ಕೆಂಡಸಂಪಿಗೆ, ಅವಧಿಯಲ್ಲೆಲ್ಲ ಅನುದಿನದ ಅಂತರಗಂಗೆಯ (ಅ.ಅ.) excerpts ಓದಿ ಆ ಪುಸ್ತ್ಕಕ ಯಾವಾಗ ಕೊಳ್ಳುತ್ತೇನೋ ಅನ್ನುವ ತವಕ. ಹಾಗೆ ಯು ಆರ್ ಅನಂತಮೂರ್ತಿಯವರ ಪ್ರಿತಿ-ಮೃತ್ಯು-ಭಯ ಕೂಡ ನನಗೆ ಬೇಕಿತ್ತು. ಸರಿ ಭಾನುವಾರ ಸಂಜೆ ನಮ್ಮ ರಾಯರಿಗೆ ಪೂಸಿ ಹೊಡೆದು ನಮ್ಮ ಐರಾವತ ಏರಿ ಆಕೃತಿ ಪುಸ್ತಕಕ್ಕೆ ಹೋದೆವು.
ಅಲ್ಲಿ ಎಂಟ್ರೆನ್ಸ್ ನಲ್ಲಿ ಜನವೋ ಜನ. ನನಗೆ ಖುಶಿ, ಹಾಂ ಇವತ್ತು ಭಾನುವಾರ ತುಂಬ ಜನ ಪುಸ್ತ್ಕಕ ಕೊಳ್ಳಲು ಬಂದಿದ್ದಾರೆ ಅಲ್ಲದೇ ಗುರು ಪುಸ್ತಕಗಳ ಮೇಲೆ ಶೇ 50 % ರಷ್ಟು ರಿಯಾಯಿತಿ ಬೇರೆ ಘೋಷಿಸಿದ್ದರು. ಗಾಡಿ ಪಾರ್ಕ್ ಮಾಡಿಕೊಂಡು ಅಲ್ಲಿಗೆ ಹೋದರೆ ಏನು, ಜನ ಜಮಾಯಿಸಿದ್ದು ಆಕೃತಿ ಎದುರುಗಡೆ ನಿಂತಿದ್ದ ಪಾನಿಪುರಿಯವನ ಬಳಿ -ತಿನ್ನಲು.
ಮೊದಲೆಲ್ಲ ನಾನು ಪುಸ್ತಕಗಳು ಬೇಕಾದರೆ ಸಪ್ನ ಬುಕ್ ಹೌಸ್, ಗಾಂಧಿನಗರಕ್ಕೆ ಹೋಗುತ್ತಿದೆ, ತಪ್ಪಿದ್ದಲ್ಲಿ, ಅಪರೂಪಕ್ಕೆ ಅಂಕಿತ - ಗಾಂಧಿ ಬಜಾರ್.ಈಗ ನಮಗೆ ಆಕೃತಿ ಬುಕ್ಸ್ ಮನೆ ಬಳಿಯಾಗುತ್ತೆ, ಹಾಗು ಇಲ್ಲದ ಪುಸ್ತ್ತಕಗಳನ್ನು ಗುರು ತಂದು ಕಾಯ್ದಿರಿಸುತ್ತಾರೆ. ಹಾಗಾಗಿ ಇತ್ತೀಚಿಗಿನ ಆರು ತಿಂಗಳಲ್ಲಿ ಅವರಿಂದ ಹಲವಾರು ಪುಸ್ತಕಗಳನ್ನು ಖರೀದಿಸಿದ್ದೇವೆ
