ಕಟ್ಟಿಕೊಂಡು ಬಂದ ಬುತ್ತಿಯನ್ನು ಉಂಡು,ಕಿಟಕಿಗೆ ತಲೆಯಾನಿಸಿದವನಿಗೆ ರೈಲಿನ ಓಲಾಟಕ್ಕೆ ಅದ್ಯಾವಾಗ ನಿದ್ದೆ ಬಂತು ಅವನಿಗೆ ಗೊತ್ತಾಗಲಿಲ್ಲ. ಎಚ್ಚರವಾದಾಗ ಕಂಪಾರ್ಟ್ಮೆಂಟ್ ನಲ್ಲಿ ರಾತ್ರಿಯ ಪುಟ್ಟ ಬಲ್ಬ್ ಹತ್ತಿಕೊಂಡಿತ್ತು.
ಬ್ಯಾಗಿನಿಂದ ಹೊದಿಕೆ ತೆಗೆಯಲು ಎದ್ದಾಗ...ಮೇಲಿನ ಬರ್ತ್ ನಿಂದ ಹೊದಿಕೆಯೊಳಗಿನಿಂದ ಒಂದು ಕಾಲು, ಅದಕ್ಕೆ ಹಾಕಿದ ಮದರಂಗಿ ಮತ್ತು ಫಳ ಫಳ ಹೊಳೆಯುವ ಕಾಲ್ಗೆಜ್ಜೆ, ರೈಲಿನ ವೇಗಕ್ಕೆ , ಆ ರಾತ್ರಿಯ ಬೆಳಕಿಗೆ ಚೆಂದವಾಗಿ ತೂಗುತ್ತಿತ್ತು.
ಎಲ್ಲರೂ ನಿದ್ರೆಯಲ್ಲಿರುವುದನ್ನು ಖಾತ್ರಿಪಡಿಸಿ, ಮೊಬೈಲ್ ನ ಸದ್ದು ಮ್ಯೂಟ್ ನಲ್ಲಿರಿಸಿ ಒಂದು ಫೋಟೋ ತೆಗೆದ....ಚಕಚಕನೆ 5 ಸಾಲಿನ ಪದ್ಯ ಬರೆದು, ಫೋಟೋ ಸಮೇತ ಫೇಸ್ ಬುಕ್ ನಲ್ಲಿ ಹಾಕಿದ. ಹಾಕಿದ ಒಂದೇ ನಿಮಿಷಕ್ಕೆ 2 ಲೈಕ್ ಬಂದಾಗ ಒಂದು ಕ್ಷಣ ಸಿಟ್ಟು ಬಂತು, ಮೂರು ನಿಮಿಷದ ಕವನ ಇಷ್ಟು ಬೇಗ ಹೇಗೆ ಓದ್ತಾರಪ್ಪ ಅನಿಸಿತು..ಆ ಮೇಲೆ ಛೇ ಮೊದಲು ಚಿತ್ರ ನೋಡಿ ಆಮೇಲೆ ಕಾಮೆಂಟ್ ಮಾಡ್ತಾರೆ ಅಂದು ಕೊಂಡು...ಪುನಃ ಒಂದು ಸಲ ಎಡಿಟ್ ಒತ್ತಿ, ಬರೆದುದರಲ್ಲಿ ವ್ಯಾಕರಣದ ತಪಿಲ್ಲ ಅಂತ ಖಚಿತ ಪಡಿಸಿ..'ಏಹ್ ತೋ ಟ್ರೈಲರ್ ಹೈ ಪಿಚರ್ ಅಭಿ ಬಾಕಿ ಹೈ' ಅಂತ ಸೇರಿಸಿ.done ಒತ್ತಿದ.. ಬೇರೆಯವರ ಪೋಸ್ಟ್ ಮೇಲೆ ಕಣ್ಣಾಡಿಸಿ, ಲೈಕ್, ಲವ್ವು, ವಾವ್ವು ಒತ್ತಿ ತನ್ನ ಪೋಸ್ಟ್ ಗೆ ಮರಳಿದಾಗ ಮೊದಲು ಲೈಕ್ ಹಾಕಿದವರ ಕಮೆಂಟ್ ಕೂಡ ಕಾಣಿಸಿತು.. 'waiting for the full picture' ಅಂತಿತ್ತು
