November 24, 2024

ಒಗ್ಗರಣೆ ಪತ್ರೊಡೆ

 ಪತ್ರೊಡೆ ಎಲ್ಲರೂ ಮಾಡಿರುತ್ತೀರಾ. ಈ special ಪತ್ರೊಡೆ ಬಾಣಲೆಯಲ್ಲಿ ಬೇಯಿಸೋದು.


10-12 ಕಪ್ಪು ದಂಟಿನ ಕೆಸುವಿನ ಎಲೆ, ರಾತ್ರಿ ನೆನೆಸಿಟ್ಟ ಅರ್ಧ ಟೇಬಲ್ ಸ್ಪೂನ್ ಹೆಸರು ಕಾಳು, ತುರಿದಿಟ್ಟ ತೆಂಗಿನ ಕಾಯಿ, ಹುರಿದ ಕೆಂಪು ಮೆಣಸು, ಹುಣಸೆ, ಉಪ್ಪು, ಹಿಂಗು.

ಮಸಾಲೆ ರುಬ್ಬಿ, ಎಲೆಗಳಿಗೆ ಸವರಿ, ಸುರುಳಿ ಸುತ್ತಿ.

ಬಾಣಲೆಯಲ್ಲಿ ಅಥವಾ ಕುಕ್ಕರ್ ನಲ್ಲಿ  ತೆಂಗಿನ ಎಣ್ಣೆಯ ಒಗ್ಗರಣೆಯಲ್ಲಿ ಸಾಸಿವೆ, ಕರಿಬೇವು, ಮೆಂತೆ ಹಿಂಗು...ಇದರಲ್ಲಿ ಸುರುಳಿ ಸುತ್ತಿಟ್ಟ ಪತ್ರೊಡೆ ಇಟ್ಟು, ಮಿಕ್ಸಿ ತೊಳೆದ ನೀರನ್ನು ಸುರಿದು, ಹತ್ತು ನಿಮಿಷ ಮುಚ್ಚಿಟ್ಟು ಬೇಯಿಸಿ.

ಎರಡು ತುತ್ತು ಹೆಚ್ಚಿಗೆ ಉಣ್ಣಬಹುದು. ನನ್ನ ಇಷ್ಟದ್ದು. ಮುಂಬೈ ನಲ್ಲಿ ಅಮ್ಮ ಆವಾಗವಾಗ ಮಾಡುತ್ತಿದ್ದರು.  36 ವರ್ಷಗಳ ನಂತರ ಮಾಡಿ ತಿಂದಿದ್ದು. ಮಗಳು ತಿಂದು 'ಎಷ್ಟು ರುಚಿಯಾಗಿದೆ, ಇವತ್ತಿನ ವರೆಗೂ ಮಾಡೇ ಇರಲಿಲ್ಲ' ಅಂತ ಹುಸಿ ಕೋಪ ಮಾಡಿಕೊಂಡಳು 😁😁

