September 26, 2011

rumali roti fiasco

wah re wah dot com

our favorite video which we watch while having breakfast on Sundays, when Srikanth is out of town :-) ;-). if Srikanth is at home he insists we sit down together in the kitchen and have our breakfast/lunch talking discussing joking (which often results in choking). We sit 'down' cos we do not have a dining table. several years ago we donated our dining table. We have gotten so used to sitting down on the floor while having food that we feel awkward to sit at a table. also that is one less thing to worry when shifting houses.
We have breakfast in front of the PC on Sunday also because of the fact that on Sunday there is no 'The Hindu-metro crossword' for us to solve. on weekdays we spread out the newspaper and ourselves on the Kitchen floor and since Niha is a left handed person she fills the crosswords while breakfasting with her right hand ;-) nice naa??
Today morning me and girls attended Dundiraj Bhat's (He is an old friend of Srikanth and therefore mine too) book release programme. Sri Y.V. Gundurao, Sri Dundiraj and Sri H.L. Keshavamurthy had us in splits with fun and pun. and i met my friend Veda for the first time. this post is for her to enjoy when she feels very hungry at the office. 
We lunched outside at noon, and tonight  me and akka (malavika)had a try at Roomali Roti. pls watch the video link which i have pasted at the beginning of this post. He is one funny guy. more than trying out his dishes we love watching his antics and listening to his peculiar english!!
Assured by the idea of  the experience of 25years of cooking behind me i thought i could make rumali roti at the first try. so i tried imitating the way he throws the roti into the air... only it got stuck to the kitchen tube light like a chandelier and i had to wait with outstretched palms for it to fall 'like a manna' from above, because the kitchen ceiling is too high and i have to use a ladder to reach up. so my idea was to let it bake slowly from the heat emananting from the tube light before it landed  into my palms....
 i aborted the attempt of making the rotis fly and resorted to the time tested method of using the good old rolling pin....but the texture was not the same..cos the maida flour being elastic, shrinks back...with the remaining dough we made parathas.anyways me and akka had good laughs. (Niha is preparing for her semester)we had our paranthas with mushroom masala..it was awesome..While eating we watched old b & w movie 'Seema' (Nutan, Balraj Sahni and Shubha Khote) lovely songs.
Yummy paratha and Mushroom Masala
and to go along with this Malavika prepared a cocum drink
Crushed ice, cocum syrup (from Goa), pinch of salt, pinch of rock salt and Sprite...
Photographs as usual by Niharika on Akka's cell phone. Camera with Srikanth for he is again on one of his tours.........hope he is jealous seeing the photographs of the awesome Paratha and the side dish. 
One more fun sunday. today is daughters day and we enjoyed it to the HILT. Love you Akka and Nimpu.
:-)

September 23, 2011

Variety is the spice of life - ಕನ್ನಕೊಂಕಣಿ ಪೋಸ್ಟ್

ತೀರ್ಥಹಳ್ಳಿಚೆ, ಆಮ್ಗೆಲೆ ಘರಾಚೆ ಅರ್ಧ ಭಾಗು ವತ್ತಾ ರೋಡ್ ಹೋಡ್ ಕರ್ಚೆ ಮ್ಹಣು. ದಿಕ್ಕುನು ಶ್ರೀಕಾಂತಾನ ತಂಚೆ ಘರ ಪೂರ್ತಿ ಪಾಡೋನು ನವೇ ಕಸಲೈ ತರಿ ಬಾಂದುಚೆ ಮ್ಹಣು ಆಲೋಚನ ಕೆಲ್ಲಾ. ತಹಿ ಘರಾಂತು ಆಶಿಲ್ಲೆ ಕೆಲವು ಫೋಟೊ ಅನೀ ಹಾಂಗ ಬೆಂಗಳೂರಾಕ ಹಾಳ್ಳಾ ತಾನೆ. ಮಿಗೆಲೆ ಮಾವಾಂಕ/ಭೈಯಾಂನ್ಕ ಪೂರಾ , ಮುಖ್ಯ ಕಸ್ಸಲೈ ಕಾಗದ ಪತ್ರ, ಪೊರ್ನೆ ನೋಟ್, ಆಸ್ಲ್ಯಾರಿ ತೇಂ ಏಕೆಕ್ newspaper page ಆಂತು ಬಾಂದುನು / ಗುಟ್ಲಾನು  ದೊವೊರ್ಚೆ ಅಭ್ಯಾಸು. ಅಣಿ ಮಕ್ಕಾ ತಸ್ಸಲೆ ಪರ್ಕಟೆ ಕಾಗದ  ವಾಜ್ಜುಚೆ ಅಭ್ಯಾಸು. ಪೈರಿ ತಶಿ ಕಸ್ಸಲ್ಗಿ ಹಾಂವೆ ಸುಸ್ತಾಯ್ತನಾ ಮಕ್ಕ 'ರಾಕ್ಣೋ' ಮ್ಹಣು ಎಕ್ newspaper ಆಚೆ ಕುಡ್ಕೊ ಮೆಳ್ಳೆ. first ವಾಜಿತನ ತಾಜ್ಜೆ  ಗಾಂಡಿ ತೋಂಡ ಕಳ್ನಿ. ಮಗ್ಗಿರಿ ಅರೇ ಕೊಂಕಣಿ, ಕನ್ನಡ ಲಿಪಿ ಯುಸ್ ಕರ್ನು ಬರೈಲೆಲೆ ವಾಜ್ಜುನು ಏಕ್ ನಮೂನೆ ಖುಶಿ ಜಾಲ್ಲೆ. ಹಾಂವೈ ಕಸಲ್ಯಾಕ ತಶ್ಶಿ ಪ್ರಯತ್ನ ಕರೂ ನಜ್ಜ ಮ್ಹಣು!
ಮಿಗೆಲೆ ಸಾನ್ ಪಣಾಂತು ಆಯ್ಕಲೆಲೆ ಏಕ ಸಂಗತಿ ತುಮ್ಗೆಲೆ ವಟ್ಟು share ಕರ್ತಾ.
ಮಿಗೆಲೆ ನಾನಿ (ಬೊಂಬೈಂತು ಹೋಡ ಜಾಲ್ಲೆಲೆ ನಿಮಿತ್ತ ಆಮ್ಮಾಲೆ ದಿಕಡೆಚೆ ಆಜ್ಜಾ ಅನಿ ಮಾಮಮಾಕ ಅಮ್ಮಿ ಆಜೋಬಾ ಅನಿ ನಾನಿ ಮ್ಹಣಚೆ ಅಭ್ಯಾಸು ಜಾಲ್ಲಾ). ಸೊ ನಾನಿಲೆ ಆನ್ನಾಲೆ ನಾಂವ ಶಾಂತಪ್ಪ ಶೆಣೈ. ತೆ corrupt version ನಾಂತು ಸಾಂತೊಪ್ ಶೆಣೈ ಮ್ಹಣು ಸಕ್ಕಡಾನಿ ಆಪ್ಪೊಚೆ ಆಶಿಲೆ    ತೆದ್ನಾನಿ ಬಾಂಮಣಾಕ, ತಾಂಗೆಲೆ ಅಯುಶ್ಶ್ಯು ಉಣೆ ಜಾತ್ತ ಮ್ಹಣು  ನಾವಾನಿ ಆಪ್ಪಯನಾಂಚಿ ಅಶ್ಶಿಲೆಂಚಿ. ದಿಕ್ಕುನು ಮಿಗ್ಗೆಲೆ ನಾನಿ ಲೆ ಆಮ್ಮಾನ ಘರಾಂತು ವಾಸರೀಂತು ಸಾನ್ ತೋಪು ಜಾಯ್ ಜಾಲ್ಲ್ಯಾರಿ ’ಧಾಕ್ಲೆ ತೋಪು ’ ಮ್ಹಣಚೆ ಆಶಿಲ್ಲೆ ಕೈ. ತುಮ್ಕ ಗಮ್ಮತ ಜಾಲ್ಲೆವೆ ಹೇಂ ಆಯ್ಕುನು?
ಅಶೀಚಿ ಏಕ್ ಸಾನ್ post ಟ್ರೈ ಕೆಲ್ಲೆ. ತುಮ್ಕಾ ಇಷ್ಟ ಜಾಲ್ಲೆವೇ?
ತಶೀ ಮಿಗೆಲೆ ಅನಿ ಮಿಗ್ಗೆಲೆ ಚಲ್ಡುವಾಲೆ ಗಮ್ಮತೆಚೆ ಕೆಲವು ವಿಷಯ್ ಆಸ್ಸಂಚಿ.
*ಆಮ್ಗೆಲೆ ಕೊಂಕಣಿ broadcasting centre ಆಚೆ ನಾಂವ್ ರೇಡಿಯೋ ಕೊಂಕಣಿಸ್ಸ್ಥಾನ ಮ್ಹಣು ದವರಚೆ
*ಅನಿ ಬ್ರೂಸ್ ಲೀ ಲೆ ಇಷ್ಟಾಚೆ ಖಾಣ : ಫೋವಾ ಉಸ್ ಲೀ ಅಣಿ ಚಣ್ಯಾ ಉಸ್ ಲಿ ಮ್ಹಣು
ಸ್ವಲ್ಪ ತೊಂದರೆ ಜಾತ್ತಾ ನ್ಹವೆ ವಾಜ್ಜಿತನಾ? ಮಾಕ್ಕಾ ಬರೋವ್ಕಾ ಜಾಲ್ಲಾಯಾರಿ ಮಸ್ತ ಹೂಮ್ ಆಯ್ಲ್ರೆ.
ಮಾಲವಿಕ ಆಜಿ ಘರಾಂತೂ ಆಸ್ಸ. ತಿಕ್ಕಾ ವಾಜ್ಜು ಸಾಂಗಿಲೆ. ಪೂರ್ತಿ 45 ನಿಮಿಷ ಲಾಗಲೆ ತಿಕ್ಕಾ ಇತ್ಲೆ ವಾಜ್ಜುಜಾಕ. ದಿಕ್ಕೂನು ಹಾಂವೆ ಕಾಣಿ ಬರೋವಚೆ ಅಂದಾಜು ಆಶಿಲೆ ಸೋಡ್ಕಾ ಪಳ್ಳೆ.
:-)

