ವಂದನಾ ಮುಂಜಾನೆ ಎದ್ದು ನೆಲಕ್ಕೆ ಕಾಲಾನಿಸಿದವಳೇ 'ಹಾಂ" ಅಂತ ಕಿರುಚಿದಳು. ಅಷ್ಟು ನೋವು. ನಿಧಾನಕ್ಕೆ ಕಾಲು ಎತ್ತಿ ಕಾಲ್ಬುಡ ನೋಡಿದಾಗ ಪಾದದ ತುಂಬಾ ಗೀರಿದ ಗಾಯ. ರಕ್ತ ಅಲ್ಲಲ್ಲೇ ಒಣಗಿತ್ತು. ನಿಧಾನಕ್ಕೆ ಬಾತರೂಮಿಗೆ ಹೋಗಿ ಕಾಲು ನೀರಿನಿಂದ ತೊಳೆದಳು. ತೊಳೆದ ಮೆಲಂತೂ ಕಾಲಲ್ಲಿ ಅಸಾಧ್ಯ ನೋವು, ಉರಿ. ಚಳಿಗೆ ಕೈ ಬೆರಳು ಕಾಲಿನ ಹಿಮ್ಮಡಿ ಒಡೆಯೋದು ಅವಳಿಗೆ ಗೊತ್ತು. ಆದರೆ ಗೀರಿದ ಗಾಯ ಇದೆ ಮೊದಲು. ಯಾರೋ ಚೂಪಾದ ಕತ್ತಿಯಿಂದ ಕಾಲ ಮೇಲೆಲ್ಲಾ ಗೀಚಿದ ಹಾಗಿತ್ತು. ಹಾಗೆ ನಡೆದಾಡಿದ್ದರಿಂದ ಗಾಯಗಳಿಂದ ರಕ್ತ ಒಸರಲಾರಂಭಿಸಿತು . ಅಡಿಗೆ ಮನೆಗೆ ಹೋಗುವ ಆಲೋಚನೆ ಬಿಟ್ಟು ಹಾಳ್ ನಲ್ಲಿರೋ ಸೋಫಾದ ಮೇಲೆ ಕೂತು, ಅಲ್ಲೇ ಇದ್ದ ಚಿಕ್ಕ ಸ್ಟೂಲ್ ಎಳೆದು ಅದರ ಮೇಲೆ ಕಾಲಿಟ್ಟು ಕೂತುಬಿಟ್ಟಳು. ಅವಳ ಮ್ಮ ಎದ್ದು ಇವಳನ್ನು ಹೀಗೆ ನೋಡಿ 'ಏನಾಯ್ತೆ ನಿನಗೆ '? ಅಂತ ಕೇಳಿದಾಗ ಕಾಲುಬುಡದ ಕಡೆ ಸನ್ನೆ ಮಾಡಿದಳು. ಅವಳ ಕೂಡ ವೆಲ್ಪ ಹೊತ್ತು ಅವಳ ಕಾಲು ಗಮನಿಸಿದಳು ಏನೂ ಹೊಳೆಯಲಿಲ್ಲ. ಬೆಳಗಿನ ತಿಂಡಿ ಅಮ್ಮನೇ ತಯಾರು ಮಾಡಿದರು.
ಹತ್ತು ಗಂಟೆಯಷ್ಟಕ್ಕೆ ಗಂಡನ ಜತೆ ಕಾರಲ್ಲಿ ಹೋಗಿ ಡಾಕ್ಟರ ಹತ್ತಿರ ಹೋಗಿ ಬಂದಳು. ಅವರು ಆಂಟಿಬಯೋಟಿಕ್ ಮತ್ತು ಮುಲಾಮು ಕೊಟ್ಟರು ಹಚ್ಚಲು , ಹಾಗೆ ಎರಡು ದಿನ ಆದಷ್ಟು ಕಡಿಮೆ ನಡೆದಾಡಲು ಸೂಚಿಸಿದರು. ಎರಡು ದಿನದ ನಂತರ ಕಾಲಿನ ಗಾಯ ಗುಣವಾಯ್ತು. ಆದರೆ ಅದರ ಮಾರನೇ ದಿನ ಪುನ: ಯಥಾಪ್ರಕಾರ ಅವಳ ಕಾಲಿಗೆ ಗಾಯಗಳಾಯಿತಲ್ಲದೆ ಮನೆಯ ಇತರರ ಪಾದಗಳಿಗೂ ಚಿಕ್ಕ ಪುಟ್ಟ ಗೀರಿದ ಗಾಯಗಳು ಕಾಣಿಸಲಾರಂಭಿಸಿದವು.