for step by step instructions click below

ಒಗ್ಗರಣೆ ಪತ್ರೊಡೆ/ಫಣ್ಣ ಪತ್ರಡೋ



November 23, 2024

Some Tips to lead a better life

 ವಯಸ್ಸು ಆಗ್ತಾ ಇದ್ದ ಹಾಗೆ ಕೆಲವು tips

1. ಸ್ನಾನದ ಕೋಣೆಯಲ್ಲಿ ಒಂದು ನೈಲ್ ಕಟ್ಟರ್ ಇಟ್ಟುಕೊಂಡು ಬಿಡಿ. ಕಾಲಿನ ಉಗುರು ಗಟ್ಟಿಯಾಗುರುತ್ತೆ, ಕೆಲವೊಮ್ಮೆ ಉಗುರು ಬೆಳೆಯಲು ಬಿಟ್ಟರೆ ಅವು ಒಳಮುಖವಾಗಿ ಚರ್ಮದ ಒಳಹೊಕ್ಕುವ ಸಾಧ್ಯತೆ ಇದೆ. ಆಗ ತುಂಬಾ ನೋವಾಗುತ್ತೆ. ಸ್ನಾನದ ಬಳಿಕ ಉಗುರು ಮೆತ್ತಗಾಗುತ್ತೆ. ಆಗ ಉಗುರು ಕತ್ತರಿಸಲು ಸುಲಭವಾಗುತ್ತೆ. ಕೆಲವರ ಕಾಲು ಉಗುರುಗಳನ್ನು ನೋಡಿದ್ದೇನೆ. ಅಸಹ್ಯವಾಗಿ ಕಾಣುತ್ತೆ. ವಯಸ್ಸಾದರೇನಂತೆ...one should be well groomed..
ಜೀವನದಲ್ಲಿ ಇನ್ನೇನಿದೆ ಅಂದು ಕೊಂಡು  dont let yourselves go...ದೈಹಿಕ ಸ್ವಚ್ಛತೆಯನ್ನು ಕಾಪಾಡಿ. ಉಗುರು ಕಟ್ ಮಾಡಿ, ಕೂದಲು ಒಪ್ಪವಾಗಿರಿಸಿ, ಚೆಂದದ ಬಟ್ಟೆ ಧರಿಸಿ

2. ತುಂಬಾ ನೀರು ಕುಡಿಯಿರಿ. ಮನೆಯಲ್ಲೇ ನಿಧಾನವಾಗಿ ವಾಕ್ ಮಾಡಿ.
3. ರಾತ್ರಿ 7.30 ಗೆ ಮುಂಚೆ ಊಟ/ತಿಂಡಿ ಮುಗಿಸಿಬಿಡಿ. ಒಂದು ಸಣ್ಣ ವಾಕ್ ಹೋಗಿ. ರಾತ್ರಿ ಹಸಿವೆ ಆದ್ರೆ ಒಂದು ಗೇರು ಬೀಜ ಅಥವಾ ಒಂದು ಬಾದಾಮಿ ತಿನ್ನಿ.
4. ಚಳಿಗಾಲ ಹತ್ತಿರ ಬರುತ್ತಿದೆ. ಕಾಲು ಬುಡಕ್ಕೆ vaseline ಹಚ್ಚಲು ಶುರು ಮಾಡಿ. ಹಚ್ಚಿ ಕಾಲು ಚೀಲ ಧರಿಸಿ. ಮನೆಯಲ್ಲಿ ಜಾರದಂತಹ ಬುಡ ವಿದ್ದ ಚಪ್ಪಲಿ ಧರಿಸಿ. ಜಮಖಾನ ಹಾಸಿಡಿ..ಕೆಲವರಿಗೆ ಚಳಿಗಾಲದಲ್ಲಿ ಮಂಡಿ ನೋವು ಶುರುವಾಗುತ್ತೆ. ನೋವು ಶುರು ಆಗುವ ಮುಂಚೆಯೇ ನೋವಿನ ತೈಲ ಹಚ್ಚಲು ಪ್ರಾರಂಭಿಸಿ. ದಿನಕ್ಕೆ ಒಂದು ಚಮಚ ತುಪ್ಪ ಕಡ್ಡಾಯವಾಗಿ  ಸೇವಿಸಿ..
5. ರಾತ್ರಿ ಎಚ್ಚರವಾದಾಗ...ನೀರು ಕುಡಿಯಲು, ಅಥವಾ ಬಾತ್ರೂಂ ಹೋಗ ಬೇಕಾದಾಗ, ನಿಧಾನಕ್ಕೆ ಎದ್ದು, ಎರಡು ನಿಮಿಷ ಕೂತಿದ್ದು..ಆಮೇಲೆ  ಏಳಿ..
6. ಮೂತ್ರ ಲೀಕ್ ಆಗುವ ಶಂಕೆ ಇದ್ದಲ್ಲಿ, ಅಥವಾ ಕೆಮ್ಮುವಾಗ/ ಸೀನುವಾಗ ಮೂತ್ರ ಲೀಕ್ ಆಗುತ್ತಿದ್ದಲ್ಲಿ : ಮಾರುಕಟ್ಟೆಯಲ್ಲಿ ಹಲವಾರು ಒಳ್ಳೆಯ quality ಯ ದಯಾಪರ್ ಇದ್ದಾವೆ. ನಿಸ್ಸಂಕೋಚವಾಗಿ ಖರೀದಿಸಿ ಬಳಸಿಕೊಳ್ಳಿ...ಇದರಲ್ಲಿ ನಾಚಿಕೆ ಪಡುವಂತದ್ದು ಏನೂ ಇಲ್ಲ. ಮುಜುಗರವಾದರೆ  ಆನ್ಲೈನ್ ಮುಖಾಂತರ ತರಿಸಿಕೊಳ್ಳಿ 👍
7. ಕಾಲು ಒರೆಸುವ ಬಟ್ಟೆ ತೂತು, ಹರಿದು ಹೋಗಿದ್ದಲ್ಲಿ ಅಂತದನ್ನು ಬಳಸಬೇಡಿ...ಮುಗ್ಗರಿಸಿ ಬೀಳುವ ಸಾಧ್ಯತೆ ಹೆಚ್ಚು. ವಯಸ್ಸಾಗುತ್ತ ಮೂಳೆ ಗಟ್ಟಿ ಇರುವುದಿಲ್ಲ. ಜಾಗ್ರತೆ ವಹಿಸಿದ್ದಷ್ಟು ನಮಗೇ ಒಳ್ಳೆಯದು. ಇತರರಿಗೆ ತೊಂದರೆ ಕೊಡುವುದು ತಪ್ಪುತ್ತದೆ.

