November 1, 2021

ಆಘಾತ

 ಯಾವತ್ತಿನ ಹಾಗೆ ಬೆಳಿಗ್ಗೆ ನಾಲ್ಕು ಗಂಟೆಗೆ  ಎದ್ದು ಪ್ರಾತರ್ವಿಧಿಗಳನ್ನು. ಮುಗಿಸಿ ಚಹಾ ಮಾಡಿದೆ. ಅಕ್ಕನ ರೂಮ್ ನ ಬಾಲ್ಕನಿಯಲ್ಲಿ ನಾ ಕೂರೋದು ಚಹಾ ಕುಡಿಯಲು. ಆ ದಿನ ಬಾಗಿಲಿನ ಹಿಡಿ ಎಷ್ಟು ತಿರುವಿದ್ರು ಬಾಗಿಲು ತೆರೆಯಲಿಲ್ಲ. ಚಿಲಕ ಹಾಕಿತ್ತು. ಕೈ ಕಾಲಲ್ಲಿ ನಡುಕ, ಕಣ್ಣಲ್ಲಿ.ನೀರು...ಇದೇನಾಗಿ ಹೋಯ್ತಪ್ಪ? ಇನ್ನೂ ಕತ್ತಲೆ. ಗದ್ದಲ ಮಾಡೋದು ಬೇಡ ಅನ್ನಿಸ್ತು. ಶ್ರೀಕಾಂತ ತಡ ರಾತ್ರಿ ಸಿನಿಮಾ ನೋಡಿ, ಹಾಲ್ ನಲ್ಲೇ ಮಲಗಿದ್ರು ಗೊರಕೆ ಹೊಡೀತಾ. ಹಾಗೆ ಸಾವರಿಸಿಕೊಂಡು ಕತ್ತಲೇಯಲ್ಲೇ ಮಂಚದ ಮೇಲೆ ಕೂತು ಚಹಾ ಕುಡಿದೆ. 

ಹಿಂದಿನ ದಿನ ಸಂಜೆ ನಾವು, ಸ್ನೇಹಿತರು ಸೇರಿ, ನಮ್ಮ ಆನೆಕಲ್ಲು ಸೈಟ್ ಕಡೆ ಹೋಗಿದ್ವಿ. ಮಳೆಯಲ್ಲಿ ಸಿಕ್ಕಿ ಹಾಕಿ ಕೊಂಡು ಬರುವಾಗ ತಡ ಆಗಿತ್ತು. ಅಕ್ಕ ಬಿಸಿ ಬಿಸಿ ಬ್ರೆಡ್ ಬೋಂಡ ಮಾಡಿ ಕೊಟ್ಟಿದ್ದಳು. ತುಂಬಾ ಸುಸ್ತಾಗಿದ್ದರಿಂದ. ಯಾಕೋ ಬೆನ್ನು ನೋಯುತ್ತಿದ್ದರಿಂದ ರಾತ್ರಿಯ ಪಾತ್ರೆ ಗಳನ್ನು ಬೆಳಿಗ್ಗೆ ತೊಳೆಯುವ ಅಂತ ಇಟ್ಟಿದ್ದೆ.

ಇದ್ದಕ್ಕಿದ್ದಂತೆ ಏನು ಮಾಡಿಕೊಂಡಳು? 'ಅಮ್ಮ ನಾಳೆ ದೊಡ್ಡ ಕೇಕ್ , ನಾನು ಡೆಲಿವರಿ ಮಾಡಿ ಹಾಗೆ ವ್ಯಾಕ್ಸಿನ್ ಎರಡನೇ ಡೋಸ್ ತೆಗೊಂಡು ಬರ್ತೀನಿ ಅಂದವಳು...ಅಮ್ಮ ಈ ವೀಕ್ ಎಂಡ್ healthy ಬ್ರೆಡ್, ಬರ್ಗರ್ ಮತ್ತು ಪಿಝ್ಆ ದ ದೊಡ್ಡ ಆರ್ಡರ್ ಇದೆ ಕಣೆ ಅಂದವಳು...

 ಪಾತ್ರೆ ತೊಳೆಯುತ್ತ ನಿನ್ನೆ ಏನಾದ್ರೂ ಹೆಚ್ಚು ಕಡಿಮೆ ಮಾತಾಡಿಡ್ನಾ? ಸಿಟ್ಟಾಗಿದ್ದೆನಾ? ಅಂತ ಯೋಚನೆ ಮಾಡಿದೆ. ಬಂದವರಿಗೆಲ್ಲ ಏನು ಹೇಳೋದು? FB ನಲ್ಲಿ ಹೇಗೆ ಈ ಸುದ್ದಿ ಶೇರ್ ಮಾಡಲಿ? ಎಲ್ಲರಿಗೂ counselling ಮಾಡುವವಳ ಮನೆಯಲ್ಲೇ ಈ ಕಥೆನಾ? ಬಾಗಿಲು ಮುರಿಬೇಕಾದ್ರೆ ಪೊಲೀಸರು ಬರ್ಬೇಕಾ...ಮುಂತಾದ ಯೋಚನೆ. ಪಾತ್ರೆ ಎಲ್ಲ ತೊಳೆದಿಟ್ಟು... ಅಡಿಗೆ ಮನೆ ಕ್ಲೀನ್ ಮಾಡಿಟ್ಟು, ಸಮಯ ನೋಡಿದ್ರೆ ಇನ್ನೂ 4.45...ಕತ್ತಲೆಯಲ್ಲೇ ಹಾಲ್ ಅನ್ನು ಸ್ವಲ್ಪ ಒಪ್ಪ ಒರಣ ಮಾಡಿದೆ.. ಬಂದ ಜನ ಏನು ಅನ್ನುತ್ತಾರೋ??..

ಬೆಳಕಾಗುವ ತನಕ ಸ್ವಲ್ಪ ಬೆನ್ನು ಒರಗಿಸಿ ಮಂಚದ ಮೇಲೆ ಆನಿಸುವ ಅಂತ ಹೋದೆ...ಕಣ್ಣಲ್ಲಿ ನೀರು ಮಾತ್ರ ಒಂದೇ ಸಮನೆ ಜಾರುತ್ತಲಿತ್ತು. ಅದು ಯಾವಾಗಲೋ ನಿದ್ದೆಗೆ ಜಾರಿದೆ. ಯಾರೋ 'ಮಾಲ್ತಿ ಮಾಲ್ತಿ' ಅಂದ ಹಾಗೆ....ಕಣ್ಣು ತೆರೆದ್ರೆ ಅಕ್ಕ ನಗುತ್ತ 'ಏನೇ breakfast ಗೆ ಅರ್ಧಂಬರ್ಧ ರೆಡಿ ಮಾಡಿಟ್ಟಿದ್ದಿಯಾ...ಏನು ಅಂತ ಹೇಳಿದ್ರೆ ನಾನು ತಯಾರಿಸ್ತೀನಿ..ನೀನು ಮಲಗು ಅಂದ್ಲು...ಮೈ ಮನಸ್ಸು , ದುಗೂಡವನ್ನು ಜಾಡಿಸಿ ಎದ್ದೆ...

