January 25, 2013

ಎಲ್ಲಿಂದಲೋ ಎಲ್ಲಿಗೋ- ಒಂದು ಲಹರಿ




ಸುರಗಿ ಮತ್ತು ಕೇದಗೆ ಒಣಗಿದರೂ ಪರಿಮಳ ಬೀರುತ್ತಲೇ ಇರುತ್ತವೆ. ಸುರಗಿ ಹೂ, ಆದರೆ ಕೇದಗೆ/kewra, leaf modification. ನಮ್ಮ ತೀರ್ಥಹಳ್ಳಿಯ ತೋಟದಲ್ಲಿ ಪುಟ್ಟದೊಂದು ಕೇದಗೆ/ಮುಂಡುಗದ ವನ. ಈ ವನದಲ್ಲಿ ಹಾವುಗಳ ಓಡಾಟ ಹೆಚ್ಚು ಅನ್ನುತ್ತಾರೆ. ಆದರೆ ನಮ್ಮ ತೋಟದ ನೀರಿನ ಬಳಿ ಒಂದು ಕಪ್ಪನೆಯೆ ಉದ್ದದ  ನಾಗರಹಾವು ಓಡಾಡುವುದನ್ನು ಕಂಡಿದ್ದೇನೆ. ನಾಗರಹಾವು ಅಂದ ತಕ್ಷಣ ಎರಡು ವರ್ಷದ ಹಿಂದಿನ ಚೌತಿಯಂದು ನಡೆದ ಘಟನೆ ನೆನಪಾಗುತ್ತದೆ. ನಾವು ಬೆಂಗಳೂರಿನಿಂದ ತೀರ್ಥಹಳ್ಳಿಗೆ ಹಬ್ಬಕ್ಕೆ ಹೋಗಿದ್ದೆವು. ಹಬ್ಬದ ದಿನ ಬೆಳಿಗ್ಗೆ ಅಕ್ಕ (ಓರಗಿತ್ತಿ) ಅಡಿಗೆ ಮನೆಯ ಲೈಟ್ ಹಾಕಬೇಕಾದರೆ ಮಿಡಿನಾಗರ ಹಾವೊಂದು ಅಡಿಗೆ ಮನೆಯಲ್ಲಿ, ನೆಲಕ್ಕೆ ತಾಗಿರುವಂತೆ, ಗೋಡೆಯೊಳಗಿನ ಕಪಾಟು ಸೇರಿಕೊಂಡಿದ್ದನ್ನು ನೋಡಿದರು. ಮಳೆ ಬಂದಿದ್ದರಿಂದಾಗಿ,ವಾತಾವರಣ ತಂಪಾಗಿದ್ದು, ಆ ಕಪಾಟಿನ ಬಾಗಿಲು ಪೂರ್ತಿ ಹಾಕಲಿಕ್ಕೆ ಬರುತ್ತಿರಲಿಲ್ಲ. ಆ ಕಪಾಟಿನಲ್ಲಿ ಅಕ್ಕನ ಸಾಂಬಾರು ಪದಾರ್ಥದ ಡಬ್ಬಿ, ಎಣ್ಣೆ, ತುಪ್ಪ, ಬೆಣ್ಣೆ ಇಡುವ ಜಾಗ. ಸರಿ ನಾನು ಅಡಿಗೆ ಮನೆಗೆ ಹೋದಾಗ ಅಕ್ಕ ಹೀಗೀಗೆ ಹಾವು ಸೇರಿಕೊಂಡಿದೆ. ಕತ್ತಲೆಯಲ್ಲಿ ಏನೂ ಕಾಣುವುದಿಲ್ಲ. ಅಡಿಗೆ ಮನೆಯಲ್ಲಿ ಬಲ್ಬ್ ಇದ್ದರು ಅದರ ಬೆಳಕು ಕಪಾಟಿನ ಒಳಗೆ ತಲುಪುತ್ತಿರಲಿಲ್ಲ. ನಾನು ಕೋಣೆಗೆ ಹೋಗಿ ನನ್ನ ಸೆಲ್ಲ್ ಫೋನ್ ಬೆಳಕಿನಿಂದ ಹಾವು ಹುಡುಕುವ ಪ್ರಯತ್ನದಲ್ಲಿ ಅಡಿಗೆ ಮನೆ ತುಂಬ ಮಲಗಿಕೊಂಡು ಡಬ್ಬಿ/ಬಾಟಲಿಗಳ ಮಧ್ಯ ಕೈ ಹಾಕಿ ತಡಕಾಡುತ್ತ ಇದ್ದೆ . ಅಷ್ಟರಲ್ಲಿ ಭೈಯಾ ದೊಡ್ಡ ಟಾರ್ಚ್ ಒಂದನ್ನು ಹಿಡಿದುಕೊಂಡು ಒಂದು ಕೋಲು ಒಳಗೆ ಸೇರಿಸಿ ಹುಡುಕಾಡಿದೆವು. ಊಹೂಂ ಹಾವು ಕಾಣಲೇ ಇಲ್ಲ. ಆಮೇಲೆ ನಮ್ಮ ಹಬ್ಬದ ಗಡಿಬಿಡಿಯಲ್ಲಿ ಆಘಟನೆ ಮರೆತೇ ಹೋಯಿತು.