September 19, 2011

ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ

ನಿನ್ನೆ ನಾವು ಡಾ. ಕೆ. ಶಿವರಾಮ ಕಾರಂತ ಕಾದಂಬರಿ ಆಧಾರಿತ ’ಬೆಟ್ಟದ ಜೀವ’ ಸಿನಿಮಾ ಪ್ರದರ್ಶನಕ್ಕೆ ಹೋಗಿದ್ವಿ. ಬೆಟ್ಟದ ತಪ್ಪಲಿನಲ್ಲಿ ವಾಸವಾಗಿದ್ದ ವೃದ್ಧ ದಂಪತಿಗಳ ಮನೆಗೆ .ದಾರಿ ತಪ್ಪಿ  ಬರುವ ಶಿವರಾಮಯ್ಯ, ಈ ದಂಪತಿಗಳೊಂದಿಗೆ ಮೂರು ದಿನ ಕಳೆಯುವ, ಅವರ ಜೀವನವನ್ನು ಹತ್ತಿರದಿಂದ ನೋಡುವ ಅವಕಾಶ ಈ ಸ್ವಾತಂತ್ರ ಚಳುವಳಿ ಹೋರಾಟಗಾರನಿಗೆ. ತೋಟನೋಡುವಾಗ ಜಾರಿ ಬಿದ್ದು ಅವನ ಕಾಲಿಗೆ ತ್ಯಾಂಪಣ್ಣನ ತೈಲ ಹಚ್ಚಿ ಕಾಲು ನೋವನ್ನು ಸರಿಮಾಡಲಾಗುತ್ತದೆ. ಆ ಪ್ರಸಂಗ ನನ್ನ  ಈ ಪೋಸ್ಟ್ ಗೆ ಪ್ರೇರಣೆ. ಚಲನಚಿತ್ರವನ್ನು ನೀವೆಲ್ಲರೂ ಖಂಡಿತ ನೋಡಲೇಬೇಕು. ಚುರುಕಾದ ಸಂಭಾಷಣೆ, ರಮ್ಯ ಮನೋಹರ ಪ್ರಕೃತಿ ದ್ರಶ್ಯ...ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ’ಬೆಟ್ಟದ ಜೀವ’. ಈ ಚಿತ್ರದ ಪ್ರದರ್ಶನ ಏರ್ಪಡಿಸಿದ ’ಅವಿರತ’ ತಂಡಕ್ಕೆ ಧನ್ಯವಾದಗಳು.
ಹಳ್ಳಿಗಳಲ್ಲಿ - ತೋಟ ಗದ್ದೆಗಳ ಕೆಲಸ ಇದ್ದ ಪ್ರತಿ ಮನೆಯಲ್ಲೂ ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ ಇರುವುದು ಮಾಮೂಲಿ. ತೀರ್ಥಹಳ್ಳಿಯ ನಮ್ಮ ಅಂಗಡಿಯಲ್ಲೂ ಅದನ್ನು ಮಾರಲು ಇಡುತಿದ್ದು ಪ್ರತಿ ತಿಂಗಳು ನಾವು ಈ ಎಣ್ಣೆಯನ್ನು restock ಮಾಡುವುದಿತ್ತು.
ಇತ್ತೀಚಿಗೆ ಶ್ರೀಕಾಂತ ಹರಳೀಮಠದಲ್ಲಿರುವ ಅವರ ತಮ್ಮನ ಮನೆಗೆ ಭೇಟಿಯಿತ್ತಾಗ ಅಲ್ಲಿ ಗದ್ದೆ ಉಳುತ್ತಿದ್ದ ಎತ್ತು ಕಾಲು ಜಾರಿ ಬಿದ್ದು ಏಳಲಿಕ್ಕಾಗದೆ ಇದ್ದಾಗ, ತಮ್ಮ ಕೆಲಸದ ಆಳಿನಿಂದ ತ್ಯಾಂಪಣ್ಣನ ತೈಲ ತಂದು ಆ ಎತ್ತಿನ ಕಾಲಿಗೆ ಸರಿಯಾಗಿ 10 ನಿಮಿಷ ತಿಕ್ಕಿದ ಮೇಲೆ ಎತ್ತು ಕೆಲ ಹೊತ್ತಿಗೆ ತನ್ನ ಕಾಲ ಮೇಲೆ ನಿಂತು ಹೊಲ ಉಳುವುದನ್ನು ನೋಡಿ ಶ್ರೀಕಾಂತ ಸಖತ್ impressedu. ರಸ್ತೆ ಅಗಲೀಕರಣ ನಿಮಿತ್ತ ನಮ್ಮ ತೀರ್ಥಹಳ್ಳಿಯ ಅಂಗಡಿ ಪೂರ್ತಿ ನೆಲಸಮ ಮಾಡುವ ಮುಂಚೆ ಅಲ್ಲಿರುವ  ಕೆಲವು ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ ಬಾಟಲಿಗಳಲ್ಲಿ ಒಂದನ್ನು ಶ್ರೀಕಾಂತ ಬೆಂಗಳೂರಿಗೆ ತಂದಿದ್ದರು.ಅಪರೂಪ ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಅವರ ಬಲಗಾಲು ಮಣಿಗಂಟು ನೋವು ಬಂದಾಗ ನೋವಿನ ಎಣ್ಣೆ ಹಚ್ಚುತ್ತಾರೆ.(ಹಚ್ಚುತ್ತಾರೆ ಅನ್ನುವುದಕ್ಕಿಂತ ನನ್ನಿಂದ ಹಚ್ಚಿಸಿಕೊಳ್ಳುತ್ತಾರೆ ಅನ್ನಬಹುದು. ಅದಕ್ಕೆ ಬೇರೆ ’ಹೇ, ನಿನ್ನ ಕೈ ನಲ್ಲಿ ಜಾದು ಇದೆ ಅಂತಲೋ ಅಥವಾ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಅಂತಲೋ ಹಾಡು ಹೇಳಿ ಪೂಸಿ ಬೇರೆ ಹೋಡಿತಾರೆ). ಮಣಿಗಂಟು ನೋವು  ನಮ್ಮ ಹಿಂದಿನ ದಿನಗಳ trekking/hiking/biking ನ ಉಡುಗೊರೆ. ನಾನು ಸ್ಕೂಲ್ ಗೆ ಹೋಗುವಾಗ ನನ್ನ ನೋಟ್ ಪುಸ್ತಕಗಳು ಕಾಟು ಚಿತ್ತು ಇಲ್ಲದೆ ನೀಟಾಗಿತ್ತು, ಮಾತ್ರವಲ್ಲ ಬೇರೆಯವರಿಗೆ ಮಾದರಿಯಾಗಲಿ ಅಂತ ನನ್ನ ನೋಟ್ ಪುಸ್ತಕವನ್ನು / ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೋಟಿಸ್ ಬೋರ್ಡ್ ನಲ್ಲೂ ಹಾಕುತ್ತಿದ್ದರು ಆದರೆ ನಮ್ಮ ಟ್ರೆಕ್ಕಿಂಕ್ ಮುಂತಾದ ಸಾಹಸದ ಕಾರಣ ನನ್ನ ತಲೆ ತುಂಬ ಚಿತ್ತು ಕಾಟುಗಳಿವೆ. :-)
ಐದು ಆರು ವರ್ಷಗಳಿಗೊಮ್ಮೆ ನನಗೆ ತಲೆ ನೋವು ಬರುತ್ತೆ. ಇತ್ತೀಚಿಗೆ ಒಂದು ದಿನ ತಲೆ ನೋವು ಶುರುವಾಯಿತು. ಸುಮಾರು ದಿನಗಳಾಗಿದ್ದವು ತಲೆಗೆ ಎಣ್ಣೆ ಹಚ್ಚದೆ. ಎಣ್ಣೆ cupboard ನಿಂದ ಎದುರಿಗೆ ಸಿಕ್ಕ ಬಾಟಲಿನಿಂದ ಎಣ್ಣೆ ಹಚ್ಚಿಕೊಂಡೆ...ಯಾಕೋ ಜಿಡ್ಡು ಜಿಡ್ಡಾಗಿತ್ತು. ಎಣ್ಣೆ ಹಚ್ಚಿದ ಎರಡೆ ನಿಮಿಷಕ್ಕೆ ತಲೆ ನೋವು ವಾಸಿ. ಆದರೆ ತಲೆ ಸ್ನಾನ ಮಾಡಿದ ಮೇಲೂ ತಲೆಯೆಲ್ಲ ಜಿಡ್ಡು. ಶ್ರೀಕಾಂತ ಅಕ್ಕ ತರಹೇವಾರಿ ಹೂವಿನ ಎಲೆಗಳಿಂದ ತಲೆಗೆ ಹಚ್ಚುವ ಎಣ್ಣೆ ಮಾಡುತ್ತಾರೆ. ಬಹುಶಃ ಶ್ರೀಕಾಂತ ಹತ್ತಿರ ಕಳುಹಿಸಿರಬೇಕು ಮತ್ತು ಶ್ರೀಕಾಂತ ನನಗೆ ಹೇಳಲು ಮರೆತು, ಅದನ್ನು ಎಣ್ಣೆ ಕಪಾಟಿನಲ್ಲಿ ಇಟ್ಟಿರಬೇಕು ಅಂತ ನಾನು ಅಂದಾಜಿಸಿದೆ. ಶ್ರೀಕಾಂತ ತೀರ್ಥಹಳ್ಳಿಯಿಂದ ಫೋನ್ ಮಾಡಿದಾಗ ಕೇಳಿದೆ, ಯಾವ ಎಣ್ಣೆಯದು?? ತಲೆ ನೋವು ಮಾಯ...(ಫೋನ್ ಮಾಡಿದಾಗ ಬಹುಶಃ  ಪಕ್ಕದಲ್ಲೆ ಯಾರೋ ಇದ್ದಿರಬೇಕು ಇಲ್ಲದಿದ್ದರೆ ಶ್ರೀಕಾಂತ ’ನಿನಗೆ ತೆಲೆ ನೆ ಇಲ್ಲ ತಲೆ ನೋವು ಎಲ್ಲಿಂದ’ ಅಂತ ಕೇಳೋವ್ರು.)
ಅವರು ಅಯ್ಯೋ ಮಾರಾಯ್ತಿ ನೋಡ್ಲಿಕ್ಕಿಲ್ಲವಾ ಅದು ತ್ಯಾಂಪಣ್ಣನ ನೋವಿನ ಎಣ್ಣೆ ಅಂದರು. ಗೊತ್ತಾಗಲಿಕ್ಕೆ ಅದಕ್ಕೆ ಲೇಬಲ್ ಬೇರೆ ಇರಲಿಲ್ಲ. ತಲೆ ನೋವಿನ ಜತೆ ಸ್ವಲ್ಪ ಕೂದಲು ಒಂದಿಷ್ಟು ಉದುರಿ ಹೋಗಿದೆ :-)
ಮತ್ತೆ ವಾಸನೆಯಿಂದ ಗೊತ್ತಾಗಲ್ವಾ ಅಂತ ನಿಮ್ಮ ಪ್ರಶ್ನೆಗಳೇನಾದರೂ ಇದ್ರೆ ಮುಂದೆ ಓದಿ
ನಮ್ಮ ಅಡಿಗೆ ಮನೆ ಎದುರಿಗೆ ಶ್ರೀ ರಾಮ ದೇವಸ್ಥಾನ. ಭಕ್ತರು ಹೆಚ್ಚಿದ ಹಾಗೆ, ದೇವಸ್ಥಾನವೂ ಗಟ್ಟಿಯಾಗಿ ದೊಡ್ಡದಾಗಿದೆ. ನಿತ್ಯ ಹೋಮ -ಹವನ- ಭಜನೆ ಮುಂತಾದವು ನಡೆಯುತ್ತಿರುತ್ತದೆ. ನಾನು ತಲೆಗೆ ಎಣೆ ಹಚ್ಚಿದ ದಿನ ಸಂಕಷ್ಟಿ ಬೇರೆ. ಹೋಮದಲ್ಲಿ ಅಗರಬತ್ತಿಯೊಂದಿಗೆ ಅದರ ಪ್ಲಾಸ್ಟಿಕ್ ಕೂಡ ಸೇರಿ ಕೆಟ್ಟ ವಾಸನೆ. ಹೋಮ-ಅಗರಬತ್ತಿ, ಉರಿಯುವ ಎಣ್ಣೆ ವಾಸನೆ ಎಲ್ಲ ನನ್ನ ಅಡಿಗೆ ಮನೆಗೆ. ನಾನು ತಲೆಗೆ ಹಚ್ಚುವ ಎಣ್ಣೆಗಳ ಬಾಟಲಿ ಕೂಡ ಅಡಿಗೆ ಮನೆಯಲ್ಲೇ ಇವೆ. ಆದ್ದರಿಂದ ತಕ್ಷಣ ಯಾವುದರ ಸುವಾಸನೆ/ವಾಸನೆ ಇತ್ಯಾದಿ ಗೊತ್ತಾಗುವುದಿಲ್ಲ.
ಹೂಂ ಒಂದು ಸಲ ಹೋಗೆನಕಲ್ ಗೆ ಟ್ರಿಪ್ ಹೋಗಿದ್ವಿ  ಆಫಿಸ್ ಮಂದಿಯೆಲ್ಲ..ಅಲ್ಲಿ ಮೈ ಗೂ ಎಣ್ಣೆ ಹೊಟ್ಟೆಗೂ ಎಣ್ಣೆ ಹಾಕುವವರನ್ನು ನೋಡ್ದೆ.
ಇದಕ್ಕಿಂತ ಮುಂಚಿನ ಪೋಸ್ಟ್ : ’ಸಂಬಂಧಗಳು’ ಓದಿ ಮೂಡ್ ಹಾಳಾಗಿದವರಿಗೆ ಇದು ಸುಮ್ನೆ ಒಂದು ಲೈಟ್ ಪೋಸ್ಟ.

