January 30, 2013

ದೇವರ ಹುಚ್ಚು

ದೇವರ ಹುಚ್ಚು ಕಾದಂಬರಿ ಓದಿದ ಮೇಲೆ ಹಳೆಯ ಪೋಸ್ಟ್ ಗೆ ಇನ್ನಷ್ಟು ಮಸಾಲೆ ಸೇರಿಸಿ:
niha's art 

ನಮ್ಮ ಮನೆ ಎರಡು ಮನೆಗಳ ಮಧ್ಯ sandwich ನಂತಿದೆ.ಇವತ್ತು ಪಕ್ಕದ ಮನೆಯಲ್ಲಿ ಪೂಜೆ ಇತ್ತು. ಹೋಮ ಹವನದ ಹೊಗೆ, especially ಅಗ್ನಿಗೆ ತುಪ್ಪದ ಹವಿಸ್ಸು ಬಿದ್ದ ಪರಿಮಳ ಭರಿತ ಹೊಗೆ, ಪೂರ್ತಿ ನಮ್ಮನೆಯೊಳಗೆ. ಒಂದು ತರಹದ nice nice feeling!!ಅದನ್ನು ಅಘ್ರಾಣಿಸುತ್ತ ಸುಮಾರು ಹೊತ್ತು ಸಮಯ ಕಳೆದೆ. ಅಮ್ಮನ ಫೋನ್ ಬಂದಾಗ ಅಮ್ಮನಿಗೂ ಹೇಳಿದೆ. ಮತ್ತು ಇವತ್ತು ಗ್ಯಾರಂಟಿ ಸೊಳ್ಳೆ ಇರಲ್ಲ ಅಂತಲೂ ಸೇರಿಸಿದೆ.ಅದಕ್ಕೆ ಅಮ್ಮ’ ಇರಲಿ, ನಿನಗೆ ದೇವರು, ಪೂಜೆ ಅಂತಹುದಲ್ಲೆಲ್ಲ ನಂಬಿಕೆ ಇಲ್ಲದಿದ್ದರೂ ನೋಡು, ದೇವರು ಮಾತ್ರ ನಿನ್ನನ್ನ ಬಿಡಲ್ಲ. ದೇವರ ಮನೆ, ದೀಪಗಳನ್ನು ಕ್ಲೀನ್ ಮಾಡುವುದು ಇಂತಹುದೆಲ್ಲ ಮಾಡುತ್ತೇನೆ. ದೇವರ ದೀಪ ಹಚ್ಚುವ, ಪೂಜೆ ಮಾಡುವ ಕೆಲಸ ಮಾತ್ರ ಶ್ರೀಕಾಂತ್ ದ್ದು.

ಆಶ್ಚರ್ಯ ಅಂದರೆ ನನ್ನ ತಂದೆ ತಾಯಿ ಮನೆಯಲ್ಲಿ, ಅಥವಾ ನಾನು ಬೆಳೆದ ಅಜ್ಜನ ಮನೆಯಲ್ಲಿ ದೇವರಲ್ಲಿ ಭಕ್ತಿ ತುಂಬ. ಆದರೂ ನಾನ್ಯಾಕೆ ಹಾಗಾದೆ ಎಂಬುದೇ ಅವರಿಗೆಲ್ಲ ಅಚ್ಚರಿ. ಮದುವೆಯಾದ ಮೇಲೆ ನೋಡಿದ್ರೆ ಶ್ರೀಕಾಂತ್ ಮನೆಯಲ್ಲಂತೂ ದೈವ ಭಕ್ತಿ ಒಂದಳತೆ ಸ್ವಲ್ಪ ಹೆಚ್ಚೆ ಅನ್ನಬಹುದು.

ನಾವು ಬೆಂಗಳೂರಿಗೆ 2001 ನಲ್ಲಿ ಬಂದಾಗ ನಮ್ಮ ಮೊದಲ ಬಾಡಿಗೆ ಮನೆ (ಇದು ಮೂರನೆದು ಮತ್ತು hopefully last )ಇದ್ದದ್ದು ಮಹಾಲಕ್ಷ್ಮಿ ಲೇ ಔಟ್ ನಲ್ಲಿ. ಸ್ವಲ್ಪ ಎತ್ತರದ ಪ್ರದೇಶದಲ್ಲಿತ್ತು. ಎರಡನೇ ಮಹಡಿ. ಮನೆಗಿಂತ ಮನೆಯ ಎದುರಿಗಿದ್ದ ಬಿಸಿಲು ಮಚ್ಚು(terrace) ದೊಡ್ದದಾಗಿತ್ತು. ನನಗಂತು ಮಹಾ ಅನುಕೂಲ. ಯಾಕಂದ್ರೆ ನನ್ನ ಹತ್ತು ಹಲವು ಹೂವಿನ ಕುಂಡಗಳನ್ನಿಡಲು ಜಾಗ ಮಾತ್ರವಲ್ಲದೇ ಇನ್ನಷ್ಟು ಹೊಸ ಹೂ ಗಿಡ ಗಳನ್ನು ನಾನು ತಂದು ಸೇರಿಸಿದೆ.

ನನ್ನ ಝೂಲಾ ಗೂ ಒಳ್ಳೆ ಜಾಗ ಸಿಗ್ತು. ಬೆಳಿಗ್ಗೆ ನಾಲ್ಕು ಗಂಟೆ ನನ್ನ ಮೊದಲ ಚಹಾ ಸೇವನೆಗೆ ಪ್ರಶಸ್ತವಾಗಿತ್ತು. ನಾನು ಕೂತಲ್ಲಿಂದ ISKCON ದೇವಳದ ಗೋಪುರದ ತನಕ clear view ಸಿಗುತ್ತಿತ್ತು. ಮಳೆ ಚಳಿಗಾಲದಲ್ಲೆಲ್ಲ ಸಖತ್ enjoyment. ದೂರದ ಗಿಡಮರದೆಡೆಯಲ್ಲಿ ಕಣ್ಣು ಮುಚ್ಚಾಲೆಯಾಡುವ ಬೀದಿ ದೀಪಗಳು, ಮಳೆ ನೀರಿನ ತರಹಾವರಿ direction ಗಳು, ಡಿಸೆಂಬರ್ ನಿಂದ ಮಾರ್ಚ್ ವರೆಗಿನ ಕುಳಿರ್ಗಾಳಿ ಮತ್ತು ಮಂಜು. ನಿಧಾನವಾಗಿ ಬೆಳಗು ಮೂಡುವುದನ್ನು ನೋಡುವುದು ಅತ್ಯಂತ ಸಂತಸದ ಸಂಗತಿ. ಮುಂಬೈನಲ್ಲಿದ್ದಾಗ ನಮ್ಮ ಐದನೆ ಮಹಡಿ ಕಿಟಕಿಯಿಂದ ನನಗೆ ಸಮುದ್ರ ಕಾಣುತಿತ್ತು. ಸಂಜೆ ನಾನು ಮತ್ತು ನನ್ನ ಫ್ರೆಂಡ್ ನಿಲಿಮಾ terrace ಮೇಲಿಂದ ಸೂರ್ಯಾಸ್ತವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಈಗ ಅವಳೂ  ಬೆಂಗಳೂರಿನಲ್ಲಿದ್ದಾಳೆ.

ಬೆಂಗಳೂರಿಗೆ ಬಂದಾಗಲೆಲ ಅಮ್ಮನಿಗಂತೂ ತುಂಬ ಖುಶಿ..ಒಂದೊಂದು ದಿನ ಒಂದೊಂದು ದೇವಸ್ಥಾನ. ಮನೆಯ ಎದುರುಗಡೆ ರಾಘವೇಂದ್ರ ಸ್ವಾಮಿ ದೇವಸ್ಥಾನ, ಮನೆಯ ಹಿಂಭಾಗದಲ್ಲಿ ಸುಬ್ರಮಣ್ಯ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನ. (ಬಾತ್ ರೂಮ್ ನಿಂದ ಕಾಣುತಿತ್ತು). :-) ನಾವಿರುವ ಬೀದಿಯ entrance ನಲ್ಲಿ ,ಪಂಚಮುಖಿ ಗಣಪ, ವಾಸವಿ,ಬಸ್ ಸ್ಟಾಪ್ ಹತ್ತಿರ ಬಾಲಾಜಿ(ವೆಂಕಟರಮಣ),ಮಂಗಳಕುರುಮಾರಿಯಮ್ಮ ...ಇನ್ನು ಸ್ವಲ್ಪ ಮುಂದಕ್ಕೆ ಹೋದರೆ famous ಮಹಾಲಕ್ಷ್ಮಿ ಮತ್ತು ದೊಡ್ಡ ಹನುಮ....ಅಲ್ಲಿಂದ ಹತ್ತು ಹೆಜ್ಜೆ ನಡೆದರೆ ISKCON. ನಮ್ಮ ಮನೆಗೆ ಬಂದಾಗ, ಅಮ್ಮ ಯಾರೋಂದಿಗೋ ಫೋನ್ ನಲ್ಲಿ ಮಾತಾಡ್ತಾ ’ನಮ್ಮ ಮಾಲತಿಗೆ ದೇವರಲ್ಲಿ ನಂಬಿಕೆ ಇಲ್ಲದಿದ್ದರೆ ಏನಾಯ್ತು. ಅವಳ ಸುತ್ತ ಮುತ್ತ ಮಾತ್ರ ತುಂಬಾ ದೇವರುಗಳು ಇದ್ದಾರೆ’ ಅಂತ

ಇನ್ನೊಂದು ವಿಚಿತ್ರ ಸಂಗತಿಯೆಂದರೆ ನಮ್ಮ ಮನೆಯ ಔನರ್ ಹೆಂಡತಿ, ಪ್ರತಿ ವರ್ಷ ವರಮಹಾಲಕ್ಷ್ಮೀ ವೃತ ಹಾಗೂ ನವರಾತ್ರಿಯಲ್ಲಿನ ಶುಕ್ರವಾರದಂದು ನನಗೆ ಬೆಳಿಗ್ಗೆ 5 ಗಂಟೆಯ ಪೂಜೆಗೆ ಕರೆಯುತ್ತಿದ್ದರು. ನಾನು ಹೇಗೂ ಬೇಗ ಏಳುವುದು ಅವರಿಗೆ ಗೊತ್ತು. breakfast ಮಾಡದೇ ಬನ್ನಿ ಅಂತ ಒಂದು request ಇರುತ್ತಿತ್ತು. ಅವರು first time ಪೂಜೆಗೆ ಕರೆದಾಗಲೇ ನನಗೆ ದೇವರಲ್ಲಿ ನಂಬಿಕೆ ಇರದಿದ್ದು ಹೇಳಿದ್ದೆ. ಆದರೂ ಅವರು ಪೂಜೆಯ ದಿನ ನನ್ನ ಕಾಲು ತೊಳೆದು,ಕೆನ್ನೆಗೆ ಒಂದು 25 ಗ್ರಾ ಅರಿಶಿನ ಬಳಿದು. ಕುಂಕುಮ ಹಚ್ಚಿ, ಕೈಗೆ ಹಸಿರು ಕೆಂಪು ಗಾಜಿನ ಬಳೆ ತೊಡಿಸುತ್ತಿದ್ದರು. ಹಣ್ಣು ಹಂಪಲು ಕೊಟ್ಟು ಕಳಿಸುತ್ತಿದ್ದರು. ನನಗಂತೂ ಸಿಕ್ಕಾ ಪಟ್ಟೆ ಮುಜುಗರ. ನಾವಲ್ಲಿರುವ 5 ವರ್ಷವೂ ಈ ಪ್ರಸಂಗ ಹೀಗೆ ಮುಂದುವರೆಯಿತು.

ಮತ್ತೆ, ನಾವು ಈಗಿರುವ ಮನೆಗೆ ತುಂಬ ಹತ್ತಿರದಲ್ಲಿ ದೊಡ್ಡ ಶನಿ ದೇವಸ್ಥಾನ. ಈಗ ಇಲ್ಲಿ ಬಂದಾಗ ಅಮ್ಮ ಕುಣಿದಾಡುವುದೊಂದೇ ಬಾಕಿ..ಯಾಕೆಂದ್ರೆ ಮನೆಯ ಹಿಂಬಾಗಿಲು ತೆಗೆದ್ರೆ, ಎದುರಿಗಿರುವ ಗೋಡೆ ನೆ ಶ್ರೀ ರಾಮ ಮಂದಿರದ್ದು. ನಾನು ಬಟ್ಟೆ ಒಣಗಿಸಲಿಕ್ಕೆ ಹಾಕುವಾಗಲೆಲ್ಲ ನನ್ನ ಕೈ ಹಲವಾರು ಸಲ ಅಂತು ಗೋಡೆಗೆ ತಾಗುತ್ತೆ.

ಇತ್ತೀಚಿಗೆ ಅಮ್ಮ ನನ್ನ ಜಾತಕ ಯಾರಿಗೋ ತೋರಿಸಿದ್ದರು. ನನಗೀಗ ಏಳುವರೆ ಶನಿ ಕಾಟವಂತೆ. ಪ್ರತೀ ಶನಿವಾರ ಶನಿದೇವರಿಗೆ ಮೂರು ಪ್ರದಕ್ಷಿಣೆ ಹಾಕಬೇಕಂತೆ..........