ನನಗೆ ಬೇಕಾದ ಎರಡೂ ಪುಸ್ತಕ ಅಲ್ಲಿನ ಸಹಾಯಕರು ಬೇಗನೆ ತೆಗೆದು ಕೊಟ್ಟಿದ್ದರಿಂದ ಅದನ್ನು ಬಿಲ್ಲಿಂಗ್ ಮಾಡುವಲ್ಲಿ ಹೋಗಿ ಒಯ್ದು ಇಡಬೇಕೆಂದು ತಿರುಗಿದಾಗ ಜಯಂತ ಕಾಯ್ಕಿಣಿಯವರ 'ಚಾರಮಿನಾರ್' ಪುಸ್ತಕ ಕಣ್ಣಿಗೆ ಬಿತ್ತು, ಸರಿ ಮೂರೆ ಮೂರು ಪುಸ್ತಕ, ಮನೆಯಲ್ಲಿ ಇನ್ನು ಪುಸ್ತಕ ಇಡಲು ಜಾಗ ಇಲ್ಲ ಅಂತ ಅತ್ತ ಇತ್ತ ನೋಡದೆ ಬಿಲ್ಲಿಂಗ್ ಮಾಡುವಲ್ಲಿ ಹೋಗಿ ಪುಸ್ತಕಗಳನ್ನು ಇಟ್ಟೆ. ನಮ್ಮ ರಾಯರು ಆ ಮೂಲೆಯಲ್ಲಿ ಇದ್ರು. ಆಯ್ತಾ ನಿಂದು ಅಂತ ಕೇಳಿದ್ರು ನಾನು ಹೂಂ ಅಂದೆ. ನಾವು ಹೋದಾಗ ಗುರು ಅಲ್ಲಿರಲಿಲ್ಲ. ಎದುರಿನ ಕಪಾಟಿನ ಬಳಿ ಬಂದಾಗ, 'ಏ, ನಮ್ಮಲ್ಲಿ ದೇವುಡು ಅವರ ಯಾವ ಪುಸ್ತಕಗಳಿಲ್ಲ ಎಂದು ಕೇಳಿದರು. ನಾನು ಅವರ ಹೆಸರು ಇವತ್ತೆ ಕೇಳ್ತಿರೋದು ಅಂತಂದೆ. ಚೆನ್ನಗಿರುತ್ತೆ ನೀನು ಓದಲೇ ಬೇಕು ಅಂದ್ರು. ನಮ್ಮ ಪಾಡಿಗೆ ನಾವು ಪುಸ್ತಕ ತೆಗೆದುಕೊಂಡು ಬರ್ತಿದ್ವಿ. ಅಷ್ಟ್ರರಲ್ಲಿ ನಮ್ಮ ಗುರು ಅವರ ಸವಾರಿ ಚಿತೈಸಿತು. ಮತ್ತೆ ಸುಮ್ಮನಿದ್ದರಾ? ಇಲ್ಲ. ಮಲ್ಲಿಕಾರ್ಜುನ್ ಮನ್ಸೂರ್ ಅವರ ಸಿ.ಡಿ ಹಾಕಿಬಿಟ್ರು...ಸೈ...ಪುಸ್ತಕಗಳ ಜತೆ ಒಡನಾಡುವಾಗ ಹಿನ್ನೆಲೆಯಲ್ಲು ಒಳ್ಳೆ ಮ್ಯುಸಿಕ್ ಸಿಸ್ಟಂ ನಿಂದ ಚೆಂದದ ಕ್ಲಾಸಿಕಲ್ ಸಂಗೀತ ಕೇಳುವುದು ಏನು ಮಧುರ ಅನುಭವ ಗೊತ್ತ? ನಮ್ಮ ರಾಯರು ನನ್ನ ಇರುವನ್ನು ಮರೆತು, ಸಂಗೀತ ಕೇಳ್ತಾ ಕೇಳ್ತಾ , ನಾಗರಹಾವಿನ ತರಹ ತಲೆ ಓಲಾಡಿಸುತ್ತ, ಒಟ್ಟಿಗೆ ಹದಿನಾಲ್ಕು ಪುಸ್ತಕ ಎರಡು ಕನ್ನಡ ಸಿನಿಮಾಗಳ ಡಿವಿಡಿ ಕೊಂಡು ಬಿಟ್ಟರು.
