May 17, 2024

ಕ್ಯಾಥಿ

 ಸುಂದರಮ್ಮ ವಿಮಾನ ನಿಲ್ದಾಣದಲ್ಲಿ ಕೂತಲ್ಲೇ ಚಡಪಡಿಸುತ್ತಿದ್ದರು. ಮಗ ಮತ್ತು ಸೊಸೆಗಾಗಿ ಕಾದಿದ್ದರು.

ಅಮೆರಿಕದಲ್ಲಿರುವ ಮಗ ದೂರವಾಣಿಯಲ್ಲಿ ಅರ್ಜೆಂಟಾಗಿ ಕ್ಯಾಥಿಯನ್ನು
ಮದುವೆ ಮಾಡಿಕೊಳ್ಳಬೇಕಾಯಿತೆಂದು...ಮದುವೆಯ ಉಳಿದ ಕಲಾಪಗಳನ್ನು ಭಾರತದಲ್ಲಿ, ನಿನಗೆ ಬೇಕಾದ ಹಾಗೆ ಮಾಡು' ಅಂತಷ್ಟೇ ಹೇಳಿ, ತಾನು ಭಾರತಕ್ಕೆ ತಲುಪಲಿರುವ ದಿನಾಂಕವನ್ನು ಹೇಳಿ ಫೋನನ್ನು ಕಟ್ ಮಾಡಿದ್ದ.
ಸಾಂಪ್ರದಾಯಿಕ ವಾಗಿ ಬೆಳೆದಿರುವ ಸುಂದರಮ್ಮನಿಗೆ ತುಂಬಾ ಬೇಜಾರಾಗಿತ್ತು. ಮಗ ತಡವಾಗಿ ಮದುವೆಯಾಗಿದ್ಫು, ಅದೂ ಬೇರೆ ಜಾತಿಯವಳು, ಸಂಬಂಧಿಕರಿಗೆ ಹೇಗೆ ಮುಖ ತೋರಿಸುವುದು..ಇತ್ಯಾದಿಯಾಗಿ ಮನ ಹೊಕ್ಕುತ್ತಿದ್ದವು.
ಕೊನೆಗೂ ವಿಮಾನ ಬಂದಿಳಿಯಿತು. ಕಾತರದಿಂದ ಸುಂದರಮ್ಮ ನೋಡಿದರು. ಮಗನ ಜತೆಗೆ ಸೀರೆ ಉಟ್ಟಿಕೊಂಡು ಬಂದ ಹುಡುಗಿಯನ್ನು. ದೇವರ ಮನೆಯಲ್ಲಿದ್ದ ಲಕ್ಷ್ಮಿ ಪಟವನ್ನು ಹೋಲುತ್ತಿದ್ದ ಮುಖ. ಹತ್ತಿರ ಬಂದು ಮಗ ಸೊಸೆ ಸುಂದರಮ್ಮನ ಕಾಲಿಗೆ ಬಿದ್ದು ನಮಸ್ಕರಿಸಿದರು. ಅಮ್ಮ ಮೀಟ್ ಕ್ಯಾಥಿ ಉರ್ಫ್ ಕಾತ್ಯಾಯಿನಿ ಅಂತ ತುಂಟ ನಗೆ ನಕ್ಕ ಮಗನ ತಲೆ ಮೊಟಕಿದರು ಸುಂದರಮ್ಮ 😁😁

           meta generated pic 👍🙂


No comments:

Post a Comment