ಜನವರಿ ೩೦, ೨೦೧೩...continued....
niha's art

ಅಮ್ಮ ಜಾತಕ ತೋರಿಸಿದ ಜ್ಯೋತಿಷ್ಯರು, ಪ್ರತೀ ಶನಿವಾರ ಎಳ್ಳೆಣ್ಣೆಯಲ್ಲಿ ನಾನು ನನ್ನ ಮುಖ ನೋಡಿ ಅದನ್ನು ಶನಿ ದೇವಸ್ಥಾನದ ದೀಪದಲ್ಲಿ ಸುರಿಯಲು ಹೇಳಿದ್ದರು. ನಾನಂತು ಹಾಗೆ ಮಾಡಲಿಲ್ಲ.

ಹೀಗೆ ಎರಡು ವರ್ಷಗಳ ಹಿಂದೆ ಶ್ರೀಕಾಂತ ಗೆ ಡೆಂಗೆ (Dengue) ಆಗಿ ಪರಿಸ್ಥಿತಿ ಸೀರಿಯಸ್ ಆಗಿತ್ತು. ನೀಹಾ ಗೂ ಜ್ವರ ತಲೆಗೆ ಏರಿ ಶ್ರೀಕಾಂತ ನ ವಾರ್ಡ್ ಲ್ಲೆ ಇನ್ನೊಂದು ಬೆಡ್ ನಲ್ಲಿ ಅವಳಿಗೂ ಎಡ್ ಮಿಟ್ ಮಾದಿಸಿದ್ದರು. ಆ ವಾರ ಪೂರ್ತಿ ಆಸ್ಪತ್ರೆ ಮನೆ ಆಸ್ಪ್ತತ್ರೆ ಅಂತ ಅಲೆದಾಡುವುದೇ ಆಗಿತ್ತು. ಎಲ್ಲ ಸರಿ ಹೋಗಿ ಅವರನ್ನು ಮನೆಗೆ ತಂದ ನಂತರ, ಸುಮಾರು ಒಂದು ತಿಂಗಳ ನಂತರ ಅಮ್ಮ ಫೋನ್ ನಲ್ಲಿ ಹೀಗೆ ಕೇಳಿದ್ದರು 'ಅಲ್ಲವೇ ಶ್ರೀಕಾಂತ ಗೆ ಸೀರಿಯಸ್ ಆದಗಲೂ ಕೂಡ ನಿನಗೆ ದೇವರ ನೆನಪು ಬರಲಿಲ್ಲವೇ ಅಂತ. ನನಗೆ ಆಶ್ಚರ್ಯ . ಅಮ್ಮ ನನಗೆ ಡಾಕ್ತರ್‍, ಔಷಧಿ, blood platelet, transfusion..ಇಷ್ಟರಲ್ಲೆ ತಲೆ ಓಡ್ತಾಯಿತ್ತು ದೇವರನ್ನ ಯಾಕೆ ನೆನೆಸಲಿ ಅಂದೆ? ಅಷ್ಟಲ್ಲದೆ ಒಂದು ದಿನ ಇಡೀ ನಾನು ಉಲ್ಟಾ ಚೂರಿದಾರ್ ಹಾಕಿಕೊಂಡು, ಶ್ರೀಕಾಂತ ರ ರಕ್ತದ ಗುಂಪಿಗೆ ಮ್ಯಾಚ್ ಆಗೋವರನ್ನು ಹುಡುಕುತ್ತ ಇಡೀ ಬೆಂಗಳೂರು ತಿರುಗಿ ಬಂದಿದ್ದೇನೆ. ಅದೂ ನನಗೆ ರಾತ್ರಿ ಬಟ್ಟೆ ಚೆಂಜ್ ಮಾಡುವಾಗ ಗೊತ್ತಾಗಿದ್ದು. ಯಾರನ್ನೂ ನೆನಸುವಷ್ಟು ಪುರುಸೊತ್ತಿರಲಿಲ್ಲ ಅಂತ ಹೇಳಿದ್ದೆ. ಅಮ್ಮ ನನಗೆ 'ವಿಚಿತ್ರ ಪ್ರಾಣಿ' ಅಂತ ಹೇಳಿ ಫೋನ್ ಕಟ್ ಮಾಡಿದ್ದರು.

ಹೀಗೆ ಗಿರೀಶ್ ರಾವ್ ಹತ್ವಾರ್ ಅವರು ಬರೆದ ಕಾದಂಬರಿ 'ದೇವರ ಹುಚ್ಚು' ಓದ್ತಾ ನನ್ನ ಹಳೆ ಪೋಸ್ಟ್ ಗಳಿಗೆ ಇನ್ನಷ್ಟು ಸರಕು ಸಿಕ್ಕಿದೆ.

ಉಡುಪಿಯಲ್ಲಿದ್ದಾಗ ನಡೆದದ್ದು. ನಾನು ಸೂಸಿ (Susie) ಕೃಷ್ಣ ಮಠಕ್ಕೆ ಹೋಗಿದ್ದೆವು. ಸೂಸಿ ಗೆ ಕೃಷ್ಣನೆಂದರೆ ಇಷ್ಟ. ನನಗೂ ನನ್ನ ಅಜ್ಜ ಚಿಕ್ಕಂದಿನಲ್ಲಿ ಬಾಲಕೃಷ್ಣನ ಕತೆಗಳನ್ನು ಹೇಳಿ ಅವನು ಒಂದುತರಹ ನನಗೆ playmate ಆಗಿದ್ದ. ನನ್ನದು ಅವನ ಜತೆ imaginary ಆಟ. ಪುಸ್ತಕ ಒದುವ ಹುಚ್ಚು ಬೆಳೆದ ಮೇಲೆ ಬಾಲಕೃಷ್ಣ ನನ್ನ ಜೀವನದಿಂದ ಕ್ರಮೇಣ ಕಣ್ಮರೆಯಾದ.
ಸೂಸಿಯನ್ನು ಕರೆದುಕೊಂಡೆ ಹೋದೆ. ರಶ್ ಇರಲಿಲ್ಲ. ಕೇವಲ ಬೆರಳಣಿಕೆಯಷ್ಟು ಜನ. ನಾನು ಸೂಸಿಯೊಂದಿಗೆ ಗರ್ಭಗುಡಿಯ ಸುತ್ತು ಹೊಡೆದು ಕಿಂಡಿಯಿಂದ ಕೃಷ್ಣನನ್ನು ತೋರಿಸಿ ಅಲ್ಲೆ ಗೋಡೆಗೆ ಬೆನ್ನಾನಿಸಿ ಕೂತಿದ್ದೆ. ಸೂಸಿ ದೇವರಿಗೆ ಮೂರು ಪ್ರದಕ್ಷಿಣೆ ಹಾಕಿ, ಧ್ಯಾನಕ್ಕೆ ಕೂತರು. ಆಗಲೇ ನಾನು ಆ ಅಮ್ಮ ಮಕ್ಕಳನ್ನು ನೋಡಿದ್ದು. ಇಬ್ಬರು ಹೆಣ್ಣು ಮಕ್ಕಳು. ದೊಡ್ಡವಳು ಕೂತ ಭಂಗಿಯಲ್ಲೆ ನಡೆದಾಡಲು ಬರುವುದಿಲ್ಲ ಎಂದು ಸೂಚಿಸುವಂತಿದ್ದಳು. ಎರಡನೆಯವಳು ತುಂಬ ಚಿಕ್ಕವಳು. ದೊಡ್ಡ ಹುಡುಗಿಯನ್ನು ನೋಡನೋಡುತ್ತಿದ್ದ ಹಾಗೆ ಅವಳ ಒಂದೊಂದೆ ಅಂಗಾಗ ಸೆಟೆದುಕೊಳ್ಳುವುದು ಆ ಹುಡುಗಿ ಸಣ್ಣಕ್ಕೆ ಚೀರಾಡಲು ಆರಂಭಿಸಿದಳು. ಆಗ ಆ ಅಮ್ಮ ಕೃಷ್ಣ ಭಜನೆ ಹಾಡಿದಳು, ಎರಡು ಕೈಯನ್ನು ಬೇಡುವ ಮಾದರಿಯಲ್ಲಿ ಹಿಡಿದು, ಮಧ್ಯ ಮಧ್ಯ ದೇವರಿಗೆ ತನ್ನ ಮಗಳ ಕಡೆ ಬಟ್ಟು ಮಾಡಿ ತೋರಿಸುವುದು ನಡೆಸಿದಳು. ಆ ಹಾಡಲ್ಲಿನ ದೈನ್ಯತೆ, ನೋವು, ಅಸಹಾಯಕತೆ, ಆರ್ದ್ರತೆ, ಆಸೆ ನನ್ನನ್ನು ಎಷ್ಟು ಕಾಡಿಸಿ ಸಿಟ್ಟಿಗೇಳಿಸಿತ್ತೆಂದರೆ, ನಾನೇನಾದರು ದೇವರಿದ್ದಲ್ಲಿ ಪ್ರತ್ಯಕ್ಷಳಾಗಿ ಅವಳ ನೋವನ್ನು ನಿವಾರಿಸುತ್ತಿದೆ ಅನ್ನುವಷ್ಟು. ನಾನು ಸೂಸಿ ಗೋಳಿಬಜೆ ತಿಂದು, ಐಸ್ ಕ್ರೀಮ್ ತಿಂದು ಮನೆಗೆ ಮರಳುವ ಯೋಜನೆ ಹಾಕಿಕೊಂಡಿದ್ವಿ. ಆ ಅಮ್ಮ ಮಕ್ಕಳ ದೃಷ್ಯ ನನ್ನನ್ನು ಎಷ್ಟು ಕದಡಿತೆಂದರೆ, ನಾನು,ಸೂಸಿ' am not feeling good all of a sudden, please let us go home' ಅಂದೆ. ಮನೆಗೆ ಬಂದರೂ ನನಗೆ ಕಣ್ಣ ಮುಂದೆ ಅದೇ ಸೀನ್. ಸೂಸಿ , ಅಲ್ಲಿದ್ದ ಕೆಲವು ಜನರು, ಪುರೋಹಿತರು ಎಲ್ಲರೂ ಇದ್ದು ಆ ಅಮ್ಮ ಮಕ್ಕಳನ್ನು ignore ಮಾಡಿದ್ದರು. ಸುಮಾರು ದಿನಗಳ ನಂತರ ಯಾಕೋ ನನಗೇ ಮಾತ್ರ ಅವರು ಕಾಣಿಸಿದ್ದರಾ ಅಂತ ಅನ್ನಿಸಿದಿದೆ. ಹಾಗೆ ಆ ರಾತ್ರಿ ನನಗೊಂದು ಕನಸು ಬಿದ್ದಿತ್ತು. ಯಾವುದೋ ದನಿ 'ನಿನಗೆ ಅವರ ಬಗ್ಗೆ ಕರುಣೆ ಉಕ್ಕಿತಲ್ಲ' ಅದೇ ಅವರಿಗೆ ಒಳಿತನ್ನು ಮಾಡಿದೆ ಅಂದಾಗ ಆಶ್ಚರ್ಯ ಜತೆ ನಿರಾಳತೆ ತುಂಬಿದ ಸಮಾಧಾನ.

