December 26, 2024

Agave flowers

 ಮೊನ್ನೆಯಷ್ಟೇ ಊರಿನಿಂದ ಬಂದೆ. ಈ ಸಲ ಅಗಾವೆ ಗಿಡದಲ್ಲಿ ಸುಂದವಾದ ಬಿಳಿ ಹೂವುಗಳನ್ನು ನೋಡಿದೆ. ಈ ಅಗಾವೆ ಜೀವಮಾನದಲ್ಲಿ ಒಂದೇ ಸಲ ಹೂ ಬಿಡುವುದಂತೆ. ನನಗೆ ನೋಡಲು ಸಿಕ್ಕಿದ್ದು ವಿಶೇಷವೆನಿಸಿತು. ಉಳಿದಂತೆ ಅದರ ಎಲೆಗಳ ನಾರಿನಿಂದ ಸೆಣಬು ಮಾಡುತ್ತಾರೆ. ಕೆಳಗಿದೆ ಚಿತ್ರಗಳು


agave ನ ಇನ್ನೊಂದು ಪ್ರಭೇದ ದಿಂದ tequila  ಮದ್ಯ ಪೆಯವನ್ನು ತಯಾರಿಸುತ್ತಾರೆ. ನಾವು ಬೇಲಿ ಉದ್ದಕ್ಕೂ ತುಂಬಾ agave ಗಳನ್ನು ಹಾಕಿದ್ದೇವೆ.

ತೀರ್ಥಹಳ್ಳಿಯ ಮಂಜು ಕವಿದ ಮುಂಜಾವು..ನಾನು ಟಿ ಕುಡಿಯುವಾಗಿನ ದೃಶ್ಯ


ಈ ವಿಡಿಯೋ whatsapp ನಲ್ಲಿ ಓಡ್ತಾ ಇದೆ. ನೀವು ನೋಡಿ...ಕಥೆ ಸ್ವಲ್ಪ ಬದಲಾಗಿದೆ 🙏👍

       ಇಗೋ ಇನ್ನೊಂದು ಸಂಜೆ @ತೀರ್ಥಹಳ್ಳಿ





December 24, 2024

Merry Christmas 2024

ಬಿಸ್ಕೂಟ ಫ್ಯಾಕ್ಟರಿ ಯಲ್ಲಿ ಕ್ರಿಸ್ಮಸ್ ತಿನಿಸುಗಳ ತಯಾರಿಕೆಯ ಭರಾಟೆ. ಮನೆ ತುಂಬಾ ಪಸರಿಸಿರುವ ಪರಿಮಳ...i love winter & Christmas. 

December 18, 2024

ಚಿಬ್ಬಲು ಗುಡ್ಡೆ ಎಂಬ ಸುಂದರ ತಾಣ


 ತುಂಗೆಯ ತೀರದಲ್ಲಿದೆ ಈ ಸಿದ್ದೀವಿನಾಯಕ ದೇವಸ್ಥಾನ. ನಮ್ಮ ಮನೆಯಿಂದ ಗಾಡಿಯಲ್ಲಿ 5 ನಿಮಿಷದ ಪ್ರಯಾಣ.

ನೀರಿನಲ್ಲಿರುವ ಮೀನುಗಳಿಗೆ...ದೇವಸ್ಥಾನಕ್ಕೆ ತಾಗಿದಂತೆಯೇ ಇರುವ ಅಂಗಡಿಯಲ್ಲಿ ಚುರುಮುರಿ ಕೊಂಡು ಒಯ್ಯಬೇಕು. ಅಂಗಡಿಯಲ್ಲಿರುವ ಹುಡುಗಿ ಶ್ರೀಕಾಂತ್ ನನ್ನು ನೋಡಿ...'ನೀವು ಬಾಲಕೃಷ್ಣ ಶೆಣೈ ಅವರ ಮಗನಾ? ಅವರದ್ದೇ ಪಡಿಯಚ್ಚು' ಅಂತ ಹೇಳಿದಳು...'ನಿಮ್ಮ ಅಂಗಡಿಯಲ್ಲಿ ಸಿಗದಿದ್ದ ವಸ್ತು ಇರಲಿಲ್ಲ' ಅಂತ ಕೂಡ ಸೇರಿಸಿದಳು 😁

ದೇವರಿಗೆ ನಮಸ್ಕರಿಸಿ, ಮೀನಿದ್ದಲ್ಲಿಗೆ ಹೋದೆವು , ಆಗಲೇ ಕತ್ತಲೆಯಾಗಿತ್ತು. ಅಲ್ಲಿದ್ದ ಮೂವರು ಮಂಡಕ್ಕಿ ಹಾಕಿದ್ದರಿಂದ ಮೀನು ಗಳು ದುಬ ದುಬ ಮೇಲೆ ಕೆಳಗೆ ಹೋಗುವ ಸಡ್ಡು ಕೇಳಿಸುತ್ತಿತ್ತು ವಿನಃ ಕಣ್ಣಿಗೆ  ಕಾಣಲಿಲ್ಲ..ಆಗಲೇ ಕತ್ತಲೆ ಯಾಗಿತ್ತು. 