ನಾನು?? ನನಗೆ ಕಾಲು ಮಂಡಿ ನೋವು ಶುರು ಆಗಿದೆ. ಅಮ್ಮನ ಮನೆಗೆ ಹೋದಾಗ ಅಮ್ಮ ಬಲವಂತ ವಾಗಿ ಡಾಕ್ಟರ್ ಬಳಿಗೆ ಕರೆದೊಯ್ದಿದ್ದರು. ಬ್ಲಡ್ ಟೆಸ್ಟ್ ಮಾಡ್ಸಿದಾಗ ಸಿಕ್ಕಾಪಟ್ಟೆ ಲೋ ಹೇಮೋಗ್ಲೊಬಿನ್ ಮತ್ತೆ ಲೋ ಕ್ಯಾಲ್ಶಿಯಮ್ ಲೆವೆಲ್ ಅಂತ ಕೂಡಲೆ ಔಷಧಿ ಇನಜೆಕ್ಷನ್ ಶುರು ಮಾಡಿದರು. ಇಷ್ಟು ವರ್ಷ ಯಾವುದೇ ಕಾಯಿಲೆ ಇಲ್ಲದೆ, ಔಷಧಿ ತೆಗೆದುಕೊಂಡಿದಿಲ್ಲದೆ ಈಗ ಔಷಧಿ ಇಂಜೆಕ್ಷನ್ ನನ್ನನ್ನು ಹಿಂಡಿ ಹಿಪ್ಪೆ ಮಾಡಿವೆ. ಸುಸ್ತ್ತಾಗ್ತಿದೆ. ಕಾಲು ಮಂಡಿ ನೋವು ಇದಕ್ಕಿಂತ ಎಷ್ಟೋ ವಾಸಿ...ಸುಮಾರು ಹೊತ್ತು ನನಗೆ ನಿಲ್ಲಲು ಆಗುವುದಿಲ್ಲ, ಅದಕ್ಕೆ ನಾನು ಅಲ್ಲಿದ್ದ ಕುರ್ಚಿ ಮೇಲೆ ಸುಮ್ಮನೆ ಹಾಡು ಕೇಳುತ್ತ, ಪಕ್ಕದಲ್ಲಿದ್ದ ಪುಸ್ತಕಗಳನ್ನು ಎತ್ತಿ ಮಗುಚುತ್ತ ಇನ್ನೊಂದೆರಡು ಇಂಗ್ಲಿಶ ಪುಸ್ತಕಗಳನ್ನು ಎತ್ತಿಟ್ಟೆ.
ರಾತ್ರಿ ಮಲಗುವ ಮುನ್ನ, ಹಾಲು ಕುಡಿಯುತ್ತ (ಅದಕ್ಕೂ ಬೆರೆಸಲುಲು ಏನೋ protein ಪುಡಿ) ಸುಮ್ಮನೆ ಅನುದಿನದ ಅಂತರಗಂಗೆ ಎತ್ತಿಕೊಂಡೆ. ಓದುತ್ತ ಓದುತ್ತ ಸಮಯ ಸರಿದದ್ದೆ ಗೊತ್ತಾಗಲಿಲ್ಲ. ಸಾಧಾರಣವಾಗಿ ನನ್ನಲ್ಲಿ ಕೂತುಹಲದ ಸ್ವಭಾವವಿಲ್ಲ. ಪ್ರತಿಭಾ ಅವರ ಕೆಲ ಕವನಗಳನ್ನು ಓದಿ ಇಷ್ಟ ಪಟ್ಟಿದೆ. ಹೆಣ್ಣಿನ ತುಮುಲಗಳನ್ನು ಹೇಗೆ ಕಾವ್ಯ ರೂಪದಲ್ಲಿ ಬೀಡು ಬೀಸಾಗಿ, ನಿರ್ಭೀಡೆಯಿಂದ ಬರೆಯುತ್ತಾರಲ್ಲ್ವೇ ಎಂದು. ರಾತ್ರಿ ಎರಡು ಗಂಟೆ ಹೊತ್ತಿಗೆ ಶ್ರೀಕಾಂತ ಆವಾಜ್ ಹಾಕಿದರು. ಲೈಟ್ ತೆಗಿತೀಯಾ ಹೆಂಗೆ? ಅಂತ. ಬೆಳಿಗ್ಗೆ ಬೇಗನೆ ಹಾಲು ತಂದು ಕಾಯಿಸುತ್ತ, ಹಾಲು ಕೊತಕೊತನೆ ಕುದಿದು, ಅರ್ಧದಷ್ಟಾಗಿ ಬಿಟ್ಟಿತ್ತು. ಆ ದಿನ ಉಪ್ಪಿಟ್ಟು. ಒಗ್ಗರಣೆಯಲ್ಲಿ ರವೆ ಹಾಕಿ ಹುರಿದಿದ್ದೆ ಹುರಿದಿದ್ದು ಯಾಕೆಂದರೆ ಎಡಗೈ ನಲ್ಲಿ ಬುಕ್ಕು. ನೆಕ್ಸ್ಟ್ ಚ್ಯಾಪ್ಟರ್ ನಲ್ಲಿ ಏನಾದರೂ ಹೊಸದು ಬರೆದಿದ್ದಾರ ಅಂತ...ಸುಮಾರು ಸಮಯ ಆಗಿತ್ತು ಈ ತರಹ ಓದದೆ...