ಹಾಗೆ ಒಂದು ದಿನ ದೇವರ ತಲೆಗೆ ವಜ್ರದ ಕಿರೀಟಕ್ಕೆಂದು ದೇವಸ್ಥಾನದ ಕಮಿಟಿಯವರು ದೇಣಿಗೆ ಕೇಳಲು ಬಂದಿದ್ದರು.  ಅಷ್ಟಲ್ಲದೆ ಕೆಲವು ದೇವರ ಪುಸ್ತಕಗಳನ್ನೂ ತಂದಿದ್ದರು ಸೇಲ್ ಗೆ. ನಾನು ಇಲ್ಲ ನಾ ದುಡ್ಡು ಕೊಡಲು ನಿರಾಕರಿಸಿದೆ. ಅದಕ್ಕೆ ಪುಸ್ತ್ಕಗಳನ್ನಾದರೂ ಖರೀದಿಸಿ ಅಂದರು. ನನಗೆ ಅಂತರಲ್ಲೆಲ್ಲ ನಂಬಿಕೆಯಿಲ್ಲ ನಾ ಓದೋದು ಇಲ್ಲ ಅಂದ. ಅದಕ್ಕೆ ಅವರು 'ಯಾಕೆ ನಿಮಗೆ ದೇವರಲ್ಲಿ ನಂಬಿಕೆಯಿಲ್ಲವೆ' ಅಂತ ಕೇಳಿದಾಗ 'ಇಲ್ಲ್' pls ಹ್ಗೊರಡಿ ಅನನಗೆ ಆಫಿಸ್ ಗೆ ಲೇಟ್ ಆಗುತ್ತೆ ಅಂದೆ. ಅವರು ಹೋದರು. 10 ನಿಮಿಷಗಳ ನಂತರ ಪುನ: ಬಾಗಿಲ ಸದ್ದಾಯಿತು. ನೋಡಿದರೆ ಆಗ ಬಂದ ಹೆಂಗಸು 10 -12 ಜನರನ್ನು ಅವಳೊಂದಿಗೆ ಕರೆತಂದಿದ್ದಳು. ಅವರಲ್ಲಿ ಒಬ್ಬ ಹಿರಿಯರು ನನ್ನ ಹೆಸರು, ಮನೆಯವರ ಹೆಸರು ಮುಂತಾದನ್ನು ಕೇಳಿದರು ನಾನು ಹೇಳಿದೆ. ಮತ್ತೆ ದೇವರಲ್ಲಿ ನಂಬಿಕೆಯಿಲ್ಲ ಅಂತಂದ್ರಂತೆ'? ನಾನು ಹೌದು ಅಂದೆ. ಪುನ: ದುಡ್ಡು ಕೊಡಲಿಕ್ಕೆ ಪೀಡಿಸಿದರು. ನನಗೂ ಕಿರಿಕಿರಿ ಅನ್ನಿಸಲಿಕ್ಕೆ ಶುರು ಆಯ್ತು. 'ಪ್ಲೀಸ್ ಇಲ್ಲಿಂದ ಹೊರಡಿ ನಾನು ಹೊರಗಡೆ ಹೋಗಬೇಕು ಅಂದ' ಅದಕ್ಕೆ ಅವರು 'ನಿನಗೆ ಒಳ್ಳೆಯದಾಗುವುದಿಲ್ಲ. ಬೇಗ ನೀನು ದೇವರನ್ನು ನಂಬುವಂತವಳಾಗುತ್ತಿಯಾ' ಅಂತೆಲ್ಲ ಅಂದರು. ಅದಕ್ಕೆ ನಾ ಅಂದೆ, 'ದೇವರೇನು ನಿಮ್ಮ ಬಳಿ ಖುದ್ದಾಗಿ ಹೇಳಿದನಾ' ನನಗೆ ವಜ್ರದ ಕಿರೀಟ ಮಾಡಿಸಿ ಕೊಡಿ ಅಂತ. ಅದೇ ದುಡ್ಡಿನಿಂದ ಇಂದಿನ ಯುವಕರಿಗೆ ಸ್ವ ಉದ್ಯೋಗ ಮುಂತಾದನ್ನು ಕಲ್ಪಿಸಿಕೊಡಬಹುದಲ್ಲ್ವಾ?ದೇವರು ನಿಮಗೆ ಥ್ಯಾಂಕ್ಸ್ ಹೇಳಲ್ಲ, ಈ ಯುವಕರಾದರೂ ಅವರ ಜೀವನಕ್ಕೆ ದಾರಿ ತೋರಿಸಿದ್ದಿರೆಂದು ನಿಮ್ಮೊಂದಿಗೆ ಧನ್ಯತಾಭಾವ ಹೊಂದಬಹುದು ಮತ್ತೆ ನಿಮ್ಮ ಧಮಕಿಗೆಲ್ಲ ನಾನು ಹೆದರುವವಳಲ್ಲ'. ನಮ್ಮ ಮನೆಯವರಿಗೆಲ್ಲ ನನ್ನ ಬಗ್ಗೆ ಗೊತ್ತು. ದಯವಿಟ್ಟು ನೀವು ಈಗ ಜಾಗ ಖಾಲಿ ಮಾಡಿ' ಅಂದೆ. ಆಮೇಲೇನೂ ಗೊಣಗ್ತಾ ಹೋದ್ರು.

ಅಮ್ಮ ಇನ್ನೊಬ್ಬ ಯಾರೋ ಹೆಸರಾಂತ್ ಜ್ಯೋತಿಷಿಗೆ 'ಇವಳಿಗೆ ಶನಿ ಕಾಟ. ಉಪಶಮನಕ್ಕೆಂದು ಹೇಳಿದ್ದ ಒಂದು ಉಪಾಯವನ್ನೂ ಮಾಡಲ್ಲ' ಅಂತ ಹೇಳಿದಾಗ ,'ತಾಯಿ ಅವಳ ಸುದ್ದಿಗೆ ಹೋಗಬೇಡಿ. ಅವಳ ಹೇಗಿದ್ದಾಳೋ, ಹಾಗೆ ಇರಲಿ' ಅಂತ ಸುಮ್ಮನಾಗಿಸಿದರಂತೆ..:-) ಇವನ್ನೆಲ್ಲ ನಾನು ತುಂಬ ಎಂಜಾಯ ಮಾಡ್ತೇನೆ ವಿನ: ನಾನೇನೂ 'ದೇವರು ಅಂತ ತಿಳಿದಿಕೊಂಡಿಲ್ಲ. ನನ್ನನ್ನು ನಂಬಿ 'ಪ್ಲೀಸ್ ಪ್ಲೀಸ್'

ರಸ್ತೆ ಮೇಲೆ ಹೋಗ್ತ ಜನರು ನನ್ನನ್ನು ನೋಡಿ ನಗುವುದು, ತಬ್ಬಿ ಕೊಳ್ಳುವುದು, ಸುಮ್ಮನೆ ಮಾತನಾಡಿಸುವುದು, ಕೆಲವು ಮಿತ್ರರಿಗೆ ನನ್ನ ಜತೆ ಮಾತನಾಡಿದರೆ ಅವರಿಗೆ ಒಳ್ಳೆಯದಾಗುತ್ತೆ ಅಂತ ಅನ್ನಿಸುವುದು, ನನ್ನ ತಮ್ಮ 'ನೀನು ನನ್ನ ಪ್ಯಾಕ್ಟರಿ' ಗೆ ಲಕ್ಕಿ' ಅಂತ ನಾನು ಅವರಲ್ಲಿ ಹೋದಾಗ ನನಗೆ ಫ್ಯಾಕ್ಟರಿ ಕರೆದುಕೊಂಡು ಹೋಗಿ ನನ್ನ ಕಾಲಿಗೆ ಎರಗುವುದು, (ಅವನಂತು ಒಂದು ಹೆಜ್ಜೆ ಮುಂದೆನೆ ಅಲೋಚಿಸುತ್ತಾನೆ. ನಾನು ಮಾಲತೀಆನಂದಮಯೀ ಆಶ್ರಮ ಪ್ರಾರಂಭಿಸಿ ಎಲ್ಲರನ್ನು ತಬ್ಬಿ ಮುತ್ತು ಕೊಡಬೇಕಂತೆ, ಅವನು ಮ್ಯಾನೇಜರ್ ಆಗಿ ದುಡ್ಡು ಮ್ನ್ಯಾನೇಜ್ ಮಾಡ್ತಾನಂತೆ') ಶ್ರೀಕಾಂತ ಪ್ರೋಜೆಕ್ಟ್ ಪ್ರೋಪೋಸಲ್ ಕಳಿಸುವ ಮುನ್ನ ನನ್ನ ಕೈ ನಿಂದ ಆ ಪೇಪರ್ ಅನ್ನು ಮುಟ್ಟಿಸುವುದು, ಮೈಲ್ ನಲ್ಲಿ ಕಳಿಸಬೇಕಾದ್ರೆ ಫೈನಲ್ 'ಎಂಟರ್' /ಸೆಂಡ್ ಬಟನ್ ನನ್ನಿಂದ ಮಾಡಿಸುವುದು, ಅಪಾರ ರಘು ನ ಯಾವ ಕವರ್ ಪೇಜ್ ಗೆ ಪ್ರಶಸ್ತಿ ಬರುತ್ತೆ (ಪ್ರೂಫ್ ಇದೆ ಇದಕ್ಕೆ ನಮ್ಮಿಬ್ಬರ ಬಳಿಯೂ) ಇತ್ಯಾದಿ ಇತ್ಯಾದಿ..ಎಲ್ಲ ನೋಡಿ ನಾ ನಿಹಾಗೆ ಹೇಳಿದ್ದೆ, ನಿಹಾ ನಾನು ಶಾಪಗ್ರಸ್ತ ದೇವತೆ' ಇರಬೇಕು ಕಣೆ ಅಂತ. ಅವಳು ಇರಲಿಕ್ಕಿಲ್ಲ ಅಮ್ಮ. 'ಬೆಳಿಗ್ಗೆ ಎದ್ದಾಗ ನಿನ್ನ ಬಾಯಿಗೆ ವಾಸನೆ ಹೊಡೆಯುತ್ತೆ' ಅಂತ ಹೇಳಿ 'ನಾನು-ದೇವರು' ಎಂಬ ಹುಚ್ಚನ್ನು ನನ್ನ ತಲೆಯಿಂದ ಜರ್ರ್ ನೆ ಇಳಿಸಿದಳು. ಹೌದಲ್ಲವೇ ನಾನು ತಿನ್ನುತ್ತಿನಿ, ಟಾಯಲೆಟ್ ಗೆ ಹೋಗ್ತೀನಿ..."ದೇವರು-ಮಲಮೂತ್ರ ಇಲ್ಲದವರು" ಅಂತೆಲ್ಲೋ ಓದಿದ್ದನ್ನು ನೆನಪಿಸುತ್ತಾಳೆ ಮಾಲವಿಕ...:-)

ಹೀಗೆಲ್ಲ ನಡೆಯುತ್ತೆ ಅಂತ ನಾನು 'ನನ್ನನ್ನು ದೇವರು ಅಂದುಕೊಂಡಿದ್ದೀನಾ? ಖಂಡಿತ ಇಲ್ಲ. ಕೆಲವರು ನನ್ನನ್ನು ತಮ್ಮ ಜೀವಕ್ಕಿಂತ ಹೆಚ್ಚಿಗೆ ಹಚ್ಚಿಕೊಂಡಿದ್ದವರಿದ್ದಾರೆ, ನಾನು ಅವರನ್ನು ಹಚ್ಚ್ ಕೊಂಡಿಲ್ಲ. ಅವರು ನನ್ನ ಜತೆ ಸಂಪರ್ಕದಲ್ಲಿರುವಷ್ಟು  ಸಮಯ ನಾನು ಅವರ ಜತೆ ಇರ್ತೀನಿ, ಅಮೇಲೆ ಮರೆತು ಬಿಡ್ತೀನಿ. ಈ ಕಾರಣಕ್ಕೆ ಜಗಳ ಮಾಡುವವರೂ ಇದ್ದಾರೆ.

ದೇವರನ್ನು ನಂಬುವವರು ನಿಜವಾಗಿ ಹೇಳಿ: ಸಂತೋಷದಿಂದ್ದಾಗ ದೇವರಿಗೆ 'ಧನ್ಯವಾದ' ದೇವರೆ ಅಂದಿದ್ದೀರಾ? ಇಡಿ ದಿನ ಖುಶಿಯಾಗಿದ್ದು ರಾತ್ರಿ ಮಲಗುವಾಗ 'ಇವತ್ತಿನ ದಿನ ಚೆನ್ನಾಗಿತ್ತು, ಇವತ್ತು ನಾನು ಮಾಡಿದ ಅಡಿಗೆ ರುಚಿಯಾಗಿತ್ತು ಎಲ್ಲರೂ ಅದನ್ನು ಎಂಜಾಯಿಸಿದರು, ನಾನು ಬರೆದ ಕತೆ ಚೆನ್ನಾಗಿದೆ ಅಂದ್ರು, ಇವತ್ತೂ ಯಾವುದೇ ಟೆನ್ಷನ್ ಇರಲಿಲ್ಲ, ಇವತ್ತು ಟಾಯ್ಲೆಟ್ ಸಲೀಸಾಗಿ ಆಯ್ತು ಇಂತಹ ಚಿಕ್ಕ ಪುಟ್ಟ ವಿಷಯಗಳು- ನಿನಗೆ ಥ್ಯಾಂಕ್ಸ್ ದೇವರೆ ಅಂದಿದ್ದೀರಾ?? ಹೃದಯದ ಮೇಲೆ ಕೈಯಿಟ್ಟು ಹೇಳಿ..ದೇವರನ್ನು ಕೇವಲ scapegoat ತರಹ ಯೂಸ್ ಮಾಡ್ತೀವಾ??

ದೇವರನ್ನು ಜನರು ಯಾಕೆ ನಂಬುತ್ತಾರೆ? ದೇವರೆಂದರೆ ಯಾರು? ನಿಜಕ್ಕೂ ಇದ್ದಾನಾ? ಇವೆಲ್ಲ ನನ್ನನೂ ಕಾಡುತ್ತವೆ. ಹೋಮ ಹವನ ಪೂಜೆ ಎಲ್ಲ ಮಾಡಿಸುತ್ತಾರಲ್ಲವೆ? ಇದೆಲ್ಲ ಯಾಕಾಗಿ? ಮತ್ತು ನಾನ್ಯಾಕೆ ಹೀಗೆ?? ಯಾರು ಅಸ್ತಿಕರು?