ಚಿಬ್ಬಲು / ಚಿಬ್ಲು ಅ0ದ್ರೆ ಬಹುಷ್ಯ ಸಿಡುಬು , ಯಾವುದೇ ಗುಣವಾಗದ ಚರ್ಮ ರೋಗವಿದ್ದಲ್ಲಿ, ದೇವರಿಗೆ ಹಣ್ಣು, ಮೀನುಗಳಿಗೆ ಮಂಡಕ್ಕಿ ಅರ್ಪಿಸಿದರೆ ಕಾಯಿಲೆ ಗುಣವಾಗುತ್ತದೆ ಎಂಬ ಪ್ರತೀತಿ...ದೇವರ ವಿಗ್ರಹದ ಮೇಲಿನ electronic scroll ಮೇಲೆ ಓದಿದೆ... ಹಾಗೆಯೇ ನಾಳೆ 18.12.2024  ಸಂಕಷ್ಟಿ ಅಂತ ಕೂಡ ಬಂತು. ಸೂರ್ಯಾಸ್ತ ಸಿಗಲಿಲ್ಲ ಅಂತ ಸ್ವಲ್ಪ ಬೇಜಾರಾಯ್ತು. ಇನ್ನೆರಡು ದಿನದಲ್ಲಿ ಸೂರ್ಯೋದಯ ನೋಡುವ ಆಸೆ. ಹೋದ್ರೆ ಖಂಡಿತ ಶೇರ್ ಮಾಡುವೆ 😁❤️🙏








December 12, 2024

Dilemma

ಮೊನ್ನೆ ಒಂದು ದಿನ ದೊಡ್ಡ ಕೇಕ್ ಆರ್ಡರ್ ಇತ್ತು. ಎರಡು ಕೇಕ್ ಒಯ್ದು, venue ದಲ್ಲಿ assemble ಮಾಡ್ಲಿಕ್ಕಿತ್ತು. ಸರಿ, ನಮ್ಮ ಗಾಡಿಯಲ್ಲೇ ಹೊರಟ್ವಿ. ನಮ್ಮ ಗಾಡಿ ಸೀಟ್ flat ಆಗಿ ಚೆನ್ನಾಗಿದೆ...app ಮೂಲಕ ಯಶವ0ತ್  ಎಂಬ ಒಳ್ಳೆಯ ಚಾಲಕ ಸಿಕ್ಕಿದ್ದರು. 
ಸಿಗ್ನಲ್ ಬಳಿ ಗಾಡಿ ನಿಲ್ಲಿಸಿದಾಗ ಒಬ್ಬ ಮಹಿಳೆ ಪುಟ್ಟ ಮಗುವೊಂದನ್ನು ಕುಂಕುಳಿಗೇರಿಸಿ ಬಂದು, ಏನಾಗ್ತಿದೆ ಅಂತ ಗೊತ್ತಾಗುವಷ್ಟರಲ್ಲಿ ಗಾಡಿಯ ಮುಂಬದಿಯ ಗಾಜನ್ನು ಚಕಚಕನೆ ಸ್ವಚ್ಛ ಮಾಡಿ ಬಿಟ್ಟಳು. ಗೂಗಲ್ ಪೆ ಅಂತ ಇರುವುದರಿಂದ ಚಿಲ್ಲರೆ ಕಾಸು ಇಟ್ಟುಕೊಳ್ಳೋದು ಕಡಿಮೆ ಯಾಗಿದೆ. ಅಕ್ಕನ ಬಳಿ ಕೂಡ ಕ್ಯಾಶ್ ಇರಲಿಲ್ಲ. ಸಿಗ್ನಲ್ ಚಾಲೂ ಆಗುವ ಮುಂಚೆ ನನ್ನ ಪರ್ಸ್ ನಲ್ಲಿ ತಡಕಾಡಿ 20 ರೂ ನ ಕಾಯಿನ್ ಒಂದು ಸಿಕ್ಕಿ ಅದನ್ನು ಯಶವಂತ್ ಮೂಲಕ ಆಕೆಗೆ ರವಾನಿಸಿದೆ.
ಆಕೆ ತಿರುಪೆ ಎತ್ತಿಲ್ಲ ಅಂತ ಖುಷಿ ಪಡಬೇಕೆ?  ಅಥವಾ ನಮ್ಮ ಪಾಪಾಪ್ರಜ್ಞೆ ಯನ್ನು ಗುರಿಯಾಗಿಸಿ ದುಡ್ಡು ಮಾಡಿಕೊಂಡಿದ್ದಕ್ಕೆ irritate ಆಗಬೇಕೆ ...ಇದೇ dilemma 
ಅಂದ ಹಾಗೆ ನನ್ನ ಪಾಕಶಾಲೆ/ ತೋಟದ ಕೆಲಸ ಪ್ರಯಾಣದ ಬಗ್ಗೆ ವಿಡಿಯೋ ಗಳನ್ನು ನಾನು you ಟ್ಯೂಬ್ ನಲ್ಲಿ ಹಾಕ್ತಿದ್ದೇನೆ. interest ಇದ್ದವರು subscribe ಮಾಡಿ ನೋಡಬಹುದು. 🙏🙏

