April 3, 2011

ಯುಗಾದಿ-ಖರ ನಾಮ ಸಂವತ್ಸರ



ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಶ್ರೀಕಾಂತ್ ಯುಗಾದಿಯನ್ನು ಯುಗಾಂಡದಲ್ಲಿ ಆಚರಿಸುತ್ತಿದ್ದಾರೆ. ಯುಗಾದಿಯ ವಿಶೇಷ ಅಡಿಗೆಗಳನ್ನೆಲ್ಲ  ನಾನು ಮಾಲವಿಕ ಮತ್ತು ನಿಹಾರಿಕಾ ಬೆಂಗಳೂರಿನಲ್ಲಿ ತಯಾರಿಸಿ ಅದರ ಫೋಟೊಗಳನ್ನು ಬ್ಲಾಗ್ ನಲ್ಲಿ ಹಾಕ್ತೇವೆ. ನಾವು ಚಂದ್ರಮಾನ ಯುಗಾದಿ ಆಚರಿಸುವುದಾದರೂ, ಈ ಸಲ ಅವರು ವಾಪಸ್ ಬಂದ ಮೇಲೆ ಪುನ: (ಸೌರಮಾನ)ಯುಗಾದಿ ಆಚರಿಸುವ ಪ್ಲಾನ್ ಹಾಕಿದ್ದೇನೆ, ಸೋ ನಮಗೆ ಯುಗಾದಿ double dhamaka!!!We miss you Srikanth!!!

 musk melon- ಖರಬೂಜದ ರಸಾಯನ ನಾಳಿನ sweet dish
(ಈ ಸಲ ನಿಹಾರಿಕಾ ಸ್ಟಿಲ್ ಕ್ಯಾಮರಾದಲ್ಲಿ ಫೋಟೊ ತೆಗೀತಿದ್ದಾಳೆ. ಅದು ಡೆವಲಪ್ ಆದ್ಮೇಲೆ ಇಲ್ಲಿ ಅಪ್ ಲೋಡ್ ಮಾಡ್ತೇನೆ.so watch out this space)

ಇದನ್ನು ತಯಾರಿಸುವುದು ಅತ್ಯಂತ ಸುಲಭ

ಮಸ್ಕ್ ಮೆಲನ್ -ಖರಬೂಜ ಹಣ್ಣಿನತಿರುಳು ರುಬ್ಬಿದ್ದು ಅಥವ ಸಣ್ಣಕ್ಕೆ ಕತ್ತರಿಸಿದ್ದು, ಬೆಲ್ಲ, ಏಲಕ್ಕಿ, ಸಣ್ಣಕ್ಕೆ ಕತ್ತರಿಸಿ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣ ದ್ರಾಕ್ಷಿ ಮತ್ತು ಕಾಯಿ ಹಾಲು. ಸೆಖೆಗೆ ಸಖತ್ cool. (ಬೇಕಾದರೆ ತುಂಬ ಹಣ್ಣಾದ ಬಾಳೆಹಣ್ಣನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿ ರಸಾಯನಕ್ಕೆ ಬೆರೆಸಬಹುದು.

ನಮ್ಮಲ್ಲಿ ಯುಗಾದಿಯ ಸ್ಪೆಷಲ್ ಎಳೆ ಗೇರುಬೀಜ ಮತ್ತು ತೊಂಡೆಕಾಯಿ (coccinea) ಸೇರಿಸಿ ಪಲ್ಯ.

ಇದು ನನ್ನ ಸೆಲ್ ಫೋನ್ ನಿಂದ ತೆಗೆದದ್ದು :-(

of course ಬೇವು-ಬೆಲ್ಲ is a must.ನಾವು ಬೇವು ಬೆಲ್ಲದ ಮಿಶ್ರಣವನ್ನು ಹೀಗೆ ತಯಾರಿಸುತ್ತೇವೆ:
ಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು, ಒರೆಸಿ ಅದನ್ನು ತುಪ್ಪದಲ್ಲಿ ಹುರಿಯುತ್ತೇವೆ. ತಣ್ಣಗಾದ ಮೇಲೆ ಅದನ್ನು ಫೈನ್ ಆಗಿ ಪುಡಿಮಾಡಿ ಬೆಲ್ಲದ ಪುಡಿಯೊಂದಿಗೆ ಮಿಕ್ಕ್ಸ್ ಮಾಡ್ತೇವೆ.
ಹೆಚ್ಚು ಊಟ ಮಾಡಿದ್ದರೆ ಕೋಕಮ್ ಕಡಿ ಅದಕ್ಕೆ ತಕ್ಕ ಔಷಧಿ, ರುಚಿ ಕೂಡ

ರಸಾಯನ ಮತ್ತು ಕೋಕಮ್ ಕಡಿ ಚಿತ್ರಗಳು ಮಾಲವಿಕ ಸೆಲ್ ಫೋನ್ ನಿಂದ.
 So here's wishing everybody a cool and colourful Yugadi....

:-)

8 comments:

  1. ಯುಗಾದಿ ಹಬ್ಬದ ಶುಭಾಶಯಗಳು:)

    ReplyDelete
  2. ಯುಗಾದಿ ಹಬ್ಬದ ಶುಭಾಶಯಗಳು

    ReplyDelete
  3. "ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.

    ReplyDelete
  4. ನಿಮಗೂ ಯುಗಾದಿಯ ಶುಭಾಶಯಗಳು.

    ReplyDelete
  5. ಬಾಯಲ್ಲಿ ನೀರು ಬರಿಸುತ್ತ ಇದ್ದಾವೆ ನಿಮ್ಮ ಫೋಟೋಗಳು .
    happy ugadi

    ReplyDelete
  6. ಶ್ರೀಕಾಂತ್, ಮಾಲತಿ ಮತ್ತು ಎಲ್ಲ ಕುಟುಂಬ ಜನಕ್ಕೆ ಹಾರ್ದಿಕ ಶುಭಾಶಯಗಳು...

    ReplyDelete
  7. Hi Malathi, nimmelarigu ugadiya shubashyagalu. Adre ತೊಂಡೆಕಾಯಿ na cocchinea antara. I thought it is called as Ivy gourd.

    Veda

    ReplyDelete
  8. Wish ಮಾಡಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು!!
    ವೇದಾ: Spelling ಸ್ವಲ್ಪ ತಪ್ಪಾಗಿದೆ. It is Coccinea Grandis and i got it right from the horse's mouth, hehehehe YES The great MSC Agri Srikanth Shenoy.ಹೌದು ಐವಿ ಗೋರ್ಡ್ ಕೂಡ ಅನ್ನುತ್ತಾರೆ!!
    thanks for coming!!!

    ReplyDelete