August 1, 2023

ಕೇಸರಿ/saffron

ಕೇಸರಿ
ಹಿಂದಿನ ಆಕ್ಟೊಬರ್ ನಲ್ಲಿ 15 ದಿನ ಹಿಮಾಚಲ ಪ್ರವಾಸ ಕೈಗೊ0ಡಿದ್ದೆವು. ಹೋಗುವ ಮುಂಚೆ ಮಾಲಾವಿಕ 'ಅಮ್ಮ ಕೇಸರಿ ಸಿಕ್ಕಿದ್ರೆ ತೆಗೊಂಡು ಬಾ ಅಂತ ಹೇಳಿದ್ದಳು. ಒಂದು ಹದಿನೈದು ವರ್ಷದ ಹಿಂದೆ ಗ್ಯಾಂಗ್ಟಕ್ ಗೆ ಹೋದಾಗ ರಸ್ತೆ ಬದಿಯಲ್ಲಿ ಕೂತು ಕೇಸರ್ ಮಾರುತ್ತಿರುವವರೊಬ್ಬರಿಂದ ತೆಗೊಂಡು ಬಂದಿದ್ದು ಅವಳಿಗೆ ಇಷ್ಟ ವಾಗಿತ್ತು. authentic ಕೇಸರಿಯ ವಾಸನೆ ಅವಳಿಗೆ ಇಷ್ಟವಾಗುವುದಿಲ್ಲ. ನಾ ಹ್ಞೂ ಅಂದದಷ್ಟೇ, ಅದನ್ನು ಹುಡುಕಲು ಹೋಗಿರಲಿಲ್ಲ. mcleod gunj ನ ದಲಾಯಿ ಲಾಮ ಅವರ ವಾಸಸ್ಥಳಕ್ಕೆ ಹೋಗುವ ದಾರಿಯಲ್ಲಿ, ನಮ್ಮೊಡನೆ ಇದ್ದವರು ಪರ್ಸಿಮ್ಮೊನ್ ಹಣ್ಣುಗಳನ್ನು ಖರೀದಿಸುವಾಗ ನನ್ನ ಕಣ್ಣು ಅಲ್ಲೇ ಪಕ್ಕದಲ್ಲಿ ಪರ್ಸಿಮ್ಮೊನ್ ಮತ್ತು ಇತರೆ ಹಣ್ಣುಗಳನ್ನು ಮಾರಲು ಇಟ್ಟಿರುವ ಪುಟ್ಟ ಹುಡುಗಿಯನ್ನು ನೋಡಿತು. ಅವಳ ಬಳಿಗೆ ಸಾರಿ ಮುಗುಳ್ನಕ್ಕೆ. ಚೆಂದದ ಕಣ್ಣಿನ ಹುಡುಗಿ. ಆಂಟಿಜಿ ಕೇಸರಿ ತೆಗೋಳ್ತೀರಾ ಅಂತ ಕೇಳಿದಳು. ಹಣ್ಣು ಮಾರಲು ಇಡುವ ಸಣ್ಣ ಜಾಗದಲ್ಲಿ ನನಗೆ ಕೇಸರಿ ಕಾಣಲಿಲ್ಲ. ಆದರೂ ಹೌದೆಂದೆ. ಅವಳು ಹಣ್ಣುಗಳನ್ನು ಇಟ್ಟಿದ್ದ ಹಲಗೆ ಅಡಿಯಿಂದ ಸಣ್ಣದೊಂದು ಕಟ್ಟಿಗೆಯ ಟ್ರೆ ಹೊರ ತಂದು ನನ್ನ ಮುಂದಿಟ್ಟಳು. 20 ರೂ ಗೆ ಒಂದು 20ಗ್ರಾಮ್ ನ ಪುಟ್ಟ ಪ್ಲಾಸ್ಟಿಕ್ ಡಬ್ಬಿ. ಎರಡು ಡಬ್ಬಿ ತೆಗೆದುಕೊಂಡು, ಗೂಗಲ್ ಪೆ ಮಾಡಿದೆ. ನನಗಂತೂ ತುಂಬಾ ಖುಷಿಯಾಯ್ತು. ನಿಜವಾದ ಕೇಸರಿ ಅಲ್ಲದಿದ್ದರೂ ಸ್ವೀಟ್ ಗೆಲ್ಲ ಚೆಂದದ ಬಣ್ಣ ಹಾಗೂ ಪರಿಮಳ ಕೊಡುತ್ತದೆ. ಈ ವರ್ಷ ಹಲವಾರು ಮಿತ್ರರು ಕುಟುಂಬಸ್ಥರು ಹೊರ ದೇಶಕ್ಕೆ ಹೋದವರು ಅಂದ್ರೆ ದುಬಾಯಿ, ನೇಪಾಲ್, ಅಮೆರಿಕಾ ಹೋದವರೆಲ್ಲ ಅತ್ಯುತ್ತಮ ಗುಣಮಟ್ಟದ, ಬೆಲೆ ಬಾಳುವ ಕೇಸರಿ ಡಬ್ಬಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ, ಆದರೆ ನಮಗಿದೇ ನಾನು ತಂದ ಕೇಸರಿಯೇ ಇಷ್ಟ. ಹಾಗಾಗಿ ಇತ್ತೀಚಿನ ನನ್ನ ಸಿಹಿ ತಿಂಡಿಗಳ ಮೇಲೆ ಕೇಸರಿ ದಳಗಳು ರಾರಾಜಿಸುತ್ತಿದೆ 🙂🙂❤️ ಕೇಸರಿ ಅಂದ್ರೆ ಹೂವಿನ ಪರಾಗ. ಕ್ರೋಕಸ್ ಎನ್ನುವ ಹೂವಿನಿಂದ ಪಡೆದ ಪರಾಗವೇ ನಾವು ಬಳಸುವ saffron ಅಥವಾ ಕೇಸರ್, ಕೇಸರಿ 👍👍. ಇದು ಕಾಶ್ಮೀರದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

No comments:

Post a Comment