December 8, 2024

sarson da saag - makki ki roti


ಸಾಸಿವೆ ಸೊಪ್ಪಿನ ಪಲ್ಯ...ಮಕ್ಕಿ ಹಿಟ್ಟಿನ (maize flour) ರೊಟ್ಟಿ
ಇದು ಪಂಜಾಬ್ ನ ಪ್ರಖ್ಯಾತ ಖಾದ್ಯ ಪದಾರ್ಥ.

ಚಳಿಗಾಲದಲ್ಲಿ ಇದರ ಸೇವನೆ ಹೆಚ್ಚು. ಸಾಸಿವೆ ಉಷ್ಣ ಪದಾರ್ಥ. ಮೈ ಬೆಚ್ಚಗೆ ಇಡುವಂತಹದ್ದು. ಸಾಸಿವೆ ಸೊಪ್ಪಿನ ಜತೆ ಇತರೆ ಸೊಪ್ಪು ಬಳಸಿ ಮಾಡತಕ್ಕದ್ದು. ಇಲ್ಲದಿದ್ದರೆ ಸ್ವಲ್ಪ  ಕಹಿ ಆಗುವ ಸಾಧ್ಯತೆ ಇದೆ.  ಮೂಲಂಗಿ, ಪಾಲಕ್ ಮುಂತಾದ್ದು.  ಪಲ್ಯದ ಜತೆ ಮೊಸರು, ಬೆಣ್ಣೆ ಮತ್ತು ಬೆಲ್ಲ ಕೂಡ ಬಡಿಸುತ್ತಾರೆ.

ನಾನು ಮಾಡುವ ವಿಧಾನ :
ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ, ಸ್ವಲ್ಪ ಬೆಳ್ಳುಳ್ಳಿ, ಟೊಮ್ಯಾಟೋ... ಸಾಸಿವೆ ಸೊಪ್ಪು ಪಾಲಕ್ ಸೊಪ್ಪು, ಚಕೋತಾ ಸೊಪ್ಪು, ಮೆಂತ್ಯದ ಸೊಪ್ಪು ಮತ್ತು ಬಸಳೆ ಸೊಪ್ಪು ಬಳಸಿದ್ದೇನೆ..
ನನ್ನ ಬಾಲ್ಕನಿ ಕುಂಡಗಳಲ್ಲಿ ಬೆಳೆಸಿದ್ದ ಸೊಪ್ಪು ಆದ್ದರಿಂದ ತೊಳೆಯಲು ತುಂಬಾ ನೀರು ಬೇಕಾಗಿ ಬರಲ್ಲ.
ಮೊದಲಿಗೆ ಸೊಪ್ಪುಗಳನ್ನು ಚೆನ್ನಾಗಿ ತೊಳೆದು, ಅದಕ್ಕೆ ನೀರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೋ, ಅರಿಸಿನ ಪುಡಿ ಸ್ವಲ್ಪ ಉಪ್ಪು ಬೆರೆಸಿ ನೀರಲ್ಲಿ ಬೇಯಿಸುವುದು.
ಎಣ್ಣೆಯಲ್ಲಿ ಜೀರಿಗೆ ಸಿಡಿಸಿ, ಇದಕ್ಕೆ ನೀರುಳ್ಳಿ ಹಾಕಿ ಚೆನ್ನಾಗಿ ಕೆಂಪು ಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಬೆಳ್ಳುಳ್ಳಿ ಸೇರಿಸಿ ಎರಡು ನಿಮಿಷ ಕೈಯಾಡಿಸಿ. ಗರಂ ಮಸಾಲೆ, ಮೆಣಸಿನ ಪುಡಿ,  ಚಿಟಿಕೆ ಸಕ್ಕರೆ ಬೆರೆಸಿ.  ಇದಕ್ಕೆ ಬೇಯಿಸಿದ ಸೊಪ್ಪುಗಳನ್ನು  ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಬೆರೆಸಿ. ಚೆನ್ನಾಗಿ ಕುದಿ ಬಂದ ಮೇಲೆ ಒಂದು ಚಮಚ ತುಪ್ಪ ಹಾಕಿ ಮುಚ್ಚಿಡಿ.
ಮಕ್ಕಿ ಕಿ ರೋಟಿ
ಮಕ್ಕಿ ಹಿಟ್ಟಿಗೆ ಚಿಟಿಕೆ ಉಪ್ಪು, ಒಂದು ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ. ಅರ್ಧ ಲೋಟ ಕುದಿಯುವ ನೀರು ಹಾಕಿ ಮುಚ್ಚಿಡಿ. ತಣ್ಣಗಾದ ನಂತರ ನೀರು ಕಾಕಿ ಮೆತ್ತಗಿನ ಕಣಕ ತಯಾರಿಸಿ. ಬಾಳೆಎಳೆ ಮೇಲೆ ತಟ್ಟಿ ರೊಟ್ಟಿ ತಯಾರು ಮಾಡಿ. ಬಿಸಿ ಬಿಸಿ  serve ಮಾಡಿ
ನನಗೆ ಥ್ಯಾಂಕ್ಸ್ ಹೇಳಲು ಮರೆಯಬೇಡಿ 😁😁