ಬೆಂಗಳೂರಿಗೆ ಮರಳಿದ ಮೇಲೆ ಯಾರೋ ಹಾವಿನ ವಿಷಯ ಮಾತನಾಡುವಾಗ, ಸಡನ್ ಆಗಿ ನನಗೆ ಆ ದಿನದ ಅಡಿಗೆ ಮನೆ ಸೀನ್ ನೆನಪಾಗಿ, 'ಅರೇ ಮಿಡಿನಾಗರಹಾವನ್ನು ನೋಡುವ ಹುನ್ನಾರದಲ್ಲಿ ನಾನು 5'2" ಹೆಬ್ಬಾವಿನಂತೆ ಅಡಿಗೆ ಮನೆಯಲ್ಲಿ ಹೊರಳಾಡಿದ್ದನ್ನು ಕಂಡು ಭೈಯ್ಯ ನವರಿಗೆ ಏನನ್ನಿಸಿತೋ ಅಂತ ನನ್ನಷ್ಟಕ್ಕೆ ನಗ್ತಾ ಇದ್ದೆ.Sumathi Deepa Hegde : munna!has amma shared this with you? :-) )

ಸರಿ, ರಾಯರು ಮುಂಬೈಗೆ ಹೋಗ್ತಾ ಫ್ಲೈಟ್ ನಲ್ಲಿ ಓದಲು 'ಸುರಗಿ' ಪುಸ್ತಕ ಎತ್ತುಕೊಂಡಿದ್ದಾರೆ. ಸುರಗಿ ಜತೆ ನೀಹಾ ಮಾಡಿದ bookmark ಕೂಡ ಹೋಗ್ತಾ ಇದೆ ಮುಂಬೈಗೆ. ಚಾನ್ಸ್. ಅವರು ರೆಡಿಯಾಗುವಾಗ ನಾನು ಸುಮ್ಮನೆ ಸುರಗಿಯ ಪುಟ ತಿರುಗಿಸ್ತಾ ಇದ್ದೆ. ಮುಖ ಪುಟ ನನಗಿಷ್ಟ ಆಗಿದೆ. ಉಳಿದ ಮೂವರಿಂದ no comments' ಮುಖಪುಟದ ರೇಖಾಚಿತ್ರ ಜ.ನಾ.ತೇಜಶ್ರೀ ಯವರದ್ದು ಹಾಗೂ ವಿನ್ಯಾಸ ಮಾದಿದವರು ಚನ್ನಕೇಶವ ಅಂತ ಒಳಗಡೆ ನಮೂದಿಸಲಾಗಿದೆ. ಜ.ನಾ. ತೇಜಶ್ರೀ ಯವರ ಬಗ್ಗೆ ಅನಂತಮೂರ್ತಿ ಯವರು ಆತ್ಮೀಯವಾಗಿ ಬರೆದಿದ್ದಾರೆ. ಒಳಗಡೆ ಫೊಂಟ್ (font) ಸ್ವಲ್ಪ ಚಿಕ್ಕದಾಗಿದೆ. 


6 ಗಂಟೆಗೆ ಹೊರಡಬೇಕಿದ್ದ ಫ್ಲೈಟ್ ಇನ್ನೂ poor visibility due to fog ನಿಂದ ನಿಲ್ದಾಣದಲ್ಲೇ ಇದೆಯಂತೆ. ಕ್ಯೂ ನಲ್ಲಿ ಇವರದ್ದು 14 ನೇ ನಂಬರ್ ಅಂತೆ take-off ಗೆ. ಇಷ್ಟರಲ್ಲೆ ಅರ್ಧ 'ಸುರಗಿ' ಮುಗಿಸಿಬಿಟ್ಟಿರುತ್ತಾರೆ. :-) ಹಸಿವೆಯಾಗಿ ಏನು ತಿಂಡಿ ಅಂತ ಕೇಳಿದರು. ನಾನು ಒಗ್ಗರಣೆ ಹಾಗಿದ ಮೈದಾ ಹಿಟ್ಟಿನ ದೋಸೆ ಅಂತ ನಾಲಿಗೆ ಹೊರಚಾಚುವ ಐಕನ್ ಕಳಿಸಿಸ್ದ್ದೆ ಸೆಲ್ ನಲ್ಲಿ. ಅದಕ್ಕೆ ಅವರು ಮುಂಬೈ ನಲ್ಲಿ ನನ್ನ ಇಷ್ಟದ ವಡಾ ಪಾವ್+ ಚಟ್ನಿ ಪುಡಿ+ ಹುರಿದ ಹಸಿಮೆಣಸಿನ ಕಾಯಿ ಕೊಂಬೋ ತಿನ್ನುತ್ತಾರಂತ ನನಗೀಗ ಹೊಟ್ಟೆಯುರಿ :-(

