transplant ಗೆ ಪೂರ್ವ ತಯಾರಿ ಆಗಿ..ಹಿಂದಿನ 15 ದಿನಗಳು ಆಸ್ಪತ್ರೆ, ಟೆಸ್ಟ್ ಗಳು ಅಂತ ಓಡಾಟವೇ ಆಯ್ತು , ಎಷ್ಟರ ಮಟ್ಟಿಗೆ ಎಂದರೆ ನಾನು ಒಂದು ವಾರದಲ್ಲಿ ಎರಡು ಕಿಲೋ ತೂಕ ಕಡಿಮೆ ಆಗಿದ್ದೀನಿ.
ಇವತ್ತು ಸ್ವಲ್ಪ ರಿಲ್ಯಾಕ್ಸ್ ಆಗಿ ಮನೆಯಲ್ಲೇ ಇದ್ದೀವಿ.transplant /ಕಸಿ ಪ್ರಕ್ರಿಯೆಗೆ ರಿಜಿಸ್ಟರ್ ಆಗಿದ್ದೇವೆ. ಬಹುಷ್ಯ operation ಮಂಗಳೂರಲ್ಲಿ. ಯಾವುದೇ ಸಮಯಕ್ಕೆ ಅಲ್ಲಿಗೆ ಹೋಗಲು ತಯಾರಾಗಿರಬೇಕಂತೆ. ನಮಗೆ 8 ಗಂಟೆಯ ಸಮಯ ಕೊಡುತ್ತಾರಂತೆ. ಕೊನೆಯ ಕಂತಿನ ದುಡ್ಡು ಕಟ್ಟಿದ ಮೇಲೆ ಸರ್ಜರಿ ಶುರು. ಒಟ್ಟಿಗೆ ತಗಲುವ ಅಂದಾಜು ವೆಚ್ಚ 34 ಲಕ್ಷ. ಆಮೇಲೂ ಒಂದು ಎರಡು ಮೂರು ಲಕ್ಷ ದುಡ್ಡು ತಗುಲಬಹುದು. ಒಂದು ಸೈಟ್ ಮಾರಿ ದುಡ್ಡು ರೆಡಿ ಇಟ್ಟುಕೊಂಡಿದ್ದೇವೆ. ಅಲ್ಲಿಗೆ ಒಂದು tension ಕಡಿಮೆ.
ಸರ್ಜರಿ ಆದ ಒಂದು ವರ್ಷ ನಾವು ಆರೋಗ್ಯದ ಬಗ್ಗೆ ತುಂಬಾ ಅಂದರೆ ತುಂಬಾ ಎಚ್ಚರ ವಹಿಸಬೇಕು.ಎಲ್ಲಿಗೂ ಪ್ರಯಾಣ ನಿಷಿದ್ಧ. ಯಾವುದೇ ಸೋಂಕು ತಗುಲಬಾರದು. ದೂರದಿಂದ ಮಾತು ಕತೆ ಆಡಬೇಕು. ಮನೆಯಲ್ಲೂ ಮಾಸ್ಕ್ ಧರಿಸಲೇಬೇಕು.
Now we wait..with bated breath...
ಓದ್ತಾ ಇರಿ. update ಮಾಡುತ್ತಿರುತ್ತೇನೆ
🙏🙏👍
ಓದ್ತಾ ಇರಿ. update ಮಾಡುತ್ತಿರುತ್ತೇನೆ
🙏🙏👍
No comments:
Post a Comment