(ಬಾಳೆ ಎಲೆ ತರಲು ಮರೆತು ಹೋಗಿದ್ದರಿಂದ, ಅಕ್ಕನ #biscootfactory ,ಯಿಂದ parchment ಪೇಪರ್ ತೆಗೆದುಕೊಂಡು ಅದರ ಮೇಲೆ ತಟ್ಟಿದೆ.)
ಪ್ರತೀ ತುತ್ತಿಗೂ ಮಕ್ಕಳು  wow mummy this is so delicious  ಅಂತ ತಿನ್ನುವಾಗ ಮಾಡಿದ್ದಕ್ಕೆ ಸಾರ್ಥಕತೆ 🙂❤️👍🙏
ಸಾಸಿವೆ ಸೊಪ್ಪು, ಮೆಂತ್ಯೆ ಸೊಪ್ಪು, ಪಾಲಕ್ ಮತ್ತು ಬಸಳೆ ನನ್ನ ಪಾಟ್ ನಲ್ಲಿ ಬೆಳೆಸಿದ್ಫು..ಚಕೋತಾ ಎಲೆ ಜ್ಯೋತಿಯಿಂದ ಖರೀದಿಸಿದ್ದು. ಎಲ್ಲಾ ಎಲೆ/ಸೊಪ್ಪು ಗಳನ್ನು ಬಾಲ್ಕನಿ ಅಥವಾ ಟೆರೇಸ್ ಅನೂಕೂಲವಿದ್ದರೆ ಸುಲಭವಾಗಿ ಬೆಳೆಸಬಹುದು


ಹಾಗೆ ಇದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಬೆಳಗ್ಗಿನ breakfast ಕೂಡ ಮಾಡಿ ಇದಕ್ಕೆ ಮ(ಅಕ್ಕಿ) ರೊಟ್ಟಿ ಅಂತ ಹೆಸರು ಕೊಟ್ಟೆವು. you tube ನಲ್ಲಿ ಇದಕ್ಕೆ  8000+ ವೀಕ್ಷಣೆ ಬಂತು 😁🙏

ಮಾಲವಿಕ ಇದಕ್ಕೆ ಚೆಂದದ ಸುಟ್ಟ ಟೊಮ್ಯಾಟೋ ಮತ್ತು ಸುಟ್ಟ  ಮೆಣಸಿನ ಗೊಜ್ಜು ಮಾಡಿದ್ದಳು. ತುಂಬಾ ರುಚಿಕರ combo...


north india ದಲ್ಲಿ ಸೊಪ್ಪು ತೊಳೆದು ಮಿಕ್ಸಿ ಯಲ್ಲಿ ಹಾಕಿ ಈ ತರಹ store ಮಾಡಿಡ್ತಾರೆ. ಬೆಕ್ಕದಾಗ ಇದನ್ನು ಕುದಿಸಿ ಒಗ್ಗರಣೆ ಹಾಕ್ತಾರೆ ಆನ್5ಆ ಮೊನ್ನೆ ಗೊತ್ತಾಯ್ತು 😎🙂

December 3, 2024

ಕೇಕ್ ಬೇಕಾ ಕೇಕ್

 ಇತ್ತೀಚಿನ ದಿನಗಳಲ್ಲಿ biscootfactory ಯಿಂದ  ಹೋದಂತಹಾ ಕೇಕ್ ಗಳು...ನಾನು ತೆಗೆದ ಕೇಕ್ ಪಟ...ಕೆಲವೊಮ್ಮೆ ನನಗೆ ಪುರುಸೊತ್ತಿರಲ್ಲ....ಮತ್ತು ನನ್ನ travel ಗಳು ಜಾಸ್ತಿಯಾಗಿವೆ 😁👍❤️


















ಕೇಕ್ ತೆಗೆದುಕೊಂಡು ಹೋಗಕ್ಕೆ ನಮ್ಮ ಕಾರಿನ ಸೀಟ್ perfect ಆಗಿದೆ 😁😁



cute edible butterflies on cupcakes.
 




