ಮೊದಲಿಗೆ ಇದನ್ನು ಓದಿ
ಮೇಲ್ಕಂಡ ಪೋಸ್ಟ್ ನ ಮೊದಲ ಭಾಗದಲ್ಲಿ ಇದು ಬರುತ್ತೆ
ಇದರ ಮುಂದುವರೆದ ಭಾಗ
ವಿ ಅರ್ ಎಲ್ ಬಸ್ ನ ಟು ಪ್ಲಸ್ ವನ್ ಸೀಟ್ ನಮಗೆ ಅನುಕೂಲ. ಮಕ್ಕಳಿಬ್ಬರೂ ಕೂತ ಲೈನ್ ನಲಿ ನಾನು ಕೂರ ಬಹುದು. ಬಸ್ ತುಂಬೆಲ್ಲ ಕಾಲೇಜು ಮಕ್ಕಳು. ಕಾಲೇಜ್ ನ ಸ್ಪೋರ್ಟ್ಸ್ ಟೀಮ್ ಅಥವ ಸುಮ್ಮನೆ ಟೂರ್ ಹಾಕ್ಕೊಂಡಿರಬಹುದು. ಬರೀ ಸದ್ದು ಗದ್ದಲ. ಮಾತನಾಡುವಾಗ ಪ್ರತೀ ವಾಕ್ಯದ ಮೊದಲು ಹಾಗೂ ಕೊನೆಯಲ್ಲಿ ಬೆನ್ ಚೋದ್, ಮಾದರ್ ಚೋದ್, ಇಸ್ಕೀ ಮಾಂಕೀ, ಬೋಸುಡಿಕೆ ಇಂತವೆ ಎಲ್ಲ ಗಟ್ಟಿ ಮಾತು. ಅದರ ನಡುವೆ ಬೆಂಗಳೂರಿನಿಂದ ಬಸ್ ಹೊರಬರುವಷ್ಟರಲ್ಲಿ ಇಬ್ಬರ ಮದ್ಯ ಜಗಳ ಕೂಡ ಆಯಿತು.ಆದರೆ ನಾನು ಶ್ರೀಕಾಂತಗೆ ಬೀಗದ ಕೈ ಹೇಗೆ ತಲುಪಿಸುವುದಪ್ಪ ಅಂತ ಚಿಂತೆಯಲ್ಲಿ ತೊಡಗಿದ್ದರಿಂದ ಆ ಹುಡುಗರ ಮೇಲಿನ ನನ್ನ attention ಸ್ವಲ್ಪ divert ಆಗಿತ್ತು. ಡೊಬ್ಸ್ ಪೆಟ್ ನಲ್ಲಿ ಬೀಗದ ಕೈ ಸಮಸ್ಯೆಗೆ ಸಮಾಧನ ಪಡೆದರಿಂದ ಸ್ವಲ್ಪ ನಿರಾಳವಾದೆ. ಪುನ: ಹುಡುಗರ ಬೈಗಳು ಮಾತುಗಳ ಕಡೆ ನನ್ನ ಗಮನ ಹೋಯಿತು. ಛಿ!! ಇದೆಲ್ಲಿ ಸಿಕ್ಕಾಂಕೊಂಡ್ವಿಪ್ಪ ಅಂದುಕೊಂಡೆ. ತುಮಕೂರಿನಿಂದ ಸ್ವಲ್ಪ ಮುಂದಕ್ಕೆ ಬಂದಿರಬಹುದು. ನಾನು ಮಾಲವಿಕ ನ ಕಡೆ ನೋಡಿದೆ. ಅವಳು ಕಿಟಕಿಯಿಂದ ಹೊರ ನೋಡ್ತಾ ಇದ್ದಳು. ನಾನು ಅವಳಿಗೆ ಮಲಗುವಂತೆ ಹೇಳಿದೆ. ಆದರೆ ಅವಳ ಸೀಟ್ ಹಿಂದಕ್ಕೆ ಹೋಗ್ತಾ ಇರಲಿಲ್ಲ. ಅದಕ್ಕೆ ನಾನು ಅವಳ ಬಳಿ ಹೋಗಿ ಸೀಟ್ ಹಿಂದಕ್ಕೆ ಸರಿಸಿದ್ದೆ ಅಷ್ಟೆ. ಅವಳ ಭಾಗ ಕಿಟಕಿ ಗಾಜು ಚೂರು ಚೂರು. ಸಧ್ಯ ನಾನು ಸೀಟನ್ನು ಹಿಂದಕ್ಕೆ ವಾಲಿಸಿದರಿಂದ ಅವಳ ಮುಖ ಬಚಾವಾಯ್ತು, ನಿಹಾರಿಕ ನನ್ನ ಹಿಂದೆ ಇದ್ದಿದ್ದರಿಂದ ಅವಳಿಗೂ ನನಗೂ ಗಲ್ಲ ಹಣೆಗೆ ತರಚು ಗಾಯ ಆಯ್ತು. ಬಸ್ ತುಂಬೆಲ್ಲ ಗಾಜಿನ ಚೂರು. ಅಷ್ಟರೊಳಗೆ ಆ ಹುಡುಗರ ಗುಂಪಿನ ಕೆಲವರು ’ಕ್ಯಾ ಹುವಾ ಆಂಟಿ’ ಅಂತ ಎದ್ದು ನಿಂತರು. ಅವರಲ್ಲಿ ಒಬ್ಬ ಮುಂದಕ್ಕೆ ಹೋಗಿ ಬಸ್ ಡ್ರೈವರ್ ಗೆ ಲೈಟ್ ಹಚ್ಚಿ, ಬಸ್ ನಿಲ್ಲಿಸಲು ಹೇಳಿದ. ಬಸ್ ಸೈಡ್ ಗೆ ನಿಂತ ಮೇಲೆ ನೋಡಿದ್ರೆ, ನಮ್ಮ ಸೀಟ್ ಮಧ್ಯದ aisle ನಲ್ಲಿ ದೊಡ್ಡ ಕಲ್ಲೊಂದು ಬಿದ್ದಿತ್ತು. ಯಾರೋ ಚಲಿಸುವ ಬಸ್ಸಿಗೆ ಬೀಸಿ ಓಗೆದ ಪರಿಣಾಮ. ಮಾಲವಿಕ ನ ಮುಖಕ್ಕೆ ಏನಾದರು ಬಡಿದಿದ್ದರೆ ಮುಖಚರ್ಯೆನೆ ಬದಲಾಗಿ ಹೋಗ್ತಿತ್ತು. ಡ್ರೈವರ್ ಹೆಲ್ಫರ್ ಬಂದು ಎಲ್ಲಾದರೂ ಏಟಾಗಿದೆಯೆ ಪರೀಕ್ಷಿಸಿ ಎಂದರು. ಮಾಲವಿಕನ ಗುಂಗುರು ತಲೆ ಕೂದಲಲ್ಲೆಲ್ಲ ಸಣ್ಣ ಪುಟ್ಟ ಗಾಜಿನ ಚೂರು ಸೇರಿಕೊಂಡಿದ್ದು ಬಿಟ್ಟರೆ ಏನು ಆಗಲಿಲ್ಲ. ಒಬ್ಬ ಹುಡುಗ ಅವಳ ಕೂದಲನ್ನು ಬಿಚ್ಚಿ ಅವನ ಪಾಕೆಟ್ ಬಾಚಣಿಕೆಯಿಂದ ನಿಧಾನವಾಗಿ ಅವಳ ಕೂದಲು ಸಿಕ್ಕು ಬಿಡಿಸಿ, ಗಾಜಿನ ಚೂರನ್ನು ಹೆಕ್ಕಿದ, ಇನ್ನೊಬ್ಬ ನಮ್ಮನೆಲ್ಲ ಎಬ್ಬಿಸಿ newspaper ತಂದು ಸೀಟ್ ಮೇಲೆ ಬಿದ್ದ ಗಾಜನೆಲ್ಲ ತೆಗೆದ. ಇನ್ನೊಬ್ಬ first aid ಕಿಟ್ ನಿಂದ ಡೆಟ್ಟಲ್-ಹತ್ತಿ ತಂದು ಕೊಟ್ಟ. ಇನ್ನು ಕೆಲವು ಹುಡುಗರು ಡ್ರೈವರ್ ಜತೆ ಸೇರಿ ಹೊಸ ಗಾಜು ಅಳವಡಿಸಿದರು. ಕೆಲ ಹೊತ್ತು ಮುಂಚೆ ಇವರೇನಾ ಅವ್ಯಾಚ ಶಬ್ದಗಳನ್ನು ಬಳಸಿ ಮಾತಾಡಿದ್ದು, ಜಗಳವಾಡಿದ್ದು ಅನ್ನಿಸುವಷ್ಟು ಸಾಮರಸ್ಯದಿಂದ ಚಕಚಕನೆ ಕೆಲಸ ಮಾಡುತ್ತ ಇದ್ದರು. ಗಾಜು ಕೂರಿಸಿದ್ದು ಸರಿಯಾಗಿಲ್ಲವೆಂದು ಅದರಲ್ಲಿ newspaper ಅವರ ಜ್ಯಾಕೆಟ್ ಗಳನ್ನೆಲ ತೂರಿಸಿ, ’ಆಂಟಿ ಇಲ್ಲಿಂದ ಗಾಳಿ ಬರುತ್ತೆ ನೀವು ಮಕ್ಕಳು ಮುಂದಿನ ನಮ್ಮ ಸೀಟ್ ನಲ್ಲಿ ಕೂತುಕೊಳ್ಳಿ ಅಂತ ಹೇಳಿದರು..............