ಆದದ್ದು ಇಷ್ಟು ವಾರದ ಹಿಂದೆ ಇವರ ತಂಗಿ ಮಗ..ಅಕ್ಕನಿಗಿಂತ ಕೆಲ ತಿಂಗಳು ದೊಡ್ಡವನು...ಆರಾಮಾಗಿದ್ದವನು..ಏಕಾಏಕಿ ಸಂಜೆ ಹೊತ್ತು suicide ಮಾಡಿಕೊಂಡಿದ್ದ...ಆ ನೋವು ಇತ್ತು..ಇಲ್ಲಿ ಜೋರು ಮಳೆ...ಕೆಲ ಒದ್ದೆ ಬಟ್ಟೆ ಬಾಗಿಲಿನ ಮೇಲೆ ಒಣ ಹಾಕಿದ್ದೆ, ಅದು ಬಾಗಿಲು ಹಾಕುವಾಗ ಸಿಕ್ಕಿ ಹಾಕಿ ಕೊಂಡು ಬಾಗಿಲು ತೆಗಿಲಿಕ್ಕೆ ಬಂದಿರಲಿಲ್ಲ...ಇಲ್ಲದಿದ್ದರೆ ಬಾಗಿಲು ಹಾಕುತ್ತೇವೆಯೇ ಹೊರತು ಚಿಲಕ ಹಾಕಿ ಮಲಗುವ ಅಭ್ಯಾಸ ಇಲ್ಲ..ಮನಸ್ಸಲ್ಲಿ ಕೆಟ್ಟ ಆಲೋಚನೆ..

ಕಾಲ್ಪನಿಕ/ಕನಸಿನಲ್ಲಿಯೇ ಆದ ಈ ಅನುಭವದಿಂದ ಚೇತರಿಸಿಕೊಳ್ಳಲು ಎರಡು ದಿನ ಬೇಕಾಯ್ತು ನನಗೆ...ನಿಜವಾಗಿ ಇದೆಲ್ಲ ನಡೆದಿರುವ ಮನೆಯವರ ಗತಿ ಏನು??? 😢😢

ಆತ್ಮಹತ್ಯೆ ಮಾಡಿಕೊಂಡ ಹುಡುಗನಿಗೆ ಇಬ್ಬರು ಪುಟ್ಟ ಮಕ್ಕಳು. ಈಗಲೂ ಗೇಟ್ ಬಳಿ ಅಪ್ಪ ಬರುವುದನ್ನು ಕಾಯುತ್ತಾರಂತೆ. ಹೊಟ್ಟೆಯಲ್ಲಿ ಚೂರಿ ಹಾಕಿ ತಿರುವಿದ ಅನುಭವ..ಯಾಕೋ ಮನಸ್ಸನ್ನು ಹಿಡಿದುಕೊಂಡು ಬಿಟ್ಟಿದೆ 😭😭

ಕೆಲವೊಮ್ಮೆ ಅವನ ಮೇಲೆ ಅಸಾಧ್ಯ ಸಿಟ್ಟು ಬರುತ್ತೆ..ಆಮೇಲೆ ಛೆ ಏನಾಗಿಹೋಯ್ತು ಅನ್ನಿಸುತ್ತೆ....

ಹೋದವರು ಹೋಗಿ ಬಿಡುತ್ತಾರೆ..ಇದ್ದವರಿಗೆ ನೋವು..

October 28, 2021

COVID ಕತೆಗಳು

1. ಕೋವಿಡ್ ನಿಂದಾಗಿ ಆಕೆ ಸಾವನ್ನು ಅಪ್ಪಿರಿವುದಾಗಿ ಡಾಕ್ಟರ್ ಹೇಳಿದ್ರು. ಬೇರೆ ಊರಿನಲ್ಲಿರುವ ಗಂಡನಿಗೆ ತಿಳಿಸಿದಾಗ, ದೇಹವನ್ನು ಇಟ್ಟಿರಿ, ನಾನು ಬಂದ ಮೇಲೆಯೇ ದಹನ ಅಂತ ಹೇಳಿಟ್ಟರು. ದೂರದ ಊರಿನಿಂದ ಮನೆ ತಲುಪಿದಾಗ ಮೂರು ದಿನ. ಅಂತ್ಯ ಕ್ರಿಯೆಗೆ ಮೊದಲು ಸ್ನಾನಕ್ಕೆ ಅಕೆಯ ದೇಹವನ್ನು ಬಚ್ಚಲು ಕೋಣೆಗೆ ಒಯ್ದಾಗ ಕ್ಷೀಣವಾಗಿ ಉಸಿರಾಡುತ್ತಿರುವ ಅನುಮಾನ..ಕೂಡಲೇ ಆಸ್ಪತ್ರೆಗೆ ಸೇರಿಸಿದರಿಂದ ಆಕೆ ಚೇತರಿಸಿಕೊಂಡಳು...


2. ಆಕೆಗೆ ಜನರೇಂದರೆ ಜೀವ. ಮನೆಯಲಿನ್ ಯಾವಾಗಲೂ ಗಲಗಳ, ಮಾತು ನಗು...ಅಂತಹ ಮಹಿಳೆಗೆ ಕೊರೊನ ಕಾಲದಲ್ಲಿ ತುಂಬಾ ಮನಸ್ಸು ಕುಗ್ಗಿತು. ವಯಸ್ಸಾಗಿದ್ದರಿಂದ ಹೊರ ಬೀಳುತ್ತಿರಲಿಲ್ಲ. ಮಾತ್ರವಲ್ಲ ಮಕ್ಕಳು ಮನೆಗೆ ಬೇಕಾದ ಸಾಮಾನು ಸರಂಜಾಮು ಆನ್ ಲೈನ್ ನಲ್ಲಿ ಅವರಿಗೆ ತಲುಪುವಂತೆ ಮಾಡುತ್ತಿದ್ದರು. ಹಾಗಿದ್ದರೂ ಮನೆಯಲ್ಲಿರುವ ಗಂಡ ಹೆಂಡತಿ ಇಬ್ಬರಿಗೂ ಕೋವಿಡ್ ಪಾಸಿಟಿವ್. ತೀವ್ರ ವಾದರಿಂದ ಆಸ್ಪತ್ರೆಗೆ ಸೇರಿಸಲಾಯಿತು. ಗಂಡ ಚೇತರಿಸಿದರು....ಹೆಂಡತಿ ಅಸುನೀಗಿದರು. ಡಾಕ್ಟರ್ ಪರಿಚಿತರಾದರಿಂದ..ಮನೆಯ ಮಕ್ಕಳಿಗೆ ವಿಡಿಯೋ ಮೂಲಕ ಅವರ ಕೊನೆಯ ದರ್ಶನ ವಾಯಿತು... ದೇಹವನ್ನು ಅಲ್ಲಿಂದಲೇ ಬಿಳಿ ಬಟ್ಟೆಯಲ್ಲಿ ಸುತ್ತಿ, ನಿರ್ಭಾವುಕರಾದ ಕರ್ಮಚಾರಿಗಳಿಂದ ಆಕೆಯ ದೇಹವನ್ನು ವ್ಯಾನ್ ನಲ್ಲಿ, ಇತರೆ ದೇಹದೊಂದಿಗೆ ಬಿಸಾಕುವ ದೃಶ್ಯ ಮನೆ ಮಂದಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ...ಎಷ್ಟೊಂದು ಜನರಿಗೆ ಬೇಕಾದವರು..ಅನಾಥರಾಗಿ ಸ್ಮಶಾನಕ್ಕೆ ಸಾಗಿಸಲ್ಪಟ್ಟರು....