November 24, 2024

ಒಗ್ಗರಣೆ ಪತ್ರೊಡೆ

 ಪತ್ರೊಡೆ ಎಲ್ಲರೂ ಮಾಡಿರುತ್ತೀರಾ. ಈ special ಪತ್ರೊಡೆ ಬಾಣಲೆಯಲ್ಲಿ ಬೇಯಿಸೋದು.


10-12 ಕಪ್ಪು ದಂಟಿನ ಕೆಸುವಿನ ಎಲೆ, ರಾತ್ರಿ ನೆನೆಸಿಟ್ಟ ಅರ್ಧ ಟೇಬಲ್ ಸ್ಪೂನ್ ಹೆಸರು ಕಾಳು, ತುರಿದಿಟ್ಟ ತೆಂಗಿನ ಕಾಯಿ, ಹುರಿದ ಕೆಂಪು ಮೆಣಸು, ಹುಣಸೆ, ಉಪ್ಪು, ಹಿಂಗು.

ಮಸಾಲೆ ರುಬ್ಬಿ, ಎಲೆಗಳಿಗೆ ಸವರಿ, ಸುರುಳಿ ಸುತ್ತಿ.

ಬಾಣಲೆಯಲ್ಲಿ ಅಥವಾ ಕುಕ್ಕರ್ ನಲ್ಲಿ  ತೆಂಗಿನ ಎಣ್ಣೆಯ ಒಗ್ಗರಣೆಯಲ್ಲಿ ಸಾಸಿವೆ, ಕರಿಬೇವು, ಮೆಂತೆ ಹಿಂಗು...ಇದರಲ್ಲಿ ಸುರುಳಿ ಸುತ್ತಿಟ್ಟ ಪತ್ರೊಡೆ ಇಟ್ಟು, ಮಿಕ್ಸಿ ತೊಳೆದ ನೀರನ್ನು ಸುರಿದು, ಹತ್ತು ನಿಮಿಷ ಮುಚ್ಚಿಟ್ಟು ಬೇಯಿಸಿ.

ಎರಡು ತುತ್ತು ಹೆಚ್ಚಿಗೆ ಉಣ್ಣಬಹುದು. ನನ್ನ ಇಷ್ಟದ್ದು. ಮುಂಬೈ ನಲ್ಲಿ ಅಮ್ಮ ಆವಾಗವಾಗ ಮಾಡುತ್ತಿದ್ದರು.  36 ವರ್ಷಗಳ ನಂತರ ಮಾಡಿ ತಿಂದಿದ್ದು. ಮಗಳು ತಿಂದು 'ಎಷ್ಟು ರುಚಿಯಾಗಿದೆ, ಇವತ್ತಿನ ವರೆಗೂ ಮಾಡೇ ಇರಲಿಲ್ಲ' ಅಂತ ಹುಸಿ ಕೋಪ ಮಾಡಿಕೊಂಡಳು 😁😁

