ನನ್ನ ತಮ್ಮನ ಹೆಂಡತಿ fb ನಲ್ಲಿ ಇದನ್ನು ಹಾಕಿದ್ಲು. ನಗುವಿನ ಜತೆ ಸುಮಾರೆಲ್ಲ ವಿಷಯಗಳನ್ನು ನೆನಪು ಮಾಡಿದೆ ಇದು!!:-)
ಮೊದಲಿಗೆ ಹಾಲಿನ ವಿಷಯಕ್ಕೆ ಬರುತ್ತೇನೆ
ನಾನು ಚಿಕ್ಕವಳಿರುವಾಗ ನಾನು ಏಳುವ ಮುಂಚೆಯೆ ಹಾಲಿನ ಬಾಟಲ್ ಹೊರಗಿಟ್ಟು ಹೋಗುತ್ತಿದ ಹಾಲಿನವ. ಆ ಬಾಟಲಿಗೆ ಬಿಗಡೆಯ ಮುಚ್ಚಳ. ಬಾಟಲಿ ಇಡುವ ಟಣ್ ಶಬ್ದ ಆದ ಕೂಡಲೆ ಅಜೋಬಾ ಮನೆಯೆದುರಿನಿಂದ ಬಾಟಲಿ ಒಳಗೆ ತರುತ್ತಿದ್ದರು. ಇಲ್ಲಿದಿದ್ದರೆ ಕಾಗೆಗಳು ಬಂದು ಅದರ ಮುಚ್ಚಳ ಕೊಕ್ಕಿನಲ್ಲಿ ತೂತು ಮಾಡಿ ಹಲವಾರು ಸಲ ಬಾಟಲಿ ಬಿದ್ದು ಪುಡಿಯಾಗಿದ್ದಿದ್ದೆ. ಹಿಂದಿನ ರಾತ್ರಿ ಖಾಲಿ ಬಾಟಲು ಹೊರಗಿಡಬೇಕು. ಮರುದಿನ ಹಾಲಿನವನು ಅದನ್ನು replace ಮಾಡುತ್ತಿದ್ದ.
Pic from Net
ಆ ಮೇಲೆ ಅಜ್ಜ ಬಾಟಲಿಯ ಮುಚ್ಚಳ ನನಗೆ ಕೊಡುತ್ತಿದ್ದರು. ಬಾಟಲಿಯ ತುದಿಗೆ ತೇಲಿ ಬಂದ ಕ್ರೀಮ ನನಗೆ - ನೆಕ್ಕಲು. ನನ್ನ ನಾನಿಗೆ ಸಂಧೀವಾತ ಇದ್ದುದರಿಂದ ಅವರು ಬೇಗ ಏಳುತ್ತಿರಲಿಲ್ಲ, ಸೂರ್ಯ ಬಂದ ಸ್ವಲ್ಪ ಹೊತ್ತಿಗೆ ಏಳುತ್ತಿದ್ದರು, ಅಷ್ಟರೊಳಗೆ ನನಗೆ ಅಜೋಬಾ ಹಾಲು ಕಾಯಿಸಿ ಎರಡು ಗುಲ್ಕೋಸ್ ಬಿಸ್ಕುಟ್ (glucose biscuit) ಕೊಡುತ್ತಿದ್ದರು. ಹಾಲು ಚಿಮಣಿ ಎಣ್ಣೆ ಸ್ಟವ್ ಮೇಲೆ ಕಾಯಿಸುತ್ತಿದ್ದರು. ..ನನ್ನ ಹಾಲು ಕುಡಿದಾದ ಮೇಲೆ ನಮ್ಮ ವಾಕಿಂಗ್ ಇತ್ಯಾದಿ. ನನ್ನ ನಾನಿಗೆ ಕ್ಯಾನ್ಸರ್ ಆದ ಮೇಲೆ ನಾನು ಅಮ್ಮನ ಮನೆ ಅಂಧೇರಿ ಗೆ ಬಂದ ಮೇಲೆ, ಬೆಳಿಗ್ಗೆ ಹಾಲು ತರುವ ಕೆಲಸ ನನ್ನದಾಯಿತು. ಹಾಲು ತಂದದ್ದಕ್ಕೆ, ಹಾಲು ಹಾಕುವ ಹೆಂಗಸಿಗೆ ಕೊಡುವ ದುಡ್ಡನ್ನು ಅಮ್ಮ ನನಗೆ ಕೊಡುತ್ತಿದ್ದರು. ಪ್ಯಾಕೆಟ್ ಮೇಲೆ 10 ಪೈಸೆ ಅವಳ charges. ಆಗ ಹಾಲಿಗೆ ಎರಡು ರೂಪಾಯಿ ಆ ದುಡ್ಡನ್ನು ಜಮಾ ಮಾಡಿ ನಾನು scrabble board ಖರೀದಿಸಿದ್ದೆ.18 ರೂಪಾಯಿಗೆ!! ಈಗಲೂ ನನ್ನ ಅಮ್ಮನ ಮನೆಯಲ್ಲಿ ಇದೆ ಅದು. ತಮ್ಮ ತಂಗಿ ಸೇರಿದಾಗ ನಾವೆಲ್ಲ ಈಗಲೂ scrabble ಆಡ್ತೇವೆ. ಎಂಜಾಯ್ ಮಾಡ್ತೇವೆ.