☹️☹️

October 26, 2021

A crash

 Was having my morning cuppa chai & watching a beautiful sunrise..when the metro construction aiding bridge (yellow) fell off with a resounding crash. Waking up everybody , in their dunday beauty sleep and every one ran to the balcony and i could see the construction workers running for their dear life. Hoping there r no casualties..ಪಾಪ ಎಲ್ಲೆಲ್ಲಿಂದಲೋ ಬರ್ತಾರೆ ಕೆಲಸಕ್ಕೆ..that was scary ☹️

P.s: no loss of life and properties. This happened on Sunday. Thete are five cranes brought to the site..yet no signs of the bridge moving...🤔🤔








September 13, 2021

Why??!!


 Just two days into suicide prevention day, i am devastated with the news of  suicide by srikanth's nephew.

Outgoing, happy, responsible helpful always smiling, my favorite boy. They stay in a temple town where religious events happen all the time followed by lunch most times...when the entire family was away he has taken this drastic step. Wish he could have approached somebody for help. Cant imagine his mindset, where he has left his two young girls fatherless. I am not able to come to grips with his death. It is like a cold hand holding my heart in its vice like grip. Cannot imagine the state his young wife, two kids who can not fathom yet  what loss is, aged parents, a brother a sister whom he loved so much..

When ever i watched him, i would feel ...i would have liked to have a son like him

Be in peace, child, go in peace.. 

This is one pain that will never go away...😭😭


July 30, 2021

Credit

 She had just received the man booker prize for her novel

Her husband asks her 'how come you have not given credit to your family, not acknowlegded them?

I never lie, why should i now? Asks the wife?

I have done my cooking cleaning, going out to work, did all the other chores like paying the bills, going to childrens' school etc. I have sacrificed my sleep and worked on my book during weekends without troubling you all, without making you sacrifice anything!! So why lie with credit?

After all, what have you done to deserve credit, but tease me about my writing?

You are into research. I respect that!! But when your funds were late in coming, it was with my money that took care of finances/expenditures. I have never troubled you with anything. I have even hosted dinner parties for your friends and colleagues. Have you ever given credit to me in your thesis? 

Come to think of it have you ever made me a cup of tea?

Please forget about me giving you credit

July 6, 2021

00.00

 


ಮೊನ್ನೆ  00.00 ಗೆ...ಅನಿಸಿದ್ದು...

ಅವನೊಬ್ಬನಿದ್ದ

ಮಲಗಿದ್ದ

ಎದ್ದ

ಹೊರಬಿದ್ದ

ಅವನೇ ಬುದ್ಧ

ನಾನು ಕಿಟಕಿ ಬಳಿ ನಿಂತೆ

ಯಾರ ಮನೆಲೂ ಬೆಳಕಿರಲಿಲ್ಲ

ಆಯ್ತು ಚಿಂತೆ

ಇನ್ನೊಂದು ಕಿಟಕಿ ಬಳಿ ನಿಂತೆ

ಆ ಒಂದು ಮನೆ ಬೆಳಗಿತ್ತು ದೀಪಾವಳಿಯಂತೆ

July 3, 2021

FB ಪೋಸ್ಟ್

 ಮೊದಲೆಲ್ಲ ಒಂದು ಡಿಗ್ರಿ ಅಂತ ಆದ ಮೇಲೆ, ಇನ್ನು ಓದು ಮುಗೀತು, ಮದ್ವೆ ಮಾಡಿ ಬಿಡೋದು ಅಂತ ಮಾತಾಡಿಕೊಳ್ಳುದ್ದರು. (ನನ್ನ ಡಿಗ್ರಿ ಮುಗಿಯೋ ಮುಂಚೆನೇ ಮದುವೆ ಮಾಡಿ ಬಿಟ್ರು).ಇನ್ನು ಕೆಲವರ ಮನೆಯಲ್ಲಿ...ನೀನೇನು ಕೆಲಸಕ್ಕೆ ಹೋಗಬೇಕಾ? ಒಂದು ಆರ್ಟ್ಸ್ ಅಲ್ಲಿ ಬಿ ಎ ಮಾಡಿದ್ರೆ ಸಾಕು ಅನ್ನೋವ್ರು.

ಓದು ಮುಗಿಯುವುದುಂಟಾ? ನಮ್ಮ ತಂದೆ ಅವರ 40 ನೆ ವಯಸ್ದಿಗೆ ಹಿಂದಿ M A ಮಾಡಿದ್ದರು (ಅಮ್ಮ ಏನಾದರೂ ಅರ್ಥವಾಗದ ಹಿಂದಿ ಪದಕ್ಕೆ ಅರ್ಥ ಕೇಳಿದರೆ ನನಗೊತ್ತಿಲ್ಲ ಎನ್ನುತ್ತಿದ್ದರು. ಆಗ ಅಮ್ಮ ಅದೇನು ಹಿಂದಿ ಎಮ್ಮೆ ನೋ ಕೋಣನೊ ಮಾಡಿ ಏನು ಪ್ರಯೋಜನ ಅಂತಿದ್ದರು 😃)

ನನ್ನ ಮಕ್ಕಳಿಗೆ ನಾನು ಹೇಳಿದ್ದೆ...ಎಲ್ಲ ಟ್ರೈ ಮಾಡಿ.. ವಿಜ್ನ್ಯಾನ , commerce, arts ಎಲ್ಲ ಟ್ರೈ ಮಾಡಿ ಅಂದಿದ್ದೆ...ಸಮಯ ತೆಗೊಳ್ಳಿ, ಅಮೇಲೆ ಆಯ್ಕೆ ಮಾಡಿ ಅಂತ. ನಿಹಾ ಹಾಗಾಗಿ ಎರಡು ಸಲ gap year ತೆಗೊಂಡಳು.  ಪಿ ಯು ಆದ ಮೇಲೆ. ಮತ್ತು graduation ಆದ ಮೇಲೆ ಕೆಲಸ ಮಾಡಿದ್ಲು, ಸೋಲೊ ಟ್ರಾವೆಲ್ ಮಾಡಿದ್ಲು...ಆಮೇಲೆ ಮಕ್ಕಳ ಪುಸ್ತಕಕ್ಕೆ illustrator ಆಗೋದು ಅಂತ decide ಮಾಡಿ ಜೀವನ ಸಾಗಿಸುತ್ತಿದ್ದಾಳೆ.

ಅವಳ ಸ್ನೇಹಿತರೆಲ್ಲ ನನಗೆ cool mom ಬಿರುದು ಕೊಟ್ಟಿದ್ದಾರೆ. But it has nothing to do with being a cool mom...this is way it should be alwaa? 

ಅವಳು ಆರ್ಟ್ಸ್ ತೆಗೊಂಡಳು 10th ಆದಮೇಲೆ, ಅದಕ್ಕೆ

ಎಷ್ಟೋ ಜನ 10th ಅಲ್ಲಿ ಎಷ್ಟು ಮಾರ್ಕ್ಸ್ ಅಂತಲೂ ಕೇಳ್ತಾರೆ...ಅವಳು 8 ನೆ ಕ್ಲಾಸ್ ನಲ್ಲಿದ್ದಾಗಲೇ ಆರ್ಟ್ಸ್ stream ನಲ್ಲಿ ಓದೋದು ಅಂತ ನಿರ್ಧರಿಸಿದ್ದಳು.

