October 1, 2011

ನಾನು, ಅಕ್ಕ ’subject” ಆಗಿದ್ದು

ಹಿಂದಿನ ವಾರ ನಿಹಾರಿಕಾ ಹೇಳಿದ್ಲು, ’ಅಮ್ಮ ನಾಡಿದ್ದು ಬುಧವಾರ ನನಗೆ psychology practicals ಪರೀಕ್ಷೆ. ನೀನು subject ಆಗ್ತೀಯಾ?? ಅಂತ. ನನಗೊ ಮನೆಯಿಂದ ಹೊರಗಡೆ ಹೋಗುವುದೆಂದರೆ ಬೇಜಾರು. ನಾನು, ’ಅಪ್ಪನ ಕರ್ಕೊಂಡು ಹೋಗೆ ’ ಅಂದೆ....ಅವಳು ಸ್ವಲ್ಪ ಹೊತ್ತು ಬಿಟ್ಟು, ’ಅಲ್ಲ ಬಿಸ್ಕತ್ ಮತ್ತು ಜ್ಯೂಸ್ ಕೊಡ್ತಾರೆ. ನೀನೆ ಬಾರೆ’ ಅಂದ್ಲು...-as if i am always starving....ಅವಳಿಗೊಂದು grrrrrr
ಸರಿ ನಿನ್ನೆ ಬೆಳಿಗ್ಗೆ ಬೇಗ ಬೇಗ ಕೆಲಸ ಮುಗಿಸಿ...ಶ್ರೀಕಾಂತ -'ಅಡಿಗೆ ನಾನೆ ಮಾಡ್ತೀನಿ..ನೀನು breakfast ಕೆಲಸ ಮುಗಿಸಿ ಹೊರಡು' ಅಂದ್ರು.  ನಾನು ಸ್ವಲ್ಪ ಗಂಭೀರ ಕಾಣಲಿ ಅಂತ  starch ಹಾಕಿ ಇಸ್ತ್ರಿ ಮಾಡಿದ favorite ಕಲಕತ್ತ ಕಾಟನ್  ಸೀರೆ  ಉಟ್ಟುಕೊಂಡೆ. ನಾವು ಮೂರು ಜನ 8.00 ಗಂಟೆಗೆ ಮನೆಯಿಂದ ಹೊರಗೆ ಹೊರಟ್ವಿ. ಮೂರು ಜನ ಯಾಕೆ ಅಂದ್ರೆ, ಹಿಂದಿನ ದಿನ ರಾತ್ರಿ ನಿಹಾ ಳ ಫ್ರೆಂಡ್ ಗೆ ಯಾರೂ subject ಸಿಗದೆ,ಅಳುತ್ತ, ’ಪ್ಲೀಸ್, ನಿನ್ನ ಅಕ್ಕನ ಕೇಳ್ತಿಯಾ ನನ್ನ ಪರವಾಗಿ’ ಅಂತ ಗೋಗರೀತಾ ಇದ್ಲು. 
ಇಲ್ಲಿಂದ ಮಜಿಸ್ಟಿಕ್ ಮತ್ತು ಅಲ್ಲಿಂದ ಬನಶಂಕರಿ ಬಸ್ ಹತ್ತಿಕೊಂಡು, ನಂದಾ ಥೀಯೇಟರ್ ಸ್ಟಾಪ್ ನಲ್ಲಿ ಇಳಿದು, ನಂದಾ ಥೀಯೇಟರ್ ಹುಡುಕಿದ್ದೆ ಹುಡುಕಿದ್ದು. ಕೀಟಲೆ ನೀಹಾ ಅದು ನೋಡು ನಿನ್ನ ಎದುರುಗಡೆ ಹುಲ್ಲು ಗಿಡ ಗಂಟೆ  ಎಲ್ಲಾ ಬೆಳೆದಿದೆಯಲ್ಲ್ವಾ?? ಅದೇ ಮೊದಲು ಥೀಯೇಟರ್ ಇದ್ದ ಜಾಗ ಅಂದ್ಲು. ಕಾಲೇಜು ಎಂಟರ್ ಆಗ್ತಿದ್ದ ಹಾಗೆ ನಿಹಾ ಫ್ರೆಂಡ್ಸ್ ಎಲ್ಲ ಹಲೋ ಆಂಟಿ..ಹಲೋ ಆಂಟಿ ಶುರು ಮಾಡಿದ್ರು...ಅವರೆಲ್ಲ ನನ್ನನ್ನು ನಿಹಾ ಜತೆ facebook ನಲ್ಲಿ ನೋಡಿದ್ದಾರಂತೆ :-). ಆದರೂ she looks different here ಅಂತಲೂ ಸೇರಿಸಿದರು :-(.  ಮತ್ತೆ ಉಳಿದವರಿಗೆ ಅಂದರೆ facebook ನಲ್ಲಿ ಇಲ್ಲದಿದ್ದವರಿಗೆ ಅವಳು , ’ನನ್ನ ಅಮ್ಮ ಅಂತ ಪರಿಚಯಿಸುವುದು ಬಿಟ್ಟು ನನ್ನ subject' ಅಂತಲೆ ಪರಿಚಯ ಮಾಡಿಸಿದ್ದು. grrrrrr- part-2