 ಹೊರಗೆ ಸಭೆ ಸಮಾರಂಭದಲ್ಲಿ / ಪಂಡಿತ್ ಜಸರಾಜರು, ನಮ್ಮ ಎಮ್ ಎಸ್ ಸುಬ್ಬುಲಕ್ಷ್ಮಿ, ಪಂಡಿತ್ ವೆಂಕಟೇಶಕುಮಾರ, ಭೀಮಸೇನ ಜೋಶಿಯವರು, ಪ್ರವೀಣ ಘೋಡಕಿಂಡಿ ಕೊಳಲು, ಪಂಡಿತ್ ಶಿವಕುಮಾರ ಶರ್ಮ ರ ಸಂತೂರ ಇವೆಲ್ಲ ಕೇಳುವಾಗ, ದೇವರ ನಾಮ ಸುಶ್ರಾವ್ಯವಾಗಿ ಹಾಡುತ್ತ, ಕೃಷ್ಣಾsssss' ಅಂತ ಹಾಡು ವಾಗ ನನಗ್ಯಾಕೆ ತನ್ಮಯತೆ??ಅದ್ಯಾಕೆ ನನ್ನ ಎದೆಯಾಳಕ್ಕೆ ಹೋಗಿ ನನ್ನ ಕಣ್ಣು ತನ್ನಷ್ಟಕ್ಕೆ ಮುಚ್ಚಿಕೊಳ್ಳುತ್ತವೆ?? .......ಕೆಲವು ವಿಷಯಗಳನ್ನು ವಿಶ್ಲೇಷಿಸದೆ (spelling wrongaa) ಸುಮ್ನೆ ಅನುಭವಿಸಬೇಕು ಅಂತ ನನ್ನ ಅನಿಸಿಕೆ.

parting punch: ಅಮ್ಮ ಇಷ್ಟಕ್ಕೆ ಸುಮ್ಮನಾಗಿದ್ದಾರಾ? ಇಲ್ಲ. ಅವರದ್ದು ಒಂದು ಪಾರ್ಟಿಂಗ್ ಶಾಟ್( parting shot)' 'ನನಗೆ ದೇವರಲ್ಲಿ ನಂಬಿಕೆಯಿದೆ. ಆ ನಂಬಿಕೆನೇ ನಿನ್ನನ್ನು ಕಾಯ್ತಾ, ಕಾಪಾಡ್ತಾ ಇದೆ' ಅಂತ..ಹಾಗಾದ್ರೆ ಹಾಗೆ...ನನ್ನ ನಗುವೇ ಇದಕ್ಕೂ ಕೂಡ ಉತ್ತರ.

ಸುಮ್ನೆ ಈ ಪೋಸ್ಟ್ ಅನ್ನ ಎಂಜಾಯ್ ಮಾಡಿ. iam like that only neither ಆಸ್ತಿಕ not ನಾಸ್ತಿಕ.
ಹೊಯ್ ಮಾರಾಯ್ರೆ ಇದನ್ನೆಲ್ಲ ಓದಿ ಹೆದರಬೇಡಿ. ಐ ಯಾಮ್ ನಾರ್ಮಲ್ . ನನ್ನ ಅಡಿಗೆಯಲ್ಲೂ ಕೆಲವೊಮ್ಮೆ ಉಪ್ಪು ಜಾಸ್ತಿ ಯಾಗುತ್ತೆ, ಮನೆ ಗಲೀಜು ಇಟ್ಟುಕೊಂಡಾಗ ಶ್ರೀಕಾಂತ ಹತ್ತಿರ ಬೈಯಿಸಿಕೊಳ್ಳುತ್ತೀನಿ, ನಾನು ಬೀಳ್ತೀನಿ, ಏಳ್ತೀನಿ.

ನಾನು ಸಿರ್ಫ್ ಮಾಲತಿ/ ಮಾಲ್ತಿ/ಮಾಲsssತಿsss/ಮಲ್ಲು/ಮಲ್ಲಿ/ ಮಾಂಚು/ಮಮಾನ್/ಮೊಮ್ಮೀ/ನಂದೀತಾ/ನಂದೀಪಾ/ ಮಲ್ಲಿಕಾಕಾ/ಸುಬ್ಬಿ/ಜೀಜಾಬಾಯಿ/ಜಮದಗ್ನಿ/ದುರ್ವಾಸಮುನಿ/ 'ಮಾಲ್ದೀ-ಗಾರೀಬಾಲ್ಡ್ದೀ' etc..not god ever!!

ಕೆಲವೊಮ್ಮೆ ನಾನು ನುಡಿದದ್ದು ನಿಜವಾಗದಿದ್ದರೆ ನಾನು ಮಹಾ ನಾಟಕೀಯವಾಗಿ ಛೆ! I am losing my divine power' ಅಂತಲೂ ಹೇಳ್ತೀನಿ. ನಗ್ತೀನಿ. ನಗಿಸ್ತೀನಿ. ಜೀವನವನ್ನು ಕಾಂಪ್ಲೆಕ್ಸ್ ಮಾಡಕ್ಕೆ ಹೋಗಲ್ಲ.

ಲವ್ ಯು ಅಕ್ಕ, ನಿಂಪು, ಶ್ರೀಕಾಂತ & ಪಾಂಡು, ಶ್ರೇಯ,ಸ್ಯಾಮಿ for making my life so interesting and enjoyable. and love u all blog reading guys...

ಇಷ್ಟೆಲ್ಲ ಓದಿ ಬೋರ್ ಅನ್ನಿಸದಿದ್ರೆ dessert ತರಹ ಈ ಹಳೆಯ ಪೋಸ್ಟ್ ಕೂಡ ಓದಿ:
:-)

January 25, 2013

ಎಲ್ಲಿಂದಲೋ ಎಲ್ಲಿಗೋ- ಒಂದು ಲಹರಿ




ಸುರಗಿ ಮತ್ತು ಕೇದಗೆ ಒಣಗಿದರೂ ಪರಿಮಳ ಬೀರುತ್ತಲೇ ಇರುತ್ತವೆ. ಸುರಗಿ ಹೂ, ಆದರೆ ಕೇದಗೆ/kewra, leaf modification. ನಮ್ಮ ತೀರ್ಥಹಳ್ಳಿಯ ತೋಟದಲ್ಲಿ ಪುಟ್ಟದೊಂದು ಕೇದಗೆ/ಮುಂಡುಗದ ವನ. ಈ ವನದಲ್ಲಿ ಹಾವುಗಳ ಓಡಾಟ ಹೆಚ್ಚು ಅನ್ನುತ್ತಾರೆ. ಆದರೆ ನಮ್ಮ ತೋಟದ ನೀರಿನ ಬಳಿ ಒಂದು ಕಪ್ಪನೆಯೆ ಉದ್ದದ  ನಾಗರಹಾವು ಓಡಾಡುವುದನ್ನು ಕಂಡಿದ್ದೇನೆ. ನಾಗರಹಾವು ಅಂದ ತಕ್ಷಣ ಎರಡು ವರ್ಷದ ಹಿಂದಿನ ಚೌತಿಯಂದು ನಡೆದ ಘಟನೆ ನೆನಪಾಗುತ್ತದೆ. ನಾವು ಬೆಂಗಳೂರಿನಿಂದ ತೀರ್ಥಹಳ್ಳಿಗೆ ಹಬ್ಬಕ್ಕೆ ಹೋಗಿದ್ದೆವು. ಹಬ್ಬದ ದಿನ ಬೆಳಿಗ್ಗೆ ಅಕ್ಕ (ಓರಗಿತ್ತಿ) ಅಡಿಗೆ ಮನೆಯ ಲೈಟ್ ಹಾಕಬೇಕಾದರೆ ಮಿಡಿನಾಗರ ಹಾವೊಂದು ಅಡಿಗೆ ಮನೆಯಲ್ಲಿ, ನೆಲಕ್ಕೆ ತಾಗಿರುವಂತೆ, ಗೋಡೆಯೊಳಗಿನ ಕಪಾಟು ಸೇರಿಕೊಂಡಿದ್ದನ್ನು ನೋಡಿದರು. ಮಳೆ ಬಂದಿದ್ದರಿಂದಾಗಿ,ವಾತಾವರಣ ತಂಪಾಗಿದ್ದು, ಆ ಕಪಾಟಿನ ಬಾಗಿಲು ಪೂರ್ತಿ ಹಾಕಲಿಕ್ಕೆ ಬರುತ್ತಿರಲಿಲ್ಲ. ಆ ಕಪಾಟಿನಲ್ಲಿ ಅಕ್ಕನ ಸಾಂಬಾರು ಪದಾರ್ಥದ ಡಬ್ಬಿ, ಎಣ್ಣೆ, ತುಪ್ಪ, ಬೆಣ್ಣೆ ಇಡುವ ಜಾಗ. ಸರಿ ನಾನು ಅಡಿಗೆ ಮನೆಗೆ ಹೋದಾಗ ಅಕ್ಕ ಹೀಗೀಗೆ ಹಾವು ಸೇರಿಕೊಂಡಿದೆ. ಕತ್ತಲೆಯಲ್ಲಿ ಏನೂ ಕಾಣುವುದಿಲ್ಲ. ಅಡಿಗೆ ಮನೆಯಲ್ಲಿ ಬಲ್ಬ್ ಇದ್ದರು ಅದರ ಬೆಳಕು ಕಪಾಟಿನ ಒಳಗೆ ತಲುಪುತ್ತಿರಲಿಲ್ಲ. ನಾನು ಕೋಣೆಗೆ ಹೋಗಿ ನನ್ನ ಸೆಲ್ಲ್ ಫೋನ್ ಬೆಳಕಿನಿಂದ ಹಾವು ಹುಡುಕುವ ಪ್ರಯತ್ನದಲ್ಲಿ ಅಡಿಗೆ ಮನೆ ತುಂಬ ಮಲಗಿಕೊಂಡು ಡಬ್ಬಿ/ಬಾಟಲಿಗಳ ಮಧ್ಯ ಕೈ ಹಾಕಿ ತಡಕಾಡುತ್ತ ಇದ್ದೆ . ಅಷ್ಟರಲ್ಲಿ ಭೈಯಾ ದೊಡ್ಡ ಟಾರ್ಚ್ ಒಂದನ್ನು ಹಿಡಿದುಕೊಂಡು ಒಂದು ಕೋಲು ಒಳಗೆ ಸೇರಿಸಿ ಹುಡುಕಾಡಿದೆವು. ಊಹೂಂ ಹಾವು ಕಾಣಲೇ ಇಲ್ಲ. ಆಮೇಲೆ ನಮ್ಮ ಹಬ್ಬದ ಗಡಿಬಿಡಿಯಲ್ಲಿ ಆಘಟನೆ ಮರೆತೇ ಹೋಯಿತು.


ಬೆಂಗಳೂರಿಗೆ ಮರಳಿದ ಮೇಲೆ ಯಾರೋ ಹಾವಿನ ವಿಷಯ ಮಾತನಾಡುವಾಗ, ಸಡನ್ ಆಗಿ ನನಗೆ ಆ ದಿನದ ಅಡಿಗೆ ಮನೆ ಸೀನ್ ನೆನಪಾಗಿ, 'ಅರೇ ಮಿಡಿನಾಗರಹಾವನ್ನು ನೋಡುವ ಹುನ್ನಾರದಲ್ಲಿ ನಾನು 5'2" ಹೆಬ್ಬಾವಿನಂತೆ ಅಡಿಗೆ ಮನೆಯಲ್ಲಿ ಹೊರಳಾಡಿದ್ದನ್ನು ಕಂಡು ಭೈಯ್ಯ ನವರಿಗೆ ಏನನ್ನಿಸಿತೋ ಅಂತ ನನ್ನಷ್ಟಕ್ಕೆ ನಗ್ತಾ ಇದ್ದೆ.Sumathi Deepa Hegde : munna!has amma shared this with you? :-) )

ಸರಿ, ರಾಯರು ಮುಂಬೈಗೆ ಹೋಗ್ತಾ ಫ್ಲೈಟ್ ನಲ್ಲಿ ಓದಲು 'ಸುರಗಿ' ಪುಸ್ತಕ ಎತ್ತುಕೊಂಡಿದ್ದಾರೆ. ಸುರಗಿ ಜತೆ ನೀಹಾ ಮಾಡಿದ bookmark ಕೂಡ ಹೋಗ್ತಾ ಇದೆ ಮುಂಬೈಗೆ. ಚಾನ್ಸ್. ಅವರು ರೆಡಿಯಾಗುವಾಗ ನಾನು ಸುಮ್ಮನೆ ಸುರಗಿಯ ಪುಟ ತಿರುಗಿಸ್ತಾ ಇದ್ದೆ. ಮುಖ ಪುಟ ನನಗಿಷ್ಟ ಆಗಿದೆ. ಉಳಿದ ಮೂವರಿಂದ no comments' ಮುಖಪುಟದ ರೇಖಾಚಿತ್ರ ಜ.ನಾ.ತೇಜಶ್ರೀ ಯವರದ್ದು ಹಾಗೂ ವಿನ್ಯಾಸ ಮಾದಿದವರು ಚನ್ನಕೇಶವ ಅಂತ ಒಳಗಡೆ ನಮೂದಿಸಲಾಗಿದೆ. ಜ.ನಾ. ತೇಜಶ್ರೀ ಯವರ ಬಗ್ಗೆ ಅನಂತಮೂರ್ತಿ ಯವರು ಆತ್ಮೀಯವಾಗಿ ಬರೆದಿದ್ದಾರೆ. ಒಳಗಡೆ ಫೊಂಟ್ (font) ಸ್ವಲ್ಪ ಚಿಕ್ಕದಾಗಿದೆ. 