for step by step instructions click below

ಒಗ್ಗರಣೆ ಪತ್ರೊಡೆ/ಫಣ್ಣ ಪತ್ರಡೋ



November 23, 2024

Some Tips to lead a better life

 ವಯಸ್ಸು ಆಗ್ತಾ ಇದ್ದ ಹಾಗೆ ಕೆಲವು tips

1. ಸ್ನಾನದ ಕೋಣೆಯಲ್ಲಿ ಒಂದು ನೈಲ್ ಕಟ್ಟರ್ ಇಟ್ಟುಕೊಂಡು ಬಿಡಿ. ಕಾಲಿನ ಉಗುರು ಗಟ್ಟಿಯಾಗುರುತ್ತೆ, ಕೆಲವೊಮ್ಮೆ ಉಗುರು ಬೆಳೆಯಲು ಬಿಟ್ಟರೆ ಅವು ಒಳಮುಖವಾಗಿ ಚರ್ಮದ ಒಳಹೊಕ್ಕುವ ಸಾಧ್ಯತೆ ಇದೆ. ಆಗ ತುಂಬಾ ನೋವಾಗುತ್ತೆ. ಸ್ನಾನದ ಬಳಿಕ ಉಗುರು ಮೆತ್ತಗಾಗುತ್ತೆ. ಆಗ ಉಗುರು ಕತ್ತರಿಸಲು ಸುಲಭವಾಗುತ್ತೆ. ಕೆಲವರ ಕಾಲು ಉಗುರುಗಳನ್ನು ನೋಡಿದ್ದೇನೆ. ಅಸಹ್ಯವಾಗಿ ಕಾಣುತ್ತೆ. ವಯಸ್ಸಾದರೇನಂತೆ...one should be well groomed..
ಜೀವನದಲ್ಲಿ ಇನ್ನೇನಿದೆ ಅಂದು ಕೊಂಡು  dont let yourselves go...ದೈಹಿಕ ಸ್ವಚ್ಛತೆಯನ್ನು ಕಾಪಾಡಿ. ಉಗುರು ಕಟ್ ಮಾಡಿ, ಕೂದಲು ಒಪ್ಪವಾಗಿರಿಸಿ, ಚೆಂದದ ಬಟ್ಟೆ ಧರಿಸಿ

2. ತುಂಬಾ ನೀರು ಕುಡಿಯಿರಿ. ಮನೆಯಲ್ಲೇ ನಿಧಾನವಾಗಿ ವಾಕ್ ಮಾಡಿ.
3. ರಾತ್ರಿ 7.30 ಗೆ ಮುಂಚೆ ಊಟ/ತಿಂಡಿ ಮುಗಿಸಿಬಿಡಿ. ಒಂದು ಸಣ್ಣ ವಾಕ್ ಹೋಗಿ. ರಾತ್ರಿ ಹಸಿವೆ ಆದ್ರೆ ಒಂದು ಗೇರು ಬೀಜ ಅಥವಾ ಒಂದು ಬಾದಾಮಿ ತಿನ್ನಿ.
4. ಚಳಿಗಾಲ ಹತ್ತಿರ ಬರುತ್ತಿದೆ. ಕಾಲು ಬುಡಕ್ಕೆ vaseline ಹಚ್ಚಲು ಶುರು ಮಾಡಿ. ಹಚ್ಚಿ ಕಾಲು ಚೀಲ ಧರಿಸಿ. ಮನೆಯಲ್ಲಿ ಜಾರದಂತಹ ಬುಡ ವಿದ್ದ ಚಪ್ಪಲಿ ಧರಿಸಿ. ಜಮಖಾನ ಹಾಸಿಡಿ..ಕೆಲವರಿಗೆ ಚಳಿಗಾಲದಲ್ಲಿ ಮಂಡಿ ನೋವು ಶುರುವಾಗುತ್ತೆ. ನೋವು ಶುರು ಆಗುವ ಮುಂಚೆಯೇ ನೋವಿನ ತೈಲ ಹಚ್ಚಲು ಪ್ರಾರಂಭಿಸಿ. ದಿನಕ್ಕೆ ಒಂದು ಚಮಚ ತುಪ್ಪ ಕಡ್ಡಾಯವಾಗಿ  ಸೇವಿಸಿ..
5. ರಾತ್ರಿ ಎಚ್ಚರವಾದಾಗ...ನೀರು ಕುಡಿಯಲು, ಅಥವಾ ಬಾತ್ರೂಂ ಹೋಗ ಬೇಕಾದಾಗ, ನಿಧಾನಕ್ಕೆ ಎದ್ದು, ಎರಡು ನಿಮಿಷ ಕೂತಿದ್ದು..ಆಮೇಲೆ  ಏಳಿ..
6. ಮೂತ್ರ ಲೀಕ್ ಆಗುವ ಶಂಕೆ ಇದ್ದಲ್ಲಿ, ಅಥವಾ ಕೆಮ್ಮುವಾಗ/ ಸೀನುವಾಗ ಮೂತ್ರ ಲೀಕ್ ಆಗುತ್ತಿದ್ದಲ್ಲಿ : ಮಾರುಕಟ್ಟೆಯಲ್ಲಿ ಹಲವಾರು ಒಳ್ಳೆಯ quality ಯ ದಯಾಪರ್ ಇದ್ದಾವೆ. ನಿಸ್ಸಂಕೋಚವಾಗಿ ಖರೀದಿಸಿ ಬಳಸಿಕೊಳ್ಳಿ...ಇದರಲ್ಲಿ ನಾಚಿಕೆ ಪಡುವಂತದ್ದು ಏನೂ ಇಲ್ಲ. ಮುಜುಗರವಾದರೆ  ಆನ್ಲೈನ್ ಮುಖಾಂತರ ತರಿಸಿಕೊಳ್ಳಿ 👍
7. ಕಾಲು ಒರೆಸುವ ಬಟ್ಟೆ ತೂತು, ಹರಿದು ಹೋಗಿದ್ದಲ್ಲಿ ಅಂತದನ್ನು ಬಳಸಬೇಡಿ...ಮುಗ್ಗರಿಸಿ ಬೀಳುವ ಸಾಧ್ಯತೆ ಹೆಚ್ಚು. ವಯಸ್ಸಾಗುತ್ತ ಮೂಳೆ ಗಟ್ಟಿ ಇರುವುದಿಲ್ಲ. ಜಾಗ್ರತೆ ವಹಿಸಿದ್ದಷ್ಟು ನಮಗೇ ಒಳ್ಳೆಯದು. ಇತರರಿಗೆ ತೊಂದರೆ ಕೊಡುವುದು ತಪ್ಪುತ್ತದೆ.

