ಗಿಡಗಳ ಜತೆ ಸಮಯ ಕಳೆಯುವುದು ತುಂಬಾ ಉಲ್ಲಾಸದಾಯಕ. ಮನಸ್ಸಿಗೆ ಸಮಾಧಾನ ನೀಡುವ ಕಾಯಕ. ಗಿಡಗಳನ್ನು ಸವರುವುದು, ಕಳೆ ಕೀಳುವುದು, ಮರುಪಾತಿ (repotting)ಮಾಡುವುದು...ಸಮಯ ಸರಿದದ್ದೇ ಗೊತ್ತಾಗುವುದಿಲ್ಲ.
ಹೀಗೆ ನಿನ್ನೆ pot ಗಳನ್ನೆಲ್ಲ ವ ಸಲ್ಪ set ಮಾಡ್ತಾ ಇದ್ದೆ. ಈ ಸಾಂಬಾರಬಳ್ಳಿ ಹೇಗೆ ಅಡ್ಡಾದಿಡ್ಡಿ ಬೆಳೆದಿದೆ ನೋಡಿ. 🙂. ಮೂರು ನಾಲ್ಕು ಪಾಟ್ ಗಳಲ್ಲಿ ಬೆಳೆದಿದ್ದೇನೆ ಈ ಗಿಡವನ್ನು.
ಕೆಮ್ಮು, ನೆಗಡಿ ಯಾದಲ್ಲಿ ಇದರ ಕಷಾಯ, ಹೊಟ್ಟೆ ಬೇನೆಗೆ ಇದರ ತಂಬ್ಳಿ, ಚಟ್ನಿ, ಚಿಕ್ಕ ಮಕ್ಕಳ ಎದೆಯ ಕಫ ಕರಗಿಸಲು ಇದರ ಎಲೆಯ ಶಾಖ., ಇದರ ರಸ ಹಿಂಡಿ , ಜೇನು ತುಪ್ಪ ಸೇರಿಸಿ ಶೀತ ಆದ ಪುಟ್ಟ ಮಕ್ಕಳಿಗೆ ನೀಡಲು,.ಹೀಗೆ ಗೃಹ/ಮನೆ ಮದ್ದಿಗೆ ಸದಾ ಬೇಕಾಗುವಂತಹ ಎಲೆ ಇದು.
ಅದರಲ್ಲಿ ನನಗೆ ಬಜ್ಜಿ ತುಂಬಾ ಇಷ್ಟ. ಆರೋಗ್ಯಕ್ಕೆ ಉತ್ತಮವೋ ಗೊತ್ತಿಲ್ಲ. ನಾಲಿಗೆಗೆ ಸಖತ್ ರುಚಿ.. ಮನೆಯ ಇತರರಿಗೆ ಬಜ್ಜಿ ಕರಿದಾದ ಮೇಲೆ ನಾನು ಹಿಟ್ಟಿಗೆ ಸ್ವಲ್ಪ ಅಡುಗೆ ಸೋಡಾ ಬೆರೆಸಿ ಬಜ್ಜಿ ಮಾಡಿ ತಿನ್ನುತ್ತೇನೆ. 😀