:-)

September 15, 2011

ಸಂಬಂಧಗಳು

’ಸು’ ಪರಿಚಯ ನನಗೆ social site ನಲ್ಲಿ ಆಗಿದ್ದು. ಆಗಿನ್ನು privacy settings ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಅಪ್ ಲೋಡ್ ಮಾಡಿದ ತೀರ್ಥಹಳ್ಳಿ ಚಿತ್ರಗಳನ್ನು ನೋಡಿ ಅವರ ಸಂಬಂಧಿಕರು ತೀರ್ಥಹಳ್ಳಿಯವರು ಅಂತ ಹೇಳಿ friendship request ಕಳಿಸಿದ್ದರು. ನನಗೆ ತೀರ್ಥಹಳ್ಳಿ / ಕೊಂಕಣಿಯವರು ಅಂದರೆ ವಿಶೇಷ ಆಸ್ಥೆ. ಇವರು ಕೊಂಕಣಿ. ಹುಟ್ಟಿ ಬೆಳೆದದ್ದೆಲ್ಲ ಕೇರಳದಲ್ಲಿ. ಪರಿಚಯ ಆದಮೇಲೆ ನಾವು ಮೈಲ್ ಐಡಿ ವಿನಿಮಯ ಮಾಡಿಕೊಂಡ್ವಿ. ಇಬ್ಬರೂ ನಮ್ಮ ನಮ್ಮ ಕುಟುಂಬದ ಚಿತ್ರಗಳನ್ನು ಕಳುಹಿಸಿ ನೋಡಿ ಆಯ್ತು. ಶ್ರೀಕಾಂತ್ ಗೂ ತೋರಿಸಿದಾಗ ’ಇಲ್ಲ ನನಗೆ ಇವರ ಪರಿಚಯ ಇಲ್ಲ ಅಂದ್ರು. ಅದೂ ಹೌದು ಯಾಕಂದ್ರೆ ಶ್ರೀಕಾಂತ ಅವರ ಪಿ ಯು ಮುಗಿದ ಕೂಡಲೆ ಊರು ಬಿಟ್ಟು ಧಾರವಾಡದಲ್ಲಿ ಹೋಸ್ಟಲ್ ನಲ್ಲಿದ್ದು ಅವರ ಕಲಿಕೆಯನ್ನು ಮುಂದುವರೆಸಿದ್ದರಿಂದ ಊರಿನ ಹೆಚ್ಚಿನ ಜನರ ಪರಿಚಯ ಅವರಿಗಿರಲಿಲ್ಲ. ನನ್ನ ಫ್ರೆಂಡ್ ಹೆಸರು ಇಲ್ಲಿ ’ಸು’ ಅಂತಷ್ಟೆ ಹಾಕುತ್ತೇನೆ. ಕ್ರಮೇಣ ಅವರ ಪತ್ನಿ ’ಪ್ರ’, ಅವರ ಮಕ್ಕಳು ಹೀಗೆ ಪರಿಚಯಬೆಳೆಯುತ್ತ ಹೋಯಿತು. ಅವರ ಪತ್ನೀ  ಅವರ ಬಿಸಿನೆಸ್ ಮ್ಯಾನೇಜ್ ಮಾಡ್ತಾ  ತುಂಬ ಟೂರ್  ಎಲ್ಲ ಮಾದುತ್ತಿದ್ದರು. ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದು ಎಲ್ಲ ಹೇಳಿದರು. ಮುಂದಿನ ಸಲ ಬಂದಾಗ ಖಂಡಿತ ನಮ್ಮಲ್ಲಿಗೆ ಬರಬೇಕೆಂದು ಹೇಳಿದೆ.
ನನ್ನ ತಮ್ಮ ತಂಗಿಯವರಿಗೋಸ್ಕರ ನನ್ನ chat   ಆನ್ ಇರುತ್ತೆ. ಅದರಲ್ಲಿ ಕೆಲ ಆಪ್ತರನ್ನಷ್ಟೆ ನಾನು ಸೇರಿಸಿಕೊಂಡಿದ್ದೇನೆ. ’ಸು’  ಜತೆ ಹಲವಾರು ಮೈಲ್ ವಿನಿಮಯ ಮಾಡಿದ್ದರಿಂದ ಅವರ ಹೆಸರು automatic ಆಗಿ ನನ್ನ chat  ನಲ್ಲಿ ತೋರಿಸುತ್ತಿತ್ತು. ಅವರ ಹೆಸರು chat list ನಲ್ಲಿಂದ ತೆಗೆಯಲು ನನಗೂ ಸೋಮಾರಿತನ. ನನಗೆ ಸುಮ್ಮನೆ ತಲೆ ಹರಟೆ chatter ಗಳು ಇಷ್ಟ ಆಗಲ್ಲ. ಮತ್ತು ನನ್ನ ಕೆಲಸದ ವೇಳೆ ಕಿರಿ ಕಿರಿ ಆದ್ರೂ ನಾನು ಸಹಿಸಲ್ಲ. ಇವರು ಮಧ್ಯ ಮಧ್ಯ chat ನಲ್ಲಿ ಬರೋರು. ಎರಡು ನಿಮಿಷ ಅವರ ಜತೆ chat ಮಾಡಿ, excuse ಕೇಳುತ್ತಿದ್ದೆ. ಅಪರೂಪ ಅವರ ಹೆಂಡತಿನೂ chat ನಲ್ಲಿ ಬಂದಾಗ ನಮ್ಮ ನಮ್ಮ ಸೆಲ್ ಫೋನ್ ನಂಬರ್ ಕೂಡ exchange ಮಾಡ್ಕೊಂಡಿದ್ವಿ. ಮಾತಾಡಿರಲಿಲ್ಲ. ಹೀಗೆ ಒಂದು ದಿನ ’ಸು’ chat ನಲ್ಲಿ ಬಂದಾಗ ನಾನು accounts ಮಾಡ್ತಾ ಇದ್ದೆ. ಆಮೇಲೆ chat ಮಾಡುವ ಈಗ ಬಿಸಿ, ಅಂದಿದ್ದಕ್ಕೆ ’ಏನಿಲ್ಲ ನಾಳೆ ನಮ್ಮದು 25 ನೇ wedding anniversary ಅಂದ್ರು. ಅದಕ್ಕೆ ನಾನು - ನಿಮಗಿಬ್ಬರಿಗೂ ಈಗಲೇ ವಿಶೆಸ್. ಇನ್ನೊಮ್ಮೆ chat ಮಾಡುವಾಗ ಹೇಗಾಯ್ತು function ಅಂತ ತಿಳಿಸಿ ಅಂದು ಬಿಟ್ಟು ಬೈ ಅಂದೆ. ಸೋಮಾವಾರ ಸ್ವಲ್ಪ ಹೊತ್ತು chaat ಮಾಡುವ ಅಂದ್ರು ಅವರು. ನಾನೂ ಹೂಂ ಅಂದೆ. ಅಷ್ಟರಲ್ಲಿ ಶ್ರೀಕಾಂತ ನಮ್ಮ system ನಲ್ಲಿ ಸ್ಕೈಪ್ ಅಳವಡಿಸಿದರಿಂದ ನಾನು ಮೈಲ್ ಚ್ಯಾಟ್ ನಲ್ಲಿರೋದು ನಿಲ್ಲಿಸಿಬಿಟ್ಟೆ. ಸ್ಕೈಪ್ ಹೆಚ್ಚು convenient ಅನ್ನಿಸ್ತು ಹೀಗೆ ಒಂದು ತಿಂಗಳ ನಂತರ ಸೋಶಲ್ ವೆಬ್ ಸೈಟ್ ನ private message ನಲ್ಲಿ common friend ಒಬ್ಬರು ಮೆಸೇಜ್ ಬಿಟ್ಟಿದ್ದರು ’ನಿನ್ನೆ ಸಂಜೆ ’ಸು’ ತೀರಿಕೊಂಡರು ಅಂತ. ನನಗಂತು ಕೆಟ್ಟ ಶಾಕ್. ಕೂಡಲೇ ಅವರು ನನಗೆ ’ಸೋಮವಾರ chat ನಲ್ಲಿ ಸಿಗುವ’ ಅಂದ ಮಾತು ನೆನಪಿಗೆ ಬಂದು ತುಂಬ ಕೆಟ್ಟದೆನಿಸಿತು. ಸುಮಾರು ಒಂದು ತಿಂಗಳೆ ಆಗಿತ್ತು ಅವರ ಜತೆ ಸಂಪರ್ಕ ತಪ್ಪಿ. 
ಮೈಲ್ ಗೆ ಹೋಗಿ - ನಾನು ಇನ್ನೊಮ್ಮೆ ನೋಡುವ ಅಂತ ಹಾಗೆ ಇಟ್ಟಿದ್ದ.-  ಅವರ 25 ನೇ ಮದುವೆ ವಾರ್ಷೀಕೋತ್ಸವದ ಎರಡು ಚಿತ್ರಗಳನ್ನು ತೆರೆದು ನೋಡಿದೆ.  ನಮ್ಮ system ಕೂಡ ಸ್ಲೋ ಆಗಿ ಫೋಟೊ ಎಲ್ಲ ತೆರೆಕೊಳ್ಳಲ್ಲಿಕ್ಕೆ ತುಂಬ ಸಮಯ ಹಿಡಿಸುತ್ತಿತ್ತು, ಅದಕ್ಕೆ ಈ ಉದಾಸೀನ.  ಫೊಟೊ ಜತೆಗೆ ಮೆಸೆಜ್ ಕೂಡ ಇತ್ತು ’ಅಂತೂ ನೀವು chat ಗೆ ಬರಲೇ ಇಲ್ಲ ಅಂತ’ಎಲ್ಲರೂ ಖುಶಿಯಾಗಿರುವ- ನಗುವ ಚಿತ್ರಗಳನ್ನುನೋಡಿ  ಖುಶಿ ದು:ಖ ಎರಡು ಆಯಿತು. ’ಪ್ರ’ ನಂಬರ್ ಇರೋದರಿಂದ ಫೋನ್ ಮಾಡುವ ಅಂದುಕೊಂಡೆ.ಧೈರ್ಯ ಬರಲಿಲ್ಲ ಏನಂತ ಮಾತಾಡಲಿ?? ಆ ಮೇಲೆ ಛೆ ಇದು ಸರಿಯಲ್ಲ. ಇಬ್ಬರೂ ಒಳ್ಳೆಯವರು. ಮತ್ತು ಆರು ತಿಂಗಳ ಪರಿಚಯ ಬೇರೆ. ಅವರ ಕುಟುಂಬದ ವಿಷಯಗಳನ್ನೆಲ್ಲ ಅಂದರೆ ಮಕ್ಕಳ ಓದು ಅವರ ಬಿಸಿನೆಸ್ ಬಗ್ಗೆ ಎಲ್ಲ ಶೇರ್ ಮಾಡಿಕೊಂಡಿದ್ದರು.
ಮರು ದಿನ ಅವರಿಗೆ ನನ್ನ ಡವಗುಟ್ಟುವ ಹೃದಯದಿಂದ ಫೋನ್ ಮಾಡಿದೆ. ಎರಡನೆ ರಿಂಗ್ ಗೆ ಸೆಲ್ ಫೋನ್ ಎತ್ತಿಕೊಂಡ್ರು. ತುಂಬ ಸಾರಿ ’ಪ್ರ’ ಏನು ಹೇಳಬೇಕು ತೊಚ್ತಾ ಇಲ್ಲ ಅಂದೆ. ಅದಕ್ಕೆ ಅವರು ’see what happened malathi' ನನಗ್ಯಾಕೋ ಅಳು ಒತ್ತರಿಸಿ ಬಂತು . ಅಳುತ್ತ ಹೇಳ್ದೆ ಈಗಷ್ಟೆ ನಿಮ್ಮ 25 ನೆ ಮದುವೆ ವಾರ್ಷಿಕೋತ್ಸವದ ಫೊಟೊ ನೋಡ್ದೆ. ಹೊಟ್ಟೆಯಲ್ಲೆಲ್ಲ ಕಿವಿಚಿದಂತಾಯ್ತು ಅಂದೆ. ಅದಕ್ಕೆ ಅವರು ’dont cry malathi. yes we did celebrate our 25th wedding, but relationship between us was not good. we were not even on talking terms. we had a celebration just to please my father -in-law. 
ಮುಂದೆ ಅವರು ಹೇಳಿದ್ದನ್ನು  ಕನ್ನಡದಲ್ಲೇ ಬರೀತೇನೆ. 