ಸಧ್ಯಕ್ಕೆ ಇಷ್ಟು ನೆನಪಾಗಿದ್ದು....
be happy..

November 17, 2024

Beginnings of rural life

 ಗಾಡಿ ಬಂದಾಗಿನಿಂದ ಮೈಸೂರು, ಬೆಳಗಾವಿ, ತೀರ್ಥಹಳ್ಳಿ ,ಬೆಂಗಳೂರು ಅಂತ ಓಡಾಡಿಕೊಂಡು ಇದ್ದೀನಿ.

ತೀರ್ಥಹಳ್ಳಿಯಲ್ಲಿ ತೋಟದ ಸಹಾಯಕರಿಗೆ ಮನೆ almost  ರೆಡಿಯಾಗಿದೆ. ಸಧ್ಯಕ್ಕೆ ಅವರು ಬಾಡಿಗೆ ಮನೆಯಲ್ಲಿ ಇರುವ ವ್ಯವಸ್ಥೆ ಮಾಡಿದ್ದೇವೆ. 

ಮೊನ್ನೆ ಕಾರ್ತಿಕ ಹುಣ್ಣಿಮೆಯಂದು ತೋಟದಲ್ಲಿದ್ದೆ. ಬಿತ್ತನೆಯ ಕಾರ್ಯದಲ್ಲಿ ಸ್ವಲ್ಪ ಕೈ ಜೋಡಿಸಿದೆ. ತೋಟದ ಸಹಾಯಕರು 'ಬೇಡ ಮೇಡಂ, ಕೈ ಕೊಳೆ ಯಾಗ್ತದೆ ಅಂತಿದ್ರು'...ಸುಮ್ನೆ ಟ್ರಯಲ್...







many demand for the lemongrass.


ಲಲಿತಮ್ಮ...she has a beautiful smile. hardworking lady ❤️❤️. quick to grasp my husband's cultivation ideas



ಬಸವರಾಜು in yellow shirt, ನಾನು, ಮಂಜಣ್ಣ

ತೀರ್ಥಹಳ್ಳಿಯ ಬಳಿ ತುಪ್ಪದಹಳ್ಳಿಯ ರೈತರ ತೋಟದಲ್ಲಿ ಅಡಿಕೆ ಕೊಯ್ಲಿನ ದ್ರಶ್ಯ....

November 15, 2024

ಮಹಿಷಿ ಎಂಬ ಚೆಂದದ ಹಳ್ಳಿ near teerthahalli

 Mahishi.  a small village on the Shimoga- teerthahalli road..nearer to teerthahalli about 11 kms.... enrote to teerthahalli from Shivamogga..look for an arch on the left side....Mahishi is located at about 11 kms from the main road.a tranquil place to be.

the temple doors were already closed for the day even though we reached half hour prior to closing time. since there are not many visitors the priest must have gone home earlier 🙂🙂

a few pictures to give you all an idea of this amazing place








beautiful paddy field..pc : Suresh Coorg



November 13, 2024

ಮಂಗಳೂರು ಬನ್ಸ್ ಮತ್ತು ಕಾಪಿ

 ನಾನು ಟಿ ಪ್ರಿಯೆ. ಚಿಕ್ಕಂದಿನಲ್ಲಿ ಮನೆಯಲ್ಲಿ ಬನ್ಸ್ ಮಾಡಿದಾಗ ಹನ್ನೊಂದು ಗಂಟೆಗೆ ಕಾಪಿ ಮಾಡಿಕೊಂಡು ಅದರಲ್ಲೂ ಬನ್ಸ್ (ಉಳಿದರೆ) ಅದ್ದಿ ತಿನ್ನೋದು ತುಂಬಾ ಎಂಜಾಯ್  ಮಾಡುತ್ತಿದ್ದೆ.