ಸಧ್ಯಕ್ಕೆ ಇಷ್ಟು ನೆನಪಾಗಿದ್ದು....
be happy..

November 17, 2024

Beginnings of rural life

 ಗಾಡಿ ಬಂದಾಗಿನಿಂದ ಮೈಸೂರು, ಬೆಳಗಾವಿ, ತೀರ್ಥಹಳ್ಳಿ ,ಬೆಂಗಳೂರು ಅಂತ ಓಡಾಡಿಕೊಂಡು ಇದ್ದೀನಿ.

ತೀರ್ಥಹಳ್ಳಿಯಲ್ಲಿ ತೋಟದ ಸಹಾಯಕರಿಗೆ ಮನೆ almost  ರೆಡಿಯಾಗಿದೆ. ಸಧ್ಯಕ್ಕೆ ಅವರು ಬಾಡಿಗೆ ಮನೆಯಲ್ಲಿ ಇರುವ ವ್ಯವಸ್ಥೆ ಮಾಡಿದ್ದೇವೆ. 

ಮೊನ್ನೆ ಕಾರ್ತಿಕ ಹುಣ್ಣಿಮೆಯಂದು ತೋಟದಲ್ಲಿದ್ದೆ. ಬಿತ್ತನೆಯ ಕಾರ್ಯದಲ್ಲಿ ಸ್ವಲ್ಪ ಕೈ ಜೋಡಿಸಿದೆ. ತೋಟದ ಸಹಾಯಕರು 'ಬೇಡ ಮೇಡಂ, ಕೈ ಕೊಳೆ ಯಾಗ್ತದೆ ಅಂತಿದ್ರು'...ಸುಮ್ನೆ ಟ್ರಯಲ್...







many demand for the lemongrass.


ಲಲಿತಮ್ಮ...she has a beautiful smile. hardworking lady ❤️❤️. quick to grasp my husband's cultivation ideas



ಬಸವರಾಜು in yellow shirt, ನಾನು, ಮಂಜಣ್ಣ

ತೀರ್ಥಹಳ್ಳಿಯ ಬಳಿ ತುಪ್ಪದಹಳ್ಳಿಯ ರೈತರ ತೋಟದಲ್ಲಿ ಅಡಿಕೆ ಕೊಯ್ಲಿನ ದ್ರಶ್ಯ....

