June 16, 2025

ಗುಡ್ ಗುಡ್ ಆಳಾಂಬೆ..thunder m7shrooms

 


ಈ ಪುಟ್ಟ ಪುಟ್ಟ ಉರೂಟು ಮಶ್ರೂಮ್ ಗುಡುಗು ಬಂದಾಗ ಮಾತ್ರ ಹುಟ್ಟೋದು ಅಂತಾರೆ. ನಾವು ಉಜಿರೆ ಯಲ್8ದ್ದಾಗ ನಾವಿದ್ದ ಬಾಡಿಗೆ ಮನೆಯ ಸುತ್ತ  ಇವು ಆಗುತ್ತಿದ್ದವು. ಅದು edible ಆ ಗೊತ್ತಿರಲಿಲ್ಲ. 🙂 ಇಲ್ಲಿ ಬೆಂಗಳೂರಿಗೆ ಬಂದ ಮೇಲೆ ಸಿಕ್ಕಾಪಟ್ಟೆ ದುಡ್ಡು ಕೊಟ್ಟು ಇದನ್ನು ತಿನ್ನುತ್ತೇವೆ. ಮೊನ್ನೆ ತಂದಿದ್ದು ಕೆ ಜಿ ಗೆ 1500/-₹ 

ಮೊಳಕೆ ತರಿಸಿ, ಸಿಪ್ಪೆ  ಬಿಡಿಸಿದ ಅಲಸಂದೆ ಕಾಳಿನ ಜತೆ ಆಂಬಟ, ತುಂಬಾ ನೀರುಳ್ಳಿ ಬಳಸಿ ಬುತ್ತಿ ಮತ್ತು ಮೆಣಸಿನ ಪುಡಿ ಮತ್ತು ಹುಣಸೆ ನೀರು ಹಾಕಿ ಫಣ್ಣಾ ಉಪ್ಕಾರಿ ಮಾಡ್ತೇವೆ. ನನಗೆ you tube ಗೋಸ್ಕರ full fledged ವಿಡಿಯೋ ಮಾಡ ಬೇಕಂತ ಇತ್ತು. ಆದರೆ ಬೆಳಗಿನ ಕ್ಲಿಕ್ಸ್/ ಮನೆಯ ಲೈಟಿಂಗ್ ಸರಿ ಯಿಲ್ಲದಿದ್ದರಿಂದ ಸುಮ್ನೆ shorts ಮಾಡಿದೆ.  ಕೆಳಗಿನ ಕೊಂಡಿ ಕ್ಲಿಕ್ ಮಾಡಿದ್ರೆ ನೀವು ನೋಡಬಹುದು. 

ಈ ಮಶ್ರೂಮ್ ಬಿಡಿಸುವುದು ಕಿರಿಕಿರಿ ಹಾಗೂ ಸುಮಾರು ಹೊತ್ತು ತಗಲುತ್ತೆ.  ತಿನ್ನುವಾಗ ಎರಡೇ ನಿಮಿಷ ಸಾಕು. ಸುಮಾರು ಶ್ರೂಮ್ಸ್ ಹಾಳಾಗಿರುತ್ತೆ...

ಫಣ್ಣಾ ಉಪ್ಕರಿ - ನೀರು ದೋಸೆ 


https://youtube.com/shorts/-ZXq9Qd6IYs?si=BIbZwXVyyDIluL8x

 


No comments:

Post a Comment