January 15, 2013

ಬೆಂಗಳೂರು ಚಿತ್ರೋತ್ಸವ

ನಿಹಾರಿಕಾ ಹಿಂದಿನ ವಾರ (17 th Dec 2012) 'ಅಮ್ಮ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಶುರು ಆಗ್ತಾ ಇದೆ. ಆಗ ನಮಗೆ ಕಾಲೇಜಿಗೆ ರಜೆ. ನಾನಂತು ಇದರ ಉಪಯೋಗ ಮಾಡ್ತೇನೆ ಅಂದಾಗ ನಾನು ಯಾವತ್ತಿನ ಹಾಗೆ ನೈಸ್! ನಿಹಾ ಎಂಜಾಯ್ ಅಂದೆ. ಹಾಗೆ ಅವಳು ಬಾದಾಮಿ ಹೌಸ್ ಗೆ ಹೋಗಿ 100 ರೂ ವಿದ್ಯಾರ್ಥಿ ಪಾಸ್ ತೆಗೆದುಕೊಂಡು ಬಂದಳು. ಶುಕ್ರವಾರ ಅವಳು ಸಿನಿಮಾ ನೋಡಿ ಅದರ ಬಗ್ಗೆ ಕತೆ ಎಲ್ಲ ಹೇಳಿದಳು. 'ನಾಳೆ ಅಪ್ಪ ಇಡೀ ದಿನ ಹಳ್ಳಿ, ನಾ ಅಡಿಗೆ ಮಾಡಲ್ಲ, ಫಿಲ್ಮ್ ನೋಡ್ತಾ ಮನೆಯಲ್ಲಿ ಫಿಲ್ಮ್ ಫೆಸ್ಟಿವಲ್ ಮಾಡ್ತೇನೆ ಅಂದಾಗ ನಿಹಾ, ಅಮ್ಮ ವೈ ಡೋಂಟ್ ಯು ಜಾಯಿನ್ ಅಸ್' .ಅಂತ ಹೇಳಿ ಅದನ್ನೆ ರೆಕಾರ್ಡ್ ತರಹ ಹಾಡಲು ಶುರು ಮಾಡಿದರು. ನನಗಂತು ಮನೆಯಿಂದ ಹೊರಗೆ ಬೀಳುವುದೆಂದರೆ ಕಿರಿ ಕಿರಿ. ಅದಕ್ಕೆ ಶ್ರೀಕಾಂತ್ ಕೂಡ ದನಿ ಸೇರಿಸಿ make use of this opportunity ಅಂದ್ರು. ಅಂತೂ ಇಂತೂ ಮರುದಿನ ಬೇಗ ಎದ್ದು ಬ್ರೇಕ್ ಫಾಸ್ಟ್ ಮಾಡಿ ನಾನು ನಿಹಾ ಹೊರಬಿದ್ದೆವು. ಲಿಡೋ ಗೆ ಹೋಗ ಬೇಕಿತ್ತು. ನನಗೆ ಆ ರೂಟ್ ಮೊದಲ ಬಾರಿಗೆ ಪಯಣ. ಇಲ್ಲಿಂದ ಮೆಜೆಸ್ಟಿಕ್, ಮೆಜಿಸ್ಟಿಕ್ ನಲ್ಲಿ ನಿಹಾಳ ಸ್ನೆಹಿತೆ ಅಖಿಲಾ ನಮ್ಮನ್ನು ಸೇರಿಕೊಂಡಳು. ಅಲ್ಲಿಂದ ಬಸ್ ನವನಿಗೆ ಟ್ರಿನಿಟಿ ಸರ್ಕಲ್  ಗೆ ಹೋಗುತ್ತಾ ಅಂದರೆ ಅವನು ಇಲ್ಲ ಮೇಡಂ ಮೇಯೋ ಹಾಲ್ ಹತ್ರ ಇಳಿದು ಇನ್ನೊಂದು ಬಸ್ ಹಿಡ್ಕಳ್ಳಿ ಅಂದ. ಸರಿ ಮೆಯೋ ಹಾಲ್ ನಿಂದ ಟ್ರಿನಿಟಿ ಕಡೆ ಒಂದು ಸಲ (Indian Cartoonist Association) ಹೋಗಿದ್ದರಿಂದ ನಾವು ಇಳಿದ ಸ್ಟಾಪ್ ನಿಂದ ದೂರ ಇರಲಿಕ್ಕಿಲ್ಲ ಅಂತ , ಹಾಗೂ ಆಗಲೇ ಸಿನಿಮಾ ಶುರು ಆಗುವ ಸಮಯ ಕೂಡ ಹತ್ತಿರ ಆದ್ದರಿಂದ ಅಲ್ಲೆ ಖಾಲಿ ನಿಂತ ರಿಕ್ಷಾ ನವನಿಗೆ ಲಿಡೋ ಹತ್ತಿರ ಬಿಡ್ತೀರಾ ಅಂತ ಕೇಳಿದೆ. ಅವನು ಹೂಂ ಅಂದಾಗ ನಾನು ನಿಹಾ ಮತ್ತು ಅವಳ ಪ್ರೆಂಡ್ ಅಖಿಲಾ ಹತ್ತಿದ್ವಿ. ನಾ ಅಂದುಕೊಂಡ ಹಾಗೆ ಮಿನಿಮಮ್ ಫೇರ್ ಆಯ್ತು. ಸೆಕ್ಯೂರಿಟಿಯವರಿಗೆ ಕೇಳಿ ಸೀದಾ ನಾಲಕ್ನೆ ಫ್ಲೋರ್ ಗೆ ಹೋದ್ವಿ. ನಮ್ಮ ಜತೆ ಒಂದು ಮುದ್ದಾದ ಹುಡುಗ ಮತ್ತು ಅವನ ಫ್ಯಾಮಿಲಿ ಕೂಡ ಇತ್ತು. ನಾನು ಯಾರು ಈ ಕೊಂಕಣಿ ಹುಡುಗ, ಸಂಧ್ಯಾ ವಂದನೆ ಎಲ್ಲ ಮಾಡಿ ಬಂದಿದ್ದಾನೆ ಅಂತ ಆ ಮುದ್ದು ಪೋರನನ್ನೇ ನೋಡುತ್ತಿದ್ದರೆ ಅವನ ಕಣ್ಣೆಲ್ಲ ನನ್ನ ನಿಹಾಳ ಮೇಲಿದ್ದದ್ದು ನೋಡಿ ನನಗೆ ನಗೆ ಬಂತು.  (ಆ ಮೇಲೆ ಗೊತ್ತಾಗಿದ್ದು ಆ ಮುದ್ದಾದ ಹುಡುಗ ಸಿನಿಮಾದ ಒಂದು ಮುಖ್ಯ ಪಾತ್ರ ಅಂತ :-)) ಚೆಕ್ ಇನ್ ನವರು ನಿಹಾ ಅಖಿಲಾ ಳ ಪಾಸ್ ಚೆಕ್ ಮಾಡ್ತಿದ್ದಾಗ, ನಾನು ಡೈಲಿ ಪಾಸ್ ಬಗ್ಗೆ ಕೇಳಿದೆ, ಅದು ಕೆಳಗಡೆ ಗ್ರೌಂಡ್ ಫ್ಲೋರ್ ನಲ್ಲಿ ಸಿಗುತ್ತೆ ಅಂದ್ರು. ಸರಿ ಪುನ: ಮೂರು ಜನ ಕೆಳ್ಗಡೆ ಬಂದ್ವಿ. ಫಿಲ್ಮ್ ಫೆಸ್ಟಿವಲ್ ನ ಟೀ-ಶರ್ಟ್ ಹಾಕ್ಕೊಂಡಿದ್ದವರು ಇಬ್ಬರು ವಾಲಂಟಿಯರ್ಸ್ ಇದ್ರು. 