’ನಾನು ಬ್ಯಾಂಕ್ ನಲ್ಲಿ ಒಳ್ಳೆ ಕೆಲಸದಲ್ಲಿದ್ದೆ. ನಮ್ಮದು ಪೈಂಟ್ ಬಿಸಿನಸ್. ನನ್ನ ಬಿಸಿನೆಸ್ ಗೆ ಸಹಾಯ ಮಾಡು ಅಂತ ಕಿರಿ ಕಿರಿ ಮಾಡಿ ನನ್ನ ಕೆಲಸ ಬಿಡಿಸಿದರು. ನಾನು ಬಿಸಿನೆಸ್ ನಲ್ಲಿ involve ಆದ ಹಾಗೆ ಅವರು ಮನೆಯಲ್ಲಿ ಟಿ.ವಿ ಎದುರಿಗೆ ಕೂತುಕೊಂಡು ಇರುತ್ತ್ತಿದ್ದರು. ಸಂಜೆ ಆಗ್ತಾ ಕುಡಿತ ಶುರು. ಈಗಂತು ಇಂಟರ್ ನೆಟ್ ಬಂದ ಮೇಲೆ ಯಾರ್ಯದೋ ಜತೆ chat ಅಂತ ಕೂತುಕೊಳ್ಳುವವರು.  ನಿನ್ನೆ ನಾನು ಅಫಿಸ್ ಕೆಲ್ಸದ ಮೇಲೆ ಬೇರೆ ಹಳ್ಳಿಗೆ ಹೋಗಿದ್ದೆ. ಬೆಳಿಗ್ಗಿನಿಂದ ಹುಷಾರು ಇರಲಿಲ್ಲ ’ಸು’ ಗೆ. ನನ್ನ ಬಳಿ ಸ್ಕೂಟರ್ ಇದೆ. ನನ್ನದು ಅದರಲ್ಲೆ ತಿರುಗಾಟ. ನನ್ನ ಮಾವನವರಿಗೆ blood cancer. ಆದರೂ ದೇಶದ ಬಗ್ಗೆ ಅಭಿಮಾನ. ಒಂದು ಸಂಘ ಕಟ್ಟಿಕೊಂಡಿದ್ದಾರೆ. ಬೇರೆ ಬೇರೆ ಕಡೆ ಹೋಗಿ ಭಾಷಣ ಎಲ್ಲ ಮಾಡಿ ಬರುತ್ತಾರೆ. ಅಷ್ಟು ಹುಷಾರಿಲ್ಲದಿದ್ದರು ಮೊನ್ನೆ ಶ್ರೀಲಂಕಾ ಗೆ ಹೋಗಿ ಬಂದರು. ನನಗೆ ಅವರನ್ನು ಕಂಡರೆ ತುಂಬ ಅಭಿಮಾನ. ಅವರಿಗೂ ನಾನಂದರೆ ಅಷ್ಟೆ ಪ್ರೀತಿ. ಮತ್ತೆ ನನಗೂ ’ಸು’ ಗೂ ಚಿಕ್ಕಂದಿನಿಂದಲೇ ಪರಿಚಯ. ಆಮೇಲೆ ಎರಡು ಕುಟುಂಬದ ಆಶಯದ ಮೇರೆಗೆ ಮದುವೆ. ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ಮುಂಬೈ ನಲ್ಲಿ ಕೆಲಸಕ್ಕೆ ಸೇರಿದಾನೆ. ಇನ್ನೊಬ್ಬ ಈಗ ಎಂಟನೆ ತರಗತಿ. ’ಸು’ ಒಂದು ಕಡ್ಡಿ ಅತ್ತಿಂದ ಇತ್ತ ಇಡುತ್ತಿರಲ್ಲಿಲ್ಲ. ಗೊತ್ತು ಸತ್ತವರ ಬಗ್ಗೆ ಕೆಟ್ಟದ್ದು ಮಾತನಾಡಬಾರದು. ಆದರೆ ನಿನಗ್ಯಾಕೆ ಇದನ್ನೆಲ್ಲ ಹೇಳಿತೀನಿ ಅಂದ್ರೆ ಯಾಕೋ ’ಸು’ ಗೆ ನಿಮ್ಮ ಸಂಸ್ಥೆ, ನಿಮ್ಮ ಕೆಲಸದ ಬಗ್ಗೆ ಎಲ್ಲ ತುಂಬ ಅಭಿಮಾನ, ನಿಮ್ಮ ಬಗ್ಗೆ ಮಾತಾಡ್ತಾ ಇದ್ದರು. ನಿಮ್ಮಿಬ್ಬರ chat ಮೆಸೆಜ್ ಕೂಡ ತೋರಿಸ್ತಿದ್ರು. ನೀವು ’ಸು’ ಗೆ ಸೊಪ್ಪು ಹಾಕುತ್ತಿರಲಿಲ್ಲ ಅದೇ ಸಮಾಧಾನ. ಉಳಿದವರ ಹತ್ತಿರ ನನ್ನ ಬಗ್ಗೆ ಎಲ್ಲ ಸುಳ್ಳು ಸುಳ್ಳು ಆರೋಪ. ತಲೆ ಕೆಟ್ಟು ಹೋಗುತ್ತಿತ್ತು. ನಿಮ್ಮ ಒಂದು ಮೆಸೇಜ್ ನನಗೆ ಯಾವತ್ತೂ ಖುಶಿ ಕೊಡುತ್ತಿತ್ತು..ಯವ್ದು ಗೊತ್ತಾ?? ’
'su' how come u r always online? i think u should help your wife a bit. ಹೌದು ಇಡಿ ದಿನ ನಾನು ಕೆಲಸ ಮಾಡಿ ಬಂದಾಗ ಅವರು ಕಂಪ್ಯೂಟರ್ ಅಥವಾ ಟಿವಿ ಮುಂದೆ ಕೂತುಕೊಂಡು ಮನೆಯ ಎದುರಿನ ದೀಪ ಕೂಡ ಹಚ್ಚದೆ ಇರುತ್ತಿದ್ದರಿಂದ ನನಗೂ ಸಿಟ್ಟು ಬರುತ್ತಿತ್ತು . ಆಮೇಲೆ ಅಡುಗೆ ಮಾಡಬೇಕು. ಮಾವನವರಿಗೆ ಪಥ್ಯದ ಅಡುಗೆ. ಮತ್ತೆ ನನ್ನ ಅಡುಗೆಯ ಬಗ್ಗೆ ಕೊಂಕು. ಇದರ ಮಧ್ಯೆ ನಮ್ಮ ಕಂಪನಿ ಬೇರೆ ಲಾಸ್ ನಲ್ಲಿ ನಡ್ದೀತಿದೆ. ನಿನ್ನೆ ಬೆಳಿಗ್ಗೆ ನಾನು ಮನೆಯಿಂದ ಸಾಲದ ಮೊತ್ತ ಹೆಚ್ಚು ಮಾಡಿಸಲು ಬ್ಯಾಂಕ್ ಮ್ಯಾನೆಜರ್ ಭೇಟಿ ಮಾಡಲು ಹೊರಟಾಗ ’ಸು’ ಗೆ ಮೈ ಯಲ್ಲಿ ಹುಷಾರು ಇರಲಿಲ್ಲ. ನನ್ನ ತಮ್ಮನಿಗೆ ಹೇಳಿದ್ದೆ ಅವರನ್ನು ಡಾಕ್ಟರ್ ಬಳಿ ಒಯ್ಯಲು. ಸಂಜೆ ಏನಾದರೂ ಔಷಧ ಬೇಕಾ ಅಂತ ಅವರ ಸೆಲ್ ಹಾಗೂ ಲ್ಯಾಂಡ್ ಲೈನ್ ಎರಡಕ್ಕೂ ಫೋನ್ ಮಾಡಿದಾಗ no response. ನಮ್ಮ ಮನೆ ಪೇಟೆಯಿಂದ ತುಂಬ ದೂರ. (ತುಂಬ grand ಆಗಿದೆ ಅವರ ಮನೆ ಮನೆ ಸುತ್ತಲೂ ಸುಂದರ ಹೂ ದೋಟ). ಮತ್ತೆ ’ಸು’ ಗೇ ಕಿವಿಗೆ earphone ಹಾಕ್ಕೊಂಡು ಹಾಡು ಕೇಳುವ ಅಭ್ಯಾಸ ಇದೆ. ಮನಸ್ಸಲ್ಲೆ ಬೈ ಕೊಳ್ತಾ ಮನೆಗೆ ಹೋದೆ. ಮನೆಯಲ್ಲಿ ಬೆಳಕೇ ಇರಲಿಲ್ಲ. ಯಾಕೋ ಹೆದರಿಕೆ ಆಯ್ತು. ಮನೆ ಸೆಲ್ಫ್ ಲಾಕ್ system ಆದರಿಂದ ಚಿಲ್ಕ ಹಾಕುವ ಅಭ್ಯಾಸ ಇಲ್ಲ. ನನ್ನ ಬೀಗದ ಕೈನಿಂದ ಬಾಗಿಲು ತೆಗೆದು ಲೈಟ್ ಹಾಕ್ದೆ. ’ಸು’ ಅಂದಾಗ ಯಾವುದೇ ಪ್ರತಿಕ್ರಿಯೆ ಯಿಲ್ಲ. ಕಂಪ್ಯೂಟರ್ ಆನ್ ಇತ್ತು ಹಾಗೂ ಅವರು ಕುಡಿತದ ಕುರುಹು ಬಾಟಲಿ ಗ್ಲಾಸ್ ಅಲ್ಲೇ ಟೇಬಲ್ ಮೇಲಿತ್ತು. ಬಹುಶ: ಬೆಳಿಗ್ಗೆ ನಾನು ಮನೆಯಿಂದ ಹೊರ ಹೊರಟ ಕೂಡಲೇ ಕುಡಿಯಲು ಶುರು ಮಾಡಿರಬೇಕು. ಬಾತ್ ರೂಮ್ ಚಿಲಕ ಹಾಕಿತ್ತು. ಬಾಗಿಲು ತುಂಬ ಹೊತ್ತು ಬಡಿದೆ. ಏನು ಪ್ರತಿಕ್ರಿಯೆ ಯಿಲ್ಲ. ಬೇಗ ಹಿಂಭಾಗಕ್ಕೆ ಹೋಗಿ factory ಕೆಲಸದವರಿಗೆ ಹೇಳಿ ಬಂದೆ. ಬಾತ್ ರೂಮ್ ಹೇಗಿತ್ತೆಂದರೆ ಅದಕ್ಕೆ ಕಿಟಕಿ ಇರಲಿಲ್ಲ. ತುಂಬ ಮೇಲಕ್ಕೆ ಒಂದು ventilator ಅಷ್ಟೆ. ಬಾಗಿಲು ಒಡೆದು ಒಳಗೆ ಹೋಗ ಬೇಕಾಯಿತು. ಅವರು ಬಾತ್ ರುಂ ನಲ್ಲೆ massive heart attack ಆಗಿ ಹೋಗಿ ಬಿಟ್ಟಿದ್ದರು. ಡಾಕ್ಟರ್ ಪ್ರಕಾರ ಮಧ್ಯಾಹ್ನ ವೆ ಇದು ಸಂಭವಿಸಿರಬಹುದು ಅಂತ......"I did not feel anything malathi, i did not even cry ಅಂದಾಗ ನನಗೆ ಮೈ ನಡುಕ. 25 ವರ್ಷ ಒಟ್ಟಿಗೆ ಇದ್ದು ಹೀಗೆ ಅಂದಾಗ ಅವರ ಮಧ್ಯ ಸಂಬಂಧ ಎಷ್ಟು ಹಾಳಾಗಿರಬಹುದು??
ನನಗಂತೂ ಎಷ್ಟು ಶಾಕ್ ಆಯಿತು ಎಂದರೆ ಯಾವು ಮಾತೂ ಹೊರಡಲಿಲ್ಲ.  ’ಸು’ ಅವರ ತೋಟಗಾರಿಕೆ, ಹಳೆ ಹಿಂದಿ ಹಾಡುಗಳ ಪ್ರೀತಿ, ಅವರು ನನ್ನನ್ನು ಕೆಲವೊಮ್ಮೆ ನಗಿಸುತ್ತಿದ್ದುದ್ದು ಅಷ್ಟು ಮಾತ್ರ ಒಂದು ಸಲ flash ಆಗಿ ಹೋಯಿತು. ಇಬ್ಬರನ್ನೂ judge ಮಾಡಕ್ಕೆ ಹೋಗಲ್ಲ. ಆದರೆ ಸಂಬಂಧಗಳು ಸರಿಪಡಿಸಲಾಗದಷ್ಟು ಕೊಳೆತು ಹೋಗದ ಹಾಗೆ ಇಡಲು ನಾವು ಏನು ಮಾಡಬಹುದು??
ಎರಡು ವರ್ಷಗಳ ನಂತರ ನಿನ್ನೆ ’ಪ್ರ’ ಮೈಲ್ ಬಂದಿತ್ತು. ಅವರ ಕಂಪ್ಯುಟರ್ crash ಆಗಿದ್ದು, ಮೊಬೈಲ್ ಕಳಕೊಂಡಿದ್ದು, ಒಂದು ಹಳೆ ಡೈರಿಯಲ್ಲಿ ನಮೂದಿಸಿದ ನನ್ನ ಇ-ಮೈಲ್ ಸಿಕ್ಕಿದ್ದು ಬರೆದಿದ್ದರು. ಹಿರಿ ಮಗನಿಗೆ ಮಲಯಾಳಿ ಹುಡುಗಿ ಜತೆ ಮದುವೆ, ತೀರ ಇತ್ತೀಚಿಗೆ ಮಾವ ತೀರಿಕೊಂಡಿದ್ದು, ಬಿಸಿನಿಸ್ ಒಂದು steady ರೂಪಕ್ಕೆ ಬಂದಿರುವುದು ಎಲ್ಲ ಬರೆದಿದ್ದರು.ಹಳೇದು ಎಲ್ಲ ಜ್ಝಾಪಕಕ್ಕೆ ಬಂತು, ಹಾಗೆ ಇಲ್ಲಿ ಬ್ಲಾಗಿಸಿದೆ.
(ಅವರಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ ವಾದರೂ ಅವರನ್ನು ಕೇಳಿಯೇ ಇಲ್ಲಿ ಬರೆದಿದ್ದೇನೆ)
:-(