ಕಾಲೇಜ್ ಒಳಕ್ಕೆ ಹೋಗುವಾಗ ಸೆಕ್ಯುರಿಟಿಯವನು ಐಡೆಂಟಿಟಿ ಕಾರ್ಡ್ ಕೇಳಿದಾಗ ನಿಹಾಳ ಫ್ರೆಂಡ್...ಅಂಕಲ್ ಇವರು (ನಮ್ಮ ಕಡೆ ಬೆರಳು ಮಾಡಿ...) subjectives ಅಂದಾಗ ನಾನು ಅವರ ನಗುವಿನಲ್ಲಿ ಪಾಲ್ಗೊಂಡೆ.
ಒಳ ಹೋದ ಮೇಲೆ ನನಗೆ ಗೊತ್ತಾಗಿದ್ದು psychology lab ಗೆ ಹೋಗಲು ಮೂರು ಮಹಡಿ ಏರಬೇಕೆಂದು. ಹತ್ತಿ ಸುಸ್ತಾಯ್ತಪ್ಪ...ಎಲ್ಲೆ ಜ್ಯೂಸ್ ಮತ್ತು ಬಿಸ್ಕತ್ ಅಂದ್ರೆ ’ಅದು ಆಮೇಲೆ’ ನಿಮ್ಮ ಮೇಲೆ ಎಕ್ಸ್ಪಿರಿಮೆಂಟ್ ಎಲ್ಲ ನಡೆಸಿದ ಮೇಲೆ ಅಂದ್ಲು. (ನಾನು 11th 12th ಕ್ಲಾಸ್ ನಲ್ಲಿ ವಿಜ್ಝಾನ ವಿಷಯ ಆಯ್ದುಕೊಂಡಿದ್ದರಿಂದ ನನಗೆ science lab ಗೊತ್ತಿತ್ತು. psychology lab ಮೊದಲ ಸಲ ನೋಡಿದ್ದು...ಗಾಳಿ ಬೆಳಕು ಬರುವ ಕೋಣೆ ಚೆನ್ನಾಗಿತ್ತು)
ನಿಹಾ ಅವಳ lecturer ಗೆ ..ನನ್ನನ್ನು -ಮಾಲವಿಕ ನ್ನ introduce ಮಾಡಿದ್ಲು,’ my mom and sister' ಅಂತ
ಅವಳ lecturer 'niharika you are supposed to bring only one 'subject' ಅಂದಿದಕ್ಕೆ ಇವಳು, 'my mom is my subject, maam.. i am loaning my sister to my friend' ಅಂತ ಹೇಳಿ ಕಿಟಿ ಕಿಟಿ ನಗ್ತಾ ಇದ್ದಳು. ನಿಹಾ ಫ್ರೆಂಡ್ ಅಂತು i am nervous yaar  ಅಂತ ಎಷ್ಟೊಂದು ಸಲ ಅಂದ್ಲು. ನಿಹಾ ನೂ sudden ಆಗಿ ಅಮ್ಮ ಕಡಿಮೆ ಮಾರ್ಕ್ಸ್ ಬಂದರೆ ಬಯ್ಯಲ್ಲಲ್ಲ್ವಾ ಅಂತ ಕೇಳಿದ್ಲು. ಪಿ ಯು ಸೆಕೆಂಡ್ ನಲ್ಲಿ psychology ಯಲ್ಲಿ100 ರಲ್ಲಿ 97 ತೆಗೆದುಕೊಂಡ ಹುಡುಗಿ nervous ಆಗಿದ್ದು ಮೊದಲ ಸಲ ನೋಡಿದ್ದು ನಾನು. ಹೋಗಲಿ ಬಿಡೆ ಏನ್ ಮಹಾ ಅಂದೆ!!