ಇಲ್ಲಿ ಒಂದು ಪ್ರಸಂಗ ಶೇರ್ ಮಾಡ್ಲೆ ಬೇಕು

ಪ್ರತಿಷ್ಠಿತ ಕಾಲೇಜು ಒಂದರಲ್ಲಿ admission ಗಾಗಿ ನಿಂತಿದ್ವಿ...ದೊಡ್ಡ ಸಾಲು. ಹಳೆ ವಿದ್ಯಾರ್ಥಿಗಳೇ volunteers ಆಗಿ ಫಾರ್ಮ್ ಎಲ್ಲ ಸರಿಯಾಗಿ fill ಮಾಡಿದಾರಾ ಇಲ್ವಾ ಅಂತ ಚೆಕ್ ಮಾಡಿ ಮುಂದಿನ ಲೆವೆಲ್ ಗೆ ಕಳಿಸ್ತಾ ಇದ್ರು. ಸಡನ್ ಆಗಿ anybody here who has scored more than 80 ℅ please raise your hands ಅಂದ್ರು. ನಿಹಾ ಕೈ ಎತ್ತಿದ್ಲು. ಹತ್ತಿರಕ್ಕೆ ಬಂದು ಚೆಕ್ ಮಾಡಿ  she has more than 90 ℅ ...ದೊಡ್ಡದಾಗಿ ಹೇಳಿ...why are you standing in this line, science section is in that direction ಅಂದ್ರು. ನಿಹಾ ' ನನಗೆ ಆರ್ಟ್ಸ್ stream ಬೇಕು..ಅದಕ್ಕೆ ಇಲ್ಲಿ ನಿಂತಿದ್ದೇನೆ ಅಂದ್ಲು. ಮಕ್ಕಳಿಗೆ ಏನು ಅನ್ನಿಸ್ತೋ ಏನೋ, ನಿಹಾಳ form ತೆಗೆದುಕೊಂಡು ಹೋಗಿ, ಬರುವಾಗ principal ಅವರನ್ನು ಕರೆದು.ಕೊಂಡು ಬಂದ್ರು. ಅವರೂ ತುಂಬಾ ಆಗ್ರಹ ಪಡಿಸಿದರು science ತೆಗೋ ಅಂತ...ಆಮೇಲೆ ಆರ್ಟ್ಸ್ ಯಾಕೆ ಅಂತ ಕೇಳಿದ್ರು...ನನಗೆ economics ಇಷ್ಟ ಅಂತಲೂ . ಕೊನೆಗೆ ಸುಮಾರು ಮಾತುಕತೆಯಾದ ನಂತರ ಒಪ್ಪಿ ಅಂತೂ admission ಆಯ್ತು.ಅಲ್ಲಿದ್ದ ಎರಡು ವರ್ಷ ಅವಳು first three position ನಲ್ಲಿ ಇದ್ಲು. French mattu psychology centum  scorer. 

Now she is a busy children's book illustrator and happy with her choice of profession.

ಇದರ ಜತೆ ಹಾಡು, japanese ಓದು, ಮಧ್ಯ ಮಧ್ತ ಅದು ಇದು workshop ಅಂತ ಆರಾಮಾಗಿದ್ದಾಳೆ. 

ಇನ್ನು ಅಕ್ಕ..ಅವಳೂ distinction ಸ್ಟೂಡೆಂಟ್. 10 ನೆ ಆದ ಮೇಲೆ science ತೆಗೊಂಡಿದ್ದು. Space ಸೈಂಟಿಸ್ಟ್ ಆಗುವ ಅಂದಾಜು.ಆಮೇಲೆ ಅವಳ ಕಾಲೇಜ್ ನಲ್ಲಿ career counselling ಅಂತ ಹಮ್ಮ್8ಕೊಂಡಿದ್ದರು. ಅಲ್ಲಿ ಹೋಟಲ್ ಮ್ಯಾನೇಜ್ ಮೆಂಟ್ ಬಗ್ಗೆ ಕೇಳಿ ಅದನ್ನು ಆಯ್ಕೆ ಮಾಡಿಕೊಂಡಳು. Entrance ಪರೀಕ್ಷೆಯಲ್ಲಿನೊಳ್ಳೆ rank ಬಂದಿದ್ದಕ್ಕೆ ಒಟ್ಟು 1 ವರೆ ಲಕ್ಶದಲ್ಲಿ 3 ವರ್ಷದ ಹೋಟೆಲ್ management ಕೋರ್ಸ್ ಮುಗಿಸಿ ಕೆಲವು ಸಮಯ ಕೆಲಸಕ್ಕೆ ಸೇರಿ..ಈಗ ಅವಳ ಸ್ವಂತದ್ದು biscoot factory ಮಾಡಿ ಕೇಕ್, ಕುಕ್ಕಿಸ್, ಚಾಕೋಲೇಟ್ ಎಲ್ಲ ಮಾಡ್ತಾಳೆ, ಮಾತ್ರವಲ್ಲ ಕೆಲವು ಡಾಕ್ಟರ್/nutritionist ಗಳುಗೆಲ್ಲ recipe develop ಮಾಡಿ ಕೊಡೋದು, review ಬರೆಯೋದು, ಫುಡ್ photography ಅಂತೆಲ್ಲ ಮಾಡಿಕೊಂಡು ಆರಾಮಾಗಿದ್ದಾಳೆ..

Let the kids be ಅಂತಷ್ಟೇ ಹೇಳಲಿಕ್ಕೆ ಹೊರಟಿದ್ದು. ಮೊನ್ನೆ ಯಾರೋ ನನಗೆ counselling ಬೇಕು.i want to bring up my teenage daughter in a good way...you are a good mom  ಅಂತ ಮೆಸೇಜ್ ಕಳಿಸಿದ್ರು. ನನ್ನ ಎಫ್ ಬಿ ಪೋಸ್ಟ್ ಗಳನ್ನು ನೋಡಿ decide ಮಾಡಿದ್ದಾರೆ ಬಹುಶ . ಅವರಿಗೆ ತಜ್ಞ ಸಲಹಾಗಾರರ ನಂಬರ್ ಕೊಟ್ಟೆ...

Both my daughters are gems. ಯಾವುದೇ ತೊಂದ್ರೆ ಕಿರಿಕಿರಿ ಮಾಡದೆ ಯಾವಾಗ ಬೆಳೆದು ಬಿಟ್ರೋ..❤️❤️🤔

ನನಗೆ ಚಿಕ್ಕವಳಿದ್ದಾಗ ತುಂಬಾ ದುಡ್ಡು,  ಕಾರು, ಬಂಗಲೆ, ಆಳು ಕಾಳು ಇಂತದ್ದೆಲ್ಲ್ಲ ಬೇಕು ಅಂತ ಆದೆಗಳಿದ್ದವು. ನನ್ನ ಇಬ್ಬರೂ ಮಕ್ಕಳಿಗೂ ಅಂತಹ expectations ಇಲ್ಲ. ನಿಜ ಹೇಳಬೇಕೆಂದರೆ ಅವರನ್ನು ನೋಡಿ ನಾನು ಕಲಿತಿದ್ದೇನೆ ಅನ್ನಲು ನನಗೆ ಯಾವ ನಾಚಿಕೇನೂ ಇಲ್ಲ 


ವೀಣಾ ಶಿವಣ್ಣ ಅವರ ಒಂದು ಪೋಸ್ಟ ನಲ್ಲಿ ವಿದ್ಯಾಭ್ಯಾಸದ ಬಗ್ಗೆ ಇತ್ತು...ಇವೆಲ್ಲ ನೆನಪಾಯ್ತು ಅಷ್ಟೇ.