September 11, 2011

ಹೆಸರಲ್ಲೇನಿದೆ?


ಒಂದು ಹಳೆ ಪೋಸ್ಟ್ ಹೊಸ ಸೇರ್ಪಡೆಯೊಂದಿಗೆ

ನಾಮಾವಳಿ

ನಾನು ಹುಟ್ಟೋ ಮುಂಚೆ, ಅಮ್ಮನಿಗೆ ಗಂಡು ಮಗು ಅಂತ ಖಾತ್ರಿಯಿತ್ತಂತೆ. ಏಳನೇ ತಿಂಗಳಲ್ಲಿ ಕನಸಲ್ಲಿ ಪುಟ್ಟ ಬಾಲಕೃಷ್ಣ ದನ ಕರು ಗಳೊಂದಿಗೆ ನಿಂತು ಕೊಳಲು ಬಾರಿಸುವುದನ್ನು ನೋಡಿದ್ದರಂತೆ. ಹಾಗೇ ಹೊಟ್ಟೆಯ ಗಾತ್ರ ನೋಡಿ ಮನೆಯಲ್ಲಿರುವ ಹಿರಿಯರೆಲ್ಲ ಗಂಡು ಮಗುವೆ ಹುಟ್ಟುವುದೆಂದು ಹೇಳಿದ್ದರಂತೆ. ಅದರಂತೆ ಅಮ್ಮ ಹುಟ್ಟಲಿರುವ ಮಗನಿಗೆ ’ಮಧುಸೂಧನ, ಕೃಷ್ಣಾನಂದ ಎಂದು ನಾಮಕರಣ ಮಾಡುವ ಕನಸನ್ನು ಇಟ್ಟುಕೊಂಡಿದ್ದಳು.

ಹೊರಗಡೆ ದೀಪಾವಳಿ ಪಟಾಕಿಯ ಸದ್ದಿನೊಂದಿಗೆ ನನ್ನ ಜನನ. ನೋಡಲು ಶ್ಯಾಮಲ ವರ್ಣವಾಗಿದ್ದರು, ಬಾಲಕೃಷ್ಣ ಆಗಿರದೇ, ನಾನು ಕೃಷ್ಣೆಯಾಗಿದ್ದೆ.ಅಮ್ಮನಿಗೆ ಎಷ್ಟು ಗಾಬರಿಯಾಯ್ತೆಂದರೆ..’ಇದು ನನ್ನ ಮಗುವಲ್ಲ. ನನಗೆ ಗಂಡು ಮಗು ಹುಟ್ಟಿರುವುದು ಅಂದು, ಬೇರೆಯವರ ಮಗು ಅಂತ ನನ್ನ ಮುಟ್ಟಲೇ ಇಲ್ಲ. ಸಧ್ಯ ನನ್ನ ಅದೃಷ್ಟ (?)ನರ್ಸ್ ಸಿಟ್ಟು ಗೊಂಡು ಇಲ್ಲಿ ಇವತ್ತು ಹುಟ್ಟಿದ್ದು ಮೂವರೂ ಹೆಣ್ಣು,ನಿಮ್ಮದು ಮೂರನೇದು ಅಂದ್ರಂತೆ,ಇಲ್ಲದಿದ್ದರೆ ನನ್ನನ್ನು exchange ಮಾಡ್ತಿದ್ದರೇನೋ? . ಹಾಲು ಉಣಿಸುವ ಅನಿವಾರ್ಯವಾದಾಗ ನನ್ನನ್ನ ಬಳಿಗೆ ಕರೆದುಕೊಂಡ್ರಂತೆ.