November 15, 2024

ಮಹಿಷಿ ಎಂಬ ಚೆಂದದ ಹಳ್ಳಿ near teerthahalli

 Mahishi.  a small village on the Shimoga- teerthahalli road..nearer to teerthahalli about 11 kms.... enrote to teerthahalli from Shivamogga..look for an arch on the left side....Mahishi is located at about 11 kms from the main road.a tranquil place to be.

the temple doors were already closed for the day even though we reached half hour prior to closing time. since there are not many visitors the priest must have gone home earlier 🙂🙂

a few pictures to give you all an idea of this amazing place








beautiful paddy field..pc : Suresh Coorg



November 13, 2024

ಮಂಗಳೂರು ಬನ್ಸ್ ಮತ್ತು ಕಾಪಿ

 ನಾನು ಟಿ ಪ್ರಿಯೆ. ಚಿಕ್ಕಂದಿನಲ್ಲಿ ಮನೆಯಲ್ಲಿ ಬನ್ಸ್ ಮಾಡಿದಾಗ ಹನ್ನೊಂದು ಗಂಟೆಗೆ ಕಾಪಿ ಮಾಡಿಕೊಂಡು ಅದರಲ್ಲೂ ಬನ್ಸ್ (ಉಳಿದರೆ) ಅದ್ದಿ ತಿನ್ನೋದು ತುಂಬಾ ಎಂಜಾಯ್  ಮಾಡುತ್ತಿದ್ದೆ.

ಈಗ ಕಾಪಿ ಕುಡಿಯೋದು ಬಿಟ್ಟಿದ್ದೇನೆ. ಅದೇನಾಯಿತು ಅಂದರೆ 5 ವರ್ಷದ ಹಿಂದೆ ಶ್ರೀಕಾಂತ್ agri college batch ಮೇಟ್ ಮತ್ತು ಫ್ಯಾಮಿಲಿ ಸೇರಿ ಶ್ರೀಲಂಕಾ ಗೆ ಟೂರ್ ಹೋಗಿದ್ವಿ. ಪ್ಲೇನ್ ಹತ್ತುವ ಮುನ್ನ ಕಾಫಿ ಕುಡಿಯಲು ಹಟ್ಟಿ ಕಾಪಿ ಕಡೆ  ಹೊರಟ್ವಿ. ನಾನು ಟಿ ಅಂದ್ರೆ ಇವರು...ಇವರ ಕಾಪಿ ಚೆನ್ನಾಗುರುತ್ತೆ ಕಾಪಿ ನೆ ತೆಗೋ ಅಂದ್ರು. ನಾನೂ ಹೂಂ ಅಂತೆ ಕುಡಿದೆ. ತುಂಬಾ ರುಚಿಯಾಗಿತ್ತು. ಇವರೆಲ್ಲ excitement ನಲ್ಲಿ ಇನ್ನೂ ಮೂರು ಕಾಫಿ  extra ಆರ್ಡರ್ ಆಗಿತ್ತು. ನಾನೋ ...ಏರ್ಪೋರ್ಟ್ ಒಳಗಡೆ ಎಲ್ಲ ತಿಂಡಿ ತೀರ್ಥ ಎಲ್ಲ ಸಿಕ್ಕಾಪಟ್ಟೆ costly... waste ಮಾಡೋದು ಬೇಡ ಅಂತ....ಚಿಕ್ಕ quantity... ನಾನು ಅವೆಲ್ಲವನ್ನೂ ಕುಡಿದು ಬಿಟ್ಟೆ. ಒಂದು ಹತ್ತು ನಿಮಿಷ ಆದ ಮೇಲೆ ಹೊಟ್ಟೆ ಎಲ್ಲ ಉರಿಲಿಕ್ಕೆ ಶುರು ಆಯ್ತು....friends always remember... ಹಣಕ್ಕಿಂತ ಆರೋಗ್ಯ ಮುಖ್ಯ.... ಶ್ರೀಲಂಕಾ ತಲುಪುವ ಹೊತ್ತಿಗೆ ಹೊಟ್ಟೆಯುರಿ ಹೋಗಿತ್ತು ಸಧ್ಯ...ಯಾರಿಗೂ ಹೇಳಿಲ್ಲ 🙂🙂. ಈಗ ಹಾಗೆಲ್ಲ ಮಾಡಲಿಕ್ಕೆ ಹೋಗಲ್ಲ...