'ಪಾಸ್ ಇನ್ನೂ ಬಂದಿಲ್ಲ -its on the way ಅಂದ ಅವರಲ್ಲೊಬ್ಬ. ಅದಕ್ಕೆ ನಾನಂದೆ 'ಅರೇ ಸಿನಿಮಾ ಶುರು ಆಗಲಿಕ್ಕೆ 5 ನಿಮಿಷ ಉಳಿದಿರೋದು, ಪಾಸ್ ಇಲ್ಲದಿದ್ದರೆ ಒಳಗಡೆ ಬಿಡಲ್ಲ ಅಂತೀರಾ, ನಾನು ಎಷ್ಟು ದೂರದಿಂದ ಆಸೆ ಯಿಂದ ಕೊಂಕಣಿ ಸಿನಿಮಾ ನೋಡಲು ಬಂದಿದ್ದೇನೆ ಅಂದಾಗ ಕೂಡಲೆ ಅಲ್ಲಿದ್ದ ನಾಲ್ಕು ಜನರು ನನ್ನೊಂದಿಗೆ ದನಿ ಗೂಡಿಸಿದರು. ಕಾಯ್ತಾ ಆಗಲೆ ಸಿನಿಮಾ ಶುರು ಆಗಿ 5 ನಿಮಿಷ ಆಯ್ತು. ನಿಹಾ ಮತ್ತು ಅವಳ ಸ್ನೇಹಿತೆಯನ್ನು, 'ನೊ ಯೂಸ್ ಯೂ ಬೋತ್ ಮಿಸ್ಸಿಂಗ್ ದ ಮೂವಿ..ಹೋಗಿ ಅಂತ ಬಲವಂತವಾಗಿ ಕಳಿಸಿದೆ. ನಾವು ಆ ಹುಡುಗರನ್ನು ಕಿರಿ ಕಿರಿ ಮಾಡಿ ಸಂಯೋಜಕರ ಬಳಿ ಮಾತನಾಡಿದೆವು.ಮೊದಲು ಒಪ್ಪಲಿಲ್ಲ ಆ ಮೇಲೆ ನಾನು'ಪ್ಲೀಸ್ ಲೇಟ್ ಆಗಿ ಹೋಗೋದು ಏನೂ ಚೆನ್ನಾಗಿರಲ್ಲ, ಕೊಂಕಣಿ ಬಾಂಧವರ ಜತೆ ಕೂತು ಸಿನಿಮಾ ನೋಡೋದು ಒಂದು ಗಮ್ಮತ್ತು, ಮತ್ತು ನಾವು ನೋಡಿದ ಹಾಗೆ ಹೆಚ್ಚಿಗೆ ಜನರೇನೂ ಇಲ್ಲ, ಪ್ಲೀಸ್ ದುಡ್ಡು ಬೇಕಾದರೆ ಫಿಲ್ಮ್ ಆದಮೇಲೆ ಪ್ರಾಮಿಸ್ ತಂದು ಕೊಡ್ತೇವೆ ಅಂತ ಎಲ್ಲರ ಪರವಾಗಿ ಗೋಗರೆದೆ. ಕೊಂಕಣಿ ಸಿನಿಮಾದ ಪ್ರೈವಟ್ ಶೋ ಗಳಾಗಿ ಅದರ ಬಗ್ಗೆ ಸ್ಮಿತಾ ಕಾಯ್ಕಿಣಿ, ಮಿತ್ರ ನೀಲೇಶ ಜವಳಿ ಇವರಿಂದ ಕೇಳಿದ್ದೆ. ಅಂತೂ ಇಂತೂ ನಾವು ಗೋಗರೆದ ಫಲವಾಗಿ ನಮ್ಮನ್ನು ಒಳ ಬಿಡಲು ಆ ಮಕ್ಕಳಿಗೆ ಪರವಾನಗಿ ದೊರೆತಿತು, ಹಾಗೂ ಅವರು ನಮ್ಮ ಜತೆ ಮೇಲೆ ಒಳಬಿಡಲು ಬಂದರು. ನೋಡಿದರೆ ನನ್ನ ಜತೆ ಇದ್ದ ಇನ್ನೋರ್ವರ 15 ಜನ ಕುಟುಂಬದವರು ಹೊರಗಡೆ ನಿಂತಿದ್ದರು :-)