ವಕ್ರದಂತೆ ಎಪಿಸೊಡ್ ನಾನು ಮೊದಲು ಓದಿದ್ದು ಮತ್ತು ಇದನ್ನು ಓದಿ ಪ್ರಭಾವಿತಳಾಗಿ ನಾನು ಪುಸ್ತಕ ತೆಗೊಂಡಿದ್ದು. i am a bit self conscious about my crooked nose.. ಬಾಸ್ಕೆಟ್ ಬಾಲ್ ಆಟ ಆಡುವಾಗ ಮೂಗಿನ cartilage ಗೆ ಪೆಟ್ಟಾಗಿ ಸ್ವಲ್ಪ shift ಆಗಿದೆ..ನೇರಕ್ಕಿಲ್ಲ ನನ್ನ ಮೂಗು..:-) ಹಾಗಾಗಿ ಯಾರೂ ನನಗೆ 'ನಿನ್ನ ಮೂಗಿನ ನೇರಕ್ಕೆ ಮಾತಾಡಬೇಡ' ಅನ್ನುವ ಹಾಗಿಲ್ಲ :-)
ಮತ್ತೆ i salute the amazing courage under pressure, she has shown when her husband was ill and had to be hospitalized in Mumbai. ಬೆಂಕಿ ತಗುಲಿ ಅದಕ್ಕೆ ಟ್ರೀಟ್ ಮೆಂಟ್ ತೆಗೊಳ್ಳುವಾಗ ಪರಿಸ್ಥಿತಿಯನ್ನು ತುಂಬ ಸ್ಪೋರ್ಟಿವ್ (anonymous Ajay help pls for the kannada word)ಆಗಿ ತೆಗೆದುಕೊಂಡಿದ್ದಾರೆ. Other than that the subject of love and her hankering after'true love' made a disappointing read.
ಪುಸ್ತಕದ ತುಂಬ 'ನಿಜ' ಪ್ರೀತಿಯ ಹುಡುಕಾಟ, ಆತ್ಮಕತೆ ಅಂದ್ರೆ ಇಷ್ಟೇನಾ ಅನ್ನಿಸಿತ್ತು. ನನಗೆ ತುಂಬ ನಿರಾಸೆ ಆಯ್ತು.ಅದರಲ್ಲಿನ ಕವನಗಳನ್ನು ಬಿಟ್ಟರೆ,its an ok ok book. but then i dont know what i was looking for'. ಖಂಡಿತ ಮೋಡಿ ಮಾಡುವ ಬರಹ ಶೈಲಿಯಿದೆ ಅವರಲ್ಲಿ,
ಅವರೆ ಪುಸ್ತಕದಲ್ಲಿ ಹೇಳಿಕೊಂಡ ಹಾಗೆ -ಅವರ ಕವನಗಳೆ ಅವರ ಆತ್ಮಕತೆ...ಅದೇ ಹೆಚ್ಚು powerful/intense
ಇದೆಲ್ಲ ನನ್ನ ಸ್ವಂತ ಅಭಿಪ್ರಾಯ ಅಷ್ಟೆ, ನನಗನ್ನಿಸಿದ್ದು.