ಇವತ್ತು ಮನೆಯಲ್ಲಿ ಬನ್ಸ್. ಅಕ್ಕನ ಜತೆ ಮೇಲ್8ನ ವಿಷಯ ಅಕ್ಕನೊಂದಿಗೆ ಶೇರ್ ಮಾಡ್ತಾ ಇದ್ದೆ...ನಿಮ್ಮೊಂದಿಗೂ ಸಹ. ಇವತ್ತು ಲೈಟ್ decoction (without chicory).ಕಾಫಿ ಜತೆ ಬನ್ಸ್






November 9, 2024

when the aloe vera flowers

 ಒಂದು ದಿನ ಅಲೋ ವೆರಾ ಗಿಡಕ್ಕೆ ನೀರು ಹಾಕ್ತೀನಿ ಅದರಲ್ಲಿ ಒಂದು infloresence ಕಾಣಿಸ್ತು. 12 ವರ್ಷದಿಂದ ಇದೆ ನನ್ನ ಬಳಿ ಈ ಗಿಡ...ಮಾತ್ರವಲ್ಲ ಇದರಿಂದ ಬೆಳೆದ ಹಲವಾರು ಮರಿ  ಗಿಡಗಳನ್ನು ಸುಮಾರು ಜನರಿಗೆ ಕೊಟ್ಟಿದ್ದಿದೆ. 

ತುಂಬಾ ಕಾತುರದಿಂದ ಕಾಯ್ತಾ ಇದ್ದೆ...5 ದಿನಗಳ ನಂತರ ನೋಡುತ್ತೇನೆ...ಹೂ ಬಿತ್ತಿದ ದಂಟು ಗಾಯಬ್. ಪಾರಿವಾಳ ಅದನ್ನು ದ್ವಂಸ ಮಾಡಿದ್ದವು. ನಾ ತೆಗೆದ ಕೆಲ ಚಿತ್ರ ಕೆಳಗಿನಂತಿವೆ..❤️❤️

for the first time i am angry at the birds 😳😳







November 4, 2024

ವೇಣುಗೋಪಾಲಸ್ವಾಮಿ ಮಂದಿರ, KRS Backwaters

 ನಿಹಾ ಗೆ ಮೈಸೂರಿಗೆ ಡ್ರಾಪ್ ಮಾಡಲು ಹೋಗಲಿಕ್ಕಿತ್ತು. ದೀಪಾವಳಿಗೆ ನಾಲ್ಕು ದಿನ ಮನೆಗೆ ಬಂದಿದ್ದಳು. ನಾಲ್ಕು ಜನ ಸೇರಿ ದೀಪಾವಳಿ ಆಚರಿಸಿದ್ವಿ. ಎರಡು ಮೂರು ವರ್ಷ ಅವಳು ಭೋಪಾಲ್ ನಲ್ಲಿದ್ದಳು. ಈ ಸಲ ಶಾಪಿಂಗ್, ತಿಂಡಿ ತಿನಿಸು ಅಂತ ಗಮ್ಮತ್ತು ಮಾಡಿದ್ವಿ.