ಮೊದಲು ಒಂದು ಗಂಟೆ ಅವಳಿಗೆ ಬರಹ ಪರೀಕ್ಷೆ. ನಾವು ಕಾಯ ಬೇಕಾಗಿ ಬಂತು. ಮೊದಲ ಹತ್ತು ನಿಮಿಷದಲ್ಲಿ ನಾನು ಮಾಲವಿಕ The Hindu-metro crossword ಮಾಡಿ ಮುಗಿಸಿದ್ವಿ. ಅದಾದ ಮೇಲೆ ಅವಳು ಅವಳ ಫ್ರೆಂಡ್ಸ್ ಗೆ ಟೆಕ್ಸ್ಟ್ ಮಾಡ್ತಾ ಕೂತಲು. ನಾನು ನನ್ನ ಸೆಲ್ ಫೋನ್ ಮನೆಯಲ್ಲೇ ಬಿಟ್ಟು ಬಂದಿದ್ದೆ, ಇಲ್ಲದಿದ್ದರೆ  ಅದರಲ್ಲಿ ಆಡಬಹುದಿತ್ತು..
NMKRV ನಲ್ಲಿ ಒಳ್ಳ್ಳೆ ಮರಗಿಡ ಗಳಿದ್ದು ಹಸಿರು ವಾತಾವರಣ. ಕಿಟಕಿಯಿಂದ ಪುರ್ತಿ ಕಾಲೇಜ್ campus ಕಾಣುತ್ತಿತ್ತು. ಸುಮ್ಮನೆ ಒಂದು ಸಲ ತಲೆ ಎತ್ತಿದಾಗ ಆಕಶದಲ್ಲಿ ಒಂದು ಜೆಟ್ ವಿಮಾನ ಹೊಗೆ ಉಗುಳುತ್ತ ಹೋಗುತ್ತಿತ್ತು. ಸೆಲ್ ಫೋನ್ ಮನೆಯಲ್ಲೇ ಇದ್ದಿದ್ದು ಶ್ರೀಕಾಂತ ಗೆ ತಿಳಿಸುವಾ ಅಂತ ಅಕ್ಕನ ಸೆಲ್ಲ್ ನಿಂದ ಫೋನ್ ಮಾಡಿ ಹೇಳಿದೆ.
ಒಂದು ಅರ್ಧ ಗಂಟೆ ಬಿಟ್ಟು ಶ್ರೀಕಾಂತ ಅಕ್ಕನ ಸೆಲ್ಲ್ ಗೆ ಕರೆ ಮಾಡಿ...ತೊಗರಿ ಬೆಳೆ ಸರಿ ಬೆಂದಿಲ್ಲ ಅಂದ್ರು..ನನಗೆ ಕೂಡಲೆ ಅರ್ಥ ಆಯ್ತು...ಶ್ರೀಕಾಂತ ನಳ ಮಹಾಶಯರು ತೊಗರಿ ಬೆಳೆ ಗೆ ಬದಲಾಗಿ ಕಡಲೆ ಬೆಳೆ ಬೇಯಿಸಿದ್ದಾರ ಅಂತ.....ಇನ್ನು ಸ್ವಲ್ಪ ಹೊತ್ತು ಕುಕ್ಕರ್ ನಲ್ಲಿಟ್ಟು ವಿಸಿಲ್ ಬರ್ಸಿ ಅಂದೆ. ಆಮೇಲೆ ಸಾಂಬಾರು ಪುಡಿ ಯಾವುದು, ಸಾರು-ಸಾಂಬಾರು ಪುಡಿ ಬಾಟಲು ಒಂದ ರ ಪಕ್ಕ ಒಂದಿದೆ... ಅಂತ ಕೇಳಿದರು...ಯಾವ ಬಾಟಲಿ ಮುಚ್ಚಳ ಸಲೀಸಾಗಿ ಕೈ ಗೆ ಬರುತ್ತೋ ಅದೇ ಸಾಂಬಾರ ಪುಡಿ ಅಂದೆ....ವ್very good way of identifying ಅಂತ ಫೋನ್ ಇಟ್ಟರು.
ಸೀನಿಯರ್ ಮಕ್ಕಳು ನಾವಿದ್ದ ಕ್ಲಾಸ್ ರೂಮ್ ನಲ್ಲಿ ಸೇರಿಕೊಂಡ್ರು ಎಲ್ಲರು ಉರು ಹೊಡೀತಾ ಇದ್ರು. ನಾನು ಒಂದನೆ ಕ್ಲಾಸ್ ನಿಂದ 12 ನೆ ಕ್ಲಾಸ್ ತನಕ girls ಸ್ಕೂಲ್ ನಲ್ಲೇ ಕಲಿತಿದ್ದು. ನನ್ನ ಸ್ಕೂಲ್ ನೆನಪಾಯ್ತು. ಹುಡುಗಿಯರು ಚಂದದ ಚಿತ್ತಾರ, ತಮ್ಮ ತಮ್ಮ, ತಮ್ಮ ಸ್ನೇಹಿತೆಯರ ಹೆಸರನ್ನು ಡೆಸ್ಕ್ ಮೇಲೆ carve ಮಾಡಿದ್ದರು.ಒಂದು ಡೆಸ್ಕ್ ಮೇಲಂತು ಬಿಳಿ ಪೈಂಟ್ ನಿಂದ ಚೆಂದದ ರಂಗೋಲಿ ನೇ ಬಿಡಿಸಿದ್ದರು. ಮುಸ್ಲಿಮ್ ಹುಡಿಗಿಯರು ತಮ್ಮ ಬುರ್ಖಾ ಗಳನ್ನು ಬಿಚ್ಚಿ, ಫೋಲ್ಡ್ ಮಾಡಿ ಬ್ಯಾಗ ನಲ್ಲಿಟ್ಟು.. text  ಮಾಡುವುದರಲ್ಲಿ, ಓದುವುದರಲ್ಲು ಮಗ್ನ ರಾದರು. 