ನನ್ನ ನಾಮಕರಣಕ್ಕೆ , ಕುಟುಂಬದ ಮೊದಲ ಹೆಣ್ಣು ಮಗು ಅಂತ (ನನ್ನ ದೊಡ್ಡಪ್ಪನಿಗೆ ಆಗಲೇ ಮೂರು ಗಂಡು ಮಕ್ಕಳು ಆಗಿದ್ದವು) ಗೋವೆಯಲ್ಲಿರುವ ನಮ್ಮ ಕುಲದೇವಸ್ಥಾಕ್ಕೆ ಒಯ್ದು ಹೆಸರಿಡುವುದೆಂದು ತಿರ್ಮಾನಿಸಿದರು. ನನ್ನ horro(r)scope ನಕ್ಷತ್ರದ ಗುಣಾಕಾರ ಭಾಗಾಕಾರ ಮಾಡಿ ’ಮ’ ದಿಂದ ಶುರುವಾಗುವ ಹೆಸರಿಡಬೇಕೆಂದು...ನಮ್ಮ ಕುಲದೇವತೆಯಾದ ’ಮಹಾಲಸಾ ನಾರಾಯಣಿ’ ಹೆಸರಿಟ್ಟರಂತೆ. ಆದರೆ ಮುಂಬಯಿಯಲ್ಲಿ, ಅದೂ ಶಾಲೆಗೆ ಆ ಹೆಸರು ಬೇಡವೆಂದು ಪುಟ್ಟದಾಗಿ ’ಮಾಲತಿ’ ಯಂತ ಹೆಸರು ಪುರೋಹಿತರೇ ಸೂಚಿಸಿದರು. ನನ್ನ ಅಜ್ಜ ಅದಕ್ಕೆ ಮೋಹಿನಿ ಸೇರಿಸಿದರು. ’ಮಾಲತಿ-ಮೋಹಿನಿ’ ಹೆಸರು ನನ್ನದಾಯಿತು. ಶಾಲೆಗೆ ಮಾಲತಿ ಹೆಸರು ನೋಂದಾಯಿಸಲಾಯಿತು. ಯಾಕೆ ಅಂದ್ರೆ ಮೋಹಿನಿಯಂದ್ರೆ ಹೆಣ್ಣು ಭೂತ/ದೆವ್ವವಂತೆ.

ಸರಿ, ಮದುವೆ ಆಗಿ ಕೂಡುಕುಟುಂಬಕ್ಕೆ ಬಂದೆ. ಅಲ್ಲಿ ನೋಡಿದ್ರೆ ಆಗಲೇ ನಾಲ್ಕು ಮಾಲತಿಯರು ಇದ್ರು. ಅವರನ್ನು distinguish ಮಾಡೋದು..ದೊಡ್ಡ ** ಮಾಲತಿ, ಮೆಳ್ಳೆ ಗಣ್ಣಿನ ಮಾಲತಿ, ಹೆಬ್ರಿ ಮಾಲತಿ, ಉದ್ದ ಮಾಲತಿ...ಸಧ್ಯ ನನಗೆ ಮಾತ್ರ ಶ್ರೀಕಾಂತ್ ನ ಮಾಲತಿ ಅಂತಿದ್ರು. ಆದರೆ ಅತ್ತೆಯವರು ನನ್ನನ್ನು special ಹೆಸರಿನಿಂದ ಕರೆಯುತ್ತಿದ್ದರು. ನಂದೀಪಾ ಅಂತ. ಒಟ್ಟು ನನ್ನನ್ನು ಮಲ್ಲು, ಮಾಲಿ, ಮಾಂಚು, ಮಲ್ಲಿಕಾಕಾ, ಮಾಲತಿಯಕ್ಕ ಅಂತೆಲ್ಲ ಕರೆಯುವವರು ಇದ್ದಾರೆ.

ಮದುವೆಯಾದ ಹೊಸತರಲ್ಲಿ ಊರ ದೇವಳಕ್ಕೆ ಹೋದಾಗ, ಇಬ್ಬರು ಮಹಿಳೆಯರು ನನ್ನ ಬಳಿಗೆ ಬಂದು, ಅದರಲ್ಲಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳಿಗೆ ನನ್ನನ್ನು ಪರಿಚಯಿಸುತ್ತ ’ಇವರು ನಮ್ಮ ರವೀಂದ್ರಣ್ಣನ ಹೆಂಡತಿ ಅಂತ ಹೇಳಿದ್ರು. ನನಗಂತೂ ಗಾಬರಿ. ನಾನು ’ಅಲ್ಲ, ಅಲ್ಲ ನಾನು ಶ್ರೀಕಾಂತ್ ಶೆಣೈ ಹೆಂಡತಿ’ ಅಂದೆ. ಅದಕ್ಕೆ ಅವರು ಗಟ್ಟಿಯಾಗಿ ನಕ್ಕು, ’ ನಿನ್ನ ಶ್ರೀಕಾಂತ್ ನನ್ನು ನಾವು ರವೀಂದ್ರ ಅಂತ ಕರೆಯುವುದು” ಅಂದ್ರು. ಶ್ರೀಕಾಂತ್ ತಾಯಿ (ನನ್ನ ಅತ್ತೆ) ತವರು ಮನೆಯಲ್ಲಿ ಅವರನ್ನು ರವೀಂದ್ರ ಅಂತಲೇ ಸಂಭೋಧಿಸುವುದಂತೆ. ಸಂಜೆ ಅವರು ಮನೆಗೆ ಬಂದ ಮೇಲೆ,ಅವರಿಗೆ ಇನ್ನೂ ಯಾವ ಯಾವ ಹೆಸರಿದೆ ಹೇಳಿಬಿಡಿ ಅಂದೆ. ಶಾಲಾ ಸ್ನೇಹಿತರು ’ಕಾಟಿ’ ಅಂತ, ಅವರ ತಂದೆ (ನನ್ನ ಮಾವನವರು) ಕಂಠಿ ಎಂದೂ, ಕರೆಯುತ್ತಾರೆಂದು ತಿಳಿಯಿತು. :-)

ನನ್ನ ತಂಗಿ ಇರುವುದು ಅಮೇರಿಕದಲ್ಲಿ. ಅವಳಿಗೆ ಎರಡನೆ ಮಗು ಹುಟ್ಟುವಾಗಲೂ ಸ್ವಲ್ಪ ಈ ತರಹನೇ ಆಯ್ತು. ಅಲ್ಲಿ ಭ್ರೂಣ ಪರೀಕ್ಷೆ ಮಾಡಿ ಮಗುವಿನ ಲಿಂಗದ ಬಗ್ಗೆ ಹೇಳಿ ಬಿಡುತ್ತಾರೆ. ಆದರೆ ಅವಳ ಮಗುವಿನ ಪೊಸಿಷನ್ ಹಾಗೂ ಎರಡೂ ಕೈಗಳು ಅಡ್ಡ ಇದ್ದುದರಿಂದ ಎರಡು ಸ್ಕ್ಯಾನಿಂಗ್ ನಲ್ಲೂ ಮಗುವಿನ ಲಿಂಗದ ಬಗ್ಗೆ ಪತ್ತೆ ಹೆಚ್ಚಲಿಲ್ಲ. ಅಮ್ಮ ಜ್ಯೋತಿಷಿ ಹತ್ತಿರ ಹೋದಾಗ ಅವರು ’ಗಂಡು’ ಮಗುವೇ ಹುಟ್ಟುವುದೆಂದು ಭವಿಷ್ಯ ಹೇಳಿದ್ದರು. ನನ್ನ ತಂಗಿಗೂ ಗಂಡು ಹೆರುವ ಆಸೆ ಇತ್ತೇನೋ? ನನಗೆ ಗಂಡು ಮಗುವಿನ ಹೆಸರು ಮೈಲ್ ಮಾಡಲಿಕ್ಕೆ ಹೇಳಿದ್ದಳು. ನಾನು ಶ್ರೇಯಸ್ (Shreyas) ಅನ್ನುವ ಹೆಸರು ಸೆಲೆಕ್ಟ್ ಮಾಡಿದ್ದೆ. ಎಲ್ಲರಿಗೂ ಇಷ್ಟವಾಗಿತ್ತು. ಅಲ್ಲಿ ಮಗು ಹುಟ್ಟಿದ ಕೂಡಲೇ ನನಗೆ ಫೋನ್ ಮಾಡಿದ್ದಾಗ..’ಈಗ ಹೆಣ್ಣು ಮಗು ಹುಟ್ಟಿದೆಯಲ್ಲವ’, ’ಏನು ಮಾಡುವುದು’ ಅಂದಾಗ..ಅದರಲ್ಲೇನು ಮಹಾ, ’ಸ’ ತೆಗೆದು ಬಿಟ್ಟು ಶ್ರೇಯಾ (Shreya) ಮಾಡುವ ಅಂದೆ. ಈ ವರ್ಷ ಶ್ರೇಯಳ ಐದನೇ ಹುಟ್ಟಿದ ಹಬ್ಬದ ಸಡಗರ. ನಾನು ಇದನ್ನು ಪೋಸ್ಟ್ ಮಾಡುವಾಗ ಶ್ರೇಯಾ ಅಲ್ಲಿ ಹುಟ್ಟು ಹಬ್ಬ ಆಚರಿಸ್ತಾ ಇದ್ದಾಳೆ.