 ಬೆಳಿಗ್ಗೆ ಬೇಗ ಹೋಗಿ, ಸ್ವಲ್ಪ ಸಮಯ ವಿರಮಿಸಿ ನಂತರ ಕೆ ಆರ್ ಎಸ್ ಕಡೆ ಹೋಗುವುದೆಂದಾಯಿತು. ಮೋಡದ ವಾತಾವರಣ ಇದ್ದುದರಿಂದ ನಮ್ಮ ದೇವಸ್ಥಾನದ ಟ್ರಿಪ್ ಚೆನ್ನಾಗಾಯಿತು.

khoday'ಸ್ ನವರು ನೀರಿನಲ್ಲಿ ಮುಳುಗಿದ್ದ ದೇವಾಲಯವನ್ನು ಪುನರುಜ್ಜೀವನಗಳಿಸಿದ್ದಾರೆ. ಫೋನ್ switch ಆಫ್ ಮಾಡಿ ಮತ್ತು ದಕ್ಷಿಣೆ ಹಾಕಬಾರದೆಂದು... ಸೆಕ್ಯುರಿಟಿ ಅವರು ಬಾರಿ ಬಾರಿ ಎಚ್ಚರಿಸುತ್ತಾರೆ. ತುಂಬಾ ನೆ ಚೆನ್ನಾಗಿದೆ ದೇವಸ್ಥಾನ. ಒಳ್ಳೆ vibes ಇದೆ. ಇನ್ನೊಮ್ಮೆ ಶ್ರೀಕಾಂತ್ ಜತೆ ಹೋಗಬೇಕು.

ನಾವು ಮೂವರು ತುಂಬಾ ಎಂಜಾಯ್ ಮಾಡಿದೆವು. 🙂🙂❤️

















ಅಲ್ಲೇ ಬಳಿಯಿದ್ದ ಕೂಲ್ point ಗೆ ಹೋಗಿ ಗೋಲಿ ಸೋಡಾ ಕುಡಿದ್ವಿ 😁. ಹಸಿರು ತೋಟ(ರಾಗಿ) , ನೀರು ಇರುವ ಬಳಿ ಕೆಲವು ಕುರ್ಚಿ ಮೇಜು ಇಟ್ಟಿದ್ದಾರೆ. ಅಲ್ಲಿನ ಬಾತು ಕೋಳಿಗಳ ಜತೆ ಒಡನಾಡುತ್ತ ಸ್ವಲ್ಪ ಸಮಯ ಕಳೆದ್ವಿ. ಈ ಚಿತ್ರಗಳು ಅಜಯ್ ಬಿ ತೆಗೆದದ್ದು 👍🙏





a day well spent..ಹೋಗುವಾಗ ಎರಡು ಗಂಟೆಯಲ್ಲಿ ಮೈಸೂರು ತಲುಪಿದ್ವಿ. ವಾಪಸ್ ಬರುವಾಗ ಬಿಡದಿಯಿಂದ ಟ್ರಾಫಿಕ್ ನಲ್ಲಿ ಸಿಲುಕಿ..ಮೂರುವರೆ ತಾಸು ಬೇಕಾಯಿತು ಮನೆ ತಲುಪಲು. ರಜೆ ಮುಗಿಸಿ ಊರಿಗೆ ಹೋದವರು ವಾಪಸ್ ಬರುವ ಕಾರಣ ಅಂದುಕೊಂಡ್ವಿ