ಇಲ್ಲಿ ಬೆಂಗಳೂರಿನಲ್ಲಿ ನಂದಿನಿ ಹಾಲು ರಸ್ತೆ ಬದಿಯಲ್ಲಿ ಮಾರುವವಳು ಬೆಳಿಗ್ಗೆ 4 ಗಂಟೆಗೆ ಬಂದಿರುತ್ತಾಳೆ. ಹುಷಾರಿರಲಿ ಇಲ್ಲದಿರಲಿ ಯಾವಾಗಲೂ ಪಂಕ್ಚುಅಲ್. ನನಗಂತೂ ಖುಶಿ ನೆ. ಬೆಳಿಗ್ಗೆ..especially ಚಳಿಗಾಲದಲ್ಲಿ ಚುಮು ಚುಮು ನಸುಕಿನಲ್ಲಿ ಗಲ್ಲ ಮೂಗು ಕಿವಿಯೆಲ್ಲ ಐಸ್ ತರಹ ಮಾಡಿಕೊಂಡು, ಹಾಲು ತಂದು ( ಸುಮಾರು ಸಲ ನನಗೆ ಅಲ್ಲಿ ನಿಲ್ಲಿಸಿ ಹಾಲಿನವಳು ಕತ್ತಲೆ ಇರುವ ಕಾಂಪೌಂಡ್ ಎಡೆಯಲ್ಲಿ ಹೋಗಿ natures call ಮುಗಿಸಿ ಬಂದಿದ್ದು ಇದೆ. ಅವಳಿಗೆ ಬೈ ಪಾಸ್ ಸರ್ಜರಿ ಆಗಿದ್ದ ಹೊಲಿಗೆ ಮಾರ್ಕ್ ಕಂಡಿದ್ದೇನೆ.ನಮ್ಮ ತಂದೆಗೂ ಆಗಿದೆ ಆದ್ದರಿಂದ ನನಗೆ ಗೊತ್ತು. ಆದರೂ ಒಂದು ದಿನ ಕೂಡ ತಪ್ಪಿಸಿಲ್ಲ..)ಆ ಮೇಲೆ ನಾನು ಹಾಲು ಕಾಯಿಸುವಷ್ಟರಲ್ಲಿ ನಿಹಾ ಎದ್ದಿರುತ್ತಾಳೆ. ನಾನು ಅವಳು ಟೀ ಕುಡೀತೇವೆ. it is one of a most pleasurable part of my daily life. ಮಾತಾಡ್ತೀವಿ, ನಗ್ತೀವಿ.....ನಮ್ಮ ಪಕ್ಕದ ಮನೆ ರಾಮು ಗೆ ಕುತೂಹಲ, ’Malathi, what do you find amusing so early in the morning...i dont feel like waking up let alone laughing/talking' ಅನ್ನುತ್ತಿರುತ್ತಾನೆ.