ನಾನು ಒಳಗಡೆ ಬಂದದ್ದು ನೋಡಿ ನಿಹಾ ನನ್ನನ್ನು ಎದುರುಗೊಂಡು ಅವರು ನನಗೋಸ್ಕರ ಕಾಯ್ದಿದಿರಿಸದ ಸೀಟ್ ಬಳಿ ಕರೆದೊಯ್ಯಲು ಬಂದಳು. ಒಟ್ಟು 10 ನಿಮಿಷಗಳ ಫಿಲ್ಮ್ ಮಿಸ್ಸಾಗಿದ್ದು ಬಿಟ್ಟರೆ ಉಳಿದ ಪೂರ್ತಿ ಸಿನಿಮಾ ನೋಡುವ ಅವಕಾಶವಾಯ್ತು. ಅಪರೂಪಕ್ಕೆ ಎಷ್ಟೋ ವರ್ಷಗಳ ನಂತರ ನೋಡಲು ಸಿಕ್ಕ ಕೊಂಕಣಿ ಸಿನಿಮಾ. ಯಾವಾಗಲೋ ಒಂದು ಸಲ ಮುಂಬೈ ನ ದೂರದರ್ಶನದಲ್ಲಿ ನೋಡಿದ 'ಜನಾಲೆ ಮನ' ದ ಮಸುಕು ಮಸುಕು ನೆನಪು. ಉಜ್ವಾಡು ಅಂದರೆ ಬೆಳಕು. ಒಂದು ಊರು. ಊರಿನ ಹಿರಿಯ ಮಾಸ್ಟ್ರ ಮನೆ. ಮನೆಯಲ್ಲಿ ಅನಾಥ ಹುಡುಗ ಗಜ್ಜು (ಗಜಾನನ). ಅವರ ಮನೆ ಎದುರಿಗೆ ಇರುವ ಉಜ್ವಾಡು, ಇದು ವೃದ್ಧಾಶ್ರಮದ ಹೆಸರು. ವೃದ್ಧರನ್ನು ನೋಡಿಕೊಳ್ಳುವ ಅಥವಾ ಪ್ರೀತಿಯಿಂದ ಅವರೆಲ್ಲರ ಬಿಟ್ಟಿ ಕೆಲಸ ಮಾಡುವ ಗಜ್ಜು ಮತ್ತು ನೀತು(ಸಿನಿಮಾದಲ್ಲಿನ ಹೆಸರು ಮರೆತು ಹೋಯ್ತು), ಈ ಮಾಸ್ಟ್ರ ಮನೆಯಲ್ಲಿ ತಂಗಲು ಬರುವ ಇಂಗ್ಲಿಶ್ ಲೆಕ್ಚರರ್. ಈ ಲೆಕ್ಚರರ್ ಗೆ ಊರಿನ ಪರಿಚಯ ಮಾಡಿಸ್ತಾ ನಾವು ನೋಡುಗರಿಗೂ ಊರಿನ ಎಲ್ಲರ ಪರಿಚಯ. ಕೊಂಕಣಿ ಜನರ ರೀತಿ ನೀತಿ, ಸಂಸ್ಕ್ರತಿ ಸಂಪ್ರದಾಯಕ್ಕೆ ಹೆಚ್ಚು ಒತ್ತು.  ಒಂದು ದೇವಸ್ಥಾನದ ಊಟ, ಚೂಡಿ ಪೂಜೆ, ಜನರಿಗೆ nickname ಅಡ್ಡ ಹೆಸರಿಡುವುದು, ಒಂದು ಲವ್ ಸ್ಟೋರಿ, ಒಂದು ಮಾರಾಮಾರಿ- ಈ ಮಾರಾಮಾರಿಯ ಫಲವಾಗಿ ಒಳ್ಳೆಯವನಾಗುವ ವಿಲ್ಲನ್ ಮರ್ತು, ಇದೆಲ್ಲರಿಂದ ಭರಪೂರ.