6 ಗಂಟೆಗೆ ಹೊರಡಬೇಕಿದ್ದ ಫ್ಲೈಟ್ ಇನ್ನೂ poor visibility due to fog ನಿಂದ ನಿಲ್ದಾಣದಲ್ಲೇ ಇದೆಯಂತೆ. ಕ್ಯೂ ನಲ್ಲಿ ಇವರದ್ದು 14 ನೇ ನಂಬರ್ ಅಂತೆ take-off ಗೆ. ಇಷ್ಟರಲ್ಲೆ ಅರ್ಧ 'ಸುರಗಿ' ಮುಗಿಸಿಬಿಟ್ಟಿರುತ್ತಾರೆ. :-) ಹಸಿವೆಯಾಗಿ ಏನು ತಿಂಡಿ ಅಂತ ಕೇಳಿದರು. ನಾನು ಒಗ್ಗರಣೆ ಹಾಗಿದ ಮೈದಾ ಹಿಟ್ಟಿನ ದೋಸೆ ಅಂತ ನಾಲಿಗೆ ಹೊರಚಾಚುವ ಐಕನ್ ಕಳಿಸಿಸ್ದ್ದೆ ಸೆಲ್ ನಲ್ಲಿ. ಅದಕ್ಕೆ ಅವರು ಮುಂಬೈ ನಲ್ಲಿ ನನ್ನ ಇಷ್ಟದ ವಡಾ ಪಾವ್+ ಚಟ್ನಿ ಪುಡಿ+ ಹುರಿದ ಹಸಿಮೆಣಸಿನ ಕಾಯಿ ಕೊಂಬೋ ತಿನ್ನುತ್ತಾರಂತ ನನಗೀಗ ಹೊಟ್ಟೆಯುರಿ :-(

ಈ ವರ್ಷ ನಾನು ಹೆಚ್ಚಿಗೆ ಕನ್ನಡ ಪುಸ್ತಕಗಳನ್ನು ಓದಬೇಕೆಂದು ಠರಾಯಿಸಿದ್ದೇನೆ. ಈಗಾಗಲೇ ವಿವೇಕ ಶಾನಭಾಗ ರ 'ಘಾಚರ್ ಘೋಚರ್' ಓದಿ ಮುಗಿಸಿದೆ. ತೀರ್ಥಹಳ್ಳಿಯಲ್ಲಿ ಬಿಟ್ಟು ಬಂದು, ಓದು ಸ್ಥಗಿತಗೊಂಡ 'ಸ್ವಪ್ನ ಸಾರಸ್ವತ' ಪುನ: ನನ್ನ ಕೈಗೆ ಸಿಕ್ಕಿದೆ. ಇನ್ನು ಕೆಲವೆ ಪುಟಗಳು ಬಾಕಿ ಇವೆ. ಅದಾದ ಮೇಲೆ ಜೋಗಿ urph Girish Rao Hatwar ಯವರ 'ದೇವರ ಹುಚ್ಚು' ನೋಡುವ ಏನು ಬರೆದಿದ್ದಾರೆ ಹೇಗೆ ಬರೆದಿದ್ದಾರೆ ಅಂತ.

ಸುರಗಿ , ಕೇದಗೆ ಜತೆ ನನಗಿಷ್ಟವಾದ ಇನ್ನೊಂದು ಹೂವು ಕೆಂಡಸಂಪಿಗೆ..
ಪರಿಮಳಯುಕ್ತ ಗುರುವಾರ ನಿಮ್ಮದಾಗಲಿ.
Loads of love:
ಮಾಲತಿ ಎಸ್
(ಕೇದಗೆ ಮತ್ತು ಸುರಗಿ ನೆಟ್ ನಿಂದ ಕದ್ದಿದ್ದು)
ಫೇಸ್ ಬುಕ್ ನಲ್ಲಿ ಹಾಕಿದ್ದು. ಇಲ್ಲಿ ಗೂ...
:-)

January 20, 2013

ಕೇರಳ ಕೋಕೊನಟ್ ರೈಸ್ - ഒരു കഥാ

ಬೆಂಗಳೂರಿಗೆ ಬಂದ ಹೊಸತರಲ್ಲಿ ಸುಚಿತ್ರ ಫಿಲ್ಮ್ ಸೊಸೈಟಿ ಗೆ ಒಂದು ಸಿನಿಮಾ ಪ್ರದರ್ಶನಕ್ಕೆ ಹೋಗಿದ್ದೆವು. ಅಲ್ಲಿ ಪ್ರಶಾಂತ್ ಪಂಡಿತ ನಮಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಮೆಂಬರ್ ಆಗಲು ತಿಳಿಸಿದರು. ಫಾರ್ಮ್ ನಲ್ಲಿ ಮನೆಯ ವಿಳಾಸ ಇ-ಮೈಲ್ ಇತ್ಯಾದಿ ನಮೂದಿಸಿದ್ದೆ. ಹಾಗಾಗಿ ಸುಚಿತ್ರಾದಲ್ಲಿ ಏನಾದರೂ ಸಭೆ-ಸಮಾರಂಭಗಳಿದ್ದರೆ ನನಗೆ ಇ-ಮೈಲ್ ಬರುತ್ತಿತ್ತು. ಒಂದೊಮ್ಮೆ ಯಾವುದೋ query ಗೆ ನಾನು reply all ಕೊಟ್ಟಿದ್ದು, ಆಗ ಪರಿಚಯ ಆಗಿದವರು ಸಲೀಲ್. ಆಮೇಲೆ ನಾವು ಯಾಹೂ ಚಾಟ್ ನಲ್ಲಿ on-off ಸಿಕ್ಕುಮಾತು-ನಗು ವಿನಲ್ಲಿ ಪರಿವರ್ತನೆಯಾಯಿತು. ಆಮೇಲೆ ಫೋನ್ ನಂ ವಿನಿಮಯ ಮಾಡಿಕೊಂಡ ಮೇಲೆ ಆಗಾಗ ಮತಾಡುತ್ತಿದ್ದೆವು. ಅವರು ಸಾಫ್ಟ್  ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೂಲ ತ:  ಕೇರಳದವರು. ಕೆಲ ವರುಷ ಹೊರದೇಶದಲ್ಲೂ ಇದ್ದು ಬಂದವರು. ಅವರ ಹಾಬಿ ಶಾರ್ಟ್ ಫಿಲ್ಮ್ ಮಾಡುವುದಿತ್ತು.

ಹಾಗೆ ಒಂದು ಸಲ ಮಾತನಾಡುವಾಗ ಇವತ್ತು 'ನನ್ನ ಅಡಿಗೆಯವನು ಬಂದಿಲ್ಲ' ಹೊರಗೆ ಊಟಕ್ಕೆ ಹೋಗ್ತಾ ನಿಮ್ಮ ಜತೆ ಮಾತಾಡ್ತಿದ್ದೀನಿ ಅಂದ್ರು. ಮಾತಿಗೆ ನಿಮ್ಮನೇಲಿ ಏನು ತಿಂಡಿ ಅಂತ ಕೇಳಿದರು. ನಾನು 'ಕೇರಳ ಕೊಕೋನಟ್ ರೈಸ್' ಅಂದೆ. 
"ಅದನ್ನು ಹೇಗೆ ಮಾಡುವುದು"?
ನಾನು ಹೇಳಿದೆ. ಇಂಟರೆಸ್ಟಿಂಗ್ ಅಂದರು. ಆಮೇಲೆ ನಮ್ಮ ಟಾಪಿಕ್ ಬೇರೆ ವಿಷಯಗಳಗೆ ಹೊರಳಿತು.
ಮರುದಿನ ಪುನ: ಫೋನ್ ಮಾಡಿದರು' more than 3/4 of my life i spent in Kerala da. but i had not heard nor tasted Kerala coconut rice. So i asked my mommee. and she said such a thing as Kerala Coconut rice does not exist' ಅಂತ. ಹೊರದೇಶದಲ್ಲಿ ಹಲವಾರು ವರ್ಷ ಇದ್ದುದರಿಂದ ಅಪರೂಪಕ್ಕೊಮ್ಮೆ ಕೆಲವು ಪದಗಳಿಗೆ ಅವರ ಮಾತಲ್ಲಿ ಮಲಯಾಳಿ accent ಹೊಮ್ಮುತ್ತಿತ್ತು. ಅದಲ್ಲಿ 'ಕೋಕನಡ್', ಓಟೋ (auto) ಅಂತದಕ್ಕೆಲ್ಲ ನಾನು ಮುಕ್ತವಾಗಿ ನಗುತ್ತಿದ್ದೆ. why da you are teasing me ಅಂತಿದ್ದರು ಕೂಡ.

ಆ ಮೇಲೆ ಕೆಲಸ ಬಿಡುವ ಅಂದಾಜಲ್ಲಿ ನನ್ನ ಬಳಿ ಕೌಂನ್ಸೆಲ್ಲಿಂಗ್ ಅಂತ ಹಲವಾರು ಬಾರಿ ಮಾತನಾಡಿದ್ದಲ್ಲದೇ, ಮನೆಗೆ ಬಂದು ನಮ್ಮ ಜತೆ ಊಟ ಮಾಡಿ, ಒಂದು ಜಮೀನು ಖರೀದಿಸಲು ಅದರ ಬಗ್ಗೆ ಶ್ರೀಕಾಂತ ಹತ್ತಿರ ಸಮಾಲೋಚನೆ ನಡೆಸಿದರು. ನನ್ನ ತರಹ ಅವರಿಗೂ ಓದಿನ ಹುಚ್ಚು. ಮಲಯಾಳಿ/ಆಂಗ್ಲ್ ಪುಸ್ತಕ, ಮಲಯಾಳಿ ಸಿನಿಮಾ ಬಗ್ಗೆ ಎಲ್ಲ ನಮ್ಮ ಮಾತು ಇರುತ್ತಿತ್ತು. 
ನನಗೆ, ಹೇಳಿದಂತೆ ಮಾಡುವ, ಧೈರ್ಯದಿಂದ ಮುನ್ನುಗ್ಗುವ ಈಗಿನ ಯುವಕ ಯುವತಿಯರನ್ನು ಕಂಡರೆ ಏನೋ ಒಂದು ತರಹ ಖುಶಿ.ಸಲೀಲ್ ನನಗಿಂತ ತುಂಬ ಚಿಕ್ಕವರು. malathi i have enough savings to last me for another year. Will i be able to make it? I am so used to drawing a fixed salary every month its a bit scary  what do you suggest anta? ನಾ ಅವರಿಗೆ go ahead, everything is going to be fine' ಅಂದಿದೆ. ಏನಾದ್ರು ಟೆನ್ಷನ್ ಆದಾಗ ಫೋನ್ ಮಾಡೋವ್ರು.

ಈಗ ಅವರು ಕೇರಳದಲ್ಲಿ ಜಮೀನು ಖರೀದಿಸಿ ಅಲ್ಲಿ ಕೃಷಿ ಮಾಡ್ತಾ, ರಾಷ್ಟ್ರೀಯ/ಅಂತರಾಷ್ಟ್ರೀಯ  ಮಟ್ಟದಲ್ಲಿ ಹೆಸರು ಗಳಿಸಿರುವ short film/Documentary film maker. ಅವರ 7 ವರ್ಷದ ಮಗಳು ಪಾರೋ ಸಣ್ಣ ಪುಟ್ಟ advertisement ನಲ್ಲಿ ಕಾಣಿಸಿಕೊಳ್ಳುತ್ತಾಳೆ. ಅವರ ಪತ್ನಿ ಸಿಂಧು ನ ಸಾಥ್ ಅವರಿಗಿದೆ.

