April 29, 2024

My mom my pride/ನನ್ನ ಅಮ್ಮ ನನ್ನ ಹೆಮ್ಮೆ

 


mahaa proud of my 75 year mom who climbed all the way up to Vaishnodevi. She travelled with the Nirmala Travels group, with her Friend Shobha Byakode, belagavi.

She says many people took pictures with her, saying she was an inspiration to them.  But she humbly says it was all because of the goddess who gave her the strength to fulfill her long awaited dream of visiting Vaishnodevi.

she returned yesterday after 12 day long trip. she says she enjoyed thoroughly.


The picture above taken in Srinagar

#vaishnodevi #jaimatadi.❤️❤️❤️❤️❤️👍👍

April 17, 2024

ರಾಮ ನವಮಿ : ಪಾನಕ + ಕೋಸಂಬರಿ

  



ರಾಮ ನವಮಿ ಬೇಸಿಗೆಯಲ್ಲಿ ಬರುವುದು. ದೇಹ ತಂಪಾಗಿರಿಸಲು ಪಾನಕ ಮತ್ತು ಕೋಸಂಬರಿ ಮಾಡುತ್ತೇವೆ. 

ಪಾನಕ:

ನೀರು, ಬೆಲ್ಲ, ನಿಂಬೆ ಹಣ್ಣು, ಶುಂಠಿ, ಕರಿಮೆಣಸಿನ ಕಾಳು, ಏಲಕ್ಕಿ.

 ನೀರಲ್ಲಿ ಬೆಲ್ಲ ಹಾಕಿಡಿ. ಕರಗಿದ ಮೇಲೆ ಸೋಸಿಡಿ.

ಇದಕ್ಕೆ ಕುಟ್ಟಿದ ಏಲಕ್ಕಿ, ಕರಿಮೆಣಸಿನ ಕಾಳು ಮತ್ತು ಶುಂಠಿ ಜಜ್ಜಿ ಹಾಕಿ. 

ನಿಂಬೆ ರಸ ಬೆರೆಸಿ.

ಪಾನಕ ರೆಡಿ. 

ಕೋಸಂಬರಿ:

ಚೆನ್ನಾಗಿ ತೊಳೆದು, ಎರಡು ಗಂಟೆ ನೀರಲ್ಲಿ ನೆನೆಸಿಟ್ಟ ಹೆಸರು ಬೇಳೆ

ತುರಿದ ಹಸಿ ಮಾವಿನಕಾಯಿ + ಸೌತೆ ಕಾಯಿ, ಸಣ್ಣಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ

ಒಗ್ಗರಣೆಗೆ : ಎಣ್ಣೆ ಸಾಸಿವೆ ಕರಿಬೇವು ಹಿಂಗು

ತುರಿದ ತಾಜಾ ತೆಂಗಿನಕಾಯಿ + ಕೊತ್ತಂಬರಿ ಸೊಪ್ಪು

ಉಪ್ಪು

ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಗ್ಗರಣೆ ಹಾಕಿ, ಮೇಲೆ ಕಾಯಿ ತುರಿ, ಕೊತ್ತಂಬರಿ ಸೊಪ್ಪು ಉದುರಿಸಿ

ಅಷ್ಟೇ...😀😀

April 4, 2024

ಬೇಸಿಗೆಗೆ -ತಂಪಾದ recipe



ಬಾಳೆ ದಿಂಡನ್ನು ಸಣ್ಣಕ್ಕೆ ಕತ್ತರಿಸಿ ಉಪ್ಪು ನೀರಲ್ಲಿ ಹಾಕಿಡುವುದು.
ಊಟದ ಸಮಯಕ್ಕೆ ದಿಂಡುಗಳನ್ನು ನೀರಿನಿಂದ ಹಿಂಡಿ ತೆಗೆದು ದಪ್ಪ ಮೊಸರಲ್ಲಿ ಬೆರೆಸಿ. ಸಾಸುವೆ, ಕರಿಬೇವು, ಜೀರಿಗೆ, ಸಣ್ಣಕ್ಕೆ ಕತ್ತರಿಸಿದ ಹಸಿ ಮೆಣಸಿನಕಾಯಿ,ಹಿಂಗಿನ ಒಗ್ಗರಣೆ ಹಾಕಿ. ಉಪ್ಪು ಬೆರೆಸಿ. ಬೇಕಿದ್ದಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ. ಸಲಾಡ್ ತರಹ ತಿನ್ನಬಹುದು ಅಥವಾ ಅನ್ನದ ಜತೆ 👍👍
ಹಲವಾರು ವರ್ಷದ ಹಿಂದೆ ಸಿದ್ದ ಸಮಾಧಿ ಯೋಗ ಅನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. . ಅಲ್ಲಿ ಕೊನೆಯ ದಿನ ಇದನ್ನು ನಮ್ಮಿಂದ ಮಾಡಿಸಿದ್ದರು. ಹಸಿ ಮೆಣಸಿನ ಕಾಯಿ ಬದಲಿಗೆ ಕಾಳುಮೆಣಸಿನ ಪುಡಿ ಬೆರೆಸಿದ್ವಿ 🙂👍


April 2, 2024

shadrasa cooking channel

   ಷಡ್ರಸ cooking channel... ನನ್ನ ತಂದೆಯ ಆಪ್ತ ಮಿತ್ರರ ಮಗಳು ಶುರು ಮಾಡಿದ್ದು.ತುಂಬಾ ಚೆನ್ನಾಗಿದೆ. ಒಂದು ಲಿಂಕ್ ಕೊಡ್ತೀನಿ. ನೋಡಿ. ಇಷ್ಟವಾದ್ರೆ ಶೇರ್, subscribe ಮಾಡಿ.

ಮಗಳು ಈ ಚ್ಯಾನೆಲ್ ನೋಡಿ ಸುಮಾರೆಲ್ಲ ಅಡಿಗೆ ಮಾಡಿದ್ದಳು ನಾನು ಊರಲ್ಲಿ ಇಲ್ಲದಿದ್ದಾಗ . ನಾನು ಬಂದ ಮೇಲೆ ಬಾಳೆ ಹಣ್ಣಿನ ಗೊಜ್ಜು ಮಾಡಿದ್ದಳು. ನನಗೆ ಇಷ್ಟವಾಗಿತ್ತು. ಅಷ್ಟೇ ಅಲ್ಲ ಮರೆತು ಹೋದ ಹಲವಾರು recipe ಗಳನ್ನು ಈ channel ನೆನಪಿಸಿದೆ.




ಅಮ್ಮನ ಮನೆಗೆ ಹೋದಾಗ ಸಿಹಿ ಇಡ್ಲಿ, ಹುರುಳಿ ಇಡ್ಲಿ, ಎಲ್ಲ ಮಾಡಿ ತಿಂದೆವು. ಈ channel ಬಗ್ಗೆ ಹೇಳಿದ್ದು ಕೂಡ ಅಮ್ಮ. ಮೊನ್ನೆ ಮಂಗಳೂರಿಗೆ ಮದುವೆಗೆ ಹೋದಾಗ , ಅಮ್ಮ ತಮ್ಮ ತಂಗಿ ಅವರ ಮನೆಗೆ ಭೇಟಿ ನೀಡಿ ಬಂದಿದ್ದರು. ❤️😆