ಆಮೇಲೆ ಲೆಕ್ಚರರ್ ಗೂ ನೀತೂ ಗು ಮದುವೆ. ಒಂಟಿ ಹಿರಿಯ ಮೇಸ್ಟ್ರು ಅವರ ಮನೆಯನ್ನು ಇವರಿಬ್ಬರಿಗೆ ಕೊಟ್ಟು ಅನಾಥಾಶ್ರಮ ಸೇರುತ್ತಾರೆ. ಹೋಳಿ ಸಮಯದಲ್ಲಿ ನಡೆದ ಅವಘಡದಲ್ಲಿ ಗಜ್ಜು ಸಾವನ್ನಪ್ಪುತ್ತಾನೆ. ಅವನ ಸ್ಥಾನದಲ್ಲಿ ಇನ್ನೊಬ್ಬ ಅನಾಥ ಹುಡುಗ ವಿಘ್ನೇಶನ ಎಂಟ್ರಿ ಆಗುತ್ತೆ. ಕತೆ ಅಂತ ಏನಿಲ್ಲ. ಪ್ರತಿ ಮನೆಯೊಳಗಿನ  ದಿನಚರಿ ತೋರಿಸಿದ್ದಾರೆ. ತುಂಬಾ loud ಸಂಗೀತ, ಮತ್ತು ರಂಗಪಂಚಮಿ ಹಾಡು ಮರಾಠಿ ಹಾಡಿನ ಹಾಗೆ ಕೇಳಿಸುತ್ತಿತ್ತು, ನಿಜಕ್ಕೂ ಅದು ಬೇಕಿರಲಿಲ್ಲ. ಸಂಭಾಷಣೆ ಚೆನ್ನಾಗಿವೆ, ಹೆಚ್ಚಿನವರು ಅವರ ಪಾತ್ರವನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಆದರೆ ಒಟ್ಟಾರೆ ಸಿನಿಮಾದ ಸ್ಟಾರ್ attraction ಗಜ್ಜುನೇ. ಗಜ್ಜು ಸಾವನಪ್ಪಿದಾಗ ...ಅಳುವ ಸೀನ್ (ಸದಾಶಿವ ಭ್ರಮ್ಮಾವರ್) ಸ್ವಲ್ಪ ಹೆಚ್ಚೆ ಎಳೆದು ಕಿರಿ ಕಿರಿ ಅನ್ನಿಸಿತ್ತು. ಉಮಾಶ್ರೀ ಅಭಿನಯದ ಬಗ್ಗೆ ನೋ ದುಸ್ರಾ ಬಾತ್. ಕೊಂಕಣಿಯವರಲ್ಲ ಅನ್ನುವಂತೆಯೇ ಇಲ್ಲ. :-)
ನಾವು ಕೊಂಕಣಿಯವರು ಸುಮ್ಮನಿರಲ್ಲ , ನಾಲ್ಕು ಜನ ಒಟ್ಟಾದ್ರೆ ಗೌಜಿ-ಗಲಾಟೆ ಶುರು ಮಾಡಿಕೊಂಡು, ಗಟ್ಟಿಯಾಗಿ ಮಾತನಾಡಲು ಶುರು ಹಚ್ಚಿಕೊಂಡು ಬಿಡ್ತೇವೆ. ಹಾಗೆಯೇ ಸಿನಿಮಾ ಸುಮ್ಮನೆ ನೋಡೊದಕ್ಕಿಂತ ಬೇರೆಯವರ reaction criticism, joke ಎಲ್ಲ ಮಜವಾಗಿತ್ತು. ಅದಕ್ಕೋಸ್ಕರ ಆದರೂ ಕೆಲವೊಮ್ಮೆ ಸಿನಿಮಾ ಮಂದಿರಕ್ಕೆ ಭೇಟ್ಟಿ ನೀಡ ಬೇಕು. ಕೆಲವರಂತೂ ಎಷ್ಟು  ಸೀರಿಯಸ್ ಆಗಿ ಸಿನಿಮಾ ಬಗ್ಗೆ discussion ಗೆ ತೊಡಗ್ತಾರಂದ್ರೆ........................:-)
ಎಲ್ಲ ಕೊಂಕಣಿಯವರು ಒಂದು ಸಲ ನೋಡಬಹುದಾದ ಚಿತ್ರ..
