳ ತೆಗೊಂಡೆ
ಎದುರಿಗೆ ಪೀಠದಲ್ಲಿ ಪಾಮ್ದುರಂಗ-ರುಕುಮಾಯಿ ಮೂರ್ತಿಗಳು
ಚಂದ್ರಭಾಗೆಯ ಮಡಿಲಲ್ಲಿ, ಚೌಕಾ ಬಾರಾ ಆಡುವಲ್ಲಿ ತಲ್ಲೀನ ಹೂ ಮಾರುವ ಮಹಿಳೆಯರು
ಈ ಸಲ ಕೂಡ ನಮ್ಮ ಭಾಗ್ಯ. ಬಿಸಿಲಿಲ್ಲ. ಮೋಡದ ವಾತಾವರಣ. ಹಿತವಾದ ಗಾಳಿ. ಚಂದ್ರಭಾಗೆಯಲ್ಲಿ ದೋಣಿ ವಿಹಾರಕ್ಕೆ ಜನ ಜಂಗುಳಿ ತುಂಬಾ ಇತ್ತು.
ತಮ್ಮ ತಮ್ಮ ಆಲೋಚನೆಗಳಲ್ಲಿ....:-)

ನಮ್ಮ ಹಿಂಬದಿಯಿರುವ ಕೋಟೆ/ಅರಮನೆಯಲ್ಲಿ ದ್ವಾರಕಾಧೀಶ ಮಂದಿರ
ಕೋಟೆಯ ಮೇಲ್ಭಾಗ
ಉಸ್ತುವಾರಿನೋಡಿಕೊಳ್ಳುವ ತಾತ ಅಜ್ಜಿ ಮತ್ತು ಮೊಮ್ಮಗ್

ದೇವಸ್ಥಾನ ಕಟ್ಟಿದ ಬಗೆ

ಕೋಟೆಯ ಒಳಗೆ

ಕೆಲವೆಲ್ಲ ರಿಪೇರಿ ನಡೆದಿದೆ

ಒಳಗಿನ ದೃಶ್ಯ

ಆದರೆ ಒಂದು ಮಾತಂತು ನಿಜ. ಹಳೆಯ ಸೌಂದರ್ಯ, ಸೊಬಗು ಎಲ್ಲ ಹೊಸ constructions ಗಳಿಂದ ಮಾಯ/ಮುಸುಕಾಗಿವೆ. ನನಗೆ ಚಿಕ್ಕಂದಿನಲ್ಲಿ ಪಂಢರಾಪುರ ನೋಡಿದ ಸ್ವಲ್ಪ ನೆನಪಿದೆ. ರಿಕ್ಷಾ ಮಾಡಿಕೊಂಡು ಊರಿನ ಒಂದು ಸುತ್ತು ಹಾಕಿದೆವು. ಅಲ್ಲೆಲ್ಲ ತುಂಬಾ ತಂಬೂರಿ ಮಾಡುವ/ಮಾರುವ ದುಕಾನು ಕಂಡಿತು.
ಪಂಡರಪುರದಿಂದ ಸೀದಾ ತುಳಜಾಪುರ. ಶಿವಾಜಿ ಮಹಾರಾಜನ ಆರಾಧ್ಯ ದೇವತೆ ತುಳಜಾ ಭವಾನಿ. ರಾತ್ರಿ ಅಲ್ಲಿ ತಂಗಿದೆವು. ಮರುದಿನ ಬೆಳಿಗ್ಗೆ 5 ಗಂಟೆಗೆ ದೇವರ ದರ್ಶನ ಮಾಡಿದೆವು,ಅಲ್ಲಿ ಕೂಡ ಬೆಳಿಗ್ಗೆಯೆ ಜನಗಳು. ಬ್ರೇಕ್ ಫಾಸ್ಟ್ ಮುಗಿಸಿ ಅಲ್ಲಿಂದ ಮೋರ್ಗಾಂವ್. ಅಲ್ಲಿಂದ ಅಷ್ಟ ವಿನಾಯಕ ದೇವರಲ್ಲಿ ಒಂದಾದ ಗಣಪತಿ ದೇವಸ್ಥಾನ. ಮಹಾರಾಷ್ಟ್ರದಲ್ಲಿ ಇದೊಂದು ಟೂರ್ ಇರುತ್ತದೆ. ಮಹಾರಾಷ್ಟ್ರದ ವಿವಿಧ ಭಾಗದಲ್ಲಿರುವ ಹರಕೆ ಹೊತ್ತಿರುವವರು ಎಂಟು ಗಣಪತಿ ನೋಡಿ ಪುಣ್ಯ ಕಟ್ಟಿಕೊಳ್ಳುವುದು. 
ಅಲ್ಲಿಂದ ಜಿಜುರಿ ಕೋಟೆ. 350 ಮೆಟ್ಟಿಲು ಹತ್ತಿ ನೋಡುವ ಕೋಟೆ. ನಾನು ಅಮ್ಮ ಹೋಗಲಿಲ್ಲ. ಶ್ರೀಕಾಂತ, ಮಾಲವಿಕಾ, ನಿಹಾರಿಕಾ ಎಂಜಾಯ್ ಮಾಡಿದರು. ಅದರ ಚಿತ್ರಗಳು ಮುಂದಿನ ಪೋಸ್ಟ್ ನಲ್ಲಿ
:-)

2 comments:

  1. It's a pleasure to read your travelogues Malathi! I feel as if I'm visiting the places myself! Love the human side of your narration and the pictures captured :-)

    ReplyDelete