ಹೀಗೆ kerala coconut rice ಅನ್ನುವ ಹೆಸರಿಟ್ಟು ನನ್ನದೇ ಆದ ಹೊಸರುಚಿ ಮಾಡಿದಾಗಲೆಲ್ಲ ನನಗೆ ಸಲೀಲ್ ಜತೆ ಮಾತಾಡಿದ್ದು ನೆನಪಾಗುತ್ತೆ. ಈಗಲೂ ಫೋನ್ ಮಾಡಿದಾಗಲೆಲ್ಲ ನಮ್ಮ ಕೋಕೊನಟ್ ರೈಸ್ ಬಗ್ಗೆ ಮಾತು ಹೊರಳೇ ಹೊರಳುತ್ತೆ.
ಇಲ್ಲಿದೆ ಚಿತ್ರ

ಅದನ್ನು ತಯಾರಿಸಲು: 
1. ಅನ್ನ ಮಾಡಿಟ್ಟುಕೊಂಡು ಅದು ತಣ್ಣಗಾಗಲು ಬಿಡಿ. ಅನ್ನ ಬಿಡಿ ಬಿಡಿಯಾಗಿರಲಿ
2. ಜೀರಿಗೆ, ಮೆಂತೆ, ಹಿಂಗು ಇವುಗಳನ್ನು ಎಣ್ಣೆ ಹಾಕದೇ ಹುರಿದು, ಅದು ತಣ್ಣಗಾದ ನಂತರ ಪುಡಿಮಾಡಿಟ್ಟುಕೊಳ್ಳಿ.
3. ಒಗ್ಗರಣೆಗೆ ಉದ್ದಿನ ಬೇಳೆ, ಸಾಸಿವೆ, ಸ್ವ್ಲಲ್ಪ ಹೆಚ್ಚೆ ಕರಿಬೇವು ಹಾಕಿ, ನಾಲ್ಕೈದು ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ ಹಾಕಿ. 
ಇದಕ್ಕೆ ಮಾಡಿಟ್ಟುಕೊಂಡ ಪುಡಿ ಬೆರೆಸಿ. ಅನ್ನ ಬೆರೆಸಿ ಉಪ್ಪು ಸಕ್ಕರೆ ಹಾಕಿ. ೫ ನಿಮಿಷ ಮುಚ್ಚಿಡಿ. ಆಮೇಲೆ ಅದರ ಮೇಲೆ ತಾಜಾ ಹೆರೆದ ಕಾಯಿ ತುರಿ ಸಿಂಪಡಿಸಿ.
kerala coconut rice ರೆಡ್ಡಿ ಟು ಈಟ್..
:-)

January 15, 2013

ಬೆಂಗಳೂರು ಚಿತ್ರೋತ್ಸವ

ನಿಹಾರಿಕಾ ಹಿಂದಿನ ವಾರ (17 th Dec 2012) 'ಅಮ್ಮ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಶುರು ಆಗ್ತಾ ಇದೆ. ಆಗ ನಮಗೆ ಕಾಲೇಜಿಗೆ ರಜೆ. ನಾನಂತು ಇದರ ಉಪಯೋಗ ಮಾಡ್ತೇನೆ ಅಂದಾಗ ನಾನು ಯಾವತ್ತಿನ ಹಾಗೆ ನೈಸ್! ನಿಹಾ ಎಂಜಾಯ್ ಅಂದೆ. ಹಾಗೆ ಅವಳು ಬಾದಾಮಿ ಹೌಸ್ ಗೆ ಹೋಗಿ 100 ರೂ ವಿದ್ಯಾರ್ಥಿ ಪಾಸ್ ತೆಗೆದುಕೊಂಡು ಬಂದಳು. ಶುಕ್ರವಾರ ಅವಳು ಸಿನಿಮಾ ನೋಡಿ ಅದರ ಬಗ್ಗೆ ಕತೆ ಎಲ್ಲ ಹೇಳಿದಳು. 'ನಾಳೆ ಅಪ್ಪ ಇಡೀ ದಿನ ಹಳ್ಳಿ, ನಾ ಅಡಿಗೆ ಮಾಡಲ್ಲ, ಫಿಲ್ಮ್ ನೋಡ್ತಾ ಮನೆಯಲ್ಲಿ ಫಿಲ್ಮ್ ಫೆಸ್ಟಿವಲ್ ಮಾಡ್ತೇನೆ ಅಂದಾಗ ನಿಹಾ, ಅಮ್ಮ ವೈ ಡೋಂಟ್ ಯು ಜಾಯಿನ್ ಅಸ್' .ಅಂತ ಹೇಳಿ ಅದನ್ನೆ ರೆಕಾರ್ಡ್ ತರಹ ಹಾಡಲು ಶುರು ಮಾಡಿದರು. ನನಗಂತು ಮನೆಯಿಂದ ಹೊರಗೆ ಬೀಳುವುದೆಂದರೆ ಕಿರಿ ಕಿರಿ. ಅದಕ್ಕೆ ಶ್ರೀಕಾಂತ್ ಕೂಡ ದನಿ ಸೇರಿಸಿ make use of this opportunity ಅಂದ್ರು. ಅಂತೂ ಇಂತೂ ಮರುದಿನ ಬೇಗ ಎದ್ದು ಬ್ರೇಕ್ ಫಾಸ್ಟ್ ಮಾಡಿ ನಾನು ನಿಹಾ ಹೊರಬಿದ್ದೆವು. ಲಿಡೋ ಗೆ ಹೋಗ ಬೇಕಿತ್ತು. ನನಗೆ ಆ ರೂಟ್ ಮೊದಲ ಬಾರಿಗೆ ಪಯಣ. ಇಲ್ಲಿಂದ ಮೆಜೆಸ್ಟಿಕ್, ಮೆಜಿಸ್ಟಿಕ್ ನಲ್ಲಿ ನಿಹಾಳ ಸ್ನೆಹಿತೆ ಅಖಿಲಾ ನಮ್ಮನ್ನು ಸೇರಿಕೊಂಡಳು. ಅಲ್ಲಿಂದ ಬಸ್ ನವನಿಗೆ ಟ್ರಿನಿಟಿ ಸರ್ಕಲ್  ಗೆ ಹೋಗುತ್ತಾ ಅಂದರೆ ಅವನು ಇಲ್ಲ ಮೇಡಂ ಮೇಯೋ ಹಾಲ್ ಹತ್ರ ಇಳಿದು ಇನ್ನೊಂದು ಬಸ್ ಹಿಡ್ಕಳ್ಳಿ ಅಂದ. ಸರಿ ಮೆಯೋ ಹಾಲ್ ನಿಂದ ಟ್ರಿನಿಟಿ ಕಡೆ ಒಂದು ಸಲ (Indian Cartoonist Association) ಹೋಗಿದ್ದರಿಂದ ನಾವು ಇಳಿದ ಸ್ಟಾಪ್ ನಿಂದ ದೂರ ಇರಲಿಕ್ಕಿಲ್ಲ ಅಂತ , ಹಾಗೂ ಆಗಲೇ ಸಿನಿಮಾ ಶುರು ಆಗುವ ಸಮಯ ಕೂಡ ಹತ್ತಿರ ಆದ್ದರಿಂದ ಅಲ್ಲೆ ಖಾಲಿ ನಿಂತ ರಿಕ್ಷಾ ನವನಿಗೆ ಲಿಡೋ ಹತ್ತಿರ ಬಿಡ್ತೀರಾ ಅಂತ ಕೇಳಿದೆ. ಅವನು ಹೂಂ ಅಂದಾಗ ನಾನು ನಿಹಾ ಮತ್ತು ಅವಳ ಪ್ರೆಂಡ್ ಅಖಿಲಾ ಹತ್ತಿದ್ವಿ. ನಾ ಅಂದುಕೊಂಡ ಹಾಗೆ ಮಿನಿಮಮ್ ಫೇರ್ ಆಯ್ತು. ಸೆಕ್ಯೂರಿಟಿಯವರಿಗೆ ಕೇಳಿ ಸೀದಾ ನಾಲಕ್ನೆ ಫ್ಲೋರ್ ಗೆ ಹೋದ್ವಿ. ನಮ್ಮ ಜತೆ ಒಂದು ಮುದ್ದಾದ ಹುಡುಗ ಮತ್ತು ಅವನ ಫ್ಯಾಮಿಲಿ ಕೂಡ ಇತ್ತು. ನಾನು ಯಾರು ಈ ಕೊಂಕಣಿ ಹುಡುಗ, ಸಂಧ್ಯಾ ವಂದನೆ ಎಲ್ಲ ಮಾಡಿ ಬಂದಿದ್ದಾನೆ ಅಂತ ಆ ಮುದ್ದು ಪೋರನನ್ನೇ ನೋಡುತ್ತಿದ್ದರೆ ಅವನ ಕಣ್ಣೆಲ್ಲ ನನ್ನ ನಿಹಾಳ ಮೇಲಿದ್ದದ್ದು ನೋಡಿ ನನಗೆ ನಗೆ ಬಂತು.  (ಆ ಮೇಲೆ ಗೊತ್ತಾಗಿದ್ದು ಆ ಮುದ್ದಾದ ಹುಡುಗ ಸಿನಿಮಾದ ಒಂದು ಮುಖ್ಯ ಪಾತ್ರ ಅಂತ :-)) ಚೆಕ್ ಇನ್ ನವರು ನಿಹಾ ಅಖಿಲಾ ಳ ಪಾಸ್ ಚೆಕ್ ಮಾಡ್ತಿದ್ದಾಗ, ನಾನು ಡೈಲಿ ಪಾಸ್ ಬಗ್ಗೆ ಕೇಳಿದೆ, ಅದು ಕೆಳಗಡೆ ಗ್ರೌಂಡ್ ಫ್ಲೋರ್ ನಲ್ಲಿ ಸಿಗುತ್ತೆ ಅಂದ್ರು. ಸರಿ ಪುನ: ಮೂರು ಜನ ಕೆಳ್ಗಡೆ ಬಂದ್ವಿ. ಫಿಲ್ಮ್ ಫೆಸ್ಟಿವಲ್ ನ ಟೀ-ಶರ್ಟ್ ಹಾಕ್ಕೊಂಡಿದ್ದವರು ಇಬ್ಬರು ವಾಲಂಟಿಯರ್ಸ್ ಇದ್ರು. 'ಪಾಸ್ ಇನ್ನೂ ಬಂದಿಲ್ಲ -its on the way ಅಂದ ಅವರಲ್ಲೊಬ್ಬ. ಅದಕ್ಕೆ ನಾನಂದೆ 'ಅರೇ ಸಿನಿಮಾ ಶುರು ಆಗಲಿಕ್ಕೆ 5 ನಿಮಿಷ ಉಳಿದಿರೋದು, ಪಾಸ್ ಇಲ್ಲದಿದ್ದರೆ ಒಳಗಡೆ ಬಿಡಲ್ಲ ಅಂತೀರಾ, ನಾನು ಎಷ್ಟು ದೂರದಿಂದ ಆಸೆ ಯಿಂದ ಕೊಂಕಣಿ ಸಿನಿಮಾ ನೋಡಲು ಬಂದಿದ್ದೇನೆ ಅಂದಾಗ ಕೂಡಲೆ ಅಲ್ಲಿದ್ದ ನಾಲ್ಕು ಜನರು ನನ್ನೊಂದಿಗೆ ದನಿ ಗೂಡಿಸಿದರು. ಕಾಯ್ತಾ ಆಗಲೆ ಸಿನಿಮಾ ಶುರು ಆಗಿ 5 ನಿಮಿಷ ಆಯ್ತು. ನಿಹಾ ಮತ್ತು ಅವಳ ಸ್ನೇಹಿತೆಯನ್ನು, 'ನೊ ಯೂಸ್ ಯೂ ಬೋತ್ ಮಿಸ್ಸಿಂಗ್ ದ ಮೂವಿ..ಹೋಗಿ ಅಂತ ಬಲವಂತವಾಗಿ ಕಳಿಸಿದೆ. ನಾವು ಆ ಹುಡುಗರನ್ನು ಕಿರಿ ಕಿರಿ ಮಾಡಿ ಸಂಯೋಜಕರ ಬಳಿ ಮಾತನಾಡಿದೆವು.ಮೊದಲು ಒಪ್ಪಲಿಲ್ಲ ಆ ಮೇಲೆ ನಾನು'ಪ್ಲೀಸ್ ಲೇಟ್ ಆಗಿ ಹೋಗೋದು ಏನೂ ಚೆನ್ನಾಗಿರಲ್ಲ, ಕೊಂಕಣಿ ಬಾಂಧವರ ಜತೆ ಕೂತು ಸಿನಿಮಾ ನೋಡೋದು ಒಂದು ಗಮ್ಮತ್ತು, ಮತ್ತು ನಾವು ನೋಡಿದ ಹಾಗೆ ಹೆಚ್ಚಿಗೆ ಜನರೇನೂ ಇಲ್ಲ, ಪ್ಲೀಸ್ ದುಡ್ಡು ಬೇಕಾದರೆ ಫಿಲ್ಮ್ ಆದಮೇಲೆ ಪ್ರಾಮಿಸ್ ತಂದು ಕೊಡ್ತೇವೆ ಅಂತ ಎಲ್ಲರ ಪರವಾಗಿ ಗೋಗರೆದೆ. ಕೊಂಕಣಿ ಸಿನಿಮಾದ ಪ್ರೈವಟ್ ಶೋ ಗಳಾಗಿ ಅದರ ಬಗ್ಗೆ ಸ್ಮಿತಾ ಕಾಯ್ಕಿಣಿ, ಮಿತ್ರ ನೀಲೇಶ ಜವಳಿ ಇವರಿಂದ ಕೇಳಿದ್ದೆ. ಅಂತೂ ಇಂತೂ ನಾವು ಗೋಗರೆದ ಫಲವಾಗಿ ನಮ್ಮನ್ನು ಒಳ ಬಿಡಲು ಆ ಮಕ್ಕಳಿಗೆ ಪರವಾನಗಿ ದೊರೆತಿತು, ಹಾಗೂ ಅವರು ನಮ್ಮ ಜತೆ ಮೇಲೆ ಒಳಬಿಡಲು ಬಂದರು. ನೋಡಿದರೆ ನನ್ನ ಜತೆ ಇದ್ದ ಇನ್ನೋರ್ವರ 15 ಜನ ಕುಟುಂಬದವರು ಹೊರಗಡೆ ನಿಂತಿದ್ದರು :-)