ಸಿನಿಮಾ ಮುಗಿದ ಕೂಡಲೆ ಪುನ: ವೊಲಂಟೀಯರ್ಸ್ ಕಡೆಗೆ ಹೋದ್ವಿ, ಪಾಸ್ ಏನಾದ್ರು ಬಂದಿದ್ರೆ ಅದನ್ನ ಪಡೀಲಿಕ್ಕೆ. ಆದರೆ ನಮಗೊಂದು ಸಂತಸದ ಸುದ್ದಿ ಇತ್ತು. ಆ ದಿನ ಲಿಡೋ ದಲ್ಲಿ ಯಾವುದೇ ಚಿತ್ರಕ್ಕೆ ಪಾಸ್ ಇಲ್ಲ ಅಂತ. ಮುಂದಿನ ಸಿನಿಮಾಗೆ ಸುಮಾರು ಟೈಮ್ ಇದೆಯಂತ ನಾವು ಕೆಳಗಡೆ McDonalds ನಲ್ಲಿ ಬರ್ಗರ್ ತಿಂದ್ವಿ. ಹಾಗೇ ಅಖಿಲಾ ಗೆ ಗೊತ್ತಾಗದಿದ್ದ ಸೀನ್ಸ್, ಜನರು ಯಾವ ಕಾರಣಕ್ಕೆ ನಗ್ತಾ ಇದ್ರು. ಕೆಲವು ಕಡೆ ಅಧ್ವಾನ ವಾಗಿರುವ subtitle..ಇದರ ಬಗ್ಗೆ ಎಲ್ಲ ಮಾತಾಡಿದ್ವಿ. ಆ ಮೇಲೆ ಮುಂದಿನ ಚಿತ್ರ ಬಗ್ಗೆ ಅವರಿಗೇ ಚೂಸ್ ಮಾಡಲು ಬಿಟ್ಟು ನಾನು Mcdonald's ಗೆ ತಿನ್ನಲಿಕ್ಕೆ ಬಂದವರನ್ನು ನೋಡುವುದರಲ್ಲಿ ನನ್ನನ್ನು ನಾನೆ ಮರೆತು ಹೋದೆ.
.
......to be continued.....(ಯಾವಾಗ್ಲೋ ಬರೆದಿಟ್ಟಿದ್ದೆ ಇವತ್ತು ಪೋಸ್ಟ್ ಮಾಡುವ ಮೂಡ ಬಂತು)
:-)

5 comments:

  1. ಹರಿಯುವ ನೀರಿಗೆ ಯಾವ ಪಾತ್ರವಾದರೂ ಸರಿ ಹರಿಯುತ್ತಾ ಹೋಗುತ್ತದೆ..ನಿಮ್ಮ ನೆನಪಿನ ಸಂಚಯ ಅರ್ಜುನನ ಬತ್ತಳಿಕೆ ಇದ್ದಾ ಹಾಗೆ ತುಂಬುತ್ತಲೇ ಹರಿಯುತ್ತಾ ಇರುತ್ತದೆ.ಒಂದು ಸುಂದರ ಘಟನೆಯನ್ನ, ಅಷ್ಟೇ ನವಿರಾಗಿ ಹೇಳಿದ ಪರಿ ಸುಂದರವಾಗಿದೆ ಬೆಂಗಳೂರಿನ ರಸ್ತೆಯಲ್ಲಿನ ಪಯಣ, ಚಿತ್ರವನ್ನು ವೀಕ್ಷಿಸಲು ಪಟ್ಟ ಪ್ರಯಾಸ, ಸಮಯೋಚಿತ ಮಾತುಗಳು ಹಾಗು ನಿರ್ಧಾರ, ನಿರ್ವಾಹಕರನ್ನು ಒಪ್ಪಿಸಿದ ರೀತಿ ಎಲ್ಲ್ಲವು ಚಿತ್ರದ ಸೈಡ್ ರೀಲಿನಂತೆ ಮುದಕೊಡುತ್ತದೆ. ಚಿತ್ರಗಳನ್ನು ಟಾಕೀಸ್ನಲ್ಲಿ ನೋಡುವ ಮಜವೇ ಬೇರೆ....ಸುಂದರ ಲೇಖನ..