ಮತ್ತೆ ನನ್ನ ಆಪ್ತ ಸ್ನೇಹಿತ/ತೆಯರ, ಪರಿಚಯದವರ (Facebook) circle ನಲ್ಲಿ guessing games ಶುರು ಆಗಿದೆ..ಅವರು ಅವರಾಗಿರಬಹುದಾ...ಬಹುಶ: ಕನ್ನಡದಲ್ಲಿ ಬೋಲ್ಡ್ ಬರಹ ಇದಿರಬಹುದೇನೋ? (ಅಂದರೆ ನಾನು ಓದಿರೋದ್ರಲ್ಲಿ) ನನ್ನ ಕನ್ನಡ ಪುಸ್ತಕದ ಓದಿಗೆ ನಾನು ಶ್ರೀಕಾಂತ ಬಿಟ್ಟರೆ ಇನ್ನೆರಡು ಮಿತ್ರರ ಮೇಲೆ ಅವಲಂಬಿತೆ .ಮತ್ತೆ ಹೆಚ್ಚು ಓದಿಲ್ಲ ನಾನು...my knowledge of kannada literature is very limited.
ಬಟ್ ಅವರ ಕವಿತೆ ಬಗ್ಗೆ ದುಸರಾ ಮಾತೇ ಇಲ್ಲ. ಐ ಯಾಮ್ totally ಫಿದಾ!
ಈ ಸಾಲು ಯಾಕೋ ನನಗೆ ತುಂಬಾ ಇಷ್ಟ..ತುಂಬ ಸಲ ಓದಿ ಕೊಂಡೆ: ಸಂಯಮದ ಗೂಟ ಕಿತ್ತು ಓಡಿದ ನಿಗ್ರಹದ ಕುದುರೆ..(ಅರ್ಥವಾಗುವುದು ಹೇಗೆ ಭಾಗದಲ್ಲಿ)
ಅನುದಿನದ ಅಂತರಗಂಗೆ ಪುಸ್ತಕ ನೋಡಿ ಆಕೃತಿಯಲಿ ನನ್ನ -ರಾಯರ ಸಂಭಾಷಣೆ ಕುಛ್ ಹೀಗಿತ್ತು
"Why this book,is she your friend?" (ವಸುಧೇಂದ್ರ ,ಚೇತನಾ ತೀರ್ಥಹಳ್ಳಿ ಫ್ರೆಂಡ್ ಅಂತ ಅವರ ಪುಸ್ತಕ ತೆಗೆದುಕೊಳ್ಳುತ್ತೇನೆ. ಅದಕ್ಕೆ ಕೇಳಿರಬಹುದು ಪ್ರಶ್ನೆ, ಆದರೆ ವಸುಧೇಂದ್ರರ ಬರಹದ ಬಗ್ಗೆ ನಾನು ಇಷ್ಟ ಪಡಲು ಶ್ರೀಕಾಂತ ಕಾರಣ...ನಮ್ಮಮ್ಮ ಅಂದ್ರೆ ನನಗಿಷ್ಟ ಅವರೆ ತಂದು ಕೊಟ್ಟು, ಉಳಿದದ್ದನ್ನೆಲ್ಲ -ಅಂದರೆ ವಸು ಬರೆದಿದ್ದು, ಹಾಗೂ ಛಂದ ಪ್ರಕಾಶನದಿಂದ ಹೊರಬಂದ ಪುಸ್ತಕ ಗಳು - 'ಗುಣ' ಕಾದಂಬರಿ ಮತ್ತು ಹಕೂನಮಟಾಟಾ ಬಿಟ್ಟು- ಎಲ್ಲ ನಾನೆ ತೆಗೆದುಕೊಂಡು ಬಂದದ್ದು, ಮತ್ತು ಚೇತನಾ ಬರಹ ನನಗೆ ಅವಧಿಯಲ್ಲಿ ಪರಿಚಯವಾಗಿದ್ದು) :-)
"no"
"is it an impulsive buying", everybody is buying this book so i have to buy - kind of feeling??
