ಹಿಂದಿನ ವಾರ ಎಲ್ಲ ಗಿಡಗಳಿಗೆ ನೀರು ಹಾಕ್ತಾ ಇದ್ದೆ. ಈ ಆರ್ಕಿಡ್ಗ ಗಿಡ ಗಳಿಗೆ ತುಂಬಾ ನೀರು ಹಾಕಬಾರದು ಅಂತಾರೆ...ಹಾಗೂ ನನ್ನ ಬಳಿ ಈ ಗಿಡಗಳು ಉಳಿಯಲ್ಲ...ನನಗೂ ಅವಕ್ಕೂ ಕೂಡಿ ಬರಲ್ಲ....ಈ ಗಿಡಗಳು ನನ್ನ ಹುಟ್ಟು ಹಬ್ಬಕ್ಕೆ ರಾಧಿಕಾ ಗಂಗಣ್ಣ ಉಡುಗೊರೆಯಾಗಿ ಕಳಿಸಿದ್ದು....ಬಿಟ್ಟ ಹೂ ಮೂರು ತಿಂಗಳು ಇರುತ್ತೆ..ಇತ್ತು...
ಮೊನ್ನೆ ನೋಡಿದಾಗ ಗಿಡ ಎಲ್ಲ ಒಣಗಿದ ಹಾಗೆ ಅನ್ನಿಸಿ....'ಎಷ್ಟೊಂದು ಸೆಕೆ ಇದೆ...ನಿಮಗೆ ನೀರು ಕುಡಿಯಲು ಏನು ಧಾಡಿ' 'ಸುಮ್ನೆ ನಾಟಕ ಆಡಬೇಡಿ' ಅಂತ ಸರಿ ಬೈದು ಮೂರು ಆರ್ಕಿಡ್ ಗಿಡಕ್ಕೂ ಅರ್ಧ ಅರ್ಧ ಗ್ಲಾಸ್ ನೀರು ಸುರಿದೆ.
ನಿಹಾಳ ಸ್ನೇಹಿತೆ (ಖ್ಯಾತ ಬರಹಗಾರರ niece - ಬರಗಾರರು ಶ್ರೀಕಾಂತ್ ಗೆ friend and colleague) ಮನೆಗೆ ಬಂದಾಗ ಗಿಡಗಳ ಬಗ್ಗೆ ಮಾತು ಬಂದಾಗ ನಿಹಾ 'ಅಮ್ಮ ಊರಲ್ಲಿಲ್ಲದಿದ್ದಾಗ ನಾವು ನೀರು ಹಾಕಿದ್ರೂ ಸ್ವಲ್ಪ ದಿನ ಆದ ಮೇಲೆ ಗಿಡ ಡಲ್ ಕಾಣ್ ತಾವೆ, ಅಂದ್ರೆ ಅವಳು ಇದನ್ನು ಅನುಮೋದಿಸಿದಳು. ನಮ್ಮಲ್ಲೂ ಹಾಗೆ ಅಮ್ಮ, ಅಣ್ಣನ ಮನೆಗೆ ಕೆಲ ದಿನ ಹೋಗಿ ಇದ್ದಾಗ , ನಾನು ಅಪ್ಪ ನೀರೆಲ್ಲ ಹಾಕತೆವೆ...ಸೇಮ್ ಕತೆ ಅಂತ....ಅದಕ್ಕೆ ನಾನು 'ಹೌದು, ನಾನು ಗಿಡಗಳ ಜತೆ ಮಾತು ಕತೆ ಆಡ್ತೀನಿ, ಹಾಡ್ತೀನಿ..i caress the plants ಅಂದೆ...
ಶ್ರೀಕಾಂತ್ ಗೂ ತುಂಬಾ ಇಷ್ಟ ಈ ಹುಡುಗಿ...ಸಮಯ ಹೋದದ್ದೇ ತಿಳಿಯಲ್ಲ..ಅಷ್ಟು ಮಾತು ನಗು, mimicry.. we talk about everything under the sun..🙂🙂 ನಾನು ಮೀನು ಅಡಿಗೆ ಮಾಡಿದಾಗಲೆಲ್ಲ ಅವಳಿಗೆ invite ಇರುತ್ತೆ.
ಇವತ್ತು ಆರ್ಕಿಡ್ ಗಿಡ ನೋಡಿಡ್ರೆ 😁😁❤️❤️ 👇👇
ಶ್ರೀಕಾಂತ್ ಇದ್ದಾಗ ಊಟಕ್ಕೆ ಬಂದಾಗ ಮಾಡಿದ್ಫು 👇👇
No comments:
Post a Comment