ಹಳೆ ಪೋಸ್ಟ್...ಈ ಮನೆಗೆ ಬಂದಾಗ ಬರೆದಿದ್ದು. ಆಸಕ್ತಿಯಿದ್ದಲ್ಲಿ ಓದ ಬಹುದು ಸ್ವಲ್ಪ ಉದ್ದ ಇದೆ 🙏🙏😲
flash forward to this day
ನಮ್ಮ ಮನೆ ಎದುರಿಗೆ ಮೆಟ್ರೋ ಲೈನ್ ಹಾಗೂ ಅದರ ಕೆಳಗಡೆ ಜಯದೇವ ದಿಂದ ಸಿಲ್ಕ್ ಬೋರ್ಡ್ ಗೆ ಫ್ಲೈ ಓವರ್ ಆಗ್ತಾ ಇದೆ. ಇನ್ನು ಕೆಲವೇ ದಿನಗಳಲ್ಲಿ ರಸ್ತೆ ಓಡಾಟಕ್ಕೆ ಸಜ್ಜಾಗುತ್ತಿದೆ ಆನ್5ಆ ಅನಿಸುತ್ತಿದೆ. trial 5ಅರಹ ಜೇಲವು ವಾಹನಗಳು ಓಡಾಡುತ್ತಿವೆ. ರಾತ್ರಿ ಈ ಕಾಮಗಾರಿಗಳು ನಡೆಯುತ್ತಿರುವಾಗ ಅದು ಬೆರೆನೆ ಲೋಕ. ಎಷ್ಟು ಚಲಿಯಾದ್ರು ನಾನು ಫ್ಯಾಅನ್ ಫುಲ್ ಸ್ಪೀಡ್ ಗೆ ಇಟ್ಟಿರುತ್ತೇನೆ. ಇಲ್ಲದಿದ್ದರೆ ಅಲ್ಲಿನ ಸಡ್ಡು ಗದ್ದಲದಿಂದ ನನ್ನ ಅಲ್ಪ ಸ್ವಲ್ಪ ನಿದ್ರೆಗೆ ಅಡ್ಡಿಯಾಗುತ್ತದೆ.
ನನ್ನ ಬಾಲ್ಕನಿ ಕೆಳ ಗಡೆಯ ಪೆಟ್ಟಿಗೆ ಅಂಗಡಿ ಇಲ್ಲದೆ ಭಣ ಭಣ ಎನಿಸುತ್ತಿತ್ತು. ಈಗ ಹೊಸ ಗಾಡಿ ಬಂದಿದೆ.
ಇವತ್ತು ಬಂದಿಲ್ಲ 🍁😧 ಮಳೆಯಿಂದ ರಕ್ಷಣೆಗೆ tarpaul 👍ಹೆಂಡತಿ (ನನ್ನ ಅನುಮಾನ) ಬೆಳಿಗ್ಗೆ ಬೇಗ ಬಂದು, ತಳ್ಳು ಗಾಡಿಗೆ ಹಾಕಿದ ಬೀಗ ತೆಗೆದು, footpath ಮೇಲಿನ ಕಸ ಗುಡಿಸಿ, ಪೂಜೆ ಮಾಡುತ್ತಾಳೆ.ಅಲ್ಲೇ ಬದಿಯಲ್ಲಿರುವ restaurant ನಿಂದ ಒಂದು ಕೊಡ ನೀರು ತಂದು ಕ್ಯಾನ್ ಗೆ ತುಂಬುತ್ತಾಳೆ. ಆಕೆಗೆ ಆ ರೆಸ್ಟೋರೆಂಟ್ ನಲ್ಲೇ ಕೆಲಸ.
ಆಮೇಲೆ ಅವನು ನಿಧಾನಕ್ಕೆ ಕಾಲೇಳುಕೊಂಡು ಬಂದು (ಒಂದು ಕಾಲಲ್ಲಿ ಏನೋ ಊನ) ಬಂದು ಟಿ ಮಾಡಲು ಪ್ರಾರಂಭಿಸುತ್ತಾನೆ. ನಮ್ಮ security ಬಳಿ ಕಾಪಿಟ್ಟ ಒಂದು ಪ್ಲ್ಯಾಸ್ಟಿಕ್ ಸ್ಟೂಲ್ ಮತ್ತೊಂದು ಕುರ್ಚಿ ತಂದಿಡುತ್ತಾನೆ
ಕಸ್ಟಮರ್ಸ್ ಗೆ ಟಿ ಮತ್ತು ಸಿಗರೇಟ್ ಸೇದುವಲ್ಲಿ ಕಂಪನಿ ಬೇರೆ ಕೊಡುತ್ತಾನೆ. ಅದು ನನಗೆ ನಗು ಬರೆಸುತ್ತದೆ. ಟಿ ಜತೆ ತೆಂಗಿನ ಕಾಯಿ ಬರಫಿ, ಬಿಸ್ಕತ್ ಮತ್ತು ಜರ್ದಾ ಕೂಡ ಸಿಗುತ್ತೆ. ಒಳ್ಳೆ ಗಿರಾಕಿಗಳು ಆತನಿಗೆ 🙂 ಟಿ ಮತ್ತಿ ಸಿಗರೇಟ್ ಹೆಚ್ಚು sales
post update: ಸಂಜೆ ನಂತರ ಬಿಸಿನೆಸ್ as usual. ಸಂಜೆಯ ಮೋಡ, ಮಳೆ, ಗಾಳಿ ಚಳಿಗೆ ಒಳ್ಳೆಯ ವ್ಯಾಪಾರ 👍👍
ಅಲ್ಲಿ ಪಕ್ಕ ಸುಮಾರು ಗ್ರಾಹಕರು ಇದ್ದಾರೆ. zoom ಮಾಡಿದ್ದರಿಂದ ಅವರು ಕಾಣುತ್ತಿಲ್ಲsigning off from my balcony 🙂🙂




No comments:
Post a Comment