ಮುಂಬಯಿನ ಟ್ರೈನ್ ನಲ್ಲಿ ಹೋಗುವಾಗ, ನನ್ನ ಕಾಲೇಜಿನ ಹುಡಿಗಿಯರು ಲೇಡಿಸ್ ಕಂಪಾರ್ಟಮೆಂಟ್ ನಲ್ಲಿ ಅವರ ಬುರ್ಖಾ, ಹಿಜಾಬ್ ತೆಗೆದು make up ಎಲ್ಲ ಮಾಡಿಕೊಳ್ಳುವುದು ನನಗೆ ಅಶ್ಚರ್ಯ ತರುತ್ತಿತ್ತು. ವಾಪಸ್ ಕಾಲೀಜಿನಿಂದ ಮನೆಗೆ ಹಿಂದಿರುಗುವಾಗ ಮುಖ ಎಲ್ಲ ಸ್ವಛ್ಚ ತೊಳೆದು ಪುನ: ಬುರ್ಖಾ ಹಾಕಿಕೊಂಡು ಹೊರಡುತ್ತಿದ್ದರು. ನನ್ನ ಫ್ರೆಂಡ್ ನಜಮಾ ಗೆ ಹಾಗೆ ಯಾಕೆಂದು ಕೇಳಿದ್ರೆ , ’ನಹಿ ತೊ ಮೆರೆ ಪಿತಾಜಿ ಔರ್ ಭಾಯಿ  ಮುಝೆ ಜಾನ ಸೆ ಮಾರ್ ಡಾಲೆಂಗೆ” ಅಂತಿದ್ದು ನೆನಪಿಗೆ ಬಂತು. ಆವಾಗ ಸಿಂಪಲ್ ಆಗಿದ ಬುರ್ಖಾ ಈಗ ಚಂದ ಚಂದ designer ಮಾದರಿ ಯಲ್ಲಿ ಬರುತ್ತೆ.. ಕಪ್ಪು ಬಣ್ಣದ ಬುರ್ಖಾ ಮಾತ್ರ ನೋಡಿದ ನನಗೆ ಈಗ ನೇವಿ ಬ್ಲು, ಮರೂನ್ ಬಣ್ಣ ಹಾಗೂ ತಲೆ ಮೇಲೆ ಹಾಕುವ ಬಟ್ಟೆಗೆ (ಹಿಜಾಬ್) ಚಂದದ ಪಿನ್ ಗಳು ಕಾಣ ಸಿಕ್ಕಿದವು.
ಎಲ್ಲ ಪರಿಕ್ಷಾರ್ಥಿಗಳು ಒಂದೊಂದು subject ಗಳನ್ನು ತಂದಿದ್ದರು. ಅದರಲ್ಲಿ ಮೂವರು ಗಂಡಸರು ಇದ್ದು,ಮುಜುಗರದಿಂದ  ನಮ್ಮನ್ನೆಲ್ಲ ಮಿಕಿ ಮಿಕಿ ನೋಡುತ್ತಿದ್ದರು.
ಸುಮಾರು ಒಂದು ಗಂಟೆ ಕಾದ ಮೇಲೆ ನಮ್ಮನ್ನು ಒಬ್ಬೊಬ್ಬರಾಗಿ ಕ್ಲಾಸಿಗೆ ಕರೆದಾಯ್ತು. ಒಳಗೆ ಹೋಗುವ ಮುಂಚೆ ನಿಹಾರಿಕ ನನಗೆ ಅಮ್ಮ- please behave ಅಂತಂದ್ಲು.grrrrrr...(part-3)
ನನ್ನ ಮೇಲೆ ನಿಹಾರಿಕ experiment ಮಾಡುತ್ತಿದ್ದಾಗ  ಒಬ್ಬ ಹುಡುಗಿಗೆ maze learning experiment ಬಂದಿತ್ತು. ಅವಳ subject  ನ್ನು ಆ ಎಕ್ಸ್ಪೆರಿಮೆಂಟ್ ಗೆ ಒಳಪಡಿಸಿ ಅದರ observation ಅವಳು ಕೂಡಲೇ invigilator ಗೆ submit ಮಾಡಬೇಕು. ಪಾಪ ಆ ಹುಡುಗಿ maze ಬರಿಬೇಕಾದ ಕಡೆಯೆಲ್ಲ maize ಅಂತ ಬರೆದಿದ್ದಳು ಅನ್ನಿಸುತ್ತೆ...