ಬೆಳಿಗ್ಗೆ ಬೆಳಗಾವಿ ತಲುಪಿದೆವು. ಅವರಿಗೆಲ್ಲ ನಾನು ಕೈ ಮುಗಿದೆ ಥ್ಯಾಂಕ್ಸ್ ಹೇಳಿದೆ.ಅವರು ’ಆಪ್ ಭಿ ನಾ ಆಂಟಿ, ಇಸ್ಮೆ ಥ್ಯಾಂಕ್ಸ್ ಕಿ ಕ್ಯಾ ಬಾತ್ ಹೈ’ ಅಂದರು. ಹೇಗಿದೆ??
ಈ ಘಟನೆ ನಡೆದು ಹತ್ತು ವರ್ಷಗಳೇ ಸಂದಿವೆ!!
ಈ ಘಟನೆ ನಡೆದು ಹತ್ತು ವರ್ಷಗಳೇ ಸಂದಿವೆ!!
ಹೊರ ಚರ್ಯೆಯು
ReplyDeleteಒಳಾಂತರಂಗವ ಬಿಂಬಿಸದು
ಈ ಹುಡುಗರ ಸಹೃದಯತೆ ಮೆಚ್ಚಿಗೆಯಾಯಿತು.
ಅಂದಹಾಗೆ, ಬಸ್ಸು ಮುಂತಾದ ಸಾರ್ವಜನಿಕ ಆಸ್ತಿಗಳ ಮೇಲೆ ಕಲ್ಲು ತೂರಿ ಜನ ಏನು ಸಾಧಿಸ್ತಾರೋ?
looks can be deceiving ಅಲ್ವಾ ಚೆನ್ನಾಗಿದೆ
ReplyDeleteನಿಮ್ಮ ಹೀಗೂ ಇರ್ತಾರೆನ ಅವಧಿಯಲ್ಲಿ ನೋಡಿ ಖುಷಿಯಾಯಿತು. ಈಗ ನಿಮ್ ಹತ್ರ ಮಾತಾಡ ಬೇಕೆಂದರೆ ಸ್ವಲ್ಪ ಹುಷಾರ್ಆಗಿರ್ಬೇಕ? ಮತ್ತೆ ನಾವು ಭಾಳ ಮಾತಾಡೋದು,ಆಮೇಲೆ ನೀವು ನಮ್ ಮೇಲೆ ಪೋಸ್ಟ್ ಮಾಡಿ ಬಿಟ್ರೆ? :)
ಸ್ವರ್ಣಾ
@ Badari!!
ReplyDeletethank you...aadare neevu nanna link FB nalli haakOdu yaakO mujugara aagtade. i dont write all that well da!!
@ Swarna:
no putti. most of the time i am a patient listener....but now even i am getting old naa..swalpa asahane kaaDtade!!, when people start prattling without a thought to my mood!!
hey antha baigalu common hudugralli but remember one thing yaaru sumne kuthirtharalla avre danger other who talk more always trying to impress others or we can say pure heartedly helping.
ReplyDelete