ಇತ್ತೀಚಿಗೆ ಕೆ.ಟಿ. ಗಟ್ಟಿ ಯವರ ಪುಸ್ತಕ ’ನಿನ್ನೆ, ಇಂದು,ನಾಳೆ’ ಬಿಡುಗಡೆ ಆಯ್ತು. ಸಮಾರಂಭಕ್ಕೆ ನಾನು ಹೋಗಿದ್ದೆ. ಕೆ.ಟಿ. ಗಟ್ಟಿ ಯವರ ಮತ್ತು ನಮ್ಮ ಕುಟುಂಬದ ಪರಿಚಯ ತುಂಬ ಹಳೇಯದು. ನಾನು ಹೋಗುವಾಗಲೇ ಸಭೆ ಯೆಲ್ಲ ಕಿಕ್ಕಿರಿದು ತುಂಬಿತ್ತು. ಕೂರಲು ಜಾಗ ಇರಲಿಲ್ಲ. ನಾನು, ಅವರ ಮಗ ಸತ್ಯಜಿತ್, ಹೊರಗಡೆ ನಿಂತಿದ್ದೆವು. ಆಗ ಇಬ್ಬರು ಹೆಣ್ಣುಮಕ್ಕಳು ಹೊರಗೆ ಬಂದರು. ಸತ್ಯಜಿತ್ ಅವರನ್ನು ಬಳಿಗೆ ಕರೆದು, apart from the fact that u three are ladies there is one more thing common among you' ಅಂತ ಹೇಳಿದರು. ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಏನೂ ಹೊಳೆಯಲಿಲ್ಲ. ಅಮೇಲೆ ಅವರೇ ನಗುತ್ತ malathi meet malathi and malathi ಅಂದು ಬಿಟ್ಟರು. ನಮ್ಮ ಮೂವರ ಹೆಸರು ಮಾಲತಿ ಅಂತ ಕೇಳಿ ಖುಶಿಯಾಯ್ತು. ಅವರಿಬ್ಬರು ಜರ್ನಲಿಸ್ಟ್.

ಕಾಕತಾಳೀಯವೆಂಬಂತೆ ಪುಸ್ತಕದಲ್ಲಿ ಕಂಡು ಬರುವ ಒಂದು ಪಾತ್ರದ ಹೆಸರು ’ಮಾಲತಿ’.
ನಾಲ್ಕು ತಿಂಗಳ ಹಿಂದೆ ನಿಹಾರಿಕಳ ಜತೆ RV Institute of Management ಗೆ ಹೋಗಿದ್ದೆ. ಅವಳ  IIT -Madras entrance test ಗೆ ಸೆಂಟರ್ ಅಲ್ಲಿತ್ತು. ಮೂರು ಗಂಟೆಯ ಪರೀಕ್ಷೆ. ಪರೀಕ್ಷೆ ಆದಮೇಲೆ ನಾವು ಜಯನಗರ 4ಬ್ಲಾಕ್ ಗೆ ಶಾಪಿಂಗ್ ಹೋಗುವ ಪ್ಲಾನ್ ಹಾಕ್ಕೊಂಡಿದ್ವಿ. ಹಾಗಾಗಿ ಅವಳು ಕ್ಲಾಸ್ ಗೆ ಹೋದ ಮೇಲೆ ನಾನು ಅಲ್ಲೇ ಮೆಟ್ಟಿಲ ಮೇಲೆ ಓದುತ್ತ ಕೂತುಕೊಂಡಿದ್ದೆ. ಆಗ ಅಲ್ಲಿ ಬಂದ ಒಬ್ಬ ಮಹಿಳೆ ’ಕೊಂಕಣಿ’ ಅಂತ ವಿಚಾರಿಸಿದರು. ನನ್ನ ಕರೀಮಣಿ ಸರ ನೋಡಿ ಐಡೆಂಟಿಫೈ ಮಾಡಿದ್ರು. ನಾನು ’ಯಸ್’ ಅಂದೆ. ಹೆಸರು ಅಂತ ಕೇಳಿದ್ರು, ನಾನು- ಮಾಲತಿ ಶೆಣೈ ಅಂದೆ...ಅದಕ್ಕೆ ಅವರು ಜೋರಾಗಿ ನಕ್ಕು ನಾನು ಮಾಲತಿ ನಾಯಕ್ ಅಂದ್ರು. ಅವರು ಕೇರಳದಿಂದ ಮಗಳನ್ನು ಕರೆದುಕೊಂಡು ಪರೀಕ್ಷೆಗೆ ಬಂದಿದ್ರು. ಮಾಲತಿ ನಾಯಕ್ ವಜ್ರದ ಬಿಸಿನೆಸ್ ಮಾಡ್ತಾರಂತೆ. ಅವರ ಗಂಡ ಕೇರಳದಲ್ಲಿ ಬಂಗಾರದ ಶೋ ರೂಮ್ ಒಂದು ನಡೆಸುತ್ತಾರೆ, ಅದರಲ್ಲಿ  ವಜ್ರದ section ನ ಸಂಪೂರ್ಣ ಜವಾಬ್ದಾರಿ ಇವರದಂತೆ. ನೋಡಲು ತುಂಬ smart ಆಗಿದ್ರು. ನಾನಂತು fully impressed.
ನಾನು ಬ್ಲಾಗ್ ಶುರು ಮಾಡಿದ ಮೇಲೆ ನನ್ನನ್ನು ಎಲ್ಲರು ಎಸ್. ಮಾಲತಿ ಅಂತ ಕನ್ ಫ್ಯುಸ್ (ತಲೆ ಕೆರೆದು ಕೆರೆದು ಗಾಯ ಆಯ್ತು confuse ಗೆ ಕನ್ನಡ ಪದ ಹೋಳೀತಿಲ್ಲ) ಮಾಡಿಕೊಂಡು ದೊಡ್ಡ ದೊಡ್ಡ emotional ಮೈಲ್ ಬರೀತಿದ್ರು. ನನ್ನ ಇ ಮೈಲ್ ಎಡ್ರಸ್ ನಾನು ಬ್ಲಾಗ್ ನಲ್ಲಿ ನಮೂದಿಸಿದ್ದೇನೆ. ಅವರ ಕವನ ಕತೆ ಎಲ್ಲ ಕಳಿಸೋವ್ರು. ನನಗೆ ನಿಜಕ್ಕೂ ಆಶ್ಚರ್ಯ ಆಗುತ್ತಿತ್ತು. ಕೆಲವು ಕವನಗಳ ತಲೆ ಬುಡ ಅರ್ಥ ಆಗುತ್ತಿರಲಿಲ್ಲ. ಡೌಬ್ಟ್ ಬಂದು ನನಗೆ ಯಾಕೆ ಕಳುಹಿಸಿದ್ದೀರಾ? high funda ಕನ್ನಡ ನನಗೆ ಅರ್ಥ ಅಗುವುದಿಲ್ಲ ಅಂತ ಕಳುಹಿಸಿದ ಮೇಲೆ ಅವರು ’ನೀವು ಕವಿಯತ್ರಿ/ dramatist ಎಸ್. ಮಾಲತಿ ಅಲ್ಲವಾ??ಅಂತ ಮರು ಮೈಲ್ ಕಳುಹಿಸಿದ್ರು. ಹಾಹಾಹಾ...  ಎಸ್. ಮಾಲತಿ ಯಾರು ಅಂತ  ತೀರ ಇತ್ತೀಚಿಗೆ ಗೊತ್ತಾಯಿತು.
ಮೊನ್ನೆ ನಿಹಾರಿಕಾ, ಅವಳ ಕಾಲೇಜು ಸ್ನೇಹಿತೆಗೆ ಯಾವುದೋ ವಿಷಯಕ್ಕೆ (ಅವರಿಬ್ಬರು ಹೆಗ್ಗೋಡಿನ ನಾಟಕದ ಕಮ್ಮಟದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.... ಬಹುಶಃ ಆ ಸಂದರ್ಭ) ’ಹೇ ನನ್ನ ಅಮ್ಮ ಬ್ಲಾಗ್ ಬರೀತಾರೆ’ ಅಂದಳಂತೆ. ಅದಕ್ಕೆ ಅವಳು ’ಹೌದಾ? ಏನು ಹೆಸರು’ ಅಂತ ಕೇಳಿದ್ದಕ್ಕೆ ಇವಳು ಮಾಲತಿ ಎಸ್. ಅಂದಿದ್ದಾಳೆ. ಅದಕ್ಕೆ ಆ ಹುಡುಗಿ ಗಟ್ಟಿ ದನಿಯಲ್ಲಿ ನೀನು ಎಸ್. ಮಾಲತಿಯವರ ಮಗಳಾ ? ಮೊದಲೆ ಯಾಕೆ ಹೇಳಿಲ್ಲಾ’ ಅಂದಾಗ ನಿಹಾರಿಕಾ ಗೆ ನನಗೆ ಮೈಲ್ ಬರುತ್ತಿರುವ ವಿಷಯ ಅವಳ ಜತೆಗೆ ಶೇರ್ ಮಾಡಿದ್ದ ನೆನಪಿಂದ  ಅಲ್ಲ ಅಲ್ಲ ನನ್ನ ಅಮ್ಮನ ಪೂರ್ತಿ ಹೆಸರು ಮಾಲತಿ ಶೆಣೈ ಅಂದಳಂತೆ.
ಸುಮ್ಮನೆ ಇದನ್ನೂ ನಿಮ್ಮ ಜತೆ ಶೇರ್ ಮಾಡುವ ಅನ್ನಿಸ್ತು ಅದಕ್ಕೆ...ಮತ್ತು ನನ್ನ ಬ್ಲಾಗ್ ನ ಹೊಸ ಓದುಗರು ಇದನ್ನು ಓದಿಲ್ಲ ಅಂತ ಭಾವಿಸುತ್ತ....
ಒಂದು ಗಮ್ಮತ್ತಿನ ವಿಷಯ: ನಮ್ಮ ಐಡಿಎಫ್ ಟೀಮ್ ಎಲ್ಲರೂ ಸೇರಿ ಯಶವಂತ ಸರದೇಶಪಾಂಡೆಯವರ ’ಸಹಿ ರಿ ಸಹಿ’ ನಾಟಕಕ್ಕೆ ಹೋಗಿದ್ವಿ. MTR ಕೂಪನ್ ಊಟ ಕೂಡ ಇತ್ತು ಟಿಕೆಟ್ ಜತೆಗೆ. ನಾವು ಲೋಕಾಭಿರಾಮವಾಗಿ ಮಾತಾಡುತ್ತ ಊಟದ ಹಾಲ್ ಕಡೆಗೆ ಸಾಗ್ತಾ ಇದ್ವಿ. ಸ್ಟೇಜ್ ಹತ್ತಿರ ಒಂದು ಸಣ್ಣ ಕುಂಡದಲ್ಲಿ ಆಲಂಕಾರಿಕ ಗಿಡ ಕಂಡು ಅದರ ಬಳಿಗೆ ಸಾಗಿದೆ. ನನ್ನ ಜತೆಗಿದ್ದವರು ಮುಂದೆ ಹೋಗಿದ್ದರು. ಯಶವಂತ ಸರದೇಶಪಾಂಡೆಯವರನ್ನು ಅವರ ಆಪ್ತೇಷ್ಟರು ನಾಟಕದ ಬಗ್ಗೆ ಅಭಿನಂದಿಸುತ್ತ ಇದ್ದರು. ನಾನು ಗಿಡದ ನೋಡಿ ಬಗ್ಗಲಿಕ್ಕು ಅವರು ’ಮಾಲತಿ’ ಅನ್ನೋದಕ್ಕೂ ಸರೀ ಹೋಯ್ತು, ನಾನು reflex ನಲ್ಲಿ  ’ಓ’ ಅಂದೆ. ಆದರೆ ಅವರು ಕರೆದಿದ್ದು ಅವರ ಶ್ರೀಮತಿಯವರನ್ನು- ’ಮಾಲತಿ ಸರದೇಶಪಾಂಡೆ’ಯವರನ್ನು ನಾನು ಅವಸರದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿ ನಮ್ಮ ಜತೆಯವರೊಂದಿಗೆ ಸೇರಿಕೊಂಡೆ
:-)
sorry friends copy pasted ಅದಕ್ಕೆ ಹೀಗಿದೆ!!!!