ಒಟ್ಟಿನಲ್ಲಿ ಒಂದು ಒಳ್ಳೆಯ ದೀಪಾವಳಿ ❤️❤️😁👍🙏




November 2, 2024

ಬೆಂಗಳೂರು ಹೀಗಾಗ್ತಿದೆ

 ಮೊನ್ನೆ ಒಂದಿನ ಆಟೋ ದಲ್ಲಿ ಮೆಟ್ರೊ ಕ್ಯಾಶ್ & ಕ್ಯಾರಿ ಗೆ ಹೋಗಿದ್ದೆ. ಆಟೋ maintenance ಇಲ್ಲದೆ ಹಾಳಾಗಿ ಹೋಗಿತ್ತು..ಅದರ ಜತೆ ರಸ್ತೆ ಕೂಡ ಹಾಳು. ಓಡಿಸುವವನು ಇದ್ದ ಬದ್ದ ಹೊಂಡದಲ್ಲಿ ಆಟೋ ಚಲಾಯಿಸುತ್ತಿದ್ದ. ಗಮ್ಯ ತಲುಪುವಷ್ಟರಲ್ಲಿ ಮೈ  ಕೈ ಗೆ ಕೀಲು / ಗಂಟು ಇರುವುದರ ಬಗ್ಗೆ ಗೊತ್ತಾಯ್ತು. ಒಂದು ತರಹ ಹುಷಾರು ತಪ್ಪಿದ ಹಾಗಾಯ್ತು. ರಾತ್ರಿ ಬೆನ್ನು ನೋವು ಸೊಂಟ ನೋವು ಬಂದು ..ಬೆಳಿಗ್ಗೆ ಏಳಲ್ಲ ಅನ್ನಿಸಿತು...




luckily i was fine

ಇನ್ನೊಂದು ಘಟನೆ ಕೇಳಿ


ನಮ್ಮ ಮನೆ ಬಳಿ busy junction... ಆಚೆ ಬದಿ ದಾಟಲು ಸುಮಾರು ಸಮಯ ನಿಲ್ಲ ಬೇಕು..ಅದರಲ್ಲೂ ಎಲ್ಲೆಂದರಲ್ಲಿ, ಅಡ್ಡಾದಿಡ್ಡಿ ನುಗ್ಗುವ ವಾಹನಗಳು. ಕ್ರಾಸ್ ಮಾಡಲು ನಿಂತಿದ್ದೆ. ಹಿಂಬದಿಯಿಂದ ದೊಡ್ಡ ಗಾಡಿ ನಿಧಾನಕ್ಕೆ ನನ್ನನ್ನು brush ಮಾಡಿ, ಹಾಗೆ ಹೋಗುತ್ತಾಯಿತ್ತು, ನಾನು ಆಯ ತಪ್ಪಿ ಅದರ ಬಾನೆಟ್ ಮೇಲೆ ವಾಲಿದೆ....ಹಿಡಿದುಕೊಳ್ಳುವಾ ಅಂದರೆ ಯಾವುದೇ ಗ್ರಿಪ್ ಸಿಗಲಿಲ್ಲ..ಇನ್ನೇನು ಚಕ್ರದ ಕೇಳಗೆ ಬೀಳುತ್ತೇನೆ ಅಂದುಕೊಳ್ಳುತ್ತಿದ್ದ ಹಾಗೆ ನನ್ನ ಜತೆಗಿದ್ದ ಅಕ್ಕ,ಸಮಯಪ್ರಜ್ಞಯೇ ಇಂದ ನನ್ನ ಕೈ ಹಿಡಿದು ಬಲ ಹಾಕಿ ತನ್ನ ಕಡೆಗೆ ಎಳೆದಳು. ಬಚಾವಾದೆ...ಡ್ರೈವರ್ ಗೆ ಸ್ವಲ್ಪ ಅವ್ಯಾಚ್ಯ ಭಾಷೆಯಿಂದ ಬೈದು ಬಿಟ್ಟೆ...ಕಣ್ಣು ಕಾಣದಿದ್ದರೆ ಗಾಡಿ ಚಲಾಯಿಸ  ಬಾರದು ಎಂದೇ...ಇಷ್ಟೆಲ್ಲ ಆದರೂ ಹಿಂದುಗಡೆ ಕೂತ ಟಿಪ್ ಟಾಪ್ ಆಸಾಮಿಯ   ಮಹಾ ಓದುವ ಪೋಸ್...ನಾನು ಗಾಡಿ ನಂಬರ್ ಸ್ವಲ್ಪ ಹೊತ್ತು ನೆನಪಿನಲ್ಲಿಟ್ಟು ಕೊ0ಡಿದ್ದೆ....ಆಮೇಲೆ ಮರೆತು ಹೋಯ್ತು...ಹೀಗಾಗಿದೆ ನಮ್ಮ ಟ್ರಾಫಿಕ್...