"no, a few parts of the book were reproduced in Kendasampige. i liked what i read. shall i buy it or not?"
"no no go ahead "
ನನ್ನ ಓದು ಮುಗಿದ ಮೇಲೆ ಪುಸ್ತಕ ಟೀ ಪೋಯ್ ಮೇಲೆ ಇಡುವಾಗ 'ಹೇಗಿತ್ತು' ಅಂತ ಕೇಳಿದರು...ನಾನು 'Ok-ok' ಅಂದೆ ...ಅವರು 'ಹೂಂ' ಅಂದರು. ಅದೇ ನಾನು ಅವರ ಜಾಗದಲ್ಲಿದ್ದರೆ 'i cautioned you' ಅಂತ ನಾಲ್ಕಾರು ಸಲ ಆದರೂ ಹೇಳ್ತಿದ್ದೆ :-)
ಈಗ ಅವರು ಓದ್ತಿದ್ದಾರೆ ಈ ಪುಸ್ತಕ. ಅದರ ಬಗ್ಗೆ ಏನನ್ನುತ್ತಾರೆ ನೋಡೋಣ...
ಸಧ್ಯ ನನ್ನ ಔಷಧಿಗಳೆಲ್ಲ ಖಾಲಿ.ಮಂಡಿ ನೋವು ಗಾಯಬ್. ಆದರೂ ಆ ಡಾಕ್ಟರ್, ಅಮ್ಮನಿಗೆ ಸಿಕ್ಕಿದಾಗ ಅವಳಿಗೆ ಬೆಂಗಳೂರಿನಲ್ಲಿ ಇನ್ನೊಂದು ಸಲ ಚೆಕ್ ಅಪ್ ಮಾಡಲಿಕ್ಕೆ ಹೇಳಿ ಅಂದಿದ್ದಾರಂತೆ...ಡಾ ಅವರಿಗೆ ವಯಸ್ಸಗಿದೆ, ಮಾತ್ರವಲ್ಲ ಅವರಿಗೆ ಪೇಶೆಂಟ್ಸ್ ಯಾವಾಗಲೂ ಕಿಕ್ಕಿರಿದು ತುಂಬಿರುತ್ತಾರೆ, ಅಂತದ್ದರಲ್ಲಿ ನೆನಪಿನಿಂದ ನನಗೆ check-up ಮಾಡಿಸಲು ಹೇಳಿದಾರಲ್ಲ?? ಆಶ್ಚರ್ಯವಾಯಿತು. anyways will go in a day or two..
ನಾನಂತೂ ಫುಲ್ಲೀ ಎಂಜಾಯಿಂಗ್...ನೀವು?...ಒಂದೆರಡು ಜೋರಾದ ಮಳೆ ಬಂದ್ರೆ ಇನ್ನಷ್ಟು ಗಮ್ಮತ್ತಾಗುತ್ತಿತ್ತು....ಬೋಂಡಾ ತಿನ್ನುತ್ತಾ..ಟೀ ಕುಡಿಯುತ್ತ....
ಅಂದ ಹಾಗೆ ನಾನೇನಾದರೂ ಆತ್ಮಕತೆ ಬರೆದರೆ ಅದರಲ್ಲಿ ತುಂಬ my quest in hiring a cook ಅಂತಿರುತ್ತೇನೋ? ಮೊದಲೆಲ್ಲ , ಅಂದರೆ when i was younger, ಸ್ವಂತ ಮನೆ, ಕೈ ತುಂಬ ದುಡ್ಡು, ಓಡಾಡಲು ಕಾರು ಇವೆಲ್ಲ ಇದ್ದರೇನೆ ಸುಖ ಅಂದುಕೊಂಡಿದ್ದೆ. ಈಗ I am contented as i am except that i want a cook.. ನನಗೆ ಒಬ್ಬ ಅಡಿಗೆಯವಳು ಇದ್ರೆ ಅದೇ ಸುಖ ಇರಬಹುದೇನೋ ಅನ್ನಿಸುತ್ತಿದೆ..what says??