September 8, 2011

ದಿಢಿರ್ ನಿಂಬೆ ಹಣ್ಣಿನ ಸಾರು- easy to prepare lemon saaru


ನನ್ನ bachelor ತಮ್ಮಂದಿರಿಗೆ, especially ಸುಶ್ರುತಂಗೆ. ಅವರಿಗೆ ಕೆಮ್ಮು ಮತ್ತು ಗಲೆ ಮೆ ಖಿಚ್ ಖಿಚ್ ಅಂತೆ. ಇದನ್ನು ಮೆತ್ತಗಿನ ಅನ್ನಕ್ಕೆ ಕಲಿಸಿಕೋ ಬಹುದು ಅಥವಾ ಸುಮ್ಮನೆ ಸೂಪ್ ತರಹ ಕುಡೀಬಹುದು.
3 ಗ್ಲಾಸ್ ನೀರು, ಒಗ್ಗರಣೆಗೆ : ಸ್ವಲ್ಪ ತುಪ್ಪ, ಜೀರಿಗೆ, ಸಾಸಿವೆ, ಕರಿಬೇವು , ಒಂದು ಅಥವ ಎರಡು ಹಸಿಮೆಣಸಿನ ಕಾಯಿ ಹಿಂಗಿನ ಪುಡಿ, ಉಪ್ಪು ಚಿಟಿಕೆ ಸಕ್ಕರೆ. ಎರಡು ಲಿಂಬೆ ಹಣ್ಣು
ಒಗ್ಗರಣೆ ರಡಿಯಾದ ಮೇಲೆ ಸಣ್ಣಕ್ಕೆ ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ ಎರಡು ನಿಮಿಷ ಕೈ ಆಡಿಸಿ, ಅದರಲ್ಲಿ ನೀರು ಹಾಕಿ. ಕುದಿ ಬಂದ ನಂತರ ಕೆಳಗಿಳಿಸಿ, ಉಪ್ಪು ಸಕ್ಕರೆ ಬೆರೆಸಿ. ಇದಕ್ಕೆ ನಿಂಬೆ ಹಣ್ಣಿನ ರಸ ಬೆರೆಸಿ. ಸಾರು ತಯಾರು.
ಹಸಿಮೆಣಸಿನಕಾಯಿ ಬದಲಿಗೆ, ತಾಜಾ ಕುಟ್ಟಿದ ಕರಿಮೆಣಸಿನ ಪುಡಿ ಬೆರೆಸಬಹುದು. ಶೀತ cold ಎಲ್ಲ ಹೇಳಹೆಸರಿಲ್ಲದೆ ಮಾಯ :-)
ಊರಿನ ಸೀಡ್ ಲೆಸ್ಸ್ -ನಿಂಬೆ.ಹಣ್ಣಾಗದೇ ಇರುವ ನಿಂಬೆಯ  ಪಾನಕ ಸಖತ್ ಟೇಸ್ಟಿ
ಎಲ್ಲರೂ ಟ್ರೈ ಮಾಡಲು ಅಡ್ಡಿ ಇಲ್ಲ. ನಮ್ಮ ಮನೆಯಲ್ಲಿ ಇದು ಎಲ್ಲರ favorite. especially during monsoons
ಬೀರ್ (beer) ಗಿಂತ ಸಾರ್ better.
:-)

September 4, 2011

ನಮ್ಮ ಗೌರಿ - ಗಣೇಶ

ನಮ್ಮ ಮಣ್ಣಿನ ಗಣಪ ಎಷ್ಟು ಚಂದ

ದೇವರ ಕೋಣೆ. ಬಲಬದಿಗೆಸ್ವರ್ಣ  ಗೌರಿ. ನಾವು ಜುಟ್ಟು ಇರುವ ತೆಂಗಿನ ಕಾಯಿಗೆ ಕಾಡಿಗೆ ಯಿಂದ ಕಣ್ಣು, ಮತ್ತು ಅರಿಶಿನ, ಕುಂಕುಮ, ಸಿಂಧೂರ ಹಚ್ಚಿ ಗೌರಿಯ ರೂಪ ಕೊಟ್ಟು ಪೂಜಿಸುವುದು. ಹೊಸ ಬಂಗಾರದ ಆಭರಣ ಇಲ್ಲದಿದ್ದರೆ, ಹಳೆಯ ಬಂಗಾರದ ಆಭರಣ ತೊಳೆದು ಗೌರಿಗೆ ಹಾಕುತ್ತೇವೆ. ವಿಸರ್ಜನಾ ಪೂಜೆ ಮುಗಿದ ನಂತರ (ಒಂದೆರಡು ದಿನ ಬಿಟ್ಟು)ಈ ಕಾಯಿಯಿಂದ ಹೋಳಿಗೆ ಅಥವಾ ಕೊಬ್ಬರಿ ಮಿಠಾಯಿ ಮಾಡುತ್ತೇವೆ. ಗೌರಿಗೆ ನೈವೇದ್ಯವಾಗಿ ಅರಿಶಿನ ಎಲೆ ಕಡುಬು ಮಾಡುತ್ತೇವೆ. ಬಿಸಿ ಬಿಸಿ ಕಡುಬಿನ ಮೇಲೆ ತುಪ್ಪ ಹಾಕ್ಕೊಂಡು ತಿಂದರೆ....................
ಅರಿಸಿನ ಎಲೆ ಕಡುಬಿಗೆ ಕೊಂಕಣಿಯಲ್ಲಿ ಪಾತ್ತೋಳಿ ಅನ್ನುತ್ತೇವೆ
ಅಕ್ಕಿ ಒಂದು ಗ್ಲಾಸ್, ಒಂದು ಟೇಬಲ್ ಚಮಚ ನೆನೆಸಿದ ಅವಲಕ್ಕಿ, ಎರಡು ಟೇಬಲ್ ಸ್ಪೂನ್ ತಾಜಾ ತೆಂಗಿನ ತುರಿ, ಚಿಟಿಕೆ ಉಪ್ಪು ಇವಷ್ಟನ್ನೂ ರುಬ್ಬಿ ಕೊಳ್ಳುವುದು
ಅರಿಶಿನ ಎಲೆಯನ್ನು ಚೆನ್ನಾಗಿ ತೊಳೆದು ಒರೆಸಿ ಅದರ ಮೇಲೆ ಈ ಹಿಟ್ಟನ್ನು ಸಮಾನವಾಗಿ ಹರಡಿ. ಚಿತ್ರದಲ್ಲಿದ್ದಹಾಗೆ.
ಹೂರಣಕ್ಕೆ (ಚೂರ್ಣ) ಬೆಲ್ಲವನ್ನು ಪಾಕ ಬರುವ ತನಕ ಇಟ್ಟು ಅದಕ್ಕೆ ತೆಂಗಿನ ತುರಿ ಬೆರೆಸಿ. ಅದು ಗಟ್ಟಿಯಾಗಿ ಉದುರು ಉದುರು ಆಗುತ್ತಿದ್ದ ಹಾಗೆ ಒಲೆಯಿಂದ ಕೆಳಗಿಳಿಸಿ ಏಲಕ್ಕಿ ಪುಡಿ ಬೆರೆಸಿ.


ಎಲೆಯ ಮಧ್ಯದಲ್ಲಿ ಹೂರಣವನ್ನು ಹೀಗೆ ಹರಡಿ ಉದ್ದಕ್ಕೆ ಮಡಚಿ.

ಹಬೆ ಪಾತ್ರೆಯಲ್ಲಿ ಹದಿನೈದು ನಿಮಿಷ ಬೇಯಿಸಿ, ತುಪ್ಪದೊಂದಿಗೆ ಬಡಿಸಿ. ನಾವು ನೈವೆದ್ಯಕ್ಕೆ ಇದನ್ನು ಮಾಡಿದರೂ ತಿನ್ನುವಾಗ ಪುನಃ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ತಿನ್ನುವುದು.
 ಹಬ್ಬಕ್ಕೆ ಮಾಡದೆ ಸುಮ್ಮನೆ ಹೀಗೆ ತಿನ್ನುವ ಮನಸ್ಸುಆದಾಗ (ಮಕ್ಕಳ ಸ್ನೇಹಿತರಿಗೋಸ್ಕರ ಮಾಡುತ್ತೇನೆ) ಮಕ್ಕಳು ಒಲೆ ಮುಂದೆನೆ ಕಾದು ಹಬೆ ಪಾತ್ರೆ ಮುಚ್ಚಳ ತೆಗೆದ ಕೂಡಲೆ ತಿನ್ನಕ್ಕೆ ತಯಾರು :-) ಅದು ಬೇಯುವಾಗ ಮನೆ ತುಂಬ ಘಮ ಘಮ
ನಾಗರಪಂಚಮಿಗೂ ಪಾತ್ತೋಳಿ ಮಾಡುತ್ತೇವೆ. ಚೌತಿ ಸಮಯದಲ್ಲಿ ಅರಿಶಿನ ಎಲೆ ತುಂಬ ಸಿಗುತ್ತದೆ. ಸುಮ್ಮನೆ ಮನೆಯ ಹಿಂದೆ ಅಥವ ಮುಂದೆ ಜಾಗ ಇದ್ದಲ್ಲಿ ಒಂದು ಸಣ್ಣ ಅರಿಶಿನದ ಗಡ್ಡೆಯನ್ನು ಹೂ ಕುಂಡದಲ್ಲಿ ಹಾಕಿಡಿ. ಹಬ್ಬದ ಸಮಯಕ್ಕೆ ಸಾಧಾರಣ 10-12 ಎಲೆಗಳು ಆಗುತ್ತವೆ
ಅರಸಿನ ಎಲೆಗಳಲ್ಲಿ ಔಷಧೀಯ ಗುಣಗಳು ಅಪಾರ

 @ (ಅನಾಮಿಕ) ಅಜಯ : ಈ ಸಲ ಆಂಗ್ಲ ಪದಗಳನ್ನು ಬಳಸದೇ ಕನ್ನಡದಲ್ಲೇ ಬರೆದಿದ್ದೇನೆ, . ಅಭಿನಂದಿಸುತ್ತೀರಿ ತಾನೆ??
:-)