ಈ ವರ್ಷ ನಾನು ಹೆಚ್ಚಿಗೆ ಕನ್ನಡ ಪುಸ್ತಕಗಳನ್ನು ಓದಬೇಕೆಂದು ಠರಾಯಿಸಿದ್ದೇನೆ. ಈಗಾಗಲೇ ವಿವೇಕ ಶಾನಭಾಗ ರ 'ಘಾಚರ್ ಘೋಚರ್' ಓದಿ ಮುಗಿಸಿದೆ. ತೀರ್ಥಹಳ್ಳಿಯಲ್ಲಿ ಬಿಟ್ಟು ಬಂದು, ಓದು ಸ್ಥಗಿತಗೊಂಡ 'ಸ್ವಪ್ನ ಸಾರಸ್ವತ' ಪುನ: ನನ್ನ ಕೈಗೆ ಸಿಕ್ಕಿದೆ. ಇನ್ನು ಕೆಲವೆ ಪುಟಗಳು ಬಾಕಿ ಇವೆ. ಅದಾದ ಮೇಲೆ ಜೋಗಿ urph Girish Rao Hatwar ಯವರ 'ದೇವರ ಹುಚ್ಚು' ನೋಡುವ ಏನು ಬರೆದಿದ್ದಾರೆ ಹೇಗೆ ಬರೆದಿದ್ದಾರೆ ಅಂತ.

ಸುರಗಿ , ಕೇದಗೆ ಜತೆ ನನಗಿಷ್ಟವಾದ ಇನ್ನೊಂದು ಹೂವು ಕೆಂಡಸಂಪಿಗೆ..
ಪರಿಮಳಯುಕ್ತ ಗುರುವಾರ ನಿಮ್ಮದಾಗಲಿ.
Loads of love:
ಮಾಲತಿ ಎಸ್
(ಕೇದಗೆ ಮತ್ತು ಸುರಗಿ ನೆಟ್ ನಿಂದ ಕದ್ದಿದ್ದು)
ಫೇಸ್ ಬುಕ್ ನಲ್ಲಿ ಹಾಕಿದ್ದು. ಇಲ್ಲಿ ಗೂ...
:-)

2 comments:

  1. ಕೆತ್ತಿದರೆ ಶಿಲೆಯು ಶಿಲ್ಪವಾಗುತ್ತದೆ..ಬರೆದರೆ ಪದಗಳು ಹಾಡುತ್ತವೆ ಎನ್ನುವ ಮಾತು ಎಷ್ಟು ನಿಜ...ಒಂದಕ್ಕೊಂದು ಕೊಂಡಿ ಹಾಕಿ ಬರೆದ ರೀತಿ ಇಷ್ಟವಾಗುತ್ತದೆ...ಅನಾಯಾಸವಾಗಿ ತೀರ್ಥಹಳ್ಳಿಯಿಂದ ಬೆಂಗಳೂರು, ಮುಂಬೈ ಎಲ್ಲ ತಿರುಗಿಸಿದ ನಿಮ್ಮ ಲೇಖನಕ್ಕೆ ಅಭಿನಂದನೆಗಳು..ಸೊಗಸಾಗಿದೆ.ಲಹರಿ..

    ReplyDelete
  2. ನಿಮ್ಮ ಚಂದದ ಕಮೆಂಟ್ ಗೋಸ್ಕರ ನಾನು ಈಗ ಬೇಗ ಬೇಗ ನನ್ನ ಬ್ಲಾಗ್ ಅಪ್ ಡೇಟ್ ಮಾಡ್ತಾ ಇದ್ದೀನಿ ಶ್ರೀಕಾಂತ ಮಂಜುನಾಥ ಅವರೆ!!
    ಥ್ಯಾಂಕ್ಯೂ
    :-)
    ಮಾಲತಿ ಎಸ್.

    ReplyDelete