May 28, 2021

Cracked feet

 ಶುಶ್ರುತ ದೊಡ್ಡೇರಿ 'ಒಡೆದ ಹಿಮ್ಮಡಿ ಕಾಲಿನಂದದಿ'  ಪ್ರಬಂಧ ದಿಂದ ಪ್ರೇರೇಪಿತ ಬರಹ.......


ನಾವು ಆಸ್ಪತ್ರೆಯಲ್ಲಿದ್ದಾಗ ನಮ್ಮ ಪೇಪರ್ ನವ್ 4 ಯುಗಾದಿ ವಿಶೇಷಾಂಕ ಮನೆಗೆ ಕಳುಹಿಸಿದ. ನಮಗೆ ಊಟ ಕಳಿಸುವಾಗ ಅಕ್ಕ ಅವನ್ನೆಲ್ಲ dunzo ಮಾಡಿದ್ಲು. ಶುಶ್ರುತ ಅವರು ಬರೆದಿದ್ದ dry skin ಬಗೆಗಿನ ಲಘು ಪ್ರಬಂಧ ಓದಿ...ಹೋ ನನಗೂ ಇವೆಲ್ಲ ಎಷ್ಟು ಕಾಡಿತ್ತು ಅಂತ ನೆನಪಿಸಿಕೊಂಡೆ.

ಮದುವೆಯಾಗಿ ಮುಂಬೈನಿಂದ ತೀರ್ಥಹಳ್ಳಿ. Drastic change in temperatures. ಮುಂಬೈ ನ ಸಮುದ್ರದ ಸೆಕೆಯ ಹವಾಮಾನ ಎಲ್ಲಿ ತೀರ್ಥಹಳ್ಳಿಯ ಎ ಸಿ ಯಂಥ ಥಂಡಿ ಎಲ್ಲಿ. 1986 ನಲ್ಲಿ ಏಪ್ರಿಲ್ ಮೇ ನಲ್ಲೂ ರಾತ್ರಿ ಚಳಿಯೇ ಇರುತ್ತಿತ್ತು. ಒಳ್ಳೆ ಹಿಲ್ ಸ್ಟೇಷನ್ ನಂತಿರುತಿತ್ತು. ಈಗ ಬಿಡಿ ತೀರ್ಥಹಳ್ಳಿಯಲ್ಲೂ ಹವಾಮಾನದಲ್ಲಿ ವೈಪರೀತ್ಯ..

ನಮ್ಮ ಮದುವೆ ಆಗಿದ್ದು ಮೇ ಕೊನೆ ವಾರ. ಜೂನ್ ನಲ್ಲಿ ಧೋ ಅನ್ನುವ ಮಳೆ. ಅಂತಹ ಮಳೆಯನ್ನು ನಾ ನೋಡಿರಲಿಲ್ಲ. ಅದೂ ಮಧ್ಯ ಅಂಗಳ ಇರುವ ಮನೆ. ಅಂಗಳಕ್ಕೆ ತಾಗಿಯೇ ಅಡುಗೆ ಮನೆ.ತುಂಬಾ ಹಳೇ ಮನೆ ಕೂಡ. ತೇವದಿಂದ ರಕ್ಷಿಸಿಕೊಳ್ಳುವ ಯಾವುದೇ ಉಪಾಯ ವಿರಲಿಲ್ಲ. ಆಗ ಹಿಮ್ಮಡಿ ಒಡೆಯಲು ಶುರು ವಾಯಿತು. ಮಾತ್ರವಲ್ಲದೆ ಕಾಲು ಬೆರಳುಗಳ ಮಧ್ಯದಲ್ಲಿ ನವೇ, ಕೆರೆತ ವಾಸನೆ...ನಾನಂತೂ ಹೌ ಹಾರಿ ಹೋದೆ. ಬೇರೆಯವರಿಗೆ ಇಂತಹುದು ಆದರೆ ನನಗೆ ಅಸಹ್ಯ.. ಇನ್ನೂ ನನಗೆ ಹಾಗಾದರೆ? ತೆಂಗಿನ ಎಣ್ಣೆ, ಮಯಣ.vaseline,  ಕೆಲಸದ ಗಿರಿಜೆ ಹೇಳಿದ ಹಾಗೆ ನೈಲ್ ಪೊಲೀಶ್ ಎಲ್ಲ ಆಯ್ತು. ಹಿಮ್ಮಡಿ ಒಡೆದು ಕೆಲವೊಮ್ಮೆ ರಕ್ತ ಒಸರುತ್ತಿತ್ತು. ಬೆಳ್ಳಿಗ್ಗೆ ಎದ್ದ ಕೂಡಲೇ ನೆಲಕ್ಕೆ ತಾಕಿಸಿದರೆ, ಜೀವ ಹೋಗುವ ನೋವು. ಕ್ರಮೇಣ ಅವೇಲ್ಲ ಅಭ್ಯಾಸ ಆಗಿ ಹೋಯಿತು. ಹೊರಗೆ ಹೋಗುವಾಗ Shoe ಹಾಕಿ ನನ್ನ ಒಡೆದ ಹಿಮ್ಮಡಿಗಳನ್ನು ಅಡಗಿಸುತ್ತಿದ್ದೆ. ಯರದಾದರು ಮನೆಗೆ ಹೋದಾಗ ನೆಲದ ಮೇಲೆ ಕೂರುವ ಪ್ರಸಂಗ ಬಂದರೆ ,ಸೀರೆ ಉಟ್ಟಿಕೊಂಡಿದ್ದರೆ ಸೀರೆಯ ನೆರಿಗೆ, ಚೂಡಿದಾರ ಹಾಕಿಕೊಂಡಿದ್ದರೆ, ದುಪಟ್ಟಾದಿಂದ ಕಾಲು ಮುಚ್ಚಿಕೊಳ್ಳುತ್ತಿದ್ದೆ. ಎಲ್ಲರೂ ಚೆಂದದ ಚಪ್ಪಲಿಗಳನ್ನು ಹಾಕಿಕೊಳ್ಳುವಾಗ ಎಷ್ಟು ಆಸೆಯಿಂದ ನೋಡುತ್ತಿದ್ದೆ. ನನಗೆ ಮಾತ್ರ ಯಾವಾಗಲೂ bata shoe ನೆ ಗತಿ.ಅಷ್ಟು ಮಾತ್ರವಲ್ಲ ಯಾರದಾದರು ಮನೆಯಲ್ಲಿ ರತ್ನಗಂಬಳಿ/ಕಾರ್ಪೆಟ್ ಎಲ್ಲ ಇದ್ದರೆ ಒಳ್ಳೆ ಮ್ಯಾಗ್ನೆಟ್ ತರಹ ನನ್ನ ಹಿಮ್ಮಡಿಗೆ ಅವೆಲ್ಲ ಆಂಟಿ ಕೊಳ್ಳೋದು. ಸಾಕ್ಸ್ ಹಾಕಿದರೆ ಇನ್ನೂ ಫಜೀತಿ..ಮನೆಗೆ ಬಂದು ತೆಗೆದರೆ ಹಿಮ್ಮಡಿ ಎಲ್ಲ ರಕ್ತ..