ನರ್ವಸ್ ನೆಸ್ಸ್ ಅಥ್ವಾ unconsciously ಇರಬಹುದು). ಅದಕ್ಕೆ ಅವಳ lecturer, 'whats  ಥಿಸ್ maize?' ಅಂತ ಕೇಳಿದಾಗ ಆಕೆ ’corn' maam ಅಂದಳು.ನನ್ನ ಎದುರಿಗೆ ಕುಳಿತ ನಿಹಾರಿಕ ಖಿಕ್ ಅಂದ್ಲು ಒಂದು ಸಾರಿ, ನಾನು ನಗು ತಡೆದುಕೊಳ್ಳಲ್ಲು ನನ್ನ ಬಳಿಯಿದ್ದ ಪೆನ್ ನೋಯುವಷ್ಟು ಗಟ್ಟಿಯಾಗಿ ಹಿಡಿದುಕೊಂಡೆ. ಯಾಕಂದ್ರೆ ನಗಲು ಶುರು ಮಾಡಿದ್ರೆ ಅದು ನಾನ್ ಸ್ಟಾಪ್. ಊಟಕ್ಕೆ ಹೋಗುವಾಗ ದಾರಿಯಲ್ಲಿ ನಕ್ಕಿದ್ದೆ ನಕ್ಕಿದ್ದು. ಅದು ಮಾತ್ರ ಅಲ್ಲ ಎಲ್ಲರ ಪೇಪರ್ಸ್ correct ಮಾಡ್ತಾ, lecturer ಗಟ್ಟಿಯಾಗಿ ಕಮೆಂಟ್ ಕೂಡ ಪಾಸ್ ಮಾಡ್ತಾ ಇದ್ದರು. ನಗು ತಡೆಹಿಡಿಯಲು ಸುಮಾರು ಪ್ರಯಾಸಪಡಬೇಕಾಯಿತು.
ಮಕ್ಕಳು ನಮ್ಮ ಮೇಲೆ experiment (General perception) ಮಾಡುವಾಗ ಲೆಕ್ಚರರ್ ಗಮನವಿಟ್ಟು, ಅವರು ಸರಿಯಾಗಿ experiment ನಡೆಸುತ್ತಿದ್ದಾರಾ ಇಲ್ಲವಾ ಅಂತ ನೋಡುತ್ತ ಇದ್ದರು. ಪ್ರತಿಯೊಂದು step ಗೂ ಅಂಕ ಕೊಡಲಾಗುತ್ತದೆ. ಒಟ್ಟು ಮೂರು ಗಂಟೆಯ ಪರೀಕ್ಷೆ. 40 ಮಾರ್ಕ್ಸ್. ಆಮೇಲೆ ನಾವು third block ಗೆ ಬಂದು ಊಟ ಮಾಡಿ, ಅಲ್ಲಿಂದ british library ಕಡೆ ಹೊರಟ್ವಿ. ಅಲ್ಲಿನ ತಂಪು ವಾತಾನೂಕುಲಿತ ವಾತಾವರಣದಲ್ಲಿ ಸ್ವಲ್ಪ ಹೆಚ್ಚೆ ಸಮಯ spend ಮಾಡಿ ಅಲ್ಲಿಂದ ಹೊಸ ಬುಕ್ಸ್ ಪಡೆದುಕೊಂಡು ಮನೆಗೆ ಕಡೆ ಹೊರೆಟೆವು
ಹೀಗೆ ಒಂದು ದಿನ ನಾನು, ಅಕ್ಕ'subject' ಆಗಿದ್ದು, ಅಮೇಲೆ ರಸ್ತೆಯ ಧೂಳು, ಟ್ರಾಫಿಕ್, ಸದ್ದಿಗೆ, ಸೆಕೆಗೆ, ಬೆವರಿಗೆ subjected to ಆಗಿದ್ದು ಮನೆಗೆ 5 ಗಂಟೆ ಸುಮಾರಿಗೆ ತಲುಪಿದ್ವಿ
ಹ್ಮ್ಮ್ಮ್ ಶ್ರೀಕಾಂತ ಮಾಡಿದ ಕಡಲೆ ಬೇಳೆ ಸಾಂಬಾರ್ ಸಖತ್ ಮಜವಾಗಿತ್ತು!!
*here akka means Malavika
ಸ್ವಲ್ಪ ಹೆಚ್ಚೆ ಆಂಗ್ಲ ಪದಗಳ ಬಳಕೆಯಾಗಿದೆ. ದಯವಿಟ್ಟು ಕ್ಷಮೆಯಿರಲಿ.....
:-)