ನಾಳೆಯಿಂದ ಯು. ಆರ್. ಅನಂತಮೂರ್ತಿಯವರ ಪ್ರೀತಿ-ಮೃತ್ಯು-ಭಯ....ಆ ಪುಸ್ತಕದ ಮುಖಪುಟ ಒಂದತರಹ ಚೆನ್ನಾಗಿದೆ, ಬಳಸಿದ ಪೇಪರ್ ಕೂಡ...nice feel ಇದೆ...ಆ ಮೇಲೆ ದೇವುಡು ಅವರ 'ಮಹಾಬ್ರಾಹ್ಮಣ'...ಬಹುಶ: ಇದನ್ನು ತೀರ್ಥಹಳ್ಳಿಗೆ ಒಯ್ಯುತ್ತೇನೆ...ತೋಟದಲ್ಲಿ ಮರದ ಕೆಳಗೆ, ಅಥವ ಕೊಳದ ಬಳಿ ಕೂತು ಓದಲು...
(ಓಹ!! ರಾಯರು ಅ.ಅ. ಸ್ವಲ್ಪವೆ ಓದಿ, ಅದನ್ನು ಬಿಟ್ಟು ಈಗ 'ನನ್ನ ತೇಜಸ್ವಿ' ಎತ್ತಿಕೊಂಡಿದ್ದಾರೆ and he is totally engrossed in that:-))
ಈ ತಿಂಗಳಲ್ಲಿ 7ಪೋಸ್ಟ್...ನನಗೇ ಬೇಜಾರು..ಇನ್ನು ಸ್ವಲ್ಪ ದಿನ ಬ್ಲಾಗ್ ಗೆ ಬ್ರೇಕ್....
ನೀವು ಯಾವ್ಯಾವ ಪುಸ್ತಕ ಓದಲಿದ್ದೀರಿ/ಓದಿದ್ದೀರಿ/ ಓದುತ್ತಿದ್ದೀರಿ..ನನ್ನ ಜತೆ share ಮಾಡಿ..
:-)

ಮಾಲತಿಯವರೇ,
ReplyDeleteಖಂಡಿತ ಬ್ಲಾಗ್ ಬರಹಗಳಿಗೆ ಬ್ರೇಕ್ ಹಾಕಬೇಡಿ, ನನ್ನಂತ ಅಭಿಮಾನಿಗಳು ನೊಂದುಕೊಳ್ಳುತ್ತೇವೆ.
ಬಲು ಬೇಗ ನೀವು ಚೇತರಿಸಿಕೊಳ್ಳಿ. ನಿಮ್ಮ ಆರೋಗ್ಯವೇ ನಮ್ಮ ಭಾಗ್ಯ. ಏಕೆಂದರೆ ಸಮಾಜ ಸೇವೆ, ಪ್ರವಾಸ, ನಾಟಕಗಳು, ಪುಸ್ತಕಗಳ ಪರಿಚಯ ಮತ್ತು ನಿಮ್ಮ ಅಡುಗೆ ಬರವಣಿಗೆ ನಮಗೆ ಸದಾ ಚೇತೋಹಾರಿ. ನಿಮ್ಮ ಆರೋಗ್ಯ ಸದಾ ಕಾಲ ಚೆನ್ನಾಗಿರಲೆಂದು ನಮಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಅ.ಅ ಪುಸ್ತಕ ಕೊಂಡು ಓದಿದ ಮೇಲೆ ಮತ್ತೆ ಅದರ ಬಗ್ಗೆ ಬರೆಯುವೆ.