    ReplyDelete
  2. Dear Srikanth Manjunath!
    ನಿಮ್ಮ ಕಮೆಂಟ್ ಓದಿದಾಗಲೆಲ್ಲ ನನ್ನ ಬರಹ ನಿಮ್ಮ ಚೆಂದದ ಕಮೆಂಟ್ಸ್ ಗೆ worthy ಆಗಿಲ್ಲ ಅನ್ನುವ ಅಳುಕು ಕಾಡುತ್ತದೆ.
    ಥ್ಯಾಂಕ್ಯು ನಿಮಗೆ
    :-)
    ಮಾಲತಿ ಎಸ್.

    ReplyDelete
  3. (since comments are subjected to moderation..you can delete this after reading this.)
    ಇಲ್ಲ ಮೇಡಂ ನಿಮ್ಮ ಲೇಖನಗಳು ತುಂಬಾ ಸೊಗಸಾಗಿರುತ್ತೆ..ಅಳುಕು ಬೇಡ..ಹರಿಯುವ ನದಿಯು ನೇರವಾಗಿ ಹರಿದರೆ ಸೊಬಗಿರೊಲ್ಲ .ಬೀಳುವ ಜಲಪಾತ ನೆಟ್ಟಗೆ ಬಿದ್ದರೆ ಸುಂದರವೆನಿಸೋಲ್ಲ.ಹಾಗೆಯೇ ಬ್ಲಾಗ್ ಲೋಕದಲ್ಲಿ ಬರೆಯುವ ತಾರೆಗಳು ಅದನ್ನು ಪ್ರಸ್ತುತ ಪಡಿಸುವ ಬಗೆ ಓದುಗರ ಮನಸ್ಸಿಗೆ ತಾಕುತ್ತದೆ.ಹಾಗೆಯೇ ನಿಮ್ಮ ಬರಹ ಕೂಡ.
    ಹೊಗಳಿಕೆ ಏನಿಲ್ಲ ಇದರಲ್ಲಿ..ದಯವಿಟ್ಟು ಅಳುಕು ಬೇಡ..ಹಾಗೆಯೇ wothyness ಬಗ್ಗೆ ಅನುಮಾನ ಕೂಡ ಬೇಡ...ನಿಮ್ಮ ಬರವಣಿಗೆ ಹೀಗೆ ಸುಂದರವಾಗಿ ಮೂಡುತ್ತಿರಲಿ ಎಂದು ಆಶಿಸುವ ನಿಮ್ಮ ಬ್ಲಾಗಿನ ಅನೇಕ ಓದುಗರಲ್ಲಿ ಒಬ್ಬ...

    ReplyDelete
  4. Hi Mal, yake namma Malthi Film festival bagge enu bareyalilla antha andhkoltidde, innashtu idara bagge bareeralla.
    Veda

    ReplyDelete
  5. ಅನಿವಾರ್ಯ ಕಾರಣಗಳಿಂದ ಈ ಬಾರಿಯ ಚಿತ್ರೋತ್ಸವ ತಪ್ಪಿಸಿಕೊಂಡೆ.

    ಒಳ್ಳೆಯ ಬರಹ.

    ReplyDelete