ಇನ್ನು ನ್ಯುಸ್ ಪೇಪರ್ ಬಗ್ಗೆ
ಮದುವೆಯಾದ ಮೇಲೆ ನನಗೆ ಗೊತ್ತಾಗಿದ್ದು ನಮ್ಮ ರಾಯರಿಗೆ ಸಂಡಾಸ್ ನಲ್ಲಿ ಪೇಪರ್ ಓದುವ ಅಭ್ಯಾಸ ಇದೆ ಅಂತ. ಮದುವೆಯಾದ ಮೇಲೆ ಮೊದಲ ಸಲ ಅಮ್ಮನ ಮನೆಗೆ ಹೋದಾಗ ಆದ ಫಜೀತಿ ಈಗಲೂ ನನಗೆ ನೆನಪಿದೆ. ನನ್ನ ತಂದೆಯವರು ಪೇಪರ್ ಎಲ್ಲಿ, ಪೇಪರ್ ಎಲ್ಲಿ ಅಂತ ಹುಡುಕುತ್ತಿದ್ದರು. ಇವರು ಸಂಡಾಸಿಗೆ ತೆಗೆದುಕೊಂಡು ಹೋದದ್ದು ನಾನು ನೋಡಿದ್ದೆ. ನನಗೋ ಹೇಳಲು ಮುಜುಗರ. ಆಮೇಲೆ ಎಲ್ಲರು ಸೀರಿಯಸ್ ಆಗಿ, ಇಲ್ಲೇ ಇತ್ತು ಪೇಪರ್ ಎಲ್ಲಿ ಹೋಯ್ತು ಅಂತ ಪೇಪರ್ ಹುಡುಕಲು ಶುರು ಮಾಡಿದರು. ನಾನು ನಾಚಿಕೆ ಪಟ್ಟು ನನ್ನ ತಮ್ಮನ ಬಳಿ ಇವರು ಪೇಪರ್ ತೆಗೆದುಕೊಂಡು ಹೋಗಿದ್ದು ಮೆಲ್ಲನೆ ಉಸುರಿದೆ. ನನ್ನ ತಮ್ಮಂದು ಗಲಾಟೆ ಅಂದ್ರೆ ಗಲಾಟೆ. toilet ಹೊರಗಡೆ ನಿಂತು , ’ಭಾವಾಜಿ, ನಮ್ಮ ಮನೆಯಲ್ಲಿ ನೀರಿನ ಪ್ರಾಬ್ಲೆಮ್ ಇಲ್ಲ, ಇದ್ದರೂ ಸಮುದ್ರ ಬಳಿಯಲ್ಲೇ ಇದೆ (ನಮ್ಮ ಕಿಟಕಿಯಿಂದ ಸಮುದ್ರ ಕಾಣುತ್ತೆ), ಟಾಯ್ಲೆಟ್ ಗೆ ಪೇಪರ್ ಒಯ್ಯುವ ಗರಜ್ ಇಲ್ಲ ಅಂತ ಎಲ್ಲರನ್ನೂ ನಗಿಸ ಬೇಕಾದ್ರೆ ನಾನು ಮಾತ್ರ ಟೊಮೇಟೊ ಹಣ್ಣು ನಾಚ ಬೇಕು ಅಷ್ಟು ಕೆಂಪು ಕೆಂಪು...
ಈಗಲೂ ನಾನು ಪೇಪರ್ ಬಂದ ಕೂಡಲೆ ಓದಿ ಬಿಡುತ್ತೇನೆ. ಅವರು toilet ಗೆ ಒಯ್ದ ಪೆಪರ್ ನಾನು ಓದಲ್ಲ. ಸಧ್ಯ ಅವರು ಕನ್ನಡ ಪೇಪರ್ ಮಾತ್ರ ಒಯ್ಯೋದು ಒಳಗಡೆ. ಆಕಸ್ಮಾತ್ ಆ ದಿನ ಅವರು ಏಳುವ ಹೊತ್ತಿಗೆ (ಅಪರೂಪಕ್ಕೆ) ಪೇಪರ್ ಬರದೆ ಇದ್ದರೆ, ಛೆ ಇವತ್ತು motion ಸರಿಯಾಗಿಲ್ಲ ಅಂತ ನೆವ ಹೇಳಿ, ಪೇಪರ್ ಬಂದ ಮೇಲೆ ಇನ್ನೊಂದು ರೌಂಡ್...............
ಪೇಪರ್ ಎಂದರೆ ಇನ್ನೊಂದು ನೆನಪು ನಾನು ನನ್ನ ತಮ್ಮ ಮಾಡುತ್ತಿದ್ದ the sunday-midday cross word. ಒಂದು ಫುಲ್ ಪೇಜ್ ಪದಬಂಧ. ಭಾನುವಾರ ಮಧ್ಯಾಹ್ನ್ ಊಟ ಆದಮೇಲೆ ನಾನು ಅಮ್ಮನಿಗೆ ಅಡಿಗೆ ಮನೆ ಕ್ಲೀನ್ ಮಾಡಿಕೊಡುತ್ತಿದ್ದ ಹಾಗೆ ನನ್ನ ತಮ್ಮ ಪೆನ್ಸಿಲ್ ನಿಂದ ಖಾಲಿ ಹಾಳೆ ಮೇಲೆ ರಫ್ ಆಗಿ ಪದಬಂಧದ ಪ್ರತಿಯೊಂದು ಬಿಡಿಸಿಡುತ್ತಿದ್ದ. ಆಮೇಲೆ ನಾನು ಅವನು ಕೂತು ಪದಬಂಧ ಬಿಡಿಸುತ್ತಿದ್ದೆವು.-ಅದು ಪೂರ್ತಿಯಾದಮೇಲೆ ಅದನ್ನು ಪೇಪರ್ ನಲ್ಲಿ ತುಂಬಿಸುತ್ತಿದ್ವಿ. ನನ್ನ ಅಕ್ಶರ ಚೆನ್ನಾಗಿದೆ ಅಂತ ಆ ಕೆಲಸ ನನ್ನದು. ಪಕ್ಕದಲ್ಲಿ ಒಂದು dictionary ಬೇರೆ. ಪೂರ್ತಿ ಬಿಡಿಸಿದ ಪದಬಂಧ ಆಮೇಲೆ ಪೋಸ್ಟ್ ಮಾಡಬೇಕಿತ್ತು. ಹಲವಾರು ಸಲ ಸರಿಯಾದ ಉತ್ತರಗಳನ್ನು ಬಿಡಿಸಿ ಕಳುಹಿಸಿದ್ದರು ನಮಗೆ ಪ್ರೈಜ್(cash prize) ಬರಲಿಲ್ಲ, ಯಾಕೆಂದರೆ ಅದು ಲಾಟರಿ ಮೂಲಕ ವಿಜೇತರನ್ನು select ಮಾಡುವ ಪ್ರಕ್ರಿಯೆ ಇತ್ತು.