17 comments:

  1. ಶ್ರೀಕಾಂತ್ ಸಾರ್ ಅವರ ನಳಪಾಕ "ಪರಮೇಶಿ ಪ್ರೇಮ ಪ್ರಸಂಗ" ಚಿತ್ರದ ಪರಿಪಾಟಲು ನೆನಪಿಸಿತು.

    ಆದರೂ ನಿಮ್ಮನ್ನು subject ರೀತಿಯಲ್ಲಿ ಹೇಗೆ ಬಳಸಿಕೊಂಡರೂ ಅಂತ ವಿವರಿಸಿದ್ದರೆ ಛಲೋ ಇರತಿತ್ತು, ಮಾಲತಿಯವರೇ. :-D

    ಬುರ್ಕಾ ಹಿಂದಿನ ಮುಖವೂ ಇಷ್ಟವಾಯಿತು.

    ReplyDelete
  2. @ Badari:
    Its an experiment conducted to how a set people react to different situations. in the college we were given some simple games and the students had to collate our perceptions...for eg recalling a list of 30 names....why or how or what made us recall them...so on and so forth. malavika had a maze and she was timed as to how much time she took to come out of that maze...aa taraha....gottaagadidre nihaa na keLabeku neevu :-) :-)
    @ Vichalita (Guru)
    :-) :-)

    ReplyDelete
  3. Mai,

    Your paragraphs with grrrrrr are hilarious! Good to know that Niha is studying at NMKRV. My best wishes to her.

    Regards,
    Naveen.

    ReplyDelete
  4. @ Neelesh:
    I put a 'sorry' na there!!!
    :-)
    ms

    ReplyDelete
  5. ಎಲ್ಲಾ ವಿವರಿಸಿ ನಿಮ್ಮ subjectivity ಮಾತ್ರ ವಿವರಿಸಲಿಲ್ಲವಲ್ಲ :)

    ಬರಹ ಚೆನ್ನಾಗಿದೆ.