ಅವಳ ಅಮ್ಮ 'ಇದು ಭೂತದ ಕಾಟವೇ ಇರಬೇಕು . ಮೊನ್ನೆ ನೀನು ಡಾಕ್ಟರ್ ಬಳಿ ಹೋದ ಮೇಲೆ ಕುಲ ಪುರೋಹಿತರಿಗೆ ಫೋನ್ ಮಾಡಿದ್ದೆ. ಗ್ರಾಚಾರ ಸರಿಯಿಲ್ಲ ,ಭೂತ ಪ್ರೇತಗಳ ಬಾಧೆಯಿದೆ , ಯಾವುದೋ ಹೋಮ ಮಾಡಬೇಕೆಂದು ಹೇಳಿದ್ದಾರೆ. ನೀನು ಆಮೇಲೆ ಸ್ವಲ್ಪ ಫೋನ್ ಮಾಡಿ ವಿಚಾರಿಸು ಅಂದಳು.
ಅಷ್ಟ್ರಲ್ಲಿ ವಂದನಾಳ ಫೋನ್ ರಿಂಗಣಿಸಿತು. ಅವಳ ಸ್ನೇಹಿತೆ ಮೇದಿನಿ . ಮರುದಿನ ಇವಳಲ್ಲಿ ಬರುವವಳಿದ್ದಳು. ವಂದನಾಳ ಅಮ್ಮ ಗೊಣಗಿದರು ;ಅವಳಿಗೆ ಈವಾಗಲೇ ಬರಬೇಕಿತ್ತೇ ?
ಏನಮ್ಮ ನಿನಗೆ ಅವಳನ್ನು ಕಂಡರೆ ಅಷ್ಟಕ್ಕಷ್ಟೇ. ಅವಳು ನಮ್ಮನ್ನೆಲ್ಲ ಎಷ್ಟು ಪ್ರೀತಿ ಮಾಡ್ತಾಳೆ.
ವಂದನಾಳ ಅಮ್ಮನಿಗೆ, ಲಕ್ಷಗಟ್ಟಲೆ ಸಂಬಳ ಬರುತ್ತಿದ್ದ, ದೇಶ ವಿದೇಶಗಳಿಗೆ ಹೋಗುವ ಅವಕಾಶವಿದ್ದ ಕೆಲಸವನ್ನು ಬಿಟ್ಟು, ಮೇದಿನಿ ಹಳ್ಳಿಯಲ್ಲಿದ್ದುಕೊಂಡು ತೋಟ ಮಾಡುತ್ತಾಳೆ ಎಂಬ ಕಾರಣಕ್ಕೆ ಅವಳ ಮೇಲೆ ಉದಾಸೀನ. ಆದರೆ ಅವಳು ಬರುವಾಗ ತರುವ ಬೀನ್ಸ್, ಎಲೆಕೋಸು, ಬೆಂಡೆಕಾಯಿ , ಹೂಕೋಸು ನೋಡಿದಾಗ ಆ ಹೂಕೋಸಿಗಿಂತ ದೊಡ್ಡದಾದ ನಗು ಅವರ ಮುಖದಲ್ಲಿ ಅರಳುತ್ತಿತ್ತು.
ವಂದನಾ ತನ್ನ ಕಾಲಿನ ಗಾಯದ ಬಗ್ಗೆ ಮೇದಿನಿಗೆ ಹೇಳುತ್ತಾ ಇದ್ದಳು. ಇರಲಿ ಹೇಗೂ ನಾಳೆ ಬರ್ತೀನಿ ಅಲ್ಲವಾ ನೋಡುತ್ತೇನೆ ಅಂತ ಹೇಳಿ ಫೋನ್ ಆ ಕಡೆಯಿಂದ ಇಟ್ಟಳು.
ಮೇದಿನಿ ಇರೋದು ಬೆಂಗಳೂರು - ತಮಿಳನಾಡು ಗಡಿ ಪ್ರದೇಶದಲ್ಲಿ. ಅವಳೇ ಕಾರು ಬಿಟ್ಟುಕೊಂಡು ಬರುತ್ತಿದ್ದಳು. ಬೆಂಗಳೂರಿನಲ್ಲಿ ಏನಾದರೂ horticulture ಎಕ್ಸಿಬಿಷನ್ ಅಥವಾ ವರ್ಕ್ಷ ಶಾಪ್ , ಬೀಜ ಮೇಳ ಮುಂತಾದವುಗಳು ಇದ್ದರೆ ಮಾತ್ರ ಬೆಂಗಳೂರಿಗೆ ಬರುತ್ತಿದ್ದಳು.