ಈಗ ಕಾಪಿ ಕುಡಿಯೋದು ಬಿಟ್ಟಿದ್ದೇನೆ. ಅದೇನಾಯಿತು ಅಂದರೆ 5 ವರ್ಷದ ಹಿಂದೆ ಶ್ರೀಕಾಂತ್ agri college batch ಮೇಟ್ ಮತ್ತು ಫ್ಯಾಮಿಲಿ ಸೇರಿ ಶ್ರೀಲಂಕಾ ಗೆ ಟೂರ್ ಹೋಗಿದ್ವಿ. ಪ್ಲೇನ್ ಹತ್ತುವ ಮುನ್ನ ಕಾಫಿ ಕುಡಿಯಲು ಹಟ್ಟಿ ಕಾಪಿ ಕಡೆ  ಹೊರಟ್ವಿ. ನಾನು ಟಿ ಅಂದ್ರೆ ಇವರು...ಇವರ ಕಾಪಿ ಚೆನ್ನಾಗುರುತ್ತೆ ಕಾಪಿ ನೆ ತೆಗೋ ಅಂದ್ರು. ನಾನೂ ಹೂಂ ಅಂತೆ ಕುಡಿದೆ. ತುಂಬಾ ರುಚಿಯಾಗಿತ್ತು. ಇವರೆಲ್ಲ excitement ನಲ್ಲಿ ಇನ್ನೂ ಮೂರು ಕಾಫಿ  extra ಆರ್ಡರ್ ಆಗಿತ್ತು. ನಾನೋ ...ಏರ್ಪೋರ್ಟ್ ಒಳಗಡೆ ಎಲ್ಲ ತಿಂಡಿ ತೀರ್ಥ ಎಲ್ಲ ಸಿಕ್ಕಾಪಟ್ಟೆ costly... waste ಮಾಡೋದು ಬೇಡ ಅಂತ....ಚಿಕ್ಕ quantity... ನಾನು ಅವೆಲ್ಲವನ್ನೂ ಕುಡಿದು ಬಿಟ್ಟೆ. ಒಂದು ಹತ್ತು ನಿಮಿಷ ಆದ ಮೇಲೆ ಹೊಟ್ಟೆ ಎಲ್ಲ ಉರಿಲಿಕ್ಕೆ ಶುರು ಆಯ್ತು....friends always remember... ಹಣಕ್ಕಿಂತ ಆರೋಗ್ಯ ಮುಖ್ಯ.... ಶ್ರೀಲಂಕಾ ತಲುಪುವ ಹೊತ್ತಿಗೆ ಹೊಟ್ಟೆಯುರಿ ಹೋಗಿತ್ತು ಸಧ್ಯ...ಯಾರಿಗೂ ಹೇಳಿಲ್ಲ 🙂🙂. ಈಗ ಹಾಗೆಲ್ಲ ಮಾಡಲಿಕ್ಕೆ ಹೋಗಲ್ಲ...

ಇವತ್ತು ಮನೆಯಲ್ಲಿ ಬನ್ಸ್. ಅಕ್ಕನ ಜತೆ ಮೇಲ್8ನ ವಿಷಯ ಅಕ್ಕನೊಂದಿಗೆ ಶೇರ್ ಮಾಡ್ತಾ ಇದ್ದೆ...ನಿಮ್ಮೊಂದಿಗೂ ಸಹ. ಇವತ್ತು ಲೈಟ್ decoction (without chicory).ಕಾಫಿ ಜತೆ ಬನ್ಸ್






November 9, 2024

when the aloe vera flowers

 ಒಂದು ದಿನ ಅಲೋ ವೆರಾ ಗಿಡಕ್ಕೆ ನೀರು ಹಾಕ್ತೀನಿ ಅದರಲ್ಲಿ ಒಂದು infloresence ಕಾಣಿಸ್ತು. 12 ವರ್ಷದಿಂದ ಇದೆ ನನ್ನ ಬಳಿ ಈ ಗಿಡ...ಮಾತ್ರವಲ್ಲ ಇದರಿಂದ ಬೆಳೆದ ಹಲವಾರು ಮರಿ  ಗಿಡಗಳನ್ನು ಸುಮಾರು ಜನರಿಗೆ ಕೊಟ್ಟಿದ್ದಿದೆ. 

ತುಂಬಾ ಕಾತುರದಿಂದ ಕಾಯ್ತಾ ಇದ್ದೆ...5 ದಿನಗಳ ನಂತರ ನೋಡುತ್ತೇನೆ...ಹೂ ಬಿತ್ತಿದ ದಂಟು ಗಾಯಬ್. ಪಾರಿವಾಳ ಅದನ್ನು ದ್ವಂಸ ಮಾಡಿದ್ದವು. ನಾ ತೆಗೆದ ಕೆಲ ಚಿತ್ರ ಕೆಳಗಿನಂತಿವೆ..❤️❤️

for the first time i am angry at the birds 😳😳