February 2, 2021

Tea ಪುರಾಣ

 ಅಮ್ಮ ಹೇಳ್ತಾರೆ ನಾನು ಮೊದಲನೇ ಹುಟ್ಟುಹಬ್ಬದ ದಿನದಂದು ಟೀ ಕುಡಿಯಲು ಆರಂಭಿಸಿದೆ ಎಂದು. ನನಗೆ ಬುದ್ದಿ ಬಂದಾಗಿನಿಂದ ನೆನಪು ಭರ್ ಅಂತ ಉರಿಯುವ ಪಂಪ್ ಸ್ಟವ್ ಹಾಗೂ All India ರೇಡಿಯೋ ಪ್ರೋಗ್ರಾಮ್ ಶುರು ಆಗುವದಕ್ಕಿಂತ ಮುಂಚಿನ   Signature tune/ ಸಂಗೀತ ಮತ್ತು ನನ್ನ, ಅಮ್ಮನ ಚಹಾ ಕುಡಿಯುವ ವಾಡಿಕೆ.

ಒಟ್ಟಿಗೆ ಟೀ ಕುಡಿಯುವುದರಲ್ಲಿ ಒಂದು camaradarie ಇದೆ. ಯಾರಾದರೂ ಟೀ ಕುಡಿಯುತ್ತಾರೆಂದರೆ ಒಂತರಹ ಸಮಾಧಾನ. 

ನಾನು ಜಯನಗರ ಆಫಿಸಿನಿಂದ ಎರಡೆರಡು ಬಸ್ ಬದಲಿಸಿ ಮನೆ ತಲುಪ ಬೇಕಾಗ್ತಿತ್ತು. ಆಫಿಸ್ ನಲ್ಲಿ ಒಂದ್ರಾಶಿ ಟೀ ಕುಡಿದರೂ ಸಹ, ಮನೆ ತಲುಪಿದ ಕೂಡಲೇ ಯಾರಾದರೂ ಟೀ ಮಾಡಿ ಕೊಟ್ಟರೆ? 

ಹೌದು, ಮಾಲವಿಕಾ ಟೀ ಮಾಡಿ ಕೊಡುತ್ತಿದ್ದಳು. ಸ್ವಲ್ಪ ಹೊತ್ತು ಕಾಲು ಚಾಚಿ , ಅವರು ಕಾರ್ಟೂನ್ ನೋಡುತ್ತಿದ್ದರೆ, ನಾನು ಸುಮ್ಮನೆ ಪರದೆ ಮೇಲೆ ಬರುತ್ತಿರುವ ಚಿತ್ರಗಳನ್ನು (without anything registering on my mind)ನೋಡುತ್ತಿದೆ. (ಬಟ್ಟೆ ಒಗೆಯುವ ಕೆಲಸ ಆಫಿಸಿನಿಂದ ಬಂದು ಮಾಡ್ತಿದ್ದೆ). ಅದು ಒಂದು cozy feeling.

ಒಂದ್ಸಲ ಅಮ್ಮನ ಮನೆಗೆ ಹೋದಾಗ, ಹೀಗೆ ಮಾತಾಡುವಾಗ ,' ನನಗೆ ಕೋಳಿ ನಿದ್ದೆ ಮಾಡಿ, ಸಂಜೆ  ಎದ್ದಾಗ ಯಾರಾದರೂ ಟೀ ಮಾಡಿಕೊಡಬೇಕೆಂದು ಆಸೆ ಆಗ್ತಿತ್ತು' ಅಂದಾಗ ತುಂಬಾ ಬೇಜಾರಾಗಿತ್ತು. ನನ್ನ ಮಕ್ಕಳಷ್ಟು sensibility ನನಗಿಲ್ಲವಲ್ಲ ಅಂತ. ಈಗ ಅಮ್ಮನ ಮನೆಗೆ ಹೋದಾಗಲೆಲ್ಲ ಸಂಜೆ ಟೀ ಮಾಡೋದು ಕಡ್ಡಾಯ ನಾನೇ. ತಮ್ಮ ಮುಂಬೈ ನಿಂದ ಬಂದಿದ್ರೆ, ಅದು ಅವನ department.😊

ಈಗ ನಿಹಾ ಮನೆಯಲ್ಲಿದ್ದರೆ ಟೆ ಅವಳೇ ಮಾಡುವುದು.

ಮೊನ್ನೆ ಶ್ರೀಕಾಂತ್ ಕಾಲೇಜು ಸಹಪಾಠಿಯರೋ0ದಿಗೆ ಒಂದು day ಟ್ರಿಪ್ ಗೆ ಹೋಗಿದ್ದೆ. ಸಂಜೆ 'ಎಷ್ಟು ಜನ ಟೀ' ಎಂದಾಗ ಮುಕ್ಕಾಲು ಪಾಲು ಜನ ಕೈ ಎತ್ತಿದಾಗ ಒಂದು ಮುಗುಳು ನಗೆ ಹಾಯ್ದು ಬಂದು ,ಮೇಲಿನದು ನೆನಪಾಯ್ತು.

In the pic me and niha brooke 'bond'ing over chai and akka clicks 😃😃❤️

ಬ್ರೂಕ್ ಬಾಂಡ್ ನನ್ನ ಬ್ರಾಂಡ್...

Not a paid partnership* - ಸುಮ್ನೆ ತಮಾಷೆಗೆ...instagram ನಲ್ಲಿ ಹೀಗೆಲ್ಲ ಹಾಕ್ತಾರೆ 😊

ಸುಮ್ನೆ ಒಂದು ಟೀ ಪುರಾಣ....

1 comment:

  1. ನನ್ನ ಅಮ್ಮನಿಗೆ ಯಾರಾದರೂ ಬಿಸಿ ಬಿಸಿ ಮಸಾಲ ದೋಸೆ ತೆಗೆದು ಕೊಟ್ಟರೆ ಆರಾಮಾಗಿ ತಿನ್ನುತ್ತಿದ್ದೆ ಎನ್ನುತ್ತಿದ್ದರು ನನ್ನ ಮದುವೆ ಮುಂಚೆ. ನಾನು ಒಲ್ಲದ ಮನಸ್ಸಿನಿಂದ ಆದಿತ್ಯವಾರ ಮಸಾಲ ದೋಸೆ ತೆಗೆದು ಕೊಡುತ್ತಿದ್ದೆ. ನನಗೆ ಮದುವೆ ಆದ ಮೇಲೆ ಅವರು ಹೇಳುತ್ತಿದ್ದರು ಅರ್ಥವಾಗಿ, ಈಗ ಮಸಾಲ ದೋಸೆ ಮಾಡಿದರೆ ನಾನಾಗಿಯೇ ಅವರಿಗೆ ತೆಗೆದು ಕೊಡುತ್ತೇನೆ😊 some lessons we learn in a hard way.

    ReplyDelete