ಮರುದಿನ ಬಂದ ಕೂಡಲೇ ಅವಳು ತಂಡ ಶೀತಗಾರದಿಂದ ಅವಳ ತೋಟದಲ್ಲಿ ಸಾಕಿರುವ ಎಮ್ಮೆಯಹಾಲನ್ನು ಬಾಟಲಿನಿಂದ ತೆಗೆದು ಬಿಸಿ ಮಾಡಲು ಇಟ್ಟಳು. ಬೆಳಗಿನೆ ಕ್ರಿಯೆಗಳನ್ನೆಲ್ಲ ಮುಗಿಸಿ ಅವಲೇ ಫಿಲ್ಟರ್ ನಲ್ಲಿ ಹಾಕಿದ ಡಿಕಾಕ್ಷನ್ ನಿಎಂದ ಎಲ್ಲರಿಗೂ ಕಾಫಿ ಮಾಡಿದಳು. ಅಷ್ಟಲ್ಲದೇ ಪಡ್ಡು ಮಾಡಲು ಹಿಟ್ಟು ಸಹ ಮಾಡಿಕೊಂಡು ಬಂದಿದ್ದಳು. ಅವಳು ಊರಿನಿಂದ ಬೆಳಗಿನ ಜಾವ ಮೂರು ಗಂಟೆಗೆ ಮನೆ ಬಿಟ್ಟು ಎಂಟುಗಂಟೆಗೆ ಬೆಂಗಳೂರಿನಲ್ಲಿದ್ದಳು. ಅವರ ಕಾಲಿನ ಗಾಯದ ಬಗ್ಗೆ ಕೇಳುತ್ತ ಕಾಫಿ ಕುಡಿತಿದ್ದಳು. ಅವಳ ಗಮನ ಬಾಲ್ಕನಿ ಬಾಗಿಲ ಬಳಿ ಒಡೆದ ಗಾಜಿನ ಗ್ಲಾಸ್ ಕಡೆ ಹೋಯಿತು.
"ಆ ಗ್ಲಾಸ್ ಒಡೆದು ಎಷ್ಟು ದಿನ ಆಯಿತ್ತು ?
ನಾಲ್ಕೈದು ದಿನ ಆಯ್ತು."
ಅದಾದ ಮೇಲೆ ಕಾಲಿನ ಗೀರು ಕಾಣಿಸಿಕೊಂಡಿದ್ದಾ?
ಇರಬಹುದು ಗೊತ್ತಿಲ್ಲ
ಬಾಲ್ಕನಿ ಯಿಂದ ಅಡುಗೆ ಕೋಣೆಗೆ ಬರುವ ಮುಂಚೆ ಕಾಲೊರೆಸುವ ಮ್ಯಾಟ್ ಒಂದು ಇತ್ತು. ಕಾಫಿ ಕುಡಿದಾದ ಮೇಲೆ ಆ ಮ್ಯಾಟನ್ನು ಮೇದಿನಿ ಸರಿ ಜಾಡಿಸಿದಳು. ಅದರಿಂದ ಚಿಕ್ಕ ಪುಟ್ಟ ಗಾಜಿನ ಚೂರು ಈಚೆಗೆ ಬಿದ್ದವು.
"ನೋಡಿ ಇದೆ ನಿಮ್ಮ ಕಾಲಿನ ಗಾಯಕ್ಕೆ ಕಾರಣ. ಗಾಜು ಬಿದ್ದು ಒಡೆದಾಗ ಅದರ ಕೆಲವು ಚೂರು ಈ ಮ್ಯಾಟ್ ಒಳಗೆ ಸಿಕ್ಕಿಹಾಕಿಕೊಂಡಿತ್ತು . ಮೆತ್ತನೆಯ ಕಾಲು ಮ್ಯಾಟ್ ನಲ್ಲಿ ಬಿದ್ದ ಗಾಜಿನ ಚೂರು ನಿಮಗೆ ಕಾಣಿಸಿಲ್ಲ. ಕಾಲು ಒರೆಸುವಾಗ ಅದು ಕಾಲಿಗೆ ತಾಗಿ ಗಾಯ ಆಗಿದೆ ಅಷ್ಟೇ ಅಂದಳು ಮೇದಿನಿ.
ಆದ ಳಲ್ಲವೇ ಆಕೆ ಡಿಟೆಕ್ಟಿವ್ ಮೇದಿನಿ :-)
Thanks for coming back Mam.
ReplyDeleteThanks for coming back Mam.
ReplyDeletechennaagide ee kathe Malathi :-)
ReplyDelete