ಎರಡು ವರ್ಷದ ಹಿಂದೆ ನಮ್ಮ ಬಿಲ್ಡಿಂಗ್ ನಲ್ಲಿ ಯೋಗ ಕ್ಲಾಸ್ ಆಯೋಜಿಸಿದ್ದರು...ನಾನೂ style ಆಗಿ ಯೋಗ ಮ್ಯಾಟ್ ಹಿಡಿದುಕೊಂಡು ಹೋದೆ. ನನ್ನ ಹಿಮ್ಮಡಿ ನನ್ನನ್ನು ತುಂಬಾ ಮುಜುಗರಕ್ಕೆ ಇಡು ಮಾಡಿತು..ನನ್ನ ಜತೆ ಯೋಗ ಮ್ಯಾಟ್ ಕೂಡ ಯೋಗ ಮಾಡಲು ಶುರು ಮಾಡಿತು. ನಾನು ಕೊನೆಗೆ ಮ್ಯಾಟ್ ಬದಿಗಿಟ್ಟು ಹಾಗೆಯೇ ನೆಲದ ಮೇಲೆ ಯೋಗ ಮಾಡಲು ಶುರು ಮಾಡಿದೆ..

ಕೈಗಳಿಗೂ ಹಾಗೆ ಪಾತ್ರೆ ಉಜ್ಜಲು ಬಳಸುವ ಸಾಬೂನಿನಿಂದ ಬೆರಳು ಯಾವಾಗಲೂ crack.. ಇದರಿಂದ ಒಳ್ಳೆ ಬಟ್ಟೆಗಳೂ ಹಾಳಾಗುತ್ತಿತ್ತು..ಪುಟ್ಟ ಮಕ್ಕಳನ್ನು ಎತ್ತಿಕೊಳ್ಳಲೂ ಭಯ. ನನ್ನ ಮಗಳ ಜೋಕ್..ಅಮ್ಮ ಕತ್ತಿ ಎಲ್ಲ ನಿನ್ನ ಕೈ ಬೆರಳಿಗೆ ಉಜ್ಜಿ sharp ಮಾಡಬಹುದು ನೋಡು...ಮತ್ತು ಸೊಳ್ಳೆ ಕಚ್ಚಿದರೆ ಅಮ್ಮ ತುರಿಸೆ ಚೆನ್ನಾಗಿರತ್ತೆ ನಿನ್ನ rough ಕೈ ಬೆರಳು ಅನ್ನತ್ತಾವೆ. ಶ್ರೀಕಾಂತ್ ಅಂತೂ  ನನ್ನ ಕೈ ಕಾಲು ನೋಡಿ emery ಪೇಪರ್, sand ಪೇಪರ್ ಅಂತಾರೆ. ಯಾರದರೊ ಕೈ ಕುಲುಕಲು ಬಂದರೆ ಹೆದರಿ ಹೈರಾಣ ಆಗುತ್ತಿದೆ..ಬೇಗ ಬೇಗ ಎರಡು ಕೈ ಜೋಡಿಸಿ ನಮಸ್ಕಾರ ಮಾಡ್ತಿದ್ದೆ

ಎರಡು ವರ್ಷದ ಹಿಂದೆ ಸುಮ್ನೇ ತುಂಬಾ ನೀರು ಕುಡಿಯುವ ಗೀಳು ಬೆಳೆಸಿಕೊಂಡೇ...ಆವಾಗಿನಿಂದ ನನ್ನ ಕೈ ಬೆರಳು, ಕಾಲಿನ ಹಿಮ್ಮಡಿ ಎಲ್ಲ ಕ್ಲೀನ್...ನನ್ನ ಕುಟುಂಬದವರಿಗೆಲ್ಲ ಅಚ್ಚರಿ. ಖುಷಿಯಿಂದ ಚಪ್ಪಲಿ ತೆಗೆದುಕೊಂಡೆ....ಆದರೆ ಈಗ ಅದರ ಅಭ್ಯಾಸ ತಪ್ಪಿ ಹೋಗಿ..ಹಾಕಿಕೊಂಡರೆ ಏನೊ ಒಂತರಹ...ಹಳೆ ಗಂಡನ ಪಾದವೇ ಗತಿ ಎಂದು ಎರಡು ಜತೆ shoe ಕೊಂಡೆ...ಆದ್ರೆ ಕಾಲು ಮುಚ್ಚಿಕೊಳ್ಳುವ ಪ್ರಮೇಯ ಇಲ್ಲ. ಕೈ ಕುಲುಕುವಾ ಅಂದ್ರೆ ಕೊರೊನಾ ಮಹಾಮಾರಿ...😊☹️ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ...

May 19, 2021

'shot" stories - take two

 It is ok to hold my hand u know

Come on now, i am not that sick

They crossed the road, and the wife collapsed and die he realized she needed her hand to be held

2. When i die my wife will be a millionaire,.he kept bragging to his friend who was giving them a drop to the airport. The wife was smiling. She was still smiling when they reached the airport..but she was dead...

April 27, 2021

Two tales of woe

 After cooking  ugadi lunch i was relaxing with a book when i got the msg that tavarekere govt hospital was sending its staff to our apartment for covid vaccination. I was delighted, for after returning to bengaluru i tried to register, but it said 'no slots available' till june so i had given up. Akka had gone to deliver a cake. Srikanth was advised to do a RTPCR (COVID test) before his gall bladder sugery. So he too was not at home.

I got the shot and quite forgot about it.

Day 2 : As usual got up at 4 , had my tea and went for my walk. Fetched milk. Cooked breakfast. Others were not up yet, so i lay on the diwan with my mobile. When i woke up my mobile had fallen off my hands and time showed 7.30. woke up the family, had breakfast, cleaned the house, had my bath, cooked lunch., Went to get some veggies and tender coconut...slept again till it was time for lunch. Cleaned the kitchen and slept till 4.30. dreamless beautiful sleep all were. In between i was thinking 'waiting for my second shot' and smiling to myself. Finally got to know what 'sleeping like a log' meant. (I have hereditary sleep issues)Had to collect Srikanth's Covid report . They said it will take time. Again i drifted off to sleep and woke up at 6. Went out to draw money, collected his report and purchased some medicines. Skipped dinner . By 9 i was ready to doze off again

Day 3:  woke up at 2.11 am with a pounding headache, as if many pestles were hitting inside  the head. Could not sleep so got up applied some pain balm. The staff had given two tablets to take only in case of fever. I had no fever. But an inch below the spot where i was injected had swollen up like appam...😃

Srikanth was to be admitted to the hospital, so cooked breakfast and lunch to carry to the hospital. By the time headache had subsided by half. By 8 o clock all pain was gone. Swelling subsided and there was dull throbbing ache in the injected arm  

The staff did not tell any of us about the after affects of the shot..and i am not even sure if it was any reaction to the injection

I am the healthiest in my house and hosptal visits are mostly  accompanying the family members. I am not even bothered by common ailments like cold, cough, fever, headache and stomach ache etc.