"ಪುಸ್ತಕದ ತುಂಬ 'ನಿಜ' ಪ್ರೀತಿಯ ಹುಡುಕಾಟ, ಆತ್ಮಕತೆ ಅಂದ್ರೆ ಇಷ್ಟೇನಾ ಅನ್ನಿಸಿತ್ತು. ನನಗೆ ತುಂಬ ನಿರಾಸೆ ಆಯ್ತು." ಮಾಲತಿ ಅಕ್ಕ ಅನುದಿನದ ಅಂತರಗಂಗೆ ಓದಿದಾಗ ನನಗೂ ಹೀಗೆ ಅನ್ನಿಸಿತ್ತು . ನಿರ್ಭಿಡೆಯಿಂದ ಬರೆಯುತ್ತಾರೆ ಎಂಬುದಷ್ಟೆ ಚೆನ್ನಾಗಿರಬಹುದೆಂಬುದಕ್ಕೆ ಮಾನದಂಡವಾಗಬಾರದೆಂದು ಇದನ್ನು ಓದಿದ ನಂತರ ಅರ್ಥವಾಯಿತು .
ReplyDeleteಹೊಸ ಪದವೊಂದು ಸಿಕ್ಕಿತು - ವಕ್ರನಾಸಿಕೆ! :-)
ReplyDelete-- ಸೊಟ್ಟಮೂಗಪ್ಪ
ಮಾಲತಿ ಮೇಡಂ,
ReplyDeleteನಾನು ಓದನ್ನು ನಿಲ್ಲಿಸ್ಬೇಕು ಅಂತ ಅಂದ್ಕೊಳ್ತಲೇ ಈ ಮೂರು ತಿಂಗಳಲ್ಲಿ ವಿಶ್ವಕಥಾಕೋಶದ ೨೧ ಸಂಪುಟ, ಪಾಚಿ ಕಟ್ಟಿದ ಪಾಗಾರ, ಗಣೇಶಯ್ಯನವರ ಕನಕಮುಸುಕು,ಕರಿಸಿರಿಯಾನ , ಆ ಟೇಲ್ ಅಫ್ ಟು ಸಿಟೀಸ್ , ಎರಡು ವರ್ಷಗಳ ಅಪರಂಜಿ, ಮೂರು ವರ್ಷಗಳ ಕೊರವಂಜಿ ಓದಿದ್ದಾಯಿತು. ಸದ್ಯಕ್ಕೆ ಕಣ್ಣ ಮುಂದೆ 'ಶೋಧ' ಪತ್ತೇದಾರಿ ಕಥೆಗಳ ಸಂಕಲನ , ಚಾರ್ಮಿನಾರ್, ಸತ್ಯಜಿತ್ ರೇ ಕಥೆಗಳು, ಗಣೇಶಯ್ಯನವರದೇ ಚಿತಾದಂತ , ೪೦ ವರ್ಶಗಳ ಅಪರಂಜಿ ಮತ್ತು ಕೊರವಂಜಿ ಇವೆ !
--ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿಯವರೆ
ReplyDeleteನಿಜಕ್ಕೂ ಗ್ರೇಟ್..ಓದೋದನ್ನು ಒಂದು ನನ್ನಿಂದ ಬಿಟ್ಟಿರಲಾಗದು.
ಅಪರಂಜಿ ಕೊರವಂಜಿ ಭಾವನಾ ಮುಂತಾದ magazine ಬಗ್ಗೆ ನಮ್ಮ ಮನೆಯವರಿಂದ ಸ್ನೇಹಿತರಿಂದ ಕೇಳಿ ಗೊತ್ತು, ಓದಿಲ್ಲ..
p.s : ..ತುಂಬ ಇಷ್ಟವಾಯ್ತು ಕಲ್ಲಸಕ್ರಿ ಹೆಸರು.
ಧನ್ಯವಾದಗಳು..ನನ್ನ ಬ್ಲಾಗ್ ಓದುತ್ತಿರುವುದಕ್ಕೆ
thank you Badari, Suma and Shree kar!!
:-)
ms