ನಾನು ಒಳಗಡೆ ಬಂದದ್ದು ನೋಡಿ ನಿಹಾ ನನ್ನನ್ನು ಎದುರುಗೊಂಡು ಅವರು ನನಗೋಸ್ಕರ ಕಾಯ್ದಿದಿರಿಸದ ಸೀಟ್ ಬಳಿ ಕರೆದೊಯ್ಯಲು ಬಂದಳು. ಒಟ್ಟು 10 ನಿಮಿಷಗಳ ಫಿಲ್ಮ್ ಮಿಸ್ಸಾಗಿದ್ದು ಬಿಟ್ಟರೆ ಉಳಿದ ಪೂರ್ತಿ ಸಿನಿಮಾ ನೋಡುವ ಅವಕಾಶವಾಯ್ತು. ಅಪರೂಪಕ್ಕೆ ಎಷ್ಟೋ ವರ್ಷಗಳ ನಂತರ ನೋಡಲು ಸಿಕ್ಕ ಕೊಂಕಣಿ ಸಿನಿಮಾ. ಯಾವಾಗಲೋ ಒಂದು ಸಲ ಮುಂಬೈ ನ ದೂರದರ್ಶನದಲ್ಲಿ ನೋಡಿದ 'ಜನಾಲೆ ಮನ' ದ ಮಸುಕು ಮಸುಕು ನೆನಪು. ಉಜ್ವಾಡು ಅಂದರೆ ಬೆಳಕು. ಒಂದು ಊರು. ಊರಿನ ಹಿರಿಯ ಮಾಸ್ಟ್ರ ಮನೆ. ಮನೆಯಲ್ಲಿ ಅನಾಥ ಹುಡುಗ ಗಜ್ಜು (ಗಜಾನನ). ಅವರ ಮನೆ ಎದುರಿಗೆ ಇರುವ ಉಜ್ವಾಡು, ಇದು ವೃದ್ಧಾಶ್ರಮದ ಹೆಸರು. ವೃದ್ಧರನ್ನು ನೋಡಿಕೊಳ್ಳುವ ಅಥವಾ ಪ್ರೀತಿಯಿಂದ ಅವರೆಲ್ಲರ ಬಿಟ್ಟಿ ಕೆಲಸ ಮಾಡುವ ಗಜ್ಜು ಮತ್ತು ನೀತು(ಸಿನಿಮಾದಲ್ಲಿನ ಹೆಸರು ಮರೆತು ಹೋಯ್ತು), ಈ ಮಾಸ್ಟ್ರ ಮನೆಯಲ್ಲಿ ತಂಗಲು ಬರುವ ಇಂಗ್ಲಿಶ್ ಲೆಕ್ಚರರ್. ಈ ಲೆಕ್ಚರರ್ ಗೆ ಊರಿನ ಪರಿಚಯ ಮಾಡಿಸ್ತಾ ನಾವು ನೋಡುಗರಿಗೂ ಊರಿನ ಎಲ್ಲರ ಪರಿಚಯ. ಕೊಂಕಣಿ ಜನರ ರೀತಿ ನೀತಿ, ಸಂಸ್ಕ್ರತಿ ಸಂಪ್ರದಾಯಕ್ಕೆ ಹೆಚ್ಚು ಒತ್ತು.  ಒಂದು ದೇವಸ್ಥಾನದ ಊಟ, ಚೂಡಿ ಪೂಜೆ, ಜನರಿಗೆ nickname ಅಡ್ಡ ಹೆಸರಿಡುವುದು, ಒಂದು ಲವ್ ಸ್ಟೋರಿ, ಒಂದು ಮಾರಾಮಾರಿ- ಈ ಮಾರಾಮಾರಿಯ ಫಲವಾಗಿ ಒಳ್ಳೆಯವನಾಗುವ ವಿಲ್ಲನ್ ಮರ್ತು, ಇದೆಲ್ಲರಿಂದ ಭರಪೂರ.ಆಮೇಲೆ ಲೆಕ್ಚರರ್ ಗೂ ನೀತೂ ಗು ಮದುವೆ. ಒಂಟಿ ಹಿರಿಯ ಮೇಸ್ಟ್ರು ಅವರ ಮನೆಯನ್ನು ಇವರಿಬ್ಬರಿಗೆ ಕೊಟ್ಟು ಅನಾಥಾಶ್ರಮ ಸೇರುತ್ತಾರೆ. ಹೋಳಿ ಸಮಯದಲ್ಲಿ ನಡೆದ ಅವಘಡದಲ್ಲಿ ಗಜ್ಜು ಸಾವನ್ನಪ್ಪುತ್ತಾನೆ. ಅವನ ಸ್ಥಾನದಲ್ಲಿ ಇನ್ನೊಬ್ಬ ಅನಾಥ ಹುಡುಗ ವಿಘ್ನೇಶನ ಎಂಟ್ರಿ ಆಗುತ್ತೆ. ಕತೆ ಅಂತ ಏನಿಲ್ಲ. ಪ್ರತಿ ಮನೆಯೊಳಗಿನ  ದಿನಚರಿ ತೋರಿಸಿದ್ದಾರೆ. ತುಂಬಾ loud ಸಂಗೀತ, ಮತ್ತು ರಂಗಪಂಚಮಿ ಹಾಡು ಮರಾಠಿ ಹಾಡಿನ ಹಾಗೆ ಕೇಳಿಸುತ್ತಿತ್ತು, ನಿಜಕ್ಕೂ ಅದು ಬೇಕಿರಲಿಲ್ಲ. ಸಂಭಾಷಣೆ ಚೆನ್ನಾಗಿವೆ, ಹೆಚ್ಚಿನವರು ಅವರ ಪಾತ್ರವನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಆದರೆ ಒಟ್ಟಾರೆ ಸಿನಿಮಾದ ಸ್ಟಾರ್ attraction ಗಜ್ಜುನೇ. ಗಜ್ಜು ಸಾವನಪ್ಪಿದಾಗ ...ಅಳುವ ಸೀನ್ (ಸದಾಶಿವ ಭ್ರಮ್ಮಾವರ್) ಸ್ವಲ್ಪ ಹೆಚ್ಚೆ ಎಳೆದು ಕಿರಿ ಕಿರಿ ಅನ್ನಿಸಿತ್ತು. ಉಮಾಶ್ರೀ ಅಭಿನಯದ ಬಗ್ಗೆ ನೋ ದುಸ್ರಾ ಬಾತ್. ಕೊಂಕಣಿಯವರಲ್ಲ ಅನ್ನುವಂತೆಯೇ ಇಲ್ಲ. :-)
ನಾವು ಕೊಂಕಣಿಯವರು ಸುಮ್ಮನಿರಲ್ಲ , ನಾಲ್ಕು ಜನ ಒಟ್ಟಾದ್ರೆ ಗೌಜಿ-ಗಲಾಟೆ ಶುರು ಮಾಡಿಕೊಂಡು, ಗಟ್ಟಿಯಾಗಿ ಮಾತನಾಡಲು ಶುರು ಹಚ್ಚಿಕೊಂಡು ಬಿಡ್ತೇವೆ. ಹಾಗೆಯೇ ಸಿನಿಮಾ ಸುಮ್ಮನೆ ನೋಡೊದಕ್ಕಿಂತ ಬೇರೆಯವರ reaction criticism, joke ಎಲ್ಲ ಮಜವಾಗಿತ್ತು. ಅದಕ್ಕೋಸ್ಕರ ಆದರೂ ಕೆಲವೊಮ್ಮೆ ಸಿನಿಮಾ ಮಂದಿರಕ್ಕೆ ಭೇಟ್ಟಿ ನೀಡ ಬೇಕು. ಕೆಲವರಂತೂ ಎಷ್ಟು  ಸೀರಿಯಸ್ ಆಗಿ ಸಿನಿಮಾ ಬಗ್ಗೆ discussion ಗೆ ತೊಡಗ್ತಾರಂದ್ರೆ........................:-)
ಎಲ್ಲ ಕೊಂಕಣಿಯವರು ಒಂದು ಸಲ ನೋಡಬಹುದಾದ ಚಿತ್ರ..
ಸಿನಿಮಾ ಮುಗಿದ ಕೂಡಲೆ ಪುನ: ವೊಲಂಟೀಯರ್ಸ್ ಕಡೆಗೆ ಹೋದ್ವಿ, ಪಾಸ್ ಏನಾದ್ರು ಬಂದಿದ್ರೆ ಅದನ್ನ ಪಡೀಲಿಕ್ಕೆ. ಆದರೆ ನಮಗೊಂದು ಸಂತಸದ ಸುದ್ದಿ ಇತ್ತು. ಆ ದಿನ ಲಿಡೋ ದಲ್ಲಿ ಯಾವುದೇ ಚಿತ್ರಕ್ಕೆ ಪಾಸ್ ಇಲ್ಲ ಅಂತ. ಮುಂದಿನ ಸಿನಿಮಾಗೆ ಸುಮಾರು ಟೈಮ್ ಇದೆಯಂತ ನಾವು ಕೆಳಗಡೆ McDonalds ನಲ್ಲಿ ಬರ್ಗರ್ ತಿಂದ್ವಿ. ಹಾಗೇ ಅಖಿಲಾ ಗೆ ಗೊತ್ತಾಗದಿದ್ದ ಸೀನ್ಸ್, ಜನರು ಯಾವ ಕಾರಣಕ್ಕೆ ನಗ್ತಾ ಇದ್ರು. ಕೆಲವು ಕಡೆ ಅಧ್ವಾನ ವಾಗಿರುವ subtitle..ಇದರ ಬಗ್ಗೆ ಎಲ್ಲ ಮಾತಾಡಿದ್ವಿ. ಆ ಮೇಲೆ ಮುಂದಿನ ಚಿತ್ರ ಬಗ್ಗೆ ಅವರಿಗೇ ಚೂಸ್ ಮಾಡಲು ಬಿಟ್ಟು ನಾನು Mcdonald's ಗೆ ತಿನ್ನಲಿಕ್ಕೆ ಬಂದವರನ್ನು ನೋಡುವುದರಲ್ಲಿ ನನ್ನನ್ನು ನಾನೆ ಮರೆತು ಹೋದೆ.
.
......to be continued.....(ಯಾವಾಗ್ಲೋ ಬರೆದಿಟ್ಟಿದ್ದೆ ಇವತ್ತು ಪೋಸ್ಟ್ ಮಾಡುವ ಮೂಡ ಬಂತು)
:-)

January 8, 2013

ನೆಲ್ಲಿಕಾಯಿ ಅನ್ನ

ಬೇಕಾಗುವ ಪದಾರ್ಥ:
ಮೂರು ದೊಡ್ಡ ನೆಲ್ಲಿಕಾಯಿ. ಅದನ್ನು ತುರಿದು ಹೀಗೆ ಉಪ್ಪು ಸಕ್ಕರೆ ಬೆರೆಸಿಡಿ.

ಮೆಂತೆ+ಜೀರಿಗೆ+ಹಿಂಗು ಎಣ್ಣೆ ಹಾಕದೆ ಹುರಿಯಿರಿ. ತಣ್ಣಗಾದ ಮೇಲೆ ಕುಟ್ಟಿ ಪುಡಿ ಮಾಡಿ

ಒಗ್ಗರಣೆಗೆ:
ಉದ್ದಿನಬೇಳೆ, ಸಾಸಿವೆ, ಕರಿಬೇವು, ಶೆಂಗಾ, ಮೂರು ಹಸಿ ಮೇಣಸಿನಕಾಯಿ

ಮೊದಲಿಗೆ ಕಾದ ಎಣ್ಣೆಯಲ್ಲಿ ಒಗ್ಗರಣೆಗೆ ಹಾಕಿ. ಇದಕ್ಕೆ ಪುಡಿ ಮಾಡಿದ ಮಿಶ್ರಣ ಬೆರೆಸಿ. ಒಂದು ನಿಮಿಷ ಬಿಟ್ಟು ತುರಿದ ನೆಲ್ಲಿಕಾಯಿ ಸೇರಿಸಿ ಸರೀ ಕೈಯಾಡಿಸಿ. ಅರಶಿನ ಪುಡಿ ಬೆರೆಸಿ.



ತಣ್ಣಗಿನ ಅನ್ನವನ್ನು ಬೆರೆಸಿ . ಉಪ್ಪು ರುಚಿ ನೋಡಿ ಬೇಕಿದ್ದಲ್ಲಿ ಉಪ್ಪು ಬೆರೆಸಿ. 5 ನಿಮಿಷ ಮುಚ್ಚಿಡಿ.
ಒಂದು ಟೇಸ್ಟಿ ಟಿಫಿನ್ ಬಾಕ್ಸ್ ಐಟಮ್ ರೆಡಿ. ಈ ಒಂದು ತಿಂಗಳಲ್ಲಿ ಹಲವಾರು ರಜೆಗಳಿದ್ದಾವೆ. ಮಾಡಿಕೊಂಡು ಪಿಕ್ ನಿಕ್ ಹೋಗಿ ಬನ್ನಿ.

