ನನ್ನ ಚಿಕ್ಕಂದಿನ ಅತೀ ಪ್ರಿಯವಾದ ಪದ್ಯವನ್ನು (ಹಿಂದಿ)ಇಲ್ಲಿ translate ಮಾಡಿ ಹಾಕಿದ್ದೇನೆ. ನೀವು ಇದನ್ನು ಓದಿರಬಹುದು...ಚಾಹ ನಹೀಂ ಮೈ ಸುರ್ ಬಾಲಾ ಕೆ ಗೆಹೆನೋಂ ಮೆಂ ಗೂಂಥಾ ಜಾಉಂ
ಆಸೆಯಿಲ್ಲ ನನಗೆ
ದೇವಕನ್ನಿಕೆಯ ಕೊರಳ ಆಭರಣವಾಗಿ
ಶೋಭಿಸಲು
ಆಸೆಯಿಲ್ಲ ನನಗೆ
ಮನಸೆಳೆವ ಮಾಲೆಯ ಸೇರಿ
ಪ್ರೇಮಿಕೆಗೆ ಪ್ರಲೋಭನೆಯಾಗಲು
ಆಸೆಯಿಲ್ಲ ನನಗೆ
ಸಾಮ್ರಾಟರ ಶವದ ಮೇಲೆ
ಕುಳಿತು ರಾರಾಜಿಸಲು
ಆಸೆಯಿಲ್ಲ ನನಗೆ
ದೇವರ ಮುಡಿ ಏರಿ
ನನ್ನ ಅದೃಷ್ಟಕ್ಕೆ ಗರ್ವಪಡಲು
ಕಿತ್ತು ಬಿಡು ವನಮಾಲಿ
ನನ್ನನ್ನು ಎಸೆದು ಬಿಡು
ನಾಡಿಗಾಗಿ ನೆತ್ತರು ಹರಿಸಲು
ವೀರಯೋಧರು ತುಳಿವ ಹಾದಿಯಲಿ
- ಮಾಖನ್ ಲಾಲ್ ಚತುರ್ವೇದಿ
(ಹಿಂದಿಯಿಂದ ಕನ್ನಡಕ್ಕೆ- ಮಾಲತಿ ಎಸ್.)
ಅನುವಾದವಾದರೂ ಅರ್ಥಗರ್ಬಿತ...
ReplyDeleteಸೊಗಸಾಗಿದೆ ಕವನ...
sogasaada kavana! moola kavana vannoo post maaDiddre chennaagittu..
ReplyDeleteThank you saviganasu and rupaashree.
ReplyDelete@ Rupashri
i will post the original hindi poem soon.
:-)
malathi S
This comment has been removed by the author.
ReplyDeleteಈ ಪದ್ಯ ನನಗೆ ಬಹಳ ಇಷ್ಟವಾಗಿರೋ ಪದ್ಯ. ನನ್ನ ಹಿಂದಿ ಸಾಹಿತ್ಯ ರತ್ನ -೧ ರಲ್ಲಿ ಪಠ್ಯದಲ್ಲಿತ್ತು. ನನ್ನ ಹಿಂದಿ ಭಾಷಾ ಪ್ರಾವಿಣ್ಯ ಪಡೆಯುವ ಪ್ರಯತ್ನ ಅಲ್ಲಿಗೇ ನಿಂತಿದ್ದು ಬೇರೆ ವಿಷಯ.
ReplyDeleteಚನ್ನಾಗಿದೆ ಮಾಲತಿ ನಿಮ್ಮ ಅನುವಾದ, ಮೂಲಕ್ಕೆ ಅತಿ ನಿಕಟ ಮತ್ತು ಉತ್ತಮ ಪದ ಪ್ರಯೋಗ.
thank you Dr. Azad,
ReplyDeleteGlad you appreciated my attmepts at translating.
:-)
ms
चाह नहीं मैं सुरबाला के
ReplyDeleteगहनों में गूँथा जाऊँ,
चाह नहीं प्रेमी-माला में
बिंध प्यारी को ललचाऊँ,
चाह नहीं, सम्राटों के शव
पर, हे हरि, डाला जाऊँ
चाह नहीं, देवों के शिर पर,
चढ़ूँ भाग्य पर इठलाऊँ!
मुझे तोड़ लेना वनमाली!
उस पथ पर देना तुम फेंक,
मातृभूमि पर शीश चढ़ाने
जिस पथ जावें वीर अनेक।
(i will post the original hindi poem soon - thought I would help. Delete if copyright problems are there)