    ReplyDelete
  6. thank you Dr. Gurumurthy and Manjunatha Kollegala. will post about the experiments we went through soon
    :-)
    ms

    ReplyDelete
  7. ಮಾಲ-T, ನಮಗೆ subject ಗೆ ಏನಾಯ್ತು..? questions really tough ಆಗಿದ್ವಾ ಅಥ್ವಾ subject ಗೆ ಹೇಳ್ಕೊಳ್ಳೋಕೆ ಮುಜುಗರಾನಾ?? ಕಡೆಗೆ ಎಲ್ಲಾ ವಿದ್ಯಾರ್ಥಿಗಳ subject ಗಳಿಗೆ reward ಸಿಕ್ತಾ?? ಯಾಕಂದ್ರೆ learning response ಪಿಸ್ಕಾಲಜಿ...ಸಾರಿ psycology ಲಿ ನಾವೂ ಮಾಡಿದ್ವಿ ಅಲ್ಲಿ reward ಮತ್ತೆ ounishmnet ಅಂತ ಇತ್ತು...ಅದೂ ಗೊತ್ತಾಗ್ಲಿಲ್ಲ,,,
    ಇದನ್ನೆಲ್ಲಾ ಮುಮ್ದಿನ ಕಂತಲ್ಲಿ ನೋಡಬೇಕಾ...
    ಹಾಂ...ಆಮೇಲೆ ಶ್ರೀ..ಮಾಡಿದ ಬೇಳೆ ಸಾರು ..?? ಯಾವ ಬೇಳೆ ಕೈಗೆ ಸಿಕ್ತು..ಮತ್ತೆ ಮಸಾಲೆ ಸರಿಯಾದ ಡಬ್ಬದ್ದಾ.. ಇದನ್ನೂ ಹಾಕೊದು ಮರೀಬೇಡಿ...!!! Grrrrr

    ReplyDelete
  8. Nice write up.
    It's nice to be subjects if they are not going to say any thing bad about us :).

    Swarna

    ReplyDelete
  9. ಪ್ರೀತಿಯ ಮಾಲ್ತಕ್ಕಾ

    ನೀವು "ಸ್ಪೆಶಲ್" ಅಮ್ಮ. ಎಷ್ಟು ಇಷ್ಟ ಆಯ್ತು ಗೊತ್ತಾ ಈ ಪೋಸ್ಟು.. ನಾನು ಅಲ್ಲಿ ಎನ್ನೆಂಕೆಆರ್ವಿ ಕಾಲೇಜಿನ ಒಳಾಂಗಣದಲ್ಲಿ ಕಲಕತ್ತಾ ಕಾಟನ್ ಸೀರೆ ಉಟ್ಟು ಗಂಭೀರವದನಯಾಗಿ ಫೋನಿನಲ್ಲಿ ಅಡಿಗೆ ಇನ್ಸ್ ಟ್ರಕ್ಷನ್ ಕೊಡುವ ನಿಮ್ಮನ್ನು ಊಹಿಸಿಕೊಂಡು ನಕ್ಕುಬಿಟ್ಟೆ.
    ಅಲ್ದೆ ನಿಮ್ಮ ನಗು ತಡೆ ಹಿಡಿಯುವ ವಿಧಾನ ಇಷ್ಟ ಆಯ್ತು. ಮುಂದಿನ್ಸಲ ನಾನು ಅದನ್ನೆ ಟ್ರೈ ಮಾಡೋದು. ನಾನು ನಗು ತಡೇಯೋದಕ್ಕೆ ನನ್ನ ಗಟ್ಟಿಯಾಗಿ ಚೂಟಿಕೊಂಡು ಕೂತಿರ್ತೀನಿ. :)

    ಹಗ್ಸ್ ಟು ನಿಹಾ for subjecting you u to such an experience and extracting posts.. :)

    ಪ್ರೀತಿಯಿಂದ,
    ಸಿಂಧು

    ReplyDelete
  10. thank you Azad Bhai!!! it was just a test of general observation. in the first experiment Niha read out 30 words of which i could recall 18 words, in the second exp. she read out another 30 words but this time she gave me a table and i found i could recall 23 words. tables consisted of columns likes fruits, furniture, colour, flowers and insects. so it was easier to recall. Malavika had a maze game and was timed...one simple and one complex maize game...gottaaytaa?? illadidre u have ask nymphs.
    @ Swarna and Sindhu:
    thank u very much to both missing Niha terribly. she is at Neenasam workshop
    :-)
    ms

    ReplyDelete
  11. thanks Divya!!
    Very sweet of u to say that
    :-)
    ms

    ReplyDelete
  12. Experiment ginta SUBJECT WORD NANAGE ISHTA AAYTU....

    ReplyDelete