ಈಗ ನಾನು ಮಕ್ಕಳು the hindu metro plus crossword ಬಿಡಿಸುವುದು ಬೆಳಿಗ್ಗೆ ತಿಂಡಿ ತಿನ್ನುತ್ತ..ನಿಹಾ lefty ಆದರೂ ತಿಂಡಿ ತಿನ್ನುವಾಗ ಬಲಗೈ ಉಪಯೋಗಿಸುತ್ತಾಳೆ ಆದ್ದರಿಂದ ಉತ್ತರಗಳನ್ನು ತುಂಬುವ ಕೆಲಸ ಅವಳದ್ದು. ತುಂಬ ಎಂಜಾಯ್ ಮಾಡ್ತೇವೆ ನಾವು ಈ ಸಮಯ..love you akka and nymphs and Sri....
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು....
:-)

ನಿಮ್ಮ ಹಾಲು ,ಪೇಪರ್ ....ಸಂಚಿಯಿಂದ ತೆಗೆದ ಬಿಡಿ ಬಿಡಿ ನೆನಪುಗಳು ಅನೇಕ ನೆನಪುಗಳನ್ನು ಕೆದಕುವ೦ತಿವೆ! ಅಭಿನ೦ದನೆಗಳು. ನಿಮಗೂ ಗಣರಾಜ್ಯೋತ್ಸವದ ಶುಭಾಶಯಗಳು.
ReplyDeleteಹಾಲಿನ ಬಾಟಲು ಎಂದೊಡನೆ ನನಗೆ ನೆನಪಾಗುವುದು ಮಾಲತಿಯವರೇ ನಮ್ಮ ಹಾಸ್ಟಲಿನ ಮುಂದೆ ನಾಯಿಗಳ ಕಚ್ಚಿಕೊಂದು ಓಡುತ್ತಿದ್ದ ಹಾಲಿನ ಬಾಟಲಿಗಳೇ!
ReplyDeleteನ್ಯೂಸ್ ಪೇಪರ್ ಎಂದ ಕೂಡಲೆ ನನಗೆ ನೆನಪಾಗುವು ನಮ್ಮಣ್ಣ ನೀಟಾಗಿ ಮಡಸಿಟ್ಟು ಎದ್ದು ಹೋಗುತ್ತಿದ್ದ ಹಾಗೆ ನಾನು ಅದನ್ನು ಓದಿ ಹೇಗೇಗೋ ಬಿಡಸಿಟ್ಟರೆ ಮತ್ತೆ ಬಂದು ಅದಕ್ಕೊಂದಿಷ್ಟು ಎಗರಾಡಿ ಕೈಗೆ ಬರಲು ತೆಗೆದುಕೊಳ್ಳುತ್ತಿದ್ದ ಬಾಲ್ಯದ ದಿನಗಳು.
ಒಳ್ಳೆಯ ರಿವೈಂಡ್ಗಾಗಿ ಧನ್ಯವಾದಗಳು.
Tumba dinagala nantara blog thegeda wow enta sundara chitra.chennagide. Halina batli nenapu saha chennagide .Navu halina batliya capnalli 10 paise coin ittu adanna embose madi beediyalli eseyuva ata adtidvi, yarayaru bakaraglagtare anta. Padabanda bidisuva huchhu bahala olleyadu, navu kannada padabanda madtidvi(pakka kannadada kuvariyaru). Nice write up Malthi.
ReplyDeleteLuv
Ved
thank you Prabhamani, Badari and Veda!!
ReplyDelete:-)
malathi S
Very humorous!
ReplyDeleteAs Amma is here, showed ur article, in between she started laughing 'kus, kus'..she liked ur writing style!!
thank you Vanitha and namaste to ur momfor liking my writing!!...enjoy mothers love!!
ReplyDeletetake care
:-)
malathiakka