Oh my i did enjoy my sleep though 😃😃

Day 4 at the hospital. Srikanth had his gall bladder removal surgery. I only remember moving about like a zombie...cranking the bed up and down, giving his piss pot,empty it, cleaning it, once had to fetch the nurse cos his drip was empty. The hospucevwas functioningbwith a skeletal staff due to Cirona. I could hear him moan in pain. Inspite of all this i SLEPT. May be there is a slot in our consciousness where we worry...so that the moment Srikanth said malathi..i was up like a bullet, did my nursing duties and fell asleep 🤔🤔

Utterly grateful that akka is with us. She sent us tasty, hot, home cooked meal three times a day and couriered it via  Vefast/swiggy. Ever grateful to these delivery persons. Life is easy/better becos of them. Our residence is quite some distance from the hospital and I could not have managed cooking, cleaning and hospital duties

Our building is sealed down due to increasing covid cases ..

Also men and women above 50 pls do regular body check up. Srikanth's gall bladder situation was very bad. He had severe pain in the abdomen and We thought it was kidney stone (has previous history)acidity or gastric problem and gave him medicines according to that. Amma's doctor, a homeopath suggested gall bladder scan to rule out gall related issues. Otherwise we had no clue about this. His gall bladder had stones and He had to endure so much pain. All this is unnecessary if diagnosed earlier . I go for regular check up every quarter once i turned 45. Better to be safe than sorry folks. Also it is lesser amount of tension to family members. Some things can be avoided esp in these covid times. He is fine now and recuperating beautifully. All the doctors and staff took good care of  Srikanth 

Did u have any side effect to the vaccination that u might like to share?


When Corona strikes home

Including Akka, 24

 corona cases in our building. Heard two of them are hospitalized.

Now i think v put her at risk. Cooking and sending parcel via courier services. The lifts are sanitized every two hours. Excepting  a fortnight ago she has hardly stepped outside the building.

When we were ready to get discharged from the hospital she sends me a message 'amma now i have fever'. A day ago she had cold. She has sinusitis problem so i thought she will recover. but when she said fever i intuitively knew she had the virus. We consulted srikanth's doctor. He suggested isolation. I had spare keys with me. I told her to stay in her room and not come out at all. By the time we returned home, she had sanitized the whole house, poor dear and locked herself in her room.

Next day she went for the RTPCR test and i went shopping for essentials. COVID POSITIVE Report came in 4 days due to too much rush. By this time  she already was on medicine and back to recovery.

BBMP has been in constant touch, reassuring her a bed in hospital if she needs one.

Our apartment people send us messages asking if we need anything.

People who have come out of hospital and quarantined at home are complaining of severe body ache and pain in the legs and SOS ing for househelps who are restricted from entering the building. Feels sad. 

At home We move about with masks on. Converse via whatsapp. Thankfully her appetite is good and i cook her favorite dish. It is my turn to look after her.

Hoping to soon have her back in the kitchen, baking, dancing, singing and making us laugh.

Today made her fav BTM benne masale dose


March 9, 2021

Mini trek at Savandurga

 ಕೆಲ ಸಮಯದ ಹಿಂದೆ ಸಾವನದುರ್ಗಕ್ಕೆ ಹೋಗಿದ್ದೆವು. ಅಲ್ಲಿನ forest guest house ನಲ್ಲಿ ಊಟದ ವ್ಯವಸ್ಥೆ ಆಗಿತ್ತು, ಥಾಂಕ್ಸ್ to ಶ್ರೀಕಾಂತರ barch mate Hosmath ಮತ್ತು ಅವರ ಶ್ರೀಮತಿ, ಮಂಗಳಾ.



ಮಧ್ಯಾನ್ಹ ಪೊಗದಸ್ತಾದ ಊಟ ಆದ ಮೇಲೆ ಮುಕ್ಕಾಲು ಪಾಲು ಟೀಮ್ members ನಿದ್ದೆಗೆ ಶರಣು. ನಾವು ಕೆಲವು ladies  ಕೂತು ಪಟ್ಟಾಂಗ ಹೊಡೆಯುವ ಸಲುವಾಗಿ ಮರ ಹುಡುಕಿಕೊಂಡು ಹೋದೆವು. ಅಲ್ಲಲ್ಲಿ ಮರದ ಬುಡದಲ್ಲಿ ಬೆಂಚ್ ಗಳಿದ್ದವು. ಅಲ್ಲಿಗೆ ಬಂದ ರಾಮಮೂರ್ತಿ ಮತ್ತು ಮಹಿಷಿ ಯವರೊಂದಿಗೆ, forest guard.. ಬನ್ನಿ ನಿಮಗೆ ಕೃಷ್ಣದೇವರಾಯರ ದರ್ಬಾರ್ hall ತೋರಿಸ್ತೇವೆ ಅಂತ ಕರೆದು ಕೊಂಡು ಹೋದ್ರು. ಅಲ್ಲಿಂದ ಒಳದಾರಿಯಾಗಿ ಸಾವನದುರ್ಗ ಬೆಟ್ಟದ ಮೇಲಿನ ಕೋಟೆ (ಏಳು ಸುತ್ತಿನ ಕೋಟೆಯಲ್ಲಿ ಒಂದು) ದೇವಸ್ಥಾನಕ್ಕೆ ತಲುಪುತ್ತಿತ್ತು. ದಾರಿ ಎಲ್ಲ ಗಿಡ ಗಂಟಿ ಗಳಿಂದ ಮುಚ್ಚಿ ಹೋಗಿತ್ತು. Guard ಗಳು ಮಚ್ಚಿನಿಂದ ದಾರಿ ಮಾಡಿ ಕೊಡುತ್ತಾ ಹೋದರೆ, ನಾವು ನಾಲ್ಕು ಜನ ಚಾರಣ ಮಾಡ್ತಾ ಹೊದೆವು. ಅರೆ ಹಿಂದಿನ group ನ ಸದ್ದೇ ಇಲ್ಲ. Cell phone ಗೆ ಸಂಪರ್ಕ ಇರಲಿಲ್ಲ. ನಡೀತಾ ತುಂಬಾ ಮೇಲೆ ಹತ್ತಿದೆವು. ದೇವಸ್ಥಾನ ಅಲ್ಲಿಂದ ತುಂಬಾ ಹತ್ತಿರಕ್ಕೆ ಕಾಣುತ್ತಿದ್ದು, ಅಲ್ಲಿ ತನಕ ಹೋಗುವ ಆಸೆ ಆಯ್ತು. ಆದರೆ ನಮ್ಮ ಚಾರಣ ಮೊಟಕು ಗೊಳಿಸಲೇ ಬೇಕಿತ್ತು. ಒಂದು ನಮ್ಮ ಟೀಮ್ ನಲ್ಲಿ ಯಾರಿಗೂ ನಾವು ಇಷ್ಟು ದೂರ ಬರುವ ಬಗ್ಗೆ ಹೇಳಿರಲಿಲ್ಲ, ಮತ್ತು ನನ್ನ ದಿರಿಸು ಹಾಗೂ ಪಾದುಕೆ (ಪಾದುಕೆ seriously????😊😊)ಬಂಡೆ ಹತ್ತಲು ಸೂಕ್ತವಾಗಿರಲಿಲ್ಲ. ಏರುತ್ತ, ಜಾರುತ್ತ, ಕೆಲವು ಕಡೆ ಬಂಡೆ ಗಳಲ್ಲಿ ಕೋರೆದ ಮೆಟ್ಟಿಲುಗಳ ಸಹಾಯದಿಂದ ಬೆಟ್ಟ ಏರಿ ಇಳಿದಾಯ್ತು. ತುಂಬಾ memorable experience.

