mr and mrs ಸೀನಣ್ಣ. ತೀರ್ಥಹಳ್ಳಿಯ ಕೆಂಪು ಹರಿವೆ ಸೊಪ್ಪು the Best!!
http://malathisanchiyinda.blogspot.com/2010/06/blog-post.html
ಆಮೇಲೆ ಸಾಸಿವೆ ಮಾಡುವ ವಿಧಾನವನ್ನು ಓದಿ. ಓರ್ವ anonymous commentiಗರು ಸಾಸಿವೆ ಮಾಡುವ ವಿಧಾನ ಕೇಳಿದ್ದರು. ಈ recipe ಅವರಿಗಾಗಿ, on demand!! . :-)
ಹರಿವೆ ಸೊಪ್ಪು - 3 ಕಟ್ಟು
ತಾಜಾ ತೆಂಗಿನ ಕಾಯಿ ತುರಿ - 4 ದೊಡ್ಡ ಚಮಚ ಅಥವಾ 1/2 ತೆಂಗಿನಕಾಯಿ
ಸಾಸಿವೆ - 2 ಟೀ. ಚಮಚ
ಹುಣಸೆ ಬೀಜದ ಗಾತ್ರದಷ್ಟೆ ಹುಣಸೆ ಹುಳಿ :-)
ಹಸಿಮೆಣಸಿನ ಕಾಯಿ ನಾಲ್ಕೈದು, ಉಪ್ಪು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ಕೆಂಪು ಒಣ ಮೆಣಸಿನ ಕಾಯಿ
ಸೊಪ್ಪನ್ನು ಚೆನ್ನಾಗಿ ತೊಳೆದು,ಸಣ್ಣಕ್ಕೆ ಕತ್ತರಿಸಿ.ಇದಕ್ಕೆ ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿ ಹಾಕಿ, ಸ್ವಲ್ಪ ಉಪ್ಪು ಬೆರೆಸಿ, ಮುಚ್ಚಿ, ಒಲೆಯ ಮೇಲಿಡಿ. ಸಾಧಾರಣವಾಗಿ ಅದು ಬೇಯುತ್ತಾ ನೀರು ನೀರು ಆಗತ್ತೆ ಹಾಗೇ ಸೊಪ್ಪಿನ ಪ್ರಾಮಾಣ ನೂ ಕಡಿಮೆ ಆಗುತ್ತೆ. ಅದಕ್ಕೆ ಉಪ್ಪು ಆದಷ್ಟು ಕಡಿಮೆ ಹಾಕಿ. ಬೇಕಾದ್ರೆ ರುಚಿ ನೋಡಿ ಲಾಸ್ಟ್ ಲ್ಲಿ ಬೆರೆಸ ಬಹುದು. ತುಂಬ ಹೊತ್ತು ಬೇಯಿಸಬೇಡಿ. ಅದರಿಂದ ಪೌಷ್ಠಿಕಾಂಶ ನಾಶವಾಗುತ್ತೆ.
ಬೆಂದ ಸೊಪ್ಪಿನಿಂದ ಮೆಣಸಿನಕಾಯಿಯನ್ನು ಆರಿಸಿ ತೆಗೆದು ಕಾಯಿ ತುರಿಗೆ ಹಾಕಿ, ಚಿಕ್ಕ ಹುಣಸೆ ತುಂಡಿನೊಟ್ಟಿಗೆ ತರಿ ತರಿಯಾಗಿ ರುಬ್ಬಿ. ಕೊನೆಯಲ್ಲಿ ಸಾಸಿವೆಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದಿಟ್ಟು, ರುಬ್ಬಿದ ಪದಾರ್ಥಕ್ಕೆ ಬೆರೆಸಿ-(ಮಿಕ್ಸಿ ಅಥವಾ ರುಬ್ಬುವಕಲ್ಲಲ್ಲಿ ) ಒಂದು ಅಥವಾ ಎರಡು ಸುತ್ತು ತಿರುವಿ. ತಣ್ಣಗಾದ ಬೆಂದ ಸೊಪ್ಪಿಗೆ ಬೆರೆಸಿ. ಸಾಸಿವೆ, ಕರಿಬೇವು ಮತ್ತು ಒಣ ಕೆಂಪು ಮೆಣಸಿನ ಒಗ್ಗರಣೆ ಕೊಡಿ. ಸಾಸಿವೆ readdy. ಇದು ತಣ್ಣಗಿನ ಪದಾರ್ಥ. ಬೇಸಿಗೆಯಲ್ಲಿ (summer) ತುಂಬ ಹಿತವಾಗಿರುತ್ತೆ. ಕೆಲವರು ಸಾಸಿವೆಯನ್ನು ಹಸಿಯಾಗೆ ಹಾಕುತ್ತಾರೆ. ಹಸಿ ಸಾಸಿವೆ ಬಳಸುವುದಾದರೆ ಒಂದುವರೆ ಸ್ಪೂನ್ ಸಾಸಿವೆ ಹಾಕಿ ಸಾಕು.but i like my version of ಹರಿವೆ ಸೊಪ್ಪಿನ ಸಾಸಿವೆ.
ಸೊಪ್ಪು ತೀರ್ಥಹಳ್ಳಿಯಿಂದ ತಂದಿದ್ದು. ಬೆಂಗಳೂರಿಗೆ ಬರುತ್ತ. ಬಸ್ ನಲ್ಲಿ ಬಸವಳಿದು ಹೀಗಾಗಿದೆ ಅಷ್ಟೆ. ರುಚಿ ಮಾತ್ರ sooper!!!
:-)

ಸಾಸಿವೆ ಮಾಡುವದು ಹೇಗಂತ ಗೊತ್ತಾಯ್ತು ಧನ್ಯವಾದ
ReplyDeleteಟ್ರೈ ಮಾಡಿ ನೋಡ್ತೀನಿ ...ಅದ್ರೆ ಹರಿವೆ ಸೊಪ್ಪು ಮಾರ್ಕೆಟ್ ನಲ್ಲಿ ಸಿಗುವದು ಸ್ವಲ್ಪ ಕಷ್ಟ
Malathiyavre Nimma blognalli modalabari inukide thumba ishtavaythu.Nimma barahada hindhinda tunta manassu nange tumba hidisthu(tuntarige bere tuntara bagge bega gottaguttante??? nijana)Harive soppina sasve kanditha madthinini(soppina mathondu lekhanavannu odhidhe bahala swarasyakaravagidhe)
ReplyDeleteHeege bareyuthiri.Navu inn mele e-reuglaragi commentisuthiruthene. All the Best
Veda
Dear Veda!!
ReplyDelete:-)
melina tuMta nage just for you. This is the most interesting comment i have received. thanks.
:-)
malathi S
maalatiyavare arive soppina saasive tumba sowkhyavaagide.
ReplyDelete