ಫೋನ್ ಪಾಕೆಟ್ ನಲ್ಲಿಟ್ಟು ಆತ ನಿದ್ದೆಗೆ ಜಾರಿದ. ಬೆಳಗಿನ ಜಾವ ಎಚ್ಚರವಾದಾಗ ಆ ಸುಂದರ ಪಾದದ ಹುಡುಗಿ ರೈಲಿನ ಕಿಟಕಿ ಬಳಿ ಕೂತಿದ್ದಳು. ಬೆಳಗಿನ ಚೊಚ್ಚಿಲು ಸೂರ್ಯನ ಬೆಳಕು ಆಕೆಯ ಮುಖದ ಪಕ್ಕದ ಕೂದಲಿಗೆಲ್ಲ ಗೆಲ್ಲ ಹೊ0ಬ್ಬಣ್ಣ ನೀಡಿತ್ತು. ಕಂದು ಬಣ್ಣದ, ಕಪ್ಪು ಕಾಡಿಗೆ ಹಚ್ಚಿದ ಕಣ್ಣುಗಳು ದುಂಬಿಗಳಂತೆ ಅತ್ತಿತ್ತ ಸಾಗುವ ಹೊರ ದೃಶ್ಯಗಳನ್ನು ನೋಡುತ್ತಿತ್ತು. ತಲೆಯ ಮೇಲೆ ದುಪಟ್ಟಾ, ಮುಖಕ್ಕೆ ಮಾಸ್ಕ್...ಆದರೂ ಅವಳು ಸೌಂದರ್ಯವತಿ ಎನ್ನುವುದರಲ್ಲಿ ಎರಡು ಮಾತು ಇರಲಿಲ್ಲ. ಕಿಟಕಿಗೆ ಆನಿಸಿದ , ಸ್ವಲ್ಪ ಹೆಚ್ಛೆ ಇದ್ದ ಬಿಳಿವರ್ಣದ ಕೈ ಗೆ ತುಂಬಾ ಬಳೆಗಳು, ಹಚ್ಚಿದ ಮೆಹಂದಿ ಇಂದ ಇನ್ನು ಕಳೆ ಕಳೆ ಯಾಗಿತ್ತು. ಬಹುಶಃ ಹೊಸದಾಗಿ ಮದುವೆ ಯಾಗಿರ ಬೇಕು...ನೀಳ ಬೆರಳುಗಳು, ಒಂದರಲ್ಲಿ ಬಂಗಾರದ ಉಂಗುರ. ಅವಳ ಸೌಂದರ್ಯವನ್ನು ಆಸ್ವಾದಿಸುತ್ತಲೇ ನಿದ್ದೆಗೆ ಜಾರಿದ.
ಪುನಃ ಎಚ್ಚರವಾಗಿದ್ದು..ಚಾಯ್ ಗರಂ, ಮಸಾಲಾ ಚಾಯ್, ಚಾಯ್ ಗರಂ ಎನ್ನುವ ಸದ್ದಿಗೆ..ತನಗೂ ಚಾಯ್ ನ ಆವಶ್ಯಕತೆ ಇದೆ ಎಂದು ಮನವರಿಕೆಯಾಗಿ, ಕಷ್ಟ ಪಟ್ಟು ಕಣ್ಣು ತೆರೆದಾಗ ಎದುರಿನ ಹುಡುಗಿ ಆಗಲೇ ಚಾಯ್ ತೆಗೆದುಕೊಂಡು, ತನ್ನ ಪುಟ್ಟ ಕೈ ಬ್ಯಾಗ್ ನಲ್ಲಿ ಏನೋ ಹುಡುಕುತ್ತಿದ್ದಳು..ಪಕ್ಕದ ಬರ್ತ್ ನಲ್ಲಿರುವ ಆಕೆಯ ಗಂಡನ ಕಡೆಗೆ ನೋಡಿದರೆ, ಅವನ ವಿಕಾರವಾಗಿ ತೆರದ ಬಾಯಿ, ಗೊರಕೆ ನೋಡಿ, ಥೂ ಶುದ್ಧ ಅರಸಿಕ ಅಂತ ಅಂದು ಕೊಂಡ ಈತ. ಪುನಃ ಆಕೆಯ ಕಡೆಗೆ ಕಣ್ಣು ಹೊರಳಿಸಿದಾಗ..ಆಕೆ ಬಿಸ್ಕತ್ ಪೊಟ್ಟಣ ತೆರೆದು, ಮಾಸ್ಕ್ ಕೆಳಗಿಳಿಸಿದಳು...ಈತ ನಿಗೆ ಆಘಾತ...ಅಲ್ಲಿ ಕಂಡಿದ್ದು ಮೊಂಡು ಮೂಗು, ಹಲ್ಲುಬ್ಬು ಮತ್ತು ಮೀಸೆ...ಅವಳ ಸೌಂದರ್ಯವನ್ನೇ ತಿಂದು ಹಾಕಿದ್ದವು.
ಚಾಯ್ ತೆಗೆದುಕೊಳ್ಳದೆ ಪುನಃ ಮುಸುಕು ಎಳೆದು, ಬೆನ್ನು ತಿರುಗಿಸಿ ಮಲಗಿ ಬಿಟ್ಟ
ಇಲ್ಲಿ ಎಫ್ ಬಿ ಯಲಿ ಚಿಂ, ಪಿನ್ ,ಟಿಂಗ್ ಅಂತ ಲೈಕು, ಕಾಮೆಂಟ್ ನಿರಂತರವಾಗಿ ಸಾಗಿದ್ದವು
❤️😀
Happy New Year folks ...
No comments:
Post a Comment