Guard ಗಳು ನಮ್ಮ ಸ್ಟೆಪ್ by ಸ್ಟೆಪ್ ಚಿತ್ರ ತೆಗೆದರು.

ಮೆಲುಕು ಹಾಕಲು, ಮಕ್ಕಳ ಜತೆ ಶೇರ್ ಮಾಡಲು ಇಂತಹ ಕೆಲವು ಅನುಭವಗಳು ಬೇಕು ಜೀವನದಲ್ಲಿ. ಮದುವೆಯಾದ 5 ವರ್ಷ , ಕೊಪ್ಪ ದಲ್ಲಿದ್ದಾಗ ನಾವು ವಾರ್ಯಾಂತದಲ್ಲಿ ಕೈಗೊಳ್ಳುತ್ತಿದ್ದ hiking, biking, trekking ಎಲ್ಲ ನೆನಪಾಯ್ತು.

Pics later..need a computer











ಇವೆಲ್ಲ private ಜಾಗ. general public ಗೆ ಇಲ್ಲೂ ಪ್ರವೇಶ ಇಲ್ಲ. ತುಂಬಾ ನೆ thrilling ಆಗಿತ್ತು...ನಾನು ತುಂಬಾ ಎಂಜಾಯ್ ಮಾಡಿದ ಟ್ರಿಪ್ ಇದು ❤️❤️

February 2, 2021

Tea ಪುರಾಣ

 ಅಮ್ಮ ಹೇಳ್ತಾರೆ ನಾನು ಮೊದಲನೇ ಹುಟ್ಟುಹಬ್ಬದ ದಿನದಂದು ಟೀ ಕುಡಿಯಲು ಆರಂಭಿಸಿದೆ ಎಂದು. ನನಗೆ ಬುದ್ದಿ ಬಂದಾಗಿನಿಂದ ನೆನಪು ಭರ್ ಅಂತ ಉರಿಯುವ ಪಂಪ್ ಸ್ಟವ್ ಹಾಗೂ All India ರೇಡಿಯೋ ಪ್ರೋಗ್ರಾಮ್ ಶುರು ಆಗುವದಕ್ಕಿಂತ ಮುಂಚಿನ   Signature tune/ ಸಂಗೀತ ಮತ್ತು ನನ್ನ, ಅಮ್ಮನ ಚಹಾ ಕುಡಿಯುವ ವಾಡಿಕೆ.

ಒಟ್ಟಿಗೆ ಟೀ ಕುಡಿಯುವುದರಲ್ಲಿ ಒಂದು camaradarie ಇದೆ. ಯಾರಾದರೂ ಟೀ ಕುಡಿಯುತ್ತಾರೆಂದರೆ ಒಂತರಹ ಸಮಾಧಾನ. 

ನಾನು ಜಯನಗರ ಆಫಿಸಿನಿಂದ ಎರಡೆರಡು ಬಸ್ ಬದಲಿಸಿ ಮನೆ ತಲುಪ ಬೇಕಾಗ್ತಿತ್ತು. ಆಫಿಸ್ ನಲ್ಲಿ ಒಂದ್ರಾಶಿ ಟೀ ಕುಡಿದರೂ ಸಹ, ಮನೆ ತಲುಪಿದ ಕೂಡಲೇ ಯಾರಾದರೂ ಟೀ ಮಾಡಿ ಕೊಟ್ಟರೆ? 

ಹೌದು, ಮಾಲವಿಕಾ ಟೀ ಮಾಡಿ ಕೊಡುತ್ತಿದ್ದಳು. ಸ್ವಲ್ಪ ಹೊತ್ತು ಕಾಲು ಚಾಚಿ , ಅವರು ಕಾರ್ಟೂನ್ ನೋಡುತ್ತಿದ್ದರೆ, ನಾನು ಸುಮ್ಮನೆ ಪರದೆ ಮೇಲೆ ಬರುತ್ತಿರುವ ಚಿತ್ರಗಳನ್ನು (without anything registering on my mind)ನೋಡುತ್ತಿದೆ. (ಬಟ್ಟೆ ಒಗೆಯುವ ಕೆಲಸ ಆಫಿಸಿನಿಂದ ಬಂದು ಮಾಡ್ತಿದ್ದೆ). ಅದು ಒಂದು cozy feeling.

ಒಂದ್ಸಲ ಅಮ್ಮನ ಮನೆಗೆ ಹೋದಾಗ, ಹೀಗೆ ಮಾತಾಡುವಾಗ ,' ನನಗೆ ಕೋಳಿ ನಿದ್ದೆ ಮಾಡಿ, ಸಂಜೆ  ಎದ್ದಾಗ ಯಾರಾದರೂ ಟೀ ಮಾಡಿಕೊಡಬೇಕೆಂದು ಆಸೆ ಆಗ್ತಿತ್ತು' ಅಂದಾಗ ತುಂಬಾ ಬೇಜಾರಾಗಿತ್ತು. ನನ್ನ ಮಕ್ಕಳಷ್ಟು sensibility ನನಗಿಲ್ಲವಲ್ಲ ಅಂತ. ಈಗ ಅಮ್ಮನ ಮನೆಗೆ ಹೋದಾಗಲೆಲ್ಲ ಸಂಜೆ ಟೀ ಮಾಡೋದು ಕಡ್ಡಾಯ ನಾನೇ. ತಮ್ಮ ಮುಂಬೈ ನಿಂದ ಬಂದಿದ್ರೆ, ಅದು ಅವನ department.😊

ಈಗ ನಿಹಾ ಮನೆಯಲ್ಲಿದ್ದರೆ ಟೆ ಅವಳೇ ಮಾಡುವುದು.

ಮೊನ್ನೆ ಶ್ರೀಕಾಂತ್ ಕಾಲೇಜು ಸಹಪಾಠಿಯರೋ0ದಿಗೆ ಒಂದು day ಟ್ರಿಪ್ ಗೆ ಹೋಗಿದ್ದೆ. ಸಂಜೆ 'ಎಷ್ಟು ಜನ ಟೀ' ಎಂದಾಗ ಮುಕ್ಕಾಲು ಪಾಲು ಜನ ಕೈ ಎತ್ತಿದಾಗ ಒಂದು ಮುಗುಳು ನಗೆ ಹಾಯ್ದು ಬಂದು ,ಮೇಲಿನದು ನೆನಪಾಯ್ತು.

In the pic me and niha brooke 'bond'ing over chai and akka clicks 😃😃❤️

ಬ್ರೂಕ್ ಬಾಂಡ್ ನನ್ನ ಬ್ರಾಂಡ್...

Not a paid partnership* - ಸುಮ್ನೆ ತಮಾಷೆಗೆ...instagram ನಲ್ಲಿ ಹೀಗೆಲ್ಲ ಹಾಕ್ತಾರೆ 😊

ಸುಮ್ನೆ ಒಂದು ಟೀ ಪುರಾಣ....