ನಿಹಾ ಳ ಕಾಲೇಜ್ ಮೇಟ್ಸ್ ಗೆ ಇದು ಇಷ್ಟ ಆಗಿದೆ...ನೀವು ಟ್ರೈ ಮಾಡಿ ನೋಡಿ ನನಗೆ ಹೇಳುವಿರಾ??
(ನಾನು ಶೆಂಗಾ ಹಾಕಕ್ಕೆ ಮರೆತಿದ್ದೆ. ಮತ್ತೆ ರಾಯರು ವ್ಹಾಟ್ ಇಸ್ ಎ ಚಿತ್ರಾನ್ನ ವಿಥೌಟ್ ಶೆಂಗಾ ಅನ್ನುತ್ತಾರಂತ, ಬೇಗ ಒಂದು ಹಿಡಿ ಶೆಂಗಾವನ್ನು ಮೈಕ್ರೋವೇವಿಸಿ ಒಗ್ಗರಣೆಗೆ ಬೆರೆಸಿದೆ .ಹೆಂಗೆ ನನ್ನ ಐಡಿಯಾ??)
ಎಂಜಾಯ್
:-)

January 3, 2013

ನಾನಿ ಹೇಳಿದ್ದು ನ್ಯಾನೋ ಕತೆ ಇರಬಹುದಾ??


ನಾನಿ ನಾನು ಚಿಕ್ಕವಳಿದ್ದಾಗ ಹೇಳಿದ ಕತೆ: it runs like this:

ಒಬ್ಬ ಮನುಷ್ಯ ಸಡನ್ ಆಗಿ ಧನಿಕನಾಗ್ತಾನಂತೆ. ಅವನ ಹೆಂಡತಿಗೆ ಅವನು ನಗಗಳಿಂದ ಅಲಂಕರಿಸಿತ್ತಾನೆ. ಮೊದಲು ಅವರು ಕಷ್ಟಪಟ್ಟು ಹೊಲದ ಕೆಲಸ ಮಾಡಿಕೊಂಡಿದ್ದರು. ಅಷ್ಟು ದುಡ್ಡು ಬಂದರೂ ಹೆಂಡತಿ ಹೊಲದ ದುಡಿಮೆ ಕಡಿಮೆ ಮಾಡಿರಲಿಲ್ಲ. ಆದರೆ ಅವಳಿಗೀಗ ಅತೀ ಯಾದ ತಲೆ ನೋವು ಕಾಣಿಸತೊಡಗಿತು. ಎಷ್ಟೊಂದು ವೈದ್ಯ್ರರ ಬಳಿ ಅವಳನ್ನು ಕರೆದೊಯ್ಯಲಾಯಿತು. ಕಡೆಗೆ ಒಂದು ಹೆಸರುವಾಸಿ ಸಾಧು ಯಾವುದೇ ನೋವಿಗೆ ಔಷಧಿ ಕೊಟ್ಟು ಪೀಡೆಯನ್ನು ಉಪಶಮನಗೊಳಿಸುವನೆಂದು ಪ್ರಖ್ಯಾತಿ ಪಡೆದ ಸಾಧುವಿನ ಹೆಸರು ಯಾರೋ ಇವರಿಗೆ ತಿಳಿಸಿದರು. ಪರಿವಾರ ಸಮೇತ ಹೊರಟ ಆ ಧನಿಕ. 

ಸಾಧು ಆ ಹೆಂಗಸನ್ನೆ ಕೆಲವು ಕ್ಷಣ ದಿಟ್ಟಿಸಿ ನೋಡಿದ. ಆ ಮೇಲೆ ಅವಳ ವಜ್ರದ ಮೂಗು ಬಟ್ಟನ್ನು ಕಳಚಿ ಅವನ ಕೈಗೆ ಕೊಡಲು ಹೇಳಿದ. "ಅತೀಯಾದ ದುಡ್ಡಿದ್ದರೆ ಹೀಗೇ ಆಗುವುದು, ಈಗ ಒಂದು ಸುತ್ತು ಊರೆಲ್ಲ ನೋಡಿ ಸಂಜೆ ಹೊತ್ತಿಗೆ ಬನ್ನಿ. ಆ ಮೇಲೆ ನಿಮ್ಮ ತಲೆನೋವಿನ ಬಗ್ಗೆ ವಿಚಾರಿಸಿಕೂಳ್ಳುತ್ತೇನೆ" ಅಂದ.

ಸಂಜೆ ಗಂಡ ಹೆಂಡತಿ ಆಶ್ರಮಕ್ಕೆ ಮರಳಿದಾಗ ಇಬ್ಬರೂ ಖುಶಿ ಖುಶಿಯಾಗಿದ್ದರು. ಹೆಂಡತಿ ಸ್ವಲ್ಪ ಹೆಚ್ಚಿಗೆ ಗೆಲುವಾಗಿದ್ದಳು. ಈಗ ಆ ಸಾಧು ವಿಚಾರಿಸಿದ 'ಈಗ ನಿಮ್ಮ ತಲೆ ನೋವಿನ ಬಗ್ಗೆ ಹೇಳಿ. ಅದಕ್ಕೆ ಆ ಹೆಂಗಸು : ಅರೇ, ಎಷ್ಟೋ ತಿಂಗಳುಗಳಿಂದ ಕಾಡುತ್ತಿದ ತಲೆನೋವು ಇವತ್ತು ಬೆಳಗ್ಗಿನಿಂದ ಕಾಣಿಸಿಕೊಳ್ಳಲೇ ಇಲ್ಲವಲ್ಲ ಅಂತ ಅಚ್ಚರಿ ವ್ಯಕ್ತ ಪಡಿಸಿದಳು. ಅದಕ್ಕೆ ಸಾಧು ಮಹಾಶಯರು ಅಂದರು'ದುಡ್ಡು ಬಂದಮೇಲೆ, ತಂಗಿ, ನೀನು ವಜ್ರದ ಮೂಗುತಿ ಹಾಕಿಕೊಂಡು ಬಿಸಿಲಿಗೆ ಓಡಾಡುವಾಗ ಸೂರ್ಯನ ಬೆಳಕು ಬಟ್ಟಿಗೆ ಪ್ರತಿಫಲಿಸಿ ನೀನು ಕಣ್ಣು ಕಿರಿದು ಗೊಳಿಸುವಾಗ ತಲೆ ನರ ಸಿಡಿಯುತ್ತಿತ್ತು, ಅದಕ್ಕಾಗೇ ಆ ತಲೆ ನೋವು' ಇವತ್ತು ಬಟ್ಟು ಕಳಚಿಟ್ಟು ಊರೆಲ್ಲ ಬಿಸಿಲಿಗೆ ತಿರುಗಿದ್ದರೂ ನಿನಗೆ ತಲೆನೋವು ಬಾಧಿಸಲಿಲ್ಲ, ಬೆಳಿಗ್ಗೆ ನೀನು ನನ್ನ ಜತೆ ಮಾತನಾಡುವಾಗ ಮೇಲಿನಿಂದ ಸೂರ್ಯನ ಕಿರಣ ನಿನ್ನ ಮುಖಕ್ಕೆ ಬಡಿಯುತ್ತಿದ್ದು ನೀನು ಕಣ್ಣು ಕಿರಿದುಗೊಳಿಸಿ ನನ್ನ ಮಾತನ್ನು ಆಲಿಸುತ್ತಿದ್ದಾಗ, ನಿನ್ನ ನೋವಿಗೆ ಕಾರಣ ನನಗೆ ತಿಳಿಯಿತು"'ಅಂತ...

ನನಗಿಷ್ಟೆ ನೆನಪಿರೋದು. ನಿಮಗೆ ಗೊತ್ತಿರುವ ಇತರೇ version ಏನಾದರೂ ಇದ್ದ್ದಲ್ಲಿ ದಯವಿಟ್ಟು ಶೇರ್ ಮಾಡಿ.
:-)
(ಮುಂಬೈ ನಲ್ಲಿ ಬೆಳೆದಿದ್ದರಿಂದ ನನ್ನ ಅಜ್ಜಿ (ಅಮ್ಮನ ಕಡೆ) ಯನ್ನು ನಾನಿ ಅಂತ, ಅಜ್ಜ ನನ್ನು ಆಜೋಬ ಅಂತ ಸಂಭೋಧಿಸುತ್ತಿದ್ದೆ. )
Nani = maternal grandmother
(ನಾಳೆ ಲಾಕರ್ ಗೆ ಹೋಗಲಿಕ್ಕಿದೆ, ಸಖಿ ತೇಜಸ್ವಿನಿ ಹೆಗಡೆ ಗೆ ನಾನು ವಜ್ರದ ಉಂಗುರದ ಚಿತ್ರ ಕಳಿಸುತ್ತೇನೆ ಅಂತ ಹೇಳಿದ್ದು ನೆನಪಿಗೆ ಬರುತ್ತಿದ್ದ ಹಾಗೆ ಈ ಕತೆ ನೆನಪಾಯಿತು)

January 1, 2013

The year that was- ಹಿಂದಿರುಗಿ ನೋಡಿದಾಗ


2012 ಜಾಸ್ತಿ ಖುಶಿ ಒಂದಿಷ್ಟು ಬೇಜಾರಿನ ಸಂಗತಿಗಳು. home life ನಲ್ಲಿ ಖುಶಿ ಭೈಯ್ಯನವರ ಸಾವೊಂದು ಬಿಟ್ಟರೆ. ನನ್ನ ಬ್ಲಾಗ್ ಮೂರು ಸಲ ಪೇಪರ್ ನಲ್ಲಿ ಬಂದಿದ್ದಲ್ಲದೆ, ನನಗೆ ಇನ್ನಷ್ಟು ಓದುಗರನ್ನು ಇದು ಕೊಟ್ಟಿದೆ.
ತೀರ್ಥಹಳ್ಳಿಯ ತೋಟದಲ್ಲಿ ಹೆಚ್ಚಿನ ತೊಡಗುವಿಕೆ
ನನ್ನ ಕನ್ನಡದಲ್ಲಿ ಹೆಚ್ಚಿನ ಬದಲಾವಣೆಯೇನಾಗಲಿಲ್ಲ, ಗೊತ್ತಿರುವ ಭಾಷೆಗಳು ಕರಪ್ಟ್ ಆಗಿದೆ
ಈ ವರ್ಷ ಅತೀ ಹೆಚ್ಚು ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸವಿಯುವ ಅವಕಾಶ. ಸುಮಾರಾಗಿ ತಿರುಗಾಟ. ಮೈಕ್ರೋ ವೇವ್ ನಲ್ಲಿ ಹೊಸ ಹೊಸ ತಿಂಡಿ/ಪ್ರಯೋಗಗಳು.
Face Book-ಅಂತ:ಪುರದ ಸಖಿಯರನ್ನು ಕಂಡೆ. ಕೆಲವರು ತುಂಬಾssss ಇಷ್ಟ ಆದರು
ನಿಹಾ ಜತೆ ಬೆಂಗಳೂರು ಅಂತರ್ ರಾಷ್ಟ್ರೀಯ ಸಿನೀಮೋತ್ಸವದಲ್ಲಿ   ಭಾಗವಹಿಸುವ ಅವಕಾಶ.
ಈ ವರ್ಷ ಹೆಚ್ಚಿಗೆ ಇಂಗ್ಲಿಷ್ ಪುಸ್ತಕ ಓದಿದೆ
ನನ್ನ ಪುಟ್ಟ ರಿಯಾ ಕ್ಯಾನ್ಸರ್ ರ್ನಿಂದ ಮುಕ್ತಿ ಪಡೆದಿದ್ದಾಳೆ. ಡಾಕ್ಟರ್ ಇನ್ನು ಹೆದರುವ ಅವಶ್ಯಕತೆ ಇಲ್ಲ ಅಂದಿದ್ದಾರೆ
ವರ್ಷ್ಯಾಂತ್ಯದಲ್ಲಿ ನಡೆದ ಅತ್ಯಾಚಾರದ ಆಘಾತಕಾರಿ ಘಟನೆ ಹಾಗೂ ಆ ಪುಟ್ಟ ಹುಡುಗಿಯ ಸಾವು ದು:ಖ ತಂದಿದೆ.
ಈ ವರ್ಷ ಮಾತನ್ನು ಇನ್ನಷ್ಟು ಕಡಿಮೆ ಮಾಡಬೇಕೆಂದಿದ್ದೇನೆ
ಎಲ್ಲರಿಗೂ 2013 ಒಳ್ಳೆದನ್ನೆ ದಯಮಾಡಿಸಲಿ ಎಂಬ ಹಾರೈಕೆಯೊಡನೆ:

:-) loads of smiles and happiness to all....love you guys